Tag: ಸ್ಲಂ

  • ಸ್ಲಂ ನಿವಾಸಿಗಳಿಗೆ ತಟ್ಟಿತು ವಕ್ಫ್‌ ಬಿಸಿ – ಜಮೀರ್‌ ಸೂಚನೆಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮವೇ ರದ್ದು!

    ಸ್ಲಂ ನಿವಾಸಿಗಳಿಗೆ ತಟ್ಟಿತು ವಕ್ಫ್‌ ಬಿಸಿ – ಜಮೀರ್‌ ಸೂಚನೆಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮವೇ ರದ್ದು!

    ರಾಯಚೂರು: ಜಿಲ್ಲೆಯ ‌ಮಸ್ಕಿ ಪಟ್ಟಣದ (Maski City) ಸ್ಲಂ ನಿವಾಸಿಗಳಿಗೆ (Slum People) ವಕ್ಫ್ ಬಿಸಿ ತಟ್ಟಿದ್ದು, ಇಲ್ಲಿನ ಕುಟುಂಬಗಳಿಗೆ ಸೇರಬೇಕಾದ ಹಕ್ಕುಪತ್ರಗಳು ಇನ್ನೂ ಅವರ ಕೈ ಸೇರುತ್ತಿಲ್ಲ.

    ವಸತಿ ಇಲಾಖೆ ಹಾಗು ಸ್ಲಂ ಬೋರ್ಡ್ (Karnataka Slum Development Board) ನಿಗದಿಪಡಿಸಿದ್ದ 263 ಕುಟುಂಬಗಳ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಸಚಿವ ಜಮೀರ್ ಅಹ್ಮದ್ (Zameer Ahmed) ಮೌಖಿಕ ಸೂಚನೆಯಿಂದ ರದ್ದಾಗಿದೆ  ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: Mandya | ರೈತರ ಜಮೀನು, ಹಿಂದೂ ದೇಗುಲ ಮಾತ್ರವಲ್ಲ ಸರ್ಕಾರಿ ಶಾಲೆಯೂ ವಕ್ಫ್ ಆಸ್ತಿ!

    ಜುಲೈ 29 ರಂದು ಹಕ್ಕು ಪತ್ರ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಈ ಕಾರ್ಯಕ್ರಮ ಹಕ್ಕುಪತ್ರ ಹಂಚಿಕೆಯಾಗಿಲ್ಲ. ಸರ್ವೆ ನಂ 7/1 ರ 7 ಎಕರೆ ಪ್ರದೇಶದಲ್ಲಿ 300ಕ್ಕೂ ಅಧಿಕ ಬಡ ಕುಟುಂಬಗಳು ವಾಸವಾಗಿವೆ. ಈ ಭೂಮಿಯನ್ನು ಭೂ ಮಾಲೀಕ ಸಾಜೀದ್ ಸಾಬ್ ಖಾಜಿ ಮಾರಾಟ ಮಾಡಿದ್ದ. ಈಗ 7 ಎಕರೆಯ ಈ  ಭೂಮಿ ಸ್ಲಂಬೋರ್ಡ್ ಹೆಸರಿನಲ್ಲಿ ‌ನೋಂದಣಿಯಾಗಿದೆ.

    ವಕ್ಫ್‌ಗೆ ಸೇರಿದ ಆಸ್ತಿ ಅಂತ ಸಚಿವ ಜಮೀರ್ ಅಹ್ಮದ್ ಕಾರ್ಯಕ್ರಮ ರದ್ದು ಮಾಡಿಸಿದ್ದಾರೆ. ಕೂಡಲೇ ನಮಗೆ ಹಕ್ಕು ಪತ್ರ ನೀಡಬೇಕು ಎಂದು 30 ವರ್ಷದಿಂದ ವಾಸವಿರುವ ನಿವಾಸಿಗಳು ಒತ್ತಾಯಿಸಿದ್ದಾರೆ.

     

  • ಅಗ್ರಹಾರ ದಾಸರಹಳ್ಳಿಯಲ್ಲಿ ಸ್ಲಂ ತೆರವು – ರಾತ್ರಿ ಇಡೀ ಬೀದಿಯಲ್ಲೇ ಮಲಗಿದ್ದ ಸಂತ್ರಸ್ತರು

    ಅಗ್ರಹಾರ ದಾಸರಹಳ್ಳಿಯಲ್ಲಿ ಸ್ಲಂ ತೆರವು – ರಾತ್ರಿ ಇಡೀ ಬೀದಿಯಲ್ಲೇ ಮಲಗಿದ್ದ ಸಂತ್ರಸ್ತರು

    ಬೆಂಗಳೂರು: ಸಿಲಿಕಾನ್ ಸಿಟಿಯ ದಾಸರಳ್ಳಿ ಅಗ್ರಹಾರ ಸ್ಲಂ ಬೋರ್ಡ್ ಮನೆ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮನೆ ಕಳೆದಕೊಂಡವರಿಂದ ನಿನ್ನೆ ಇಡೀ ರಾತ್ರಿ ಧರಣಿ ಮುಂದುವರಿಸಿದ್ದಾರೆ.

    ಸುಮಾರು 16 ಕುಟುಂಬದ ಸದಸ್ಯರು ರಾತ್ರಿಯಿಡೀ ಬೀದಿಯಲ್ಲಿ ಚಳಿಯಲ್ಲಿಯೇ ಮಲಗಿದ್ದಾರೆ. ಸ್ಲಂ ಬೋರ್ಡ್ ನಿರ್ಮಾಣದ ಬಿಲ್ಡಿಂಗ್ ಮುಂದೆಯೇ ಮಲಗಿದ್ದಾರೆ. ಚಳಿಯ ನಡುವೆಯೇ ಪುಟ್ಟ ಪುಟ್ಟ ಮಕ್ಕಳ ಜೊತೆಗೆ ವಾಸ್ತವ್ಯ ಹೂಡಿದ್ದಾರೆ.

    ಸದ್ಯ ಕೋರ್ಟ್ ಆದೇಶಕ್ಕಾಗಿ ಎದುರು ನೋಡ್ತಿದ್ದಾರೆ. ಕೋರ್ಟ್ ಆದೇಶ ನಂತರ ಎಲ್ಲವೂ ಇತ್ಯರ್ಥವಾಗುವ ಸಾಧ್ಯತೆ ಇದೆ. ಮಧ್ಯಾಹ್ನದ ಹೊತ್ತಿಗೆ ಕೋರ್ಟ್ ಆದೇಶ ಬರುವ ಸಾಧ್ಯತೆ ಇದೆ.

    ಇಂದು ಸಂಜೆ ಒಳಗಡೆ ನ್ಯಾಯ ಸಿಗದಿದ್ರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಇದೆ. ನಮಗೆ ನ್ಯಾಯ ಬೇಕು, ಮನೆ ಬೇಕು ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ತೀವಿ ಅಂತ ನಿನ್ನೆ ಮಹಿಳೆಯರು ಹೇಳಿದ್ದರು. ಅಲ್ಲದೆ ಮನೆಕಳೆದುಕೊಂಡ ಮಹಿಳೆಯರು ನಿನ್ನೆಯೇ ಆತ್ಮಹತ್ಯೆಗೆ ಯತ್ನಿಸಿದ್ದರು.

    ಇಂದು ನ್ಯಾಯ ಸಿಗದಿದ್ದರೆ ಮನೆ ಕಳೆದುಕೊಂಡವರ ಮುಂದಿನ ಹೋರಾಟ ಯಾವ ರೀತಿ ಇರುತ್ತೋ ಕಾದು ನೋಡಬೇಕಿದೆ. ಇತ್ತ ಪೊಲೀಸರು ಕೂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಹೆಚ್ಚಿನ ಭದ್ರತೆಗಾಗಿ ಇಡೀ ರಾತ್ರಿ ಸ್ಲಂ ನಿವಾಸಿಗಳ ಏರಿಯಾದಲ್ಲಿಯೇ ಪೊಲೀಸರು ಠಿಕಾಣಿ ಹೂಡಿದ್ದಾರೆ.

  • ಬೆಂಗ್ಳೂರಲ್ಲಿ ಮನೆ ತೆರವು ವೇಳೆ ಗಲಾಟೆ – ವಿಷ ಸೇವಿಸಿದ ಇಬ್ಬರನ್ನು ಎಳೆದೊಯ್ದ ಪೊಲೀಸರು!

    ಬೆಂಗ್ಳೂರಲ್ಲಿ ಮನೆ ತೆರವು ವೇಳೆ ಗಲಾಟೆ – ವಿಷ ಸೇವಿಸಿದ ಇಬ್ಬರನ್ನು ಎಳೆದೊಯ್ದ ಪೊಲೀಸರು!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸ್ಲಂ ತೆರವು ವೇಳೆ ಗಲಾಟೆ ನಡೆದಿದೆ. ಸ್ಲಂ ತೆರವು ಮಾಡುವುದನ್ನು ಪ್ರತಿಭಟಿಸಿ ಇಬ್ಬರು ವಿಷ ಸೇವನೆ ಮಾಡಿದ್ದಾರೆ. ಈ ಇಬ್ಬರನ್ನು ಪೊಲೀಸರು ಧರಧರನೇ ಎಳೆದೊಯ್ದು ದೌರ್ಜನ್ಯವೆಸಗಿದ್ದಾರೆ.

    ಈ ಘಟನೆ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ. ಏಕಾಏಕಿ ಬಂದು ಸ್ಲಂ ಬೋರ್ಡ್ ನಿಂದ ತೆರವು ಕಾರ್ಯಾಚರಣೆ ನಡೆದಿದೆ. ಪೊಲೀಸರ ದಂಡನ್ನೇ ಕರೆತಂದು ತೆರವು ಕಾರ್ಯಾಚರಣೆಗೆ ಯತ್ನಿಸಲಾಗಿದೆ. ಬಟ್ಟೆ, ಬರೆ, ಮಕ್ಕಳನ್ನು ಪೊಲೀಸರು ಮನೆಯಿಂದ ಹೊರಕ್ಕೆ ದಬ್ಬಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

    ಹೀಗೆ ಏಕಾಏಕಿ ಬಂದು ಮನೆ ತೆರವು ಮಾಡಿದರೆ ಈ ಕೊರೊನಾ ಸಮಯದಲ್ಲಿ ಎಲ್ಲಿ ಹೋಗೋಣ ಅಂತ ನಿವಾಸಿಗಳು ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೆ ಬಿಜೆಪಿ ಕೌನ್ಸಿಲರ್ ಕಾಂಗ್ರೆಸ್ಸಿನವರು ಅನ್ನೋ ಕಾರಣಕ್ಕೆ 17 ಮನೆಗೆ ನೋಟೀಸ್ ಕೊಟ್ಟು ಎತ್ತಂಗಡಿ ಮಾಡೋಕೆ ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಜನವರಿಗೆ ಸ್ಟೇ ಅವಧಿ ಮುಗಿದಿತ್ತು. ಮೂವತ್ತು ಮನೆಯಲ್ಲಿ ಕೇವಲ ಹದಿನೇಳು ಮನೆಗೆ ನಿನ್ನೆ ನೋಟಿಸ್ ಕೊಟ್ಟಿದ್ದು, ಇಂದು ಏಕಾಏಕಿ ಬಂದು ಮನೆಯ ವಸ್ತುಗಳನ್ನು ಹೊರಹಾಕಿದ್ದಾರೆ. ನಾವು ಮನೆಯಿಂದ ಹೋಗಲ್ಲ ಸಾಯ್ತೀವಿ ಅಂತ ಇಬ್ಬರು ಮಹಿಳೆಯರ ಗಲಾಟೆ ಮಾಡಿದ್ದು, ಇವರ ಮಧ್ಯೆ ಮಗುವೊಂದು ಕಣ್ಣೀರು ಹಾಕುತ್ತಿರುವುದು ಮನಕಲಕುವಂತಿತ್ತು.

    ಫೆಬ್ರವರಿಯಲ್ಲಿ ಕೋರ್ಟ್ ಮೊರೆ ಹೋಗಲು ಕುಟುಂಬ ರೆಡಿಯಾಗಿತ್ತು. ಆದರೆ ಈ ಮಧ್ಯೆ ಏಕಾಏಕಿ ಮನೆ ತೆರವು ಮಾಡಲಾಗುತ್ತಿದೆ. ನಾವು ಮನೆಯಿಂದ ಕದಲಲ್ಲ, ಬಿಲ್ಡಿಂಗ್ ಮೇಲಿಂದ ಹಾರ್ತೀವಿ ಅಂತ ನಿವಾಸಿಗಳು ಪೊಲೀಸರಿಗೆ ಗದರಿಸಿರುವ ಪ್ರಸಂಗ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

  • ಬೆಂಗ್ಳೂರಿನ ಮತ್ತೊಂದು ಸ್ಲಂಗೆ ಕೊರೊನಾ ಎಂಟ್ರಿ

    ಬೆಂಗ್ಳೂರಿನ ಮತ್ತೊಂದು ಸ್ಲಂಗೆ ಕೊರೊನಾ ಎಂಟ್ರಿ

    -ರಿಪೋರ್ಟ್ ಬರುವ ಮುನ್ನವೇ ಮನೆ ಸೇರಿದ್ರು

    ಬೆಂಗಳೂರು: ಸಿಲಿಕಾನ್ ಸಿಟಿಯ ಮತ್ತೊಂದು ಸ್ಲಂ ಪ್ರದೇಶಕ್ಕೆ ಮಹಾಮಾರಿ ಕೊರೊನಾ ಎಂಟ್ರಿ ನೀಡಿದ್ದು, ಕೊಳಗೇರಿ ಸುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ.

    ಬೆಂಗಳೂರಿನ ಜೆ.ಪಿ.ನಗರದ ರಾಗಿ ಗುಡ್ಡದ ಸ್ಲಂನಲ್ಲಿಯ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇಬ್ಬರು ದೆಹಲಿ ಪ್ರವಾಸದ ಹಿನ್ನೆಲೆ ಹೊಂದಿದ್ದಾರೆ ಎನ್ನಲಾಗಿದ್ದು, ಸೋಂಕಿತರು ಕೋವಿಡ್-19 ವರದಿ ಬರುವ ಮುನ್ನವೇ ಮನೆ ಸೇರಿದ್ದರು ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಸೋಂಕಿತರಿಬ್ಬರು ಇಡೀ ಏರಿಯಾದಲ್ಲಿ ಸುತ್ತಾಡಿದ್ದು, ಅಕ್ಕಪಕ್ಕದ ಮಕ್ಕಳನ್ನು ಮುದ್ದಾಡಿದರು ಎಂದು ತಿಳಿದು ಬಂದಿದೆ.

    ಸೋಂಕಿತರಿಬ್ಬರನ್ನು ಐಸೋಲೇಶನ್ ವಾರ್ಡಿಗೆ ಶಿಫ್ಟ್ ಮಾಡಲಾಗಿದೆ. ಸೋಂಕಿತರಿಬ್ಬರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಆರೋಗ್ಯಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಕಳೆದ ವಾರ ಬೆಂಗಳೂರಿನ ಎಸ್.ಕೆ.ಗಾರ್ಡನ್ ಸ್ಲಂನಲ್ಲಿ ತರಕಾರಿ ಮಾರುವ ಮಹಿಳೆಗೆ ಸೋಂಕು ಕಾಣಿಸಿಕೊಂಡಿತ್ತು. ಮಹಿಳೆಯ ಸಂಪರ್ಕದಲ್ಲಿದ್ದ 10ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇದೀಗ ರಾಗಿಗುಡ್ಡ ಪ್ರದೇಶದಲ್ಲಿ ಕೊರೊನಾ ಸ್ಫೋಟವಾಗುತ್ತಾ ಅನ್ನೋ ಆತಂಕವನ್ನು ಉಂಟು ಮಾಡಿದೆ.

  • ದೆಹಲಿ ಸ್ಲಂನಲ್ಲಿ ಅಗ್ನಿ ಅವಘಡ- 1,500 ಗುಡಿಸಲು ಭಸ್ಮ

    ದೆಹಲಿ ಸ್ಲಂನಲ್ಲಿ ಅಗ್ನಿ ಅವಘಡ- 1,500 ಗುಡಿಸಲು ಭಸ್ಮ

    ನವದೆಹಲಿ: ಆಗ್ನೇಯ ದೆಹಲಿಯ ತುಘಲಕಾಬಾದ್ ಪ್ರದೇಶದ ಕೊಳೆಗೇರಿಗಳಲ್ಲಿ ಸೋಮವಾರ ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದರಿಂದ ಸುಮಾರು 1,500 ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದು, ನೂರಾರು ಜನರು ನಿರಾಶ್ರಿತರಾಗಿದ್ದಾರೆ.

    ನಮಗೆ ಬೆಂಕಿ ಕಾಣಿಸಿಕೊಂಡ ಬಗ್ಗೆ ರಾತ್ರಿ 12.50ಕ್ಕೆ ಕರೆ ಬಂದಿದ್ದು, 28 ಅಗ್ನಿಶಾಮಕ ವಾಹನವನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ಜನರು ನಿದ್ರೆಯಲ್ಲಿ ಇದ್ದಾಗ ಈ ಅವಘಡ ಸಂಭವಿಸಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಹೇಳಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ದಕ್ಷಿಣದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಜೇಂದ್ರ ಪ್ರಸಾದ್ ಮೀನಾ, ತುಘಲಕಾಬಾದ್‍ನ ಕೊಳೆಗೇರಿಗಳಲ್ಲಿ ನಸುಕಿನ ಜಾವ 1 ಗಂಟೆ ಸುಮಾರಿಗೆ ಬೆಂಕಿಯ ಕಾಣಿಸಿಕೊಂಡ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ತಕ್ಷಣ ನಮ್ಮ ಎಲ್ಲ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದೆವು. ಸುಮಾರು 1,000-1,200 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಹೇಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಸ್ಥಳೀಯರ ಪ್ರಕಾರ ಅಗ್ನಿ ಅವಘಡ ಹೇಗೆ ಸಂಭವಿಸಿತ್ತು ಎಂಬದರ ಬಗ್ಗೆ ಮಾಹಿತಿ ಇಲ್ಲ. ಆದರೆ ಬೆಂಕಿ ಕಾಣಿಸಿಕೊಂಡ ನಂತರ ಹೆಚ್ಚಿನ ಜನರು ತಮ್ಮ ಗುಡಿಸಲುಗಳಿಂದ ಹೊರಬಂದಿದ್ದಾರೆ. ಆದ್ದರಿಂದ ಯಾವುದೇ ಸಾವು ಸಂಭವಿಸಿಲ್ಲ. ಅಗ್ನಿಶಾಮಕ ದಳ ಮುಂಜಾನೆ 3:40ರ ಸುಮಾರಿಗೆ ಬೆಂಕಿಯನ್ನು ನಂದಿಸಿದ್ದು, ಇನ್ನೂ ಹೆಚ್ಚಿನ ಕಾರ್ಯಾಚರಣೆ ನಡೆಯುತ್ತಿದೆ.

  • ಬೆಂಗಳೂರಿನ ಸ್ಲಂಗಳಲ್ಲಿ ಈಗ ಚೆನ್ನೈ ದರ್ಬಾರ್

    ಬೆಂಗಳೂರಿನ ಸ್ಲಂಗಳಲ್ಲಿ ಈಗ ಚೆನ್ನೈ ದರ್ಬಾರ್

    ಬೆಂಗಳೂರು: ಚೆನ್ನೈ ಸಂಬಂಧಿಕರಿಗೆ ಬೆಂಗಳೂರು ಜನರು ಇಲ್ಲಿಗೆ ಬರುವುದು ಬೇಡ ಎಂದು ಹೇಳಲು ಶುರು ಮಾಡಿದ್ದಾರೆ.

    ಹೌದು. ಯಾಕೆಂದರೆ ಚೆನ್ನೈನಲ್ಲಿ ಈಗ ನೀರಿಗೆ ತೊಂದರೆ ಶುರುವಾಗಿದ್ದು ಕುಡಿಯುವುದಕ್ಕೂ ನೀರಿಲ್ಲ. ಸ್ನಾನಕ್ಕೂ ನೀರಿಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಇದಕ್ಕಾಗಿ ಚೆನ್ನೈ ನಿವಾಸಿಗಳು ಬಹುತೇಕ ಗಂಟುಮೂಟೆ ಕಟ್ಟಿಕೊಂಡು ಕಾವೇರಿಯನ್ನರಿಸಿ ಬೆಂಗಳೂರಿಗೆ ಶಿಫ್ಟ್ ಆಗುತ್ತಿದ್ದಾರೆ.

    ಚೆನ್ನೈನ ಬಹುತೇಕ ನಿವಾಸಿಗಳು ಬೆಂಗಳೂರಿನ ಸ್ಲಂಗಳಲ್ಲಿ ವಾಸ್ತವ್ಯ ಇರುವ ಸಂಬಂಧಿಕರ ನಿವಾಸಕ್ಕೆ ಬರುತ್ತಿದ್ದಾರೆ. ಈ ಮೂಲಕ ಹಿಂದೆ ಸಂಬಂಧಿಕರನ್ನು ಸಂತೋಷದಿಂದ ಸ್ವಾಗತಿಸುತ್ತಿದ್ದ ಬೆಂಗಳೂರು ನಿವಾಸಿಗಳಿಗೆ ಈಗ ಚೆನ್ನೈ ಸಂಬಂಧಿಕರನ್ನು ಕಂಡರೆ ಭಯ ಶುರುವಾಗಿದೆ. ಏಕೆಂದರೆ ಈಗ ನಮಗೆ ನೀರು ಬರುತ್ತಿಲ್ಲ. ಸಂಬಂಧಿಕರು ನೀರಿಲ್ಲ ಎಂದು ಇಲ್ಲಿಗೆ ಬರುತ್ತಿದ್ದಾರೆ. ನಾವೇನು ಮಾಡೋಣ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

    ಈಗ ಮುಂಗಾರು ಕೈ ಕೊಟ್ಟಿರುವುದರಿಂದ ಬೆಂಗಳೂರಿನ ಸ್ಲಂಗಳಿಗೆ ಬಹುತೇಕ ವಾರಕ್ಕೆರಡು ಬಾರಿ ನೀರು ಪೂರೈಕೆ ಆಗುತ್ತಿದೆ. ಚೆನ್ನೈನಲ್ಲಿರುವ ಸಂಬಂಧಿಕರು ಪಾಪ ಅಲ್ಲಿ ನೀರಿಲ್ಲ ಎಂದು ಇಲ್ಲಿಗೆ ಬರುತ್ತಿದ್ದಾರೆ. ಆದರೆ ಇದರಿಂದ ನಮಗೆ ಇನ್ನಷ್ಟು ಸಮಸ್ಯೆ ಆಗುತ್ತಿದೆ. ಅದರಲ್ಲೂ ಪುಟ್ಟ ಪುಟ್ಟ ಮಕ್ಕಳಿದ್ದರೆ ಸಮಸ್ಯೆ ಕೇಳೋದೆ ಬೇಡ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಬೆಂಗಳೂರು ಹಾಗೆ ಅದು ಎಲ್ಲರನ್ನು ಸ್ವಾಗತಿಸುತ್ತದೆ. ಕಾವೇರಿ ಭೇದ- ಭಾವವಿಲ್ಲದೇ ಎಲ್ಲರ ದಾಹ ತಣಿಸುತ್ತಾಳೆ. ಆದರೆ ಈಗ ನಮಗೆ ಕುಡಿಯುವುದಕ್ಕೆ ನೀರಿಲ್ಲ ಏನೂ ಮಾಡೋಣ ಎಂದು ಜನರು ತಮ್ಮ ನೋವು ತೋಡಿಕೊಂಡಿದ್ದಾರೆ.

  • ಭಾಷಣದಲ್ಲಿ ಮಹದಾಯಿ ಬಗ್ಗೆ ಒಂದೇ ಒಂದು ಮಾತು ಎತ್ತಲಿಲ್ಲ- ರಾಹುಲ್ ವಿರುದ್ಧ ಶೆಟ್ಟರ್ ವಾಗ್ದಾಳಿ

    ಭಾಷಣದಲ್ಲಿ ಮಹದಾಯಿ ಬಗ್ಗೆ ಒಂದೇ ಒಂದು ಮಾತು ಎತ್ತಲಿಲ್ಲ- ರಾಹುಲ್ ವಿರುದ್ಧ ಶೆಟ್ಟರ್ ವಾಗ್ದಾಳಿ

    ಹುಬ್ಬಳ್ಳಿ: ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ಮಾತನಾಡಿದ ತಮ್ಮ ಭಾಷಣದಲ್ಲಿ ಮಹದಾಯಿ ಬಗ್ಗೆ ಒಂದೇ ಮಾತು ಎತ್ತಲಿಲ್ಲ. ಈಗ ಕಾಂಗ್ರೆಸ್ ನವರ ನಾಟಕ ಗೊತ್ತಾಗುತ್ತೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿಯ ಚಾಮುಂಡೇಶ್ವರಿ ಸ್ಲಮ್ ನಲ್ಲಿ ವಾಸ್ತವ ಹೂಡಿದ್ದ ಶೆಟ್ಟರ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ರವರಿಗೆ ಹಿಂದೂಗಳ ಓಟು ಬೇಕಾಗಿದೆ. ಆದ್ದರಿಂದ ಅವರಿಗೆ ಮಠ, ಮಂದಿರಗಳ ನೆನಪಾಗಿದೆ. ಸೆಕ್ಯೂಲರ್ ಎನ್ನೋ ನಾಟಕ ಮಾಡಬೇಡಿ. ಎಲ್ಲರನ್ನೂ ಸಮಾನಾಗಿ ಕಾಣಬೇಕು. ಮಹದಾಯಿ ಬಗ್ಗೆ ಕಾಂಗ್ರೆಸ್ ನಿಲವು ಏನು ಎಂಬುದನ್ನು ಇವರು ಸ್ಪಷ್ಟವಾಗಿ ತಿಳಿಸಬೇಕು ಅಂದ್ರು.

    ಮಹದಾಯಿ ವಿಚಾರವಾಗಿ ಅವರು ಬೆಂಬಲ ಕೊಡ್ತೀವಿ ಎಂದು ಹೇಳಬೇಕಿತ್ತು. ಆದರೆ ರಾಹುಲ್ ಅವರು ತಮ್ಮ ಭಾಷಣದಲ್ಲಿ ಮಹದಾಯಿ ಬಗ್ಗೆ ಒಂದೇ ಮಾತು ಎತ್ತಲಿಲ್ಲ. ಈಗ ಕಾಂಗ್ರೆಸ್‍ನವರ ನಾಟಕ ಗೊತ್ತಾಗುತ್ತೆ ಎಂದು ಕಿಡಿಕಾರಿದ್ರು.

    ಇದೇ ಸಂದರ್ಭದಲ್ಲಿ ಬಿಜೆಪಿಯವರ ಸ್ಲಂ ವಾಸ್ತವ್ಯ ಕುರಿತಂತೆ ಮಾತನಾಡಿದ ಅವರು, ಸ್ಲಂನಲ್ಲಿ ಬೆಳಗ್ಗೆಯಿಂದ ವಾಕಿಂಗ್ ಮಾಡಿ ಅವರ ಸಮಸ್ಯೆಯನ್ನು ಆಲಿಸಿದ್ದೇನೆ. ಇವರಿಗೆ ಮೊದಲನೆಯದಾಗಿ ಹಕ್ಕು ಪತ್ರ ನೀಡಬೇಕು. ನಾವು ಈ ಹಿಂದೆಯೇ ಇಲ್ಲಿ ಮೂಲಭೂತ ಸೌಕರ್ಯ ನೀಡಿದ್ದೆವೆ ಎಂದು ಶೆಟ್ಟರ್ ತಿಳಿಸಿದ್ರು.

  • ಬಿಜೆಪಿ ನಾಯಕರಿಂದ `ಸ್ಲಂ’ರಾಜಕೀಯ- ಪಕೋಡ ಮಾರಿ ಮೋದಿ ವಿರುದ್ಧ ಯುವಕರು ಆಕ್ರೋಶ

    ಬಿಜೆಪಿ ನಾಯಕರಿಂದ `ಸ್ಲಂ’ರಾಜಕೀಯ- ಪಕೋಡ ಮಾರಿ ಮೋದಿ ವಿರುದ್ಧ ಯುವಕರು ಆಕ್ರೋಶ

    ಬೆಂಗಳೂರು: ಒಂದೆಡೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸದಲ್ಲಿದ್ರೆ, ಇತ್ತ ಬಿಜೆಪಿ ನಾಯಕರು ಸ್ಲಂಗಳತ್ತ ಚಿತ್ತ ಹರಿಸಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರ ಲಕ್ಷ್ಮಣಪುರಿ ಸ್ಲಂನಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಿಎಸ್‍ವೈಗೆ ಸ್ಲಂ ನಿವಾಸಿಗಳು ಆರತಿ ಎತ್ತಿ, ಪೂರ್ಣಕುಂಭ ಸ್ವಾಗತ ಕೋರಿದ್ದಾರೆ. ಮುನಿರತ್ನ, ದೀಪಾ ದಂಪತಿ ಮನೆಯಲ್ಲಿ ವಾಸ್ತವ್ಯ ಹೂಡಿದ್ದು ರಾತ್ರಿ ಅನ್ನ ಸಾಂಬಾರ್ ಊಟ ಮಾಡಿದ್ದಾರೆ.

    ಇದೇ ವೇಳೆ ರಾಹುಲ್ ಗಾಂಧಿ ಹೋದ ಕಡೆಯೆಲ್ಲ ಬಿಜೆಪಿ ಬಂದಿದೆ ರಾಜ್ಯದಲ್ಲೂ ಅಷ್ಟೇ ಬಿಜೆಪಿ ಬರುತ್ತೆ ಅಂತ ತಿರುಗೇಟು ನೀಡಿದ ಅವರು, ಸಿಎಂ ಸಿದ್ದರಾಮಯ್ಯ ಸ್ಲಂಗಳನ್ನ ಅಭಿವೃದ್ಧಿ ಮಾಡಿಲ್ಲ. ನಾವು ಕೊಳಗೇರಿಗಳ ಬಗ್ಗೆ ಅಧ್ಯಯನ ಮಾಡಿ ಪುಸ್ತಕ ಬಿಡುಗಡೆ ಮಾಡ್ತಾ ಇದ್ದು, ಸ್ಲಂಗಳ ಅಭಿವೃದ್ಧಿ ಸಂಪೂರ್ಣ ವಿವರ ಅದರಲ್ಲಿದೆ. ರಾಜ್ಯಾದ್ಯಂತ ಸ್ಲಂ ವಾಸ್ತಾವ್ಯ ಮಾಡ್ತೆನೆ. ನಮ್ಮ ಸರ್ಕಾರ ಬಂದರೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವುದಾಗಿ ಹೇಳಿದ್ರು.

    ಇದೇ ಸಂದರ್ಭದಲ್ಲಿ ಅದೇ ಸ್ಲಂ ನ ಕೆಲ ಕಾಂಗ್ರೆಸ್ ನಿರುದ್ಯೋಗಿ ಯುವಕರು ಪಕೋಡ ಮಾರಾಟ ಮಾಡಿ ಪ್ರತಿಭಟನೆ ಮಾಡಿದ್ರು. ನಾವೆಲ್ಲ ಇದೇ ಸ್ಲಂನ ವಾಸಿಗಳು. ಮೋದಿ ಅವರು ನಿರುದ್ಯೋಗ ಸಮಸ್ಯೆ ಬಗ್ಗೆ ಕೇಳಿದ್ರೆ ಪಕೋಡ ಮಾರಾಟ ಮಾಡಿ ಜೀವನ ಮಾಡಿ ಅಂತಾರೆ. ನಾವೆಲ್ಲ ಕಷ್ಟ ಪಟ್ಟು ಓದಿ ವಿದ್ಯಾವಂತರಾಗಿದ್ದು, ಪಕೋಡ ಮಾರಾಟ ಮಾಡೋಕಾ ಅಂತಾ ಯುವಕರು ಆಕ್ರೋಶ ವ್ಯಕ್ತಪಡಿಸಿ, ಮೋದಿ ಮತ್ತು ಯಡಿಯೂರಪ್ಪನ ವಿರುದ್ಧ ಧಿಕ್ಕಾರ ಕೂಗಿದ್ರು.

    ಇಂದು ಬೆಳಗ್ಗೆ ಸ್ಲಂ ಸ್ಥಿತಿಗತಿ ಬಗ್ಗೆ ವರದಿ ಬಿಡುಗಡೆ ಮಾಡಲಿದ್ದಾರೆ. ಬಿಎಸ್‍ವೈ ಸ್ಲಂ ವಾಸ್ತವ್ಯದ ಬಗ್ಗೆ ಕಾಂಗ್ರೆಸ್ ನಾಯಕರು ಇದೆಲ್ಲಾ ಗಿಮಿಕ್ ಅಂತಾ ಟೀಕೆ ಮಾಡಿದ್ದು. ಕಾಂಗ್ರೆಸ್ ನಾಯಕರ ಟೀಕೆಗೆ ಬಿಎಸ್ ವೈ ತಿರುಗೇಟು ನೀಡಿದ್ದಾರೆ.

  • ಭಿಕ್ಷಾಟನೆ ಮಾಡಿ ಮಕ್ಕಳನ್ನ ಸಾಕ್ತಿರೋ ತಂದೆ, ಸ್ಲಮ್‍ನಲ್ಲಿದ್ರೂ ಕೆಎಎಸ್ ಮಾಡ್ಬೇಕೆಂಬ ಬಿಕಾಂ ವಿದ್ಯಾರ್ಥಿಗೆ ಬೇಕಿದೆ ಸಹಾಯ

    ಭಿಕ್ಷಾಟನೆ ಮಾಡಿ ಮಕ್ಕಳನ್ನ ಸಾಕ್ತಿರೋ ತಂದೆ, ಸ್ಲಮ್‍ನಲ್ಲಿದ್ರೂ ಕೆಎಎಸ್ ಮಾಡ್ಬೇಕೆಂಬ ಬಿಕಾಂ ವಿದ್ಯಾರ್ಥಿಗೆ ಬೇಕಿದೆ ಸಹಾಯ

    ಬೆಳಗಾವಿ: ಜಿಲ್ಲೆಯ ಸ್ಲಂವೊಂದರ ಯುವಕ ಕೆಎಎಸ್ ಅಧಿಕಾರಿ ಆಗಬೇಕೆಂಬ ಗುರಿ ಹೊಂದಿದ್ದಾರೆ. ಆದರೂ ಕಿತ್ತು ತಿನ್ನುವ ಬಡತನ ವಿದ್ಯಾಭ್ಯಾಸಕ್ಕೆ ಅಡ್ಡಗಾಲು ಹಾಕುತ್ತಿದೆ.

    ಬಿಕಾಂ ವಿದ್ಯಾರ್ಥಿಯಾದ ಗಣೇಶ್ ವಿಭೂತಿ ಬೆಳಗಾವಿ ಮಹಾನಗರದ ಕಣಬರ್ಗಿ ಸ್ಲಂನಲ್ಲಿ ಹರಿದು ಹೋದ ಗುಡಿಸಲಿನಲ್ಲಿ ವಾಸವಿದ್ದಾರೆ. ಇವರ ತಂದೆ ಮನೆ ಮನೆಗೆ ತೆರಳಿ ಹಾಡು ಹೇಳಿ ಭಿಕ್ಷೆ ಬೇಡಿ ಬಂದ ಹಣದಿಂದ 5 ಮಕ್ಕಳನ್ನು ಸಾಕುತ್ತಿದ್ದಾರೆ. ತಾಯಿ ಬೇರೆಯವರ ಮನೆಗೆಲಸ, ಪಾತ್ರೆ ತೊಳೆಯುವ ಕೆಲಸ ಮಾಡುವುದರ ಜೊತೆಗೆ ಪೊರಕೆ ಮಾರಲು ಹೋಗುತ್ತಾರೆ. ಕಿತ್ತು ತಿನ್ನುವ ಬಡತನ, ಓದಲು ಆಸಕ್ತಿಯಿದ್ದರೂ ಹಣದ ಕೊರತೆ ಗಣೇಶ್‍ರನ್ನು ಕಾಡುತ್ತಿದೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅವರಿವರ ಸಹಾಯ ಪಡೆದು ಬಿಕಾಂ ಓದುತ್ತಿದ್ದಾರೆ.

    ಐದು ಮಕ್ಕಳಿಗೂ ಊಟ ಕೊಡಿಸುವುದೇ ದೊಡ್ಡ ಸವಾಲಾಗಿರುವಾಗ ನಿನಗೆ ಓದಲು ಹಣ ಎಲ್ಲಿಂದ ತರಲಿ ಎಂದು ಪಾಲಕರು ಅಸಹಾಯಕರಾಗಿದ್ದಾರೆ. ಆದರೆ ನಾನು ಕಷ್ಟಪಟ್ಟು ಓದಿ ಮುಂದೆ ಬರಬೇಕು ಎಂದು ಗಣೇಶ್ ತನ್ನ ಕೆಎಎಸ್ ಗುರಿ ಬಗ್ಗೆ ಹೇಳಿಕೊಳ್ಳುತ್ತಾರೆ.

    ನಮ್ಮ ತಂದೆ ನಮಗೆ ವಿದ್ಯಾಭ್ಯಾಸ ನೀಡಲಿಲ್ಲ. ಅದರ ಬದಲು ತಬಲಾ ,ಹಾರ್ಮೊನಿಯಂ ನೀಡಿದರು. ಆದರೆ ಮಗ ಗಣೇಶ್ ಓದುವಲ್ಲಿ ಆಸಕ್ತಿ ತೋರಿದ್ದಾನೆ ಎಂದು ಗಣೇಶ್ ಅವರ ತಂದೆ ಹೇಳುತ್ತಾರೆ. ಕಂದೀಲು ಬೆಳಕಿನಲ್ಲಿ ಓದಿದ ಗಣೇಶ್ ಹಠ ಮಾತ್ರ ಬಿಟ್ಟಿಲ್ಲ. ಕೆಎಎಸ್ ಮಾಡಿ ತಮ್ಮ ಜನರ ಬದುಕಿಗೆ ಆಸರೆಯಾಗಬೇಕೆಂಬುದೇ ಗಣೇಶ್ ಅವರ ಜೀವನದ ಮುಖ್ಯ ಗುರಿ.

    https://www.youtube.com/watch?v=QMEWBdErnLE