Tag: ಸ್ಯಾಮ್ ಸಂಗ್

  • ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಸ್ಮಾರ್ಟ್ ಫೋನ್ ಗಳು: ಈಗ ಈ ಫೋನ್‍ಗಳ ಬೆಲೆ ಎಷ್ಟು?

    ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಸ್ಮಾರ್ಟ್ ಫೋನ್ ಗಳು: ಈಗ ಈ ಫೋನ್‍ಗಳ ಬೆಲೆ ಎಷ್ಟು?

    ನವದೆಹಲಿ: 2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಗಳ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಇದೆ ಮೊದಲ ಬಾರಿಗೆ ಕ್ಸಿಯೋಮಿಗೆ ಸ್ಥಾನ ಸಿಕ್ಕಿದೆ.

    ಮೊಬೈಲ್ ಮಾರುಕಟ್ಟೆಯ ಬಗ್ಗೆ ಕೌಂಟರ್ ಪಾಯಿಂಟ್ ಅಧ್ಯಯನ ನಡೆಸಿದ್ದು, ಆಪಲ್ ಐಫೋನ್ ಎಕ್ಸ್ ಫೋನಿಗೆ ಮೊದಲ ಸ್ಥಾನ ಸಿಕ್ಕಿದರೆ ಕ್ಸಿಯೋಮಿ ರೆಡ್‍ಮೀ 5ಎ ಮೂರನೇ ಸ್ಥಾನ, ಸ್ಯಾಮ್ ಸಂಗ್ ಗೆಲಾಕ್ಸಿ ಎಸ್9ಗೆ 5ನೇ ಸ್ಥಾನ ಸಿಕ್ಕಿದೆ. ಪಟ್ಟಿಯಲ್ಲಿ ಆಪಲ್, ಸ್ಯಾಮ್ ಸಂಗ್, ಕ್ಸಿಯೋಮಿ, ಒಪ್ಪೊ ಕಂಪೆನಿಯ ಫೋನ್‍ಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

    ಟಾಪ್ 10 ಫೋನ್ ಗಳ ಪಟ್ಟಿ

    1.ಆಪಲ್ ಐ ಫೋನ್ ಎಕ್ಸ್:

    ಆಪಲ್ ಐ ಫೋನ್ ಎಕ್ಸ್ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಶೇ3.5 ಪಾಲನ್ನು ಪಡೆಯುವುದರ ಮೂಲಕ ಮೊದಲ ಸ್ಥಾನದಲ್ಲಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 76,488 ರೂ. ಇದ್ದರೆ 256 ಜಿಬಿ 92,990 ರೂ. ಇದೆ.

    2.ಆಪಲ್ ಐ ಫೋನ್ 8 ಪ್ಲಸ್


    ಮಾರುಕಟ್ಟೆಯಲ್ಲಿ ಶೇ2.3 ಪಾಲನ್ನು ಪಡೆಯುವುದರ ಮೂಲಕ ಎರಡನೇ ಸ್ಥಾನದಲ್ಲಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 69,990 ರೂ. ಇದ್ದರೆ 256 ಜಿಬಿ 78,999 ರೂ.

    3.ಕ್ಸಿಯೋಮಿ ರೆಡ್ ಮಿ 5ಎ


    2017 ನವೆಂಬರ್ ನಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿದ್ದು ಮೂರನೇ ಸ್ಥಾನದಲ್ಲಿದೆ. ಶೇ1.8 ಮಾರುಕಟ್ಟೆ ಪಾಲನ್ನು ಹೊಂದಿದೆ. 16 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 5,999 ರೂ. ಇದೆ.

    4. ಒಪ್ಪೊ ಎ83


    ಒಪ್ಪೊ ಎ83 ಶೇ.1.8 ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ನಾಲ್ಕನೇಯ ಸ್ಥಾನವನ್ನು ಪಡೆದುಕೊಂಡಿದೆ. ಶೇ1.8 ಮಾರುಕಟ್ಟೆ ಪಾಲನ್ನು ಹೊಂದಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 15,990 ರೂ. ಇದೆ.

    5.ಸ್ಯಾಮ್ ಸಂಗ್ ಗೆಲಾಕ್ಸಿ ಎಸ್ 9
    ಶೇ1.6 ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ 5ನೇ ಸ್ಥಾನವನ್ನು ಪಡೆದುಕೊಂಡಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 55,099 ರೂ. ಬೆಲೆ ನಿಗದಿಯಾಗಿದೆ.

    6.ಸ್ಯಾಮ್ ಸಂಗ್ ಎಸ್ 9 ಪ್ಲಸ್
    ಈ ವರ್ಷ ಮಾರ್ಚ್ ನಲ್ಲಿ ಬಿಡುಗಡೆಗೊಂಡ ಸ್ಯಾಮ್ ಸಂಗ್ ಎಸ್ 9 ಪ್ಲಸ್ ಫೋನಿಗೆ 6 ನೇ ಸ್ಥಾನ ಸಿಕ್ಕಿದ್ದು, ಶೇ1.6 ಮಾರುಕಟ್ಟೆ ಪಾಲನ್ನು ಹೊಂದಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 64,900 ರೂ. ಬೆಲೆಯಿದೆ.

    7.ಐಪೋನ್ 7
    2016 ಸೆಪ್ಟಂಬರ್ ನಲ್ಲಿ ಬಿಡುಗಡೆಗೊಂಡಿದ್ದ ಆಪಲ್ ಐಫೋನ್ 7 ಏಳನೇ ಸ್ಥಾನದಲ್ಲಿದೆ. ಮಾರುಕಟ್ಟೆಯ ಶೇ1.6 ಪಾಲನ್ನು ಹೊಂದಿದೆ. 32 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 41,499 ರೂ. ಬೆಲೆಯಿದೆ.

    8.ಆಪಲ್ ಐ ಫೋನ್ 8


    ಐ ಫೋನ್ 8 ಎಂಟನೇ ಸ್ಥಾನದಲ್ಲಿದೆ. ಮಾರುಕಟ್ಟೆಯ ಶೇ1.4 ಪಾಲನ್ನು ಹೊಂದಿದೆ. 53,749 ರೂ. ಬೆಲೆಯಲ್ಲಿ 64 ಜಿಬಿ ಆಂತರಿಕ ಮೆಮೊರಿಯ ಫೋನ್ ಖರೀದಿಸಬಹುದು.

    9.ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ7 ಪ್ರೊ
    ಒಂಭತ್ತನೇ ಸ್ಥಾನದಲ್ಲಿ ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ7 ಪ್ರೊ ಇದೆ. ಮಾರುಕಟ್ಟೆಯ ಶೇ1.4 ಪಾಲನ್ನು ಹೊಂದಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 18,900 ರೂ. ಬೆಲೆಯಿದೆ.

    10. ಆಪಲ್ ಐ ಫೋನ್ 6
    ಆಪಲ್ ಐ ಫೋನ್ 6 ಹತ್ತನೇ ಸ್ಥಾನವನ್ನು ಪಡೆದುಕೊಂಡಿದೆ. 2014 ರಲ್ಲಿ ಬಿಡುಗಡೆಗೊಂಡ ಸ್ಮಾರ್ಟ್ ಫೋನ್ ಶೇ.1.2 ಮಾರುಕಟ್ಟೆಯಲ್ಲಿ ಪಾಲನ್ನು ಹೊಂದಿದೆ. 32 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 23,999 ರೂ. ಬೆಲೆಯಿದೆ.

  • ವಿಶ್ವದ ಟಾಪ್ ಸ್ಮಾರ್ಟ್ ಫೋನ್ ಕಂಪೆನಿಗಳ ಪಟ್ಟಿ ರಿಲೀಸ್: ಯಾವ ಕಂಪನಿಯು ಎಷ್ಟು ಮಾರುಕಟ್ಟೆ ಹೊಂದಿದೆ?

    ವಿಶ್ವದ ಟಾಪ್ ಸ್ಮಾರ್ಟ್ ಫೋನ್ ಕಂಪೆನಿಗಳ ಪಟ್ಟಿ ರಿಲೀಸ್: ಯಾವ ಕಂಪನಿಯು ಎಷ್ಟು ಮಾರುಕಟ್ಟೆ ಹೊಂದಿದೆ?

    ನವದೆಹಲಿ: ಸ್ಯಾಮ್ ಸಂಗ್ 23.3% ಸ್ಮಾರ್ಟ್ ಫೋನ್ ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

    ಇಂಟರ್ ನ್ಯಾಷನಲ್ ಡೇಟಾ ಕಾರ್ಪೋರೇಷನ್(ಐಡಿಸಿ) 2018 ಮೊದಲ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಸ್ಮಾರ್ಟ್ ಫೋನ್ ಸಾಗಾಟ ಮಾಡಿದ ಕಂಪೆನಿಗಳ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಸ್ಯಾಮ್ ಸಂಗ್ 7.82 ಕೋಟಿ ಫೋನ್‍ಗಳನ್ನು ಮಾರಾಟ ಮಾಡಿ, 23.4% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಕಳೆದ ವರ್ಷ ಈ ಅವಧಿಗೆ ಹೋಲಿಸಿದರೆ 2.4% ಮಾರುಕಟ್ಟೆ ಪಾಲು ಕಡಿಮೆಯಾಗಿದೆ.

    ಜಾಗತಿಕವಾಗಿ ಮೊದಲ ತ್ರೈಮಾಸಿಕದಲ್ಲಿ 33.43 ಕೋಟಿ ಸ್ಮಾರ್ಟ್ ಫೋನ್‍ಗಳು ಮಾರಾಟಗೊಂಡಿದ್ದರೆ 2017ರ ಈ ಅವಧಿಯಲ್ಲಿ 34.44 ಕೋಟಿ ಫೋನ್‍ಗಳು ಮಾರಾಟಗೊಂಡಿತ್ತು. ಈ ವರ್ಷ 2.4% ಮಾರಾಟ ಕಡಿಮೆಯಾಗಿದೆ ಎಂದು ಇಂಟರ್ ನ್ಯಾಷನಲ್ ಡೇಟಾ ಕಾರ್ಪೋರೇಷನ್(ಐಡಿಸಿ) ತಿಳಿಸಿದೆ.

    ಸ್ಮಾರ್ಟ್ ಫೋನ್ ಸಾಗಾಟ ಕಡಿಮೆಯಾಗಲು ಚೀನಾ ಮಾರುಕಟ್ಟೆ ಕಾರಣ. ಚೀನಾದ ಜನತೆ ದುಬಾರಿ ಬೆಲೆ ಫೋನ್ ಖರೀದಿಸುತ್ತಿದ್ದಾರೆ. ಈ ಫೋನ್‍ಗಳು ಹೆಚ್ಚು ದಿನಗಳ ಕಾಲ ಬಳಸುತ್ತಿರುವುದರಿಂದ ಸ್ಮಾರ್ಟ್ ಫೋನ್ ಮಾರಾಟ ಇಳಿಕೆಯಾಗಿದೆ ಎಂದು ಐಡಿಸಿ ತಿಳಿಸಿದೆ.

    ಜಾಗತಿಕವಾಗಿ ಹಾಗೂ ಚೈನಾದಲ್ಲಿ ಜನರು ಹೆಚ್ಚಿನ ಬೆಲೆಯ ಸ್ಮಾರ್ಟ್ ಫೋನ್‍ಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಅವುಗಳು ಹೆಚ್ಚು ಕಾಲ ಬಳಕೆಯಲ್ಲಿರುತ್ತವೆ ಹಾಗಾಗಿ ಸ್ಮಾರ್ಟ್ ಫೋನ್ ಸಾಗಾಟ ಇಳಿಕೆ ಕಂಡಿದೆ ಎಂದು ಐಡಿಸಿ ಸಂಶೋಧಕಿ ಮೆಲಿಸಾ ಚೌ ತಿಳಿಸಿದ್ದಾರೆ. ಡಾಲರ್ ಲೆಕ್ಕದಲ್ಲಿ ನೋಡಿದರೆ ಸ್ಮಾರ್ಟ್ ಫೋನ್ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಬಳಕೆದಾರರು ತಮ್ಮ ಬಹುತೇಕ ಕೆಲಸಗಳ ಲೆಕ್ಕಾಚಾರಗಳಿಗೆ ಸ್ಮಾರ್ಟ್ ಫೋನ್ ಅನ್ನು ಅವಲಂಬಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಆಪಲ್ 5.22 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿ, 15.6% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 2.8% ಅಷ್ಟು ಮಾರುಕಟ್ಟೆ ಪಾಲು ಹೆಚ್ಚಾಗಿದೆ. ಹುವಾವೇ 3.93 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿದ್ದು, 11.8% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 13.8% ಅಷ್ಟು ಮಾರುಕಟ್ಟೆ ಪಾಲು ಹೆಚ್ಚಾಗಿದೆ.

    ಕ್ಸಿಯೋಮಿ 2.80 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿ, 8.4% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 87.8% ಅಷ್ಟು ಮಾರುಕಟ್ಟೆ ಪಾಲು ಹೆಚ್ಚಾಗಿದೆ. ಒಪ್ಪೊ 2.39 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿ, 7.1% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಐದನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 7.5% ಮಾರುಕಟ್ಟೆ ಪಾಲು ಕಡಿಮೆಯಾಗಿದೆ.

    ಇತರೆ ಕಂಪೆನಿಗಳು ಒಟ್ಟು 11.27 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಸಾಗಾಟ ಮಾಡಿದ್ದು, 33.7% ಮಾರುಕಟ್ಟೆ ಪಾಲನ್ನು ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 18.5% ಅಷ್ಟು ಮಾರುಕಟ್ಟೆ ಪಾಲು ಕಡಿಮೆಯಾಗಿದೆ.

     

  • ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕ್ಸಿಯೋಮಿಗೆ ಮತ್ತೆ ಅಗ್ರಪಟ್ಟ!

    ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕ್ಸಿಯೋಮಿಗೆ ಮತ್ತೆ ಅಗ್ರಪಟ್ಟ!

    ನವದೆಹಲಿ: 2018ರ ಮೊದಲ ತ್ರೈಮಾಸಿಕದಲ್ಲೂ ದೇಶದ ಟಾಪ್ ಸ್ಮಾರ್ಟ್ ಫೋನ್ ಕಂಪೆನಿಯಾಗಿ ಕ್ಸಿಯೋಮಿ ಹೊರಹೊಮ್ಮಿದೆ.

    ದೇಶದ ಸ್ಮಾರ್ಟ್‍ಫೋನ್ ಕಂಪೆನಿಗಳ ಮಾರುಕಟ್ಟೆಯ ಪಾಲನ್ನು ಕೌಂಟರ್ ಪಾಯಿಂಟ್ ಸಂಸ್ಥೆ ಅಧ್ಯಯನ ನಡೆಸಿ ವರದಿ ನೀಡಿದೆ. 31% ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ ಕ್ಸಿಯೋಮಿ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮೊದಲ ಸ್ಥಾನದಲ್ಲಿದೆ.

    ರೆಡ್ ಮಿ ನೋಟ್ 5, ರೆಡ್ ಮಿ ನೋಟ್ 5 ಪ್ರೊ ಫೋನ್ ಗಳು ಹೆಚ್ಚು ಮಾರಾಟ ಕಂಡಿದೆ ಎಂದು ವರದಿ ತಿಳಿಸಿದೆ. ಆಫ್ ಲೈನ್ ಮತ್ತು ಆನ್ ಲೈನ್ ಎರಡು ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ಹೊಂದುವ ಮೂಲಕ ನಂಬರ್ ಒನ್ ಪಟ್ಟದಲ್ಲಿ ಕ್ಸಿಯೋಮಿ ಮುಂದುವರಿದಿದೆ ಎಂದು ಕೌಂಟರ್ ಪಾಯಿಂಟ್ ತಿಳಿಸಿದೆ.

     

    ಸ್ಯಾಮ್ ಸಂಗ್ 26.2% ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ 2ನೇ ಸ್ಥಾನ ಪಡೆದುಕೊಂಡಿದ್ದು, ಗೆಲಾಕ್ಸಿ ಜೆ7 ಎನ್‍ಎಕ್ಸ್‍ಟಿ ಮತ್ತು ಗೆಲಾಕ್ಸಿ ಜೆ2 ಮಾಡೆಲ್ ಗಳು ಹೆಚ್ಚು ಮಾರಾಟವಾಗಿದೆ. ವಿವೊ 5.8%, ಒಪ್ಪೊ 5.6% ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ 3 ಮತ್ತು 4ನೇ ಸ್ಥಾನದಲ್ಲಿವೆ.

    ಹುವಾವೇ ಅವರ ಸಬ್ ಬ್ರಾಂಡ್ ಹಾನರ್ 3.4% ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ ಮೊದಲ ಬಾರಿಗೆ ಮೊದಲ ಟಾಪ್ 5ರ ಒಳಗಿನ ಸ್ಥಾನವನ್ನು ಪಡೆದುಕೊಂಡಿದೆ. ಹಾನರ್ 9 ಲೈಟ್, ಹಾನರ್ 7ಎಕ್ಸ್ ಮಾಡೆಲ್ ಗಳು ಆನ್ ಲೈನ್ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗಿದೆ. ಚೀನಾ ಕಂಪೆನಿಗಳು ದೇಶೀಯ ಮಾರುಕಟ್ಟೆಯಲ್ಲಿ 57% ಪಾಲನ್ನು ಹೊಂದುವ ಮೂಲಕ ಉತ್ತಮ ಪ್ರಗತಿ ಸಾಧಿಸುತ್ತಿವೆ.

    ಫೀಚರ್ ಪೋನ್ ಮಾರುಕಟ್ಟೆ ಮೊದಲ ತ್ರೈಮಾಸಿಕದಲ್ಲಿ ಎರಡರಷ್ಟಾಗಿದೆ ಆದರೆ ಸ್ಮಾರ್ಟ್ ಫೋನ್ ನಲ್ಲಿ ಬದಲಾವಣೆಯಾಗಿಲ್ಲ ಎಂದು ತಿಳಿಸಿದೆ. ಫೀಚರ್ ಫೋನ್ ವಿಭಾಗದಲ್ಲಿ ರಿಲಯನ್ಸ್ ಜಿಯೋ 35.8% ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ 1ನೇ ಸ್ಥಾನದಲ್ಲಿದೆ. 9.8% ಪಡೆಯುವುದರ ಮೂಲಕ ಸ್ಯಾಮ್ ಸಂಗ್ 2ನೇ ಸ್ಥಾನದಲ್ಲಿದೆ. ಐಟೆಲ್ 9.4%, ನೊಕಿಯಾ 7.3%, ಲಾವಾ 5.6% ಪಡೆಯುವುದರ ಮೂಲಕ 3, 4, 5 ನೇ ಸ್ಥಾನವನ್ನು ಪಡೆದಿವೆ.

     

     

  • ಇದ್ದಕ್ಕಿದ್ದಂತೆ ಕಿಸೆಯಲ್ಲಿದ್ದ ಸ್ಯಾಮ್ ಸಂಗ್ ಫೋನ್ ಬ್ಲಾಸ್ಟ್ ಆಯ್ತು! ವಿಡಿಯೋ ನೋಡಿ

    ಇದ್ದಕ್ಕಿದ್ದಂತೆ ಕಿಸೆಯಲ್ಲಿದ್ದ ಸ್ಯಾಮ್ ಸಂಗ್ ಫೋನ್ ಬ್ಲಾಸ್ಟ್ ಆಯ್ತು! ವಿಡಿಯೋ ನೋಡಿ

    ಜಕರ್ತಾ: ಈ ಹಿಂದೆ ಗೆಲಾಕ್ಸಿ ನೋಟ್ 7 ಫೋನ್ ಸ್ಫೋಟಗೊಂಡಿತ್ತು. ಈಗ ಸ್ಯಾಮ್ ಸಂಗ್ ಮತ್ತೊಂದು ಫೋನ್ ಸ್ಫೋಟಗೊಂಡಿದ್ದು ವಿಡಿಯೋ ವೈರಲ್ ಆಗಿದೆ.

    ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರು ಶರ್ಟ್ ಕಿಸೆಯಿಂದ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಸಿಸಿಟಿವಿಯಲ್ಲಿ ಫೋನ್ ಸ್ಫೋಟಗೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.


    ಈ ವಿಚಾರದ ಬಗ್ಗೆ ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಕಂಪೆನಿ ಸ್ಪಷ್ಟನೆ ನೀಡಿದ್ದು, ನಾವು ನೀಡಿದ ಫೋನಿನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. 2013 ರಲ್ಲಿ ಬಿಡುಗಡೆಯಾದ ಗ್ರಾಂಡ್ ಡ್ಯುಯೋಸ್ ಮಾದರಿಯ ಫೋನ್ ಸ್ಫೋಟಗೊಂಡಿದೆ. ಬೇರೆ ಕಂಪೆನಿಯ ಬ್ಯಾಟರಿಯನ್ನು ಬಳಕೆ ಮಾಡಿದ್ದರಿಂದ ಈ ಫೋನ್ ಸ್ಫೋಟಗೊಂಡಿದೆ ಎಂದು ತಿಳಿಸಿದೆ.

    ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕಡಿಮೆ ಬೆಲೆಗೆ ಫೋನ್ ಭಾಗಗಳು ಸಿಗುತ್ತದೆ. ಹೀಗಾಗಿ ಇನ್ನು ಮುಂದೆ ಕಡಿಮೆ ಬೆಲೆ ಸಿಗುವ ಭಾಗಗಳನ್ನು ಹಾಕಿಕೊಳ್ಳಬೇಡಿ ಎಂದು ಸ್ಯಾಮ್ ಸಂಗ್ ತಿಳಿಸಿದೆ.

    http://www.youtube.com/watch?v=J4QLJiv-Eo4

    ಈ ಹಿಂದೆ ಸ್ಯಾಮ್ ಸಂಗ್ ಗೆಲಾಕ್ಸಿ 7 ಸ್ಫೋಟಗೊಂಡ ಪ್ರಕರಣಗಳು ಬೆಳಕಿಗೆ ಬಂದಿತ್ತು. ಇದಾದ ಬಳಿಕ ಸ್ಯಾಮ್ ಸಂಗ್ ಗ್ರಾಹಕರಿಗೆ ವಿತರಣೆ ಮಾಡಿದ್ದ ಫೋನ್ ಗಳನ್ನು ಹಿಂದಕ್ಕೆ ಪಡೆದುಕೊಂಡಿತ್ತು.