Tag: ಸ್ಯಾಮ್ ಬಾಂಬೆ

  • ಜನರ ಮುಂದೆಯೇ ಬೆತ್ತಲೆ ಫೋಟೋ ಶೂಟ್ : ನಟಿ ಪೂನಂ ಪಾಂಡೆಗೆ ಸಂಕಷ್ಟ

    ಜನರ ಮುಂದೆಯೇ ಬೆತ್ತಲೆ ಫೋಟೋ ಶೂಟ್ : ನಟಿ ಪೂನಂ ಪಾಂಡೆಗೆ ಸಂಕಷ್ಟ

    ಸಾರ್ವಜನಿಕವಾಗಿ ಸಿಲೆಬ್ರಿಟಿಗಳು ಹೇಗೆ ವರ್ತಿಸಬೇಕು ಎನ್ನುವ ಚರ್ಚೆ ಹಲವು ವರ್ಷಗಳಿಂದ ಆಗುತ್ತಲೇ ಇದೆ. ಆದರೆ, ಕೆಲ ಸಿಲಿಬ್ರಿಟಿಗಳು ಮಾತ್ರ ಯಾವುದೇ ಕಾರಣಕ್ಕೂ ಬದಲಾಗುವಂತೆ ಕಾಣುತ್ತಿಲ್ಲ. ಅದರಲ್ಲೂ ವಿವಾದದ ಮೂಲಕವೇ ಫೇಮಸ್ ಆಗಿರುವ ಪೂನಂ ಪಾಂಡೆ, ಗೋವಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡು ಪೊಲೀಸ್ ರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಅವರ ವಿರುದ್ಧ ದೂರು ದಾಖಲೆಯಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ

    ಪೂನಂ ಪಾಂಡೆ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಈಗಲ್ಲವಾದರೂ, ಎರಡು ವರ್ಷಗಳ ಹಿಂದೆ ನಡೆದ ಘಟನೆಗೆ ಇದೀಗ ಗೋವಾ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಕೇಸ್ ನಲ್ಲಿ ಅನೇಕ ವ್ಯಕ್ತಿಗಳಿಂದ ಹೇಳಿಕೆಗಳನ್ನು ಪಡೆದು ಕೇಸ್ ದಾಖಲು ಮಾಡಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂನಂ ಮತ್ತು ಅವರ ಪತಿ ಸ್ಯಾಮ್ ಅವರನ್ನು ಬಂಧಿಸಿ, ಬಿಡುಗಡೆ ಮಾಡಿದ್ದರು ಗೋವಾ ಪೊಲೀಸರು. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    2020ರಲ್ಲಿ ಪೂನಂ ಪಾಂಡೆ ಮತ್ತು ಪತಿ ಸ್ಯಾಂಡ್ ಬಾಂಬೆ ಇಬ್ಬರೂ ಚಾಲೋಲಿ ಡ್ಯಾಮ್ ಗೆ ಹೋಗಿದ್ದರು. ಅಲ್ಲಿ ಎಲ್ಲರೆದುರೇ ಬೆತ್ತಲೆ ಫೋಟೋ ಶೂಟ್ ಮಾಡಿದ್ದರು. ಅದನ್ನು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಅವರು ಅಶ್ಲೀಲವಾಗಿ ನಡೆದುಕೊಂಡಿದ್ದರಿಂದ ಕೇಸು ದಾಖಲಿಸಲಾಗಿತ್ತು.

    ಸದ್ಯ ಪೂನಂ ಪಾಂಡೆ ಮತ್ತು ಸ್ಯಾಮ್ ಬಾಂಬೆ ಜೊತೆಯಾಗಿಲ್ಲ ಇಲ್ಲ. ಮದುವೆಯಾದ ಕೆಲವೇ ವರ್ಷಗಳಲ್ಲಿ ಇಬ್ಬರೂ ದೂರ ದೂರವಾಗಿದ್ದಾರೆ. ಇಬ್ಬರೂ ದೂರ ಆಗಿರುವುದಕ್ಕೆ ಕಾರಣವನ್ನೂ ನೀಡಿದ್ದಾರೆ ಪೂನಂ. ಹಲವು ಕಡೆ ತಮ್ಮಿಬ್ಬರ ಮಧ್ಯ ಏನೆಲ್ಲ ಆಯಿತು, ತಾವೆಷ್ಟು ಹಿಂಸೆಯನ್ನು ಅನುಭವಿಸಿದ್ದೇನೆ ಎಂದೂ ಪೂನಂ ಹೇಳಿಕೊಂಡಿದ್ದಾರೆ.

  • ಮಾಜಿ ಪತಿಯ ಬಗ್ಗೆ ಬೆಂಕಿಯುಗುಳಿದ ಪೂನಂ ಪಾಂಡೆ : ಟಾಪ್ ನಟಿಯ ದಾಂಪತ್ಯ ಹೀಗೂ ಇತ್ತಾ?

    ಮಾಜಿ ಪತಿಯ ಬಗ್ಗೆ ಬೆಂಕಿಯುಗುಳಿದ ಪೂನಂ ಪಾಂಡೆ : ಟಾಪ್ ನಟಿಯ ದಾಂಪತ್ಯ ಹೀಗೂ ಇತ್ತಾ?

    ಬಾಲಿವುಡ್ ನ ವಿವಾದಿತ ತಾರೆ, ಬೋಲ್ಡ್ ಮಾತುಗಳ ಮೂಲಕವೇ ಫೇಮಸ್ ಆಗಿರುವ ಪೂನಂ ಪಾಂಡೆ ತಮ್ಮ ದಾಂಪತ್ಯ ಜೀವನದ ಬಗ್ಗೆ ಖುಲಂ ಖುಲ್ಲಾ ಮಾತನಾಡಿದ್ದಾರೆ. ಕಂಗನಾ ರಣಾವತ್ ನಡೆಸಿಕೊಡುವ ‘ಲಾಕಪ್’ ರಿಯಾಲಿಟಿ ಶೋನಲ್ಲಿ ತಮ್ಮ ಪ್ರತಿಸ್ಪರ್ಧೆಗಳ ಜತೆ ಮಾತನಾಡುತ್ತಾ ಮಾಜಿಪತಿ ಹೇಗಿದ್ದ ಎನ್ನುವ ಸಿಕ್ರೇಟ್ ಅನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ : ನಟ ಚೇತನ್ ಅಮೆರಿಕಾಗೆ ಗಡಿಪಾರು? : ಆತಂಕದಲ್ಲಿ ಚಿತ್ರ ನಿರ್ಮಾಪಕರು

    ಬಹುಕಾಲದ ಗೆಳೆಯ, ನಿರ್ಮಾಪಕ ಸ್ಯಾಮ್ ಬಾಂಬೆ ಜತೆ ಪೂನಂ 2020ರಲ್ಲಿ ಸಪ್ತಪದಿ ತುಳಿದಿದ್ದರು. ಮದುವೆಯಾದ ಒಂದೇ ತಿಂಗಳಿಗೆ ದಾಂಪತ್ಯದಲ್ಲಿ ಬಿರುಕು ಬಿಟ್ಟ ವಿಚಾರವನ್ನು ಸ್ವತಃ ಪೂನಂ ಹೇಳಿಕೊಂಡಿದ್ದರು. ಅಲ್ಲದೇ, ಪತಿಯಿಂದ ಹಲ್ಲೆಗೊಳಗಾಗಿದ್ದೇನೆ ಎಂದೂ ಅವರು ದೂರು ಕೊಟ್ಟಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಸ್ಯಾಮ್ ವಿರುದ್ಧ ಮತ್ತೊಂದು ದೂರು ದಾಖಲಿಸಿ, ತಮಗೆ ಚಿತ್ರಹಿಂಸೆ ಕೊಟ್ಟಿದ್ದಾನೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ : ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ

    ಲಾಕಪ್ ಶೋನಲ್ಲಿ ಸಹಸ್ಪರ್ಧಿಗಳಾದ  ಪಾಯಲ್ ಮತ್ತು ಕಾರನ್ವೀರ್ ಜತೆ ಮಾತನಾಡುತ್ತಾ, ಅವನು ದಿನಪೂರ್ತಿ ಕುಡಿಯುತ್ತಿದ್ದ. ಕುಡಿದಾಗ ಮೃಗದಂತೆ ವರ್ತಿಸುತ್ತಿದ್ದ. ಪದೇಪದೇ ನನ್ನ ತಲೆಯ ಒಂದು ಭಾಗಕ್ಕೆ ಅವನು ಹೊಡೆಯುತ್ತಿದ್ದರಿಂದ ರಕ್ತಸ್ರಾವ ಕೂಡ ಆಗಿತ್ತು ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ : ಅದ್ಧೂರಿ ಸಮಾರಂಭದಲ್ಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಹೀರೋ ಆಗಿ ಲಾಂಚ್

    ತಮ್ಮ ನಾಲ್ಕು ಅಂತಸ್ತಿನ ಮನೆಯ ಪುರಾಣವನ್ನೂ ಬಿಚ್ಚಿಟ್ಟ ಪೂನಂ. ಖಾಸಗಿಯಾಗಿ ಒಂದು ಕೋಣೆಯಲ್ಲಿ ಇರಲು ಸ್ಯಾಮ್ ಬಿಡುತ್ತಿರಲಿಲ್ಲ, ಮೊಬೈಲ್ ನಲ್ಲಿ ಮಾತನಾಡಿದರೆ ಅವನಿಗೆ ಕೋಪ, ಸದಾ ತನ್ನೊಂದಿಗೆ ಇರಬೇಕು ಅಂತ ಆತ ಬಯಸುತ್ತಿದ್ದ ಎಂದು ಹೇಳುತ್ತಾ ಹೆಣ್ಣಿನ ಮೇಲೆ ನಡೆವ ದೌರ್ಜನ್ಯದ ಕುರಿತೂ ಅವರು ಶೋನಲ್ಲಿ ಮಾತನಾಡಿದರು. ಇದನ್ನೂ ಓದಿ : ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ಪೂನಂ ಮಾತನಾಡಿದ ಅಷ್ಟೂ ಮಾತುಗಳನ್ನು ವಾಹಿನಿಯು ಪ್ರಸಾರ ಮಾಡಿದ್ದು, ಪೂನಂ ಬಗ್ಗೆ ಪ್ರೇಕ್ಷಕರಿಗೆ ಸಹಾನುಭೂತಿ ಶುರುವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಕಂಗನಾ ರಣಾವತ್ ನಡೆಸಿಕೊಡುವ ಈ ಶೋನಲ್ಲಿ ಬಹುತೇಕ ವಿವಾದಿತ ತಾರೆಯರೇ ಸ್ಪರ್ಧಿಗಳಾಗಿದ್ದಾರೆ ಎನ್ನುವುದು ಈ ಶೋನ ಮತ್ತೊಂದು ವಿಶೇಷ.

  • ಹಾಟ್ ಬೆಡಗಿ ಪೂನಂ ಪಾಂಡೆ ಪತಿ ಅರೆಸ್ಟ್

    ಹಾಟ್ ಬೆಡಗಿ ಪೂನಂ ಪಾಂಡೆ ಪತಿ ಅರೆಸ್ಟ್

    ಮುಂಬೈ: ಬಾಲಿವುಡ್ ನಟಿ ಪೂನಂ ಪಾಂಡೆ ಮೇಲೆ ಹಲ್ಲೆ ಮಾಡಿದ ಆರೋಪದ ಅಡಿ ಸ್ಯಾಮ್ ಬಾಂಬೆನನ್ನು ಪೊಲೀಸರು ಬಂಧಿಸಿದ್ದಾರೆ.

    ಪೂನಂ ಪಾಂಡೆ ಅವರ ತಲೆ, ಕಣ್ಣು ಮತ್ತು ಮುಖದ ಮೇಲೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಯಾಮ್ ಬಾಂಬೆ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಟ್ ಬೆಡಗಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು

    ಈ ಹಿಂದೆ ಪತಿ, ನಿರ್ಮಾಪಕ ಸ್ಯಾಮ್ ಬಾಂಬೆ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿ ನಟಿ ಜೈಲಿಗಟ್ಟಿದ್ದರು. ಇದೀಗ ಜೈಲಿನಿಂದ ಹೊರಬರುತ್ತಿದ್ದಂತೆಯೇ ಪೂನಂ ಮೇಲೆ ಮತ್ತೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

    2020ರ ಸೆಪ್ಟೆಂಬರ್ 11ರಂದು ಪೂನಂ ಪಾಂಡೆ ತನ್ನ ಗೆಳೆಯ ಸ್ಯಾಮ್ ಬಾಂಬೆ ಅವರನ್ನು ವಿವಾಹವಾಗಿದ್ದರು. ಮದುವೆಯಾಗಿ ಎರಡು ವಾರದಲ್ಲೇ ನನಗೆ ಕಿರುಕುಳ ನೀಡುತ್ತಿದ್ದಾನೆ, ಹಲ್ಲೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ನಟಿ ಪತಿ ವಿರುದ್ಧ ಗೋವಾದಲ್ಲಿ ದೂರು ನೀಡಿದ್ದರು. ಇದನ್ನೂ ಓದಿ: ಕಮಲಾ ನೆಹರು ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ನಾಲ್ವರು ಮಕ್ಕಳ ದಾರುಣ ಸಾವು

    ನಟಿ ಗೋವಾದ ಕೆನಕೋನಾದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಸ್ಯಾಮ್ ಬಾಂಬೆ, ಪಾಂಡೆ ಮೇಲೆ ಹಲ್ಲೆ ಮಾಡಿ, ದೈಹಿಕ ಕಿರುಕುಳ ನೀಡಿ ಬೆದರಿಕೆ ಹಾಕಿರುವುದಾಗಿ ಪೂನಂ ಕೆನಕೋನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಪೂನಂ ಪತಿ ಸ್ಯಾಮ್ ಬಾಂಬೆಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಹೀಗೆ ಬಂಧಿತನಾಗಿದ್ದ ಸ್ಯಾಮ್ ಹೈಕೋರ್ಟಿನಿಂದ ಜಾಮೀನು ಪಡೆದು ಹೊರಬಂದಿದ್ದರು. ಇದೀಗ ಮತ್ತೆ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

    ಈ ಬಾರಿ ಆತ ಕೆಟ್ಟದಾಗಿ ಹೊಡೆದಿದ್ದಾನೆ. ಪ್ರತಿ ಬಾರಿ ಅವನು ನನ್ನನ್ನು ಹೊಡೆದು ನಂತರ ಕ್ಷಮಿಸಿ ಎಂದು ಅಳಲು ಪ್ರಾರಂಭಿಸುತ್ತಾನೆ. ಈ ಬಾರಿಯೂ ಸ್ಯಾಮ್ ಅದೇ ರೀತಿ ಮಾಡಿದ್ದಾನೆ. ಇನ್ಮುಂದೆ ಹೀಗಾಗುವುದಿಲ್ಲ ಎಂದು ಭರವಸೆ ನೀಡಿದ. ಆದರೆ ಮತ್ತೆ ಅವರು ಹೀಗೆ ಮಾಡುತ್ತಾನೆ. ಅವನಿಂದಾಗಿ ನನಗೆ ಮೆದುಳಿನ ರಕ್ತಸ್ರಾವವಾಗಿದೆ ಎಂದು ಪೂನಂ ಹೇಳಿದ್ದಾರೆ.

  • ಹಾಟ್ ಬೆಡಗಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು

    ಹಾಟ್ ಬೆಡಗಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು

    ಮುಂಬೈ: ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹೌದು. ಈ ಹಿಂದೆ ಪತಿ, ನಿರ್ಮಾಪಕ ಸ್ಯಾಮ್ ಬಾಂಬೆ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿ ನಟಿ ಜೈಲಿಗಟ್ಟಿದ್ದರು. ಇದೀಗ ಜೈಲಿನಿಂದ ಹೊರಬರುತ್ತಿದ್ದಂತೆಯೇ ಪೂನಂ ಮೇಲೆ ಸ್ಯಾಮ್ ಮತ್ತೆ ಹಲ್ಲೆ ಮಾಡಿದ್ದಾರೆ.

    ಪತಿ ಸ್ಯಾಮ್ ಜೈಲಿನಿಂದ ಹೊರಬರುತ್ತಿದ್ದಂತೆಯೇ ನನ್ನ ಮೇಲೆ ಮತ್ತೆ ಹಲ್ಲೆ ಮಾಡಿದ್ದಾಋಎ ಎಂದು ಪೂನಂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಯಾಮ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇತ್ತ ಹಲ್ಲೆಯಿಂದ ಮುಖ, ಕಣ್ಣು ಹಾಗೂ ತಲೆಗೆ ಗಾಯಗೊಂಡಿರುವ ಪೂನಂ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    2020ರ ಸೆಪ್ಟೆಂಬರ್ 11ರಂದು ಪೂನಂ ಪಾಂಡೆ ತನ್ನ ಗೆಳೆಯ ಸ್ಯಾಮ್ ಬಾಂಬೆ ಅವರನ್ನು ವಿವಾಹವಾಗಿದ್ದರು. ಮದುವೆಯಾಗಿ ಎರಡು ವಾರದಲ್ಲೇ ನನಗೆ ಕಿರುಕುಳ ನೀಡುತ್ತಿದ್ದಾನೆ, ಹಲ್ಲೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ನಟಿ ಪತಿ ವಿರುದ್ಧ ಗೋವಾದಲ್ಲಿ ದೂರು ನೀಡಿದ್ದರು. ಇದನ್ನೂ ಓದಿ: ಕಮಲಾ ನೆಹರು ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ನಾಲ್ವರು ಮಕ್ಕಳ ದಾರುಣ ಸಾವು

    ನಟಿ ಗೋವಾದ ಕೆನಕೋನಾದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ಸಂದರ್ಬದಲ್ಲಿ ಅಲ್ಲಿಗೆ ಬಂದಿದ್ದ ಸ್ಯಾಮ್ ಬಾಂಬೆ, ಪಾಂಡೆ ಮೇಲೆ ಹಲ್ಲೆ ಮಾಡಿ, ದೈಹಿಕ ಕಿರುಕುಳ ನೀಡಿ ಬೆದರಿಕೆ ಹಾಕಿರುವುದಾಗಿ ಪೂನಂ ಕೆನಕೋನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಪೂನಂ ಪತಿ ಸ್ಯಾಮ್ ಬಾಂಬೆಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಹೀಗೆ ಬಂಧಿತನಾಗಿದ್ದ ಸ್ಯಾಮ್ ಹೈಕೋರ್ಟಿನಿಂದ ಜಾಮೀನು ಪಡೆದು ಹೊರಬಂದಿದ್ದರು. ಇದೀಗ ಮತ್ತೆ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

  • ಇಬ್ಬರೂ ಹುಚ್ಚರಂತೆ ಪ್ರೀತಿಸ್ತಿದ್ದೇವೆ – ಮತ್ತೆ ಒಂದಾದ ಸ್ಯಾಮ್, ಪೂನಂ

    ಇಬ್ಬರೂ ಹುಚ್ಚರಂತೆ ಪ್ರೀತಿಸ್ತಿದ್ದೇವೆ – ಮತ್ತೆ ಒಂದಾದ ಸ್ಯಾಮ್, ಪೂನಂ

    – ಪತಿ ಅಳ್ತಿದ್ದಾನೆಂದು ಕೇಸ್ ವಾಪಸ್
    – ಬಿಗ್‍ಬಾಸ್‍ಗಾಗಿ ನಾಟಕವಾಡಿದ್ರಾ ಹಾಟ್‍ಬ್ಯೂಟಿ?

    ಮುಂಬೈ: ಮದುವೆಯಾದ 13 ದಿನಕ್ಕೆ ಪತಿ ಸ್ಯಾಮ್ ಬಾಂಬೆಯನ್ನು ಜೈಲಿಗಟ್ಟಿದ್ದ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ, ಇದೀಗ ಇಬ್ಬರೂ ಮತ್ತೆ ಒಂದಾಗಿದ್ದಾರೆ.

    ಹೌದು. ನಾವಿಬ್ಬರೂ ಪರಸ್ಪರ ಹುಚ್ಚರಂತೆ ಪ್ರೀತಿಸುತ್ತಿದ್ದೇವೆ. ಹೀಗಾಗಿ ಪತಿ ಮೇಲಿನ ಕೇಸ್ ವಾಪಸ್ ತೆಗೆದುಕೊಂಡಿದ್ದು, ಆತನ ಜೊತೆ ಬಾಳುವುದಾಗಿ ಪೂನಂ ತಿಳಿಸಿದ್ದಾರೆ. ಆದರೆ ಇದೊಂದು ನಾಟಕವಾಗಿದ್ದು, ಮುಂಬರುವ ಬಿಗ್ ಬಾಸ್ 14ರಲ್ಲಿ ಭಾಗವಹಿಸುವುದಕ್ಕೆ ಪೂನಂ ಪಾಂಡೆ ಈ ರೀತಿಯಾಗಿ ಪ್ರಚಾರ ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

    ಆದರೆ ಈ ಬಗ್ಗೆ ಮಾಧ್ಯಮವೊಂದು ನಡೆಸಿದ ಸಂದರ್ಶನದ ವೇಳೆ, ವಿವಾದಾತ್ಮಕ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಹೋಗುತ್ತಿಲ್ಲ. ನಾನು ಬಿಗ್ 14ರಲ್ಲಿ ಭಾಗವಹಿಸುವುದಿಲ್ಲ. ಆ ಶೋಗೆ ಪಾಲ್ಗೊಳ್ಳುವಲ್ಲಿ ನಾನು ತುಂಬಾ ಚಿಕ್ಕವಳು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 3 ವರ್ಷ ಡೇಟಿಂಗ್, ಮದ್ವೆಯಾಗಿ 2 ವಾರ – ವಿಚ್ಛೇದನಕ್ಕೆ ಮುಂದಾದ ಪೂನಂ ಪಾಂಡೆ

    ಇದೇ ವೇಳೆ ಪತಿ ಬಗ್ಗೆ ಮಾತನಾಡಿದ ಹಾಟ್ ಬ್ಯೂಟಿ, ಸ್ಯಾಮ್ ಅಳುತ್ತಿದ್ದಾನೆ. ಆತನ ವಿರುದ್ಧದ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ತನ್ನ ಬಳಿ ಬೇಡಿಕೊಳ್ಳುತ್ತಿದ್ದಾನೆ. ಮುಂದೆ ಎಂದಿಗೂ ಇಂತಹ ತಪ್ಪನ್ನು ಪುನರಾವರ್ತಿಸಲ್ಲ. ಅಲ್ಲದೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾನೆ. ಈ ಮೂಲಕ ಆತ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಹೀಗಾಗಿ ಮತ್ತೆ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದೇವೆ. ಅಲ್ಲದೆ ನಾವಿಬ್ಬರೂ ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುತ್ತಿದ್ದೇವೆ ಎಂದು ಹೇಳಿದರು.

    ಸದ್ಯ ದಂಪತಿ ಗೋವಾದಲ್ಲಿದ್ದು, ಪತಿ ಮೇಲಿನ ಕೇಸನ್ನು ಪೂನಂ ವಾಪಸ್ ತೆಗೆದುಕೊಂಡಿದ್ದಾರೆ. ಹೀಗಾಗಿ ನವವಿವಾಹಿತರು ಶೀಘ್ರವೇ ಮುಂಬೈಗೆ ತೆರಳಲಿದ್ದಾರೆ. ಇತ್ತ ಇಬ್ಬರ ನಡುವೆ ವೈಮನಸ್ಸು ತಣ್ಣಗಾದ ಬಳಿಕ ಸ್ಯಾಮ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮದುವೆ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಿಮಗೆ ಬೇಕಾಗಿದ್ದ ಕಪ್ ಇದೇ ಅಲ್ವಾ – ಪಾಕ್ ವಿರುದ್ಧ ಪೂನಂ ಗರಂ

    https://www.instagram.com/p/CFmva8tJFb8/?utm_source=ig_embed

    ಸ್ಯಾಮ್ ಬಾಂಬೆ ಹಾಗೂ ಪೂನಂ ಪಾಂಡೆ ಕಳೆದ ಸೆಪ್ಟೆಂಬರ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದಕ್ಕೂ ಮೊದಲು ಇವರಿಬ್ಬರು ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಪತಿಯ ಕಿರುಕುಳದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ್ದ ಪೂನಂ, ನಮ್ಮಿಬ್ಬರ ಸಂಬಂಧ ನಿಂದನೀಯವಾಗಿದೆ. ಅಲ್ಲದೆ ಆತ ತನಗೆ ಪ್ರಾಣಿಗಳಿಗೆ ಹೊಡೆದಂತೆ ಹೊಡೆಯುತ್ತಿದ್ದು, ಆತನ ಜೊತೆ ಸಂಸಾರ ಮಾಡಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಯೊಂದಿಗೆ ಸಂಬಂಧ ಮುಂದುವರಿಸುವುದು ಒಳ್ಳೆಯದಲ್ಲ ಎಂದು ಹೇಳುವ ಮೂಲಕ ಪತಿಗೆ ವಿಚ್ಛೇದನ ನೀಡಲು ಮುಂದಾಗಿದ್ದರು.

  • 3 ವರ್ಷ ಡೇಟಿಂಗ್, ಮದ್ವೆಯಾಗಿ 2 ವಾರ – ವಿಚ್ಛೇದನಕ್ಕೆ ಮುಂದಾದ ಪೂನಂ ಪಾಂಡೆ

    3 ವರ್ಷ ಡೇಟಿಂಗ್, ಮದ್ವೆಯಾಗಿ 2 ವಾರ – ವಿಚ್ಛೇದನಕ್ಕೆ ಮುಂದಾದ ಪೂನಂ ಪಾಂಡೆ

    ನವದೆಹಲಿ: ಮದುವೆಯಾದ ಎರಡು ವಾರದಲ್ಲೇ ಪತಿ ವಿರುದ್ಧ ದೂರು ನೀಡಿದ್ದ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಇದೀಗ ವಿಚ್ಛೇದನ ನೀಡಲು ಮುಂದಾಗಿದ್ದಾರೆ.

    ಪತಿ ಸ್ಯಾಮ್ ಬಾಂಬೆ ತನಗೆ ಕಿರುಕುಳ ನೀಡಿ ಬೆದರಿಕೆ ಹಾಕುತ್ತಾನೆ ಎಂದು ಹೇಳಿ ನಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹೀಗಾಗಿ ಗೋವಾ ಪೊಲೀಸರು ಸ್ಯಾಮ್ ನನ್ನು ಬಂಧಿಸಿದ್ದರು.

    ಸ್ಯಾಮ್ ಹಾಗೂ ಪೂನಂ ಸೆಪ್ಟೆಂಬರ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದಕ್ಕೂ ಮೊದಲು ಇವರಿಬ್ಬರು ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಪತಿಯ ಕಿರುಕುಳದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಪೂನಂ, ನಮ್ಮಿಬ್ಬರ ಸಂಬಂಧ ನಿಂದನೀಯವಾಗಿದೆ. ಅಲ್ಲದೆ ಆತ ತನಗೆ ಪ್ರಾಣಿಗಳಿಗೆ ಹೊಡೆದಂತೆ ಹೊಡೆಯುತ್ತಿದ್ದು, ಆತನ ಜೊತೆ ಸಂಸಾರ ಮಾಡಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಯೊಂದಿಗೆ ಸಂಬಂಧ ಮುಂದುವರಿಸುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

    ನಮ್ಮ ಮಧ್ಯೆ ಆಗುತ್ತಿರುವ ಜಗಳ ತಾರಕ್ಕೇರಿತ್ತು. ಈ ವೇಳೆ ಆತ ನನಗೆ ಹೊಡೆಯಲು ಆರಂಭಿಸಿದನು. ನನ್ನನ್ನು ಉಸಿರುಗಟ್ಟುವಂತೆ ಮಾಡಿದ್ದು, ನಾನು ಸಾಯುತ್ತೇನೆ ಅಂತ ಭಾವಿಸಿದ್ದೆ. ನನ್ನ ಮುಖಕ್ಕೆ ಹೊಡೆದು, ಕೂದಲು ಹಿಡಿದು ಎಳೆದಾಡಿದನು. ಅಲ್ಲದೆ ತಲೆ ಹಿಡಿದು ಹಾಸಿಗೆಯ ಮೂಲೆಗೆ ಹೊಡೆದನು ಎಂದು ಪೂನಂ ದೂರಿದ್ದಾರೆ.

    ಇಷ್ಟು ಮಾತ್ರವಲ್ಲದೇ ಆತ ನನ್ನ ದೇಹದ ಮೇಲೆ ಮಂಡಿಯೂರಿ, ನನ್ನ ಮೇಲೆ ಹಲ್ಲೆ ಮಾಡಿದನು. ಈ ವೇಳೆ ನಾನು ಆತನ ಕೈಯಿಂದ ತಪ್ಪಿಸಿಕೊಂಡು ಕೋಣೆಯಿಂದ ಹೊರಬಂದು ಪಾರಾದೆ ಎಂದಿದ್ದಾರೆ. ಡೇಟ್ ನಲ್ಲಿದ್ದ ವೇಳೆಯೂ ಕಿರುಕುಳ ನೀಡುತ್ತಿದ್ದ ಸ್ಯಾಮ್, ಮದುವೆಯಾದ ಬಳಿಕ ಆತನ ಜೊತೆಗಿನ ಸಂಬಂಧ ಸುಧಾರಿಸಬಹುದು ಎಂದು ನಂಬಿದ್ದೆ. ಹೀಗಾಗಿ ನಾನು ಆತನನ್ನು ಮದುವೆಯಾದೆ. ಆದರೆ ಆತ ಬದಲಾಗಿಲ್ಲ. ಪ್ರೀತಿ ಕುರುಡು ಎಂಬುದಕ್ಕೆ ನಾನು ಅತ್ಯುತ್ತಮ ಉದಾಹರಣೆ ಎಂದು ಪೂನಂ ಅಳಲು ತೋಡಿಕೊಂಡಿದ್ದಾರೆ.

    ಎರಡು ವಾರಗಳ ಹಿಂದೆ ಪೂನಂ ಪಾಂಡೆ ಮುಂಬೈನಲ್ಲಿ ಸ್ಯಾಮ್ ಬಾಂಬೆಯನ್ನು ವರಿಸಿದ್ದರು. ಆ ಬಳಿಕ ಗೋವಾದ ಕೆನಕೋನಾದಲ್ಲಿ ಪೂನಂ ಪಾಂಡೆ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ವೇಳೆ ಅಲ್ಲಿಗೆ ಬಂದ ಸ್ಯಾಮ್ ಬಾಂಬೆ, ಪಾಂಡೆ ಮೇಲೆ ಹಲ್ಲೆ ಮಾಡಿ, ದೈಹಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾನೆ ಎಂದು ಪೂನಂ ಕೆನಕೋನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೂನಂ ಪತಿ ಸ್ಯಾಮ್ ಬಾಂಬೆಯನ್ನು ಸೋಮವಾರ ಪೊಲೀಸರು ಅರೆಸ್ಟ್ ಮಾಡಿದ್ದರು.

  • ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೂನಂ ಪಾಂಡೆ

    ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೂನಂ ಪಾಂಡೆ

    ಮುಂಬೈ: ಬಾಲಿವುಡ್‍ನ ಹಾಟ್ ಬೆಡಗಿ ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿ. ಇದೀಗ ಪೂನಂ ಪಾಂಡೆ ತಮ್ಮ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಗೆಳೆಯನ ಜೊತೆ ಎಂಗೇಜ್ ಆದ ಹಾಟ್ ಬೆಡಗಿ ಪೂನಂ ಪಾಂಡೆ

    ನಟಿ ಪೂನಂ ಪಾಂಡೆ ತಮ್ಮ ಗೆಳೆಯ ಸ್ಯಾಮ್ ಬಾಂಬೆ ಅವರನ್ನು ವಿವಾಹವಾಗಿದ್ದಾರೆ. ಕೆಲವು ದಿನಗಳ ಹಿಂದೆ ಇವರಿಬ್ಬರು ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಗುರುವಾರ (ಸೆಪ್ಟೆಂಬರ್ 10) ಮುಂಬೈನಲ್ಲಿ ಸಾಂಪ್ರದಾಯಿಕವಾಗಿ ಪೂನಂ ಪಾಂಡೆ ತಮ್ಮ ಗೆಳೆಯ ಸ್ಯಾಮ್ ಬಾಂಬೆ ಜೊತೆ ಮದುವೆಯಾಗಿದ್ದಾರೆ.

    https://www.instagram.com/p/CE9b8SBpafo/?utm_source=ig_embed

    ತಮ್ಮ ಮದುವೆ ಫೋಟೋವನ್ನು ಪೂನಂ ಪಾಂಡೆ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮದುವೆಯಲ್ಲಿ ಪೂನಂ ಮತ್ತು ಸ್ಯಾಮ್ ಬಾಂಬೆ ಇಬ್ಬರೂ ಒಂದೇ ಬಣ್ಣದ ಉಡುಪನ್ನು ಧರಿಸಿ ಮಿಂಚಿದ್ದಾರೆ. ಮದುವೆಯ ಫೋಟೋಗೆ “ನಿಮ್ಮೊಂದಿಗೆ ಮುಂದಿನ ಏಳು ಜನ್ಮಗಳನ್ನು ಕಳೆಯುವ ನಿರೀಕ್ಷೆ ಇದೆ” ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅದಕ್ಕೆ ಸ್ಯಾಮ್ ಕೂಡ ಕಮೆಂಟ್ ಮಾಡುವ ಮೂಲಕ ಉತ್ತರಿಸಿದ್ದಾರೆ.

    https://www.instagram.com/p/CE9aM0hpgv_/?utm_source=ig_embed

    ಇಬ್ಬರೂ ಕೂಡ ತಮ್ಮ ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೂನಂ ಪಾಂಡೆ ಮದುವೆಯ ಫೋಟೋಗಳನ್ನು ಅಪ್ಲೋಡ್ ಮಾಡಿದ ತಕ್ಷಣ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ನವಜೋಡಿಗೆ ಶುಭ ಕೋರಿದ್ದಾರೆ.

    ಎರಡು ತಿಂಗಳ ಹಿಂದೆ ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದ ಸ್ಯಾಮ್ ಬಾಂಬೆ ಕೊನೆಗೂ ನಾವು ನಿಶ್ಚಿತಾರ್ಥ ಮಾಡಿಕೊಂಡೆವು ಎಂದು ಬರೆದುಕೊಂಡಿದ್ದರು. ಸ್ಯಾಮ್ ಮತ್ತು ಪೂನಂ ಕಳೆದ ಕೆಲದಿನಗಳಿಂದ ಪ್ರೀತಿಸುತ್ತಿದ್ದರು.

    https://www.instagram.com/p/CE-9I8vppaL/?utm_source=ig_embed

    ಸ್ಯಾಮ್ ಹಂಚಿಕೊಂಡಿದ್ದ ಫೋಟೋದಲ್ಲಿ ಇಬ್ಬರು ಬೆರಳುಗಳಲ್ಲಿ ಉಂಗುರಗಳನ್ನು ತೊಟ್ಟಿದ್ದರು. ಆದರೆ ಈ ಬಗ್ಗೆ ಪೂನಂ ಪಾಂಡೆ ಯಾವುದೇ ಪೋಸ್ಟ್ ಹಾಕಿಕೊಂಡಿರಲಿಲ್ಲ. ಆದರೆ ಪ್ರಿಯಕರ ಸ್ಯಾಮ್ ಹಂಚಿಕೊಂಡಿರುವ ಫೋಟೋಗೆ ಕಮೆಂಟ್ ಮಾಡಿರುವ ಪೂನಂ ಬೆಸ್ಟ್ ಫೀಲಿಂಗ್ಸ್ ಎಂದು ಬರೆದು ರೆಡ್ ಹಾರ್ಟ್ ಇಮೋಜಿಯನ್ನು ಪೋಸ್ಟ್ ಮಾಡಿದ್ದರು.

    https://www.instagram.com/p/CE_BjUkJ_cd/?utm_source=ig_embed

  • ಗೆಳೆಯನ ಜೊತೆ ಎಂಗೇಜ್ ಆದ ಹಾಟ್ ಬೆಡಗಿ ಪೂನಂ ಪಾಂಡೆ

    ಗೆಳೆಯನ ಜೊತೆ ಎಂಗೇಜ್ ಆದ ಹಾಟ್ ಬೆಡಗಿ ಪೂನಂ ಪಾಂಡೆ

    ಮುಂಬೈ: ನಟಿ ಮತ್ತು ರೂಪದರ್ಶಿ ಪೂನಂ ಪಾಂಡೆ ತನ್ನ ಬಾಯ್ ಫ್ರೆಂಡ್ ಸ್ಯಾಮ್ ಬಾಂಬೆ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ತನ್ನ ನಿಶ್ಚಿತಾರ್ಥದ ವಿಚಾರವಾಗಿ ಪೂನಂ ಪಾಂಡೆ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ತಮ್ಮ ನಿಶ್ಚಿತಾರ್ಥದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿರುವ ಸ್ಯಾಮ್ ಬಾಂಬೆ ಕೊನೆಗೂ ನಾವು ನಿಶ್ಚಿತಾರ್ಥ ಮಾಡಿಕೊಂಡೆವು ಎಂದು ಬರೆದುಕೊಂಡಿದ್ದಾರೆ. ಸ್ಯಾಮ್ ಮತ್ತು ಪೂನಂ ಕಳೆದ ಕೆಲದಿನಗಳಿಂದ ಪ್ರೀತಿಸುತ್ತಿದ್ದರು.

    https://www.instagram.com/p/CC-b33fj_5F/?utm_source=ig_web_copy_link

    ಸ್ಯಾಮ್ ಹಂಚಿಕೊಂಡಿರುವ ಫೋಟೋದಲ್ಲಿ ಇಬ್ಬರು ಬೆರಳುಗಳಲ್ಲಿ ಉಂಗುರಗಳನ್ನು ತೊಟ್ಟಿದ್ದಾರೆ. ಆದರೆ ಈ ಬಗ್ಗೆ ಪೂನಂ ಪಾಂಡೆ ಇನ್ನೂ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಯಾವುದೇ ಪೋಸ್ಟ್ ಹಾಕಿಕೊಂಡಿಲ್ಲ. ಆದರೆ ಪ್ರಿಯಕರ ಸ್ಯಾಮ್ ಹಂಚಿಕೊಂಡಿರುವ ಫೋಟೋಗೆ ಕಮೆಂಟ್ ಮಾಡಿರುವ ಪೂನಂ ಬೆಸ್ಟ್ ಫೀಲಿಂಗ್ಸ್ ಎಂದು ಬರೆದು ರೆಡ್ ಹಾರ್ಟ್ ಇಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

    ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸದಾ ಸಕ್ರಿಯವಾಗಿರುವ ಪೂನಂ, ಕಳೆದ ಕೆಲದಿನಗಳಿಂದ ಸ್ಯಾಮ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಯಾವುದೇ ಫೋಟೋಗಳನ್ನು ಹಂಚಿಕೊಂಡಿಲ್ಲ. ಆದರೆ ಕೆಲ ಪೂನಂ ಜೊತೆಗಿರುವ ಫೋಟೋಗಳನ್ನು ಸ್ಯಾಮ್ ಬಾಂಬೆ ಹಂಚಿಕೊಂಡಿದ್ದು, ನನ್ನ ಪ್ರೀತಿ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಜೋಡಿ ನಿಶ್ಚಿತಾರ್ಥದ ಫೋಟೋ ವೈರಲ್ ಆಗಿದ್ದು, ಎಲ್ಲರೂ ಕಮೆಂಟ್ ಮಾಡುವ ಮೂಲಕ ವಿಶ್ ಮಾಡುತ್ತಿದ್ದಾರೆ.

    ಈ ಹಿಂದೆ ಪೂನಂ ಮತ್ತು ಆಕೆ ಗೆಳಯ ಸ್ಯಾಮ್ ಬಾಂಬೆಯ ಮೇಲೆ ಮುಂಬೈ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಕೊರೊನಾ ಲಾಕ್‍ಡೌನ್ ಸಮಯದಲ್ಲೂ ಪೂನಂ ಮತ್ತು ಆಕೆಯ ಗೆಳಯ ತಮ್ಮ ಐಷಾರಮಿ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿದ್ದರು. ಯಾವುದೇ ಸೂಕ್ತ ಕಾರಣವಿಲ್ಲದೇ ಸುಖಾ ಸುಮ್ಮನೆ ತಮ್ಮ ಕಾರಿನಲ್ಲಿ ಸುತ್ತುತ್ತಿದ್ದ ಪೂನಂ ಪಾಂಡೆಯ ಮೇಲೆ ಮುಂಬೈ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು.