Tag: ಸ್ಯಾನ್ ಫ್ರಾನ್ಸಿಸ್ಕೋ

  • ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಕಳಚಿಬಿತ್ತು ವಿಮಾನದ ಟೈರ್- 2 ಕಾರುಗಳು ಜಖಂ

    ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಕಳಚಿಬಿತ್ತು ವಿಮಾನದ ಟೈರ್- 2 ಕಾರುಗಳು ಜಖಂ

    ಸ್ಯಾನ್ ಫ್ರಾನ್ಸಿಸ್ಕೋ: ಜಪಾನ್‌ಗೆ (japan) ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್ ಜೆಟ್‌ಲೈನರ್ ಸ್ಯಾನ್ ಫ್ರಾನ್ಸಿಸ್ಕೋದಿಂದ (San Francisco) ಟೇಕಾಫ್ ಆಗಿತ್ತು. ಹೀಗೆ ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಟೈರ್‌ ಕಳಚಿಬಿದ್ದಿದೆ. ಪರಿಣಾಮ 2 ಕಾರುಗಳು ಜಖಂಗೊಂಡಿವೆ.

    ವಿಮಾನ ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಟೈರ್‌ ಕಳಚಿ ಬೀಳುತ್ತಿರುವ ವೀಡಿಯೋ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಟೇಕ್‌ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನವು ತನ್ನ 6 ಟೈಯರ್‌ಗಳಲ್ಲಿ ಒಂದು ಕಳಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಮಾನವನ್ನು ಲಾಸ್ ಏಂಜಲೀಸ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.

    ಈ ಸಂಬಂಧ ವಿಮಾನ ನಿಲ್ದಾಣದ ವಕ್ತಾರ ಡೌಗ್ ಯಾಕೆಲ್ ಅವರು, ಸ್ಯಾನ್ ಫ್ರಾನ್ಸಿಸ್ಕೊ ​​​​ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರುಗಳ ಮೇಲೆ ಟೈರ್‌ ಬಿದ್ದಿದೆ. ಪರಿಣಾಮ ಕಾರುಗಳು ಜಖಂಗೊಂಡಿವೆ. ಆದರೆ ಯಾರಿಗೂ ಹಾನಿಯಾಗಿಲ್ಲ. ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೆಕ್ಸ್‌ಗೆ ನಿರಾಕರಿಸಿದ್ದ ವ್ಯಕ್ತಿ ಸ್ನೇಹಿತರಿಂದಲೇ ಹತ್ಯೆ – 9 ದಿನಗಳ ನಂತ್ರ ನೀರಿಲ್ಲದ ಕೊಳದಲ್ಲಿ ಶವ ಪತ್ತೆ

    ವಿಮಾನದಲ್ಲಿ 235 ಪ್ರಯಾಣಿಕರು ಮತ್ತು 14 ಸಿಬ್ಬಂದಿ ಇದ್ದರು. ಘಟನೆ ನಡೆದ ಕೂಡಲೇ ಅವರನ್ನು ಪ್ರಯಾಣಿಕರನ್ನು ಮತ್ತೊಂದು ವಿಮಾನಕ್ಕೆ ಸ್ಥಳಾಂತರಿಸಲಾಯಿತು ಎಂದು ಯುನೈಟೆಡ್ ತಿಳಿಸಿದೆ. ಬೋಯಿಂಗ್ 777ಗಳ ಎರಡು ಮುಖ್ಯ ಲ್ಯಾಂಡಿಂಗ್ ಗೇರ್‌ಗಳಲ್ಲಿ ತಲಾ 6 ಟೈರ್‌ಗಳನ್ನು ಹೊಂದಿವೆ. ಅವುಗಳಲ್ಲಿ ಒಂದು ಕಳಚಿಕೊಂಡಿದೆ ಎಂಬುದಾಗಿ ವರದಿಯಾಗಿದೆ.

    ವಿಮಾನಗಳು ಟೈರ್‌ಗಳನ್ನು ಕಳೆದುಕೊಳ್ಳುವುದು ಇದು ಅಪರೂಪದ ಘಟನೆಯಾಗಿದೆ ಎಂದು ವಾಯುಯಾನ ತಜ್ಞರು ಹೇಳಿದ್ದಾರೆ.

  • ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬೆಂಕಿ – 5 ತಿಂಗಳಲ್ಲಿ ಖಲಿಸ್ತಾನಿ ಬೆಂಬಲಿಗರ 2ನೇ ದಾಳಿ

    ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬೆಂಕಿ – 5 ತಿಂಗಳಲ್ಲಿ ಖಲಿಸ್ತಾನಿ ಬೆಂಬಲಿಗರ 2ನೇ ದಾಳಿ

    ವಾಷಿಂಗ್ಟನ್: ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ (San Francisco) ಭಾರತೀಯ ರಾಯಭಾರ ಕಚೇರಿಗೆ (Indian Consulate) ಖಲಿಸ್ತಾನಿ ಬೆಂಬಲಿಗರು (Khalistani Supporters) ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಭಾನುವಾರ ಬೆಳಗ್ಗಿನ ಜಾವ 1:30-2:30 ರ ನಡುವೆ ಬೆಂಕಿ ಹಚ್ಚಲಾಗಿದೆ. ಕೇವಲ 5 ತಿಂಗಳ ಅವಧಿಯಲ್ಲಿ ಭಾರತೀಯ ರಾಯಭಾರ ಕಚೇರಿ ಮೇಲೆ ಖಲಿಸ್ತಾನಿ ಬೆಂಬಲಿಗರು ನಡೆಸಿರುವ 2ನೇ ದಾಳಿಯಾಗಿದೆ.

    ಸ್ಥಳೀಯ ಮಾಧ್ಯಮಗಳು ಹಂಚಿಕೊಂಡಿರುವ ವೀಡಿಯೋದಲ್ಲಿ ರಾಯಭಾರ ಕಚೇರಿಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ. ಈ ವೀಡಿಯೋವನ್ನು ಖಲಿಸ್ತಾನಿ ಬೆಂಬಲಿಗರು ಬಿಡುಗಡೆ ಮಾಡಿರುವುದಾಗಿ ತಿಳಿಸಲಾಗಿದೆ. ಸದ್ಯ ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದೆ. ಇದನ್ನೂ ಓದಿ: ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ ನಿಷೇಧಿಸಿ – ತಾಲಿಬಾನ್‌ ಸರ್ಕಾರ

    ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್, ವಿಧ್ವಂಸಕತೆ ಹಾಗೂ ಬೆಂಕಿ ಹಚ್ಚುವ ಕೃತ್ಯವನ್ನು ಅಮೆರಿಕ ಬಲವಾಗಿ ಖಂಡಿಸುತ್ತದೆ. ಅಮೆರಿಕದಲ್ಲಿ ರಾಜತಾಂತ್ರಿಕ ಸೌಲಭ್ಯ ಹಾಗೂ ವಿದೇಶೀ ರಾಜತಾಂತ್ರಿಕರ ವಿರುದ್ಧ ಇಂತಹ ವಿಧ್ವಂಸಕತೆ ಹಾಗೂ ಹಿಂಸಾಚಾರ ಎಸಗುವುದು ಕ್ರಿಮಿನಲ್ ಅಪರಾಧ ಎಂದು ಹೇಳಿದ್ದಾರೆ.

    ಈ ಹಿಂದೆ ಮಾರ್ಚ್‌ನಲ್ಲಿ ಪಂಜಾಬ್ ಪೊಲೀಸರು ಭಾರತದಲ್ಲಿ ಅಮೃತ್‌ಪಾಲ್ ಸಿಂಗ್‌ಗಾಗಿ ಹುಡುಕಾಟ ನಡೆಸುತ್ತಿದ್ದಾಗ ಖಲಿಸ್ತಾನಿ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಧ್ವಂಸಗೊಳಿಸಿದ್ದರು. ಇದನ್ನೂ ಓದಿ: ಭಾರೀ ಮಳೆಗೆ ಮಂಗಳೂರಿನ ಪಂಪ್‍ವೆಲ್ ಫ್ಲೈಓವರ್ ಕೆಳಭಾಗ ಜಲಾವೃತ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿಲ್ಲಿಯಿಂದ ಸ್ಯಾನ್‌ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ರಷ್ಯಾದಲ್ಲಿ ತುರ್ತು ಭೂಸ್ಪರ್ಶ

    ದಿಲ್ಲಿಯಿಂದ ಸ್ಯಾನ್‌ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ರಷ್ಯಾದಲ್ಲಿ ತುರ್ತು ಭೂಸ್ಪರ್ಶ

    ಮಾಸ್ಕೋ: ದೆಹಲಿಯಿಂದ (New Delhi) ಸ್ಯಾನ್ ಫ್ರಾನ್ಸಿಸ್ಕೋಗೆ (San Francisco) ಹೊರಟಿದ್ದ ಏರ್ ಇಂಡಿಯಾ (Air India) ವಿಮಾನದ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ರಷ್ಯಾದ (Russia) ಮಗದನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

    ಇಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ 216 ಪ್ರಯಾಣಿಕರು ಮತ್ತು 16 ಸಿಬ್ಬಂದಿಯಿದ್ದ ವಿಮಾನವನ್ನು ರಷ್ಯಾದ ಮಗದನ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು ಎಂದು ಟಾಟಾ ಗ್ರೂಪ್ ಒಡೆತನದ ಖಾಸಗಿ ವಾಹಕ ಹೇಳಿಕೆಯಲ್ಲಿ ತಿಳಿಸಿದೆ. ಏರ್ ಇಂಡಿಯಾ ಪ್ರಯಾಣಿಕರನ್ನು ಸ್ಯಾನ್ ಫ್ರಾನ್ಸಿಸ್ಕೋಗೆ ಕರೆದೊಯ್ಯಲು ಮತ್ತೊಂದು ವಿಮಾನವು ಮುಂಬೈನಿಂದ ಮಧ್ಯಾಹ್ನ 1 ಗಂಟೆಗೆ ರಷ್ಯಾದ ಮಗದನ್‌ಗೆ ಹೊರಡಲಿದೆ ಎಂದು ಹೇಳಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಜಲಾಶಯ ಸ್ಫೋಟ – ಸಾವಿರಾರು ಮಂದಿ ಸ್ಥಳಾಂತರ

    ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ. ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ರಷ್ಯಾದ ಮಗದನ್ ವಿಮಾನ ನಿಲ್ದಾಣದಿಂದ ತನ್ನ ಪ್ರಯಾಣಿಕರನ್ನು ಕರೆದೊಯ್ಯಲು ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿಯವರೆಗೆ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಮಗದನ್‌ನ ಸ್ಥಳೀಯ ಹೋಟೆಲ್‌ಗಳಲ್ಲಿ ವಸತಿ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದೆ.

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ, ಯುನೈಟೆಡ್ ಸ್ಟೇಟ್ಸ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟೇಟ್ ಡಿಪಾರ್ಟ್‌ಮೆಂಟ್ ಉಪ ವಕ್ತಾರ ವೇದಾಂತ್ ಪಟೇಲ್, ಯುಎಸ್‌ಗೆ ತೆರಳುವ ವಿಮಾನವು ರಷ್ಯಾದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಮಗದನ್‌ನಲ್ಲಿ ಸಿಲುಕಿರುವ ಪ್ರಯಾಣಿಕರ ಕುರಿತು ಅಸೋಸಿಯೇಟೆಡ್‌ ಪ್ರೆಸ್‌ ವರದಿ ಮಾಡಿದೆ. 16 ವರ್ಷದ ಗಿರ್ವಾನ್ ಕಾಹ್ಮಾ ತನ್ನ ಚಿಕ್ಕಪ್ಪ ಮತ್ತು ಸಹೋದರನೊಂದಿಗೆ ಈ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಅವರು ಈಗ ಮಗದನ್‌ನಲ್ಲಿ ತಂಗಿರುವ ಹಾಸ್ಟೆಲ್‌ನಿಂದ ಹೊರಹೋಗುವುದನ್ನು ನಿರ್ಬಂಧಿಸಲಾಗಿದೆ. ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ ನಿರ್ಬಂಧ ವಿಧಿಸಿರುವುದರಿಂದ ಅವರು ವಸ್ತುಗಳನ್ನು ಕೊಳ್ಳಲು ಕ್ರೆಡಿಟ್‌ ಕಾರ್ಡ್‌ ಬಳಸದಂತಾಗಿದೆ ಎಂದು ತಿಳಿಸಿದೆ.

  • ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋವನ್ನು ಹಿಂದಿಕ್ಕಿ ಈಗ ವಿಶ್ವದಲ್ಲೇ ಬೆಂಗ್ಳೂರು ನಂ.1

    ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋವನ್ನು ಹಿಂದಿಕ್ಕಿ ಈಗ ವಿಶ್ವದಲ್ಲೇ ಬೆಂಗ್ಳೂರು ನಂ.1

    ಬೆಂಗಳೂರು:ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಈಗ ಡಿಜಿಟಲ್ ಟ್ರಾನ್ಸ್ಫರ್ಮೆಶನ್ ವಿಚಾರದಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋವನ್ನು ಹಿಂದಿಕ್ಕಿ ವಿಶ್ವದಲ್ಲೇ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.

    ಡಿಜಿಟಲ್ ಪರಿಸರದಲ್ಲಿ ಉದ್ಯಮ ವಿಶ್ವಾಸ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಈಗ ಇರುವ ಪರಿಸರದಲ್ಲಿ ಕೌಶಲ್ಯ ಮತ್ತು ಮೂಲಭೂತ ಸೌಕರ್ಯಗಳ ಆಧಾರದಲ್ಲಿ ‘ದಿ ಎಕಾನಮಿಸ್ಟ್ ಇಂಟೆಲಿಜೆನ್ಸಿ ಯೂನಿಟ್’ ಬಿಡುಗಡೆ ಮಾಡಿದ ವಿಶ್ವದ 45 ಮಹಾ ನಗರಗಳ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ ಸಿಕ್ಕಿದೆ.

    ಎರಡನೇ ಸ್ಥಾನದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಇದ್ದರೆ, ಮೂರು ಮತ್ತು ನಾಲ್ಕನೇಯ ಸ್ಥಾನವನ್ನು ಕ್ರಮವಾಗಿ ಮುಂಬೈ ಮತ್ತು ದೆಹಲಿ ಪಡೆದುಕೊಂಡಿದೆ. ಚೀನಾದ ರಾಜಧಾನಿ ಬೀಜಿಂಗ್ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆದುಕೊಂಡಿದೆ.

    ಉದ್ಯಮಶೀಲತೆ, ಆವಿಷ್ಕಾರ, ಕೌಶಲ್ಯ ಹೊಂದಿರುವ ಜನ, ಹೊಸ ತಂತ್ರಜ್ಞಾನ ಬೆಳವಣಿಗೆ, ಆರ್ಥಿಕ ವಾತಾವರಣ, ಮಾಹಿತಿ ಸಂವಹನ ತಂತ್ರಜ್ಞಾನ(ಐಸಿಟಿ) ಸೌಕರ್ಯಗಳ ವಿಚಾರಗಳನ್ನು ಅಧ್ಯಯನಕ್ಕೆ ಪರಿಗಣಿಸಿ ನಗರಗಳಿಗೆ ಶ್ರೇಯಾಂಕ ಪಟ್ಟಿಯನ್ನು ನೀಡಲಾಗಿದೆ.

    ಜೂನ್ ಮತ್ತು ಜುಲೈ ತಿಂಗಳಿನಲ್ಲಿ 45 ಮಹಾ ನಗರಗಳ 2,620 ಕಾರ್ಯನಿರ್ವಹಣಾಧಿಕಾರಿಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

    ಪಟ್ಟಿಯಲ್ಲಿ ಕೊನೆಯ ಐದು ಸ್ಥಾನವನ್ನು ಅನುಕ್ರಮವಾಗಿ ಬರ್ಲಿನ್(ಜರ್ಮನಿ), ಯೋಕೋಹಾಮಾ(ಜಪಾನ್), ಟೋಕಿಯೋ(ಜಪಾನ್), ತೈಪೆ(ತೈವಾನ್), ರೋಟರ್ಡಮ್(ನೆದರ್‍ಲ್ಯಾಂಡ್) ಪಡೆದುಕೊಂಡಿದೆ. ಇಂಗ್ಲೆಂಡಿನ ರಾಜಧಾನಿ ಲಂಡನ್ 9ನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಸ್ಪೇನ್ ರಾಜಧಾನಿ ಮ್ಯಾಡ್ರಿಡ್ 10ನೇ ಸ್ಥಾನವನ್ನು ಪಡೆದುಕೊಂಡಿದೆ.

    ಇದನ್ನೂ ಓದಿ: ಸುಲಭ ವಹಿವಾಟು ವಿಶ್ವದ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಏರಿ 100ನೇ ಸ್ಥಾನಕ್ಕೆ ಜಿಗಿದ ಭಾರತ

  • ವಾಟ್ಸಪ್ ಸೇವೆಯನ್ನು ತಡೆ ಹಿಡಿದ ಚೀನಾ ಸರ್ಕಾರ

    ವಾಟ್ಸಪ್ ಸೇವೆಯನ್ನು ತಡೆ ಹಿಡಿದ ಚೀನಾ ಸರ್ಕಾರ

    ಬೀಜಿಂಗ್: ಚೀನಾ ಸರ್ಕಾರ ಸೋಮವಾರ ರಾತ್ರಿ ವಾಟ್ಸಪ್ ಸೇವೆಯನ್ನು ತಡೆಹಿಡಿದಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.

    ಇಂಟರ್ ನೆಟ್ ಜಗತ್ತಿನ ಆಗುಹೋಗುಗಳ ಬಗ್ಗೆ ಕಣ್ಗಾವಲು ಇಡಲು ಚೀನಾ ಸ್ಥಾಪಿಸುವ ಓಪನ್ ಒಬ್ಸರ್‍ವೆಟರಿ ಆಫ್ ನೆಟ್‍ವರ್ಕ್ ಇಂಟರ್ ಫೇಸ್(ಒಒಎನ್‍ಐ) ಸಲಹೆಯ ಹಿನ್ನೆಲೆಯಲ್ಲಿ ಸೋಮವಾರದಿಂದ ವಾಟ್ಸಪ್ ಸೇವೆಯನ್ನು ತಡೆಹಿಡಿಯಲಾಗಿದೆ ಎನ್ನಲಾಗಿದೆ.

    ಚೀನಾ ಸರ್ಕಾರ ಈ ವರ್ಷ ಆನ್‍ಲೈನ್ ನೀತಿಗಳನ್ನು ಬಿಗಿಗೊಳಿಸಿದ್ದು, ಟೆಕ್ ಕಂಪೆನಿಗಳು ಕಡ್ಡಾಯವಾಗಿ ಬಳಕೆದಾರರ ಮಾಹಿತಿನ್ನು ದೇಶದ ಒಳಗಡೆ ಸಂಗ್ರಹಿಸಬೇಕು. ಅಷ್ಟೇ ಅಲ್ಲದೇ ಕೆಲವೊಂದು ವಿಚಾರಗಳಿಗೆ ನಿರ್ಬಂಧ ಹೇರಿದೆ.

    ವಿಶ್ವದ ನಂಬರ್ ಒನ್ ಮೆಸೆಂಜಿಗ್ ಅಪ್ಲಿಕೇಶನ್ ವಾಟ್ಸಪ್ ತಡೆ ಹಿಡಿಯಲು ನಿರ್ಧಿಷ್ಟ ಕಾರಣ ಏನು ಎಂದು ತಿಳಿದು ಬಂದಿಲ್ಲ. ಟ್ವಿಟ್ಟರ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಮತ್ತು ಗೂಗಲ್ ಸೇವೆಯನ್ನು ಚೀನಾ ಈಗಾಗಲೇ ಬ್ಲಾಕ್ ಮಾಡಿದೆ.

    ಈ ಹಿಂದೆ ಚೀನಾ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಿಚಾಟ್ ಚೀನಾ ಸರ್ಕಾರ ಮಾಹಿತಿ ಕೇಳಿದರೆ ಮಾಹಿತಿ ನೀಡಲಾಗುವುದು ಎಂದು ಬಳಕೆದಾರರಿಗೆ ತಿಳಿಸಿತ್ತು.

  • ಮಾಲೀಕನ ಈ ಸೂಪರ್ ಐಡಿಯಾದಿಂದ ವರ್ಲ್ಡ್ ಫೇಮಸ್ ಆಯ್ತು ಕೆಫೆ

    ಮಾಲೀಕನ ಈ ಸೂಪರ್ ಐಡಿಯಾದಿಂದ ವರ್ಲ್ಡ್ ಫೇಮಸ್ ಆಯ್ತು ಕೆಫೆ

    ಸ್ಯಾನ್ ಫ್ರಾನ್ಸಿಸ್ಕೋ: ಹೋಟೆಲ್ ಗಳು ಬರೀ ತಿಂಡಿ ತಿನಿಸುಗಳನ್ನು ಮಾಡಿದ್ರೆ ಸಾಲದು, ಜನರನ್ನು ಹೇಗೆ ಆಕರ್ಷಿಸಿಕೊಳ್ಳಬೇಕು. ಜನರನ್ನು ಆಕರ್ಷಿಸಲೆಂದೇ ಈಗ ಅಮೆರಿಕದ ಕೆಫೆಯೊಂದು ಸಖತ್ ಪ್ಲಾನ್ ಮಾಡಿದ್ದು ಯಶಸ್ವಿಯಾಗಿದೆ.

    ಹೌದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗಾರ್ತ್ ಹೊನಾರ್ಟ್ ಎಂಬವರು ಇಲಿಗಳ ಹೋಟೆಲ್ ನಿರ್ಮಿಸಿದ್ದಾರೆ. ಇಲಿಗಳ ಹೋಟೆಲ್ ಎನ್ನುವ ಕಾರಣಕ್ಕೆ ಇಲಿಮಾಂಸವನ್ನು ನೀಡುತ್ತಾರೆ ಎಂದು ನೀವು ಊಹಿಸಿದರೆ ತಪ್ಪಾದಿತು. ಕೆಫೆಯಲ್ಲಿ ಇಲಿಗಳು ಗ್ರಾಹಕರನ್ನು ಬರಮಾಡಿಕೊಳ್ಳುತ್ತವೆ. ಹಾಗೆ ಇಲ್ಲಿ ಗ್ರಾಹಕರೊಂದಿಗೆ ಪ್ರೀತಿಯಿಂದ ಬೆರೆಯುತ್ತವೆ ಎಂದು ಗಾರ್ತ್ ಹೊನಾರ್ಟ್ ಹೇಳುತ್ತಾರೆ.

    ಈ ಇಲಿಗಳಿಂದ ಯಾವುದೇ ಅಪಾಯವಿಲ್ಲ. ಇವುಗಳಿಂದ ಕಾಯಿಲೆ ಕೂಡಾ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುಲಾಗಿದೆ ಎಂದು ತಿಳಿಸಿದ್ದಾರೆ.

    ಇದು ಮೊನ್ನೆಯಷ್ಟೇ ಶುರುವಾದ ರ್ಯಾಟ್ ಕೆಫೆ ಈಗ ವರ್ಲ್ಡ್ ಫೇಮಸ್ ಯಾಗಿದೆ. ಇದು ಏಷ್ಯಾದ ಕೆಲವು ಪ್ರಾಂತ್ಯಗಳಲ್ಲಿ ಮತ್ತು ಅಮೆರಿಕ, ಯೂರೋಪಿನಲ್ಲಿ ಈ Rat Cafeನ್ನು ಪ್ರಾರಂಭಮಾಡಲಾಗಿದೆ. ಈ ಇಲಿಗಳ ಜೊತೆ ಬೆಕ್ಕುಗಳು ಕೂಡಾ ಇರುತ್ತವೆ ಎನ್ನುವುದು ವಿಶೇಷವಾಗಿದೆ.

    https://twitter.com/TheSFDungeon/status/880893747520786432?ref_src=twsrc%5Etfw&ref_url=http%3A%2F%2Fwww.ndtv.com%2Foffbeat%2Fat-san-franciscos-rat-cafe-you-dine-as-rodents-run-free-only-for-50-1719691