Tag: ಸ್ಯಾಟಲೈಟ್ ಫೋನ್

  • ಯಾದಗಿರಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು – ಪಾಕಿಸ್ತಾನಕ್ಕೆ ಕಾಲ್!

    ಯಾದಗಿರಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು – ಪಾಕಿಸ್ತಾನಕ್ಕೆ ಕಾಲ್!

    ಯಾದಗಿರಿ: ನಗರದಲ್ಲಿ ಮತ್ತೆ ಸ್ಯಾಟಲೈಟ್ ಪೋನ್ (Satellite Phone) ಸದ್ದು ಮಾಡಿದೆ. ಯಾದಗಿರಿ ಜಿಲ್ಲೆಯ ಸುರಪುರ (Surapura) ತಾಲೂಕಿನ ಶೆಳ್ಳಗಿಯಿಂದ ನಿಷೇಧಿತ ಸ್ಯಾಟಲೈಟ್ ಫೋನ್ ಮೂಲಕ ಪಾಕಿಸ್ತಾನಕ್ಕೆ (Pakistan) ಕರೆ ಹೋಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಸೆಪ್ಟೆಂಬರ್ 17 ರಂದು ಶೆಳ್ಳಗಿ ಗ್ರಾಮದ ಕೃಷಿ ಪ್ರದೇಶವೊಂದರಿಂದ ನಸುಕಿನ ಜಾವ 3 ಗಂಟೆ ಸುಮಾರಿಗೆ ಕರೆ ಹೋಗಿದೆ. ಸೆಪ್ಟೆಂಬರ್ 17 ರಂದು ಪಾಕ್‌ಗೆ ಕರೆ ಹೋಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ದಿನದಂದೇ ಸ್ಯಾಟಲೈಟ್ ಪೋನ್ ಕರೆ ಹೋಗಿದ್ದು, ಚೀನಾ ನಿರ್ಮಿತ ಸ್ಯಾಟಲೈಟ್ ಪೋನ್‌ನಿಂದ ಕರೆ ಮಾಡಲಾಗಿದೆ. ಸೆಪ್ಟೆಂಬರ್ 19 ರಂದು ಈ ಬಗ್ಗೆ ಕೇಂದ್ರಕ್ಕೆ ಮಾಹಿತಿ ಸಿಕ್ಕಿದ್ದು, ಜಿಪಿಎಸ್ ಲೊಕೇಶನ್ ಆಧಾರದ ಮೇಲೆ ಕೇಂದ್ರ ಸಂಸ್ಥೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    2 ವರ್ಷದ ಹಿಂದೆ ಯಾದಗಿರಿ ತಾಲೂಕಿನ ಹೆಡಗಿಮದ್ರಾ ಗ್ರಾಮದ ಹೊರವಲಯದಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಹೋಗಿತ್ತು. 2021 ಏಪ್ರಿಲ್ ತಿಂಗಳಲ್ಲಿ ಹೆಡಗಿಮದ್ರಾದಿಂದ ಪಾಕ್‌ಗೆ ಸ್ಯಾಟಲೈಟ್ ಕರೆ ಮಾಡಲಾಗಿತ್ತು. ಅದೇ ರೀತಿ 2014 ರಲ್ಲಿ ಮೊಸ್ಟ್ ವಾಂಟೆಡ್ ಉಗ್ರರು ಯಾದಗಿರಿಯಲ್ಲಿ ಅಡಗಿದ್ದರು. 2014 ರಲ್ಲಿ ಮುಂಬೈ ಹಾಗೂ ಹೈದರಾಬಾದ್‌ನ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಯಾದಗಿರಿಗೆ ಭೇಟಿ ನೀಡಿದ್ದರು. ಇದನ್ನೂ ಓದಿ: ಹೊಸ ವರ್ಷಾಚರಣೆ – ಬ್ರಿಗೇಡ್‌ ರಸ್ತೆಯಲ್ಲಿ ಜೋಡಿಗಳಿಗೆ ಪ್ರತ್ಯೇಕ ಮಾರ್ಗ

    ಮಧ್ಯಪ್ರದೇಶ ಖಂಡ್ವಾ ಜೈಲಿನಿಂದ ತಪ್ಪಿಸಿಕೊಂಡಿದ್ದ ಸಿಮಿ ಉಗ್ರ ಮಹಿಬೂಬ ಗುಡ್ಡು ಸೇರಿದಂತೆ ಕೆಲವರು ಯಾದಗಿರಿಯಲ್ಲಿ ಅಡಗಿದ್ದರು. ಈಗ ಯಾದಗಿರಿಯಿಂದ ಮತ್ತೆ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಹೋಗಿರುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಂಸತ್‌ ಸ್ಮೋಕ್‌ ಬಾಂಬ್‌ ಕೇಸ್‌ – ಟಿಎಂಸಿ ಶಾಸಕನ ಜೊತೆ ಆರೋಪಿ – ಫೋಟೋ ಹರಿಬಿಟ್ಟ ಬಿಜೆಪಿ

  • ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಮುನ್ನ ದಿನ  ಕರಾವಳಿಯಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್‌ ಫೋನ್‌

    ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಮುನ್ನ ದಿನ ಕರಾವಳಿಯಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್‌ ಫೋನ್‌

    ಮಂಗಳೂರು: ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ(Mangaluru Blast Case) ಮುನ್ನ ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ (Satellite Phone) ರಿಂಗಣಿಸಿದ ವಿಚಾರ ಈಗ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ಹೌದು. ನವೆಂಬರ್‌ 19 ಶನಿವಾರ ಸಂಜೆ  ಸ್ಫೋಟ ನಡೆದಿದ್ದರೆ ನ.18ರಂದು ದಕ್ಷಿಣ ಕನ್ನಡದ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ(Kakkinje) ಸ್ಯಾಟಲೈಟ್ ಫೋನ್ ಮೂಲಕ ಕರೆ ಹೋಗಿದೆ.

    ಅರಣ್ಯ ಪ್ರದೇಶದಲ್ಲಿ ನಿಷೇಧಿತ ತುರಾಯ (Thuraya) ಕಂಪನಿಯ ಸ್ಯಾಟಲೈಟ್ ಫೋನ್ ಬಳಸಲಾಗಿರುವ ಮಾಹಿತಿ ಈಗ ಸಿಕ್ಕಿದೆ. ಸ್ಯಾಟಲೈಟ್ ಫೋನ್ ಜಾಗವನ್ನು ಬೇಹುಗಾರಿಕಾ ಏಜೆನ್ಸಿಗಳು ಪತ್ತೆ ಮಾಡಿದ್ದು ಪೊಲೀಸರು ಈಗ ಈ ಕೋನದಲ್ಲೂ ತನಿಖೆ ಆರಂಭಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಎರಡು, ಉಡುಪಿ ಒಂದು ಕಡೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಿಂದ ಸ್ಯಾಟಲೈಟ್ ಫೋನ್ ಮೂಲಕ ಕರೆ ಹೋಗಿದೆ. ಸುಮಾರು 5 ವರ್ಷಗಳಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಸ್ಯಾಟಲೈಟ್ ಫೋನ್ ಸದ್ದು ಮಾಡುತ್ತಿವೆ.

    ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಮೂಲದ ತುರಾಯ ಕಂಪನಿ ಯುರೋಪ್, ಮಧ್ಯಪ್ರಾಚ್ಯ, ಉತ್ತರ, ಮಧ್ಯ ಮತ್ತು ಪೂರ್ವ ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 161 ದೇಶಗಳಿಗೆ ಧ್ವನಿ ಸೇವೆಗಳನ್ನು ನೀಡುತ್ತಿದೆ. ಇದನ್ನೂ ಓದಿ: ರೂಮಿನ ಹತ್ರ ಬಂದಾಗ ಸಡನ್ ಲಾಕ್ – ಕನ್ನಡಕ ಧರಿಸಿ ಓಡಾಟ

    ಸ್ಯಾಟಲೈಟ್‌ ಫೋನ್‌ ಬಳಕೆಗೆ ನಿಷೇಧ:
    ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಭಾರತದಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

    ವೈರ್‌ಲೆಸ್ ಕಾಯ್ದೆಯ ಸೆಕ್ಷನ್ 6 ಮತ್ತು ಇಂಡಿಯನ್ ಟೆಲಿಗ್ರಾಫ್ ಆಕ್ಟ್‌ನ ಸೆಕ್ಷನ್ 20ರ ಅಡಿಯಲ್ಲಿ ಭಾರತದಲ್ಲಿ ತುರಾಯ/ಇರಿಡಿಯಮ್ ಸ್ಯಾಟಲೈಟ್ ಫೋನ್‌ಗಳ ಬಳಕೆಯನ್ನು ಕಾನೂನುಬಾಹಿರ ಎಂದು ಘೋಷಿಸಿದೆ

    ಭಾರತಕ್ಕೆ ಪ್ರಯಾಣಿಸುವ ಎಲ್ಲಾ ವ್ಯಕ್ತಿಗಳಿಗೆ ತುರಾಯ/ಇರಿಡಿಯಮ್ ಸ್ಯಾಟಲೈಟ್ ಫೋನ್‌ಗಳ ಬಳಕೆಯನ್ನು ಭಾರತದಲ್ಲಿ ಅನುಮತಿಸಲಾಗುವುದಿಲ್ಲ ಎಂದು ಸಲಹೆ ನೀಡಲಾಗುತ್ತದೆ. ವಿದೇಶಿಯರು ಭಾರತಕ್ಕೆ ಉಪಗ್ರಹ ಫೋನ್‌ಗಳನ್ನು ತರುವುದಕ್ಕೂ ನಿಷೇಧ ಹೇರಲಾಗಿದೆ. ಭಾರತಕ್ಕೆ ಬರುವಾಗ ಉಪಗ್ರಹ ಫೋನ್‌ಗಳಿದ್ದರೆ ಪ್ರಯಾಣಿಕರನ್ನು ಬಂಧಿಸಲಾಗುತ್ತದೆ. ಅಷ್ಟೇ ಅಲ್ಲದೇ ಟೆಲಿಗ್ರಾಫ್ ಕಾಯಿದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಕೋಸ್ಟ್ ಗಾರ್ಡ್ ಭದ್ರತಾ ಶಕ್ತಿ ಹೆಚ್ಚಿಸಲು ಕೇಂದ್ರ ಸರ್ಕಾರ ಪ್ಲ್ಯಾನ್‌ – ಮನೋಜ್ ಬಾಡ್ಕರ್

    ಕೋಸ್ಟ್ ಗಾರ್ಡ್ ಭದ್ರತಾ ಶಕ್ತಿ ಹೆಚ್ಚಿಸಲು ಕೇಂದ್ರ ಸರ್ಕಾರ ಪ್ಲ್ಯಾನ್‌ – ಮನೋಜ್ ಬಾಡ್ಕರ್

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿ ಭಾಗದಲ್ಲಿ ಈ ಹಿಂದಿನಿಂದಲೂ ಸ್ಯಾಟ್‌ಲೈಟ್ ಫೋನ್ (Satellite Phone) ಆಕ್ಟೀವ್ ಆಗಿದ್ದು ಕೇಂದ್ರದ ಗುಪ್ತದಳ, ಸ್ಥಳೀಯ ಪೊಲೀಸರಿಗೆ (Police) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದಕ್ಕಾಗಿ ಕೋಸ್ಟ್ ಗಾರ್ಡ್‌ನ (Coast Guard) ಭದ್ರತಾ ಶಕ್ತಿಯನ್ನ ಮತ್ತಷ್ಟು ಹೆಚ್ಚಿಸಲು ಭಾರತ ಸರ್ಕಾರ ಯೋಜನೆ ರೂಪಿಸಿದೆ ಎಂದು ಭಾರತೀಯ ತಟರಕ್ಷಕ ಪಡೆಯ ಪಶ್ಚಿಮ ವಲಯ ಕಮಾಂಡರ್ ಮನೋಜ್ ಬಾಡ್ಕರ್ ತಿಳಿಸಿದ್ದಾರೆ.

    ಕಾರವಾರದ (Karwar) ಕೋಸ್ಟ್‌ಗಾರ್ಡ್‌ ಕಚೇರಿಗೆ ಆಗಮಿಸಿದ್ದ ಮನೋಜ್ ಬಾಡ್ಕರ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಕೋಸ್ಟ್ ಗಾರ್ಡ್ನ ಭದ್ರತಾ ಶಕ್ತಿ ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ (Central Government) ಯೋಜನೆ ರೂಪಿಸಿದೆ. ಅದಕ್ಕಾಗಿ ಕೋಸ್ಟಲ್ ಸೆಕ್ಯುರಿಟಿ ಮೆಕ್ಯಾನಿಸಂ ರೂಪಿಸಲಾಗಿದೆ. ಇದರಲ್ಲಿ ಕೋಸ್ಟ್ ಚೈನ್ ಆ್ಯಪ್ ಸ್ಟಾಟಿಸ್ಟಿಕ್ಸ್ ಚೈನ್ ಸೆನ್ಸಾರ್ ಇದೆ. 30 ನಾಟಿಕಲ್ ಮೈಲ್‌ನಲ್ಲಿ ಒಂದೊಂದು ರೆಡಾರ್ ಇದೆ. ಅಲ್ಲಿ ಸಿಸಿ ಕ್ಯಾಮೆರಾ ಕೂಡ ಇರುತ್ತದೆ. ಯಾವುದೇ ಬೋಟ್‌ಗಳು ರೆಡಾರ್ ಹತ್ತಿರ ಬರುತ್ತಿದ್ದಂತೆ ಗೊತ್ತಾಗುತ್ತದೆ. ಇದು ಸಮುದ್ರದಲ್ಲಿ (Sea) ಭದ್ರತಾ ದೃಷ್ಟಿಯಿಂದ ಮತ್ತಷ್ಟು ಉಪಯೋಗವಾಗುತ್ತದೆ. 200 ನಾಟಿಕಲ್ ಮೈಲಿವರೆಗೆ ಸಮುದ್ರದಲ್ಲಿ ಪೆಟ್ರೋಲ್ ಚೈನ್ (Petrol Chain) ಸಹ ಇದೆ ಎಂದು ವಿವರಿಸಿದ್ದಾರೆ.

    5ಕ್ಕೂ ಹೆಚ್ಚು ಸ್ಯಾಟ್‌ಲೈಟ್ ಫೋನ್ ವಶ:
    ತೈಮೋರ್ ಸ್ಯಾಟ್‌ಲೈಟ್ ಫೋನ್‌ಗಳನ್ನ (Satellite Phone) ಎಲ್ಲಾ ದೇಶಗಳಲ್ಲಿ ಉಪಯೋಗಿಸಲು ಅವಕಾಶವಿದೆ. ಆದರೇ ನಮ್ಮ ದೇಶದಲ್ಲಿ ಮಾತ್ರ ನಿಷೇಧವಿದೆ. ಹೀಗಾಗಿ ವಿದೇಶದಿಂದ ಬಂದ ಹಡಗುಗಳು ಭಾರತದ ಗಡಿ ಪ್ರವೇಶಿಸಿದ ನಂತರ ಈ ಫೋನ್‌ಗಳನ್ನ ಸೀಲ್ಡ್ ಮಾಡಿ ಇಡಬೇಕು. ಕೆಲವು ಬಾರಿ ಗೊತ್ತಿಲ್ಲದೇ ಉಪಯೋಗಿಸುತ್ತಾರೆ. ಇಂತಹ 5ಕ್ಕೂ ಹೆಚ್ಚು ಸ್ಯಾಟ್‌ಲೈಟ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಕರಾವಳಿ ಪ್ರದೇಶದಲ್ಲಿ ಪ್ರತಿ 30 ಮೈಲಿಗೆ ಒಂದು ರೆಡಾರ್ ಹಾಕಲಾಗಿದೆ. ಇದರೊಂದಿಗೆ ಕ್ಯಾಮೆರಾ (Camera) ಅಳವಡಿಸಲಾಗಿದೆ. ಅಂಕೋಲ ತಾಲೂಕಿನ ಬೇಲಿಕೇರಿ ಬಂದರಿನಲ್ಲಿ ರೆಡಾರ್ (Redar) ಹಾಕುತ್ತೇವೆ. ಮೀನುಗಾರರು ಸಮುದ್ರದ ಭದ್ರತಾ ದೃಷ್ಟಿಯಿಂದ ಕಣ್ಣು, ಕಿವಿ ಇದ್ದಂತೆ. ಮೀನುಗಾರರ ರಕ್ಷಣೆಗಾಗಿ ನಾವು ಕೆಲಸ ಮಾಡುತ್ತೇವೆ. ಈ ವರ್ಷದಲ್ಲಿ ಕೋಸ್ಟ್ ಗಾರ್ಡ್ ವಲಯದಲ್ಲಿ 720 ಜನರ ಜೀವ ರಕ್ಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಕಾರವಾರದಲ್ಲಿ ಕೋಸ್ಟ್ ಗಾರ್ಡ್ಗೆ ಸಂಬಂಧಿಸಿದ ಸ್ವಂತ ಕಟ್ಟಡವಿಲ್ಲ. ಹಾಗಾಗಿ ಕಡಲ ತೀರದಲ್ಲೇ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಇದಕ್ಕೆ ಮೀನುಗಾರರ ವಿರೋಧವಿದ್ದು, ಮನವೊಲಿಸುವ ಪ್ರಯತ್ನವೂ ನಡೆಯುತ್ತಿದೆ. ಈಗಾಗಲೇ ಅಮದಳ್ಳಿಯಲ್ಲಿ 26 ಎಕರೆ ಪ್ರದೇಶ ಖರೀದಿ ಮಾಡಿದ್ದು, 2 ವರ್ಷಗಳಲ್ಲಿ ಕಟ್ಟಡ ಕಾಮಗಾರಿ ಮುಗಿಯಲಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯಾದಗಿರಿಯಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ: ಕಲಬುರಗಿಯ ಐಎಸ್‍ಡಿ ತಂಡ ಭೇಟಿ

    ಯಾದಗಿರಿಯಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ: ಕಲಬುರಗಿಯ ಐಎಸ್‍ಡಿ ತಂಡ ಭೇಟಿ

    ಕಲಬುರಗಿ: ಯಾದಗಿರಿ ತಾಲೂಕಿನ ಹೆಡಗಿಮದ್ರ ಗ್ರಾಮದ ಗುಡ್ಡಗಾಡು ಪ್ರದೇಶದಿಂದ ಪಾಕಿಸ್ತಾನಕ್ಕೆ ನಿಷೇಧಿತ ಸ್ಯಾಟಲೈಟ್ ಪೋನ್ ಕರೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಈಗಾಗಲೇ ಕಳೆದ ಏಪ್ರಿಲ್ ತಿಂಗಳಲ್ಲಿ ಪಾಕಿಸ್ತಾನಕ್ಕೆ ಕರೆ ಹೋಗಿರುವ ಶಂಕೆ ಹಿನ್ನೆಲೆಯಲ್ಲಿ ಕಲಬುರಗಿಯಿಂದ ಐಎಸ್‍ಡಿ ತಂಡ ಬಂದು ತನಿಖೆ ನಡೆಸಿದೆ.

    ಕರೆ ಹೋಗಿರುವ ಬಗ್ಗೆ ಮಾಹಿತಿ ಬಂದ ಹಿನ್ನಲೆ ಗ್ರಾಮಕ್ಕೆ ಭೇಟಿ ನೀಡಿದ ಕಲಬುರಗಿ ಐಎಸ್‍ಡಿ ಇನ್ಸ್‌ಪೆಕ್ಟರ್‌ ಮಹಾದೇವಪ್ಪ ಪಂಚಮುಖಿ ನೇತೃತ್ವದ ತಂಡ ಮಾಹಿತಿ ಕಲೆ ಹಾಕಿದೆ. ಮಾಹಿತಿ ಕಲೆ ಹಾಕಿದ ತಂಡ ಎಡಿಜಿಪಿ ಅವರಿಗೆ ವರದಿ ಒಪ್ಪಿಸಿದೆ. ಇದನ್ನೂ ಓದಿ: ತುಮಕೂರು ಲಾಡ್ಜ್‌ನಲ್ಲಿ ಸುರಂಗ- ಸುರಂಗದೊಳಗೆ ವೇಶ್ಯಾವಾಟಿಕೆ 

    ಯಾದಗಿರಿ ಬಳಿಯಿಂದ ಸ್ಯಾಟ್‍ಲೈಟ್ ಪೋನ್ ಮೂಲಕ ಪಾಕಿಸ್ತಾನಕ್ಕೆ ಕರೆ ಮಾಡಿರುವ ಖಚಿತ ಮಾಹಿತಿ ಪೊಲೀಸ್ ಗುಪ್ತದಳಕ್ಕೆ ಸಿಕ್ಕಿದೆ. ಆದರೆ ಕರೆ ಮಾಡಿದವರು ಯಾರು ಎಂಬುದರ ಬಗ್ಗೆ ಇಲ್ಲಿಯವರೆಗೆ ಯಾವ ಸುಳಿವು ಸಹ ಸಿಕ್ಕಿಲ್ಲ, ಇದೀಗ ಗುಪ್ತಚರ ಪೊಲೀಸರು ಮತ್ತು ಆಂತರಿಕ ಭದ್ರತೆ ಪೊಲೀಸರು ಕರೆ ಮಾಡಿದ ವ್ಯಕ್ತಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

  • ಕಾರವಾರದಲ್ಲಿ ನಿರ್ಬಂಧಿತ ಸ್ಯಾಟಲೈಟ್ ಫೋನ್ ಆ್ಯಕ್ಟಿವ್- ಐಎಸ್‍ಡಿಯಿಂದ ಅರಣ್ಯದಲ್ಲಿ ಕೂಂಬಿಂಗ್‌  ಕಾರ್ಯಚರಣೆ

    ಕಾರವಾರದಲ್ಲಿ ನಿರ್ಬಂಧಿತ ಸ್ಯಾಟಲೈಟ್ ಫೋನ್ ಆ್ಯಕ್ಟಿವ್- ಐಎಸ್‍ಡಿಯಿಂದ ಅರಣ್ಯದಲ್ಲಿ ಕೂಂಬಿಂಗ್‌ ಕಾರ್ಯಚರಣೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರವಾಡ ಭಾಗದ ಅರಣ್ಯ ವ್ಯಾಪ್ತಿಯಲ್ಲಿ ನಿರ್ಬಂಧಿತ ಸ್ಯಾಟಲೈಟ್ ಫೋನ್ ಬಳಕೆ ಮಾಡುತ್ತಿರುವ ಕುರಿತು ಕೇಂದ್ರ ಆಂತರಿಕ ಭದ್ರತಾ ವಿಭಾಗ(ಐಎಸ್‍ಡಿ), ಸ್ಥಳೀಯ ಪೊಲಿಸರು, ಅರಣ್ಯ ಇಲಾಖೆಯ ಐದು ಜನರನ್ನೊಳಗೊಂಡ ತಂಡ ಕೊಮಿಂಗ್ ಕಾರ್ಯಾಚರಣೆ ನಡೆಸುತ್ತಿದೆ.

    ಸೋಮವಾರದಿಂದ ಈವರೆಗೆ ಹಲವು ಬಾರಿ ಶಿರವಾಡದ ಜಾಂಬಾ ಗ್ರಾಮದ ಅರಣ್ಯ ವ್ಯಾಪ್ತಿಯ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವುದನ್ನು ಪತ್ತೆ ಹಚ್ಚಲಾಗಿದೆ. ಕಾರವಾರದಲ್ಲಿ ಕೈಗಾ ಅಣುಸ್ತಾವರ, ನೌಕಾ ದಳದ ಕೇಂದ್ರವಿದ್ದು, ಇದರ ಭದ್ರತಾ ದೃಷ್ಟಿಯಿಂದ ಟ್ರ್ಯಾಕ್ ಆದ ನಿರ್ಬಂಧಿತ ಸ್ಯಾಟಲೈಟ್ ಫೋನ್ ಯಾರು ಬಳಕೆ ಮಾಡುತಿದ್ದಾರೆ ಎಂಬ ಬಗ್ಗೆ ತನಿಖೆ ಚುರುಕು ಗೊಳಿಸಲಾಗಿದೆ. ಟ್ರ್ಯಾಕ್ ಆದ ಅರಣ್ಯ ವ್ಯಾಪ್ತಿಯಲ್ಲಿ ಕೂಮಿಂಗ್ ಕಾರ್ಯಾಚರಣೆ ಮುಂದುವರೆದಿದೆ. ಇನ್ನು ಜಿಲ್ಲೆಯಲ್ಲಿ ಪದೇ ಪದೆ ಸ್ಯಾಟಲೈಟ್ ಫೋನ್ ಟ್ರ್ಯಾಕ್ ಆಗುತಿದ್ದು, ಸಿದ್ದಾಪುರ, ಕಾರವಾರ, ಯಲ್ಲಾಪುರ ಭಾಗದಲ್ಲಿ ಸಹ ಈ ಹಿಂದೆ ಹತ್ತಕ್ಕೂ ಹೆಚ್ಚುಬಾರಿ ಟ್ರ್ಯಾಕ್ ಆಗಿದೆ.

    ಇದೇ ಮೊದಲಲ್ಲ
    ಉತ್ತರ ಕನ್ನಡದಿಂದ ಸ್ಯಾಟಲೈಟ್ ಕರೆ ಹೋದ ಮಾಹಿತಿ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಕರೆಯ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆದಿದೆ. 2019ರ ಸೆಪ್ಟೆಂಬರ್‍ನಲ್ಲಿ ಕೈಗಾ ಸಮೀಪದ ಕಾಡಿನಿಂದ ಸ್ಯಾಟಲೈಟ್ ಕರೆ ಹೋದ ಬಗ್ಗೆ ಮಾಹಿತಿ ಇದ್ದ ಕಾರಣ, ಅದನ್ನು ಹುಡುಕಲು ಹೋದ ಕಾರವಾರ ಡಿವೈಎಸ್‍ಪಿ ಶಂಕರ್ ಮಾರಿಹಾಳ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದರು. ಕಾಡು ಪ್ರಾಣಿ ನೋಡಿ ಭಯಗೊಂಡ ಅವರು ಒಂದು ರಾತ್ರಿ ಕಾಡಿನಲ್ಲೇ ಕಳೆದು ಮರುದಿನ ಬೆಳಗ್ಗೆ ಮರಳಿದ್ದರು.

    ತಿಂಗಳ ಹಿಂದೆ ಮಾಜಾಳಿ ಕಡಲ ತೀರದಿಂದ ಸ್ಯಾಟಲೈಟ್ ಕರೆ ಹೋದ ಬಗ್ಗೆ ಮಾಹಿತಿ ಬಂದಿತ್ತು. ಕಳೆದ ವರ್ಷ ಸಿದ್ದಾಪುರ ತಾಲೂಕಿನ ನಿಲ್ಕುಂದ ಸಮೀಪದಿಂದ ಸ್ಯಾಟಲೈಟ್ ಕರೆ ಹೋದ ಮಾಹಿತಿ ಸಿಕ್ಕಿತ್ತು. ಭಟ್ಕಳದ ಐಎಸ್‍ಡಿ ಅಧಿಕಾರಿಗಳು ತೆರಳಿ ಸ್ಥಳೀಯರನ್ನು ವಿಚಾರಣೆಗೊಳಪಡಿಸಿದ್ದರು. ಕಾರವಾರ ಬಂದರು ಸಮೀಪ ಎರಡು ಮೂರು ಬಾರಿ ಸ್ಯಾಟಲೈಟ್ ಕರೆಯ ಸುಳಿವು ಸಿಕ್ಕಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಇದುವರೆಗೂ ಯಾವುದೇ ಶಂಕಿತರೂ ಪತ್ತೆಯಾಗಿಲ್ಲ.

    ಏನಿದು ಸ್ಯಾಟಲೈಟ್ ಕರೆ?
    ಸ್ಥಳೀಯ ದೂರ ಸಂಪರ್ಕ ಕಂಪನಿಗಳ ಸಂಪರ್ಕ ಜಾಲದ ಸಹಕಾರವಿಲ್ಲದೇ ನೇರವಾಗಿ ಉಪಗ್ರಹ ಸಹಾಯದಿಂದ ಕರೆ ಮಾಡಬಹುದಾದ ಸಾಧನಕ್ಕೆ ಸ್ಯಾಟಲೈಟ್ ಫೋನ್ ಎನ್ನಲಾಗುತ್ತದೆ. ಇದರಿಂದ ಮಾಡುವ ಕರೆ ಹೆಚ್ಚು ವೆಚ್ಚದಾಯಕವಾಗಿದೆ. ಇದನ್ನು ಸಾಮಾನ್ಯ ಜನರು ಬಳಸುವುದು ಕಡಿಮೆ. ಭಾರತದಲ್ಲಿ ಕೇಂದ್ರೀಯ ದೂರ ಸಂಪರ್ಕ ಇಲಾಖೆಯ ಅನುಮತಿಯೊಂದಿಗೆ ಲಿಮರ್‍ಸೆಟ್ ಎಂಬ ಸ್ಯಾಟಲೈಟ್ ಫೋನ್‍ನ್ನು ಬಳಕೆ ಮಾಡಲು ಅನುಮತಿ ಇದೆ. ವಿಮಾನ ಹಾಗೂ ರೈಲಿನಲ್ಲಿ ಪ್ರಯಾಣಿಸುವಾಗ ಫೋನ್ ಕೊಂಡೊಯ್ಯಲು ವಿಶೇಷ ಅನುಮತಿ ಪತ್ರವೂ ಬೇಕು. ತುರಾಯಾ, ಇರೀಡಿಯಂ ಮುಂತಾದ ಕಂಪನಿಗಳ ಸ್ಯಾಟಲೈಟ್ ಫೋನ್ ಬಳಕೆ ಈ ಹಿಂದೆ ದೇಶದಲ್ಲಿತ್ತು.

    2011ರ ಮುಂಬೈ ದಾಳಿಯ ನಂತರ 2012ರಲ್ಲಿ ಈ ಕಂಪನಿಗಳ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ. ಈ ಸಂಬಂಧ ಡಿಜಿ ಶಿಪ್ಪಿಂಗ್ ಕೂಡ ವಿಶೇಷ ಆದೇಶ ಹೊರಡಿಸಿದೆ. ಉಗ್ರಗಾಮಿಗಳು, ಭೂಗತ ಪಾತಕಿಗಳು ಸ್ಥಳೀಯ ಭದ್ರತಾ ವ್ಯವಸ್ಥೆಯ ಕಣ್ಣು ತಪ್ಪಿಸಿ ಇದನ್ನು ಬಳಸುತ್ತವೆ ಎಂಬ ಅನುಮಾನದಿಂದ ಈ ಕರೆಯ ಬಗ್ಗೆ ದೇಶದ ಎಲ್ಲ ಭದ್ರತಾ ವಿಭಾಗಗಳು ವಿಶೇಷ ಗಮನ ನೀಡುತ್ತವೆ.

    ಜಿಲ್ಲೆಯಲ್ಲಿ ಆತಂಕ ಏಕೆ?
    ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆ, ಕೈಗಾ ಅಣು ವಿದ್ಯುತ್ ಸ್ಥಾವರ ಹಲವು ಅಣೆಕಟ್ಟುಗಳು, ವಾಣಿಜ್ಯ ಬಂದರನ್ನು ಹೊಂದಿದೆ. ದಟ್ಟ ಕಾಡೂ ಇರುವುದರಿಂದ ವಿಚ್ಛಿದ್ರಕಾರಿ ಶಕ್ತಿಗಳು ಇಲ್ಲಿ ಅಟ್ಟಹಾಸ ಮೆರೆಯುವ ಸಾಧ್ಯತೆ ಇದೆ. ಇದರಿಂದ ಉತ್ತರ ಕನ್ನಡದ ಸ್ಯಾಟಲೈಟ್ ಕರೆಗಳ ಬಗ್ಗೆ ಭದ್ರತಾ ಸಂಸ್ಥೆಗಳು ಹೆಚ್ಚಿನ ಗಮನ ನೀಡುತ್ತವೆ. ಭಟ್ಕಳದಲ್ಲಿ ಇಂಥ ವಿಚಾರಗಳ ಬಗ್ಗೆ ಮಾಹಿತಿ ಕಲೆ ಹಾಕಲು ಐಎಸ್‍ಡಿ ಪ್ರತ್ಯೇಕ ವಿಭಾಗವನ್ನು ಕೇಂದ್ರ ಸರ್ಕಾರ ಇರಿಸಿದೆ. ನೌಕಾ ದಳದ ಗುಪ್ತ ಇಲಾಖೆ ಸಹ ಇದರ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳುತ್ತದೆ.

    ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಕಾರವಾರ ಅತೀ ಮುಖ್ಯ ಪ್ರದೇಶವಾಗಿದೆ. ಈ ಹಿನ್ನಲೆಯಲ್ಲಿ ಕಾರವಾರದಲ್ಲಿ ರಾಷ್ಟ್ರೀಯ ಭದ್ರತಾ ದಳ, ಕೇಂದ್ರ ಇಂಟಲಿಜನ್ಸಿಗಳು ಸ್ಯಾಟಲೈಟ್ ಮೂಲಕವೂ ಇಲ್ಲಿನ ಆಗುಹೊಗುಗಳ ಬಗ್ಗೆ ಹದ್ದಿನ ಕಣ್ಣಿಟ್ಟಿರುತ್ತವೆ. ಕಾರವಾರದ ನೌಕಾನೆಲೆ ಉಗ್ರಗಾಮಿಗಳ, ವಿರೋಧಿ ರಾಷ್ಟ್ರಗಳ ಮುಖ್ಯ ಟಾರ್ಗೆಟ್ ಸಹ ಆಗಿದ್ದು, ಇಲ್ಲಿನ ರಹಸ್ಯಗಳು ಭದ್ರತೆಗಳ ಮಾಹಿತಿ ವೈರಿಗಳಿಗೆ ಸಿಗದಂತೆ ಕಾಪಾಡುವುದು ಅತ್ಯವಶ್ಯ. ಇದಲ್ಲದೇ ವೈರಿಗಳು ದಾಳಿ ನಡೆಸದಂತೆ ತಡೆಯಲು ಸಿದ್ಧವಿರಬೇಕಿದ್ದು, ಮುಂಬೈನಲ್ಲಿ ದಾಳಿ ನಡೆಸಿದಂತೆ ಇಲ್ಲಿಯೂ ದಾಳಿ ನಡೆಯುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಕಟ್ಟೆಚ್ಚರ ವಹಿಸುವುದು ಅನಿವಾರ್ಯವಾಗಿದೆ.

    ರಕ್ಷಣಾ ಸಿಬ್ಬಂದಿಗೆ ತಾಂತ್ರಿಕ ಸಮಸ್ಯೆ!
    ಆಂತರಿಕಾ ಭದ್ರತಾ ಸಿಬ್ಬಂದಿ ಹೇಳುವಂತೆ ಸ್ಯಾಟಲೈಟ್ ಸಿಗ್ನಲ್ ಟ್ರ್ಯಾಕ್ ಆದಾಗ ತಕ್ಷಣ ಕಾರ್ಯೋನ್ಮುಖವಾಗಬೇಕಾಗುತ್ತದೆ. ಆದರೆ ಕಾರವಾರದಲ್ಲಿ ಬಂದರು ಇದೆ. ಇಲ್ಲಿ ಬರುವ ಅಂತರಾಷ್ಟ್ರೀಯ ಹಡಗುಗಳಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲೋ ಬಳಸಿದ ಸಿಗ್ನಲ್ ಮತ್ತೆಲ್ಲೋ ಟ್ರ್ಯಾಕ್ ಆಗುವ ಸಮಸ್ಯೆಗಳು ಸಹ ಇದೆ. ಇದು ಪತ್ತೆ ಹಚ್ಚುವಲ್ಲಿ ವಿಘ್ನ ತಂದೊಡ್ಡುತ್ತದೆ, ಅದಲ್ಲದೆ ಕೆಲವು ಖಾಸಗಿ ವಿಮಾನಗಳಲ್ಲಿ ಸ್ಯಾಟಲೈಟ್ ಫೋನ್ ಬಳಸುವುದರಿಂದ ಈ ಭಾಗದಲ್ಲಿ ಹಾರಾಡಿದ ವಿಮಾನದ ಸಿಗ್ನಲ್ ಟ್ರ್ಯಾಕ್ ಆಗುತ್ತದೆ. ಹೀಗಾಗಿ ಇಂತಹದ್ದೇ ಎಂದು ಹುಡುಕುವುದು ಕಷ್ಟವಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ವಿವಿಧ ಭಾಗದಲ್ಲಿ 10ಕ್ಕೂ ಹೆಚ್ಚುಬಾರಿ ಸ್ಯಾಟಲೈಟ್ ಫೋನ್ ಟ್ರ್ಯಾಕ್ ಆಗಿದ್ದು, ಈ ವರೆಗೆ ಯಾವ ಮೂಲ ಎಂಬುದು ಪತ್ತೆಯಾಗಿಲ್ಲ.

  • ಮಹದೇಶ್ವರ ಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆ: ಎಸ್‍ಪಿ ಆನಂದ್ ಕುಮಾರ್

    ಮಹದೇಶ್ವರ ಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆ: ಎಸ್‍ಪಿ ಆನಂದ್ ಕುಮಾರ್

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಸ್ಯಾಟ್‍ಲೈಟ್ ಫೋನ್ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.

    ಸ್ಯಾಡ್‍ಲೈಟ್ ಫೋನನ್ನು ನಕ್ಸಲೀಯರು ಬಳಸಿದ್ದಾರಾ ಅಥವಾ ಸಮಾಜಘಾತುಕ ಶಕ್ತಿಗಳು ಬಳಸಿವೆಯಾ ಎಂಬುದರ ಬಗ್ಗೆ ಕೇಂದ್ರ ಆಂತರಿಕ ಭದ್ರತಾ ಪಡೆ, ನಕ್ಸಲ್ ನಿಗ್ರಹ ದಳ, ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆಗಳಿಂದ ತೀವ್ರ ನಿಗಾವಹಿಸಲಾಗಿದೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ ಕುಮಾರ್ ಮಹದೇಶ್ವರ ಬೆಟ್ಟ ಅರಣ್ಯ ವ್ಯಾಪ್ತಿಯಲ್ಲಿ ಸ್ಯಾಟ್‍ಲೈಟ್ ಫೋನ್ ಬಳಕೆಯಾಗಿರುವ ಬಗ್ಗೆ ಖಚಿತಪಡಿಸಿದ್ದಾರೆ. ಕೆಲವು ಕಡೆ ಸ್ಯಾಟ್‍ಲೈಟ್ ಫೋನ್ ಬಳಸಿರುವ ಬಗ್ಗೆ ತನ್ನ ಗಮನಕ್ಕೆ ಬಂದಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

    ಒಮ್ಮೊಮ್ಮೆ ವಿದೇಶಿ ಪ್ರಯಾಣಿಕರು ಬಳಸಿರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಯಾರು ಬಳಕೆ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಮುಂದಿನ ಕ್ರಮ ವಹಿಸಿವುದಾಗಿ ಎಸ್‍ಪಿ ತಿಳಿಸಿದ್ದಾರೆ

  • ಸ್ಯಾಟಲೈಟ್ ಫೋನ್ ಹೊಂದಿದ್ದ ಮಹಿಳಾ ಪೈಲಟ್ ವಶ

    ಸ್ಯಾಟಲೈಟ್ ಫೋನ್ ಹೊಂದಿದ್ದ ಮಹಿಳಾ ಪೈಲಟ್ ವಶ

    ಬೆಂಗಳೂರು: ಸ್ಯಾಟಲೈಟ್ ಫೋನ್ ಹೊಂದಿದ್ದ ಅಮೆರಿಕಾ ಮೂಲದ ಮಹಿಳಾ ಪೈಲಟನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

    ಅಮೆರಿಕಾ ಮೂಲದ ಬೆಂಟರ್ ಚಾರಿಟಿ ನೊಯಲ್ ವಶಕ್ಕೆ ಪಡೆದ ಮಹಿಳಾ ಪೈಲಟ್. ಅಂದಹಾಗೆ ವಿಶೇಷ ವಿಮಾನದ ಚಾಲಕಿಯಾಗಿರುವ ಬೆಂಡರ್ ಚಾರಿಟಿ ನೊಯಲ್ ಬಳಿ ತಪಾಸಣೆ ವೇಳೆ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ. ಹೀಗಾಗಿ ಅನುಮಾನಗೊಂಡ ಸಿಐಎಸ್‍ಎಫ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಕೆಯನ್ನ ಕೆಐಎಎಲ್ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಕೆಐಎಎಲ್‍ನ ಸಿಪಿಐ ಪ್ರಶಾಂತ್, ಮಹಿಳಾ ವಿಮಾನ ಚಾಲಕಿಯನ್ನ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

    ಭಾರತ ದೇಶದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ನಿಷಿದ್ಧ ಹಾಗೂ ಕಾನೂನುಬಾಹಿರ, ಕೇವಲ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಂಸ್ಥೆಯ ಸ್ಯಾಟಲೈಟ್ ಫೋನ್ ಮಾತ್ರ ಸರ್ಕಾರಿ ಸದುದ್ದೇಶದ ಕಾರ್ಯಗಳಿಗೆ ಬಳಕೆ ಮಾಡಬಹುದಾಗಿದೆ ಎನ್ನಲಾಗಿದೆ. ಆದರೆ ಈ ಮಹಿಳಾ ಪೈಲಟ್ ಇರುಡಿಯಮ್ ಅನ್ನೋ ಸ್ಯಾಟಲೈಟ್ ಫೋನ್ ಹೊಂದಿದ್ದಾಳೆ. ಹೀಗಾಗಿ ಅಮೆರಿಕಾದಲ್ಲಿ ಈ ಸ್ಯಾಟಲೈಟ್ ಫೋನ್ ಬಳಕೆಗೆ ಅವಕಾಶ ಇದೆಯಾ ಅಥವಾ ಕಾನೂನುಬಾಹಿರವಾಗಿ ಈಕೆ ಸ್ಯಾಟಲೈಟ್ ಫೋನ್ ಹೊಂದಿದ್ದಾಳಾ ಎಂಬುದನ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.