Tag: ಸ್ಯಾಂಡಲ್ ವುಡ್ ನಟ

  • ಮೋದಿಜೀ ನಿಮ್ಮ ಗುರಿ ಕೊನೆತನಕ ಇರಲಿ ಅಂದ್ರು ಜಗ್ಗೇಶ್

    ಮೋದಿಜೀ ನಿಮ್ಮ ಗುರಿ ಕೊನೆತನಕ ಇರಲಿ ಅಂದ್ರು ಜಗ್ಗೇಶ್

    ಬೆಂಗಳೂರು: ವಿಶ್ವಸಂಸ್ಥೆಯ ಅತಿದೊಡ್ಡ ಪ್ರಶಸ್ತಿ ಎನಿಸಿಕೊಂಡಿರುವ ಚಾಂಪಿಯನ್ಸ್ ಆಫ್ ಅರ್ತ್ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿರೋ ಪ್ರಧಾನಿ ನರೇಂದ್ರ ಮೋದಿಯವರಿಗೆ ನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ಮೋದಿಜೀ ನಿಮ್ಮ ಗುರು ಕೊನೆತೆಕ ಇರಲಿ ಅಂತ ಹೇಳಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, “2018ರ ಚಾಂಪಿಯನ್ಸ್ ಆಫ್ ಅರ್ತ್ ಗೌರವಕ್ಕೆ ಪಾತ್ರರಾಗಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಶಯಗಳು. ನೀವು ದೇಶದ ಅಭಿವೃದ್ಧಿಗೆ ನೀಡುವ ಕೊಡುಗೆಗಳಿಂದಾಗಿ ಸ್ವಾಭಿಮಾನಿ ಭಾರತೀಯರು ನಿಮ್ಮ ಜೊತೆ ಎಂದಿಗೂ ಇರುತ್ತಾರೆ. ನೀವು ಹೀಗೆಯೇ ಮುಂದುವರಿಯುತ್ತಾ ಇರಿ. ಈ ಮೂಲಕ ನಿಮ್ಮ ಗುರಿ ಕೊನೆತನಕ ಇರಲಿ” ಅಂತ ಶುಭಹಾರೈಸಿದ್ದಾರೆ.

    1018ರ ಚಾಂಪಿಯನ್ಸ್ ಆಫ್ ಅರ್ತ್ ಗೌರವವನ್ನು ಪ್ರಧಾನಿಯವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಅವರ ಜೊತೆ ಹಂಚಿಕೊಳ್ಳಲಿದ್ದಾರೆ. ಮೋದಿಯವರಿಗೆ ಪಾಲಿಸಿ ಆಫ್ ಲೀಡರ್ ಶಿಪ್ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ. ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಕ್ಕಾಗಿ ಮೋದಿಗೆ ಈ ಗೌರವ ನೀಡಲಾಗಿದೆ. ಇದೇ ವೇಳೆ 2022ಕ್ಕೆ ಸಂಪೂರ್ಣ ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ವಾಗ್ದಾನವನ್ನು ಕೂಡ ಗೌರವವನ್ನು ಘೋಷಿಸುವಾಗ ವಿಶೇಷವಾಗಿ ಉಲ್ಲೇಖಿಸಲಾಗಿದೆ.

    ಏನಿದು ಸೌರ ಒಕ್ಕೂಟ?
    ಅತಿ ಹೆಚ್ಚು ಸೂರ್ಯನ ಬೆಳಕನ್ನು ಪಡೆಯುವ ದೇಶಗಳ ಒಕ್ಕೂಟವನ್ನು ಸ್ಥಾಪಿಸಿ, ಸೌರ ವಿದ್ಯುತ್ ಬಳಕೆಯ ತಂತ್ರಜ್ಞಾನ, ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಬಗ್ಗೆ 2015ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡಿನ ಲಂಡನ್ ನಲ್ಲಿರುವ ವೆಂಬ್ಲೆ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ಈ ದೇಶಗಳನ್ನು ಸೂರ್ಯನ ಮಕ್ಕಳು ಎಂದು ಮೋದಿ ಉಲ್ಲೇಖಿಸಿದ್ದರು. 2016ರಲ್ಲಿ ಈ ಬಗ್ಗೆ ರೂಪುರೇಷೆ ಸಿದ್ಧವಾಗಿದ್ದು, ಈ ಒಪ್ಪಂದಕ್ಕೆ ಒಳಪಡಲು ಅಂದಿನಿಂದ 121 ದೇಶಗಳು ಸಹಿ ಹಾಕಿವೆ. 2018ರ ಮಾರ್ಚ್ ನಲ್ಲಿ ನವದೆಹಲಿಯಲ್ಲಿ ಮೊದಲ ಸಮ್ಮೇಳನ ಆಯೋಜನೆಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಾಣಿಗಳನ್ನು ದತ್ತು ಪಡೆದ ದರ್ಶನ್, ಸೃಜನ್ ಲೋಕೇಶ್, ದೇವರಾಜ್ ಕುಟುಂಬ!

    ಪ್ರಾಣಿಗಳನ್ನು ದತ್ತು ಪಡೆದ ದರ್ಶನ್, ಸೃಜನ್ ಲೋಕೇಶ್, ದೇವರಾಜ್ ಕುಟುಂಬ!

    ಮೈಸೂರು: ನಟರಾದ ದರ್ಶನ್, ಸೃಜನ್ ಲೋಕೇಶ್ ಹಾಗೂ ದೇವರಾಜ್ ಕುಟುಂಬಸ್ಥರು ಇಂದು ಪ್ರಾಣಿಗಳ ದತ್ತು ಸ್ವೀಕಾರ ಮಾಡಿದ್ರು. ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಪಡೆದಿದ್ದು, ನಟ ದೇವರಾಜ್ ಕುಟುಂಬ ಚಿರತೆ, ದರ್ಶನ್ ಮತ್ತು ಸೃಜನ್ ಲೋಕೇಶ್ ರಿಂದ ಜಿರಾಫೆ ಮರಿಯನ್ನು ದತ್ತು ಪಡೆಯಲಾಯಿತು.

    ಈ ವೇಳೆ ಜಿರಾಫೆ ಮರಿಗೆ `ತೂಗುಲೋಕ್’ ಎಂದು ಸೃಜನ್ ಲೋಕೇಶ್ ನಾಮಕರಣ ಮಾಡಿದ್ರು. ಈ ಹಿಂದೆ ಇಬ್ಬರು ಸೇರಿ ದತ್ತು ಪಡೆದ ಹುಲಿಗಳು ನಮ್ಮಂತೆಯೆ ಜೊತೆಯಾಗಿ ನಡೆಯುತ್ತಿವೆ. ಮೃಗಾಲಯದಲ್ಲಿ ಹುಲಿಗಳ ವಿಹಾರ ಕಂಡು ಸೃಜನ್ ಸಂತಸ ವ್ಯಕ್ತಪಡಿಸಿದ್ರು. ಹಾಸ್ಯ ನಟ ಕೀರ್ತಿ ಮೊಸಳೆಯನ್ನು ದತ್ತು ಸ್ವೀಕರಿಸಿದ್ರು.

    ಇತ್ತೀಚೆಗಷ್ಟೇ ದರ್ಶನ್ ಅವರು ಹುಲಿಯೊಂದನ್ನು ದತ್ತು ಪಡೆದಿದ್ದು, ಅದಕ್ಕೆ `ವಿನೀಶ್’ ಅಂತ ಹೆಸರಿಟ್ಟಿದ್ದಾರೆ. ನಾನು ಒಂದು ಹುಲಿನ ದತ್ತು ಪಡೆದುಕೊಂಡಿದ್ದು, ಅದರ ಹೆಸರು `ಅರ್ಜುನ’ ಎಂಬುದಾಗಿ ಇಟ್ಟಿದ್ದೇನೆ. ಒಟ್ಟಿನಲ್ಲಿ ಇಂದು ಎಲ್ಲರೂ ಸೇರಿ ಒಂದಷ್ಟು ಪ್ರಾಣಿಗಳನ್ನು ದತ್ತು ಪಡೆದುಕೊಂಡಿರುವುದು ಸಂತಸದ ವಿಚಾರ ಅಂತ ಸೃಜನ್ ಲೋಕೇಶ್ ತಿಳಿಸಿದ್ರು. ಇದನ್ನೂ ಓದಿ: ಕುಚುಕು ಗೆಳೆಯನನ್ನ ಹಿಂಬಾಲಿಸಿದ ಸೃಜನ್‍ಗೆ ದರ್ಶನ್ ಅಭಿನಂದನೆ

    ದರ್ಶನ್ ಕರೆ:
    ಇಂದು ನಾವು 5 ಸಾವಿರ ಅಥವಾ 10 ಸಾವಿರ ರೂ. ಗಳನ್ನು ಎಲ್ಲೋ ಕಳೆದು ಬಿಡ್ತೀವಿ. ಹೀಗಾಗಿ 1 ಸಾವಿರದಿಂದ ಹಿಡಿದು 1 ಲಕ್ಷದ 75 ಸಾವಿರದವರೆಗೆ ಪ್ರಾಣಿಗಳನ್ನು ಇಲ್ಲಿ ದತ್ತು ಪಡೆದುಕೊಳ್ಳಬಹುದು. ಅಷ್ಟು ಬೇಡ 10 ಅಥವಾ 20 ಸಾವಿರ ಖರ್ಚು ಮಾಡಿ ಜನರು ಪ್ರಾಣಿಗಳನ್ನು ದತ್ತು ಪಡೆದ್ರೆ ಅವುಗಳ ಸಂತತಿನೂ ಉಳಿಯುತ್ತದೆ. ಹಾಗೆಯೇ ಪ್ರಾಣಿಗಳನ್ನು ಸಾಕುವ ಖುಷಿಯೂ ನಮ್ಮದಾಗುತ್ತದೆ ಅಂತ ಸಲಹೆ ನೀಡಿದ್ರು.

    ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಸಾಧ್ಯವಿಲ್ಲ. ಹೀಗಾಗಿ ಇಲ್ಲೇ ಒಂದು ಪ್ರಾಣಿಯನ್ನು ಸಾಕಬಹುದು. ಹೀಗಾಗಿ ಎಲ್ಲಾ ಜನರು ಇಂತಹ ಒಂದು ಪ್ರಯೋಗಕ್ಕೆ ಕೈ ಜೋಡಿಸಿ ಅಂತ ದರ್ಶನ್ ಇದೇ ವೇಳೆ ಮನವಿ ಮಾಡಿಕೊಂಡರು.

    ಅರಣ್ಯ ಇಲಾಖೆ ರಾಯಾಭಾರಿಯಾದ ನಂತರ ಉತ್ತಮ ಗಾಳಿ ಸಿಕ್ಕಿದೆ. ಗಿಡ ಮರ ನೆಟ್ಟು ಸೆಲ್ಫಿ ತೆಗೆದುಕೊಳ್ಳುವುದು ದೊಡ್ಡದಲ್ಲ. ಕ್ರಮವಾಗಿ ಅರಣ್ಯ ಬೆಳೆಸಬೇಕು. ನಾವೂ ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದರಿಂದ ಪ್ರಾಣಿಗಳು ನಾಡಿಗೆ ಬರುತ್ತಿದೆ. ಯುವಕರು ದುಡ್ಡನ್ನು ವಿಕೆಂಡ್ ನೆಪದಲ್ಲಿ ಖರ್ಚು ಮಾಡುತ್ತಾರೆ. ಅದೇ ಹಣವನ್ನು ಉಳಿಸಿ ಪ್ರಾಣಿಗಳನ್ನ ದತ್ತು ಪಡೆಯಲಿ. ಕಾಡು ಪ್ರಾಣಿಗಳನ್ನ ಮನೆಯಲ್ಲಿ ಸಾಕಲು ಸಾಧ್ಯವಿಲ್ಲ. ಈ ಕಾರಣದಿಂದ ಮೃಗಾಲಯಕ್ಕೆ ಬಂದು ದತ್ತು ಪಡೆಯಿರಿ ಅಂತ ಹೇಳುವ ಮೂಲಕ ಪ್ರಾಣಿಗಳ ದತ್ತು ಸ್ವೀಕಾರ ಮಾಡಲು ಯುವಕರಿಗೆ ನಟ ದರ್ಶನ್ ಇದೇ ವೇಳೆ ಕರೆ ನೀಡಿದ್ರು.

    ದರ್ಶನ್ ಪ್ರೋತ್ಸಾಹ ಅಂದ್ರು ನಟ ದೇವರಾಜ್ ಪತ್ನಿ:
    ಇದೇ ವೇಳೆ ನಟ ಪ್ರಜ್ವಲ್ ತಾಯಿ ಮಾತನಾಡಿ, ತುಂಬಾ ಇಷ್ಟವಾಯಿತು. ನನ್ನ ಮಗ ದರ್ಶನ್ ಸರ್ ಅವರು ನನಗೆ ಮಾರ್ಗದರ್ಶನ ಮಾಡಿದ್ರು. ಹೀಗಾಗಿ ನಾನು ಚಿರತೆಯನ್ನು ದತ್ತು ಪಡೆದುಕೊಂಡಿದ್ದೇನೆ. ನನಗೆ ಪ್ರಾಣಿಗಳೆಂದರೆ ನನಗೆ ಮೊದಲಿನಿಂದಲೂ ತುಂಬಾ ಇಷ್ಟ. ಇದೀಗ ಅದಕ್ಕೆ ಪ್ರೋತ್ಸಾಹ ಕೊಟ್ಟಿದ್ದು ನನ್ನ ಮಗ. ಹೀಗಾಗಿ ತುಂಬಾ ಸಂತೋಷವಾಗ್ತಿದೆ. ಇತ್ತೀಚೆಗಷ್ಟೆ ನಾನು ಪ್ರಾಣಿಗಳನ್ನು ನೋಡಿಕೊಂಡು ಬಂದಿದ್ದೇನೆ ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ಜಾಗ್ವಾರ್’ ಖ್ಯಾತಿಯ ನಿಖಿಲ್ ಗೌಡಗೆ 28ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

    `ಜಾಗ್ವಾರ್’ ಖ್ಯಾತಿಯ ನಿಖಿಲ್ ಗೌಡಗೆ 28ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಮನೆಯ ಕುಡಿ ಜಾಗ್ವಾರ್ ಖ್ಯಾತಿಯ ನಿಖಿಲ್ ಗೌಡ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

    28ನೇ ವಸಂತಕ್ಕೆ ಕಾಲಿಟ್ಟ ನಿಖಿಲ್ ಗೌಡ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ನೂರಾರು ಸಂಖ್ಯೆಯ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ನಿಖಿಲ್ ನರೆದಿದ್ದವರನ್ನು ಸಂತೋಷ ಪಡಿಸಿದರು.

    ರಾಜಕೀಯ ಕೆಲಸ ಕಾರ್ಯಗಳ ನಿಮಿತ್ತ ತಂದೆ ಹೆಚ್ ಡಿ ಕುಮಾರಸ್ವಾಮಿ ಜೆಪಿ ನಗರದ ಮನೆಯಲ್ಲಿರಲಿಲ್ಲ. ಆದರೂ ನಿಖಿಲ್ ಹುಟ್ಟುಹಬ್ಬದ ಸಂಭ್ರಮ ಮುಗಿಲುಮುಟ್ಟಿತ್ತು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುನಿರೀಕ್ಷೆ ಹುಟ್ಟು ಹಾಕಿರುವ `ಕುರುಕ್ಷೇತ’್ರ ಚಿತ್ರ ಮಾರ್ಚ್‍ಗೆ ತೆರೆಕಾಣಲಿದೆ. ದರ್ಶನ್ ಅಭಿನಯನದ 50 ನೇ ಮತ್ತು ನಿಖಿಲ್ ಅಭಿನಯನದ 2ನೇ ಚಿತ್ರ. ಎಲ್ಲರಿಗೂ ಅಭಿನಂದನೆಗಳು. ಮುಂಬರುವ ಚುನಾವಣೆಯಲ್ಲಿ ತಂದೆಗೆ ಪ್ರಚಾರದಲ್ಲಿ ನೆರವಾಗುತ್ತೇನೆ. ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ. ಕುರುಕ್ಷೇತ್ರದ ಚಿತ್ರ ಗೆಲ್ಲುವ ವಿಶ್ವಾಸವಿದೆ. ಇದೀಗ ಬಜರಂಗಿ ಖ್ಯಾತಿಯ ಹರ್ಷ ಜೊತೆ `ಸೀತರಾಮಕಲ್ಯಾಣ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ ಎಂದರು.