Tag: ಸ್ಯಾಂಡಲ್ ವುಡ್ ಕ್ವೀನ್

  • ಕವಿಯಾಗಿ ಹೂವು ಬಗ್ಗೆ ಕವಿತೆ ಬರೆದ ಮೋಹಕತಾರೆ ರಮ್ಯಾ

    ಕವಿಯಾಗಿ ಹೂವು ಬಗ್ಗೆ ಕವಿತೆ ಬರೆದ ಮೋಹಕತಾರೆ ರಮ್ಯಾ

    ಅಲ್ಲು ಇಲ್ಲು ಎಲ್ಲೆಲ್ಲೂ ರಮ್ಯಾ  (Ramya ) ಮಿಂಚ್ತಿದ್ದಾರೆ. ಅಂದವಾದ ಹೂವಿನ (Flower) ಜೊತೆ ಚಂದವಾದ ಹೀರೋಯಿನ್‌ನ ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಹೂವು ಅರಳಿದೆ ರಮ್ಯಾ ಮೊಗದಲ್ಲಿ ಮಂದಹಾಸ ಮೂಡಿದೆ ಜೊತೆಗೆ ಈ ಚೆಲುವೆ ಪೋಣಿಸಿದ ಸಾಲುಗಳು (Poem) ಸಖತ್ ಸೌಂಡ್ ಮಾಡ್ತಿದೆ.

    ಮೋಹಕತಾರೆಯ ಹೊಸ ಅಪ್‌ಡೇಟ್ ನೊಡಿಕೊಂಡು ರಮ್ಯಾ ಬರೆದಿರುವ ಕವಿತೆಯ ಸಾರವನ್ನ ತಿಳಿದುಕೊಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸುರಲೋಕದ ಸುಂದರಿಯನ್ನ ಯಾರೂ ನೋಡಿಲ್ಲ ಅವರು ಕಾಣಿಸ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಸ್ಯಾಂಡಲ್‌ವುಡ್ ಸಿನಿಮಾ ಅಭಿಮಾನಿಗಳಿಗೆ ಮೋಹಕತಾರೆ ರಮ್ಯಾ ದೇವಲೋಕದ ಸುಂದರಿಯಂತೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ ಕೊಡ್ತಿರ್ತಾರೆ.

    ಸದ್ಯ ರಮ್ಯಾ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತಿದ್ದಾರೆ. ಈ ಕ್ಯೂಟ್ ಫೋಟೋಸ್ ನೋಡಿ ರಮ್ಯಾ ಅಭಿಮಾನಿಗಳು ಲೈಕ್ಸ್, ಕಾಮೆಂಟ್‌ಗಳ ಸುರಿಮಳೆ ಸುರಿಸ್ತಿದ್ದಾರೆ. ಫೋಟೋದಲ್ಲಿ ನಗ್ತಿರುವ ರಮ್ಯಾ ಮಂದಹಾಸವನ್ನ ಮನದಲ್ಲಿ ತುಂಬಿಕೊಳ್ತಿದ್ದಾರೆ ಈಕೆಯ ಅಭಿಮಾನಿಗಳು.

    ರಮ್ಯಾ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಗುಲಾಬಿ ಹೂವುಗಳ ಮುಂದೆ ನಿಂತು ಮುಗುಳು ನಗೆ ಕೊಟ್ಟಿದ್ದಾರೆ. ಈ ಸುಂದರಿಯ ಸ್ಮೈಲ್ ನೋಡಿ ಹೂವುಗಳು ಕೂಡ ಖುಷಿ ಪಟ್ಟಿದೆ ಅನ್ನೊದು ದೂರದಿಂದ ಬಂದ ಸಮಾಚಾರ. ಅಂದವಾದ ಫೋಟೋಗಳ ಜೊತೆ ಚಂದವಾದ ಸಾಲುಗಳನ್ನ ಕೂಡ ಪೋಣಿಸಿದ್ದಾರೆ ಮೋಹಕತಾರೆ.

     

    ನಿರ್ಮಾಪಕಿಯಾಗಿ ಹೊಸ ಅಧ್ಯಾಯ ಶುರು ಮಾಡಿರುವ ರಮ್ಯಾ ನಟಿಯಾಗಿ ಕೂಡ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಶೂಟಿಂಗ್ ಶುರು ಮಾಡುವ ಮೊದಲು ಒಂದು ವೆಕೇಷನ್‌ಗೆ ಹೋಗಿದ್ದಾರೆ ಅನ್ನೊದು ಮೂಲಗಳ ಮಾಹಿತಿ. ಹೂವು ಅಂದ… ರಮ್ಯಾ ನಗು ಚೆಂದ… ನಮ್ಗು ನಿಮ್ಗು ಇರಲಿ ಜನುಮ ಜನುಮಕ್ಕು ಅನುಬಂಧ ಅಂತಿದ್ದಾರೆ ಅಭಿಮಾನಿಗಳು.

  • ಅಭಿಮಾನಿಗಳಿಗೆ ನಾಳೆ  ಸಿಹಿ ಸುದ್ದಿ ಕೊಡ್ತಾರಂತೆ ‘ಸ್ಯಾಂಡಲ್ ವುಡ್ ಕ್ವೀನ್’ ರಮ್ಯಾ

    ಅಭಿಮಾನಿಗಳಿಗೆ ನಾಳೆ ಸಿಹಿ ಸುದ್ದಿ ಕೊಡ್ತಾರಂತೆ ‘ಸ್ಯಾಂಡಲ್ ವುಡ್ ಕ್ವೀನ್’ ರಮ್ಯಾ

    ದೇಶಕ್ಕೆಲ್ಲ ಒಂದು ಕಡೆ ಗಣೇಶ್ ಹಬ್ಬವಾದರೆ, ಮತ್ತೊಂದು ಕಡೆ ರಮ್ಯಾ ಅಭಿಮಾನಿಗಳಿಗೆ ಡಬಲ್ ಧಮಾಕಾ. ಯಾಕೆಂದರೆ, ಗಣೇಶ್ ಹಬ್ಬದ ದಿನದಂದು ಸ್ಯಾಂಡಲ್ ವುಡ್ ಕ್ವೀನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಲಿದ್ದಾರಂತೆ. ಈ ಕುರಿತು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾಳೆ ಹನ್ನೊಂದು ಗಂಟೆಗೆ ಸಿಹಿ ಸುದ್ದಿ ಕೊಡುವೆ. ಈ ಸುದ್ದಿಯನ್ನು ಕೊಡಲು ನಾನು ಎಕ್ಸೈಟ್ ಆಗಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

    RAMYA

    ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಲು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದೊಂದು ವರ್ಷದಿಂದ ಅವರು ಸಿನಿಮಾ ರಂಗಕ್ಕೆ ವಾಪಸ್ಸಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈಗದು ನಿಜವಾಗುವ ಕಾಲ ಬಂದಿದೆ. ಬಹುಶಃ ಅದೇ ಸುದ್ದಿಯನ್ನೇ ನಾಳೆ ಅಭಿಮಾನಿಗಳಿಗೆ ಕೊಡಲಿದ್ದಾರೆ ಎನ್ನುವುದು ಹಲವರ ಊಹೆ. ಅದು ನಿಜವೂ ಆಗಿರಬಹುದು. ಯಾಕೆಂದರೆ,  ಅನೇಕ ದಿನಗಳಿಂದ ಅವರು ಸಿನಿಮಾ ಸಂಬಂಧಿ ನಾನಾ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಸೋನುಗೆ ಚೈತ್ರಾ ಚಪ್ಪಲಿ ಗಿಫ್ಟ್ ಕೊಟ್ಟಿದ್ಯಾಕೆ..?

    ಮೂಲಗಳ ಪ್ರಕಾರ ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಲಿರುವ ಸಿನಿಮಾವನ್ನು ರಮ್ಯಾ ಅವರು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಇದೇ ಸಿನಿಮಾದಲ್ಲಿ ಅವರು ಪಾತ್ರವನ್ನೂ ಮಾಡಲಿದ್ದಾರಂತೆ. ಬಹುಶಃ ನಾಳೆ ಅದೇ ಸಿಹಿ ಸುದ್ದಿಯನ್ನು ಅವರು ಅಭಿಮಾನಿಗಳಿಗೆ ಕೊಡಬಹುದು ಎನ್ನಲಾಗುತ್ತಿದೆ. ಅದೇನು ಅಂತ ತಿಳಿದುಕೊಳ್ಳಲು ನಾಳೆವರೆಗೂ ಕಾಯಬೇಕು.

    Live Tv
    [brid partner=56869869 player=32851 video=960834 autoplay=true]

  • ಮೋಹಕತಾರೆ ರಮ್ಯಾಗೆ ಈಗ ಮದುವೆಯದ್ದೆ ಚಿಂತೆ: ಪದೇ ಪದೇ ಹುಡುಗನ ನೆನಪಿಸಿಕೊಳ್ತಿದ್ದಾರೆ ಪದ್ಮಾವತಿ

    ಮೋಹಕತಾರೆ ರಮ್ಯಾಗೆ ಈಗ ಮದುವೆಯದ್ದೆ ಚಿಂತೆ: ಪದೇ ಪದೇ ಹುಡುಗನ ನೆನಪಿಸಿಕೊಳ್ತಿದ್ದಾರೆ ಪದ್ಮಾವತಿ

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪದೇ ಪದೇ ಮದುವೆ ಬಗ್ಗೆಯೇ ಆಲೋಚನೆ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ಅವರು ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪೋಸ್ಟ್ ಮಾಡುತ್ತಿದ್ದಾರೆ. ಕಳೆದ ತಿಂಗಳಷ್ಟೇ ತನ್ನ ಹುಡುಗ ಹೇಗಿರಬೇಕು? ಅವನು ಗುಣಗಳು ಎಂತಿರಬೇಕು ಎನ್ನುವ ಅರ್ಥದಲ್ಲಿ ವಿಡಿಯೋವೊಂದನ್ನು ಹಾಕಿದ್ದರು. ಈ ಬಾರಿ ತಮ್ಮ ಮದುವೆ ಯಾಕಾಗಿಲ್ಲ ಎನ್ನುವುದರ ಬಗ್ಗೆ ಹಾಡಿನ ರೂಪದಲ್ಲಿ ಹೇಳಿದ್ದಾರೆ.

    ರಮ್ಯಾ ಜೊತೆ ಸಿನಿಮಾ ರಂಗಕ್ಕೆ ಬಂದ ಬಹುತೇಕ ನಟಿಯರು ಮದುವೆಯಾಗಿ, ಮಕ್ಕಳೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ. ಆದರೆ, ರಮ್ಯಾ ಮಾತ್ರ ಈವರೆಗೂ ಮದುವೆ ಆಗಿಲ್ಲ. ಹಾಗಾಗಿ ಯಾವಾಗ ಮದುವೆ ಆಗುತ್ತೀರಿ ಎಂದು ಅಭಿಮಾನಿಗಳು ಹಲವಾರು ಬಾರಿ ಕೇಳಿದ್ದುಂಟು. ಅಂತಹ ಪ್ರಶ್ನೆಗಳು ಎದುರಾದಾಗೊಮ್ಮೆ ಹಾರಿಕೆಯ ಉತ್ತರವನ್ನೇ ಕೊಡುತ್ತಾ ಬಂದಿದ್ದಾರೆ ರಮ್ಯಾ. ಈ ಬಾರಿ ವಿಶೇಷ ರೀತಿಯಲ್ಲಿ ಉತ್ತರವನ್ನು ನೀಡಿದ್ದಾರೆ. ಇದನ್ನೂ ಓದಿ:ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ

    RAMYA

    ತಾವಿನ್ನೂ ಮದುವೆ ಯಾಕಾಗಿಲ್ಲ ಎಂದು ಹೇಳುವುದಕ್ಕಾಗಿ ಹಾಡೊಂದನ್ನು ಪೋಸ್ಟ್ ಮಾಡಿದ್ದು, ಆ ಹಾಡಿನ ಸಾಲುಗಳಲ್ಲಿ ‘ನನ್ನ ಸೋಲ್ ಮೇಟ್ ಸತ್ತಿರಬಹುದು, ಬಹುಶಃ ನನಗೆ ಅಂತ ಯಾವುದೇ ಆತ್ಮ ಇಲ್ಲ ಅನಿಸುತ್ತಿದೆ’ ಎನ್ನುವ ಅರ್ಥ ಬರುವಂತಹ ವಿಷಯವಿದೆ. ಅದನ್ನೇ ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಹಂಚಿಕೊಂಡು ಕೆಲವು ಸಾಲುಗಳನ್ನೂ ಅವರೂ ಹಾಡಿದ್ದಾರೆ.

    ಈ ಹಿಂದೆ ತಾವು ಮದುವೆ ಮಾಡುವ ಹುಡುಗನ ಬಗ್ಗೆಯೂ ಗುಣಗಾನ ಮಾಡಿದ್ದ ರಮ್ಯಾ, ಪರಿಶುದ್ಧ ಆತ್ಮವುಳ್ಳ ಹುಡುಗ ಬೇಕು ಎಂದು ಹೇಳಿದ್ದರು. ಅಲ್ಲದೇ, ಭಾವನಾತ್ಮಕ ಪ್ರಬುದ್ಧತೆಯನ್ನು ಆತ ಹೊಂದಿರಬೇಕು ಎಂದು ಬಯಸಿದ್ದರು. ಸದ್ಯ ರಮ್ಯಾ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಬಗ್ಗೆಯೂ ಸುಳಿವು ನೀಡಿದ್ದು, ಮದುವೆ ಬಗ್ಗೆ ಮಾತ್ರ ಅವರು ಯಾವುದೇ ಸುಳಿವೂ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಹೊಂಬಾಳೆ ಫಿಲ್ಸ್ಮ್ ಬ್ಯಾನರ್ ನಲ್ಲೇ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ  ಕಮ್ ಬ್ಯಾಕ್

    ಹೊಂಬಾಳೆ ಫಿಲ್ಸ್ಮ್ ಬ್ಯಾನರ್ ನಲ್ಲೇ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಮ್ ಬ್ಯಾಕ್

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಮತ್ತೆ ಸಿನಿಮಾ ರಂಗಕ್ಕೆ ಬರುವ ಕುರಿತು ಹಲವು ತಿಂಗಳಿಂದ ಚರ್ಚೆ ನಡೆಯುತ್ತಿದೆ. ಅಂದುಕೊಂಡಂತೆ ಆಗಿದ್ದರೆ, ಪುನೀತ್ ರಾಜ್ ಕುಮಾರ್ ಅವರ ಜೊತೆಯೇ ಸಿನಿಮಾ ರಂಗಕ್ಕೆ ರಮ್ಯಾ ವಾಪಸ್ಸಾಗಬೇಕಿತ್ತು. ಈ ಕುರಿತು ರಮ್ಯಾ ಮತ್ತು ಪುನೀತ್ ರಾಜ್ ಕುಮಾರ್ ಮಾತುಕತೆ ಆಡಿಯೂ ಆಗಿತ್ತು. ಆದರೆ, ವಿಧಿ ಅದಕ್ಕೆ ಅವಕಾಶ ಕೊಡದೇ ಅಪ್ಪು ಅವರನ್ನು ಕರೆದುಕೊಂಡುಬಿಟ್ಟ. ಹಾಗಾಗಿ ರಮ್ಯಾ ಕನಸು ಕನಸಾಗಿಯೇ ಉಳಿಯಿತು.

    RAMYA

    ಸಿನಿಮಾ ರಂಗಕ್ಕೆ ರಮ್ಯಾ ವಾಪಸ್ಸಾಗಬೇಕು ಎನ್ನುವುದು ಪುನೀತ್ ರಾಜ್ ಕುಮಾರ್ ಕನಸಾಗಿತ್ತು. ಅದನ್ನು ನನಸು ಮಾಡುವುದಕ್ಕಾಗಿ ಮತ್ತೆ ರಮ್ಯಾ ವಾಪಸ್ಸಾಗುತ್ತಿದ್ದಾರೆ. ಆದರೆ, ಯಾವ ಸಿನಿಮಾದ ಮೂಲಕ ಎನ್ನುವುದೇ ಸಸ್ಪನ್ಸ್. ಇತ್ತೀಚೆಗಂತೂ ಸಿನಿಮಾ ಸಂಬಂಧಿ ಅನೇಕ ಚಟುವಟಿಕೆಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಹೊಸ ಕಲಾವಿದರ, ತಂತ್ರಜ್ಞರ ಸಿನಿಮಾಗಳಿಗೆ ವಿಶ್ ಮಾಡುತ್ತಿದ್ದಾರೆ. ತಮ್ಮ ಕೈಲಾದಷ್ಟು ಪ್ರಚಾರ ಕೂಡ ಮಾಡುತ್ತಿದ್ದಾರೆ. ಹಾಗಾಗಿ ಸಿನಿಮಾ ರಂಗಕ್ಕೆ ಅವರು ವಾಪಸ್ಸು ಬರುವುದು ಪಕ್ಕಾ ಆಗಿದೆ. ಇದನ್ನೂ ಓದಿ:Breaking-ಬಿಗ್ ಬಾಸ್ ಸೀಸನ್ 8 ಶೂಟಿಂಗ್ ಶುರು: ಪ್ರೊಮೋ ಚಿತ್ರೀಕರಣದಲ್ಲಿ ಸುದೀಪ್ ಭಾಗಿ

    ಮೊನ್ನೆಯಷ್ಟೇ ಹೊಂಬಾಳೆ ಫಿಲ್ಮ್ಸ್ ‍ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಹೊಯ್ಸಳ ಸಿನಿಮಾದ ಶೂಟಿಂಗ್ ಸೆಟ್ ಗೂ ಹೋಗಿದ್ದ ರಮ್ಯಾ, ಕೆಲ ಹೊತ್ತು ಅಲ್ಲಿ ಕಳೆದಿದ್ದಾರೆ. ಮತ್ತಷ್ಟು ಇದೇ ಬ್ಯಾನರ್ ನಲ್ಲಿ ಸಿನಿಮಾ ಮಾಡುವ ಮಾತುಕತೆಯನ್ನೂ ಆಡಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಇದೇ ಬ್ಯಾನರ್ ಮೂಲಕವೇ ರಮ್ಯಾ ಸ್ಯಾಂಡಲ್ ವುಡ್ ಗೆ ವಾಪಸ್ಸಾಗಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ. ಪುನೀತ್ ಕನಸನ್ನು ಇದೇ ಬ್ಯಾನರ್ ಮೂಲಕ ನನಸಾಗಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಲೈವ್ ಬಂದಿದ್ದೇ ಬಂದಿದ್ದು ರಮ್ಯಾ ಫುಲ್ ಟ್ರೋಲ್..!

    ಲೈವ್ ಬಂದಿದ್ದೇ ಬಂದಿದ್ದು ರಮ್ಯಾ ಫುಲ್ ಟ್ರೋಲ್..!

    – ಕ್ವೀನ್ ಬ್ಯೂಟಿಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್, ಮೋಹಕ ನಟಿ ರಮ್ಯಾ ಅವರು ಹಲವು ವರ್ಷಗಳ ಬಳಿಕ ಲೈವ್ ಬಂದು ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ. ಅಲ್ಲದೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬರೀ ರಮ್ಯಾರದ್ದೇ ಹವಾ ಎನ್ನುವಂತಾಗಿದೆ.

    ಹೌದು. ಶುಕ್ರವಾರ ರಾತ್ರಿ ಆರ್ ಜೆ ಒಬ್ಬರು, ರಮ್ಯಾ ಅವರನ್ನು ಇನ್‍ಸ್ಟಾದಲ್ಲಿ ಲೈವ್ ಗೆ ಕೂರಿಸಿದ್ದಾರೆ. ಈ ವೇಳೆ ರಮ್ಯಾ ತಮ್ಮ ಹಲವು ವಿಚಾರಗಳನ್ನು ಅವರೊಂದಿಗೆ ಹಂಚಿಕೊಂಡಿದ್ದಾರೆ. ಮದುವೆ, ಊಟ, ಇಷ್ಟವಾಗಿರುವ ವಸ್ತುಗಳು, ಬ್ಯೂಟಿ ಸೀಕ್ರೆಟ್ ಬಗ್ಗೆ ರಮ್ಯಾ ಅವರು ಲೈವ್ ನಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ನಟಿ ಲೈವ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಆಕೆಗಾಗಿ ಕಾಯುತ್ತಿದ್ದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಲೈವ್ ನಿಂದ ಅವರ ಫೋಟೋಗಳನ್ನು ಕಟ್ ಮಾಡಿಕೊಂಡು ವೈರಲ್ ಮಾಡಿದ್ದಾರೆ. ಇದನ್ನೂ ಓದಿ: ನಾನು ಇನ್ನೂ ಲಸಿಕೆ ಪಡೆದುಕೊಂಡಿಲ್ಲ: ರಮ್ಯಾ

    ಸದ್ಯ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗಿದ್ದಾರೆ. ಇಷ್ಟು ದಿನ ಕೆಲವು ಫೋಟೋಗಳನ್ನು ಮಾತ್ರ ಶೇರ್ ಮಾಡಿಕೊಳ್ಳುತ್ತಿದ್ದ ರಮ್ಯಾ, ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಅಭಿಮಾನಿಗಳಿಗೂ ಅವರನ್ನು ನೋಡುವ ಕುತೂಹಲ ಹೆಚ್ಚಾಗಿತ್ತು. ಇದೀಗ ಏಕಾಏಕಿ ಲೈವ್ ಗೆ ಬಂದು ರಮ್ಯಾ ತಮ್ಮ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಕೊನೆಗೂ ಲೈವ್ ಬಂದು ತಮ್ಮ ದರ್ಶನ ಮಾಡಿಸಿದ್ದರಿಂದ ಅಭಿಮಾನಿಗಳು ನಟಿಯ ಬ್ಯೂಟಿಗೆ ಫಿದಾ ಆಗಿದ್ದಾರೆ. ಹಲವು ವರ್ಷಗಳ ಬಳಿಕ ಕಂಡ ನಟಿಯನ್ನು ಮತ್ತೊಮ್ಮೆ ಚಿತ್ರರಂಗಕ್ಕೆ ಬರುವಂತೆ ಒತ್ತಾಯಿಸಿ ಟ್ರೋಲ್ ಮಾಡಿದ್ದಾರೆ. ಕೇವಲ ಫೋಟೋಗಳು ಮಾತ್ರವಲ್ಲದೆ ಹಾಡುಗಳನ್ನು ಕೂಡ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನೂ ಓದಿ: ನನ್ನ ಮದುವೆಗೆ ಯಾರೂ ಬರಲ್ಲ ಅಂತೆ: ರಮ್ಯಾ

    ‘ಯಾರೇ ಬರಲಿ, ಯಾರೇ ಇರಲಿ, ನಿನ್ನ ರೇಂಜಿಗೆ ಯಾರೂ ಇಲ್ಲ’ ಎಂದು ನಟಿಯ ಬ್ಯೂಟಿಯನ್ನು ಅಭಿಮಾನಿಗಳು ಬಣ್ಣಿಸಿದ್ದಾರೆ. ಅಲ್ಲದೆ ‘ನೀವು ನಮ್ಮ ಆಲ್ ಟೈಂ ಪೇವರೇಟ್.. ಕನ್ನಡ ಚಿತ್ರರಂಗ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದೆ. ದಯವಿಟ್ಟು ಮತ್ತೆ ನಟಿಸಿ’ ಎಂದು ಒತ್ತಡ ಹಾಕಿದ್ದಾರೆ. ಇನ್ನೂ ‘ಲೈವ್ ಬಂದಿದಕ್ಕೇ ಇಷ್ಟೊಂದು ಹವಾ, ಇನ್ನು ತೆರೆ ಮೇಲೆ ಬಂದ್ರೆ ಹೆಂಗೆ..’ ಎಂದು ಪ್ರಶ್ನಿಸುವ ಮೂಲಕ ಟ್ರೋಲ್ ಮಾಡಿದ್ದಾರೆ. ಇತ್ತ ನಟಿ ಕೂಡ ಮತ್ತೊಮ್ಮೆ ತಮ್ಮ ಇನ್ ಸ್ಟಾ ಖಾತೆಯಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಬಳಿ ಎಲ್ಲರಿಗೂ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ ಕ್ಷಮಿಸಿ ಎಂದು ಹೇಳುತ್ತಾ ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ: ನಾನು ಈ ಮೂರು ವಸ್ತುಗಳನ್ನು ಮರೆಯುತ್ತೇನೆ: ರಮ್ಯಾ

    ಒಟ್ಟಿನಲ್ಲಿ ಇದ್ದಷ್ಟು ದಿನ ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿದ್ದ ರಮ್ಯಾ ಅವರು ಕ್ರಮೇಣ ರಾಜಕಾರಣದತ್ತ ಮುಖ ಮಾಡಿದ್ದರು. ಹೀಗಾಗಿ ಚಿತ್ರರಂಗದಿಂದ ಕೊಂಚ ದೂರವೇ ಉಳಿದಿದ್ದು, ಅಭಿಮಾನಿಗಳು ಅವರನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದರು. ತಮ್ಮ ನಟನೆ ಹಾಗೂ ಬ್ಯೂಟಿಯಿಂದಲೇ ಮನೆಮಾತಾಗಿದ್ದ ಅವರನ್ನು ಇದೀಗ ಹಲವು ಸಮಯಗಳ ಬಳಿಕ ಕಂಡ ಅಭಿಮಾನಿಗಳು ಪುಳಕಿತರಾಗಿದ್ದಂತೂ ಸತ್ಯ.