Tag: ಸ್ಯಾಂಡಲ್ ವುಟ್

  • ಜೇಮ್ಸ್ ಸಿನಿಮಾ ನೋಡಿಲ್ಲ, ನೋಡ್ತೀನಿ: ಜ್ಯೂ.ಎನ್.ಟಿ.ಆರ್

    ಜೇಮ್ಸ್ ಸಿನಿಮಾ ನೋಡಿಲ್ಲ, ನೋಡ್ತೀನಿ: ಜ್ಯೂ.ಎನ್.ಟಿ.ಆರ್

    ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ತಮ್ಮ ಆರ್.ಆರ್.ಆರ್ ಸಿನಿಮಾದ ಕಾರ್ಯಕ್ರಮಕ್ಕಾಗಿ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಆತ್ಮೀಯ ಸ್ನೇಹಿತರಾದ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ನೋಡುವುದಕ್ಕೆ ಆಗಿಲ್ಲ. ಆರ್.ಆರ್.ಆರ್ ಸಿನಿಮಾದ ಬಿಡುಗಡೆಯ ಬ್ಯುಸಿಯಲ್ಲಿರುವೆ. ಇದು ಸಿನಿಮಾ ರಿಲೀಸ್ ಆದ ತಕ್ಷಣವೇ ಜೇಮ್ಸ್ ಸಿನಿಮಾ ನೋಡುವೆ’ ಎಂದಿದ್ದಾರೆ ಜ್ಯೂನಿಯರ್.

    ಜ್ಯೂ.ಎನ್ಟಿಆರ್ ಮತ್ತು ಪುನೀತ್ ರಾಜ್ ಕುಮಾರ್ ಸ್ನೇಹ ಗಾಢವಾದದ್ದು. ಗೆಳೆತನದ ಕಾರಣಕ್ಕಾಗಿ ಪುನೀತ್ ಅವರ ಚಿತ್ರಕ್ಕೆ ಜೂ.ಎನ್.ಟಿ.ಆರ್ ಹಾಡು ಹೇಳಿದ್ದರು. ಇವರ ಕಾರ್ಯಕ್ರಮಕ್ಕಾಗಿ ಹಲವು ಬಾರಿ ಪುನೀತ್ ರಾಜ್ ಕುಮಾರ್ ಹೈದರಾಬಾದ್ ಗೆ ಹೋಗಿದ್ದಾರೆ. ಅಷ್ಟೊಂದು ಸ್ನೇಹ ಇವರಲ್ಲಿತ್ತು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

    ಪುನೀತ್ ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಜ್ಯೂನಿಯರ್ ಚಿತ್ರವೂ ರಿಲೀಸ್ ಆಗುತ್ತಿದೆ. ಜೇಮ್ಸ್ ಒಳ್ಳೆಯ ಓಪನಿಂಗ್ ಪಡೆದಿದೆ. ಆರ್.ಆರ್.ಆರ್. ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ ಸಾವಿರಾರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆಯಂತೆ. ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದೆ. ಇದನ್ನೂ ಓದಿ : ನವೀನ್ ಸಜ್ಜು ಹೀರೋ: ಯಾರಿವ ಮುತ್ತು ವಿತ್? Exclusive Photos

    ರಾಮ್ ಚರಣ್ ತೇಜ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಕಾಂಬಿನೇಷನ್ ನ ಮೊದಲ ಸಿನಿಮಾವಿದು. ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಎಂ.ಎಂ.ಕೀರವಾಣಿ ಸಂಗೀತ  ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಹಿಟ್ ಆಗಿವೆ. ಟ್ರೇಲರ್ ಕೂಡ ಭರವಸೆ ಮೂಡಿಸಿದೆ. ಸಿನಿಮಾ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

  • ಪುನೀತ್ ಹುಟ್ಟು ಹಬ್ಬಕ್ಕೆ ತಮಿಳು ನಟ ವಿಶಾಲ್ ಮೆಚ್ಚುಗೆ ಕೆಲಸ

    ಪುನೀತ್ ಹುಟ್ಟು ಹಬ್ಬಕ್ಕೆ ತಮಿಳು ನಟ ವಿಶಾಲ್ ಮೆಚ್ಚುಗೆ ಕೆಲಸ

    ಪುನೀತ್ ರಾಜ್ ಕುಮಾರ್ ಓದಿಸುತ್ತಿದ್ದ ಅಷ್ಟೂ ಮಕ್ಕಳನ್ನು ನಾನು ದತ್ತು ಪಡೆದುಕೊಳ್ಳುವೆ ಎಂದು ಹೇಳುವ ಮೂಲಕ ಪುನೀತ್ ಅವರ ಕನಸನ್ನು ಜೀವಂತವಾಗಿ ಇಟ್ಟರು ತಮಿಳು ನಟ ವಿಶಾಲ್. ಕನ್ನಡದ ನಟರು ಮೌನವಾಗಿದ್ದ ಆ ಹೊತ್ತಿನಲ್ಲಿ ವಿಶಾಲ್ ಮಾತು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

    ನಂತರ ಪುನೀತ್ ರಾಜ್ ಕುಮಾರ್ ಅವರ ಮನೆಗೂ ವಿಶಾಲ್ ಬಂದರು. ಪುನೀತ್ ಅವರ ಹೆಸರಿನಲ್ಲಿ ಏನೆಲ್ಲ ಮಾಡಬಹುದು ಎಂಬ ಚರ್ಚೆ ಕೂಡ ಮಾಡಿದ್ದಾರೆ ಎನ್ನಲಾಗುತ್ತಿದೆ. ಆ ಕೆಲಸ ಇನ್ನೂ ನಡೆಯುತ್ತಿದೆ. ಅಷ್ಟರಲ್ಲಿ ಪುನೀತ್ ಅವರ ಹೆಸರಿನಲ್ಲಿ ಮತ್ತೊಂದು ಕೆಲಸ ಮಾಡಿದ್ದಾರೆ ವಿಶಾಲ್. ಈ ಮೂಲಕ ಪುನೀತ್ ಹುಟ್ಟು ಹಬ್ಬವನ್ನು ಸಾರ್ಥಕಗೊಳಿಸಿದ್ದಾರೆ. ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿಆರ್.ಆರ್.ಆರ್ ಮೆಗಾ ಪ್ರೀ ರಿಲೀಸ್ ಇವೆಂಟ್ : ಏನೆಲ್ಲ ವಿಶೇಷ?

    ಪುನೀತ್ ಅವರಿಗೆ ತಮ್ಮ ಹುಟ್ಟು ಹಬ್ಬದ ದಿನದಂದು ಕೇಕ್ ಕತ್ತರಿಸುವುದು, ಹಾಲಿನ ಅಭಿಷೇಕ, ಕಟೌಟ್ ಸಂಸ್ಕೃತಿ ಇದಾವುದೂ ಇಷ್ಟವಿರಲಿಲ್ಲ. ‘ನನ್ನ ಹುಟ್ಟು ಹಬ್ಬವನ್ನು ಅನಾಥರಿಗೆ, ವೃದ್ಧಾಶ್ರಮಗಳಿಗೆ, ಮಕ್ಕಳಿಗೆ ಸಹಾಯ ಮಾಡುವ ಮೂಲಕ ಆಚರಿಸಿ’ ಎಂದು ಕರೆಕೊಟ್ಟಿದ್ದರು ಅಪ್ಪು. ಅದನ್ನು ವಿಶಾಲ್ ಮಾಡಿದ್ದಾರೆ. ತಮಿಳು ನಾಡಿನ 200ಕ್ಕೂ ಹೆಚ್ಚು ವೃದ್ಧಾಶ್ರಮಗಳಿಗೆ ಅವರು ಅನ್ನದಾನ ಮಾಡಿದ್ದಾರೆ. ಇದೊಂದು ಸಾರ್ಥಕ ಕ್ಷಣವೆಂದು ಅವರು ಸೋಷಿಯಲ್ ಮೀಡಿಯಾದಲ್ಲೂ ಹೇಳಿದ್ದಾರೆ.

    “ಅನ್ನದಾನ ಮಾಡಿದಾಗ ಹಿರಿಯರು ಅಪ್ಪುಗೆ ಆರ್ಶಿವಾದ ಮಾಡಿದರು. ಅವರ ಖುಷಿಯಲ್ಲಿ ನಾನು ಅಪ್ಪುವನ್ನು ಕಂಡಿದ್ದೇನೆ. ಪುನೀತ್ ಅವರಿಗೆ ಗೌರವ ಸೂಚಿಸಲು ಇದ್ದಕ್ಕಿಂತ ಉತ್ತಮ ಕೆಲಸವಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ. ‘ನೀವು ನಮ್ಮೊಂದಿಗೆ ಸದಾ ಜೀವಂತ’ ಎಂದು ಹುಟ್ಟು ಹಬ್ಬಕ್ಕೂ ಹಾರೈಸಿದ್ದಾರೆ ವಿಶಾಲ್.