ಸ್ಯಾಂಡಲ್‌ವುಡ್‌ನ (Sandalwood) ಸಿಂಹಪ್ರಿಯ (Simhapriya) ಜೋಡಿ ಈ ವರ್ಷ ಜನವರಿ 26ಕ್ಕೆ ಹಸೆಮಣೆ ಏರಿದ್ದರು. ಇಷ್ಟು ದಿನ ಮದುವೆ, ಹನಿಮೂನ್ ಎಂದು ಬ್ಯುಸಿಯಾಗಿದ್ದ ವಸಿಷ್ಠ ಸಿಂಹ- ಹರಿಪ್ರಿಯಾ (Haripriya) ಜೋಡಿ ಮತ್ತೆ ಸಿನಿಮಾ ಕೆಲಸದತ್ತ ಮುಖ ಮಾಡಿದ್ದಾರೆ. ಈ ಬೆನ್ನಲ್ಲೇ ಹರಿಪ್ರಿಯಾ ಅವರು ಗುಡ್ ನ್ಯೂಸ್ ಹೇಳುವುದಾಗಿ ಬಿಗ್ ಅಪ್‌ಡೇಟ್ ನೀಡಿದ್ದಾರೆ.
ಎರಡೂವರೆ ವರ್ಷಗಳು ಪ್ರೀತಿಸಿದ್ದ ಸಿಂಹಪ್ರಿಯಾ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಬಳಿಕ ಮೈಸೂರಿನಲ್ಲಿ ವಸಿಷ್ಠ ಸಿಂಹ (Vasista Simha) ಮತ್ತು ಹರಿಪ್ರಿಯಾ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಎರಡು ತಿಂಗಳು ಕಳೆದಿದೆ. ಈಗ ಗುಡ್ ನ್ಯೂಸ್ ಬಗ್ಗೆ ನಟಿ ಮಾತನಾಡಿದ್ದಾರೆ.
ಹೆಸರೇನು ಮೇಡಮ್, ಯಾವಾಗ ಅನೌನ್ಸ್ ಮಾಡ್ತೀರಾ, ಕೇಳಿದ್ದು ನಿಜಾನಾ, ಗುಡ್ ನ್ಯೂಸ್ ಎಂಬ ಮೆಸೇಜ್ ಇರುವ ಸ್ಕ್ರಿನ್ ಶಾಟ್‌ನ ನಟಿ ಹರಿಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನಗೆ ಗೊತ್ತು ನೀವೆಲ್ಲರೂ ಬಹುಶಃ ಏನೆಂದು ತಿಳಿಯುವ ಕುತೂಹಲ ಹೊಂದಿರುತ್ತೀರಿ. ಅನೌನ್ಸ್ ಮಾಡುವ ಮೊದಲು ಒಂದು ಊಹೆ ಮಾಡಿ ಎಂದು ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹರಿಪ್ರಿಯಾ ಈ ಪೋಸ್ಟ್ ಅಪ್‌ಡೇಟ್ ಮಾಡ್ತಿದ್ದಂತೆ ಅಭಿಮಾನಿಗಳು ಸಖತ್ ಆಗಿಯೇ ಕಾಮೆಂಟ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಮರಿ ಸಿಂಹ ಅಥವಾ ಸಿಂಹಿಣಿ ಬರುತ್ತಿದ್ದಾರಾ? ಸಿನಿಮಾ ಅಪ್‌ಡೇಟ್ ಬಗ್ಗೆ ಗುಡ್ ನ್ಯೂಸ್ ಹೇಳ್ತೀದ್ದೀರಾ ಎಂದು ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ. ಪ್ರೆಗ್ನೆನ್ಸಿ ವಿಚಾರಯನ್ನೇ ಇರಬೇಕು ಎಂದು ಅನೇಕರು ಕುತೂಹಲ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಗುಡ್ ನ್ಯೂಸ್ ಎನು ಎಂಬುದನ್ನ ನಟಿ ಹೇಳುವವರೆಗೂ ಕಾದುನೋಡಬೇಕಿದೆ.
ಕನ್ನಡದ `ಕಾಂತಾರ’ (Kantara) ಗಡಿ ದಾಟಿ ಬೆಳೆದಿದೆ. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಸದಾ ಒಂದಲ್ಲಾ ಒಂದು ಸುದ್ದಿಯ ಮೂಲಕ ಸದ್ದು ಮಾಡುತ್ತಲೇ ಇದೆ. `ಕಾಂತಾರ’ ಚಿತ್ರ ಬಿಡುಗಡೆ ಆದ ದಿನದಿಂದಲೂ ಸಾಕಷ್ಟು ದಾಖಲೆಗಳನ್ನ ಬ್ರೇಕ್ ಮಾಡಿದೆ. ಈಗ ಕನ್ನಡಿಗರು ಮತ್ತೆ ಹೆಮ್ಮೆಪಡುವಂತಹ ಸಿಹಿಸುದ್ದಿಯನ್ನ ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ. ಇದನ್ನೂ ಓದಿ: 12 ವರ್ಷದ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ಯಾಕೆ? ಡಿವೋರ್ಸ್ ಬಗ್ಗೆ ಬಾಯ್ಬಿಟ್ಟ ಅನುಪ್ರಭಾಕರ್
ಮೊದಲು `ಕಾಂತಾರ’ ಬಿಡುಗಡೆ ಆಗಿದ್ದು ಕನ್ನಡದಲ್ಲಿ ಮಾತ್ರ. ಮೊದಲ ದಿನವೇ ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತು. ಪರಭಾಷೆ ಪ್ರೇಕ್ಷಕರು ಕೂಡ ಆಸಕ್ತಿ ತೋರಿಸಿದ್ದರಿಂದ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಯಿತು. ಎಲ್ಲ ಭಾಷೆಗಳಿಂದಲೂ ಉತ್ತಮ ಕಲೆಕ್ಷನ್ ಮಾಡಿತ್ತು. ಒಟಿಟಿ ಪ್ರೇಕ್ಷಕರಿಗಾಗಿ ಇಂಗ್ಲಿಷ್ ವರ್ಷನ್ ಕೂಡ ರಿಲೀಸ್ ಆಗಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಮಾಡಲಾಗುತ್ತಿರುವುದು ವಿಶೇಷ. ಈ ಬಗ್ಗೆ ನಿರ್ಮಾಣ ಸಂಸ್ಥೆ ಅಪ್‌ಡೇಟ್ ನೀಡಿದೆ.
ಈ ವಿಷಯ ತಿಳಿಸಲು ನಮಗೆ ಖುಷಿ ಎನಿಸುತ್ತಿದೆ. ಅಂತಾರಾಷ್ಟ್ರೀಯ ಪ್ರೇಕ್ಷಕರಿಂದ ಬೇಡಿಕೆ ಬಂದಿರುವುದಕ್ಕೆ ಧನ್ಯವಾದಗಳು. ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಯಲ್ಲಿ `ಕಾಂತಾರ’ ಚಿತ್ರವನ್ನು ಎಡಿಟ್ ಮಾಡಲಾಗುತ್ತಿದೆ ಎಂದು ಇಟಾಲಿಯನ್ ಭಾಷೆಯಲ್ಲಿ ಹೊಂಬಾಳೆ ಫಿಲ್ಮ್ಸ್ (Hombale Films) ಟ್ವೀಟ್ ಮಾಡಿದೆ. ಜಪಾನಿ ಭಾಷೆಯಲ್ಲೂ ರಿಲೀಸ್ ಮಾಡಿ ಎಂದು ನೆಟ್ಟಿಗರು ಬೇಡಿಕೆ ಇಟ್ಟಿದ್ದಾರೆ.
We are mere custodians of the gifts offered by the Mother Nature. #Kantara is a dialogue to reclaim the holistic balance b/w Mother Nature & human activity through age old traditions & culture.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು `ಕಾಂತಾರ 2′ ಚಿತ್ರದ ಸ್ಟೋರಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಾಗಿ ಸಕಲ ತಯಾರಿ ಕೂಡ ಮಾಡ್ತಿದ್ದಾರೆ. ʻಕಾಂತಾರʼ ಪಾರ್ಟ್ 2ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.
ಸ್ಯಾಂಡಲ್‌ವುಡ್‌ನ (Sandalwood) ಪ್ರತಿಭಾನ್ವಿತ ನಟಿ ಅನುಪ್ರಭಾಕರ್ (Anuprabhakar) ಅವರು ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. `ಹೃದಯ ಹೃದಯ’ (Hrudaya Hrudaya) ಚಿತ್ರದ ಮೂಲ ಶಿವಣ್ಣನಿಗೆ ನಾಯಕಿಯಾದರು. ಕೆರಿಯರ್ ಪೀಕ್‌ನಲ್ಲಿರುವಾಗಲೇ ಹಿರಿಯ ನಟಿ ಜಯಂತಿ (Jayanthi) ಅವರ ಮಗ ಕೃಷ್ಣ ಕುಮಾರ್ ಜೊತೆ ಅನು ಹಸೆಮಣೆ ಏರಿದ್ದರು. 12 ವರ್ಷಗಳ ದಾಂಪತ್ಯಕ್ಕೆ ಡಿವೋರ್ಸ್ (Divorce) ತೆಗೆದುಕೊಳ್ಳುವ ಮೂಲಕ ಅಂತ್ಯವಾಗಿದ್ದೇಕೆ ಎಂಬುದರ ಬಗ್ಗೆ ಈಗ ನಟಿ ಅನುಪ್ರಭಾಕರ್ ಇದೀಗ ಮೌನ ಮುರಿದಿದ್ದಾರೆ. ಮೊದಲ ಮದುವೆ ಬಗ್ಗೆ ಮೊದಲ ಬಾರಿಗೆ ನಟಿ ಮಾತನಾಡಿದ್ದಾರೆ.
ಕನ್ನಡ, ಇಂಗ್ಲೀಷ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಅನುಪ್ರಭಾಕರ್ (Anuprabhakar) ಅವರು ನಟಿ ಜಯಂತಿ ಜೊತೆಗಿನ ಒಡನಾಟದ ಬಗ್ಗೆ ಮತ್ತು ಮೊದಲ ಪತಿ ಜೊತೆಗಿನ ಡಿವೋರ್ಸ್ ಬಗ್ಗೆ ಮೊದಲ ಬಾರಿಗೆ ನಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಡಿವೋರ್ಸ್ ನಂತರ ವಾಪನ್ ನಾನು, ನನ್ನ ತಾಯಿ ಮನೆಗೆ ಬಂದೆ. ನನ್ನ ಬಗ್ಗೆ ಹುಡುಕಿದರೆ ಬರುವ ಮೊದಲ ವಿಚಾರವೇ ನನ್ನ ಡಿವೋರ್ಸ್. ನೆಗೆಟಿವ್ ಕಾಮೆಂಟ್ ನಮ್ಮ ಜೀವನದ ಒಂದು ಭಾಗ. ಅದನ್ನು ಸ್ವೀಕರಿಸಿ, ಮುಂದೆ ಸಾಗಿಸಬೇಕು. ಮದುವೆ ಆದ್ಮೇಲೆ ನಾನು ಕೆಲಸ ನಿಲ್ಲಿಸಬಾರದೆಂದು ಎಂದು ಜಯಂತಿ ಅಮ್ಮನವರು ಹೇಳಿದ್ದರು. ಮದುವೆ ಆದ ವರ್ಷವೇ 9 ಸಿನಿಮಾಗಳಲ್ಲಿ ನಟಿಸಿದೆ. ಮೊದಲಿನಿಂದಲೂ ಡ್ರೆಸ್ ತುಂಬಾ ಸಿಂಪಲ್ ಹಾಕಿಕೊಳ್ಳುವುದು. ಗ್ರ‍್ಯಾಂಡ್ ಆಗಿ ರೆಡಿ ಆಗಬೇಕು ಅಂತ ಅವರೇ ಸಲಹೆ ಕೊಡುತ್ತಿದ್ದರು. ಮೊದಲ ಮದುವೆಯಲ್ಲಿ ಏನಾಯ್ತು, ಯಾಕಾಯ್ತು ಎನ್ನುವ ವಿಚಾರವನ್ನು ನಾನು ಮಾತನಾಡುವುದಿಲ್ಲ ಎಂದು ಅನು ಹೇಳಿದ್ದಾರೆ. ಇದನ್ನೂ ಓದಿ: ರಂಜಾನ್ ಬರ್ತಿದೆ ಪತಿ ಆದಿಲ್ ರಿಲೀಸ್ ಮಾಡಿ : ಕಣ್ಣೀರಿಟ್ಟ ನಟಿ ರಾಖಿ
ನಾನಲ್ಲದೆ ನಮ್ಮ ದಾಂಪತ್ಯ ಜೀವನದಲ್ಲಿ ಮತ್ತೊಬ್ಬ ವ್ಯಕ್ತಿ ಪ್ರವೇಶ ಮಾಡಿದ್ದರಾ ಅನ್ನೋ ಪ್ರಶ್ನೆಗಳೆಲ್ಲ ತೀರಾ ನನ್ನ ಪರ್ಸನಲ್ ವಿಚಾರ. ಹೀಗಾಗಿ ನಾನು ಮಾತನಾಡಬಾರದೆಂದು ತೀರ್ಮಾನ ಮಾಡಿರುವೆ. ಇಬ್ಬರೂ ವ್ಯಕ್ತಿಗಳ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೂ ಅದು ಆ ರೂಮ್‌ನ ನಾಲ್ಕು ಗೋಡೆಗಳ ನಡುವೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರುವುದಿಲ್ಲ. ನನ್ನ ತಂದೆ, ತಾಯಿ ಅವರ ತಂದೆ ತಾಯಿಗೂ ಕರೆಕ್ಟ್ ಆಗಿ ಯಾವ ವಿಚಾರವೂ ಗೊತ್ತಿರುವುದಿಲ್ಲ ಇದೆಲ್ಲಾ ತುಂಬಾ ಪರ್ಸನಲ್ ವಿಚಾರ. ಮುಖ್ಯವಾಗಿ ಏನು ಹೇಳಬೇಕು ಅಂದ್ರೆ ಮನುಷ್ಯನಿಗೆ ಇರೋದು ಒಂದೇ ಜೀವನ. ಆ ಜೀವನವನ್ನು ಸಂತೋಷದಿಂದ ಬಾಳಬೇಕು. ಖುಷಿಯಾಗಿ ಬದುಕಬೇಕು. ನೋವಿನಲ್ಲಿಯೇ ಜೀವನ ಸಾಗಿಸುವಂತೆ ಆಗಬಾರದು. ನಾವಿಬ್ಬರೂ ಒಟ್ಟಿಗೆ ಇರಲು ಆಗುವುದಿಲ್ಲ. ಸಂತೋಷ ಅಸಾಧ್ಯವೆಂದೆನಿಸಿದಾಗ ನೋವು ಕೊಡುವ ನಿರ್ಧಾರಗಳಾದರೂ ಸರಿ, ತೆಗೆದುಕೊಳ್ಳಬೇಕಾಗುತ್ತದೆ. ಆದರಿಂದ ಮುಂದೆ ಆಗಿದ್ದೆಲ್ಲವೂ ಆಯಿತು ಎಂದಿದ್ದಾರೆ.
ಒಂದು ಮುಖ್ಯವಾದ ಮಾತು ಹೇಳಬೇಕು. ನಿಮ್ಮ ಮನೆ ಹೆಣ್ಣು ಮಕ್ಕಳು ಕಣ್ಣೀರು ಹಾಕಿಕೊಂಡು, ಗಂಡನ ಮನೆಯಲ್ಲಿ ನೋವಾಗುತ್ತಿದೆ. ಜೀವನ ಸಾಗಿಸಲು ಆಗುತ್ತಿಲ್ಲ ಎಂದರೆ, ತಂದೆ ತಾಯಿಯಾಗಿ ಆವರನ್ನು ದಯವಿಟ್ಟು ಸಪೋರ್ಟ್ ಮಾಡಿ. ನಾನು ಆ ಘಟನೆ ಬಗ್ಗೆ ಯೋಚಿಸಿದಾಗ, ನನ್ನ ತಾಯಿ ಅಣ್ಣ ಮತ್ತು ಸ್ಕೂಲ್ ಫ್ರೆಂಡ್ಸ್ ನನ್ನ ಪರ ನಿಂತುಕೊಂಡರು. ಆಗ ನನ್ನ ತಂದೆ ಇರಲಿಲ್ಲ. ಈ ರೀತಿ ಘಟನೆ ಹೆಣ್ಣು ಮಕ್ಕಳ ಜೀವನದಲ್ಲಿ ನಡೆದರೆ, ಕುಗ್ಗುತ್ತಾರೆ. ಫ್ಯಾಮಿಲಿ ಸಪೋರ್ಟ್ ಇದ್ದಿದ್ದರಿಂದ ನನಗೆ ಮತ್ತೊಂದು ಲೈಫ್ ಕ್ರಿಯೇಟ್ ಮಾಡಿಕೊಳ್ಳಲು ಸಾಧ್ಯವಾಯ್ತು. ಸಮಾಜದಲ್ಲಿ ಯಾರೂ ಯಾರಿಗೂ ಸಪೋರ್ಟ್ ಮಾಡುವುದಿಲ್ಲ. ಕೊನೆಗೆ ನಮ್ಮ ಪರ ನಿಲ್ಲುವುದು ತಂದೆ- ತಾಯಿ ಮಾತ್ರ. ಡಿವೋರ್ಸ್ ಪರಿಹಾರ ಎಂದು ನಾನು ಹೇಳುವುದಿಲ್ಲ. ಸರಿ ಮಾಡಿಕೊಳ್ಳಿ, ಇಲ್ಲ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಿ. ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡುತ್ತಾರೆ. ಅಲ್ಲಿ ವರದಕ್ಷಿಣಿಗಾಗಿ ಅವಳ ಪ್ರಾಣ ತೆಗೆದರೆ, ನೀವು ಆಮೇಲೆ ಮಾತನಾಡಿ ಏನು ಉಪಯೋಗ ಎಂದು ಅನು ಪೋಷಕರಿಗೆ ಕಿವಿ ಮಾತು ಹೇಳಿದ್ದಾರೆ.
ನಟಿ ಅನುಪ್ರಭಾಕರ್ ಅವರು 2016ರಲ್ಲಿ ನಟ ರಘು ಮುಖರ್ಜಿ (Raghu Mukherjee) ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈಗ ದಂಪತಿಗೆ ನಂದನಾ ಎಂಬ ಮುದ್ದಾದ ಮಗಳಿದ್ದಾಳೆ. ಇಬ್ಬರೂ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಚಿತ್ರರಂಗದಲ್ಲೂ ಆಕ್ಟೀವ್ ಆಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮಾರ್ಚ್ 17ಕ್ಕೆ ಎರಡೆರಡು ಸಂಭ್ರಮ. ಒಂದು ಅಪ್ಪು ಅವರ ಹುಟ್ಟುಹಬ್ಬ ಮತ್ತೊಂದು `ಕಬ್ಜ’ ಸಿನಿಮಾ ಬಹುಭಾಷೆಗಳಲ್ಲಿ ತೆರೆಕಾಣುತ್ತಿದೆ. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ 49ನೇ ವರ್ಷದ ಹುಟ್ಟುಹಬ್ಬವನ್ನ (Birthday) ಅದ್ದೂರಿಯಾಗಿ ಆಚರಿಸಲು ಅಪ್ಪು ಫ್ಯಾನ್ಸ್ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ಲೈಗರ್ ಬ್ಯೂಟಿ ಜೊತೆ ಹಸೆಮಣೆ ಏರಲಿದ್ದಾರೆ `ಆಶಿಕಿ 2′ ಹೀರೋ
ಪುನೀತ್ ರಾಜ್‌ಕುಮಾರ್ ಅವರು ಅಗಲಿ 2 ವರ್ಷಗಳಾಗಿದೆ. ಆದರೆ ಅವರ ನೆನಪು ಮಾತ್ರ ಇನ್ನೂ ಮಾಸಿಲ್ಲ. ಕಳೆದ ವರ್ಷದಂತೆ ಈ ಬಾರಿ ಕೂಡ ಅಪ್ಪು ಫ್ಯಾನ್ಸ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮಾರ್ಚ್ 17ರಂದು ಏನೆಲ್ಲಾ ವಿಶೇಷತೆಗಳು ಇರುತ್ತೆ ಅನ್ನೋದರ ಮಾಹಿತಿ ಇಲ್ಲಿದೆ.
ಅಪ್ಪು ಹುಟ್ಟುಹಬ್ಬಕ್ಕೆ ಬೆಂಗಳೂರಿನ ಜೆಪಿ ನಗರದ ಸಿದ್ಧಲಿಂಗೇಶ್ವರ ಚಿತ್ರಮಂದಿರ ವಿಶೇಷವಾಗಿ ರೆಡಿಯಾಗಿದೆ. ನಾಳೆ ಅಪ್ಪು ಅಭಿನಯದ `ಯುವರತ್ನ’ (Yuvaratna) ಸಿನಿಮಾವನ್ನು ವಿಶೇಷವಾಗಿ ಉಚಿತ ಪ್ರದರ್ಶನ ಮಾಡಲಾಗುತ್ತಿದೆ. ಯುವರತ್ನ ಸಿನಿಮಾ ರಾತ್ರಿ 9.30ಕ್ಕೆ ವಿಶೇಷ ಪ್ರದರ್ಶನ ಮಾಡಲಾಗುತ್ತೆ. ಆ ಬಳಿಕ ರಾತ್ರಿ 12 ಗಂಟೆಗೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ. ಮಾರ್ಚ್ 12ರ ಬೆಳಗ್ಗೆ 9 ಗಂಟೆಗೆ ರಕ್ತದಾನ ಶಿಬಿರವನ್ನು ಅಪ್ಪು ಫ್ಯಾನ್ಸ್ ಹಮ್ಮಿಕೊಂಡಿದ್ದಾರೆ. ಜೆಪಿ ನಗರದ ದೊಡ್ಮನೆ ಅಭಿಮಾನಿಗಳ ಸಂಘ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಉಳಿದಂತೆ ಹಲವೆಡೆ ಅಪ್ಪು ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತೆ.
ಅಪ್ಪು ನಟನೆಯ ಕೊನೆಯ ಸಾಕ್ಷ್ಯಚಿತ್ರ `ಗಂಧದಗುಡಿ’ ಮಾರ್ಚ್ 17ರಂದು ಒಟಿಟಿಗೆ ಲಗ್ಗೆ ಇಡುತ್ತಿದೆ. ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ. ಜೊತೆಗೆ ಅದೇ ದಿನ `ಕಬ್ಜ’ ಚಿತ್ರ ಕೂಡ ತೆರೆ ಕಾಣುತ್ತಿದ್ದು, ಚಿತ್ರತಂಡವು ಸಿನಿಮಾವನ್ನ ಪುನೀತ್‌ಗೆ ಅರ್ಪಣೆ ಮಾಡ್ತಿದ್ದಾರೆ.
`ಸತ್ಯ’ (Sathya Serial) ಧಾರಾವಾಹಿ ಮೂಲಕ ಮನೆ ಮಾತಾಗಿರುವ ಸೀರುಂಡೆ ರಘು (Seerunde Raghu) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಸರಳವಾಗಿ ರಂಜಿತಾ (Ranjitha) ಎಂಬುವವರ ಜೊತೆ ಹೊಸ ಬಾಳಿಗೆ ನಟ ರಘು ಕಾಲಿಟ್ಟಿದ್ದಾರೆ.
`ಕಾಮಿಡಿ ಕಿಲಾಡಿಗಳು ಸೀಸನ್ 2′ ಮತ್ತು `ಸತ್ಯ’ ಸೀರಿಯಲ್ ಹೀರೋ ಕಾರ್ತಿಕ್ ಮೈದುನನ ಪಾತ್ರದಲ್ಲಿ ರಘು ಪರಿಚಿತರಾಗಿದ್ದಾರೆ. ಕಿರುತೆರೆಯಲ್ಲಿ ಪ್ರೇಕ್ಷಕರಿಗೆ ನಕ್ಕು ನಗಿಸುವ ಮೂಲಕ ಸೀರುಂಡೆ ರಘು ಗಮನ ಸೆಳೆದಿದ್ದರು. ಇದನ್ನೂ ಓದಿ: Exclusive:ಮತ್ತೊಂದು ಮಲ್ಟಿಸ್ಟಾರ್ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ
ರಂಜಿತಾ ಎಂಬುವವರ ಜೊತೆ ನಟ ರಘು ಅವರು ಸರಳವಾಗಿ ಮದುವೆಯಾಗಿದ್ದಾರೆ. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಶೋ ಸ್ಪರ್ಧಿಗಳು, ಕಿರುತೆರೆ ನಟ-ನಟಿಯರು ಸೇರಿದಂತೆ ಹಲವರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ಅಭಿಮಾನಿಗಳ ಕೂಡ ರಘು ದಂಪತಿಗೆ ಶುಭಕೋರಿದ್ದಾರೆ.
`ರಾಮಾ ರಾಮಾ ರೇ’ (Rama Rama Re) ಸಿನಿಮಾ ಮೂಲಕ ಸಿನಿಪ್ರೇಕ್ಷಕರ ಮನಗೆದ್ದ ನಟ ಧರ್ಮಣ್ಣ ಕಡೂರು. ಕನ್ನಡದ ಅನೇಕ ಸ್ಟಾರ್ ಕಲಾವಿದರ ಜೊತೆ ತೆರೆ ಹಂಚಿಕೊಂಡಿರುವ ಧರ್ಮಣ್ಣನವರು ಅಭಿಮಾನಿಗಳನ್ನು ನಗಿಸಿದ್ದಾರೆ, ನಗಿಸುತ್ತಿದ್ದಾರೆ. ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಧರ್ಮಣ್ಣ ಅವರಿಗೆ ಈಗ `ರಾಜಯೋಗ’ (Rajayoga) ಬಂದಿದೆ. ಕಾಮಿಡಿ ಸ್ಟಾರ್ ಆಗಿದ್ದ ಧರ್ಮಣ್ಣ (Dharmanna Kadur) ಈಗ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಇದನ್ನೂ ಓದಿ: 25ನೇ ಚಿತ್ರದಲ್ಲಿ ಗುರುದೇವ್ ಹೊಯ್ಸಳನಾದ ಧನಂಜಯ್
ಧರ್ಮಣ್ಣ ಹೀರೋ ಆಗಿ ಎಂಟ್ರಿ ಕೊಡುತ್ತಿರುವ ಸಿನಿಮಾ `ರಾಜಯೋಗ’. ಧರ್ಮಣ್ಣ ನಾಯಕನಾಗಿ ನಟಿಸುತ್ತಿರುವ ಈ ಚೊಚ್ಚಲ ಚಿತ್ರಕ್ಕೆ ಲಿಂಗರಾಜು ಉಚ್ಚಂಗಿ (Lingaraju Ucchangi) ನಿರ್ದೇಶನ ಮಾಡಿದ್ದಾರೆ. ಇದೀಗ ಧರ್ಮಣ್ಣ ಅವರಿಗೆ ಆ್ಯಕ್ಷನ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. ಈ ಹಿಂದೆ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಯಲ್ಲಿ ಕೆಲಸ ಮಾಡಿರುವ ಅನುಭವವಿದೆ.
`ರಾಜಯೋಗ’ ಸಿನಿಮಾವು ಕಾಮಿಡಿ ಎಮೋಷನಲ್ (Emotional) ಸಿನಿಮಾವಾಗಿದೆ. ಕಥೆ ಕೇಳಿ ತುಂಬಾ ಇಷ್ಟಪಟ್ಟ ಧರ್ಮಣ್ಣ ಹೀರೋ ಆಗಿ ಅಭಿಮಾನಿಗಳ ಮುಂದೆ ಬರಲು ನಿರ್ಧರಿಸಿದ್ದಾರೆ. ಅಂದಹಾಗೆ `ರಾಜಯೋಗ’ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ. ಅಂದಹಾಗೆ ಈ ಸಿನಿಮಾದ ಕೆಲಸ ಈಗಾಗಲೇ 70% ರಷ್ಟು ಮುಕ್ತಾಯವಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ. ಸದ್ಯ `ರಾಜಯೋಗ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪೋಸ್ಟರ್‌ನಲ್ಲಿ ಧರ್ಮಣ್ಣ ಮನೆಯ ಮೆಟ್ಟಿಲುಗಳ ಮೇಲೆ ಪುಸ್ತಕ ಓದುತ್ತಾ ಕುಳಿತಿದ್ದಾರೆ. ಹಿಂದೆ ನಾಯಕಿ ನಗುಬೀರುತ್ತಾ ಧರ್ಮಣ್ಣನನ್ನು ನೋಡುತ್ತಿದ್ದಾರೆ. ಈ ಪೋಸ್ಟರ್ ಲುಕ್ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇನ್ನೂ ಸಿನಿಮಾ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ (Shivarajkumar) ದಿನದಿಂದ ದಿನಕ್ಕೆ ಅವರ ಡಿಮ್ಯಾಂಡ್ ಹೆಚ್ಚಾಗುತ್ತಲೇ ಇದೆ. `ಕಬ್ಜ’ (Kabzaa) ಮಲ್ಟಿಸ್ಟಾರ್ ಸಿನಿಮಾ (Multistar Film) ರಿಲೀಸ್‌ಗೆ ಇರುವ ಬೆನ್ನಲ್ಲೇ ಮತ್ತೊಂದು ಹೊಸ ಮಲ್ಟಿಸ್ಟಾರ್ ಮೂವಿಗೆ ಶಿವಣ್ಣ ಗ್ರೀನ್ ಸಿಗ್ನಲ್ ನೀಡಿದ್ದಾರೆ. ʻಕಬ್ಜʼಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ:ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಕಂಗೊಳಿಸಿದ ದೀಪಿಕಾ ಪಡುಕೋಣೆ
ವಯಸ್ಸು 60 ಆದರೂ ಶಿವಣ್ಣ ಅವರ ಎನರ್ಜಿಯನ್ನ ಮೀರಿಸುವವರು ಯಾರಿಲ್ಲ. ಸದಾ ಸಿನಿಮಾಗಳ ಮೂಲಕ ಸೌಂಡ್ ಮಾಡುವ ಶಿವಣ್ಣ, ಇತ್ತೀಚಿಗೆ ಉಪ್ಪಿ- ಕಿಚ್ಚ ಸುದೀಪ್ (Kiccha Sudeep) ಜೊತೆ `ಕಬ್ಜ’ (Kabzaa) ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ತೆರೆಗೆ ಬರುವ ಮುನ್ನವೇ ಹೊಸ ಸಿನಿಮಾ ಮೂಲಕ ಶಿವಣ್ಣ ಸೌಂಡ್ ಮಾಡ್ತಿದ್ದಾರೆ.
ನಟ ಶಿವಣ್ಣ ಇದೀಗ ಕನ್ನಡದಲ್ಲಿ ಮಾತ್ರವಲ್ಲ ಪರಭಾಷೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೌತ್ ಸಿನಿಮಾಗಳಲ್ಲಿಯೂ ಕೂಡ ಬ್ಯುಸಿಯಿರುವ ಶಿವಣ್ಣ, ಈಗ ಗೋಲ್ಡನ್ ಸ್ಟಾರ್ ಜೊತೆ ಕೈಜೋಡಿಸಿದ್ದಾರೆ. ಹೌದು.. ನಟ ಗಣೇಶ್ – ಶಿವಣ್ಣ ಕಾಂಬಿನೇಷನ್‌ನಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ತಯಾರಾಗುತ್ತಿದೆ.
ತಮಿಳಿನ (Tamil) ನಿರ್ದೇಶಕ ಕೆ.ಎಸ್ ರವಿಕುಮಾರ್ (K.s Ravikumar) ಅವರು ಗಣಿ- ಶಿವಣ್ಣ ಅವರಿಗೆ ನಿರ್ದೇಶನ ಮಾಡ್ತಿದ್ದಾರೆ. ವಿಭಿನ್ನ ಕಥೆಯಲ್ಲಿ ಈ ಇಬ್ಬರು ಸ್ಟಾರ್ಸ್ ತೆರೆಹಂಚಿಕೊಳ್ತಿದ್ದಾರೆ. ಸೂರಪ್ಪ ಬಾಬು ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಇದು ದೊಡ್ಡ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗ್ತಿದೆ. ಜುಲೈನಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.
ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ನಟ-ನಟಿಯರು ಸಾಲು ಸಾಲಾಗಿ ಹಸೆಮಣೆ ಏರುತ್ತಿದ್ದಾರೆ. ಇದೀಗ `ಜೊತೆ ಜೊತೆಯಲಿ’ (Jothe Jotheyali) ಖ್ಯಾತಿಯ ಶಿಲ್ಪಾ ಅಯ್ಯರ್ (Shilpa Iyer) ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಮುದ್ದಾದ ಜೋಡಿಯ ಚೆಂದದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ಸದ್ದು ಮಾಡ್ತಿದೆ. ಅವರ ಮದುವೆಯ ಸುಂದರ ಆಲ್ಬಂ ಇಲ್ಲಿದೆ ನೋಡಿ.
ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲವಿನ ನಿಲ್ದಾಣ ಸೇರಿದಂತೆ ಸಾಕಷ್ಟು ಸೀರಿಯಲ್‌ನಲ್ಲಿ ಬಣ್ಣ ಹಚ್ಚಿರುವ ನಟಿ ಶಿಲ್ಪಾ ಅವರು ಸಚಿನ್ ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಬಿದಿರಿನ ಉಡುಪಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟ ಉರ್ಫಿ ಜಾವೇದ್
ಪ್ರೇಮಿಗಳ ದಿನಾಚರಣೆಯಂದು ಎಂಗೇಜ್ ಆಗಿರುವ ಸುದ್ದಿಯನ್ನು ನಟಿ ಸೋಷಿಯಲ್ ಮೀಡಿಯಾ ಮುಖಾಂತರ ತಿಳಿಸಿದ್ದರು. ಭಾವಿ ಪತಿ ಜೊತೆಗಿನ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದರು. ಈಗ ಸೈಲೆಂಟ್ ಆಗಿ ಮದುವೆಯಾಗಿದ್ದಾರೆ.
ಸಚಿನ್ ವಿಶ್ವನಾಥ್ (Sachin Vishwanath) ಅವರು ಲಾಯರ್ ಆಗಿದ್ದು, ಮನೆಯವರೇ ನೋಡಿ ನಿಶ್ಚಯಿಸಿರುವ ಮದುವೆಯಾಗಿದೆ. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದ್ದಾರೆ.
ಶಿಲ್ಪಾ ಅಯ್ಯರ್- ಸಚಿನ್ ಮದುವೆಗೆ `ಜೊತೆ ಜೊತೆಯಲಿ’ ಟೀಂ ಮತ್ತು ʻಒಲವಿನ ನಿಲ್ದಾಣʼ ಸೇರಿದಂತೆ ಹಲವು ನಟ-ನಟಿಯರು ಭಾಗಿಯಾಗಿದ್ದರು. ನವಜೋಡಿಗೆ ಕಲಾವಿದರು, ಅಭಿಮಾನಿಗಳು ಶುಭಹಾರೈಸಿದ್ದಾರೆ.
ಇನ್ನೂ ʻಜೊತೆ ಜೊತೆಯಲಿʼ ಸೀರಿಯಲ್‌ನಿಂದ ನಟ ಅನಿರುದ್ಧ್ ದೂರ ಸರಿದಿದ್ದರು ಕೂಡ ಸಹನಟಿ ಶಿಲ್ಪಾ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ. ತಂಡದ ಜೊತೆ ಸೇರಿ ನಟಿ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಹಿರಿಯ ನಟಿ ವಿಜಯ್ ಲಕ್ಷ್ಮಿ ಸಿಂಗ್, ಪ್ರಥಮಾ ಪ್ರಸಾದ್ ಕೂಡ ಭಾಗಿಯಾಗಿದ್ದರು.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ನಾಯಕಿ ಚೈತ್ರಾ ಆಚಾರ್ (Chaithra Achar) ರೆಟ್ರೋ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ತಮ್ಮ ಬೋಲ್ಡ್ ಲುಕ್‌ನಿಂದ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ. ಸದ್ಯ ಈ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಮತ್ತೆಂದೂ ಮದುವೆಯಾಗಲಾರೆ ಎಂದು ಘೋಷಿಸಿದ ನಟಿ ರಾಖಿ ಸಾವಂತ್
`ಮಹಿರ’ (Mahira) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಚೈತ್ರಾ, ಆ ದೃಶ್ಯ, ಗಿಲ್ಕಿ, ತಲೆದಂಡ ಚಿತ್ರಗಳಲ್ಲಿ ನಟಿಸಿದ್ದಾರೆ. `ತಲೆದಂಡ’ (Thaledanda) ಚಿತ್ರದಲ್ಲಿ ಚೈತ್ರಾ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು. ಸಂಚಾರಿ ವಿಜಯ್ (Sanchari Vijay) ಜೊತೆ ನಟಿ ತೆರೆಹಂಚಿಕೊಂಡಿದ್ದರು.
ಕೆಂಪು ಬಣ್ಣದ ಮಾಡ್ರನ್ ಲುಕ್‌ನಲ್ಲಿ ನಟಿ ಚೈತ್ರಾ ಆಚಾರ್ ಮಿಂಚಿದ್ದಾರೆ. ರೆಟ್ರೋ ಸ್ಟೈಲಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಸ್ಯಾಂಡಲ್ವುಡ್ (Sandalwood) ನಟ ಧ್ರುವ ಸರ್ಜಾ (Dhruva Sarja) ಅವರ ಮಗಳನ್ನ ನೋಡಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮುದ್ದು ಮಗಳ ಫೋಟೋವನ್ನ ಮೊದಲ ಬಾರಿಗೆ ಧ್ರುವ ಹಂಚಿಕೊಳ್ಳುವ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ.
ಧ್ರುವ ಸರ್ಜಾ (Dhruva Sarja) ಅವರು ಫ್ಯಾಮಿಲಿ ಮ್ಯಾನ್ (Family Man) ಎಂಬುದು ತಿಳಿದಿರುವ ವಿಚಾರ. ತಾವು ಎಷ್ಟೇ ಬ್ಯುಸಿಯಿದ್ದರು ಕೂಡ ಕುಟುಂಬಕ್ಕೆ ಆದ್ಯತೆ ಕೊಡುತ್ತಾರೆ. ಸದ್ಯ ಮುದ್ದು ಮಗಳ ಆಗಮನದಿಂದ ಖುಷಿಯಲ್ಲಿರುವ ಧ್ರುವ, ಮಗಳು ಜನಿಸಿ 6 ತಿಂಗಳ ಬಳಿಕ ಇದೀಗ ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ.
ಮಗಳ ಕೈಗೆ ಮುತ್ತು ಕೊಡುತ್ತಿರುವ ಫೋಟೋ ಶೇರ್ ಮಾಡಿ ನನ್ನ ಮಗಳು, ಲವ್ ಯೂ ಮಗಳೇ ಎಂದು ಧ್ರುವ ಸರ್ಜಾ ಅಡುಬರಹ ನೀಡಿದ್ದಾರೆ. ಈ ಫೋಟೋ ನೋಡ್ತಿದ್ದಂತೆ ಫ್ಯಾನ್ಸ್ ಮೆಚ್ಚುಗೆ ಸೂಚಿದ್ದಾರೆ. ಬೇಗ ಮಗಳ ಮುಖ ಫೋಟೋ ಶೇರ್ ಮಾಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ʻಜೋಶ್ʼ ನಟಿ ಸ್ನೇಹಾ ಆಚಾರ್ಯ
`ಮಾರ್ಟಿನ್’ (Martin Film) ಚಿತ್ರದ ಟೀಸರ್ ಮೂಲಕ ಧ್ರುವ ಸರ್ಜಾ ಸಂಚಲನ ಸೃಷ್ಟಿಸಿದ್ದಾರೆ. ಸಿನಿಮಾ ಸದ್ಯದಲ್ಲೇ ತೆರೆಗೆ ಅಬ್ಬರಿಸಲಿದೆ.