Tag: ಸ್ಯಾಂಟ್ರೋ ರವಿ

  • BJP ಚುನಾವಣೆ ಗೆಲ್ಲೋಕೆ ರೌಡಿ ಶೀಟರ್‌ಗಳನ್ನ ಸೇರಿಸಿಕೊಳ್ತಿದೆ – ಹೆಚ್‌ಡಿಕೆ ವಾಗ್ದಾಳಿ

    BJP ಚುನಾವಣೆ ಗೆಲ್ಲೋಕೆ ರೌಡಿ ಶೀಟರ್‌ಗಳನ್ನ ಸೇರಿಸಿಕೊಳ್ತಿದೆ – ಹೆಚ್‌ಡಿಕೆ ವಾಗ್ದಾಳಿ

    ಬೆಂಗಳೂರು: ಬಿಜೆಪಿಯವರು (BJP) ‌ಚುನಾವಣೆ ಗೆಲ್ಲೋದಕ್ಕೆ ಯಾರನ್ನ ಬೇಕಾದ್ರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ತಾರೆ ಅಂತಾ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.

    ರೌಡಿ ಶೀಟರ್ ಸೈಲೆಂಟ್ ಸುನೀಲ (Silent Sunila) ಬಿಜೆಪಿ ಸದಸ್ಯತ್ವ ಪಡೆದಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಸ್ಪರ್ಧಿಸಿದ್ರೆ ಒಳ್ಳೆಯದು – ಅಶೋಕ್ ಎಚ್ಚರಿಕೆ

    ಬಿಜೆಪಿಯವರು ವೇದಿಕೆ ಮೇಲೆ ಮಾತ್ರ ನೈತಿಕತೆಯ ಭಾಷಣ ಮಾಡೋದು. ವಸ್ತು ಸ್ಥಿತಿ ಬೇರೆ ಇದೆ. ಬಿಜೆಪಿಯವರು ಗೆಲ್ಲೋದಕ್ಕೆ ಏನು ಬೇಕಾದ್ರು ಮಾಡ್ತಾರೆ, ಯಾರನ್ನ ಬೇಕಾದ್ರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ತಾರೆ‌ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತನ್ನದೇ ಕತ್ತು ಸೀಳಿ, ಚಾಕು, ಗನ್ ಹಿಡ್ಕೊಂಡು ದೆಹಲಿ ಬೀದಿಯಲ್ಲಿ ಓಡಾಡಿದ ವ್ಯಕ್ತಿ – ಜನ ಚೆಲ್ಲಾಪಿಲ್ಲಿ

    ಸೈಲೆಂಟ್ ಸುನೀಲ, ಫೈಟರ್ ರವಿ, ಸ್ಯಾಂಟ್ರೋ ರವಿ (Santro Ravi) ಇಂತಹವರನ್ನೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ತಾರೆ. ಅವರಿಗೆ ಚುನಾವಣೆ ಗೆಲ್ಲಬೇಕು ಅನ್ನೋದಷ್ಟೇ ಉದ್ದೇಶ. ಅದಕ್ಕೆ ಏನು ಬೇಕಾದ್ರು ಮಾಡ್ತಾರೆ‌‌. ಈ ಬಾರಿ ಚುನಾವಣೆಯಲ್ಲಿ ಜನರೇ ಇದಕ್ಕೆಲ್ಲ ಉತ್ತರ ಕೊಡ್ತಾರೆ ಎಂದು ತಿರುಗೇಟು ನೀಡಿದ್ದಾರೆ.

  • CID ಕಸ್ಟಡಿಯಲ್ಲಿ ಸ್ಯಾಂಟ್ರೋ ರವಿ ಆತ್ಮಹತ್ಯೆಗೆ ಯತ್ನ – ಕಾಂಗ್ರೆಸ್‌ ಟೀಕೆ

    CID ಕಸ್ಟಡಿಯಲ್ಲಿ ಸ್ಯಾಂಟ್ರೋ ರವಿ ಆತ್ಮಹತ್ಯೆಗೆ ಯತ್ನ – ಕಾಂಗ್ರೆಸ್‌ ಟೀಕೆ

    ಬೆಂಗಳೂರು: ಸಿಐಡಿ (CID) ಕಸ್ಟಡಿಯಲ್ಲಿರುವ ಸ್ಯಾಂಟ್ರೋ ರವಿ (Santro Ravi) ಆತ್ಮಹತ್ಯೆಗೆ ಯತ್ನಿಸಿದ್ದಾನಂತೆ. ಇದು ಆತ್ಮಹತ್ಯೆ ಯತ್ನವೋ, ಕೊಲೆ ಯತ್ನವೋ ಎಂದು ಬಿಜೆಪಿ (BJP) ಸರ್ಕಾರದ ವಿರುದ್ಧ ಕಾಂಗ್ರೆಸ್‌ (Congress) ಕಿಡಿಕಾರಿದೆ.

    ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಸ್ಯಾಂಟ್ರೋ ರವಿಯೊಳಗೆ ಅಡಗಿದ್ದ ಬಿಜೆಪಿಗರ ಭಯಂಕರ ಸತ್ಯಗಳನ್ನು ಸಮಾಧಿ ಮಾಡಲು ಹೊರಟಿದೆಯೇ ಸರ್ಕಾರ? ಸಿಐಡಿ ಕಸ್ಟಡಿಯಲ್ಲಿರುವ ಸ್ಯಾಂಟ್ರೋ ರವಿ ಆತ್ಮಹತ್ಯೆಗೆ ಯತ್ನಿಸಿದ್ದಾನಂತೆ. ಇದು ಆತ್ಮಹತ್ಯೆ ಯತ್ನವೋ, ಕೊಲೆ ಯತ್ನವೋ? ಸ್ಯಾಂಟ್ರೋ ರವಿಯನ್ನು ಮುಗಿಸುವ ಮೂಲಕ ಸರ್ಕಾರದ ರಹಸ್ಯಗಳನ್ನೂ ಮುಗಿಸುವ ಹುನ್ನಾರ ನಡೆದಿದೆಯೇ ಬೊಮ್ಮಾಯಿ (Basavaraj Bommai) ಅವರೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಇದನ್ನೂ ಓದಿ: ಐಸಿಯುನಲ್ಲಿ ಸ್ಯಾಂಟ್ರೋ ರವಿಗೆ ಚಿಕಿತ್ಸೆ- ಸಂಜೆ ಡಿಸ್ಚಾರ್ಜ್?

    ಪೊಲೀಸ್ ಕಸ್ಟಡಿಯಲ್ಲಿ ಸ್ಯಾಂಟ್ರೋ ರವಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಸುದ್ದಿ ಬರುತ್ತಿದೆ. ಆರಗ ಜ್ಞಾನೇಂದ್ರ (Araga Jnanendra) ಅವರೇ, ಕಸ್ಟಡಿಯಲ್ಲಿರುವ ಆರೋಪಿಗೆ ರಕ್ಷಣೆ ನೀಡಲು ಸಾಧ್ಯವಾಗದಿರುವುದು ನಿಮ್ಮ ವೈಫಲ್ಯವೇ ಅಥವಾ ಷಡ್ಯಂತ್ರವೇ? ಆತನ ಜೊತೆಗಿರುವ ತಮ್ಮ ವ್ಯವಹಾರಗಳನ್ನು ಮುಚ್ಚಿಕೊಳ್ಳಲು ದಾರಿ ಹುಡುಕುತ್ತಿದ್ದೀರಾ ಎಂದು ಗಂಭೀರ ಆರೋಪ ಮಾಡಿದೆ.

    ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಟ್ರೋ ರವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಐಡಿ ಪೊಲೀಸ್‌ ಮೂಲಗಳು ತಿಳಿಸಿತ್ತು. ಶುಗರ್‌, ಬಿಪಿ ಸೇರಿ ಹಲವು ಸಮಸ್ಯೆಯಿಂದ ಬಳಲುತ್ತಿರುವ ಸ್ಯಾಂಟ್ರೋ ರವಿ, ವಿಚಾರಣೆಗೆ ಹೆದರಿ ಆತ್ಮಹತ್ಯೆಗೆ ಯತ್ನಸಿದ್ನಾ ಎಂಬ ಅನುಮಾನ ಮೂಡಿದೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ವೇಶ್ಯಾವಾಟಿಕೆ, ವರ್ಗಾವಣೆ ದಂಧೆ, ಪತ್ನಿ ಮೇಲೆ ದೌರ್ಜನ್ಯ ಸೇರಿದಂತೆ ಹಲವು ಪ್ರಕರಣಗಳಡಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ. ಸ್ಯಾಂಟ್ರೋ ರವಿಯನ್ನು ಜನವರಿ 30ರ ವರೆಗೂ ಸಿಐಡಿ ಕಸ್ಟಡಿಗೆ ವಹಿಸಿ ನ್ಯಾಯಾಲಯ ಆದೇಶ ಹೊರಡಿಸಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಐಸಿಯುನಲ್ಲಿ ಸ್ಯಾಂಟ್ರೋ ರವಿಗೆ ಚಿಕಿತ್ಸೆ- ಸಂಜೆ ಡಿಸ್ಚಾರ್ಜ್?

    ಐಸಿಯುನಲ್ಲಿ ಸ್ಯಾಂಟ್ರೋ ರವಿಗೆ ಚಿಕಿತ್ಸೆ- ಸಂಜೆ ಡಿಸ್ಚಾರ್ಜ್?

    ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸ್ಯಾಂಟ್ರೋ ರವಿ (Santro Ravi) ಗೆ ಸದ್ಯ ಐಸಿಯು (ICU) ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ಸ್ಯಾಂಟ್ರೋ ರವಿ ಶುಗರ್ ಲೋ ಆಗೋದಕ್ಕೆ ಮಾತ್ರೆಯನ್ನ ತೆಗೆದುಕೊಳ್ತಾರೆ. ಆದರೆ ಸ್ಯಾಂಟ್ರೋ ರವಿ ಏಕಕಾಲಕ್ಕೆ 10 ಮಾತ್ರೆ ತೆಗದುಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಇಂದು ಸಂಜೆ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.

    ಸ್ಯಾಂಟ್ರೋ ರವಿ ಹೆಚ್ಚು ಮಾತ್ರೆ ನುಂಗಿದ್ದಾನೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು ವಿಕ್ಟೋರಿಯಾ (Victoria Hospital) ವೈದ್ಯಕೀಯ ಅಧಿಕ್ಷಕರಿಂದ ಅಧಿಕೃತ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ಏನಿದು ಘಟನೆ..?: ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಟ್ರೋ ರವಿಯನ್ನು ಸಿಐಡಿ ಪೊಲೀಸರು ಗುರುವಾರ ಸಂಜೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಶುಗರ್ 400 ಕ್ಕೂ ಅಧಿಕವಾಗಿತ್ತು. ಈ ಹಿನ್ನೆಲೆ ವಿಕ್ಟೋರಿಯಾಗೆ ದಾಖಲಿಸಲಾಗಿತ್ತು.

    ಶುಗರ್, ಬಿಪಿ ಸೇರಿ ಹಲವು ಸಮಸ್ಯೆಯಿಂದ ಬಳಲುತ್ತಿರುವ ಸ್ಯಾಂಟ್ರೋ ರವಿ, ವಿಚಾರಣೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ನಾ ಎಂಬ ಅನುಮಾನ ಮೂಡಿದೆ. ಸ್ಯಾಂಟ್ರೋ ರವಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆ ಬಳಿ ಭದ್ರತೆ ಹೆಚ್ಚಿಸಿದ್ದಾರೆ. ಭದ್ರತೆಗೆ ಕೆಎಸ್ ಆರ್ ಪಿ ತುಕಡಿ ಪೊಲೀಸರ ನಿಯೋಜನೆ ಮಾಡಲಾಗಿದೆ.

    ಸ್ಯಾಂಟ್ರೋ ರವಿಯನ್ನು ಜನವರಿ 30 ರವರೆಗೂ ಸಿಐಡಿ ಕಸ್ಟಡಿಗೆ ನ್ಯಾಯಾಲಯ ಅದೇಶ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ಬೆಂಗಳೂರು: ಕ್ರಿಮಿನಲ್ ಪ್ರಕರಣಗಳ ಆರೋಪಿ ಸ್ಯಾಂಟ್ರೋ ರವಿ (Santro Ravi) ಆರೋಗ್ಯದಲ್ಲಿ ಏರುಪೇರಾಗಿದ್ದು, ವಿಕ್ಟೋರಿಯಾ (Victoria Hospital) ಗೆ ಶಿಫ್ಟ್ ಮಾಡಲಾಗಿದೆ.

    ಮಧುಮೇಹ (Ssugar Patient) ಖಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಟ್ರೋ ರವಿಯನ್ನು ಸಿಐಡಿ ಪೊಲೀಸರು ಗುರುವಾರ ಸಂಜೆ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಶುಗರ್ 400 ಕ್ಕೂ ಅಧಿಕವಾಗಿತ್ತು. ಈ ಹಿನ್ನೆಲೆ ವಿಕ್ಟೋರಿಯಾಗೆ ದಾಖಲಿಸಲಾಗಿದೆ.

    ಸದ್ಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ನಿಯಮಿತ ಮಾತ್ರೆಗಳಿಗಿಂತ ಹೆಚ್ಚಿನ ಮಾತ್ರೆಗಳನ್ನು ಸೇವಿಸಿದ ಅನುಮಾನ ಬಂದಿದೆ. ಸದ್ಯಕ್ಕೆ ವೈದ್ಯರ ಬಳಿ ಅಧಿಕಾರಿಗಳು ಮಾಹಿತಿ ತಿಳಿದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ಹಿಂದೆ ಇರೋ ಮುಖವಾಡಗಳು ಕಳಚಿ ಬೀಳಬೇಕು – ಆರಗ ಜ್ಞಾನೇಂದ್ರ

    ಶುಗರ್, ಬಿಪಿ ಸೇರಿ ಹಲವು ಸಮಸ್ಯೆ ಯಿಂದ ಬಳಲುತ್ತಿರುವ ಸ್ಯಾಂಟ್ರೋ ರವಿ, ವಿಚಾರಣೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ನಾ ಎಂಬ ಅನುಮಾನ ಮೂಡಿದೆ. ಸ್ಯಾಂಟ್ರೋ ರವಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಡಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆ ಬಳಿ ಭದ್ರತೆ ಹೆಚ್ಚಿಸಿದ್ದಾರೆ. ಭದ್ರತೆಗೆ ಕೆಎಸ್ ಆರ್ ಪಿ ತುಕಡಿ ಪೊಲೀಸರ ನಿಯೋಜನೆ ಮಾಡಲಾಗಿದೆ.

    ಸ್ಯಾಂಟ್ರೋ ರವಿಯನ್ನು ಜನವರಿ 30 ರವರೆಗೂ ಸಿಐಡಿ ಕಸ್ಟಡಿಗೆ ನ್ಯಾಯಾಲಯ ಅದೇಶ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಯಾಂಟ್ರೋ ಹತ್ತಿದ್ದವರಿಗೆ ನಡುಕ – ಸ್ಟೇ ತರಲು ಮುಂದಾದ ಕೆಲ ಪೊಲೀಸ್‌ ಅಧಿಕಾರಿಗಳು

    ಸ್ಯಾಂಟ್ರೋ ಹತ್ತಿದ್ದವರಿಗೆ ನಡುಕ – ಸ್ಟೇ ತರಲು ಮುಂದಾದ ಕೆಲ ಪೊಲೀಸ್‌ ಅಧಿಕಾರಿಗಳು

    ಬೆಂಗಳೂರು: ವೇಶ್ಯಾವಾಟಿಕೆ ದಂಧೆಕೋರ, ವರ್ಗಾವಣೆ ಕಿಂಗ್ ಪಿನ್ ಸ್ಯಾಂಟ್ರೋ ರವಿ (Santro Ravi) ಬಂಧನದ ಬೆನ್ನಲ್ಲೇ ರಾಜಕಾರಣಿಗಳ ಎದೆಯಲ್ಲಿ ನಡುಕ‌ ಶುರುವಾದರೆ ಇನ್ನೊಂದು ಕಡೆ ಕೆಲ ಪೊಲೀಸರ (Police) ಎದೆಯಲ್ಲಿ ಢವ ಢವ ಶುರುವಾಗಿದೆ.

    ಸಿಡಿ ತನಿಖೆ ನಮ್ಮ ಬುಡಕ್ಕೆ ಎಲ್ಲಿ ಬರಬಹುದು ಎಂಬ ಭಯ ಕೆಲ ರಾಜಕಾರಣಿಗಳಿದ್ದರೆ ಲಕ್ಷ ಲಕ್ಷ ಕೊಟ್ಟು ಪೋಸ್ಟಿಂಗ್ ಪಡೆದ ಅಧಿಕಾರಿಗಳಲ್ಲಿ ಇದೀಗ ಆತಂಕ ಶುರುವಾಗಿದೆ. ಯಾಕೆಂದರೆ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ ಪೋಸ್ಟಿಂಗ್ ಡೀಲ್‌ ಬಳಿಕ ವಾಟ್ಸಪ್‌ ಸ್ಟೇಟಸ್‌ನಲ್ಲಿ ಸಚಿವರ ಟಿಪ್ಪಣಿ ಪ್ರತಿ(Minutes Copy), ವರ್ಗಾವಣೆಯಾದ ಪೊಲೀಸರ ಲಿಸ್ಟ್‌ ಹಾಕುತ್ತಿದ್ದ.  ಇದನ್ನೂ ಓದಿ: ಮಕ್ಕಳಿಬ್ಬರಿಗೆ ವಿಷವುಣಿಸಿ ತಾಯಿ ನೇಣಿಗೆ ಶರಣು

    ವರ್ಗಾವಣೆಯಾಗುವ ಮೊದಲು ಸಚಿವರಿಗೆ, ಶಾಸಕರಿಗೆ ಹಣ ಕೊಡಬೇಕು ಎಂದು ಹೇಳಿ ಪೊಲೀಸರಿಂದ ಹಣ (Money) ಪಡೆಯುತ್ತಿದ್ದ. ಹಣವನ್ನು ಸಿದ್ದ ಪಡಿಸಿದ ಬಳಿಕ ಅಧಿಕಾರಿಗಳು ರವಿಗೆ ಕಂತೆ ಹಣದ ಫೋಟೋವನ್ನು ವಾಟ್ಸಪ್‌ನಲ್ಲಿ ಸೆಂಡ್‌ ಮಾಡಬೇಕಿತ್ತು. ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರಿಗೆ ಈ ರೀತಿ ಸಾಕಷ್ಟು ಮಂದಿ ಅಧಿಕಾರಿಗಳು ರವಿಗೆ ಹಣ ಕಳುಹಿಸಿದ್ದ ಫೋಟೋ ಲಭ್ಯವಾಗಿದೆ ಎಂದು ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ.

    ಸಿಐಡಿ ಈಗಾಗಲೇ ಸ್ಯಾಂಟ್ರೊ ರವಿಯ ವಿಚಾರಣೆ ಆರಂಭಿಸಿದ್ದು, ಕೆಲ ಭ್ರಷ್ಟ ಪೊಲೀಸರಿಗೆ ನೋಟಿಸ್‌ ನೀಡುವ ಸಾಧ್ಯತೆಯಿದೆ. ಇದರಿಂದಾಗಿ ಆಘಾತಕ್ಕೊಳಗಾಗಿರಿವ ಪೊಲೀಸರು ಕೋರ್ಟ್ ಮೂಲಕ ಹೇಗಾದರೂ ತಮ್ಮ ಹೆಸರು ಆಚೆ ಬರದಂತೆ ಸ್ಟೇ (Stay Order) ತರಲು ತಯಾರಿ ನಡೆಸುತ್ತಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಯಾಂಟ್ರೋ ರವಿ ಹಿಂದೆ ಇರೋ ಮುಖವಾಡಗಳು ಕಳಚಿ ಬೀಳಬೇಕು – ಆರಗ ಜ್ಞಾನೇಂದ್ರ

    ಸ್ಯಾಂಟ್ರೋ ರವಿ ಹಿಂದೆ ಇರೋ ಮುಖವಾಡಗಳು ಕಳಚಿ ಬೀಳಬೇಕು – ಆರಗ ಜ್ಞಾನೇಂದ್ರ

    ಬೆಂಗಳೂರು : ಸ್ಯಾಂಟ್ರೋ ರವಿ (Santro Ravi) ಹಿಂದೆ ಇರೋ ಮುಖವಾಡಗಳು ಕಳಚಿ ಬೀಳಬೇಕು ಅಂತ ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ನೀಡಲಾಗಿದೆ ಅಂತ ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಕೇಸನ್ನು ಸಿಐಡಿಗೆ (CID) ವಹಿಸಲಾಗಿದೆ. ಮೈಸೂರು ಪೊಲೀಸರು ತನಿಖೆ ಮಾಡುತ್ತಿದ್ದರು. ತನಿಖೆ ಮತ್ತಷ್ಟು ಪಾರದರ್ಶಕವಾಗಿ ನಡೆಯಲು‌. ಯಾವುದೇ ಅನುಮಾನ ಕೇಸ್ ನಲ್ಲಿ ಬಾರದಂತೆ ತನಿಖೆ ಮಾಡಲು ಸಿಐಡಿಗೆ ವಹಿಸಲಾಗಿದೆ. ಪಿಎಸ್‌ಐ ಕೇಸ್ ತನಿಖೆ‌ ಮಾಡಿದ ತಂಡವೇ ಈ ಕೇಸ್ ತನಿಖೆ ಮಾಡುತ್ತದೆ. ತನಿಖೆ ಪ್ರಾಮಾಣಿಕವಾಗಿ ನಡೆದು ತಪ್ಪಿತಸ್ಥರಿಗೆ ಕ್ರಮ ಆಗುವಂತೆ ಕ್ರಮ ಆಗಬೇಕು ಅಂತ ಸೂಚನೆ ನೀಡಿದ್ದೇವೆ ಎಂದರು.

    ಸ್ಯಾಂಟ್ರೋ ರವಿ ಮೇಲೆ ಅತ್ಯಾಚಾರ, ಕೊಲೆ, ಕಿರುಕುಳ, ವರದಕ್ಷಿಣೆ ಸೇರಿ ಅನೇಕ ಪ್ರಕಣಗಳು ಇವೆ. ಇದರ ಸಂಪೂರ್ಣ ತನಿಖೆ ಆಗಲಿದೆ. ಸಾರ್ವಜನಿಕವಾಗಿ ಚರ್ಚೆ ಆಗಿರುವ ಪ್ರಕರಣ ಇದು.ಇದರ ಹಿಂದೆ ಯಾರು ಯಾರು ಇದ್ದಾರೆ ಅಂತ ಗೊತ್ತಾಗಬೇಕು. ಯಾರು ಯಾರು ಸ್ಯಾಂಟ್ರೋ ರವಿ ಜೊತೆ ಇದ್ದರೊ ಅವರ ಮುಖವಾಡ ಕಳಚಿ ಹೊರಗೆ ತೆಗೆಯಬೇಕು. 20 ವರ್ಷದ ಹಿಂದೆ ಯಾ ಜೊತೆ ಸಂಬಂಧ ರವಿ ಇಟ್ಟಿದ್ದ ಅಂತ ಜನರಿಗೆ ಗೊತ್ತಾಗಬೇಕು. ಹೀಗಾಗಿ ಸಿಐಡಿ ತನಿಖೆಗೆ ವಹಿಸಲಾಗಿದೆ. ಒಳ್ಳೆ ರೀತಿ ತನಿಖೆ ಆಗಬೇಕು ಅಂತ ಸಿಐಡಿಗೆ ವಹಿಸಲಾಗಿದೆ ಎಂದರು. ಇದನ್ನೂ ಓದಿ: ಬೀಡಿ ಸೇದಿ ಎಸೆದವನು ಸುಟ್ಟು ಕರಕಲಾದ!

    ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ ಕೊಡುವುದಕ್ಕೆ ದಾಖಲೆ ಇಲ್ಲ ಎಂಬ ರವಿ ಪರ ವಕೀಲರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತನಿಖೆ ಮಾಡಿದರೂ ಕಷ್ಟ ಮಾಡದೇ ಹೋದರೂ ಕಷ್ಟ. ಸರ್ಕಾರ ಈಗಾಗಲೇ ನಿರ್ಧಾರ ಮಾಡಿದೆ ತನಿಖೆ ಆಗುತ್ತೆ. ಯಾರೇ ತಪ್ಪು ಮಾಡಿದ್ರು ಕ್ರಮ ಆಗೇ ಆಗುತ್ತದೆ ಅಂತ ತಿಳಿಸಿದರು.

    ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಮಲೆನಾಡ ಕಾರ್ಯಕ್ರಮದಲ್ಲಿ ನಾನು ಭಾವುಕನಾಗಿದ್ದೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವವರಿಗೆ ಮಸಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಯಾರನ್ನು ಬೇಕಾದರೂ ಕೇಳಿ ಎಲ್ಲರಿಗೂ ನಾನು ಸಿಗುತ್ತೇನೆ. ಒಂದು ಫೋಟೋ ಇಟ್ಟು ಕಥೆ ಕಟ್ಟಿದರೆ ಹೇಗೆ ಅಂತ ಪ್ರಶ್ನೆ ಮಾಡಿದರು. ಸಾರ್ವಜನಿಕ ಜೀವನದಲ್ಲಿ ಉತ್ತಮವಾಗಿ ರಾಜಕೀಯ ಮಾಡಿಕೊಂಡು ಬಂದದ್ದೇನೆ. ಹೀಗೆ ಕೆಸರು ಎರೆಚಿದರೆ ನೋವಾಗುತ್ತದೆ. ಇಂತಹದ್ದೇ ಬಿಸಿನೆಸ್‌ ಮಾಡುವವರಿಗೆ ಏನು ಸಮಸ್ಯೆ ಆಗೊಲ್ಲ.ಆದ್ರೆ ನಮ್ಮಂತಹವರಿಗೆ ಇದನ್ನ ಸಹಿಸಲು ಸಾಧ್ಯವಿಲ್ಲ ಅಂತ ಕುಮಾರಸ್ವಾಮಿ ವಿರುದ್ದ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಯಾಂಟ್ರೋ ರವಿ ಪ್ರಕರಣ ಸಿಐಡಿ ಒಪ್ಪಿಸಿ ಶಬರಿಮಲೆಗೆ ಹೊರಟ ಆರಗ ಜ್ಞಾನೇಂದ್ರ

    ಸ್ಯಾಂಟ್ರೋ ರವಿ ಪ್ರಕರಣ ಸಿಐಡಿ ಒಪ್ಪಿಸಿ ಶಬರಿಮಲೆಗೆ ಹೊರಟ ಆರಗ ಜ್ಞಾನೇಂದ್ರ

    ಬೆಂಗಳೂರು: ಸ್ಯಾಂಟ್ರೋ ರವಿ ಪ್ರಕರಣವನ್ನು (Santro Ravi Case)  ಸರ್ಕಾರ ಸಿಐಡಿ (CID) ತನಿಖೆಗೆ ಒಪ್ಪಿಸಿದೆ. ಗೃಹಸಚಿವ ಆರಗ ಜ್ಞಾನೇಂದ್ರ ಸೂಚನೆ ಮೇರೆಗೆ ಈಗಾಗಲೇ ಸಿಐಡಿ ತನಿಖೆಗೆ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ.

    ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿರುವ ಹಿನ್ನೆಲೆ ಮೈಸೂರು ವಿಜಯನಗರ ಪೊಲೀಸರು ತನಿಖೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಸಿಐಡಿ ಪೊಲೀಸರಿಗೆ ಎಸಿಪಿ ಶಿವಶಂಕರ್ ನೀಡಲಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ಮೈಸೂರು ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ಕಾರಣಕ್ಕೆ ಜನವರಿ 25 ರವರೆಗೆ ಸ್ಯಾಂಟ್ರೋ ರವಿ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆಯಾಗಿದೆ. ಇದನ್ನೂ ಓದಿ: ಗೃಹ ಸಚಿವರಿಗೆ ಅವರ ಇಲಾಖೆಯಲ್ಲಿ ನಡೆಯೋ ವಿಷಯ ಗೊತ್ತಿಲ್ಲವೇ?: ಹೆಚ್‍ಡಿಕೆ ವಾಗ್ದಾಳಿ

    ಸ್ಯಾಂಟ್ರೋ ರವಿ ಪರ ವಕೀಲರು ಇನ್ನೆರಡು ದಿನಗಳಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇನ್ನು, ನಟೋರಿಯಸ್ ಕ್ರಿಮಿನಲ್‍ನ್ನು ಯಾಕೆ ನ್ಯಾಯಾಂಗ ಬಂಧನಕ್ಕೆ ನೀಡಿದರು? ಸೂಕ್ತ ತನಿಖೆಗೆ ಒಳಪಡಿಸಬೇಕು ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಮಧ್ಯೆ, ಆರಗ ಜ್ಞಾನೇಂದ್ರ ಅಯ್ಯಪ್ಪ ಮಾಲಾಧಾರಿಯಾಗಿದ್ದು, ಇರುಮುಡಿ ಹೊತ್ತು ಶಬರಿ ಮಲೆಗೆ ಸೆಕ್ಯೂರಿಟಿ ಜೊತೆ ತೆರಳಿದ್ದಾರೆ. ಇದನ್ನೂ ಓದಿ: ನನಗೆ ಯಾವುದೇ ನೋಟಿಸ್‌ ಬಂದಿಲ್ಲ: ಯತ್ನಾಳ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೃಹ ಸಚಿವರಿಗೆ ಅವರ ಇಲಾಖೆಯಲ್ಲಿ ನಡೆಯೋ ವಿಷಯ ಗೊತ್ತಿಲ್ಲವೇ?: ಹೆಚ್‍ಡಿಕೆ ವಾಗ್ದಾಳಿ

    ಗೃಹ ಸಚಿವರಿಗೆ ಅವರ ಇಲಾಖೆಯಲ್ಲಿ ನಡೆಯೋ ವಿಷಯ ಗೊತ್ತಿಲ್ಲವೇ?: ಹೆಚ್‍ಡಿಕೆ ವಾಗ್ದಾಳಿ

    ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರಿಗೆ ತಮ್ಮ ಇಲಾಖೆಯಲ್ಲಿ ಏನೆಲ್ಲಾ ನಡೆಯುತ್ತಿತ್ತು ಎನ್ನುವುದು ಗೊತ್ತಿರಲಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D Kumarswamy) ಪ್ರಶ್ನೆ ಮಾಡಿದ್ದಾರೆ.

    ಬಿಡದಿಯ ತಮ್ಮ ತೋಟದಲ್ಲಿ ರೈತ ಸಂಕ್ರಾಂತಿ ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ ಅವರು, ತಮ್ಮ ಇಲಾಖೆಯಲ್ಲಿ ದಂಧೆ ನಡೆಯುತ್ತಿದ್ದರೆ ಸಚಿವರು ಏನು ಮಾಡುತ್ತಿದ್ದರು. ಅದನ್ನು ಅವರು ಜನರಿಗೆ ತಿಳಿಸಬೇಕು ಅಲ್ಲವೇ? ಸ್ಯಾಂಟ್ರೋ ರವಿ (Santro Ravi) ಬಳಿ ಹಣ ಪಡೆದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ ಎನ್ನುವ ಆರಗ ಜ್ಞಾನೇಂದ್ರ ಹೇಳಿಕೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರು ಆತ್ಮಹತ್ಯೆ ಮಾಡಿಕೊಳ್ಳಲಿ ಅಂತ ನಾನ್ಯಾಕೆ ಹೇಳಲಿ. ಈ ಸರ್ಕಾರದಲ್ಲಿ ನಡೆಯುತ್ತಿರುವ ಕಾಸಿಗಾಗಿ ಪೋಸ್ಟಿಂಗ್ ವಿಚಾರ ಬೀದಿ ಬೀದಿಯಲ್ಲಿ ಚರ್ಚೆ ನಡೆಯುತ್ತಿದೆ. ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ದಂಧೆಗಳ ಜನರು ಕೂತಲ್ಲಿ, ನಿಂತಲ್ಲಿ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ನನಗೆ ಯಾವುದೇ ನೋಟಿಸ್‌ ಬಂದಿಲ್ಲ: ಯತ್ನಾಳ್‌

    ಈಗ ಬಂಧನಕ್ಕೆ ಒಳಗಾಗಿರುವ ವ್ಯಕ್ತಿ ಎಲ್ಲಿ, ಯಾರಿಂದ ಏನೆಲ್ಲಾ ಕೆಲಸ ಮಾಡಿಕೊಂಡಿದ್ದಾನೆ ಎಲ್ಲ ಕಡೆ ಹೇಳಿಕೊಂಡು ತಿರುಗಿದ್ದಾನೆ. ಆತನ ಫೋಟೋಗಳು, ಅಡಿಯೋಗಳು ರಾಜ್ಯದ ತುಂಬಾ ಹಬ್ಬಿವೆ. ಇದೆಲ್ಲಾ ಗೃಹ ಸಚಿವರ ಗಮನಕ್ಕೆ ಬಂದಿಲ್ಲವೇ ಎಂದು ಸಚಿವರಿಗೆ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಇಲಾಖೆಯ ಟೆಂಡರ್ ಕೊಡಿಸದ್ದಕ್ಕೆ ನನ್ನ ಮೇಲೆ ಭ್ರಷ್ಟಾಚಾರ ಆರೋಪ: ಶಾಸಕ ತಿಪ್ಪಾರೆಡ್ಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಯಾಂಟ್ರೋ ರವಿ ಕೇಸ್- ಸಿಐಡಿಗೆ ವರ್ಗಾಯಿಸಿದ ರಾಜ್ಯ ಸರ್ಕಾರ: ಆರಗ ಮಾಹಿತಿ

    ಸ್ಯಾಂಟ್ರೋ ರವಿ ಕೇಸ್- ಸಿಐಡಿಗೆ ವರ್ಗಾಯಿಸಿದ ರಾಜ್ಯ ಸರ್ಕಾರ: ಆರಗ ಮಾಹಿತಿ

    ಬೆಂಗಳೂರು: ಸ್ಯಾಂಟ್ರೋ ರವಿ (Santro Ravi) ಪ್ರಕರಣಗಳನ್ನ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ವಂಚಕ, ಪಿಂಪ್ ಸ್ಯಾಂಟ್ರೊ ರವಿ ವಿರುದ್ಧದ ದೂರುಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರಕಾರ ಸಿಐಡಿ ಪೊಲೀಸರಿಗೆ ನಿರ್ದೇಶನ ನೀಡಿದೆ. ಸಿಐಡಿಗೆ ವರ್ಗಾಯಿಸಿರುವುದನ್ನ ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ದೃಢೀಕರಿಸಿ ಮಾಹಿತಿ ನೀಡಿದ್ದಾರೆ.

    ಈ ನಡುವೆ ಸ್ಯಾಂಟ್ರೋ ರವಿಗೆ ನ್ಯಾಯಾಂಗ ಬಂಧನದ ನೀಡುವ ವಿಚಾರದಲ್ಲಿ ಜಡ್ಜ್ ಮುಂದೆ ಸರ್ಕಾರ ಆಕ್ಷೇಪ ಮಾಡಲಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಬೆಂಗಳೂರಲ್ಲಿ ಇವತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ವಾಗ್ದಾಳಿ ನಡೆಸಿದ್ರು. ಸ್ಯಾಂಟ್ರೋ ರವಿ ಒಬ್ಬ ನಟೋರಿಯಸ್ ಕ್ರಿಮಿನಲ್. ಯಾರನ್ನಾದರೂ ಬಂಧಿಸಿದ್ರೆ ಪೊಲೀಸ್ ಕಸ್ಟಡಿಗೆ ತಗೊಂಡು ವಿಚಾರಣೆ ಮಾಡ್ತಾರೆ. ಆದರೆ ಆ ನಟೋರಿಯಸ್ ಕ್ರಿಮಿನಲ್ ಅನ್ನ ಯಾಕೆ ಕೂಡಲೇ ನ್ಯಾಯಾಂಗ ಬಂಧನಕ್ಕೆ ನೀಡಿದರು..?. ಇದು ಸರಿಯಾಗಿ ತನಿಖೆಯಾಗಬೇಕು ಎಂದು ಆಗ್ರಹಿಸಿದ್ರು. ಇದನ್ನೂ ಓದಿ: ಮಾರುವೇಷದಲ್ಲಿದ್ದ ಸ್ಯಾಂಟ್ರೋ ರವಿ ಬಗ್ಗೆ ಸುಳಿವು ಕೊಡ್ತು ಹಣೆ ಮೇಲಿನ ಮಾರ್ಕ್

    ಈ ಬೆನ್ನಲ್ಲೇ ರಾಜ್ಯ ಸರ್ಕಾರ ಸ್ಯಾಂಟ್ರೋ ರವಿ ಪ್ರಕರಣಗಳನ್ನ ಸಿಐಡಿಗೆ ವಹಿಸಿದ್ದು, ಸ್ಯಾಂಟ್ರೋ ರವಿಗೆ ಸಂಬಂಧಪಟ್ಟ ಬಹುತೇಕ ಎಲ್ಲ ಪ್ರಕರಣಗಳು ಸಿಐಡಿ ವ್ಯಾಪ್ತಿಗೆ ಬರಲಿವೆ. ಅಧಿಕೃತ ಆದೇಶ ಪತ್ರದಲ್ಲಿ ಸಿಐಡಿ (CID) ತನಿಖೆಯ ವ್ಯಾಪ್ತಿ, ಸ್ವರೂಪದ ಬಗ್ಗೆ ಸ್ಪಷ್ಟವಾಗಿ ಗೊತ್ತಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಯಾಂಟ್ರೋ ರವಿ ನಟೋರಿಯಸ್‌ ಕ್ರಿಮಿನಲ್‌..!

    ಸ್ಯಾಂಟ್ರೋ ರವಿ ನಟೋರಿಯಸ್‌ ಕ್ರಿಮಿನಲ್‌..!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k