Tag: ಸ್ಮøತಿ ಇರಾನಿ

  • ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯವನ್ನು ರದ್ದು ಮಾಡಲ್ಲ- ಕೇಂದ್ರ ಸ್ಪಷ್ಟನೆ

    ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯವನ್ನು ರದ್ದು ಮಾಡಲ್ಲ- ಕೇಂದ್ರ ಸ್ಪಷ್ಟನೆ

    ನವದೆಹಲಿ: ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು (ministry of minority affairs) ರದ್ದುಗೊಳಿಸುವ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

    ಕೇಂದ್ರ ಸರ್ಕಾರವು (Central Government) ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ರದ್ದುಪಡಿಸಿ, ಅದನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದೊಂದಿಗೆ ವಿಲೀನಗೊಳಿಸುವ ಸಾಧ್ಯತೆಯಿದೆ ಎಂದು ಮಧ್ಯಮವೊಂದು ವರದಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ (Smriti Irani) ರೀ ಟ್ವೀಟ್ (ReTweet) ಮಾಡಿ ಸ್ಪಷ್ಟ ಪಡಿಸಿದರು.

    ಟ್ವೀಟ್‍ನಲ್ಲಿ ಏನಿದೆ?: ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್‍ನಲ್ಲಿ ಸ್ಪಷ್ಟಪಡಿಸಿದೆ. ಈ ಟ್ವೀಟ್‍ನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ರೀಟ್ವೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇಶದಲ್ಲಿನ ಎಲ್ಲ ಪುರುಷರು ಅತ್ಯಾಚಾರಿಗಳೇ – ರಾಹುಲ್‍ಗೆ ಸ್ಮೃತಿ ಇರಾನಿ ಪ್ರಶ್ನೆ

    ದೇಶದಲ್ಲಿನ ಎಲ್ಲ ಪುರುಷರು ಅತ್ಯಾಚಾರಿಗಳೇ – ರಾಹುಲ್‍ಗೆ ಸ್ಮೃತಿ ಇರಾನಿ ಪ್ರಶ್ನೆ

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ “ರೇಪ್ ಇನ್ ಇಂಡಿಯಾ” ಎಂಬ ಹೇಳಿಕೆ ಕುರಿತು ಆಕ್ರೋಶ ಭುಗಿಲೆದ್ದಿದ್ದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿಯವರು ವಾಗ್ದಾಳಿ ನಡೆಸಿದ್ದಾರೆ.

    ಈ ಕುರಿತು ಸುದ್ದಿಗಾರರೊ0ದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ರೇಪ್ ಇನ್ ಇಂಡಿಯಾ ಎಂದು ಯಾವಾಗ ಹೇಳಿದರೋ ಅಂದೇ ದೇಶದ ಎಲ್ಲ ಪುರುಷರು ಅತ್ಯಾಚಾರಿಗಳು ಎಂದು ತಿಳಿಯಿತು. ಕಾಂಗ್ರೆಸ್ ಸಂಸದರು ಭಾರತದ ಮೇಲೆ ಅತ್ಯಾಚಾರ ಎಸಗಲು ಪುರುಷರನ್ನು ಯಾವಾಗ ಕರೆಸಿದರು ಎಂಬುದೇ ಆಶ್ಚರ್ಯಕರ ಸಂಗತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಮಹಿಳೆಯರ ಮೇಲಿನ ದೌರ್ಜನ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಆಕ್ಷೇಪಾರ್ಹ. ಮಹಿಳೆಯರು ಇದಕ್ಕೆ ಪ್ರತ್ಯುತ್ತರ ನೀಡಬೇಕು. ಆದರೆ ನಾನೀಗ ಪ್ರಶ್ನಿಸುತ್ತೇನೆ. ರಾಹುಲ್ ಗಾಂಧಿಯವರ ಪ್ರಕಾರ ಭಾರತದಲ್ಲಿನ ಪ್ರತಿಯೊಬ್ಬ ಪುರುಷ ಅತ್ಯಾಚಾರಿಯೇ ಎಂದು ಸ್ಮೃತಿ ಇರಾನಿ ಪ್ರಶ್ನಿಸಿದರು.

    ಈ ಕುರಿತು ಸೋನಿಯಾ ಗಾಂಧಿಯವರೂ ಸಹ ವಿವರಿಸಬೇಕು, ಇಲ್ಲವಾದಲ್ಲಿ ಮಹಿಳೆಯರು ಇಂತಹ ಆಕ್ಷೇಪಾರ್ಹ ಹೇಳಿಕೆಯನ್ನು ಒಪ್ಪುವುದಿಲ್ಲ. ಈ ಕುರಿತು ರಾಹುಲ್ ಗಾಂಧಿ ಅವರು ಎಚ್ಚರಿಕೆಯಿಂದ ಕೇಳಬೇಕು. ಬನ್ನಿ ಭಾರತದಲ್ಲಿ ಅತ್ಯಾಚಾರ ಮಾಡಿ, ಭಾರತದ ಕುಟುಂಬಗಳು ನಿಮಗೆ ಆಹ್ವಾನ ನೀಡಿವೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ಕರೆ ನೀಡಿದ್ದಾರೆ. ದೇಶದ ಜನತೆಗೆ ರಾಹುಲ್ ಗಾಂಧಿಯವರು ನೀಡುವ ಸಂದೇಶ ಇದೇನಾ? ಇವರನ್ನು ಶಿಕ್ಷಿಸಬೇಕಿದೆ, ರಾಹುಲ್ ಗಾಂಧಿ ಭಾರತದ ಮಹಿಳೆಯರು ಹಾಗೂ ಜನತೆಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

    ಜಾರ್ಖಂಡ್‍ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ ಎಂದು ಹೇಳುತ್ತಾರೆ. ಆದರೆ ಪ್ರಸ್ತುತ ದಿನಗಳಲ್ಲಿ ಎಲ್ಲಿ ನೋಡಿದರೂ ರೇಪ್ ಇನ್ ಇಂಡಿಯಾ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ರಾಹುಲ್ ಗಾಂಧಿಯವರ ಅತ್ಯಾಚಾರದ ಹೇಳಿಕೆ ಕುರಿತು ಮೇಲ್ಮನೆ ಹಾಗೂ ಕೆಳಮನೆ ಎರಡರಲ್ಲೂ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಈ ಕುರಿತು ರಾಹುಲ್ ಗಾಂಧಿಯವರು ಕ್ಷಮೆಯಾಚಿಸಬೇಕು ಎಂದು ಆಡಳಿತಾರೂಢ ಪಕ್ಷಗಳು ಪಟ್ಟು ಹಿಡಿದಿವೆ.