Tag: ಸ್ಮೋಕಿಂಗ್

  • ಸ್ಮೋಕಿಂಗ್ ರೂಮ್ ನಿಂದಾನೇ ನನಗೂ ರಾಕೇಶ್ ಅಡಿಗಗೂ ಬಾಂಡಿಂಗ್ ಬೆಳೆದಿದ್ದು : ಸೋನು ಶ್ರೀನಿವಾಸ್ ಗೌಡ

    ಸ್ಮೋಕಿಂಗ್ ರೂಮ್ ನಿಂದಾನೇ ನನಗೂ ರಾಕೇಶ್ ಅಡಿಗಗೂ ಬಾಂಡಿಂಗ್ ಬೆಳೆದಿದ್ದು : ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಸಿಗರೇಟು ಸೇದಿದರು ಎನ್ನುವುದೇ ದೊಡ್ಡ ಸುದ್ದಿ ಆಯಿತು. ಟ್ರೋಲ್ ಪೇಜುಗಳಲ್ಲಿ ಮತ್ತು ನೋಡುಗರು ಕೂಡ ಈ ಕುರಿತು ಕಾಮೆಂಟ್ ಮಾಡಿದ್ದರು. ಸೋನು ಇದನ್ನೆಲ್ಲ ಮಾಡ್ತಾರಾ ಅಂತ ಕೆಲವರು ಅಚ್ಚರಿಯನ್ನೂ ವ್ಯಕ್ತ ಪಡಿಸಿದರು. ಆದರೂ, ಆಗಾಗ್ಗೆ ಬಿಗ್ ಬಾಸ್ ಮನೆಯಲ್ಲಿ ಸ್ಮೋಕಿಂಗ್ ಕುರಿತಾಗಿ ಚರ್ಚೆಗಳು ನಡೆಯುತ್ತಲೇ ಇದ್ದವು. ಈ ಕುರಿತು ಸ್ವತಃ ಸೋನು ಗೌಡ ಅವರ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ್ದಾರೆ. ಇದನ್ನೂ  ಓದಿ:ಅನುಷ್ಕಾಗೆ ಕೈಕೊಟ್ಟು ಬಾಲಿವುಡ್ ಬೆಡಗಿಗೆ ಮನಸ್ಸು ಕೊಟ್ಟ ಪ್ರಭಾಸ್

    ಬಿಗ್ ಬಾಸ್ (Bigg Boss OTT) ಮನೆಗೂ ಹೋಗುವ ಮುನ್ನ ತಮ್ಮ ಬ್ರ್ಯಾಂಡ್ ಬಗ್ಗೆಯೂ ಸೋನು ಹೇಳಿದ್ದರಂತೆ. ಅದನ್ನೇ ತರಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರಂತೆ. ಹಾಗಾಗಿ ಬಿಗ್ ಬಾಸ್ ಟೀಮ್ ಕೂಡ ಸೋನು ನೆಚ್ಚಿನ ಬ್ರ್ಯಾಂಡ್ ಅನ್ನೇ ಒದಗಿಸಿತ್ತಂತೆ. ಬಿಗ್ ಬಾಸ್ ಮನೆಯಲ್ಲಿ ಸ್ಮೋಕ್ (Smoking) ಮಾಡಲು ಕಂಪೆನಿ ಕೊಡುತ್ತಿದ್ದದ್ದು ರಾಕೇಶ್ ಅಡಿಗ. ಹಾಗಾಗಿ ಪದೇ ಪದೇ ಆ ಸ್ಥಳಕ್ಕೆ ಇಬ್ಬರೂ ಹೋಗುತ್ತಿದ್ದರಂತೆ. ಮೊದಲ ಬಾರಿಗೆ ಸೋನು ಸಿಗರೇಟು ಕೇಳಿದಾಗ ಸ್ವತಃ ರಾಕೇಶ್ ಅಡಿಗ ಅಚ್ಚರಿ ವ್ಯಕ್ತ ಪಡಿಸಿದ್ದರಂತೆ.

    ನೋಡಿದವರು ಏನು ಅನ್ನುತ್ತಾರೆ ಹೀಗೆ ಸಿಗರೇಟು (Cigarette) ಸೇದಿದರೆ ಎಂದು ರಾಕೇಶ್ ಅಡಿಗ ಕೇಳಿದಾಗ, ನಾನು ಯಾವುದನ್ನೂ ಮುಚ್ಚಿ ಇಡುವುದಿಲ್ಲ. ಹಾಗೆಯೇ ನಾನು ಅಡಿಕ್ಟ್ ಅಲ್ಲ. ಬೇಕು ಅಂತಾನೂ ಅನಿಸಲ್ಲ. ಎದುರಿಗೆ ಇದ್ದಾಗ ಅದನ್ನು ಮಾಡಬೇಕು ಅನಿಸತ್ತೆ. ಹಾಗಾಗಿ ಸಿಗರೇಟು ಸೇದಿದ್ದೇನೆ. ಬಹುಶಃ ನನಗೆ ರಾಕೇಶ್ ಅಡಿಗ (Rakesh Adiga) ಅಷ್ಟೊಂದು ಪರಿಚಯ ಆಗುವುದಕ್ಕೆ ಕಾರಣವೇ ಸ್ಮೋಕಿಂಗ್ ರೂಮ್. ತೀರಾ ಕ್ಲೋಸ್ ಆಗಿದ್ದು ಅದೇ ಏರಿಯಾದಲ್ಲಿ ಅನ್ನುತ್ತಾರೆ ಸೋನು.

    ಹಾಗಂತ ಧೂಮಪಾನ ಮಾಡುವುದರಿಂದ ಅಪಾಯವಿದೆ ಎಂದು ಸೋನುಗೂ ಗೊತ್ತಿದೆ. ಹಾಗಾಗಿಯೇ ಅವರು ನಿತ್ಯವೂ ಅದನ್ನು ಮಾಡುವುದಿಲ್ಲವಂತೆ. ಯಾವಾಗಲಾದರೂ ಸ್ಮೋಕ್ ಮಾಡುವೆ. ನಾನು ಚಟಕ್ಕೆ ಬಿದ್ದವರಂತೆ ಸೇದುವುದಿಲ್ಲವೆಂದು ಅವರು ಸ್ಪಷ್ಟ ಪಡಿಸುತ್ತಾರೆ. ಅದು ಆರೋಗ್ಯಕ್ಕೆ ಒಳ್ಳೆಯದೂ ಅಲ್ಲ ಎಂದು ಹೇಳುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ಧೂಮಪಾನಿಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ 2

    ಧೂಮಪಾನಿಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ 2

    ನವದೆಹಲಿ: ಕ್ಯಾನ್ಸರ್‌ಗೆ ಕಾರಣವಾಗುವ ಗುಟ್ಕಾ ಮತ್ತು ತಂಬಾಕು ಬಳಕೆ ಮೇಲಿನ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಭಾರತದಲ್ಲಿ 16ರಿಂದ 64ರ ವಯೋಮಾನ ಒಟ್ಟಾರೆ 25 ಕೋಟಿಗಿಂತ ಹೆಚ್ಚು ಮಂದಿ ಧೂಮಪಾನದ ದಾಸರಾಗಿದ್ದಾರೆ. ಇದನ್ನೂ ಓದಿ:   ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

    ಅತಿ ಹೆಚ್ಚು ಧೂಮಪಾನಿಗಳನ್ನು ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನ ಪಡೆದಿದೆ ಎಂದು ವರದಿಯೊಂದು ತಿಳಿಸಿದೆ. ಅಲ್ಲದೆ ದುಮಪಾನ ತ್ಯಜಿಸುವವರ ಸಂಖ್ಯೆ ಭಾರತದಲ್ಲಿ ವಿರಳವಾಗಿದೆ ಎಂದು ವರದಿಯೊಂದಿಗೆ ತಿಳಿಸಿದೆ. ದಿ ಇಂಟರ್‌ನ್ಯಾಷನಲ್‌ ಕಮಿಷನ್‌ ಟು ರೀಗ್ನೈಟ್‌ ದಿ ಫೈಟ್‌ ಅಗೇನ್ಸ್ಟ್‌ ಸ್ಮೋಕಿಂಗ್ ಎಂಬ ಸಂಸ್ಥೆ ಈ ವರದಿ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಸರ್ಕಾರ ಅನ್ನದಾತನ ಮುಂದೆ ಮಂಡಿಯೂರಿದೆ: ಡಿ.ಕೆ. ಶಿವಕುಮಾರ್

    ಈ ಪ್ರಕಾರ ಭಾರತ ಮತ್ತು ಚೀನಾದಲ್ಲಿ 16ರಿಂದ 64 ವರ್ಷದೊಳಗಿನ 50 ಕೋಟಿಗಿಂತ ಹೆಚ್ಚು ಮಂದಿ ತಂಬಾಕು ವ್ಯಸನಿಗಳನ್ನು ಒಳಗೊಂಡಿರುವ ಚೀನಾ, ವಿಶ್ವಾದ್ಯಂತ ವರ್ಷಕ್ಕೆ 8 ಲಕ್ಷ ಮಂದಿಯ ಸಾವು ಮತ್ತು 20 ಕೋಟಿ ಜನರ ಅಂಗವಿಕಲತೆಗೆ ಕಾರಣವಾಗುವ ತಂಬಾಕಿಗೆ ಈಗಲೂ 114 ಕೋಟಿ ಮಂದಿ ದಾಸರಾಗಿದ್ದಾರೆ ಎಂಬ ಕಳವಳಕಾರಿ ಅಂಶವನ್ನು ಈ ವರದಿಯಲ್ಲಿ ತಿಳಿಸಲಾಗಿದೆ.

  • ಸಿಗರೇಟ್ ಸೇದೋದನ್ನ ಬಿಡು ಎಂದ ತಮ್ಮನನ್ನ ಕೊಂದ ಅಣ್ಣ

    ಸಿಗರೇಟ್ ಸೇದೋದನ್ನ ಬಿಡು ಎಂದ ತಮ್ಮನನ್ನ ಕೊಂದ ಅಣ್ಣ

    ನವದೆಹಲಿ: ಸ್ಮೋಕ್ ಮಾಡುವುದನ್ನು ಬಿಡುವಂತೆ ಸಲಹೆ ನೀಡಲು ಹೋಗಿದ್ದ ತಮ್ಮನನ್ನೆ ಅಣ್ಣನೊಬ್ಬ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸತ್ಯದೇವ ಕುಮಾರ್ (25) ಮೃತ ದುರ್ದೈವಿ. ಶಿಶುಪಾಲ್ ಕುಮಾರ್ ಕೊಲೆ ಮಾಡಿದ ಆರೋಪಿ. ಶಿಶುಪಾಲ್ ನಿತ್ಯವೂ ಮನೆಯಲ್ಲಿ ಸ್ಮೋಕ್ ಮಾಡುತ್ತಿದ್ದನು. ಇದರಿಂದಾಗಿ ಕುಟುಂಬದ ಸದಸ್ಯರಿಗೆ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಸತ್ಯದೇವ ಅಣ್ಣನಿಗೆ ಮೊದಲಿನಿಂದಲೂ ಸ್ಮೋಕ್ ಮಾಡದಂತೆ ಸಲಹೆ ನೀಡುತ್ತಿದ್ದರು.

    ನಡೆದದ್ದು ಏನು?
    ಬುಧವಾರ ಮಧ್ಯಾಹ್ನ 2.30 ಗಂಟೆಗೆ ಶಿಶುಪಾಲ್ ತನ್ನ ರೂಮ್‍ನಲ್ಲಿ ಸಿಗರೇಟ್ ಹಿಡಿದು ಕುಳಿತ್ತಿದ್ದ. ಇದನ್ನು ನೋಡಿದ ಸತ್ಯದೇವ ಶಿಶುಪಾಲ್‍ಗೆ ಸಲಹೆ ನೀಡಲು ಮುಂದಾದರು. ಇದಕ್ಕೆ ಶಿಶುಪಾಲ್ ಪ್ರತಿರೋಧ ವ್ಯಕ್ತಪಡಿಸಿದ್ದು, ಇಬ್ಬರ ಮಧ್ಯ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಶಿಶುಪಾಲ್ ಮದ್ಯ ಸೇವನೆ ಕೂಡಾ ಮಾಡಿದ್ದರಿಂದ ಕೋಪದಲ್ಲಿ ಶೂ ಲೇಸ್ ತಗೆದುಕೊಂಡು ಸತ್ಯದೇವ ಕುತ್ತಿಗೆಗೆ ಬಿಗಿದ್ದಿದ್ದಾನೆ. ಅಸ್ವಸ್ತಗೊಂಡ ಸತ್ಯದೇವ ಜ್ಞಾನತಪ್ಪಿ ಕೆಳಗೆ ಬಿದ್ದಿದ್ದಾರೆ. ಗಾಬರಿಗೊಂಡ ಶಿಶುಕುಮಾರ್ ತಮ್ಮನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದನು. ಚಿಕಿತ್ಸೆ ಫಲಕಾರಿಯಾಗದೆ ಸತ್ಯದೇವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ಶಿಶುಪಾಲ್ ತನ್ನ ತಂದೆ ಹಾಗೂ ನೆರೆಹೊರೆಯವರಿಗೆ ಇದು ಸಹಜ ಸಾವು ಎನ್ನುವಂತೆ ನಟಿಸಿದ್ದನು.

    ಪ್ರಕರಣದ ಕುರಿತು ಆಸ್ಪತ್ರೆ ಅಧಿಕಾರಿಗಳು ಕೊಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಸ್ಪತ್ರೆಗೆ ಬಂದ ಪಟೇಲ್ ನಗರ ಠಾಣೆಯ ಎಸಿಪಿ ರೋಹಿತ್ ಸಿಂಗ್ ಅವರು, ಪ್ರಕರಣ ದಾಖಲಿಸಿಕೊಂಡು ಮರುಣೋತ್ತರ ಪರೀಕ್ಷೆಗೆ ಆದೇಶ ನೀಡಿದ್ದರು.

    ಮರುಣೋತ್ತರ ಪರೀಕ್ಷೆಯ ಫಲಿತಾಂಶದಲ್ಲಿ ಸತ್ಯದೇವ ಸಾವು ಸಹಜವಲ್ಲ, ಕೊಲೆ ಎನ್ನಲಾಗಿತ್ತು. ಇದರಿಂದ ತನಿಖೆ ಚುರುಕುಗೊಳಿಸಿದ ಪೊಲೀಸರು ಶಿಶುಪಾಲ್‍ನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ.