Tag: ಸ್ಮೈಲ್ ಶ್ರೀನು

  • ಸದ್ಯದಲ್ಲೇ ಕೆ.ಮಂಜು ಮತ್ತು ಸ್ಮೈಲ್ ಶ್ರೀನು ಕಾಂಬಿನೇಶನ್ ಚಿತ್ರ

    ಸದ್ಯದಲ್ಲೇ ಕೆ.ಮಂಜು ಮತ್ತು ಸ್ಮೈಲ್ ಶ್ರೀನು ಕಾಂಬಿನೇಶನ್ ಚಿತ್ರ

    ಯುವ ನಿರ್ದೇಶಕ ಸ್ಮೈಲ್ ಶ್ರೀನು ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿ ಗುರುತಿಸಿಕೊಂಡವರು. ತೂಫಾನ್, ಬಳ್ಳಾರಿ ದರ್ಬಾರ್, 18 ಣo 25, ಓ ಮೈ ಲವ್ ನಂಥ ಮಾಸ್ ಅಂಡ್ ಕ್ಲಾಸ್ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ತನ್ನದೇ ಆದ ಸ್ಥಾನ ಗಳಿಸಿರುವ ಇವರು ಇದೀಗ ನಿರ್ಮಾಪಕ ಕೆ.ಮಂಜು ಅವರ ಜತೆ ಕೈಜೋಡಿಸಿದ್ದಾರೆ.

    ಸದಾ ಪ್ರತಿಭಾವಂತರನ್ನು ಪೋಷಿಸುತ್ತ ಬಂದಿರುವ ಕೆ.ಮಂಜು ಸ್ಮೈಲ್ ಶ್ರೀನು ಅವರಲ್ಲಿರುವ ಪ್ರತಿಭೆಯನ್ನು ಗುರ್ತಿಸಿ ದೊಡ್ಡ ಜವಾಬ್ದಾರಿ ವಹಿಸಿದ್ದಾರೆ. ರಾಜಾಹುಲಿ, ರಾಮ ಶಾಮ ಭಾಮ, ಜಮೀನ್ದಾರು, ಮಾತಾಡ್ ಮಾತಾಡ್ ಮಲ್ಲಿಗೆ ಸೇರಿದಂತೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನೇ ನಿರ್ಮಿಸಿರುವ ನಿರ್ಮಾಪಕ ಕೆ.ಮಂಜು ಈ ಸಲ ದೊಡ್ಡ ಕ್ಯಾನ್ವಾಸ್‌ನೊಂದಿಗೆ ದೊಡ್ಡ ಮಟ್ಟದ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ದಂಪತಿಗೆ ಹೆಣ್ಣು ಮಗು ಜನನ

    ಈಗಾಗಲೇ ಕಥೆ, ಚಿತ್ರಕಥೆ ಸಿದ್ದವಾಗಿದ್ದು, ಡೈಲಾಗ್ ವರ್ಷನ್ ನಡೆಯುತ್ತಿದೆ. ಇದೀಗ ಈ ಇಬ್ಬರು ಅನುಭವಿಗಳು ಜೊತೆ ಸೇರಿರುವುದು ಚಿತ್ರಪ್ರೇಮಿಗಳಲ್ಲಿ ಹಾಗೂ ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ.

    ಕೆ.ಮಂಜು ಸಿನಿಮಾಸ್ ಅಡಿಯಲ್ಲಿ ಚಿತ್ರ ನಿರ್ದೇಶಿಸುತ್ತಿರುವ ಕುರಿತಂತೆ ಮಾತನಾಡಿದ ನಿರ್ದೇಶಕ ಸ್ಮೈಲ್ ಶ್ರೀನು, ನನ್ನ ಸ್ಕ್ರಿಪ್ಟ್ ವರ್ಕ್, ನರೇಶನ್ ಮೇಲೆ ನಂಬಿಕೆಯಿಟ್ಟು ಈ ಜವಾಬ್ದಾರಿ ವಹಿಸಿದ್ದಾರೆ. ಪ್ರೇಕ್ಷಕರಿಗೆ ಹೊಸತನದ ಚಿತ್ರವನ್ನು ನೀಡುವ ಸಿದ್ದತೆಯಂತೂ ನಡೆಯುತ್ತಿದೆ. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂಥ ಸಿನಿಮಾ ಇದಾಗಲಿದೆ. ಕೆಲವೇ ದಿನಗಳಲ್ಲಿ ಚಿತ್ರದ ಟೈಟಲ್, ಕಲಾವಿದರು, ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡುತ್ತೇವೆ. ಸದ್ಯದಲ್ಲೇ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಲಾಂಚ್ ಮಾಡುತ್ತಿದ್ದೇವೆ ಎಂದು ಹೇಳಿದರು. ನನ್ನ ದೊಡ್ಡ ಕನಸಿಗೆ ಅನುಭವಿ ನಿರ್ಮಾಪಕರು ಹಾಗೂ ಖ್ಯಾತ ವಿತರಕರೂ ಆದ ಕೆ.ಮಂಜು ಅವರು ಜೊತೆಯಾಗಿರುವುದು ನನಗೆ ಸಿಕ್ಕಂಥ ದೊಡ್ಡ ಸಪೋರ್ಟ್ ಹಾಗೂ ನನ್ನ ಅದೃಷ್ಟವೆಂದೇ ಹೇಳಬಹುದು ಎಂದಿದ್ದಾರೆ.

    ಸದ್ಯ ನಿರ್ದೇಶಕರು ಸಂಭಾಷಣೆ ಹೆಣೆಯುವುದರಲ್ಲಿ ತೊಡಗಿಕೊಂಡಿದ್ದು, ಚಿತ್ರದ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಿದ್ದೇವೆ ಎಂದು ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ. ನಿರ್ದೇಶಕ ಸ್ಮೈಲ್ ಶ್ರೀನು. ಇದು ಕೆ.ಮಂಜು ಅವರ ನಿರ್ಮಾಣದ 44ನೇ ಚಿತ್ರವಾಗಿದ್ದು, ಸದ್ಯದಲ್ಲೇ ಚಾಲನೆ ಸಿಗಲಿದೆ.ಇದನ್ನೂ ಓದಿ: ತಮಿಳುನಾಡಿನಲ್ಲಿ ಸ್ಟಂಟ್‌ಮೆನ್ ಸಾವು – ಚಿತ್ರನಿರ್ದೇಶಕ ಪ.ರಂಜಿತ್ ವಿರುದ್ಧ ಎಫ್‌ಐಆರ್

     

     

  • ಕೆ.ಮಂಜು ನಿರ್ಮಾಣದ ಚಿತ್ರಕ್ಕೆ ಸ್ಮೈಲ್ ಶ್ರೀನು ನಿರ್ದೇಶಕ

    ಕೆ.ಮಂಜು ನಿರ್ಮಾಣದ ಚಿತ್ರಕ್ಕೆ ಸ್ಮೈಲ್ ಶ್ರೀನು ನಿರ್ದೇಶಕ

    ರಾಜಾಹುಲಿ, ರಾಮ ಶಾಮ ಭಾಮ, ಜಮೀನ್ದಾರು, ಹೃದಯವಂತ, ಮಾತಾಡ್ ಮಾತಾಡ್ ಮಲ್ಲಿಗೆ ಸೇರಿದಂತೆ  ಕನ್ನಡದಲ್ಲಿ  ಅದ್ದೂರಿ ಹಾಗೂ ಸದಭಿರುಚಿಯ ಚಿತ್ರಗಳನ್ನೇ ನಿರ್ಮಿಸುತ್ತ ಬಂದಿರುವ ನಿರ್ಮಾಪಕ ಕೆ.ಮಂಜು (K.Manju) ಇದೀಗ ಯುವ ನಿರ್ದೇಶಕ ಸ್ಮೈಲ್ ಶ್ರೀನು ಜೊತೆ ಕೈ ಜೋಡಿಸಿದ್ದಾರೆ. ಸ್ಮೈಲ್ ಶ್ರೀನು (Smile Sreenu) ಕೂಡ ಕನ್ನಡದಲ್ಲಿ ಯಶಸ್ವೀ ಚಿತ್ರಗಳನ್ನೇ ಮಾಡುತ್ತ ಬಂದವರು. ತೂಫಾನ್, ಬಳ್ಳಾರಿ ದರ್ಬಾರ್, 18 to 25, ಓ ಮೈ ಲವ್ ನಂಥ ಮಾಸ್ ಅಂಡ್ ಕ್ಲಾಸ್ ಚಿತ್ರಗಳನ್ನು ನಿರ್ದೇಶಿಸಿ, ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ತನ್ನದೇ ಆದ ಸ್ಥಾನ ಗಳಿಸಿದವರು. ಇದೀಗ ಈ ಇಬ್ಬರು ಅನುಭವಿಗಳು ಜೊತೆ ಸೇರಿರುವುದು ಚಿತ್ರಪ್ರೇಮಿಗಳಲ್ಲಿ ಹಾಗೂ ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ.

    ಕೆ.ಮಂಜು ಸಿನಿಮಾಸ್ ಅಡಿಯಲ್ಲಿ ಚಿತ್ರ ನಿರ್ದೇಶಿಸುತ್ತಿರುವ ಕುರಿತಂತೆ ಮಾತನಾಡಿದ ನಿರ್ದೇಶಕ ಸ್ಮೈಲ್ ಶ್ರೀನು, ನಾವಿಬ್ಬರೂ ಸೇರಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂಥ ಒಂದು ಸಿನಿಮಾ ಮಾಡಬೇಕು ಅಂತ ಬಹಳ ದಿನಗಳಿಂದ  ಅಂದುಕೊಂಡಿದ್ದೆವು. ಈ ಬಗ್ಗೆ ಸಾಕಷ್ಟು ಚರ್ಚಿಸಿ ಮಾತಾಡಿದ್ದೆವು. ಅದಕ್ಕೀಗ ಕಾಲ ಕೂಡಿಬಂದಿದೆ.  ಇದೊಂದು ನ್ಯಾಷನಲ್ ಸಬ್ಜೆಕ್ಟ್ ಆಗಿದ್ದು, ಸಾಮಾಜಿಕ ಕಳಕಳಿ ಇರುವ, ಇಡೀ ಪ್ರಪಂಚಕ್ಕೇ ಗೊತ್ತಿರುವ ದೊಡ್ಡ ವ್ಯಕ್ತಿಯೊಬ್ಬರ ಬದುಕಿನ ನೈಜಘಟನೆ ಆಧಾರಿತವಾಗಿದ್ದು, ಸಧ್ಯ ಚಿತ್ರದ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ. ಆ ವ್ಯಕ್ತಿ ಯಾರು? ಹಾಗೂ  ಚಿತ್ರದ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡುತ್ತೇವೆ.

    ನಾನು ಈವರೆಗೆ ಉತ್ತಮ ಹಾಗೂ ಗುಣಮಟ್ಟದ ಸಿನಿಮಾಗಳನ್ನೇ ನಿರ್ದೇಶನ ಹಾಗೂ ನಿರ್ಮಾಣ  ಮಾಡುತ್ತಾ ಬಂದಿದ್ದರೂ,  ಅವುಗಳನ್ನು ಸರಿಯಾದ ರೀತಿಯಲ್ಲಿ ಹೇಗೆ ಮಾರ್ಕೆಟಿಂಗ್  ಮಾಡಬೇಕು, ಚಿತ್ರಗಳನ್ನು  ಯಾವ ರೀತಿ ಜನರಿಗೆ ತಲುಪಿಸಬೇಕು  ಎಂಬುದನ್ನು ತಿಳಿದುಕೊಳ್ಳಲು ನನ್ನ ಚಿತ್ರಕ್ಕೆ ಅನುಭವಿ ನಿರ್ಮಾಪಕರು ಹಾಗೂ ಖ್ಯಾತ ವಿತರಕರೂ ಆದ ಕೆ. ಮಂಜು ಅವರು ಜೊತೆಯಾಗಿರುವುದು ನನಗೆ ಸಿಕ್ಕಂಥ ದೊಡ್ಡ ಸಪೋರ್ಟ್ ಹಾಗೂ ನನ್ನ ಅದೃಷ್ಟವೆಂದೇ ಹೇಳಬಹುದು ಎಂದಿದ್ದಾರೆ.

     

    ಸದ್ಯ ನಿರ್ದೇಶಕರು ಸ್ಕ್ರಿಪ್ಟ್ ಹಂತದಲ್ಲಿ ತೊಡಗಿಕೊಂಡಿದ್ದು, ಚಿತ್ರದ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಿದ್ದೇವೆ ಎಂದು ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ ನಿರ್ದೇಶಕ ಸ್ಮೈಲ್ ಶ್ರೀನು. ಇದು ಕೆ.ಮಂಜು ಅವರ ನಿರ್ಮಾಣದ  44ನೇ ಚಿತ್ರವಾಗಿದ್ದು ಸದ್ಯದಲ್ಲೇ ಸೆಟ್ಟೇರಲಿದೆ.

  • ಹೀರೋ ಆದ ಡೈರೆಕ್ಟರ್ ಸ್ಮೈಲ್ ಶ್ರೀನು

    ಹೀರೋ ಆದ ಡೈರೆಕ್ಟರ್ ಸ್ಮೈಲ್ ಶ್ರೀನು

    ಶಸ್ವಿ ಚಿತ್ರಗಳಾದ  ಓ ಮೈ ಲವ್, 18 ಟು 25  ಬಳ್ಳಾರಿ ದರ್ಬಾರ್ ಅಲ್ಲದೆ ತೆಲುಗಿನಲ್ಲೂ ಪ್ರತಿಭಾವಂತ  ನಿರ್ದೇಶಕನಾಗಿ  ಗುರುತಿಸಿಕೊಂಡಿರುವ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) (Smile Srinu) ಇದೀಗ ಹೀರೋ ಆಗುತ್ತಿದ್ದಾರೆ. ಈ ಕುರಿತಂತೆ ಮಾತನಾಡಿದ ಶ್ರೀನು,  ‘ನಿರ್ದೇಶಕರು ಕಥೆ ತುಂಬಾ ಅದ್ಭುತವಾಗಿ ಮಾಡಿಕೊಂಡಿದ್ದಾರೆ. ಎಲ್ಲಾ ಪಾತ್ರಗಳ ಜೊತೆ ನಾಯಕನ ಪಾತ್ರ ತುಂಬಾ ಚೆನ್ನಾಗಿದೆ. ನಟನಾಗಿ ಈ ಒಂದು ಪಾತ್ರ ಮಾಡಿದರೆ ಸಾಕು ಅನ್ನುವ ಹಾಗೆ ಈ ನಾಯಕನ ಪಾತ್ರ ಇದೆ. ಒಬ್ಬ ನಟನಾಗಿ ನಿರೂಪಿಸಲು ಏನೆಲ್ಲಾ ಭಾವನೆಗಳು ಬೇಕೋ ಅದೆಲ್ಲವೂ ಈ ಚಿತ್ರದಲ್ಲಿದೆ. ಹಾಗಾಗಿ ನಟಿಸಲು ಒಪ್ಪಿಕೊಂಡೆ’ ಅಂತಾರೆ.

    ಶ್ರೀಧರ್ ಪೂರ್ವಜಿತ್ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು. ಆ ಚಿತ್ರದ ಹೆಸರು ಮಂಡೇಲಾ (Mandela). ಇದೊಂದು ವಿಭಿನ್ನ  ಪ್ರಯೋಗದ  ಚಿತ್ರ ಎಂದೂ ಹೇಳಬಹುದು.  ಸಿನಿಮಾ ಎಂದಮೇಲೆ ಹಲವಾರು ಪಾತ್ರಗಳಿರಬೇಕಲ್ಲವೆ, ಈ ಚಿತ್ರದಲ್ಲೂ ಒಂದಷ್ಟು ಪಾತ್ರಗಳಿವೆ. ಆದರೆ ಪ್ರಮುಖವಾಗಿ ಮೂರು ಪಾತ್ರಗಳ ಮೂಲಕ ನಿರ್ದೇಶಕರು ಕಥೆಯನ್ನು ಹೇಳಹೊರಟಿದ್ದಾರೆ. 1980- 90ರ ದಶಕದಲ್ಲಿನ ಸೂಕ್ಷ್ಮ ಹಾಗೂ ಸುಂದರವಾದ ಭಾವನೆಗಳ  ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದೆ. ಶ್ರೀಲಕ್ಷ್ಮಿ ನರಸಿಂಹ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ನಾಯಕನಾಗಿ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) ನಟಿಸುತ್ತಿದ್ದಾರೆ.

    ಈ ಸಿನಿಮಾ ಹೊರತುಪಡಿಸಿ ಇನ್ನೂ  ಎರಡು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಲು ಒಪ್ಪಿಕೊಂಡಿದ್ದಾರಂತೆ ಸ್ಮೈಲ್ ಶ್ರೀನು.  ಹಾಗೆ ಎರೆಡು ಚಿತ್ರಗಳನ್ನು  ನಿರ್ದೇಶನ ಕೂಡ ಮಾಡಲಿದ್ದಾರಂತೆ. ಮುಂದಿನ ದಿನಗಳಲ್ಲಿ ಈ ಎಲ್ಲ ವಿವರಣೆ ನೀಡುತ್ತೇನೆ ಎಂದು ಸ್ಮೈಲ್ ಮಾಡುತ್ತಾರೆ ನಟ ,ನಿರ್ದೇಶಕ ನಾರಿ ಶ್ರೀನಿವಾಸ್.

    ಚಿತ್ರದಲ್ಲಿ  ಇಬ್ಬರು ನಾಯಕಿಯರು ನಟಿಸುತ್ತಿದ್ದು, ಅವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕನ್ನಡದಲ್ಲಿ ಈಗಾಗಲೇ ಬಾ ನಲ್ಲೆ ಮಧುಚಂದ್ರಕೆ, ಬೆಳದಿಂಗಳ ಬಾಲೆಯಂಥ ಚಿತ್ರಗಳು ಬಂದು ಹೋಗಿವೆ. ಆಗಿನಿಂದಲೂ ಹೊಸಥರದ ಕಂಟೆಂಟ್ ಇರುವ ಕಥೆಗಳನ್ನು ನಮ್ಮ ಜನ  ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಅದೇ ರೀತಿ ನಮ್ಮ ಹೊಸ ಈ ಪ್ರಯತ್ನವನ್ನೂ ಪ್ರೇಕ್ಷಕರು ಕೈ ಹಿಡಿಯುತ್ತಾರೆ ಎಂಬ ಭರವಸೆಯನ್ನು ವ್ಯಕ್ತ ಪಡಿಸುತ್ತಾರೆ ಚಿತ್ರದ ನಾಯಕ ಸ್ಮೈಲ್ ಶ್ರೀನು.  ಕನ್ನಡ, ತೆಲುಗು, ತಮಿಳು ಸೇರಿ ಮೂರು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಪಕ್ಕಾ ಕಂಟೆಂಟ್ ಬೇಸ್ ಸಿನಿಮಾ ಇದಾಗಲಿದೆ.  ಬರುವ ಜುಲೈ 2 ಅಥವಾ 3ನೇ ವಾರ ಈ  ಚಿತ್ರ ಪ್ರಾರಂಭವಾಗಲಿದೆ.

    ನಮಗೆ ಫೇಮಸ್ ಆಗಿರೋ ಮ್ಯೂಸಿಕ್ ಡೈರೆಕ್ಟರ್ ಬೇಡ. ಫೇಮಸ್ ಆಗೋವಂಥ ಮ್ಯೂಸಿಕ್ ಕಂಪೋಜ್  ಮಾಡುವ ಸಂಗೀತ ನಿರ್ದೇಶಕರನ್ನ ಹುಡುಕುತ್ತಿದ್ದೇವೆ.  ಸಂಬಂಧಗಳ‌ ವ್ಯಾಲ್ಯೂ ಚೆನ್ನಾಗಿರಬೇಕು. ‌‌ಇಲ್ಲಿ ಯಾರೂ ಶತ್ರುಗಳಿಲ್ಲ ಅಂತ ಹೇಳ ಹೊರಟಿದ್ದೇವೆ. ನಾವು ತಪ್ಪು ಮಾಡಿದಾಗ ಪ್ರಪಂಚ ನಮ್ಮನ್ನು ಹೇಗೆ ನೋಡುತ್ತೆ  ಅಂತ ಸಮಯದಲ್ಲಿ ಸಮಾಜ ನಮ್ಮ ಜೊತೆ ಹೇಗೆ ನೆಡೆದುಕೊಳ್ಳುತ್ತೆ ಅನ್ನುವುದರ ಜೊತೆಗೆ ಇನ್ನೂ ಹಲವಾರು ಸೂಕ್ಷ್ಮ ವಿಷಯಗಳನ್ನು ಈ ಚಿತ್ರದಲ್ಲಿ ಹೇಳಲಿದ್ದೇವೆಂದು ಅಂತಾರೆ ನಿರ್ದೇಶಕ ಶ್ರೀಧರ್ ಪೂರ್ವಜಿತ್. ಮಂಡೇಲಾದ ಸ್ಕ್ರಿಪ್ಟ್ ಅಂತಿಮ ಹಂತದಲ್ಲಿದೆ. ಹಂತ ಹಂತವಾಗಿ ಎಲ್ಲವನ್ನೂ ತಿಳಿಸುತ್ತೇವೆ’ ಎನ್ನುತ್ತಾರೆ ನಿರ್ದೇಶಕ ಶ್ರೀಧರ್ ಪೂರ್ವಜಿತ್.

  • ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ ಮಾಡಿದ ನಿರ್ದೇಶಕ ಸ್ಮೈಲ್ ಶ್ರೀನು

    ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ ಮಾಡಿದ ನಿರ್ದೇಶಕ ಸ್ಮೈಲ್ ಶ್ರೀನು

    ಸಿನಿಮಾ ರಂಗದಿಂದ ಸಣ್ಣದೊಂದು ಬಿಡುವು ಮಾಡಿಕೊಂಡು ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದ ನಿರ್ದೇಶಕ ಸ್ಮೈಲ್ ಶ್ರೀನು (Smile Srinu), ಮತ್ತೆ ಈಗ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ಮತ್ತೆ ಎಂದಿನಂತೆ ತಮ್ಮ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಈ ಬ್ಯಾರಿ ಅವರು ಪ್ಯಾನ್ ಇಂಡಿಯಾ (Pan India) ಸಿನಿಮಾಗೆ ಪ್ಲ್ಯಾನ್ ಮಾಡಿದ್ದಾರೆ.

    ಈ ಹಿಂದೆ ತೂಫಾನ್, ಬಳ್ಳಾರಿ ದರ್ಬಾರ್ ಅಲ್ಲದೆ  ಇತ್ತೀಚೆಗೆ ತೆರೆಕಂಡ ಓ ಮೈ ಲವ್ ಚಿತ್ರಗಳ ನಂತರ ಸ್ಮೈಲ್ ಶ್ರೀನು ಅವರೀಗ ದೊಡ್ಡ ಮಟ್ಟದ ಪ್ಯಾನ್ ಇಂಡಿಯಾ ಚಿತ್ರವೊಂದನ್ನು ನಿರ್ದೇಶಿಸಲು  ಸಜ್ಜಾಗಿದ್ದಾರೆ. ತಮ್ಮ ಪ್ರತೀ ಸಿನಿಮಾದಲ್ಲೂ ವಿಭಿನ್ನತೆ ಕಾಪಾಡಿಕೊಂಡು ಬರುತ್ತಿರುವ ನಿರ್ದೇಶಕ  ಶ್ರೀನು, ಈ ಚಿತ್ರದ ಮೂಲಕ   ಕನ್ನಡಕ್ಕೆ ಹೊಸಥರದ ಕಾನ್ಸೆಪ್ಟ್ ಹೊತ್ತು ತರುತ್ತಿದ್ದಾರೆ.

    ಈಗಾಗಲೇ ಹೊಸ ಚಿತ್ರದ  ಸ್ಕ್ರಿಪ್ಟ್ ವರ್ಕ್  ಶುರುವಾಗಿದ್ದು, ತಾರಾಗಣದ ಆಯ್ಕೆ ಪ್ರಕ್ರಿಯೆಗೆ  ಕೂಡ ಸಿದ್ದತೆ ನಡೆಯುತ್ತಿದೆ. ಕನ್ನಡ, ತೆಲುಗು ಸೇರಿ ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ  ತಯಾರಾಗಲಿರುವ ಈ ಸಿನಿಮಾಕ್ಕೆ ಮೈರಾ ಎಂಬ ಶೀರ್ಷಿಕೆಯನ್ನು  ಫೈನಲ್ ಮಾಡಲಾಗಿದೆ.  ದಕ್ಷಿಣ ಭಾರತದ ಉಳಿದೆಲ್ಲ ಭಾಷೆಗಳಿಗೂ ಈ ಸಿನಿಮಾ ಡಬ್ ಆಗಲಿದೆ. ಹೀಗಾಗಿ ಎಲ್ಲಾ ಭಾಷೆಗಳಿಗೂ  ಹೊಂದುವಂತೆ ಮೈರಾ ಎಂಬ ಟೈಟಲ್ ಇಟ್ಟಿದ್ದಾರೆ.

    ನಿರ್ದೇಶಕ ಶ್ರೀನಿ ಅವರ. ಚಿತ್ರದಲ್ಲಿ ಈ ಸಲ  ಸ್ಟಾರ್ ನಟರು ಇರಲಿದ್ದಾರಾ ಅಥವಾ ಹೊಸ ಪ್ರತಿಭೆಗಳಿಗೆ  ಅವಕಾಶ ನೀಡುತ್ತಾರಾ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು. ಯಾಕೆಂದರೆ, ಸದ್ಯ ಸ್ಕ್ರಿಪ್ಟ್ ಕೆಲಸದಲ್ಲಿ ಮಗ್ನರಾಗಿರುವ ಶ್ರೀನು, ಮೊದಲು ಕಥೆ, ಚಿತ್ರಕಥೆ ಮುಗಿಸಿ ಆನಂತರ ತಾರಾಗಣದ ಆಯ್ಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

     

    ಇತ್ತೀಚೆಗೆ ಕನ್ನಡದಲ್ಲಿ ಕಂಟೆಂಟ್‌ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ. ಹಾಗೆಯೇ ಕನ್ನಡದ ತಂತ್ರಜ್ಞರು, ನಿರ್ದೇಶಕರು ಪರಭಾಷೆಯಲ್ಲೂ ದೊಡ್ಡ ಛಾಪು ಮೂಡಿಸುತ್ತಿದ್ದಾರೆ. ನಾನು ಈಗಾಗಲೇ ಕನ್ನಡ ಮತ್ತು ತೆಲುಗು ಎರಡೂ ಚಿತ್ರರಂಗದಲ್ಲಿ ತೊಡಗಿಕೊಂಡಿರುವುದರಿಂದ  ತೆಲುಗು ಇಂಡಸ್ಟ್ರಿಗೂ ಪರಿಚಿತನಾಗಿದ್ದೇನೆ. ಇದು ಕಂಪ್ಲೀಟ್ ಹೊಸ ರೀತಿಯ, ಈಗಿನ ಟ್ರೆಂಡ್‌ಗೆ ಹೊಂದುವಂಥ ಕಥೆ ಇರುವ ಚಿತ್ರ.  ಬಿಗ್ ಬಜೆಟ್ ನಲ್ಲಿ ತಯಾರಾಗಲಿರುವ ಈ ಚಿತ್ರವು ಬೃಹತ್ ತಾರಾಗಣದ ಜೊತೆಗೆ ತಾಂತ್ರಿಕ ವರ್ಗವೂ ಅದ್ಧೂರಿಯಾಗಿರಲಿದೆ. ಚಿತ್ರ ಸದ್ಯ ಸ್ಕ್ರಿಪ್ಟ್ ಹಂತದಲ್ಲಿದ್ದು ಹಂತ ಹಂತವಾಗಿ ಎಲ್ಲ‌  ಮಾಹಿತಿ  ತಿಳಿಸುವುದಾಗಿ  ನಿರ್ದೇಶಕ ಸ್ಮೈಲ್ ಶ್ರೀನು ಹೇಳಿದ್ದಾರೆ. ಇದನ್ನು ಹೊರತುಪಡಿಸಿ ಕನ್ನಡದಲ್ಲಿಯೇ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿರುವುದಾಗಿ  ಶ್ರೀನು ಹೇಳಿದ್ದಾರೆ.

  • ಆಮ್ ಆದ್ಮಿ ಪಕ್ಷದಿಂದ ಯುವ ನಿರ್ದೇಶಕ, ನಟನಿಗೆ ಟಿಕೆಟ್ ಘೋಷಣೆ

    ಆಮ್ ಆದ್ಮಿ ಪಕ್ಷದಿಂದ ಯುವ ನಿರ್ದೇಶಕ, ನಟನಿಗೆ ಟಿಕೆಟ್ ಘೋಷಣೆ

    ರ್ನಾಟಕ ವಿಧಾನಸಭಾ ಚುನಾವಣೆ (Election) ಎದುರಿಸಲು ಆಮ್ ಆದ್ಮಿ ಪಕ್ಷ (Aam Aadmi Party) ಹಲವು ತಿಂಗಳಿನಿಂದ ಸಿದ್ಧತೆ ನಡೆಸಿತ್ತು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡುವುದಕ್ಕಾಗಿಯೇ ಹಲವು ರೀತಿಯಲ್ಲಿ ಕಸರತ್ತು ಕೂಡ ನಡೆಸಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗಿಂತ ಮುಂದೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಇಬ್ಬರು ಸಿನಿಮಾ ರಂಗದವರು ಇದ್ದಾರೆ ಎನ್ನುವುದು ವಿಶೇಷ.

    ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರು ಚುನಾವಣಾ ತಯಾರಿ ಆರಂಭಿಸಿದ್ದರು. ಕೆಲವರಿಗೆ ಆಗಲೇ ಟಿಕೆಟ್ ಕನ್ಫರ್ಮ್ ಕೂಡ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ 80 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ ರಿಲೀಸ್ ಮಾಡಿದೆ.

    ಪಕ್ಷ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ಏಳು ಜನ ರೈತ ಹೋರಾಟಗಾರರು. ಏಳು ಜನ ಮಹಿಳೆಯರು, 5 ಮಂದಿ ಸಮಾಜಸೇವಕರು, ಮೂರು ಜನ ಡಾಕ್ಟರೇಟ್, 15 ಜನ ಮಾಸ್ಟರ್ಸ್ ಮುಗಿಸಿರುವವರು , 3 ಜನ ಎಂಬಿಬಿಎಸ್ ಮುಗಿಸಿರುವವರು, 13 ಜನ ಲಾಯರ್ಸ್,  ಪತ್ರಕರ್ತರು ಇದ್ದಾರೆ ಹಾಗೂ ಕಲಾವಿದರು ಇದ್ದಾರೆ.

    ಹಲವು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ, ನೂರಾರು ಚಿತ್ರಗಳನ್ನು ಮಾಡಿರುವ ಟೆನ್ನಿಸ್ ಕೃಷ್ಣಗೆ (Tennis Krishna) ಆಮ್ ಆದ್ಮಿ ಪಾರ್ಟಿ ಟಿಕೆಟ್ ಘೋಷಣೆ ಮಾಡಿದ್ದು, ಇವರು ತುರುವೇಕರೆ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಹಾಸ್ಯ ಪಾತ್ರದ ಮೂಲಕ ಗುರುತಿಸಿಕೊಂಡಿರುವ ಟೆನ್ನಿಸ್ ಕೃಷ್ಣ, ಕನ್ನಡದ ಅನೇಕ ಹೆಸರಾಂತ ತಾರೆಯರ ಜೊತೆ ತೆರೆ ಹಂಚಿಕೊಂಡಿದ್ದಾರೆ.

    ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಟರಾಗಿ ಹಲವಾರು ಚಿತ್ರಗಳನ್ನು ಮಾಡಿರುವ ಸ್ಮೈಲ್ ಶ್ರೀನು (Smile Srinu)  (ಶ್ರೀನಿವಾಸ್ ಎನ್) (Srinivas N) ಅವರಿಗೆ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಈಗಾಗಲೇ ಹಲವು ತಿಂಗಳಿಂದ ಕೂಡ್ಲಿಗಿ ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಚಾರವನ್ನೂ ಆರಂಭಿಸಿದ್ದರು. ಹಲವಾರು ಜನಪರ ಹಾಗೂ ಸಮಾಜಮುಖಿ ಕೆಲಸಗಳಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ನಟ ಶಶಿಕುಮಾರ್ ಪುತ್ರನನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ಕೀರ್ತಿ ಶ್ರೀನಿವಾಸ್ ಇವರದ್ದು.

  • ನಿರ್ದೇಶಕ ಸ್ಮೈಲ್ ಶ್ರೀನು ನಿರ್ಮಾಪಕ: ‘ಜನನ’ ಚಿತ್ರದ ಮೂಲಕ ಸಾಮಾಜಿಕ ಸಂದೇಶ

    ನಿರ್ದೇಶಕ ಸ್ಮೈಲ್ ಶ್ರೀನು ನಿರ್ಮಾಪಕ: ‘ಜನನ’ ಚಿತ್ರದ ಮೂಲಕ ಸಾಮಾಜಿಕ ಸಂದೇಶ

    ನಿರ್ದೇಶಕ ಸ್ಮೈಲ್ ಶ್ರೀನು ಈಗ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದು, ಅದರ ಮೂಲಕ ಉತ್ತಮ ಚಲನಚಿತ್ರಗಳನ್ನು ನಿರ್ಮಿಸುವ ಗುರಿ ಹೊಂದಿದ್ದಾರೆ. ತಮ್ಮದೇ ಸ್ಮೈಲ್ ಜೋಹರ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಈಗ  ‘ಜನನ’ ಎಂಬ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ತಾವೇ ನಿರ್ದೇಶಕರಾಗಿದ್ದರೂ ಮತ್ತೊಬ್ಬ ಹೊಸ ನಿರ್ದೇಶಕನಿಗೆ ಅವಕಾಶ ಕೊಟ್ಟಿದ್ದಾರೆ.

    ಈಗಾಗಲೇ ತೂಫಾನ್, ಬಳ್ಳಾರಿ ದರ್ಬಾರ್, ಓ ಮೈ ಲವ್ ನಂಥ ವಿಭಿನ್ನ ಶೈಲಿಯ ಸಿನಿಮಾಗಳನ್ನು ನಿರ್ದೇಶಿಸಿರುವ ಸ್ಮೈಲ್  ಶ್ರೀನು, ಅವರೀಗ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಬರಲಿರುವ ವಿಧಾನಸಭಾ ಚುನಾವಣೆಗೆ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನಿರ್ಮಾಪಕರಾಗಿ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು), ಅವರು ತಮ್ಮ ಚಿತ್ರರಂಗದ ನಂಟನ್ನೂ ಮುಂದುವರಿಸಿದ್ದಾರೆ.  ಈಗಿನ ಸಂದರ್ಭದಲ್ಲಿ ಪ್ರಕೃತಿಯ ಬಗ್ಗೆ ಜನರಲ್ಲಿ ಕಾಳಜಿ ಕಮ್ಮಿಯಾಗುತ್ತಿದೆ. ನಾನೇ ಗ್ರೇಟ್ ಅಂತ ಮಾನವ ಬೀಗುತ್ತಿದ್ದಾನೆ. ಒಮ್ಮೆ ಆ ಪ್ರಕೃತಿ ಏನಾದರೂ ಮುನಿಸಿಕೊಂಡರೆ ನಮ್ಮಗತಿ ಏನಾಗಬಹುದು.  ನಮಗೆಲ್ಲಾ ಏನೇನು ತೊಂದರೆಯಾಗಬಹುದು ಎಂಬುದನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಅಲ್ಲದೆ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗದಿದ್ದರೆ ಅವರ ಜೀವನ ಯಾವರೀತಿ ಹಾಳಾಗುತ್ತೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ  ಚಿತ್ರೀಕರಣ ನಡೆಸಲಾಗಿರುವ ಜನನ ಚಿತ್ರವು ಜನವರಿಯಲ್ಲಿ ತೆರೆಕಾಣಲಿದೆ.

    ಸಿನಿಮಾ ನಂಟು ಜೊತೆಯಲ್ಲಿರಬೇಕೆಂಬ ಕಾರಣದಿಂದಾಗಿ ಸ್ಮೈಲ್ ಶ್ರೀನು  ಅವರು ಮುಂದೆ ದೊಡ್ಡ ಮಟ್ಟದ ಪ್ಯಾನ್ ಇಂಡಿಯಾ ಸಿನಿಮಾವೊಂದನ್ನು ನಿರ್ದೇಶಿಸುವ ಯೋಜನೆ ಹಾಕಿಕೊಂಡಿದ್ದಾರೆ. ದೊಡ್ಡ ಬಜೆಟ್’ನಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾದಲ್ಲಿ ಬಹುತೇಕ ಎಲ್ಲಾ ಭಾಷೆಯ ಸ್ಟಾರ್ ನಟರು ಅಭಿಸನಯಿಸಲಿದ್ದಾರೆ.  ಮುಂದಿನ ವರ್ಷ ಶ್ರೀನು ಅವರ ಹೊಸ ಬಿಗ್ ಬಜೆಟ್ ಪ್ಯಾನ್ ಇಂಡಿಯಾ  ಸಿನಿಮಾ ಸೆಟ್ಟೇರಲಿದೆ. ಅದಕ್ಕೂ ಮುನ್ನ ಜನನ ಸಿನಿಮಾ ಬಿಡುಗಡೆಯಾಗಲಿದೆ.

    ಯುವ ನಿರ್ದೇಶಕ ಮಧುಸೂದನ್ ಅವರು  ಆ್ಯಕ್ಷನ್ ಕಟ್ ಹೇಳಿರುವ ಜನನ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ನಮ್ಮ ನಾಡಿಗೆ ಪ್ರಕೃತಿ ತುಂಬಾ ಮುಖ್ಯ. ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂಬ ಸುಂದರ ಸಂದೇಶ ಈ ಚಿತ್ರದಲ್ಲಿದೆ. ಇದನ್ನೂ ಓದಿ:ಬಳ್ಳಾರಿಗೆ ಬರಲಿದ್ದಾರೆ ವಿಜಯ್ ಮತ್ತು ರಶ್ಮಿಕಾ ಮಂದಣ್ಣ

    ವರ್ಷಾ ಶೆಟ್ಟಿ ಬೇಬಿ ಮೈರಾ, ಮಾಸ್ಟರ್ ಚಿನ್ಮಯ್, ಬೇಬಿ ಶಾನ್ವಿ, ಬೇಬಿ ಪೂಜಾ, ವರಹ, ಮಂಜುಳಾ, ಕಾವ್ಯ ಹಾಗೂ ಮಂಜು ಸೇರಿದಂತೆ ಮಕ್ಕಳ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ಭರತ್ ಅವರ ಛಾಯಾಗ್ರಹಣ, ಮಲ್ಲಿಕಾರ್ಜುನ್.ಡಿ ಅವರ ಸಂಕಲನ ಕಾರ್ಯ ಈ ಚಿತ್ರಕ್ಕಿದೆ. ಎಲ್ಲಾ ಅಂದುಕೊಂಡಂತೆ ಆದರೆ ಹೊಸ ವರ್ಷದಲ್ಲಿ ‘ಜನನ’ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ‘ಓ ಮೈ ಲವ್’ ಖ್ಯಾತಿಯ ನಿರ್ದೇಶಕ ಸ್ಮೈಲ್ ಶ್ರೀನು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆ

    ‘ಓ ಮೈ ಲವ್’ ಖ್ಯಾತಿಯ ನಿರ್ದೇಶಕ ಸ್ಮೈಲ್ ಶ್ರೀನು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆ

    ಸ್ಯಾಂಡಲ್ ವುಡ್ ಅನೇಕ ಕಲಾವಿದರು ಈಗಾಗಲೇ ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶಕರೊಬ್ಬರು ಎಪಿಪಿ ಸೇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಳ್ಳಾರಿ ದರ್ಬಾರ್, 18 ಟು 25 ಲವ್ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಹಾಗೂ ಕೆಲ ಸಿನಿಮಾಗಳಿಗೆ ಬಣ್ಣ ಹಚ್ಚಿರುವ ನಿರ್ದೇಶಕ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) (Smile Srinu) ಅವರು ಆಮ್ ಆದ್ಮಿ ಪಕ್ಷಕ್ಕೆ (Aam Aadmi Party) ಸೇರ್ಪಡೆಯಾಗಿದ್ದಾರೆ. ಅವರ ನಿರ್ದೇಶನದ ಓ ಮೈ ಲವ್ ಸಿನಿಮಾ ಇದೀಗ 50 ದಿನಗಳನ್ನು ಪೂರೈಸಿದ್ದು, ಈ ಸಂದರ್ಭದಲ್ಲಿ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ.

    ಬೆಂಗಳೂರಿನ (Bangalore) ಪಕ್ಷದ ಕಛೇರಿಯಲ್ಲಿ ನಡೆದ ಸರಳ  ಕಾರ್ಯಕ್ರಮದಲ್ಲಿ ನಿವೃತ್ತ ಪೋಲೀಸ್ ಅಧಿಕಾರಿ ಹಾಗೂ ಎಎಪಿ  ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ (Bhaskar Rao) ಅವರು ಪಕ್ಷದ ಧ್ವಜವನ್ನು ನಾರಿ ಶ್ರೀನಿವಾಸ್ ಅವರಿಗೆ  ನೀಡುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಜಗದೀಶ್ ಅವರ ಸಮ್ಮುಖದಲ್ಲಿ ನಡೆದ ಈ ಕಾಯ್ರಕ್ರಮದಲ್ಲಿ ಮಾತನಾಡಿದ ಶ್ರೀನಿವಾಸ್‌ ನಾನು ಹಣ ಹೆಸರು ಮಾಡಲು, ನಾಯಕನಾಗಲು ಬಂದಿಲ್ಲ, ನಮ್ಮ ಜನ ತಮ್ಮ ದುಖಗಳನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ  ನುಂಗಿಕೊಳ್ಳುತ್ತಿದ್ದಾರೆ. ಜನರಿಗೆ ಉತ್ತಮ ಆರೋಗ್ಯ ಶಿಕ್ಷಣ ಇದ್ದರೆ ಎಲ್ಲವನ್ನೂ ಗೆಲ್ಲಬಹುದು. ಕಟ್ಟಕಡೆಯ ವ್ಯಕ್ತಿಗೂ ಸಹ ಮೂಲಭೂತ ಸೌಕರ್ಯಗಳು ದೊರೆಯಬೇಕು ಎನ್ನುವುದೇ ನನ್ನ ಉದ್ದೇಶ. ಸಂಘ ಸಂಸ್ಥೆಗಳ ಮೂಲಕ ಜನರಿಗೆ ಸಹಾಯ ಮಾಡಬಹುದು. ಒಬ್ಬನೇ ಮಾಡಲು ಸಾಧ್ಯವಿಲ್ಲ. ನಾನು ಜನರ ಸೇವೆ ಮಾಡಲೆಂದೇ ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ:ನಾಗಚೈತನ್ಯ- ಸಮಂತಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಾರ್ಜುನ್

    ನಂತರ ಭಾಸ್ಕರ ರಾವ್ ಮಾತನಾಡಿ ಕೇಜ್ರಿವಾಲರ ಪ್ರಾಮಾಣಿಕತೆಗೆ ಬೆಲೆ ಕೊಟ್ಟು ಹೆಚ್ಚಿನ ಸಂಖ್ಯೆಯ  ಯುವಕರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಒಂದು ಪಕ್ಷ ಹತ್ತು ವರ್ಷಗಳಲ್ಲಿ ೨  ರಾಜ್ಯಗಳಲ್ಲಿ‌ ಅಧಿಕಾರಕ್ಕೆ ಬರುವುದು ಸಾಮಾನ್ಯದ ಮಾತಲ್ಲ. ನಾವು ಮಾಡುವ ಕೆಲಸ ಜನರಿಗೆ ಇಷ್ಟವಾಗಿದೆ. ನಮಗೆ ಅನುಭವಿ ರಾಜಕಾರಣಿಗಳು ಬೇಕಿಲ್ಲ, ಇಂಥ ಯುವಕರೇ ಬೇಕಾಗಿದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಶಶಿಕುಮಾರ್ ಪುತ್ರ  ಅಕ್ಷಿತ್ ನಟನೆಯ ‘ಓ ಮೈ ಲವ್’ ಟ್ರೇಲರ್ ಬಿಡುಗಡೆ

    ಶಶಿಕುಮಾರ್ ಪುತ್ರ ಅಕ್ಷಿತ್ ನಟನೆಯ ‘ಓ ಮೈ ಲವ್’ ಟ್ರೇಲರ್ ಬಿಡುಗಡೆ

    ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ನಟನೆಯ ‘ಓ ಮೈ ಲವ್’ ಚಿತ್ರದ ಟ್ರೇಲರ್ ಅನಾವರಣ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ನಟ, ಹಿರಿಯ ನಿರ್ದೇಶಕ ಎಸ್.ನಾರಾಯಣ್ ಮಾತನಾಡಿ ಚಿತ್ರರಂಗಕ್ಕೆ ಒಳ್ಳೆ ನಿರ್ಮಾಣ ಸಂಸ್ಥೆ ಬಂದಿದೆ. ನಾಯಕಿ ತಂದೆಯಾಗಿ 20 ದಿವಸ ಕೆಲಸ ಮಾಡಿದ್ದೇನೆ.  80ರ ದಶಕದಲ್ಲಿ ಶಿವಣ್ಣ-ರವಿಚಂದ್ರನ್ ಹೊರತುಪಡಿಸಿದರೆ ಅಂದು ಸುಂದರವಾದ ಯುವಕನೊಬ್ಬನ ಆಗಮನವಾಯಿತು. ಅದುವೇ ಶಶಿಕುಮಾರ್ ಮುಂದೆ ಸುಪ್ರಿಂ ಹೀರೋ ಆಗಿ ಖ್ಯಾತಿ ಪಡೆದರು. ಅವರೊಂದಿಗೆ ಚಿತ್ರ ಮಾಡಬೇಕಾಗಿತ್ತು. ಕಾರಣಾಂತರದಿಂದ ಆಗಲಿಲ್ಲ. ಪ್ರೀತಿ ಕುರಿತಾದ ಚಿತ್ರಗಳು ಸೋಲುವುದು ಕಡಿಮೆ. ಜನ ಇಂತಹ ಚಿತ್ರಗಳನ್ನು ಇಷ್ಟಪಡುತ್ತಾರೆ. ’ಚೈತ್ರದ ಪ್ರೇಮಾಂಜಲಿ’ ’ಚಲುವಿನ ಚಿತ್ತಾರ’ ’ಮುಂಗಾರು ಮಳೆ’ ಇನ್ನು ಮುಂತಾದವು ಕಣ್ಣ ಮುಂದೆ ಬರುತ್ತದೆ. ಇದರಲ್ಲಿ ಗೆಲುವಿಗೆ ಬೇಕಾದ ಕಥೆಯನ್ನು ನಿರ್ದೇಶಕರು ಆರಿಸಿಕೊಂಡಿದ್ದಾರೆ. ಗೊಂದಲ ಇಲ್ಲದಂತೆ ದೃಶ್ಯಗಳನ್ನು ಪೋಣಿಸಿದ್ದಾರೆ. ಗೆಲುವಿನ ಸಿಂಚನ ಕಾಣ್ತಾ ಇದೆ ಎಂದರು.

    ಹಿಂದಿನ ನೆನಪಿಗಳಿಗೆ ಜಾರಿದ ಶಶಿಕುಮಾರ್ ನನ್ನ ಬೆಳಸಿದಂತೆ ಮಗನನ್ನು ಮುಂದಕ್ಕೆ ತನ್ನಿರಿ. ಒಂದು ದಿವಸವು ಸೆಟ್‌ಗೆ ಹೋಗಿಲ್ಲ, ಚಿತ್ರವನ್ನು ನೋಡಿಲ್ಲ. ಪತ್ರಿಕೆಗಳಿಂದ ಬಂದ ವಿಮರ್ಶೆಗಳಿಂದ ಸಾಕಷ್ಟು ಕಲಿತೆ. ಇಂದು ಡಿಜಿಟಲ್ ಮಾಧ್ಯಮ ಬಂದಿರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿದೆ. ಸರಿಯಾದ ಸಮಯಕ್ಕೆ ಬಂದು ಕೆಲಸ ಮಾಡಿಸುವುದರಲ್ಲಿ ಎಸ್.ನಾರಾಯಣ್ ಪ್ರಮುಖರಾಗಿರುತ್ತಾರೆ. ಅವರ ಶೂಟಿಂಗ್ ವರಸೆಯನ್ನು ಕಣ್ಣಾರೆ ಕಂಡಿರುವೆ. ಇಂತಹವರಿಂದ ಕಲಿಯುವುದು ಸಾಕಷ್ಟು ಇದೆ. ನಮ್ಮ ಜಮಾನ ಮುಗಿಯಿತು. ಇಂದಿನ ಪೀಳಿಗೆಯು ಇದನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ:ವಿಕ್ರಾಂತ್ ರೋಣ ಸಿನಿಮಾ ಆಗೋಕೆ ಇವರೇ ಸ್ಪೂರ್ತಿ: ಕಿಚ್ಚ ಹೀಗಂದಿದ್ದು ಯಾರ ಬಗ್ಗೆ?

    ಒಮ್ಮೆ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಿನಿಮಾ ನೋಡಿದರೆ ನೀವುಗಳು ಓ ಮೈ ಲವ್ ಕುಟುಂಬದವರಾಗುತ್ತೀರಾ. ನಿರ್ಮಾಪಕರು ಒಳ್ಳೆ ಕಥೆಯನ್ನು ಬರೆದಿದ್ದಾರೆ. ಅದಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಸೃಷ್ಟಿಸಿ ಶ್ರೀಮಂತವಾಗಿ ಚಿತ್ರೀಕರಿಸಲಾಗಿದೆ. ಬಳ್ಳಾರಿ ಭಾಗದವರು ಮೊದಲ ಬಾರಿ ಸಿನಿಮಾರಂಗಕ್ಕೆ ಬಂದಿದ್ದಾರೆ. ಅಂತಹವರನ್ನು ಉಳಿಸಿಕೊಳ್ಳುವುದು ನಮ್ಮ ಜವಬ್ದಾರಿಯಾಗಿದೆ ಅಂತ ನಿರ್ದೇಶಕ ಸ್ಮೈಲ್ ಶ್ರೀನು ಹೇಳಿದರು.

    ನಾಯಕ ಅಕ್ಷಿತ್‌ ಶಶಿಕುಮಾರ್, ನಾಯಕಿ ಕೀರ್ತಿ ಕಲ್ಕರೆ ಇಬ್ಬರಿಗೂ ಹೊಸ ಅನುಭವವಾಗಿದ್ದರಿಂದ ಹೆಚ್ಚೇನು ಮಾತನಾಡಲಿಲ್ಲ. ಸುಂದರಶ್ರೀ, ಸಂಗೀತ, ಪೃಥ್ವಿ, ವಿತರಕ ಕಮ್ಮರ್ ಮುಂತಾದವರು ಆಸೀನರಾಗಿದ್ದರು. ನಿರ್ಮಾಪಕ ಜಿ.ರಾಮಾಂಜಿನಿ ಅವರು ಹೆಚ್ಚು ಸಂಪರ್ಕ ಹೊಂದಿರುವುದರಿಂದ ಬಳ್ಳಾರಿಯಿಂದ ಹೆಚ್ಚು ಅತಿಥಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

    Live Tv

  • ಉಪೇಂದ್ರ ಮೆಚ್ಚಿಕೊಂಡ ಓ ಮೈ ಲವ್ ಸಾಂಗ್

    ಉಪೇಂದ್ರ ಮೆಚ್ಚಿಕೊಂಡ ಓ ಮೈ ಲವ್ ಸಾಂಗ್

    ಸ್ಮೈಲ್ ಶ್ರೀನಿ ನಿರ್ದೇಶನದ ಹೊಸ ತರಹದ ನಿರೂಪಣೆ ಒಳಗೊಂಡಿರುವ ’ಓ ಮೈ ಲವ್’ ಚಿತ್ರದ ’ಏನಾಯ್ತೋ ನಾ ಕಾಣೆ’ ಲಿರಿಕಲ್ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದಾರೆ. ಹಾಡು ಮೆಚ್ಚಿಕೊಂಡು ಹೊಸ ತಂಡಕ್ಕೆ ಶುಭ ಕೋರಿದ್ದಾರೆ. ಈಗಾಗಲೇ ಅನೇಕ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಸ್ಮೈಲ್ ಶ್ರೀನು ಹಾಡು ಮತ್ತು ಚಿತ್ರದ ಬಗ್ಗೆ ಮಾತನಾಡುತ್ತಾ, ಚಿತ್ರೀಕರಣ ನಡೆಯುತ್ತಿರುವ ಸಂದರ್ಭದಲ್ಲಿ ಸಂಗೀತ ನಿರ್ದೇಶಕರು ಹಾಡಿನ ಟ್ಯೂನ್ ಕಳುಹಿಸಿಕೊಟ್ಟರು. ಅದನ್ನು ಕೇಳುತ್ತಿದ್ದ ಹಾಗೆ ರೋಮಾಂಚನವಾಯಿತು. ಪಲ್ಲವಿ ಚೆನ್ನಾಗಿದೆ. ಚರಣ ಬದಲಾವಣೆ ಮಾಡೋಣವೆಂದು ಹೇಳಲಾಯಿತು. ನಂತರ ಎರಡು ದಿವಸದಲ್ಲೆ ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಚರಣ ಕೊಟ್ಟರು. ಅನುರಾಧಭಟ್-ನಿಚರಾಜನ್ ಧ್ವನಿಯಾಗಿದ್ದಾರೆ. ಗೀತೆಗೆ ಎಲ್ಲಾ ಕಡೆಯಿಂದ  ಸಕರಾತ್ಮಕ ಸ್ಪಂದನೆ ಸಿಕ್ಕಿದೆ. ಹಾಡಿನ ಪ್ರೋಮೋ ನೋಡಿ ಎಲ್ಲರು ಖುಷಿಯಾಗಿದ್ದಾರೆ’ ಎಂದರು. ಇದನ್ನೂ ಓದಿ : ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ

    ಹಾಡು ಇನ್ನೂ ಪೂರ್ತಿಯಾಗಿ ಬಿಡುಗಡೆ ಮಾಡಿಲ್ಲ. ಈಗ ರಿಲೀಸ್ ಆಗಿದ್ದು ಶೇ.ಐದರಷ್ಟು ಮಾತ್ರ. ಬಾಕಿ ಶೇಕಡ 95ರಷ್ಟು ಚಿತ್ರಮಂದಿರದಲ್ಲಿ ನೋಡಿದರೆ ಅದರ ಮಜಾನೇ ಬೇರೆ ಇರುತ್ತದೆ ಎನ್ನುತ್ತಿದೆ ಚಿತ್ರತಂಡ. ಚಿಕ್ಕಂದಿನಿಂದಲೂ ಚಿತ್ರ ಮಾಡಬೇಕೆಂಬ ಬಯಕೆ ಇತ್ತು. ಅದು ಈಗ ಈಡೇರಿದೆ ಎಂದು ಕಥೆ ಬರೆದು ಬಂಡವಾಳ ಹೂಡಿರುವ ಜಿ.ರಾಮಾಂಜಿನಿ ಮಾಥು. ಉಪ್ಪಿ ಸರ್ ಅಭಿಮಾನಿಯಾಗಿ ಅವರಿಂದಲೇ ಬಿಡುಗಡೆ ಮಾಡಬೇಕೆಂಬ ಆಸೆ ಇತ್ತು. ನಾವು ಕೇಳಿದ ತಕ್ಷಣ ’ಕಬ್ಜಾ’ ಶೂಟಿಂಗ್‌ದಲ್ಲಿ ಬ್ಯುಸಿ ಇದ್ದರೂ ಬಿಡುವು ಮಾಡಿಕೊಂಡು ಹಾಡನ್ನು ವೀಕ್ಷಿಸಿ ಶುಭ ಹಾರೈಸಿದರು ಎಂದು ನಾಯಕ ಅಕ್ಷಿತ್‌ಶಶಿಕುಮಾರ್ ಹೇಳಿಕೊಂಡರು.  ಇದನ್ನೂ ಓದಿ : ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

    ನಾಯಕಿ ಕೀರ್ತಿ ಕಲ್ಕರೆ, ಮತ್ತೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರುವ ಕಿರುತೆರೆ ನಟ ಪೃಥ್ವಿರಾಜ್ ಹೀಗೆ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದೇವಗಿಲ್, ಎಸ್.ನಾರಾಯಣ್, ಸಾಧುಕೋಕಿಲ, ಪವಿತ್ರಲೋಕೇಶ್ ಸೇರಿದಂತೆ ಅನುಭವಿ ಕಲಾವಿದರೇ ಚಿತ್ರದಲ್ಲಿದ್ದಾರೆ. ಚರಣ್‌ ಅರ್ಜುನ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿವೆ.

  • ಅದ್ದೂರಿ ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾದ ‘ಓ ಮೈ ಲವ್’ ಚಿತ್ರತಂಡ

    ಅದ್ದೂರಿ ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾದ ‘ಓ ಮೈ ಲವ್’ ಚಿತ್ರತಂಡ

    ಸುಪ್ರೀಂ ಸ್ಟಾರ್ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಅಭಿನಯದ ‘ಓ ಮೈ ಲವ್’ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅದ್ದೂರಿಯಾಗಿ ಬಹು ಕೋಟಿ ವೆಚ್ಚದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ಶ್ರೀನು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್‌ಗೆ ಜೋಡಿಯಾಗಿ ಕೀರ್ತಿ ಕಲ್ಕೆರೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ನವ ಹಾಗೂ ಅನುಭವಿ ಕಲಾವಿದರ ಬಳಗ ಇರುವ ಸಿನಿಮಾ ತಂಡ ಚಿತ್ರದ ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

     Oh My Love

    ಜಿಸಿಬಿ ಪ್ರೊಡಕ್ಷನ್ಸ್ ಲಾಂಚನದಲ್ಲಿ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಜಿ. ರಾಮಾಂಜಿನಿ ಚೆಂದದ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಸ್ಮೈಲ್ ಶ್ರೀನು ಜಿ ರಾಮಾಂಜಿನಿ ಅವರ ಕಥೆಗೆ ಚಿತ್ರಕತೆ-ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪಕ್ಕಾ ಲವ್ ಸಬ್ಜೆಕ್ಟ್ ಸಿನಿಮಾ ‘ಓ ಮೈ ಲವ್’. ಇದರ ಜೊತೆಗೆ ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಎಲಿಮೆಂಟ್‍ಗಳು ಚಿತ್ರದಲ್ಲಿದೆ. ಸದ್ಯ ಚಿತ್ರತಂಡ ಚಿತ್ರದ ಬಹು ನಿರೀಕ್ಷಿತ ‘ಏನಾಯ್ತೋ ಕಾಣೆ’ ಹಾಡಿನ ಚಿತ್ರೀಕರಣ ಮುಗಿಸಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ‘ಜೋಗಿ ಪ್ರೇಮ್’

     Oh My Love

    ಖ್ಯಾತ ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಕೃಷಿಯಲ್ಲಿ ‘ಏನಾಯ್ತೋ ಕಾಣೆ’ ಹಾಡಿನ ಸಾಲುಗಳು ಸೊಗಸಾಗಿ ಮೂಡಿ ಬಂದಿದ್ದು ಅಷ್ಟೇ ಸೊಗಸಾಗಿ ಡಾನ್ಸ್ ಮಾಸ್ಟರ್ ಮುರಳಿ ನೃತ್ಯ ನಿರ್ದೇಶನದ ಮಾಡಿದ್ದಾರೆ. ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಈ ಹಾಡಿನ ಚಿತ್ರೀಕರಣ ಅದ್ದೂರಿಯಾಗಿ ನಡೆದಿದ್ದು, ಅಕ್ಷಿತ್ ಶಶಿಕುಮಾರ್. ನಾಯಕಿ ಕೀರ್ತಿ ಕಲ್ಕೆರೆ, ದೀಪಿಕಾ ಆರಾಧ್ಯ, ಅಕ್ಷತಾ ಶೌರ್ಯ, ಸುವೇದ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:  ಮೊದಲ ಬಾರಿಗೆ ಮಗನನ್ನು ಭೇಟಿಯಾದ ಶಾರೂಖ್

     Oh My Love

    ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿರುವ ಚಿತ್ರತಂಡ ಏನಾಯ್ತೋ ಕಾಣೆ ಸಾಂಗ್ ಹೊರತು ಪಡಿಸಿ ಇನ್ನೂ ಮೂರು ಹಾಡಿನ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಇದು ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆಯಲಿದೆ. ಎಸ್. ನಾರಾಯಣ್ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ತೆಲುಗು ಖ್ಯಾತ ನಟ ದೇವ್ ಗಿಲ್ ಸೇರಿದಂತೆ ದೀಪಿಕಾ ಆರಾಧ್ಯ, ಪೃಥ್ವಿರಾಜ್, ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ, ರವಿ ರಾವ್‍ಕುಮಾರ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಚರಣ್ ಅರ್ಜುನ್ ಸಂಗೀತ ಸಂಯೋಜನೆ, ಹಾಲೇಶ್ ಎಸ್ ಕ್ಯಾಮೆರಾ ವರ್ಕ್, ಡಿ. ಮಲ್ಲಿ ಸಂಕಲನ ಚಿತ್ರಕ್ಕಿದೆ. ಇದನ್ನೂ ಓದಿ: ಪುನೀತ್ ಜೊತೆ ಗನ್ ಹಿಡಿದು ಫೋಟೋಗೆ ವಿದೇಶಿ ಹುಡ್ಗೀರ ಪೋಸ್