Tag: ಸ್ಮೃತಿ ಸಿನ್ಹ

  • ಲಾಲೂ ಜೀವನಾಧಾರಿತ ಚಿತ್ರಕ್ಕೆ ಯಶ್ ನಾಯಕ ನಟ

    ಲಾಲೂ ಜೀವನಾಧಾರಿತ ಚಿತ್ರಕ್ಕೆ ಯಶ್ ನಾಯಕ ನಟ

    ಲಕ್ನೋ: ಬಿಹಾರ್ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಜೀವನಾಧಾರಿತ ಚಿತ್ರ ಮುಂದಿನ ವರ್ಷದ ಫೆಬ್ರವರಿಯಲ್ಲಿ ತೆರೆಮೇಲೆ ಬರಲಿದ್ದು, ರಾಷ್ಟ್ರೀಯಾ ಜನತಾ ದಳದ ಚಿಹ್ನೆ ಆಗಿರುವ ‘ಲಾಟೀನ್’ ಹೆಸರಿನಲ್ಲೇ ಚಿತ್ರ ತೆರೆಕಾಣಲಿದೆ.

    ಈ ಚಿತ್ರದಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಪಾತ್ರವನ್ನು ಭೋಜ್ಪುರಿ ನಟ ಯಶ್ ಅಭಿನಯಿಸಲಿದ್ದು, ಲಾಲೂ ಪತ್ನಿ ಹಾಗೂ ಬಿಹಾರದ ಮಾಜಿ ಸಿಎಂ ರಾಬ್ಡಿ ದೇವಿ ಪಾತ್ರದಲ್ಲಿ ಸ್ಮೃತಿ ಸಿನ್ಹ ನಟಿಸಲಿದ್ದಾರೆ. ಈ ಚಿತ್ರವು ಮುಂದಿನ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

    ಲಾಲೂ ಪ್ರಸಾದ್ ಯಾದವ್ ಅವರ ಜೀವನದ ವಿವಿಧ ಆಯಾಮಗಳನ್ನು ಈ ಚಿತ್ರ ತೆರೆದಿಡಲಿದೆ. ಅಲ್ಲದೆ ಈ ಚಿತ್ರವನ್ನು ಬಿಹಾರ್ ಹಾಗೂ ಗುಜರಾತ್‍ನಲ್ಲಿ ಚಿತ್ರೀಕರಿಸುವ ಸಾಧ್ಯತೆಯಿದೆ.

    ಮೊದಲೆಲ್ಲಾ ಸಿನಿಮಾ ತಾರೆಯರು, ಕ್ರೀಡಾಪಟುಗಳು, ಸ್ವಾತಂತ್ರ್ಯ ಹೋರಾಟಗಾರರ ಜೀವನಾಧಾರಿತ ಸಿನಿಮಾಗಳು ಬಿಡುಗಡೆಯಾಗುತ್ತಿತ್ತು. ಆದರೇ ಇತ್ತೀಚೆಗೆ ರಾಜಕಾರಣಿಗಳ ಜೀವನಾಧಾರಿತ ಚಿತ್ರಗಳು ತೆರೆಮೇಲೆ ಸಂಚಲ ಮೂಡಿಸುತ್ತಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ರಾಜಕಾರಣಿಗಳ ಜೀವನಾಧಾರಿತ ಸಿನಿಮಾಗಳು ಬಿಡುಗಡೆಯಾಗಿದ್ದವು.

    ಇದೇ ಸಾಲಿಗೆ ಈಗ ಲಾಲೂ ಪ್ರಸಾದ್ ಯಾದವ್ ಜೀವನಾಧಾರಿತ ಚಿತ್ರ ಕೂಡ ಸೇರಲಿದೆ. ಇತ್ತೀಚೆಗೆ ಮನಮೋಹನ್ ಸಿಂಗ್ ಜೀವನಾಧಾರಿತ ‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರ ಬಾಲಿವುಡ್‍ನಲ್ಲಿ ಭಾರೀ ವಿವಾದ ಎಬ್ಬಿಸಿತ್ತು. ಹಲವರು ಈ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.