Tag: ಸ್ಮೃತಿ ಮಂಧನಾ

  • ಶತಕ ಹೊಡೆದು ಹಲವು ದಾಖಲೆ ನಿರ್ಮಿಸಿದ ಸ್ಮೃತಿ ಮಂಧನಾ

    ಶತಕ ಹೊಡೆದು ಹಲವು ದಾಖಲೆ ನಿರ್ಮಿಸಿದ ಸ್ಮೃತಿ ಮಂಧನಾ

    ನಾಟಿಂಗ್‌ಹ್ಯಾಮ್‌: ಟೀಂ ಇಂಡಿಯಾ (Team India) ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧನಾ (Smriti Mandhana) ಇಂಗ್ಲೆಂಡ್‌ (England) ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಭಾರತದ ಪರ ಹಲವು ದಾಖಲೆ ನಿರ್ಮಿಸಿದ್ದಾರೆ.

    ಟಿ20, ಏಕದಿನ, ಟೆಸ್ಟ್​ನಲ್ಲಿ ಶತಕ ಬಾರಿಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಂಧನಾ ಪಾತ್ರರಾಗಿದ್ದಾರೆ. ವಿಶ್ವ ಮಹಿಳಾ ಕ್ರಿಕೆಟ್​ನಲ್ಲಿ ಮೂರು ಮಾದರಿಯ ಕ್ರಿಕೆಟಿನಲ್ಲಿ ಸೆಂಚುರಿ ಬಾರಿಸಿದ 5ನೇ ಆಟಗಾರ್ತಿಯಾಗಿದ್ದಾರೆ.

    ಟ್ರೆಂಟ್ ಬ್ರಿಡ್ಜ್‌ ಮೈದಾನದಲ್ಲಿ ಟಿ20ಯಲ್ಲಿ ಶತಕ ಬಾರಿಸಿದ ಮೊದಲ ಮಹಿಳಾ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಮಂಧನಾ ಹೊಡೆದ ಶತಕ ಭಾರತದ ಪರ ದಾಖಲಾದ ಎರಡನೇ ಟಿ20 ಶತಕವಾಗಿದೆ. ಈ ಮೊದಲು ಹರ್ಮನ್​​ಪ್ರೀತ್​ ಕೌರ್ ಅವರು ಶತಕ ಬಾರಿಸಿದ್ದರು. ಇದನ್ನೂ ಓದಿ: ಆರ್‌ಸಿಬಿ ಸ್ಟಾರ್‌ ವೇಗಿ ಯಶ್‌ ದಯಾಳ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ – FIR ದಾಖಲು

    ಇಲ್ಲಿಯವರಗೆ ಸ್ಮೃತಿ ಏಕದಿನದಲ್ಲಿ 11, ಟೆಸ್ಟ್​ನಲ್ಲಿ 2 ಹಾಗೂ ಈಗ ಟಿ20ಯಲ್ಲಿ 1 ಶತಕ ಸಿಡಿಸಿದ್ದಾರೆ.

     

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 5 ವಿಕೆಟ್‌ ನಷ್ಟಕ್ಕೆ 210 ರನ್‌ ಹೊಡೆಯಿತು. ಮಂಧನಾ 27 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 51 ಎಸೆತಗಳಲ್ಲಿ ಶತಕ ಹೊಡೆದರು. ಅಂತಿಮವಾಗಿ ಮಂಧನಾ 112 ರನ್‌(62 ಎಸೆತ, 15 ಬೌಂಡರಿ, 3 ಸಿಕ್ಸ್‌ ಸಿಡಿಸಿ) 20ನೇ ಓವರಿನ 2ನೇ ಎಸೆತದಲ್ಲಿ 5ನೇಯವರಾಗಿ ವಿಕೆಟ್‌ ಒಪ್ಪಿಸಿದರು.

    ಕಠಿಣ ಸವಾಲನ್ನು ಬೆನ್ನಟ್ಟಿದ ಇಂಗ್ಲೆಂಡ್‌ 14.5 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಭಾರತ 97 ರನ್‌ಗಳ ಭರ್ಜರಿ ಜಯ ಸಾಧಿಸಿತು.

  • ಶಫಾಲಿ ವರ್ಮಾ ಸ್ಫೋಟಕ ದ್ವಿಶತಕ – ಮೊದಲ ದಿನವೇ 3 ವಿಶ್ವದಾಖಲೆ ಬರೆದ ಭಾರತ

    ಶಫಾಲಿ ವರ್ಮಾ ಸ್ಫೋಟಕ ದ್ವಿಶತಕ – ಮೊದಲ ದಿನವೇ 3 ವಿಶ್ವದಾಖಲೆ ಬರೆದ ಭಾರತ

    ಚೆನ್ನೈ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಮೊದಲ ದಿನವೇ ಟೀಂ ಇಂಡಿಯಾದ (Team India) ಆಟಗಾರ್ತಿಯರು 3 ವಿಶ್ವದಾಖಲೆ (World Record) ಬರೆದಿದ್ದಾರೆ.

    ಆರಂಭಿಕ ಆಟಗಾರ್ತಿ 20 ವರ್ಷದ ಶಫಾಲಿ ವರ್ಮಾ (Shafali Verma) ವೇಗದ ದ್ವಿಶತಕ ಸಿಡಿಸಿ ಸಾಧನೆ ಮಾಡಿದ್ದಾರೆ. ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸಿದ ಶಫಾಲಿ ವರ್ಮಾ ಕೇವಲ 194 ಎಸೆತಗಳಲ್ಲಿ ದ್ವಿಶತಕ ಸಿಡಿಸಿದರು. ಈ ಮೊದಲು ಆಸ್ಟ್ರೇಲಿಯಾ ಅನ್ನಾಬೆಲ್ ಸದರ್ಲ್ಯಾಂಡ್ ಅವರು 2024ರಲ್ಲೇ ಆಫ್ರಿಕಾ ವಿರುದ್ಧ 248 ಎಸೆತಗಳಲ್ಲಿ 200 ರನ್‌ ಹೊಡೆದಿದ್ದರು.

    ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧನಾ (Smriti Mandhana ) ಅವರ ಮೊದಲ ವಿಕೆಟಿಗೆ 312 ಎಸೆತಗಳಲ್ಲಿ 292 ಜೊತೆಯಾಟವಾಡಿ ವಿಶ್ವದಾಖಲೆ ಬರೆದಿದ್ದಾರೆ. ಈ ಹಿಂದೆ 2004ರಲ್ಲಿ ಪಾಕಿಸ್ತಾನದ ಕಿರಣ್‌ ಬಲೂಚ್‌ ಮತ್ತು ಸಜಿದಾ ಅವರು ವಿಂಡೀಸ್‌ ವಿರುದ್ಧ ಮೊದಲ ವಿಕೆಟಿಗೆ 241 ರನ್‌ ಜೊತೆಯಾಟವಾಡಿದ್ದರು. ಇದನ್ನೂ ಓದಿ: ಗೆದ್ದು ಬಾ ಟೀಂ ಇಂಡಿಯಾ – 2014 ರಿಂದ 2023ವರೆಗೆ ಐಸಿಸಿ ಟೂರ್ನಿಯಲ್ಲಿ ಭಾರತ ಸಾಧನೆ ಏನು?

    ಟೀಂ ಇಂಡಿಯಾ ಆಟಗಾರ್ತಿಯರ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನದಿಂದ 98 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 525 ರನ್‌ ಗಳಿಸಿದೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ ಇತಿಹಾಸಲ್ಲಿ ಮೊದಲ ದಿನ ಅತಿ ಹೆಚ್ಚು ರನ್‌ ಪೇರಿಸಿದ ದಾಖಲೆಯನ್ನು ಭಾರತ ಬರೆದಿದೆ. ಇದನ್ನೂ ಓದಿ: ಸೆಮಿಫೈನಲ್‌ ಗೆಲ್ಲುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತ ಹಿಟ್‌ಮ್ಯಾನ್- ವೀಡಿಯೋ ವೈರಲ್‌

    ಸ್ಮೃತಿ ಮಂಧನಾ 149 ರನ್‌ (161 ಎಸೆತ, 27 ಬೌಂಡರಿ, 1 ಸಿಕ್ಸರ್)‌ ಹೊಡೆದು ಔಟಾದರೆ ಶಫಾಲಿ ವರ್ಮಾ 205 ರನ್‌(197 ಎಸೆತ, 23 ಬೌಂಡರಿ, 8 ಸಿಕ್ಸರ್‌) ಹೊಡೆದು ರನೌಟ್‌ಗೆ ಬಲಿಯಾದರು.


    ಜೆಮಿಮಾ ಜೆಮಿಮಾ ರಾಡ್ರಿಗಸ್ 55 ರನ್‌ (94 ಎಸೆತ, 8 ಬೌಂಡರಿ) ಹೊಡೆದು ವಿಕೆಟ್‌ ಒಪ್ಪಿಸಿದರು. ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಔಟಾಗದೇ 42 ರನ್(‌76 ಎಸೆತ, 2 ಬೌಂಡರಿ), ರಿಚಾ ಘೋಷ್‌ ಔಟಾಗದೇ 43 ರನ್‌(33 ಎಸೆತ, 9 ಬೌಂಡರಿ) ಹೊಡೆದಿದ್ದಾರೆ.

  • ಕೊನೆಗೂ  ಕನಸು ನನಸು – ಬೆಂಗಳೂರಿನಲ್ಲಿ ರಾತ್ರಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ

    ಕೊನೆಗೂ ಕನಸು ನನಸು – ಬೆಂಗಳೂರಿನಲ್ಲಿ ರಾತ್ರಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ

    ಬೆಂಗಳೂರು: ಪ್ರತಿ ಬಾರಿಯೂ ಈ ಸಲ ಕಪ್‌ ನಮ್ದೆ (ESCN) ಎನ್ನುತ್ತಿದ್ದ ಆರ್‌ಸಿಬಿ (RCB) ಅಭಿಮಾನಿಗಳ ಕನಸು ಈಡೇರಿದ್ದು, ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (WPL) ಮೊದಲ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿದೆ.

    ಆರ್‌ಸಿಬಿ ಜಯಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ರಾತ್ರಿಯಿಡಿ #RCB  ಟ್ರೆಂಡ್‌ ಸೃಷ್ಟಿಯಾಗಿತ್ತು. ಅದರಲ್ಲೂ ಬೆಂಗಳೂರಿನ(Bengaluru) ಹಲವೆಡೆ ಅಭಿಮಾನಿಗಳು ಪಟಾಕಿ ಸಿಡಿಸಿ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಬೆಂಗಳೂರು ಮಾತ್ರವಲ್ಲ ದೆಹಲಿಯ ಮೆಟ್ರೋದಲ್ಲೂ ಅಭಿಮಾನಿಗಳ ಆರ್‌ಸಿಬಿ ಆರ್‌ಸಿಬಿ ಎಂದು ಹೇಳಿ ಘೋಷಣೆ ಮೊಳಗಿಸುತ್ತಿದ್ದರು.

    ಈ ಸಂಭ್ರಮಕ್ಕೆ ಕಾರಣವೂ ಇತ್ತು. ವಿರಾಟ್‌ ಕೊಹ್ಲಿ, ಎಬಿಡಿ ವಿಲಿಯರ್ಸ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ರಂತಹ ಘಟಾನುಘಟಿ ಆಟಗಾರರಿದ್ದರೂ ಇಲ್ಲಿಯವರೆಗೆ ಕಪ್‌ ಗೆದ್ದಿರಲಿಲ್ಲ.  ಇದನ್ನೂ ಓದಿ: WPL Champions: ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ – ಆರ್‌ಸಿಬಿ ಚೊಚ್ಚಲ ಚಾಂಪಿಯನ್‌!

    https://twitter.com/ustadkalyan/status/1769415797804527779?t=AjwwXqpJ788e1ZePmaqcaw&s=08

    ಕಳೆದ 16 ಐಪಿಎಲ್‌ (IPL) ಟೂರ್ನಿ ಪೈಕಿ ಪುರುಷರ ತಂಡ 2009, 2011, 2016 ಫೈನಲ್‌ ಪ್ರವೇಶಿಸಿದ್ದರೂ ರನ್ನರ್‌ ಅಪ್‌ಗೆ ತೃಪ್ತಿಪಟ್ಟಿತ್ತು. ಆದರೆ ಮಹಿಳಾ ಪ್ರೀಮಿಯರ್‌ ಲೀಗ್‌ನ ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಆರ್‌ಸಿಬಿ ಅಭಿಮಾನಿಗಳ ಬಹು ವರ್ಷದ ಕನಸು ಈಡೇರಿತು.

    ಫೈನಲ್‌ ಪಂದ್ಯದ ವೇಳೆ ಮಾತನಾಡಿದ ಕನ್ನಡತಿ ಶ್ರೇಯಾಂಕಾ ಪಾಟೀಲ್‌ (Shreyanka Patil) ಪ್ರತಿಬಾರಿಯೂ ನಮ್ಮ ತಂಡವನ್ನು ಅಭಿಮಾನಿಗಳು ಈ ಸಲ ಕಪ್‌ ನಮ್ದೆ ಎಂದು ಹೇಳಿ ಹುರಿದುಂಬಿಸುತ್ತಿದ್ದರು. ಈ ಬಾರಿ ನಾವು ಕಪ್‌ ಗೆದ್ದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ:  ಧೋನಿ ಟ್ರೆಂಡ್‌ ಮುಂದುವರಿಸಿದ ಸ್ಮೃತಿ – ಮಂಧಾನ ನಾಯಕತ್ವಕ್ಕೆ ಭೇಷ್‌ ಅಂದ್ರು ಫ್ಯಾನ್ಸ್‌!

    ನಾಯಕಿ ಸ್ಮೃತಿ ಮಂಧನಾ(Smriti Mandhana), ಪ್ರತಿಬಾರಿ ಅಭಿಮಾನಿಗಳು “ಈ ಸಲ ಕಪ್‌ ನಮ್ದೇ” ಎಂದು ಹೇಳುತ್ತಿದ್ದರು. ಆದರೆ ಈ ಬಾರಿ “ಈ ಸಲ ಕಪ್‌ ನಮ್ದು” ಎಂದು ಹೇಳಬಹುದು ಎಂದು ಸಂತಸ ವ್ಯಕ್ತಪಡಿಸಿದರು.

  • ಶಮಿ ಬೌಲಿಂಗ್‍ನಲ್ಲಿ ತೊಡೆಗೆ ಬಿದ್ದ ಪೆಟ್ಟಿನಿಂದ 10 ದಿನ ನೋವುಂಡಿದ್ದ ಸ್ಮೃತಿ ಮಂಧನಾ!

    ಶಮಿ ಬೌಲಿಂಗ್‍ನಲ್ಲಿ ತೊಡೆಗೆ ಬಿದ್ದ ಪೆಟ್ಟಿನಿಂದ 10 ದಿನ ನೋವುಂಡಿದ್ದ ಸ್ಮೃತಿ ಮಂಧನಾ!

    ಮುಂಬೈ: ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಕ್ರೀಡಾ ಜಗತ್ತು ಸ್ತಬ್ಧವಾಗಿದೆ, ಕ್ರೀಡಾಪಟುಗಳೆಲ್ಲಾ ಬಿಡುವಿನ ಸಮಯದಲ್ಲಿ ಸಾಮಾಜಿಕ ಜಾಲತಾಣ ಮೂಲಕ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ವೇಳೆ ಜನರಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ವಿಶೇಷ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದು, ಸ್ಮೃತಿ ಮಂಧನಾ ಮತ್ತು ಜೆಮಿಮಾ ರೋಡ್ರಿಗಸ್ ‘ಡಬಲ್ ಟ್ರಬಲ್ ವಿತ್ ಸ್ಮೃತಿ ಅಂತ್ ಜೆಮ್ಮಿ’ ಎಂಬ ಯೂಟ್ಯೂಬ್ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಪುರುಷರ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕೂಡ ಭಾಗಿಯಾಗಿದ್ದರು.

    2013ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಸ್ಮೃತಿ ಮಂಧನಾ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎಸ್‍ಸಿಎ)ಯಲ್ಲಿನ ಪುನರ್ ವಸತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ವೇಳೆ ಭಾರತ ತಂಡದ ಪ್ರಮುಖ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಬೌಲಿಂಗ್‍ನಲ್ಲಿ ತೊಡೆ ಭಾಗಕ್ಕೆ ತಿಂದಿದ್ದ ಬಲವಾದ ಪೆಟ್ಟೊಂದನ್ನು ಸಂದರ್ಶನ ವೇಳೆಯಲ್ಲಿ ಸ್ಮರಿಸಿದ್ದಾರೆ. ಅಲ್ಲದೇ ಶಮಿ ನೀಡಿದ ಪೆಟ್ಟಿಗೆ ತಮ್ಮ ತೊಡೆ 10 ದಿನಗಳ ಕಾಲ ಊದಿತ್ತು ಎಂದು ಹೇಳಿಕೊಂಡಿದ್ದಾರೆ.

    ‘ಶಮಿ ಅವರು ಮೊದಲು ನಿಧಾನವಾಗಿಯೇ ಬೌಲ್ ಮಾಡುವುದಾಗಿ ಹೇಳಿದ್ದರು. ಎನ್‍ಸಿಎ ರಿಹ್ಯಾಬ್‍ನಲ್ಲಿ ಇದ್ದಾಗ ಅವರು ಗಂಟೆಗೆ 120 ಕಿ.ಮೀ ವೇಗದಲ್ಲಿ ಆಫ್ ಸ್ಟಂಪ್‍ನಿಂದ ಆಚೆಗೇ ಬೌಲಿಂಗ್ ಮಾಡುವುದಾಗಿ ಹೇಳಿದ್ದರು. ಆದರೆ ನನಗೆ ಮೊದಲ 2 ಎಸೆತಗಳನ್ನು ಮುಟ್ಟಲು ಕೂಡ ಸಾಧ್ಯವಾಗಲಿಲ್ಲ. ಅಷ್ಟು ವೇಗದ ಬೌಲಿಂಗ್‍ನಲ್ಲಿ ನಾನು ಬ್ಯಾಟಿಂಗ್ ನಡೆಸಿರಲಿಲ್ಲ. 3ನೇ ಎಸೆತ ನೇರ ಬಾಡಿ ಲೈನ್‍ನಲ್ಲಿ ಬಂದು ನನ್ನ ತೊಡೆಗೆ ಬಡಿದಿತ್ತು. ಮುಂದಿನ 10 ದಿನಗಳ ಕಾಲ ನನ್ನ ತೊಡೆ ಊದಿಕೊಂಡಿತ್ತು’ ಎಂದು ಸ್ಮೃತಿ ಹೇಳಿದ್ದಾರೆ.

    ಸ್ಮೃತಿ ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, ಶಮಿ ಯಾವಾಗಲೂ ಬ್ಯಾಟ್ಸ್ ಮನ್‍ಗಳ ಎದುರು ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದ್ದರಿಂದ ಅವರ ಎದುರು ನೆಟ್ಸ್ ನಲ್ಲಿ ಅಭ್ಯಾಸ ನಡೆಸುವುದು ಕಷ್ಟಸಾಧ್ಯ. ಶಮಿ ಟೀಂ ಇಂಡಿಯಾ ಅಪಾಯಕಾರಿ ಬೌಲರ್ ಗಳಲ್ಲಿ ಅವರೂ ಒಬ್ಬರು ಎಂದಿದ್ದಾರೆ.

    23 ವರ್ಷದ ಸ್ಮೃತಿ ಮಂಧನಾ 2013ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದರು. ಇದುವರೆಗೂ 51 ಏಕದಿನ ಪಂದ್ಯಗಳನ್ನು ಆಡಿದ್ದು 2,025 ರನ್‍ಗಳನ್ನು ಗಳಿಸಿದ್ದಾರೆ. 43.08ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಮಂಧನಾ 4 ಶತಕ ಮತ್ತು 17 ಅರ್ಧಶತಕಗಳನ್ನೂ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲೂ 75 ಪಂದ್ಯಗಳಿಂದ 12 ಅರ್ಧಶತಕಗಳನ್ನು ಒಳಗೊಂಡ 1,716 ರನ್‍ಗಳನ್ನು ಗಳಿಸಿದ್ದಾರೆ.