Tag: ಸ್ಮೂದಿ

  • ಸಮ್ಮರ್ ಸ್ಪೆಷಲ್ – ಅನನಾಸು, ತೆಂಗಿನಕಾಯಿಯ ಸ್ಮೂದಿ ಮಾಡಿ

    ಸಮ್ಮರ್ ಸ್ಪೆಷಲ್ – ಅನನಾಸು, ತೆಂಗಿನಕಾಯಿಯ ಸ್ಮೂದಿ ಮಾಡಿ

    ನನಾಸು ಹಾಗೂ ತೆಂಗಿನಕಾಯಿ ಈ ಬೇಸಿಗೆಗೆ ತಂಪನ್ನು ತಂದುಕೊಡುವಂತಹ ಅದ್ಭುತ ಹಣ್ಣುಗಳು. ಇದನ್ನು ಮೊಸರು ಹಾಗೂ ಐಸ್ ಬಳಸಿ ಸ್ಮೂದಿ ಮಾಡಿ ಸವಿದರಂತೂ ತಣ್ಣನೆಯ ಅನುಭವ ನೀಡುತ್ತದೆ. ನಾವಿಂದು ಈ ರುಚಿಕರ ಸ್ಮೂದಿ ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತೇವೆ. ನೀವೊಮ್ಮ ಟ್ರೈ ಮಾಡಿ, ಈ ಬೇಸಿಗೆಯಲ್ಲಿ ತಂಪನ್ನು ಅನುಭವಿಸಿ.

    ಬೇಕಾಗುವ ಪದಾರ್ಥಗಳು:
    ಕತ್ತರಿಸಿದ ತಾಜಾ ತೆಂಗಿನಕಾಯಿ – ಅರ್ಧ ಕಪ್
    ಕತ್ತರಿಸಿದ ಅನನಾಸು – ಅರ್ಧ ಕಪ್
    ಅನನಾಸು ಜ್ಯೂಸ್ – ಅರ್ಧ ಕಪ್
    ತೆಂಗಿನಕಾಯಿ ನೀರು – ಅರ್ಧ ಕಪ್
    ಮೊಸರು – ಅರ್ಧ ಕಪ್
    ಐಸ್ ಕ್ಯಬ್ – 4 ಇದನ್ನೂ ಓದಿ: ಮನೆಯಲ್ಲೇ ಮಾಡಿ ಸ್ಟ್ರಾಬೆರಿ ಓಟ್ಸ್ ಕುಲ್ಫಿ

    ಮಾಡುವ ವಿಧಾನ:
    * ಮೊದಲಿಗೆ ಬ್ಲೆಂಡರ್ ತೆಗೆದುಕೊಂಡು, ಅದಕ್ಕೆ ಕತ್ತರಿಸಿದ ತೆಂಗಿನಕಾಯಿ, ಕತ್ತರಿಸಿದ ಅನನಾಸು ಹಾಗೂ ತೆಂಗಿನಕಾಯಿ ನೀರನ್ನು ಹಾಕಿ ನಯವಾಗಿ ರುಬ್ಬಿಕೊಳ್ಳಿ.
    * ಅನನಾಸು ಜ್ಯೂಸ್, ಐಸ್ ಕ್ಯೂಬ್ ಹಾಗೂ ಮೊಸರು ಸೇರಿಸಿ, ಮತ್ತೆ ಸ್ವಲ್ಪ ರುಬ್ಬಿ.
    * ಈಗ ಸರ್ವಿಂಗ್ ಗ್ಲಾಸ್‌ಗಳನ್ನು ತೆಗೆದುಕೊಂಡು, ಅದರಲ್ಲಿ ತೆಂಗಿನಕಾಯಿ ಸ್ಮೂದಿಯನ್ನು ಸುರಿಯಿರಿ.
    * ಇದೀಗ ಅನನಾಸು, ತೆಂಗಿನಕಾಯಿಯ ಸ್ಮೂದಿ ತಯಾರಾಗಿದ್ದು, ಬೇಸಿಗೆಯಲ್ಲಿ ಚಿಲ್ ಆಗಿ ಸವಿಯಿರಿ. ಇದನ್ನೂ ಓದಿ: ರಿಫ್ರೆಶ್ ಅನುಭವಕ್ಕೆ ಮಾಡಿ ಸವಿಯಿರಿ ಮಸಾಲಾ ಪೈನಾಪಲ್ ಡ್ರಿಂಕ್