Tag: ಸ್ಮಿತಾ ರಾಕೇಶ್

  • ಮಾವ ಸಿದ್ದರಾಮಯ್ಯಗೆ ಬರ್ತ್ ಡೇ ವಿಶ್ ಮಾಡಿದ ಸೊಸೆ ಸ್ಮಿತಾ ರಾಕೇಶ್

    ಮಾವ ಸಿದ್ದರಾಮಯ್ಯಗೆ ಬರ್ತ್ ಡೇ ವಿಶ್ ಮಾಡಿದ ಸೊಸೆ ಸ್ಮಿತಾ ರಾಕೇಶ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಸೊಸೆ ಸ್ಮಿತಾ ರಾಕೇಶ್ ಅವರು ಫೇಸ್‍ಬುಕ್ ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

    ಸಿದ್ದರಾಮಯ್ಯ ಅವರು ಇಂದು 73ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಕಾಂಗ್ರೆಸ್ ಪಕ್ಷದ ನಾಯಕರು ಸಹಿತ ಹಲವರು ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಇದನ್ನೂ ಓದಿ: ಹಲೋ ಎಲ್ಲಿದ್ದೀಯಾ? ನಿನ್ನ ಮೇಲೆ ಡೌಟ್ ಇಲ್ಲ, ಬಾ ಮನೆಗೆ ಮಾತಾಡೋಣ: ಜಮೀರ್​​​ಗೆ ಸಿದ್ದರಾಮಯ್ಯ ಬುಲಾವ್

    ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ರಾಕೇಶ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾವನೊಂದಿಗಿರುವ ಕೆಲವು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಶುಭಕೋರಿದ್ದಾರೆ.

  • ಮಾವನ ಪರ ಪ್ರಚಾರಕ್ಕಿಳಿದ ಸ್ಮಿತಾ ರಾಕೇಶ್ ಸಿದ್ದರಾಮಯ್ಯ

    ಮಾವನ ಪರ ಪ್ರಚಾರಕ್ಕಿಳಿದ ಸ್ಮಿತಾ ರಾಕೇಶ್ ಸಿದ್ದರಾಮಯ್ಯ

    ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ರಾಕೇಶ್ ಸಿದ್ದರಾಮಯ್ಯ ದಿಢೀರನೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಮಾವನ ಪರ ಪ್ರಚಾರ ಮಾಡಲು ಶುರುಮಾಡಿದ್ದಾರೆ.

    ರಾಕೇಶ್ ಸಿದ್ದರಾಮಯ್ಯ ಅವರ ಪತ್ನಿ ಸ್ಮಿತಾ ಎಂದಿಗೂ ಸಾರ್ವಜನಿಕವಾಗಿ ಕಾಣಿಸಿಕೊಂಡವರಲ್ಲ. ರಾಕೇಶ್ ನಿಧನರಾದಗಲೂ ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳಲಿಲ್ಲ. ಈಗ ದಿಢೀರನೆ ಮಾವನ ಪರವಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿರುವುದು ರಾಜಕೀಯದ ಬೇರೆ ಬೇರೆ ಲೆಕ್ಕಾಚಾರಕ್ಕೆ ದಾರಿ ಮಾಡಿ ಕೊಟ್ಟಿದೆ.

    ಸಿಎಂ ಅವರೇ ಹೇಳುವ ಪ್ರಕಾರ ಇದು ಅವರ ಕೊನೆ ಚುನಾವಣೆ. ಹೀಗಾಗಿ, ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿಯನ್ನು ಸೊಸೆಗೆ ವಹಿಸುವ ಉದ್ದೇಶದಿಂದ ಸೊಸೆಯನ್ನು ನಿಧಾನವಾಗಿ ಕ್ಷೇತ್ರಕ್ಕೆ ಪರಿಚಯಿಸುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

    ಮಗ ಯತೀಂದ್ರ ಗೆ ವರುಣಾ ಕ್ಷೇತ್ರ, ಸೊಸೆಗೆ ಚಾಮುಂಡೇಶ್ವರಿ ಕ್ಷೇತ್ರ ಎನ್ನುವ ಆಲೋಚನೆ ಸಿಎಂ ಮಾಡುತ್ತಿದ್ದಾರೆ. ಸಾರ್ವಜನಿಕವಾಗಿಯೇ ಕಾಣಿಸಿಕೊಳ್ಳದ ಸಿಎಂ ಸೊಸೆ ಏಕಾಏಕಿ ಮಾವನ ಪರ ಮತಯಾಚನೆ ಗೆ ಇಳಿಯೋದಕ್ಕೆ ಸಾಧ್ಯವಿಲ್ಲ. ಮನೆ ಮಂದಿಯನ್ನು ತಮ್ಮ ಗೆಲುವಿಗಾಗಿ ಓಡಾಡಿಸುವ ವ್ಯಕ್ತಿತ್ವ ಸಿಎಂ ಅವರದಲ್ಲ. ಯಾವುದೋ ರಾಜಕೀಯದ ಪ್ಲಾನ್ ನಿಂದಲೆ ಸೊಸೆಯನ್ನು ಸಿಎಂ ಪ್ರಚಾರಕ್ಕೆ ಇಳಿಸಿದ್ದಾರೆ ಎನ್ನುವ ಮಾತು ಈಗ ಕೇಳಿಬಂದಿದೆ.