Tag: ಸ್ಮಾಟ್ ಫೋನ್

  • ಭಾರತದ  ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ? ಹೆಚ್ಚು ಮಾರಾಟಗೊಂಡ ಫೋನ್ ಯಾವುದು?

    ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ? ಹೆಚ್ಚು ಮಾರಾಟಗೊಂಡ ಫೋನ್ ಯಾವುದು?

    ನವದೆಹಲಿ: ಭಾರತ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲ ಮೊಬೈಲ್ ಕಂಪನಿಗ ¼ ಪಾಲು ಮತ್ತಷ್ಟು ಹೆಚ್ಚಾಗಿದ್ದು, 2019ರ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆ ಶೇ.65 ರಷ್ಟು ಪಾಲನ್ನು ಚೀನಾ ಮೊಬೈಲ್ ಉತ್ಪಾದಕ ಕಂಪನಿಗಳೇ ಪಡೆದಿದೆ.

    ಪ್ರತಿ ವರ್ಷ ಚೀನಾ ಬ್ರಾಂಡ್ ಗಳ ಮೌಲ್ಯ ಭಾರತದ ಮಾರುಕಟ್ಟೆಯಲ್ಲಿ ಶೇ.20 ರಷ್ಟು ಅಧಿಕವಾಗುತ್ತಿದೆ. ಅದರಲ್ಲೂ ವಿವೋ, ರಿಯಲ್‍ಮಿ ಸ್ಮಾಟ್‍ಫೋನ್ ಕಂಪನಿಗಳು ಹೆಚ್ಚು ಪ್ರಗತಿಯನ್ನ ಸಾಧಿಸಿದೆ ಎಂದು ಭಾರತದ ಸ್ಮಾರ್ಟ್‍ಫೋನ್ ಮಾರುಕಟ್ಟೆಯನ್ನು ಅಧ್ಯಯನ ನಡೆಸಿ ಕೌಂಟರ್‍ಪಾಯಿಂಟ್ ವರದಿ ನೀಡಿದೆ.

    ಪ್ರಮುಖವಾಗಿ 7ರಿಂದ 14 ಸಾವಿರ ರೂ. ಒಳಗಿನ ಫೋನ್‍ಗಳ ಪೈಕಿ ವಿವೋ ಫೋನ್ ಮಾರಾಟದಲ್ಲಿ ಹೆಚ್ಚಾಗಿದೆ. ಒಪ್ಪೋ ಕಂಪನಿಯ 15 ರಿಂದ 25 ಸಾವಿರ ರೂ. ಮೌಲ್ಯದ ಫೋನ್ ಮಾರಾಟ ಹೆಚ್ಚಳ ಕಂಡಿದೆ.

    ದೇಶದ ಒಟ್ಟಾರೆ ವಾರ್ಷಿಕ ಸ್ಮಾಟ್ ಫೋನ್ ಮಾರುಕಟ್ಟೆ ಶೇ.4 ರಷ್ಟು ವೃದ್ಧಿಯಾಗಿದ್ದು, 2018ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಪ್ರಗತಿ ವೇಗ ಸ್ವಲ್ಪ ಕಡಿಮೆ ಆಗಿದೆ ಎಂದು ಅಧ್ಯಯನ ತಿಳಿಸಿದೆ.

    ಅತಿ ಹೆಚ್ಚು ಮಾರಾಟವಾದ ಟಾಪ್ 5 ಸ್ಮಾಟ್ ಫೋನ್‍ಗಳ ಪಟ್ಟಿಯಲ್ಲಿ ಚೀನಾ ಕಂಪನಿಗಳೇ ಸ್ಥಾನ ಪಡೆದುಕೊಂಡಿದೆ. ಕ್ಸಿಯೋಮಿ ರೆಡ್‍ಮಿ 6ಎ ಟಾಪ್ ಮಾಡೆಲ್ ಆಗಿದೆ. ಕ್ಸಿಯೋಮಿ ನೋಟ್ 6 ಪ್ರೋ, ರೆಡ್ ಮಿ ವೈ2, ಸ್ಯಾಮ್‍ಸಾಂಗ್ ಗೆಲಾಕ್ಸಿ ಎ20, ಗೆಲಾಕ್ಸಿ ಎ50 ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕ್ಸಿಯೋಮಿ ನೋಟ್ 6ಪ್ರೋ ದರ ಹಲವು ಬಾರಿ ಕಡಿತಗೊಳಿಸಿದ ಪರಿಣಾಮ ಸ್ಥಾನ ಪಡೆದುಕೊಂಡಿದೆ.

    ಯಾವ ಕಂಪನಿಯ ಪಾಲು ಎಷ್ಟು?
    ಕ್ಸಿಯೋಮಿ ಕಂಪನಿ 2018ರ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.31 ರಷ್ಟು ಮಾರುಕಟ್ಟೆಯಲ್ಲಿ ಪಾಲನ್ನು ಹೊಂದಿದ್ದರೆ, 2019ರ ಈ ಅವಧಿಯಲ್ಲಿ ಶೇ.29ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಸ್ಯಾಮ್‍ಸಂಗ್ ಕಳೆದ ವರ್ಷದ ತ್ರೈಮಾಸಿಕದಲ್ಲಿ ಶೇ.26 ರಷ್ಟು ಪಾಲು ಹೊಂದಿದ್ದರೆ ಈ ಬಾರಿ ಶೇ.3 ರಷ್ಟು ಕಡಿಮೆಯಾಗಿದ್ದು ಶೇ.23 ರಷ್ಟು ಪಾಲನ್ನು ಹೊಂದಿದೆ.

    ವಿವೋ 2018ರ ಮೊದಲ ತ್ರೈಮಾಸಿಕದಲ್ಲಿ ಶೇ.6 ರಷ್ಟ ಪಾಲು ಹೊಂದಿತ್ತು. ಈ ಬಾರಿಯ 2019ರ ಮೊದಲ ತ್ರೈಮಾಸಿಕದಲ್ಲಿ ಶೇ.12 ಮಾರುಕ್ಟೆ ಪಾಲನ್ನು ಗಳಿಸಿಕೊಂಡಿದೆ. ಕಳೆದ ಅವಧಿಯಲ್ಲಿ ರಿಯಲ್ ಮೀ ಟಾಪ್ -5 ಸ್ಥಾನ ಗಳಿಸಿರಲಿಲ್ಲ. ಆದರೆ ಈ ಬಾರಿ ಶೇ.7ರಷ್ಟು ಪಾಲನ್ನು ಹೊಂದುವ ಮೂಲಕ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ. ಒಪ್ಪೋ ಶೇ.7ರಷ್ಟು ಪಾಲನ್ನು ಹೊಂದುವ ಮೂಲಕ 5ನೇ ಸ್ಥಾನಗಳಿಸಿದೆ.

    ಉಳಿದಂತೆ ಇತರೇ ಕಂಪನಿಗಳು 2018 ಮೊದಲ ತ್ರೈಮಾಸಿಕದಲ್ಲಿ ಶೇ.31 ರಷ್ಟು ಪಾಲನ್ನು ಹೊಂದಿದ್ದವು. ಈ ಪ್ರಮಾಣ 2019 ಮೊದಲ ತ್ರೈಮಾನಿಕದಲ್ಲಿ ಶೇ.22 ರಷ್ಟಿತ್ತು.

    ಉಳಿದಂತೆ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಶೇ.36 ರಷ್ಟು ಪಾಲನ್ನು ಪಡೆಯುವ ಮೂಲಕ ಜಿಯೋ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ನಂತರದ ಸ್ಥಾನದಲ್ಲಿ ಅನುಕ್ರಮವಾಗಿ ಸ್ಯಾಮ್‍ಸಂಗ್(ಶೇ.10), ಲಾವಾ (ಶೇ.6), ನೋಕಿಯಾ(ಶೇ.7), ಐಟೆಲ್(ಶೇ.9) ಪಡೆದುಕೊಂಡಿದೆ.

  • ಬಿಡುಗಡೆಯಾಯ್ತು ಹಾನರ್ 8ಸಿ ನೂತನ ಸ್ಮಾರ್ಟ್ ಫೋನ್: ಗುಣವೈಶಿಷ್ಟ್ಯವೇನು? ಬೆಲೆ ಎಷ್ಟು?

    ಬಿಡುಗಡೆಯಾಯ್ತು ಹಾನರ್ 8ಸಿ ನೂತನ ಸ್ಮಾರ್ಟ್ ಫೋನ್: ಗುಣವೈಶಿಷ್ಟ್ಯವೇನು? ಬೆಲೆ ಎಷ್ಟು?

    ನವದೆಹಲಿ: ಆಂಡ್ರಾಯ್ಡ್ ಆವೃತ್ತಿಯಲ್ಲಿ ಹೆಸರು ಮಾಡುತ್ತಿರುವ ಹಾನರ್ ತನ್ನ ನೂತನ ಆವೃತ್ತಿಯಾದ ಹಾನರ್ 8ಸಿ ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ನೂತನ ಹಾನರ್ 8ಸಿ ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 8 ಎಂಪಿ ಎಚ್‍ಡಿ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 13+2ಎಂಪಿ ಡ್ಯುಯಲ್ ಕ್ಯಾಮೆರಾವಿದೆ. ಮಿಡ್ ನೈಟ್ ಬ್ಲಾಕ್, ಅರೋರ ಬ್ಲ್ಯೂ ಹಾಗೂ ಪ್ಲಾಟಿನಂ ಗೋಲ್ಡ್ ಬಣ್ಣಗಳಲ್ಲಿ ನೂತನ ಫೋನ್ ಲಭ್ಯವಿದೆ. ಡಿಸೆಂಬರ್ 10 ರಿಂದ ಆನ್‍ಲೈನ್ ಜಾಲತಾಣಗಳಲ್ಲಿ ಲಭ್ಯವಿರಲಿದೆ.

    ಬೆಲೆ ಎಷ್ಟು?
    4ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 11,999 ರೂ. 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 12,999 ರೂಪಾಯಿಯನ್ನು ನಿಗದಿಪಡಿಸಿದೆ.

    ಹಾನರ್ 8ಸಿ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ:
    157.2 X 76 X 7.98 ಮಿ.ಮೀ., 167 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 6.26 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720 X 1520 ಪಿಕ್ಸೆಲ್, 19:9 ಅನುಪಾತ 269ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನಾಪ್‍ಡ್ರಾಗನ್ 632, ಆಕ್ಟಾ ಕೋರ್ ಪ್ರೊಸೆಸರ್ 1.8 ಗೀಗಾಹರ್ಟ್ಸ್, ಅಡ್ರಿನೋ 506 ಗ್ರಾಪಿಕ್ ಪ್ರೊಸೆಸರ್, 3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ, 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೆ ಫೀಚರ್:
    ಮುಂಭಾಗ 8 ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 13+2 ಎಂಪಿ ಡ್ಯುಯಲ್ ಕ್ಯಾಮೆರಾ, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸಾರ್, ಫೋಟೋ ಲಾಕಿಂಗ್, 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv