Tag: ಸ್ಮಶಾನ

  • ದೆವ್ವವಿಲ್ಲ ಎಂದು ಸಾರಲು ಸ್ಮಶಾನದಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ

    ದೆವ್ವವಿಲ್ಲ ಎಂದು ಸಾರಲು ಸ್ಮಶಾನದಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ

    ಮುಂಬೈ: ಮೂಢನಂಬಿಕೆಗಳ ವಿರುದ್ಧ ಸಂದೇಶವನ್ನು ಸಾರಲು ಮಹಾರಾಷ್ಟ್ರದ (Maharashtra) ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದ ನಿವಾಸಿಯೊಬ್ಬರು ಸ್ಮಶಾನದಲ್ಲಿ (Crematorium) ತಮ್ಮ ಜನ್ಮದಿನವನ್ನು (Birthday) ಆಚರಿಸಿಕೊಂಡರು.

    54ನೇ ವರ್ಷಕ್ಕೆ ಕಾಲಿಟ್ಟ ಗೌತಮ್ ರತನ್ ಮೋರೆ ಅವರು ಮೊಹಾನೆ ಸ್ಮಶಾನದಲ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದರು. ತಮ್ಮ ಹುಟ್ಟುಹಬ್ಬದ ಪಾರ್ಟಿಗೆ ಬಂದ ಅತಿಥಿಗಳಿಗೆ ಕೇಕ್ ಹಾಗೂ ಬಿರಿಯಾನಿಗಳನ್ನು ನೀಡಿ ಸತ್ಕರಿಸಿದರು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸ್ಮಶಾನದಲ್ಲಿ ದೊಡ್ಡ ಬ್ಯಾನರ್‌ನ್ನು ಹಾಕಲಾಗಿದ್ದು, ಕೇಕ್‌ನ್ನು ಕತ್ತರಿಸುತ್ತಿರುವ ವೀಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಎಲ್ಲಾ ಮುಸ್ಲಿಮರನ್ನ ಕೊಂದು ಹಿಂದೂ ರಾಷ್ಟ್ರ ನಿರ್ಮಾಣ ಮಾಡಿ: ಖಾಲಿದ್ ಆಕ್ರೋಶ

    ಸ್ಮಶಾನದಲ್ಲಿ ನಡೆದ ಗೌತಮ್ ರತನ್ ಮೋರೆಯ ಹುಟ್ಟುಹಬ್ಬದ ಪಾರ್ಟಿಯಲ್ಲಿ 40 ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು. ಗೌತಮ್ ಈ ಬಗ್ಗೆ ಮಾತನಾಡಿ, ಸಾಮಾನ್ಯವಾಗಿ ಸ್ಮಶಾನಗಳು ಅಂದರೆ ಜನರು ಭಯಪಡುತ್ತಾರೆ. ಆದರೆ ಅಂತಹ ಇತರ ಸ್ಥಳಗಳಿಗೆ ಸಂಬಂಧಿಸಿದ ದೆವ್ವಗಳು ಅಸ್ತಿತ್ವದಲ್ಲಿಲ್ಲ ಎಂಬ ಸಂದೇಶವನ್ನು ಜನರಿಗೆ ಕಳುಹಿಸಲು ಇಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಪಕ್ಷ ಬಿಡಲ್ಲ, ಭವಿಷ್ಯ ಬಿಜೆಪಿಯಲ್ಲೇ ಇದೆ: ಯತ್ನಾಳ್

    Live Tv
    [brid partner=56869869 player=32851 video=960834 autoplay=true]

  • ಆಫೀಸ್ ಬಿಟ್ಟು ಸ್ಮಶಾನದಲ್ಲಿ ಕೆಲಸಕ್ಕೆ ಸೇರಿದ ಪದವೀಧರೆ – ಕೆಲಸ ಏನು ಗೊತ್ತಾ?

    ಆಫೀಸ್ ಬಿಟ್ಟು ಸ್ಮಶಾನದಲ್ಲಿ ಕೆಲಸಕ್ಕೆ ಸೇರಿದ ಪದವೀಧರೆ – ಕೆಲಸ ಏನು ಗೊತ್ತಾ?

    ಬೀಜಿಂಗ್: ಆಫೀಸ್‍ನ (Office) ರಾಜಕೀಯದಿಂದ ತಪ್ಪಿಸಿಕೊಳ್ಳಲು ಪದವೀಧರೆಯೊಬ್ಬಳು ಸ್ಮಶಾನದಲ್ಲಿ (Cemetery) ಕೆಲಸ (Job) ಮಾಡುವ ಮೂಲಕ ಅಚ್ಚರಿಯನ್ನು ಉಂಟುಮಾಡಿದ್ದಾಳೆ.

    ಟಾನ್ (22) ಎಂಬ ಯುವತಿ ಉತ್ತಮ ಕೆಲಸ ಹಾಗೂ ಜೀವನದಲ್ಲಿ ಸಮತೋಲನ ಸಾಧಿಸಲು ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದಾಳೆ. ಈಕೆ ಚೀನೀ ವಿಶ್ವವಿದ್ಯಾನಿಲಯದ ಪದವೀಧರೆಯಾಗಿದ್ದಾಳೆ. ಟಾನ್ ವಾರದಲ್ಲಿ 6 ದಿನ ಬೆಳಗ್ಗೆ 8:30 ರಿಂದ ಸಂಜೆ 5ರವರೆಗೆ ಕೆಲಸ ಮಾಡುತ್ತಾಳೆ. ಅಷ್ಟೇ ಅಲ್ಲದೇ 2 ಗಂಟೆಗಳ ಕಾಲ ಊಟಕ್ಕೆಂದು ವಿರಾಮವನ್ನು ಪಡೆಯುತ್ತಾಳೆ. ಈಕೆ ಈ ಕೆಲಸದಿಂದ ಸುಮಾರು 4,000 ಯುವಾನ್ (45,766ರೂ.) ಮಾಸಿಕ ವೇತನವನ್ನು ಗಳಿಸುತ್ತಿದ್ದಾಳೆ. ಈ ಬಗ್ಗೆ ಟಾನ್ ಪಶ್ಚಿಮ ಚೀನಾದ ಚಾಂಗ್‍ಕಿಂಗ್ ಪುರಸಭೆಯಲ್ಲಿ ಪರ್ವತದ ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವ ಸ್ಥಳದ ವೀಡಿಯೋ ಹಾಗೂ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾಳೆ.

    ಈ ವೀಡಿಯೋದಲ್ಲಿ ಟಾನ್ ಅಲ್ಲೇ ವಾಸಿಸುವ ಕಾರಣದಿಂದಾಗಿ ತನ್ನನ್ನು ತಾನು ಸಮಾಧಿ ಕೀಪರ್ ಎಂದು ಪರಿಚಯಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ ಇದು ಬಹಳ ಸರಳ ಹಾಗೂ ಸುಲಭದ ಕೆಲಸವಾಗಿದೆ ಎಂದು ತಿಳಿಸಿದ್ದಾಳೆ. ಜೊತೆಗೆ ವೀಡಿಯೋದಲ್ಲಿ ತನ್ನ ಕೆಲಸದ ಬಗ್ಗೆ ತಿಳಿಸಿದ್ದು, ಸ್ಮಾಶಾನದಲ್ಲಿ ಮೃತದೇಹ ಹೂಳಲು ಜಾಗ ನೀಡುವುದು ಹಾಗೂ ಸತ್ತವರ ಸಂಬಂಧಿಕರ ಪರವಾಗಿ ಸಮಾಧಿಗಳನ್ನು ಮುಚ್ಚಲು ಸಹಾಯ ಮಾಡುವುದಾಗಿದೆ ಎಂದಿದ್ದಾಳೆ. ಇದನ್ನೂ ಓದಿ: ಕಾಡಾನೆ ಹಾವಳಿ ಗಂಭೀರವಾಗಿ ಪರಿಗಣಿಸಿ, ವಿಶೇಷ ಕಾರ್ಯಪಡೆ ರಚನೆ ಮಾಡಿದ್ದೇವೆ: ಬೊಮ್ಮಾಯಿ

    ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದು, ಇಂತಹ ಕೆಲಸವನ್ನು ಹಳೆಯ ದಿನಗಳಲ್ಲಿ ದುರದೃಷ್ಟಕರವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಆಧುನಿಕ ಜನರಿಗೆ ಇದು ಒತ್ತಡವಿಲ್ಲದ ಕೆಲಸವಾಗಿದೆ ಎಂದು ಹೇಳಿದ್ದಾನೆ. ಮತ್ತೊಬ್ಬ ಪ್ರತಿಕ್ರಿಯೆ ನೀಡಿದ್ದು, ನನಗೂ ಈ ಕೆಲಸ ಇಷ್ಟವಾಗಿದೆ. ಅಲ್ಲಿ ಯಾವುದೇ ಕಚೇರಿ ರಾಜಕೀಯ ಇಲ್ಲ, ಜನರೊಂದಿಗೂ ವ್ಯವಹರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾನೆ. ಇದನ್ನೂ ಓದಿ: ಸೆರೆ ಹಿಡಿದಿದ್ದ ಆನೆ ಜೊತೆ ಕಾದಾಟ – ದಸರಾ ಆನೆ ಗೋಪಾಲಸ್ವಾಮಿ ಸಾವು

    Live Tv
    [brid partner=56869869 player=32851 video=960834 autoplay=true]

  • ಸ್ಮಶಾನ ಇಲ್ಲದೆ ದಲಿತರ ಸಂಸ್ಕಾರಕ್ಕೆ ಪರದಾಟ- ಪಬ್ಲಿಕ್ ವರದಿ ಬಳಿಕ ಎಚ್ಚೆತ್ತ ಸರ್ಕಾರ

    ಸ್ಮಶಾನ ಇಲ್ಲದೆ ದಲಿತರ ಸಂಸ್ಕಾರಕ್ಕೆ ಪರದಾಟ- ಪಬ್ಲಿಕ್ ವರದಿ ಬಳಿಕ ಎಚ್ಚೆತ್ತ ಸರ್ಕಾರ

    ಬೀದರ್: ಸ್ಮಶಾನ ಭೂಮಿ ಇಲ್ಲದೆ ರಾತ್ರೋರಾತ್ರಿ ಕದ್ದು ಮುಚ್ಚಿ ಸಂಸ್ಕಾರ ಮಾಡಿದ ದಲಿತ ಕುಟುಂಬಗಳಿಗೆ ಕೊನೆಗೂ ಸರ್ಕಾರ ಮುಕ್ತಿ ನೀಡಿದೆ. ನಿಮ್ಮ ಪಬ್ಲಿಕ್ ಟಿವಿಯ ವಿಸ್ತೃತ ವರದಿ ಬೆನ್ನಲ್ಲೇ ರಾಜ್ಯ ಸರ್ಕಾರ (State Government) ದಲಿತರಿಗಾಗಿ ಸ್ಮಶಾನ ಭೂಮಿ ಮಂಜೂರು ಮಾಡಿದೆ. ದಲಿತರ ದುಸ್ಥಿತಿ ಬಗ್ಗೆ ಸುದ್ದಿ ಮಾಡಿ ಸರ್ಕಾರದ ಕಣ್ಣು ತೆರೆಸಿದ ಪಬ್ಲಿಕ್ ಟಿವಿಗೆ ಧನ್ಯವಾದಗಳನ್ನು ತಿಳಿಸಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

    ಸುಮಾರು 30 ವರ್ಷಗಳಿಂದ ಸ್ಮಶಾನ ಭೂಮಿ ಇಲ್ಲದೆ ಅಧಿಕಾರಿಗಳಿಗೆ ಹೆದರಿ ರಾತ್ರೋರಾತ್ರಿ ಕದ್ದು ಮುಚ್ಚಿ ಸಂಸ್ಕಾರ ಮಾಡುತ್ತಿದ್ದ ದಲಿತ 120ಕ್ಕೂ ಅಧಿಕ ಕುಟುಂಬಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಸೆಪ್ಟೆಂಬರ್ 19ರಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ (Eshwar Khandre) ಯ ಭಾಲ್ಕಿ ಕ್ಷೇತ್ರದಲ್ಲಿ ದಲಿತರು ಸ್ಮಶಾನ (Cemetery) ಭೂಮಿ ಇಲ್ಲದೆ ರಾತ್ರಿ ಕದ್ದು ಮುಚ್ಚಿ ಅಂತ್ಯ ಸಂಸ್ಕಾರ ಮಾಡ್ತಿದ್ದಾರೆ ಎಂದು ನಿಮ್ಮ ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು. ಇದನ್ನೂ ಓದಿ: ಸ್ಕ್ಯಾನ್‌ಮಾಡಿ `ಸಿದ್ರಾಮುಲ್ಲನ ಉಗ್ರಭಾಗ್ಯ’ ಲೀಲೆ ನೋಡಿ – PayCM ಅಭಿಯಾನಕ್ಕೆ ಬಿಜೆಪಿ ಟಕ್ಕರ್

    ಈ ಸುದ್ದಿ ಪ್ರಸಾರ ಬೆನ್ನಲ್ಲೇ ರಾಜ್ಯ ಸರ್ಕಾರ ಭಾಲ್ಕಿ ತಾಲೂಕಿನ ಧನ್ನೂರ ಗ್ರಾಮದಲ್ಲಿ ಬಸವರಾಜ ತಂದೆ ವೈಜನಾಥ್ ಎಂಬವರ ಸರ್ವೆ ನಂಬರ್ 123/*/8ರಲ್ಲಿ 2 ಎಕರೆ ಪಟ್ಟಾ ಜಮೀನು ಖರೀದಿಸಿದೆ. 22 ಲಕ್ಷ 74 ಸಾವಿರದ 880 ರೂಪಾಯಿಗೆ ಜಮೀನು ಖರೀದಿ ಮಾಡಿ ಗ್ರಾಮದ 120ಕ್ಕೂ ಅಧಿಕ ದಲಿತ ಕುಟುಂಬಗಳಿಗೆ ಸ್ಮಶಾನ ಭೂಮಿ ನೀಡಿದೆ. ದಲಿತರ ದುಸ್ಥಿತಿ ಬಗ್ಗೆ ವಿಸ್ತೃತ ವರದಿ ಮಾಡಿದ ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದ್ದಾರೆ.

    ಮೃತರಿಗೆ ಸ್ವಂತ ಜಮೀನಿಲ್ಲ, ಸ್ಮಶಾನ ಭೂಮಿಯೂ ಇಲ್ಲದ ಕಾರಣ ರಾತ್ರಿ ವೇಳೆ ಗ್ರಾಮದ ಹೊರ ವಲಯದಲ್ಲಿನ ಅರಣ್ಯ ಇಲಾಖೆಯ ಜಾಗದಲ್ಲಿ ಕದ್ದು, ಮುಚ್ಚಿ ಅಂತ್ಯಕ್ರಿಯೆ ಮಾಡಬೇಕಿತ್ತು. ಜೊತೆಗೆ ಕೆಲವರು ಗ್ರಾಮದ ತಮ್ಮ ಮನೆಯ ಅಂಗಳದಲ್ಲೆ ಅಂತ್ಯಸಂಸ್ಕಾರ ಮಾಡಿದ್ದು ದೃಶ್ಯಗಳ ಸಮೇತ ನಿಮ್ಮ ಪಬ್ಲಿಕ್ ಟಿವಿ (Public tv) ಸುದ್ದಿ ಮಾಡಿತ್ತು. ಇದಕ್ಕೆಲ್ಲ ಈಗ ಪರಿಹಾರ ಸಿಕ್ಕಿದೆ.

    ಒಟ್ಟಿನಲ್ಲಿ ದಲಿತರು 3 ದಶಕಗಳಿಂದ ಅನುಭವಿಸುತ್ತಿದ್ದ ತೊಂದರೆ ಪಬ್ಲಿಕ್ ಟಿವಿ ವರದಿ ಬಳಿಕ ಪರಿಹಾರ ಸಿಕ್ಕಿದ್ದು ಸಂತೋಷದ ವಿಚಾರ.

    Live Tv
    [brid partner=56869869 player=32851 video=960834 autoplay=true]

  • ಭಾರೀ ಮಳೆ- ಸ್ಮಶಾನಕ್ಕೆ ಹೋಗಲು ಜಾಗವಿಲ್ಲದೇ 2 ದಿನ ಮನೆಯಲ್ಲೇ ಉಳಿದ ಮೃತದೇಹ

    ಭಾರೀ ಮಳೆ- ಸ್ಮಶಾನಕ್ಕೆ ಹೋಗಲು ಜಾಗವಿಲ್ಲದೇ 2 ದಿನ ಮನೆಯಲ್ಲೇ ಉಳಿದ ಮೃತದೇಹ

    ಚಿಕ್ಕಮಗಳೂರು: ಭಾರೀ ಮಳೆಯಿಂದಾಗಿ(Rain) ಮೃತವ್ಯಕ್ತಿಯ ಶವವನ್ನು ಸ್ಮಶಾನಕ್ಕೆ ಸಾಗಿಸಲು ದಾರಿ ಇಲ್ಲದೆ ಎರಡು ದಿನಗಳ ಕಾಲ ಮನೆಯಲ್ಲೇ ಇಟ್ಟುಕೊಂಡ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಸಮೀಪದ ಎಸ್.ಬೊಮ್ಮೇನಹಳ್ಳಿಯಲ್ಲಿ ನಡೆದಿದೆ.

    ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ದಾರಿ ಇಲ್ಲದೆ ಜನ ಪರದಾಡಿ ಎರಡು ದಿನಗಳ ಬಳಿಕ ಅಂತ್ಯಸಂಸ್ಕಾರ ಮಾಡಿದ್ದಾರೆ. ಕಡೂರು ತಾಲೂಕಿನ ಚಿಕ್ಕ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್. ಬೊಮ್ಮನಹಳ್ಳಿಯಲ್ಲಿ ಪ್ರಮೋದ್(55) ಎಂಬವರು ಮೃತಪಟ್ಟಿದ್ದರು. ಆದರೆ ಬಹಳ ವರ್ಷಗಳ ನಂತರ ದೇವನೂರು ಕೆರೆ(Lake) ತುಂಬಿ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿತ್ತು. ಇದರಿಂದಾಗಿ ಈ ಗ್ರಾಮದಿಂದ ಸ್ಮಶಾನಕ್ಕೆ ಹೋಗುವ ದಾರಿಯೂ ನೀರಿನಿಂದ ಜಲಾವೃತವಾಗಿ ಮೃತದೇಹ ಕೊಂಡೊಯ್ಯಲು ಸಾಧ್ಯವಾಗದೆ ಎರಡು ದಿನಗಳ ಕಾಲ ಕಾದಿದ್ದಾರೆ.

    ಎರಡು ದಿನದ ನಂತರ ನೀರಿನ ಹರಿವು ತುಸು ಕಡಿಮೆಯಾದ ಬಳಿಕ, ನೀರಲ್ಲೇ ಶವವನ್ನು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಶವ ಹೂಳಲು ಗುಂಡಿ ತೆಗೆಯಲು ಜೆಸಿಬಿ ತರಿಸಿದರೆ ಅದು ಕೂಡ ಕೆಸರಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಿಕ್ಕಿಕೊಂಡು ಪರದಾಡಿದ್ದಾರೆ. ಇದನ್ನೂ ಓದಿ: ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನದವರಾಗಿದ್ದರು- ಕತ್ತಿ ನಿಧನಕ್ಕೆ ಆರಗ ಸಂತಾಪ

    ಆದರೂ ಕಷ್ಟಪಟ್ಟು ಎರಡು, ಮೂರು ಕಡೆ ಗುಂಡಿ ತೆಗೆದರೂ ಅಲ್ಲಿಯೂ ನೀರು ತುಂಬಿಕೊಂಡಿದೆ. ಕೊನೆಗೂ ಸ್ವಲ್ಪ ಎತ್ತರದ ಭಾಗದಲ್ಲಿ ಗುಂಡಿ ತೆಗೆದು ಅಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ. ಈ ಗ್ರಾಮದಲ್ಲಿ ಈ ಸಮಸ್ಯೆ ಇಂದು-ನಿನ್ನೆಯದ್ದಲ್ಲ. ಕಳೆದ 10 ವರ್ಷಗಳಿಂದಲೂ ಇದೇ ಸಮಸ್ಯೆ ಇದೆ. ಜನಪ್ರತಿನಿಧಿಗಳ ಬಳಿ ಹಲವು ಬಾರಿ ಈ ಸಮಸ್ಯೆ ಬಗ್ಗೆ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸದನದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದ ಉಮೇಶ್ ಕತ್ತಿ ತಂದೆ

    Live Tv
    [brid partner=56869869 player=32851 video=960834 autoplay=true]

  • ಡಿಸಿ ಕಚೇರಿ ಆವರಣದಲ್ಲಿ ಮೃತದೇಹ ಇಟ್ಟು ಪ್ರತಿಭಟನೆ

    ಡಿಸಿ ಕಚೇರಿ ಆವರಣದಲ್ಲಿ ಮೃತದೇಹ ಇಟ್ಟು ಪ್ರತಿಭಟನೆ

    ಬೆಳಗಾವಿ: ಸ್ಮಶಾನಕ್ಕೆ ತೆರಳಲು ದಾರಿ ಇಲ್ಲದಿದ್ದಕ್ಕೆ ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿ ಮೃತದೇಹ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ದಾರಿ ಇಲ್ಲವಾಗಿತ್ತು. ಇದರಿಂದಾಗಿ ಏಣಗಿ ಗ್ರಾಮಸ್ಥರು ಅಬ್ದುಲ್ ಖಾದರ್ ಮಿಶ್ರಿಕೋಟಿ (65) ಮೃತದೇಹವನ್ನು ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಮೃತರ ಸಂಬಂಧಿ ಇಬ್ರಾಹಿಂ ನೇತೃತ್ವದಲ್ಲಿ ಗ್ರಾಮಸ್ಥರಿಂದ ಈ ಪ್ರತಿಭಟನೆ ನಡೆದಿದ್ದು, ಸ್ಮಶಾನಕ್ಕೆ ಹಾದಿ ಕೊಡದ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಿಂದೂ, ಮುಸ್ಲಿಂ ಎರಡೂ ಸಮುದಾಯದ ಸ್ಮಶಾನಗಳಿಗೆ ತೆರಳಲು ಹಾದಿ ಇಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬೆಳಗಾವಿ ಡಿಸಿ ಕಚೇರಿಗೆ ಮೃತದೇಹ ತಂದು ಪ್ರತಿಭಟನೆ ಮಾಡುತ್ತಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಇಲ್ಲೇ ಸಮಾಧಿ ಮಾಡುತ್ತೇವೆ ಎಂದು ಸಂಬಂಧಿಕರು, ಗ್ರಾಮಸ್ಥರು ಎಚ್ಚರಿಕೆ ನೀಡಿದರು.

    ಬೆಳಗಾವಿ ಡಿಸಿ ಕಚೇರಿ ಎದುರು ಮೃತದೇಹವಿಟ್ಟು ಗ್ರಾಮಸ್ಥರ ಪ್ರತಿಭಟನೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದ್ದಾರೆ. ಆದರೂ ಇದಕ್ಕೆ ಕರಗದೇ ಸ್ಮಶಾನಕ್ಕೆ ದಾರಿ ಮಾಡಿಕೊಡುವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಮಾರ್ಕೆಟ್ ಠಾಣೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಸಿಸಿಬಿ ಸಿಪಿಐ ನಿಂಗನಗೌಡ ಪಾಟೀಲ್ ಇದ್ದರು. ಇದನ್ನೂ ಓದಿ: ಇಂದಿನಿಂದ SSLC ಸಪ್ಲಿಮೆಂಟರಿ ಎಕ್ಸಾಂ – ಆಗಸ್ಟ್ ಮೊದಲ ವಾರದಲ್ಲಿ ರಿಸಲ್ಟ್

    ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಭೇಟಿ ನೀಡಿ ಪ್ರತಿಭಟನಾನಿರತರ ಮನವೊಲಿಕೆಗೆ ಯತ್ನಿಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳ ಕಳಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದ ಎಡಿಸಿ ಭರವಸೆ ನೀಡಿದ್ದಾರೆ. ಜೆಸಿಬಿ ದಾರಿ ಹೋಗುವಷ್ಟು ರಸ್ತೆ ಮಾಡಿಸಿ ಕೊಡಿ ತೆರಳುತ್ತೇವೆ ಎಂದ ಗ್ರಾಮಸ್ಥರು  ತಿಳಿಸಿದರು. ಆ ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು. ಇದನ್ನೂ ಓದಿ: ಜುಲೈ 1ರಿಂದ ಕಬ್ಬನ್ ಪಾರ್ಕ್‍ನಲ್ಲಿ ನಾಯಿಗಳಿಗೆ ನಿಷೇಧ

    Live Tv

  • ಗ್ರಾಮಕ್ಕೆ ಇಲ್ಲ ಸ್ಮಶಾನ – ರಸ್ತೆಯ ಪಕ್ಕದಲ್ಲೇ ನಡೀತು ವ್ಯಕ್ತಿ ಅಂತ್ಯಕ್ರಿಯೆ

    ಗ್ರಾಮಕ್ಕೆ ಇಲ್ಲ ಸ್ಮಶಾನ – ರಸ್ತೆಯ ಪಕ್ಕದಲ್ಲೇ ನಡೀತು ವ್ಯಕ್ತಿ ಅಂತ್ಯಕ್ರಿಯೆ

    ಹಾವೇರಿ: ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಇಲ್ಲದ್ದರಿಂದ ರಸ್ತೆ ಪಕ್ಕದಲ್ಲಿಯೇ ಮೃತ ರೈತನ ಅಂತ್ಯಕ್ರಿಯೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶೀಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    Haveri

    ಗ್ರಾಮದ ಬಳಿ ಇರುವ ಹಾವೇರಿ-ಹಾನಗಲ್ ರಸ್ತೆಯ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಗಿದ್ದು, ಮೃತ ವ್ಯಕ್ತಿಯನ್ನು ಗ್ರಾಮದ ಹನುಮಂತಪ್ಪ ಹೊಸಮನಿ(57) ಎಂದು ಗುರುತಿಸಲಾಗಿದೆ. ಹಾವು ಕಡಿದ ರೈತ ಹನುಮಂತಪ್ಪ ಮೃತಪಟ್ಟಿದ್ದ. ಇದನ್ನೂ ಓದಿ: 40 ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಕುರಿತು ಚರ್ಚೆ ನಡೆಯುತ್ತಿದೆ: ಜಾರಕಿಹೊಳಿ ಬಾಂಬ್

    Haveri

    ಶೀಗಿಹಳ್ಳಿ ಗ್ರಾಮಕ್ಕೆ ಅಂತ್ಯಕ್ರಿಯೆ ಮಾಡಲು ಸೂಕ್ತ ಜಾಗದಲ್ಲಿ ಸ್ಮಶಾನ ವ್ಯವಸ್ಥೆ ಕಲ್ಪಿಸುವಂತೆ ಹತ್ತಾರು ಬಾರಿ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಆದರೂ ಈವರೆಗೂ ಸ್ಮಶಾನ ಜಾಗದ ವ್ಯವಸ್ಥೆ ಆಗದ್ದರಿಂದ ರಸ್ತೆ ಪಕ್ಕದಲ್ಲೇ ಅಂತ್ಯಕ್ರಿಯೆಯನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ. ಈಬಗ್ಗೆ ಕೂಡಲೇ ಜಿಲ್ಲಾಡಳಿತ ಸೂಕ್ತ ಸ್ಥಳ ಗುರುತಿಸಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನೆರೆಮನೆಯ ಹೆಣ್ಣು ನಾಯಿಯನ್ನು ರೇಪ್ ಮಾಡಿದ 67ರ ವೃದ್ಧ

  • ಸ್ಮಶಾನಕ್ಕೆ ದಾರಿ ಇಲ್ಲದೆ ಮೃತದೇಹವನ್ನ ಕೆಸರಲ್ಲೇ ಹೊತ್ತೊಯ್ದ ಗ್ರಾಮಸ್ಥರು

    ಸ್ಮಶಾನಕ್ಕೆ ದಾರಿ ಇಲ್ಲದೆ ಮೃತದೇಹವನ್ನ ಕೆಸರಲ್ಲೇ ಹೊತ್ತೊಯ್ದ ಗ್ರಾಮಸ್ಥರು

    ಹಾವೇರಿ: ಸ್ಮಶಾನಕ್ಕೆ ಸರಿಯಾದ ದಾರಿಯಿಲ್ಲದೆ ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಹೋಗಲು ಗ್ರಾಮಸ್ಥರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹೊಳೆಆನ್ವೇರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬಸಪ್ಪ ಪೂಜಾರ ಎಂಬ 75 ವರ್ಷದ ವಯೋವೃದ್ದ ಮೃತಪಟ್ಟಿದ್ದಾರೆ. ಗ್ರಾಮದ ಬಳಿ ಇರೋ ಸ್ಮಶಾನಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲದೆ, ರೈತರ ಭತ್ತದ ಗದ್ದೆಯಲ್ಲಿ ಮೃತದೇಹವನ್ನ ಹೊತ್ತುಕೊಂಡು ಕೆಸರಿನಲ್ಲಿ ನಡೆದು ಹೋಗುವ ಪರಿಸ್ಥಿತಿ ಬಂದಿದೆ.  ಇದನ್ನೂ ಓದಿ: ಆತ್ಮಹತ್ಯೆಗೆ ಮುಂದಾಗಿದ್ದ ವೃದ್ಧೆಯನ್ನು ರಕ್ಷಿಸಿದ ಯುವಕರು

    ಗ್ರಾಮಸ್ಥರು ಹಾಗೂ ಸಂಬಂಧಿಕರು ಕೆಸರಿನ ಭತ್ತದ ಗದ್ದೆಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟುಕೊಂಡು ಅಂತ್ಯಕ್ರಿಯೆಗೆ ತೆರಳಿದ್ದಾರೆ. ಸ್ಮಶಾನದ ಸುತ್ತಮುತ್ತ ರೈತರ ಜಮೀನುಗಳು ಇವೆ. ಅದರೆ ಸ್ಮಶನಕ್ಕೆ ಹೋಗಲು ಸರಿಯಾದ ರಸ್ತೆಯನ್ನ ಮಾಡಿಲ್ಲ. ಸ್ಮಶಾನದ ಸುತ್ತಮುತ್ತಲಿನ ಎಲ್ಲ ಜಮೀನುಗಳಲ್ಲಿ ರೈತರಹ ಭತ್ತ ನಾಟಿ ಮಾಡಿದ್ದಾರೆ. ಕೂಡಲೇ ತಾಲೂಕು ಆಡಳಿತ ಹಾಗೂ ಜಿಲ್ಲಾಧಿಡಳಿತ ಸ್ಮಶಾನಕ್ಕೆ ಹೋಗುವ ರಸ್ತೆಯ ಸರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

  • ತಾಯಿಯನ್ನ ಸ್ಮಶಾನದಲ್ಲಿ ಬಿಟ್ಟು ಹೋದ ಪಾಪಿ ಮಗ, ಮಗಳು

    ತಾಯಿಯನ್ನ ಸ್ಮಶಾನದಲ್ಲಿ ಬಿಟ್ಟು ಹೋದ ಪಾಪಿ ಮಗ, ಮಗಳು

    ಬೆಂಗಳೂರು: ತಾಯಿಯನ್ನ ಸಾಕದೇ ಪಾಪಿ ಮಗ, ಮಗಳು ತಾಯಿಯನ್ನ ನಗರದ ವೈಟ್ ಫೀಲ್ಡ್ ನ ಸ್ಮಶಾನದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ.

    ಅಡುಗೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸ್ಮಶಾನದಲ್ಲಿ ಕಳೆದ 15 ದಿನಗಳಿಂದ ವೃದ್ಧೆಯೊಬ್ಬರು ಊಟವಿಲ್ಲದೇ, ಮಳೆಯಲ್ಲಿ ನರಕ ಅನುಭವಿಸುತ್ತಿದ್ದರು. ಸ್ಥಳೀಯರೇ ಅಜ್ಜಿಯ ರಕ್ಷಣೆಗೆ ಮುಂದಾಗಿ ಟಾರ್ಪಲ್ ವ್ಯವಸ್ಥೆ ಮಾಡಿ, ಯೋಗಿಶ್ ಜನಸ್ನೇಹಿ ಚಾರಿಟೇಬಲ್ ಟ್ರಸ್ಟ್ ಗೆ ಮಾಹಿತಿಯನ್ನು ನೀಡಿದ್ದರು. ಕೂಡಲೇ ರಾತ್ರಿ ಅಜ್ಜಿಯನ್ನ ರಕ್ಷಿಸಿ, ಜನಸ್ನೇಹಿ ಆಶ್ರಮದ ಸಂಸ್ಥಾಪಕ ಯೋಗಿಶ್, ಸದ್ಯ ವೃದ್ಧೆಗೆ ಆಶ್ರಯ ನೀಡಿದ್ದಾರೆ.

    ಬದುಕಿತು ಹಿರಿಜೀವ:
    ಮಧ್ಯರಾತ್ರಿಯ ಮಳೆಯಲ್ಲೂ ಅಜ್ಜಿಗೆ ಊಟ, ಜ್ಯೂಸ್ ನೀಡಿ ಸಾವಿನ ದವಡೆಯಿಂದ ಅಜ್ಜಿಯನ್ನ ಪಾರು ಮಾಡಿದ್ದಾರೆ. 15 ದಿನಗಳಿಂದ ಊಟವಿಲ್ಲದೇ ನಿತ್ರಣಗೊಂಡಿದ್ದ ಅಜ್ಜಿಗೆ ಚಿಕಿತ್ಸೆ ನೀಡಿ ತಮ್ಮ ಆಶ್ರಮದಲ್ಲಿರಿಸಿಕೊಂಡಿದ್ದಾರೆ. ಸಾಕು-ಸಲುಹಿದ ಮಕ್ಕಳು ಬೀದಿಯಲ್ಲಿ ಬಿಟ್ಟು ಹೋಗಿದ್ದಾರೆ. ಇಂತಹ ಮಕ್ಕಳು ಬೇಡ. ಒಂದು ತಿಂಗಳಿನಿಂದ ಊಟ ಮಾಡಿಲ್ಲ. ತುಂಬಾ ಚಳಿಯಾಗ್ತಿದೆ ಅಂತ ಅಜ್ಜಿ ಸಂಕಟವನ್ನ ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯರಾದ ವಿಜಯ್ ಎಂಬವರು ಅನಾಥಗೊಂಡಿದ್ದ ಅಜ್ಜಿಗೆ ಕೊರೊನಾ ಟೆಸ್ಟ್ ಮಾಡಿಸಿ, ಅನಾಥಾಶ್ರಮಕ್ಕೆ ಮಾಹಿತಿ ನೀಡಿದ್ದರು. ವಿಜಯ್ ಕುಮಾರ್ ನೀಡಿದ ಮಾಹಿತಿಯ ಮೇರೆಗೆ ಜನಸ್ನೇಹಿ ಯೋಗೀಶ್ ಅಜ್ಜಿಯ ರಕ್ಷಣೆ ಮಾಡಿದ್ರು.

    ಬೀದಿಗೆ ತಳ್ಳಿದ ಮಗಳು:
    ಸ್ಮಶಾನದಲ್ಲಿ ಅನಾಥವಾಗಿದ್ದ ಅಜ್ಜಿಗೆ ಒಬ್ಬ ಮಗ ಹಾಗೂ ಸಾಕು ಮಗಳಿದ್ದಾರೆ. ಬೀದಿಯಲ್ಲಿ ಅನಾಥವಾಗಿ ಬಿದ್ದದ್ದ ಮಗುವನ್ನ ಸಾಕಿ, ಸಲುಹಿದ ತಾಯಿಯನ್ನೇ ಮಗಳು ಬೀದಿಗೆ ಬಿಟ್ಟು ಹೋಗಿದ್ದಾಳೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಮೈಸೂರಲ್ಲಿ ಶೀಘ್ರವೇ ಡೆಲ್ಟಾ ಪ್ಲಸ್ ಪರೀಕ್ಷಾ ಲ್ಯಾಬ್ ಆರಂಭ

  • ಸಮುದ್ರಪಾಲಾಯ್ತು  ಮನೆ – ಏಳುತ್ತಿದೆ ರಕ್ಕಸ ಅಲೆಗಳು, ಸುರಿಯುತ್ತಿದೆ ಭಾರೀ ಮಳೆ

    ಸಮುದ್ರಪಾಲಾಯ್ತು ಮನೆ – ಏಳುತ್ತಿದೆ ರಕ್ಕಸ ಅಲೆಗಳು, ಸುರಿಯುತ್ತಿದೆ ಭಾರೀ ಮಳೆ

    – ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್
    – ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ

    ಮಂಗಳೂರು: ಕರ್ನಾಟಕದ ಕರಾವಳಿ ಇಂದು ತೌಕ್ತೆ ಚಂಡಮಾರುತದ ಹೊಡೆತಕ್ಕೆ ನಲುಗಿ ಹೋಗಿದೆ. ಪರಿಣಾಮ ನಿನ್ನೆ ತಡರಾತ್ರಿಯಿಂದಲೇ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಅಬ್ಬರದ ಮಳೆಯಾಗುತ್ತಿದೆ.

    ಶನಿವಾರ ಮಧ್ಯಾಹ್ನದ ವೇಳೆ ಮಂಗಳೂರಿನ ಪಣಂಬೂರು,ಸೋಮೇಶ್ವರ, ಉಳ್ಳಾಲ, ಕೋಟೆಪುರ, ಕೈಕೋ, ಉಚ್ಚಿಲ, ಸುರತ್ಕಲ್, ಸಸಿಹಿತ್ಲು, ಬೈಕಂಪಾಡಿ ಮುಂತಾದ ಕಡಲತೀರದಲ್ಲಿ ಅಲೆಗಳ ಅಬ್ಬರ ಭಾರೀ ಪ್ರಮಾಣದಲ್ಲಿತ್ತು.

    ಸಮುದ್ರಪಾಲಾದ ಸ್ಮಶಾನ:
    ಮಂಗಳೂರು ಹೊರವಲಯದ ಸೋಮೇಶ್ವರ ಕಡಲ ತೀರದಲ್ಲಿ ಕಡಲು ಪ್ರಕ್ಷುಬ್ಧಗೊಂಡು ಏಕಾಏಕಿ ದಡಕ್ಕೆ ಅಲೆಗಳು ಅಪ್ಪಳಿಸಿದ್ರಿಂದ, ರಕ್ಕಸ ಗಾತ್ರದ ಅಲೆಗಳು ಸ್ಮಶಾನವನ್ನು ಧರಾಶಾಹಿ ಮಾಡಿತ್ತು. ಅಲೆಗಳ ಅಬ್ಬರಕ್ಕೆ ಸಮುದ್ರ ಪಾಲಾದ ಹಿಂದೂ ರುದ್ರಭೂಮಿಯ ತಡೆಗೋಡೆ ನಿನ್ನೆ ಸಮುದ್ರದ ಅಲೆಗಳ ಅಬ್ಬರಕ್ಕೆ ಕುಸಿದಿತ್ತು. ಭಾರೀ ಗಾಳಿ ಮಳೆಗೆ ಹಲವು ಕಟ್ಟಡಗಳು ಧರಾಶಾಹಿಯಾಗಿವೆ. ಅರಬ್ಬೀ ಸಮುದ್ರ ತೀರದ ಹಲವು ಅಂಗಡಿಗಳು ಸಮುದ್ರಪಾಲಾಗಿವೆ. ಸೋಮೇಶ್ವರ, ಸಸಿಹಿತ್ಲು, ಬೈಕಂಪಾಡಿ, ಉಳ್ಳಾಲ ಭಾಗದಲ್ಲಿ ಭಾರೀ ಅಲೆ ಅಬ್ಬರಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.

    ಬೋಟ್ ರಕ್ಷಣೆ
    ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೂವರು ಮೀನುಗಾರರು ಸಮುದ್ರದ ಮದ್ಯೆ ಸಿಲುಕಿಕೊಂಡಿದ್ದರು. ಇವನ್ನು ಕೋಸ್ಟ್ ಗಾರ್ಡ್ ಪಡೆ ರಕ್ಷಿಸಿದೆ. ಬೋಟ್ ಎಂಜಿನ್ ಫೇಲ್ ಆಗಿ ಕೇರಳದ ಕಣ್ಣೂರು ಕಡಲ ತೀರದಿಂದ 10 ನಾಟಿಕಲ್ ಮೈಲ್ ದೂರದಲ್ಲಿ ಆಳ ಸಮುದ್ರ ದಲ್ಲಿ ಮೀನುಗಾರರು ಅಪಾಯದಲ್ಲಿದ್ದರು. ಚಂಡಮಾರುತದ ವಾನಿರ್ಂಗ್ ಇದ್ದರೂ ಮೀನುಗಾರಿಕೆಗೆ ತೆರಳಿದ್ದ ಕೇರಳದ ಮೀನುಗಾರರು ಅಪಾಯದಲ್ಲಿದ್ದರು. ಮೂವರು ಕೇರಳದ ಮೀನುಗಾರರನ್ನು ಮಂಗಳೂರಿನಿಂದ ಹೊರಟಿದ್ದ ಕೋಸ್ಟ್ ಗಾರ್ಡ್ ಶಿಪ್ ರಕ್ಷಿಸಿದೆ. ಮಂಗಳೂರಿನ ಐಸಿಜಿ ವಿಕ್ರಮ್ ಹೆಸರಿನ ಕೋಸ್ಟ್ ಗಾರ್ಡ್ ಹಡಗಿನ ಸಿಬ್ಬಂದಿ ಗಳು ತಡರಾತ್ರಿ ಆಳ ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

    ಸೋಮೇಶ್ವರ ಪುರಸಭೆ ಅಧಿಕಾರಿಗಳಿಂದ ಸಮುದ್ರ ಪಾತ್ರದ ಜನರಿಗೆ ಧ್ವನಿ ವರ್ಧಕದ ಮೂಲಕ ಎಚ್ಚರಿಕೆ ನೀಡಲಾಗಿದೆ. ದಡದಲ್ಲಿದ್ದ ಮೀನುಗಾರಿಕಾ ಬೋಟ್ ಗಳಿಗೂ ಹಾನಿಯಾಗಿದೆ. ದಡದಲ್ಲಿರುವ ಬೋಟ್ ಗಳನ್ನು ಸುರಕ್ಷಿತ ಸ್ಥಳಗಳಿಗೆ ಮೀನುಗಾರರು ರವಾನಿಸಿದ್ದಾರೆ. ಮಂಗಳೂರು ಹೊರವಲಯದ ಸೋಮೇಶ್ವರದ ಕಡಲಕಿನಾರೆಯಲ್ಲಿ ರಸ್ತೆ, ಮನೆಗಳತ್ತ ಸಮುದ್ರದ ನೀರು ನುಗ್ಗಿ ಅವಾಂತರವಾಗಿದೆ.

    ಮಂಗಳೂರಿಗೆ ಹೊಂದಿಕೊಂಡಂತೆ ಇರುವ ಕೇರಳದ ಕಾಸರಗೋಡಿನಲ್ಲೂ ಭಾರೀ ಅನಾಹುತ ಸಂಭವಿಸಿದೆ. ನೋಡನೋಡುತ್ತಿದ್ದಂತೆ  ಉಪ್ಪಳದ ಮಸೋಡಿ ತೀರಪ್ರದೇಶದಲ್ಲಿದ್ದ ಮೂಸ ಎಂಬುವವರಿಗೆ ಸೇರಿದ ಮನೆ ಧರಾಶಾಹಿಯಾಗಿದೆ. ಭಾನುವಾರ ಕೂಡ ಕರ್ನಾಟಕ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು ಕಡಲ ತೀರದ ಜನರು ಎಚ್ಚರಿಕೆಯಿಂದ ಇರಬೇಕಿದೆ.

  • ಸ್ಮಶಾನದಲ್ಲಿ ಕೋವಿಡ್ ಸೋಂಕಿತನ ಶವ ಬಿಸಾಡಿ ಹೋದ್ರಾ?

    ಸ್ಮಶಾನದಲ್ಲಿ ಕೋವಿಡ್ ಸೋಂಕಿತನ ಶವ ಬಿಸಾಡಿ ಹೋದ್ರಾ?

    ಚಿಕ್ಕಬಳ್ಳಾಪುರ: ನಗರದ ನಿಮ್ಮಾಕಲಕುಂಟೆ ಬಳಿಯ ಸ್ಮಶಾನದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಕೋವಿಡ್ ಸೋಂಕಿತ ಶವವನ್ನು ಮಣ್ಣು ಮಾಡದೆ ಬಿಸಾಡಿ ಹೋಗಿದ್ದರಾ ಎಂಬ ಅನುಮಾನ ಮೂಡಿದೆ.

    ಮೃತದೇಹ ಬಿಸಾಡಿ ಮೂರ್ನಾಲ್ಕು ದಿನಗಳಾಗಿದ್ದು, ಮೃತದೇಹವನ್ನು ಆಸ್ಪತ್ರೆಯಲ್ಲಿ ಪ್ಯಾಕ್ ಮಾಡಿದ ರೀತಿಯಲ್ಲಿದೆ. ನಾಯಿಗಳು ಮೃತದೇಹದ ಭಾಗಗಳನ್ನ ಎಳೆದು ತಿಂದಿವೆ. ಇನ್ನೂ ಈ ಸ್ಮಶಾನದ ಅಕ್ಕ ಪಕ್ಕ ಜನವಸತಿ ಪ್ರದೇಶವಾಗಿದ್ದು, ಸುತ್ತಮುತ್ತಲ ಜನ ಭಯಭೀತರಾಗಿದ್ದಾರೆ. ಇದು ಕೋವಿಡ್ ಸೋಂಕಿತ ವ್ಯಕ್ತಿಯ ಶವ ಆದ್ರೆ ಸೋಂಕು ಹಬ್ಬಿದರೆ ಯಾರು ಹೊಣೆ ಅಂತ ಸಾರ್ವಜನಿರಕರು ಆತಂಕ ವ್ಯಕ್ತಪಡಿಸಿದ್ದಾರೆ.

    ಇನ್ನೂ ಮತ್ತೊಂದೆಡೆ ಗುಣಿ ಅಗೆಯುವಾಗ ಮೊದಲೇ ಹೂತಿದ್ದ ಮೃತದೇಹವನ್ನ ಹೊರಗೆ ಹಾಕಿದ್ರಾ ಅನ್ನೋ ಅನುಮಾನ ಸಹಮೂಡಿದೆ. ಏನೇ ಆದ್ರೂ ಮೃತದೇಹವನ್ನ ಮಣ್ಣು ಮಾಡಿ ಆತಂಕ ದೂರ ಮಾಡುವಂತೆ ಸ್ಥಳೀಯರು ನಗರಸಭೆಗೆ ಮನವಿ ಮಾಡಿಕೊಂಡಿದ್ದಾರೆ.