Tag: ಸ್ಮಶಾನ

  • Mandya | 60 ವರ್ಷದ ಹಿಂದೂ ಸ್ಮಶಾನ ಈಗ ಮುಸ್ಲಿಂ ಮಕಾನ್

    Mandya | 60 ವರ್ಷದ ಹಿಂದೂ ಸ್ಮಶಾನ ಈಗ ಮುಸ್ಲಿಂ ಮಕಾನ್

    – ಗ್ರಾಮಸ್ಥರಿಂದ ಪ್ರತಿಭಟನೆ

    ಮಂಡ್ಯ: 60 ವರ್ಷಗಳಿಂದ ಸರ್ಕಾರಿ ಸ್ಮಶಾನವಾಗಿದ್ದ (Graveyard) ಜಾಗವನ್ನು ಮುಸ್ಲಿಂ ಮಕಾನ್ ಮಾಡಿದ ಹಿನ್ನೆಲೆ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿರುವ ಘಟನೆ ಮಂಡ್ಯದ (Mandya) ಹೊಸಬೂದನೂರು (Hosabudanur) ಗ್ರಾಮದಲ್ಲಿ ನಡೆದಿದೆ.

    ಮಂಡ್ಯದ ಹೊಸಬೂದನೂರು ಗ್ರಾಮದಲ್ಲಿ ಕಳೆದ 1963ರಿಂದ 2017ರವರೆಗೆ ಸರ್ವೇ ನಂಬರ್ 313ರಲ್ಲಿ 1 ಎಕರೆ 13 ಗುಂಟೆ ಜಾಗದಲ್ಲಿ ಹಿಂದೂಗಳಿಗಾಗಿ ಸ್ಮಶಾನ ಇತ್ತು. ಆದರೆ 2017ರ ಬಳಿಕ ವಕ್ಫ್ ಬೋರ್ಡ್ ಆಸ್ತಿ ಇದಾಗಿದ್ದು, ಈ ಜಾಗ ಇದೀಗ ಮುಸ್ಲಿಂ ಸಮುದಾಯದ ಮಕಾನ್ (ಸ್ಮಶಾನ) ಆಗಿದೆ. ಇದನ್ನೂ ಓದಿ: ಕೊಪ್ಪಳ | KPCC ಕಾರ್ಮಿಕ ವಿಭಾಗದ ಕಾರ್ಯದರ್ಶಿ ಮೇಲೆ ಹಲ್ಲೆ – ಪಿಎಸ್‌ಐ ಸಸ್ಪೆಂಡ್

    ವಿಶೇಷ ಅಂದ್ರೆ ಈ ಊರಿನಲ್ಲಿ ಒಂದೇ ಒಂದು ಮುಸ್ಲಿಂ ಸಮುದಾಯದವರ ಮನೆ ಇಲ್ಲ. ಹೀಗಿರುವಾಗ ಮುಸ್ಲಿಂ ಸಮುದಾಯಕ್ಕೆ ಹಿಂದೂ ಸ್ಮಶಾನವನ್ನು ಬಿಟ್ಟುಕೊಡಲಾಗಿದೆ. ಇದೀಗ ಈ ಊರಿನಲ್ಲಿ ಹಿಂದೂಗಳು ಸಾವನ್ನಪ್ಪಿದರೆ ಹೂಳಲು ಸ್ಮಶಾನ ಇಲ್ಲದಂತೆ ಆಗಿದೆ. ಈ ಬಗ್ಗೆ ಸಚಿವರಿಗೆ, ಜಿಲ್ಲಾಡಳಿತಕ್ಕೆ, ಶಾಸಕರಿಗೆ ಹೇಳಿದ ವೇಳೆ ಇರುವ ಜಾಗದಲ್ಲಿ 24 ಗುಂಟೆ ಜಾಗವನ್ನು ಹಿಂದೂಗಳ ಸ್ಮಶಾನಕ್ಕಾಗಿ ಬಿಟ್ಟುಕೊಡಲಾಗಿತ್ತು. ಇದನ್ನೂ ಓದಿ: ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್‌

    ಇದೀಗ ಮತ್ತೆ ಆ ಜಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ತಡೆ ಹಿಡಿಯಲಾಗಿದೆ. ಜೊತೆಗೆ ಗ್ರಾಮ ಪಂಚಾಯ್ತಿಯಿಂದ ಸ್ಮಶಾನ ಅಭಿವೃದ್ಧಿಗೆ ತಹಶೀಲ್ದಾರ್ ತಡೆ ನೀಡಿದ್ದಾರೆ. ಹೀಗಾಗಿ ಇದೀಗ ಹೊಸಬೂದನೂರು ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈಗ ಮುಸ್ಲಿಂ ಮಕಾನ್ ಮಾಡಿರುವ ಹಿಂದೂ ಸ್ಮಶಾನವನ್ನು ವಾಪಸ್ ಹಿಂದೂಗಳಿಗೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ – ವೀಡಿಯೋ ವೈರಲ್

  • ಸೌದೆ ತಗೊಂಡ್ರೇ ಮಾತ್ರ ಹೆಣ ಸುಡಲು ಸ್ಲಾಟ್ – ಬೆಂಗಳೂರಿನ ಸ್ಮಶಾನದಲ್ಲೂ ಬ್ರೋಕರ್‌ಗಳ ಹಾವಳಿ!

    ಸೌದೆ ತಗೊಂಡ್ರೇ ಮಾತ್ರ ಹೆಣ ಸುಡಲು ಸ್ಲಾಟ್ – ಬೆಂಗಳೂರಿನ ಸ್ಮಶಾನದಲ್ಲೂ ಬ್ರೋಕರ್‌ಗಳ ಹಾವಳಿ!

    – 100 ರೂ. ಜಾಗದಲ್ಲಿ 6 ಸಾವಿರ ಕೊಡಬೇಕು
    – ಸೌದೆ ಬೇಡ ಅಂದ್ರೆ ರೋಡಲ್ಲಿ ಸುಡಬೇಕು!

    ಬೆಂಗಳೂರು: ಸ್ಮಶಾನಗಳನ್ನು ಚಿರಶಾಂತಿ ಸ್ಥಳ ಎನ್ನುತ್ತಾರೆ. ಇಂತಹ ಜಾಗಗಳಲ್ಲೂ ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಸ್ಮಶಾನದಲ್ಲಿ ಹೆಣ ಸುಡಬೇಕು ಅಂದರೆ ಸೌದೆಗೆ ಆರು ಸಾವಿರ ರೂ. ಕೊಡಬೇಕು.

    ಹೌದು. ನಗರದ ಚಾಮರಾಜಪೇಟೆಯ ಟಿ ಆರ್ ಮಿಲ್ ಚಿತಾಗಾರದಲ್ಲಿ ಈಗಲೂ ಸೌದೆ ಬಳಸಿ  ಹೆಣಗಳನ್ನು ಸುಡಲಾಗುತ್ತದೆ. ಈ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ತಿರ್ಮಾನಿಸಲಾಗಿದೆ. ಸದ್ಯ ಸೌದೆಗಳ ಮೂಲಕವೇ ಹೆಣ ಸುಡಲಾಗುತ್ತಿದೆ. ಈ ಸ್ಮಶಾನದಲ್ಲಿ ಹೆಣ ಸುಡಬೇಕಾದರೆ ಸೌದೆಗಾಗಿ 6 ಸಾವಿರ ರೂ. ಕೊಡಬೇಕು.

    ಸೌದೆ ತೆಗೆದುಕೊಂಡರೆ ಮಾತ್ರ ಮೃತದೇಹ ಸುಡಲು ಸ್ಲಾಟ್ ಕೊಡುತ್ತಾರೆ. ಸೌದೆ ಬ್ರೋಕರ್‌ಗಳ ಕಾರುಬಾರು ವಿಪರೀತ ಹೆಚ್ಚಾಗಿದ್ದು ಇರುವ ಸ್ಲಾಟ್‌ಗಳನ್ನು ಮೂವರು ಸೌದೆ ಮಂಡಿಯವರು ಹಂಚಿಕೊಂಡಿದ್ದಾರೆ. ಇವರ ಬಳಿಸೌದೆ ಖರೀದಿಸಿದರೆ ಮಾತ್ರ ಜನರಿಗೆ ಸ್ಲಾಟ್ ಸಿಗುತ್ತದೆ. ಸೌದೆ ಬೇಡ ಅಂದರೆ ಇಲ್ಲಿ ಸುಡಲು ಅವಕಾಶವಿಲ್ಲ. ಬ್ರೋಕರ್‌ಗಳೇ ಈ ಶಾಕಿಂಗ್‌ ವಿಚಾರವನ್ನು ತಿಳಿಸಿದ್ದು, ಸೌದೆ ಬೇಡ ಅಂದರೆ ನೆಲದ ಮೇಲೆ ಸುಡಿ, ಇಲ್ಲದೇ ಇದ್ರೆ ರೋಡಲ್ಲಿ ಸುಡಿ ಎನ್ನುತ್ತಾರೆ. ಮಂಡಿಯವರ ಹಾವಳಿ ಪಬ್ಲಿಕ್‌ ಟಿವಿಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!

    ಪಬ್ಲಿಕ್‌ ಟಿವಿ ಪ್ರತಿನಿಧಿ ಮತ್ತು ಸೌದೆ ಮಂಡಿಯವರ ನಡುವಿನ ಸಂಭಾಷಣೆಯನ್ನು ಇಲ್ಲಿ ನೀಡಲಾಗಿದೆ.

    ಪ್ರತಿನಿಧಿ- ಟೆಂಡರ್ ತಗೊಂಡಿದ್ದೀರಾ?
    ಸೌದೆ ಮಂಡಿಯವರು- ಇಲ್ಲ..ನಾವು ಮೂರು ಮಂಡಿಯವರು ಕಟ್ಟಿಗೆ ಹಾಕ್ತೀವಿ.
    ಪ್ರತಿನಿಧಿ- ಎಷ್ಟಾಗುತ್ತೆ?
    ಸೌದೆ ಮಂಡಿಯವರು- 5,600+300 ಆಗುತ್ತೆ
    ಪ್ರತಿನಿಧಿ- ಸೌದೆ ಬಿಟ್ಟು ಬಾಕ್ಸ್ ಬುಕ್ ಮಾಡೋಕ್ ಆಗಲ್ವಾ?
    ಸೌದೆ ಮಂಡಿಯವರು- ಸೌದೆ ನೀವು ತರೋಹಂಗಿಲ್ಲ?
    ಪ್ರತಿನಿಧಿ- ಬಿಬಿಎಂಪಿ ಚಾರ್ಜ್ ಇರುತ್ತಾ?
    ಸೌದೆ ಮಂಡಿಯವರು- 300 ಬರೆದು ಕೋಡೋಕೆ.
    ಪ್ರತಿನಿಧಿ- 6 ಸಾವಿರ ಜಾಸ್ತಿ ಅಲ್ವಾ.
    ಸೌದೆ ಮಂಡಿಯವರು- ಹಾಗಾದ್ರೇ ಅಲ್ಲೆ ಎಲ್ಲಾದ್ರೂ ಊರು ಕಡೆ ಮಾಡ್ಕೊಳ್ರಿ.
    ಪ್ರತಿನಿಧಿ- ಊರಿಂದ ಜನ ಸೌದೆ ತರ್ತಾರೆ.
    ಸೌದೆ ಮಂಡಿಯವರು- ಸೌದೆ ತಂದ್ರೇ ರೋಡಲ್ಲಿ ಇಟ್ಕೊಂಡ್ ಮಾಡಿ.
    ಪ್ರತಿನಿಧಿ- ಬಿಬಿಎಂಪಿದಲ್ವಾ ಒಂದೆರಡು ಸಾವಿರದಲ್ಲಿ ಆಗಲ್ವಾ?
    ಸೌದೆ ಮಂಡಿಯವರು- ಸೌದೆ ತರ್ತೀವಿ ಜಾಗ ಕೊಡಿ ಅಂದ್ರೇ ಯಾವೋನ್ ಕೊಡ್ತಾನೆ. ಇದನ್ನೂ ಓದಿ: Exclusive | ಕ್ಯಾಬಿನೆಟ್ ಕ್ಲೈಮ್ಯಾಕ್ಸ್, ಜಾತಿ ಗಣತಿ ಮಂಡನೆಗೆ ಪ್ಲ್ಯಾನ್‌ – ಮಾಸ್ಟರ್‌ಸ್ಟ್ರೋಕ್‌ ಕೊಡ್ತಾರಾ ಸಿಎಂ?

    ಪ್ರತಿನಿಧಿ- ಸೌದೆ ಇಲ್ಲದೆ ಬುಕ್ ಮಾಡ್ಕೊಳ್ಳಲ್ವಾ?
    ಸೌದೆ ಮಂಡಿಯವರು- ಊರಿಂದ ಸೌದೆ ತಂದ್ರೇ ಬಾಕ್ಸ್ ಕೊಡಲ್ಲ. ನೆಲದಲ್ಲೇ ಮಾಡ್ಕೋಬೇಕು.
    ಸೌದೆ ಮಂಡಿಯವರು- ಸಾವಿನ ಮನೆಯವರು ದುಡ್ಡಿನ ಬಗ್ಗೆ ಇಷ್ಟೋಂದು ಯೋಚನೆ ಮಾಡಲ್ಲ.
    ಪ್ರತಿನಿಧಿ- ಟೆಂಡರ್ ಹಾ ಇದು. ಬಿಬಿಎಂಪಿ ದಾ ಇದು.
    ಸೌದೆ ಮಂಡಿಯವರು- ಸ್ಲಾಟ್ ಬುಕ್ಕಿಂಗ್ ಬಿಬಿಎಂಪಿಯದ್ದು. ಸೌದೆ ಮಂಡಿಯವರದ್ದು.
    ಪ್ರತಿನಿಧಿ- ಬಿಬಿಸಂಪಿಯಿಂದ ದುಡ್ಡಿರಲ್ಲ ಹಾಗಿದ್ರೆ.
    ಸೌದೆ ಮಂಡಿಯವರು- ಬಿಬಿಎಂಪಿಯಿಂದ ಒಂದು ರೂಪಾಯಿ ಸಹ ಇರಲ್ಲ.
    ಸೌದೆ ಮಂಡಿಯವರು- ಬುಕ್ಕಿಂಗ್ ಮಾಡಿದ್ರಷ್ಟೇ ಸ್ಲಾಟ್ ಸಿಗೋದು.
    ಪ್ರತಿನಿಧಿ- ಡಿಪೋದವರು ಕಡಿಮೆಗೆ ಹೇಳಿದ್ರು.
    ಸೌದೆ ಮಂಡಿಯವರು- ಹಾಗಾದ್ರೇ ಅಲ್ಲೆ ಮಾಡ್ಕೊಳ್ಳಿ.

    ಬಿಬಿಎಂಪಿ ಶುಲ್ಕ 100- 300 ರೂ. ಇದ್ದರೆ ಸೌದೆ ಅಂತ ಇವರು 6 ಸಾವಿರ ರೂ. ಪಡೆಯುತ್ತಾರೆ. ಈಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಬಡ ಜನರ ಮೇಲೆ ಹೊರೆಯಾಗದಂತೆ ನೋಡಿಕೊಳ್ಳಬೇಕಿದೆ.

  • ಬಾಗಲಕೋಟೆ| 2 ಹಿಂದೂ ಸ್ಮಶಾನ ಈಗ ವಕ್ಫ್‌ ಆಸ್ತಿ!

    ಬಾಗಲಕೋಟೆ| 2 ಹಿಂದೂ ಸ್ಮಶಾನ ಈಗ ವಕ್ಫ್‌ ಆಸ್ತಿ!

    – 2013ರಲ್ಲಿ ಈ ಜಾಗದ ಮೇಲೆ ಸಾಲ ನೀಡಿತ್ತು ಎಸ್‌ಬಿಐ

    ಬಾಗಲಕೋಟೆ: ರೈತರ ಜಮೀನು, ಮಠ, ಮಂದಿರಗಳು, ಗೋಮಾಳ ಜಾಗೆ ಹೀಗೆ ಸುಮಾರು ಆಸ್ತಿಗಳು ವಕ್ಫ್‌ ಆಸ್ತಿಗೆ (Waqf Property) ಸೇರಿತ್ತು. ಈಗ ಜಿಲ್ಲೆಯಲ್ಲಿ ಹಿಂದೂ ಸ್ಮಶಾನ ಜಾಗಗಳು (Hindu Smashan Bhumi) ಸಹ ವಕ್ಪ್ ಮಂಡಳಿಗೆ ಸೇರಿದೆ.

    ಜಮಖಂಡಿ (Jamkhandi) ತಾಲೂಕಿನ ಸನಾಳ ಗ್ರಾಮದ 2 ಎಕರೆ 30 ಗುಂಟೆ ಮತ್ತು ರಬಕವಿ ಬನಹಟ್ಟಿ (Rabakavi Banahatti) ತಾಲೂಕಿನ ಹೊಸೂರು ಗ್ರಾಮದ 1 ಎಕ್ರೆ 39 ಗುಂಟೆ ರುದ್ರಭೂಮಿ ಜಾಗಗಳು ವಕ್ಪ್ ಮಂಡಳಿಗೆ ಸೇರಿವೆ ಎಂದು ಪಹಣಿಯಲ್ಲಿ ದಾಖಲಿಸಲಾಗಿದೆ. ಇದನ್ನೂ ಓದಿ: ಸರ್‌ ಎಂ.ವಿಶ್ವೇಶ್ವರಯ್ಯ ಓದಿದ್ದ ಸರ್ಕಾರಿ ಶಾಲೆಯೂ ವಕ್ಫ್‌ ಹೆಸರಿಗೆ

    ಸಾರ್ವಜನಿಕರ ಅವಶ್ಯಕತೆಗಾಗಿ ಹೊಸೂರು ಗ್ರಾಮದ ಸನ್ನವ್ವ ಕೋಲಾರ್ ಎಂಬುವರು ತಮ್ಮ ಜಮೀನನ್ನು ಹಿಂದೂ ರುದ್ರ ಭೂಮಿಗೆ ಕೊಡುಗೆಯಾಗಿ‌ ನೀಡಿದ್ದಾರೆ. ಇಲ್ಲಿ ನಾವು ಅಂತ್ಯಕ್ರಿಯೆ ನಡೆಸುತ್ತಾ ಬಂದಿದ್ದೇವೆ. ಈ ಜಾಗ ವಕ್ಫ್‌ ಮಂಡಳಿಗೆ ಸೇರಿದ್ದು ಹೇಗೆ ಎಂದು ಪ್ರಶ್ನಿಸಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಹಿಂದೂ ರುದ್ರಭೂಮಿ ಎಂದು ಉಲ್ಲೇಖವಾಗಿದ್ದ ಜಾಗದ ಪಹಣಿಯಲ್ಲಿ 2020ರ ಅಕ್ಟೋಬರ್‌ 13 ರಿಂದ ಖಬರಸ್ಥಾನ ಸುನ್ನಿ ವಕ್ಪ್ ಹೆಸರಿಗೆ ದಾಖಲಾಗಿದೆ.

    ಅಚ್ಚರಿ ಏನೆಂದರೆ ಹೊಸೂರು ಗ್ರಾಮದ ಜಾಗದ ಮೇಲೆ 2013 ರಲ್ಲಿ ಜಮಖಂಡಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ (State Bank of India) 3 ಲಕ್ಷ ರೂ. ಸಾಲ‌ ನೀಡಿದೆ. ಬ್ಯಾಂಕ್ ಸಾಲ ನೀಡಿದ್ದು ಪಹಣಿಯಲ್ಲಿ ಉಲ್ಲೇಖಿಸಲಾಗಿದೆ.‌ ಹೀಗಿದ್ದರೂ ಈ ಜಾಗ ವಕ್ಫ್‌ ಬೋರ್ಡ್‌ಗೆ ಸೇರಿದ್ದು ಹೇಗೆ ಎಂದು ರೈತರು ಪ್ರಶ್ನಿಸಿದ್ದಾರೆ.

     

  • ಮಂಡ್ಯದಲ್ಲಿ ಹಿಂದೂಗಳ ಸ್ಮಶಾನ ಈಗ ವಕ್ಫ್ ಆಸ್ತಿ

    ಮಂಡ್ಯದಲ್ಲಿ ಹಿಂದೂಗಳ ಸ್ಮಶಾನ ಈಗ ವಕ್ಫ್ ಆಸ್ತಿ

    ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ದೇವಸ್ಥಾನ, ಸರ್ಕಾರಿ ಶಾಲೆ ಬಳಿಕ ಇದೀಗ ಹಿಂದೂಗಳಿಗೆ ಸೇರಿದ ಸ್ಮಶಾನವನ್ಮು ವಕ್ಫ್ (Waqf) ಆಸ್ತಿ ಎಂದು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

    ಮಂಡ್ಯ ಜಿಲ್ಲೆಯ ಮದ್ದೂರು (Maddur) ತಾಲೂಕಿನ ಕೊಪ್ಪ ಗ್ರಾಮದ ಸರ್ವೆ ನಂಬರ್ 438ರಲ್ಲಿ ಇರುವ 1.37 ಗುಂಟೆ ಸ್ಮಶಾನ ಜಮೀನನ್ನು ವಕ್ಫ್ ಆಸ್ತಿ ಮಾಡಿಕೊಳ್ಳಲಾಗಿದೆ. 2019ರ ವರೆಗೆ ಈ 1.37 ಗುಂಟೆ ಜಮೀನು ಸರ್ಕಾರಿ ಸ್ಮಶಾನ ಎಂದು ಆರ್‌ಟಿಸಿಯಲ್ಲಿ ಉಲ್ಲೇಖವಾಗುತ್ತಿತ್ತು. ಆದರೆ 2019ರ ನಂತರ ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖವಾಗಿದೆ. ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌ಡಿಕೆ, ಪುತ್ರ ನಿಖಿಲ್‌ ವಿರುದ್ಧ ಎಫ್‌ಐಆರ್‌ ದಾಖಲು

    ರಾಜ್ಯದಲ್ಲಿ ವಕ್ಫ್ ವಿವಾದ ಹೆಚ್ಚಾದ ಹಿನ್ನೆಲೆ ಕೊಪ್ಪ ಗ್ರಾಮಸ್ಥರು ಪರಿಶೀಲನೆ ಮಾಡಿದ ವೇಳೆ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಬೇಕು ಹಾಗೂ ಈ ಲೋಪ ಮಾಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಮಕ್ಕಳನ್ನು ಬೈಕ್‌ಗಳಲ್ಲಿ ಕರೆದೊಯ್ಯುವಾಗ ಸೇಫ್ಟಿ ಬೆಲ್ಟ್ ಕಡ್ಡಾಯ

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್; ಸ್ಮಶಾನದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್; ಸ್ಮಶಾನದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

    ಹುಬ್ಬಳ್ಳಿ: ‘ಪಬ್ಲಿಕ್ ಟಿವಿ’ ಸತತ ವರದಿಗೆ ಹುಬ್ಬಳ್ಳಿ ಧಾರವಾಡ (Dharwad) ಮಹಾನಗರ ಪಾಲಿಕೆ ಕೊನೆಗೂ ಎಚ್ಚೆತ್ತುಕೊಂಡಿದೆ. ಸ್ಮಶಾನದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್‌ಗೆ (Indira Canteen) ಬ್ರೇಕ್ ಬಿದ್ದಿದು, ಹುಬ್ಬಳ್ಳಿ (Hubballi) ಮಂಟೂರು ರಸ್ತೆಯಲ್ಲಿನ ಸ್ಮಶಾನದಿಂದ ಮತ್ತೊಂದು ಸ್ಥಳಕ್ಕೆ ಇಂದಿರಾ ಕ್ಯಾಂಟೀನ್ ಸ್ಥಳಾಂತರಗೊಂಡಿದೆ.

    ಸ್ಮಶಾನದಲ್ಲಿ ಸಾರ್ವಜನಿಕರ ವಿರೋಧದ ನಡುವೆಯೂ ರಾತ್ರೋರಾತ್ರಿ ಕಾಂಪೌಂಡ್ ಹೊಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿತ್ತು. ಈ ಕುರಿತು ಸೆ.17 ರಂದು ‘ಪಬ್ಲಿಕ್ ಟಿವಿ’ ವರದಿ ಪ್ರಸಾರ ಮಾಡಿತ್ತು. ಅಲ್ಲದೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೂ ಇಂದಿರಾ ಕ್ಯಾಂಟೀನ್ ಕಾರಣವಾಗಿತ್ತು. ಹೀಗಾಗಿ ಇದೇ ತಿಂಗಳ 26ರಂದು ಶ್ರೀರಾಮಸೇನೆ ಮತ್ತು ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಮತ್ತು ಹೋರಾಟ ಸಮಿತಿಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ಭೂಮಿಯನ್ನು 2 ತಿಂಗಳ ಕಾಲ ಸುತ್ತಲಿರುವ ಮಿನಿ ಮೂನ್‌! – ಏನಿದರ ವಿಶೇಷ? 

    ಸಾರ್ವಜನಿಕರ ಸತತ ವಿರೋಧ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚನೆ ಮೇರೆಗೆ, ಇಂದಿರಾ ಕ್ಯಾಂಟೀನ್ ಸ್ಥಳಾಂತರಕ್ಕೆ ಪಾಲಿಕೆ ಮುಂದಾಗಿದೆ. ಈ ಕುರಿತು ಪಾಲಿಕೆ ಆಯುಕ್ತ ಈಶ್ವರ್ ಉಳ್ಳಾಗಡ್ಡಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಗಣೇಶ ಪ್ರತಿಷ್ಠಾಪಿಸಿದ ಸಿಬ್ಬಂದಿಗೆ ನೋಟಿಸ್ – ಅಧೀಕ್ಷಕರ ವಿರುದ್ಧ ಹಿಂದೂ ಸಂಘಟನೆಗಳು ಕಿಡಿ

  • ರಾತ್ರೋರಾತ್ರಿ ಸ್ಮಶಾನ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ – ಸ್ಥಳೀಯರಿಂದ ಆಕ್ರೋಶ

    ರಾತ್ರೋರಾತ್ರಿ ಸ್ಮಶಾನ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ – ಸ್ಥಳೀಯರಿಂದ ಆಕ್ರೋಶ

    ಹುಬ್ಬಳ್ಳಿ: ರಾತ್ರೋರಾತ್ರಿ ಸ್ಮಶಾನದ ಕಾಂಪೌಂಡ್ ಒಡೆದು ಇಂದಿರಾ ಕ್ಯಾಂಟೀನ್ (Indira Canteen) ನಿರ್ಮಾಣ ಮಾಡುತ್ತಿದ್ದು, ಸರ್ಕಾರದ ನಡೆಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಜಿಲ್ಲೆಯ ಮಂಟೂರು ರಸ್ತೆಯ ಸತ್ಯಹರಿಶ್ಚಂದ್ರ ಕಾಲೋನಿಯಲ್ಲಿ (Satya Harishchandra) ನಡೆದಿದೆ.

    ಇಂದಿರಾ ಕ್ಯಾಂಟೀನ್ ಬಡವರ, ಶ್ರಮಿಕರ, ಕಾರ್ಮಿಕರ ಹೊಟ್ಟೆ ತುಂಬಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಆರಂಭಿಸಿರುವ ಯೋಜನೆಯಾಗಿದೆ. ಯೋಜನೆ ಆರಂಭದಿಂದಲೂ ಈ ಯೋಜನೆ ಒಂದಿಲ್ಲಾ ಒಂದು ವಿವಾದಕ್ಕೆ ಕಾರಣವಾಗಿದೆ. ಈ ಕ್ಯಾಂಟೀನ್ ದಲಿತರ ಮತ್ತು ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ವಾಣಿಜ್ಯ ನಗರಿಯಲ್ಲಿ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿಗೆ ಭಾರಿ ವಿರೋಧ ವ್ಯಕ್ತವಾಗಿದೆ.ಇದನ್ನೂ ಓದಿ: ನಾಗಮಂಗಲ ಗಲಭೆ; ಕಿಡಿಗೇಡಿಗಳು ಅಂಗಡಿಗೆ ಪೆಟ್ರೋಲ್ ಬಾಂಬ್ ಎಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

     ಒಂದು ಕಡೆ ಇಂದಿರಾ ಕ್ಯಾಂಟೀನ್ ಕಾಮಗಾರಿ, ಇನ್ನೊಂದು ಕಡೆ ಹಿಂದೂಪರ ಸಂಘಗಳ ತೀವ್ರ ಆಕ್ರೋಶ. ಹುಬ್ಬಳ್ಳಿ ಮಂಟೂರು ರಸ್ತೆಯಲ್ಲಿ ಸತ್ಯಹರಿಶ್ಚಂದ್ರ ಕಾಲೋನಿಯ ಪಕ್ಕದಲ್ಲಿ ಸರ್ವೆ ನಂಬರ್ 212ರಲ್ಲಿ ಸುಮಾರು ಏಂಟು ಎಕರೆಯಲ್ಲಿ ಹಿಂದೂಗಳ ರುದ್ರಭೂಮಿಯಿದೆ. ಸ್ಮಶಾನದ ಕಾಂಪೌಂಡ್ ಗೋಡೆ ಒಡೆದು ರಾತ್ರೋರಾತ್ರಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದೆ.

    ಕಾಮಗಾರಿ ಸ್ಥಳಕ್ಕೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ (Pramod Mutalik) ಭೇಟಿ ನೀಡಿ ಮಾತನಾಡಿ, ಅಬ್ಬಯ್ಯ ಅವರು ದಲಿತರ ವೋಟ್ ಮೇಲೆ ಗೆದ್ದಿದ್ದಾರೆ. ಆದರೆ ಈಗ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇವತ್ತು ಇಂದಿರಾ ಕ್ಯಾಂಟೀನ್, ನಾಳೆ ಅಬ್ಬಯ್ಯ ಕ್ಯಾಂಟೀನ್ ಕಟ್ಟುತ್ತಾರೆ. ಹಿಂದೂ ರುದ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ಬೇಡ. ಕೂಡಲೇ ಇಂದಿರಾ ಕ್ಯಾಂಟೀನ್ ಕಟ್ಟಡ ಸ್ಥಳಾಂತರ ಮಾಡಿ. ಇಲ್ಲದಿದ್ದರೆ ಉಗ್ರ ಹೋರಾಟ ಮೂಲಕ ನಾವೇ ತೆರವು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಮತ್ತು ಹೋರಾಟ ಸಮಿತಿ ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ತಮ್ಮ ಪ್ರತಿಷ್ಠೆಗಾಗಿ ರುದ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿದ್ದು, ಅಧಿಕಾರಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ. ಈಗ ಈ ಹೋರಾಟಕ್ಕೆ ಹಿಂದೂಪರ ಸಂಘಟನೆಗಳು ಸಹ ಕೈ ಜೋಡಿಸಿದ್ದು, ರುದ್ರಭೂಮಿ ಹೋರಾಟ ತೀವ್ರತೆ ಪಡೆದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ನಮ್ಮ ಪಾರ್ಟಿ, ನಮ್ಮ ಲೀಡರ್, ನನ್ನಿಷ್ಟ: ವಿದೇಶದಲ್ಲಿ ರಾಹುಲ್ ಗಾಂಧಿ ಭೇಟಿ ಬಗ್ಗೆ ಡಿಸಿಎಂ ಪ್ರತಿಕ್ರಿಯೆ

  • ಆತ್ಮಹತ್ಯೆಗೆ ಶರಣಾದ ತಾಯಿ-ಮಗುವಿನ ಶವ ಸ್ಮಶಾನದಿಂದಲೇ ಕಳ್ಳತನ!

    ಆತ್ಮಹತ್ಯೆಗೆ ಶರಣಾದ ತಾಯಿ-ಮಗುವಿನ ಶವ ಸ್ಮಶಾನದಿಂದಲೇ ಕಳ್ಳತನ!

    ಕೋಲಾರ: ವಾಮಾಚಾರಕ್ಕಾಗಿ ಮೃತದೇಹವನ್ನು ಸ್ಮಶಾನದಿಂದ ಹೊರತೆಗೆದು ಕೂದಲು ಹಾಗೂ ಬಟ್ಟೆಯನ್ನು ತೆಗೆದುಕೊಂಡಿರುವ ಆರೋಪ ಕೋಲಾರದಲ್ಲಿ (Kolar) ಕೇಳಿ ಬಂದಿದೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೆಬ್ಬಟ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ. ಕಳೆದ 20 ದಿನಗಳ ಹಿಂದೆ ಮೂರುವರೆ ವರ್ಷದ ಮಗುವಿನೊಂದಿಗೆ ಮಹಿಳೆ ಹಮಿದ ಆತ್ಮಹತ್ಯೆಗೆ ಶರಣಾಗಿದ್ದಳು. ನಂತರ ಇಬ್ಬರ ಶವವನ್ನು ಹೆಬ್ಬಟ ಕ್ರಾಸ್‌ನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ನವೆಂಬರ್ 19 ರಂದು ಶವಗಳನ್ನು ಹೊರತೆಗೆದು ಕೂದಲು ಹಾಗೂ ಮಗು ಧರಿಸಿದ್ದ ಬಟ್ಟೆ ತೆಗೆದುಕೊಂಡಿದ್ದಾರೆ ಎಂದು ಮೃತ ಹಮಿದ ಪೋಷಕರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.

    ಹಮಿದ ಪತಿ ಶೊಯಬ್ ಸೂಚನೆಯಂತೆ ಮಗುವಿನ ಶವ ಹೊರತೆಗೆದು ಕೃತ್ಯವೆಸಗಿರುವುದಾಗಿ ಆರೋಪಿಸಲಾಗಿದೆ. ತಾಯಿ ಹಾಗೂ ಮಗಳ ಶವವನ್ನು ಸ್ಮಶಾನಕ್ಕೆ ತೆರಳಿ ಹೊರತೆಗೆದಿದ್ದಾರೆಂದು ಶ್ರೀರಾಮ್ ಹಾಗೂ ನಾರಾಯಣಸ್ವಾಮಿ ಎನ್ನುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ನವೆಂಬರ್ 19 ರಂದು ಬೆಳ್ಳಂಬೆಳಗ್ಗೆ ಇಬ್ಬರು ಸ್ಮಶಾನಕ್ಕೆ ತೆರಳಿ, ತಡವಾಗಿ ವಾಪಸ್ ಆಗಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ವೀಡಿಯೋ ಆಧರಿಸಿ ವಾಮಾಚಾರ ಮಾಡಲೆಂದು ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ. ಇದನ್ನೂ ಓದಿ: ಧರೆಗುರುಳಿದ್ದ 2,000 ವರ್ಷದ ಹುಣಸೆ ಮರ – ಚಿಕಿತ್ಸೆ ಬಳಿಕ ಮರುಜೀವ

    ಪತಿ ಶೊಯಬ್ ನೀಡುತ್ತಿದ್ದ ವರದಕ್ಷಿಣೆ ಕಿರುಕುಳ ತಾಳಲಾರದೆ ತಾಯಿ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವುದೆಂದು ಪೋಷಕರು ಆರೋಪಿಸಿದ್ದರು. ಅದರಂತೆ ಆತ್ಮಹತ್ಯೆ ಬಳಿಕವೂ ಪತಿ ಹೀಗೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಅಂತ್ಯಸಂಸ್ಕಾರದ ವೇಳೆ ಶವಗಳಿಗೆ ಹಾಕಿದ್ದ ಬಟ್ಟೆಗಳು ಸಮಾಧಿಯ ಪಕ್ಕದಲ್ಲೇ ಪತ್ತೆಯಾಗಿದೆ. ಇಬ್ಬರ ಶವಗಳು ಇದೆಯೋ, ಇಲ್ಲವೋ ಎಂಬುದು ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಗೂಡ್ಸ್ ರೈಲು ಡಿಕ್ಕಿ ಹೊಡೆದು 3 ಆನೆಗಳ ದುರ್ಮರಣ

  • ಸಮಾಧಿ ಪಕ್ಕ ಮನೆಯ ಮಾಡಿ, ದೆವ್ವಕ್ಕೆ ಹೆದರಿದ ನಟಿ ನರ್ಗೀಸ್

    ಸಮಾಧಿ ಪಕ್ಕ ಮನೆಯ ಮಾಡಿ, ದೆವ್ವಕ್ಕೆ ಹೆದರಿದ ನಟಿ ನರ್ಗೀಸ್

    ಬಾಲಿವುಡ್ (Bollywood)ನ ಖ್ಯಾತ ತಾರೆ ನರ್ಗೀಸ್ ಫಾಖ್ರಿ (Nargis Fakhri) ತಮ್ಮ ಜೀವನದಲ್ಲಿ ನಡೆದ ಭಯಂಕರ ಘಟನೆಯನ್ನು ಹಂಚಿಕೊಂಡಿದ್ದಾರೆ. ಸದ್ಯ ಅವರ ನಟನೆಯ ಟಟ್ಲುಬಾಜ್ ಎಂಬ ಹಾರರ್ ಸರಣಿಯು ಬಿಡುಗಡೆ ಆಗುತ್ತಿದ್ದು, ಈ ಸಂದರ್ಭದಲ್ಲಿ ಅವರು ತಮ್ಮ ಜೀವನದಲ್ಲಿ ನಡೆದ ಹಾರರ್ ಘಟನೆಯನ್ನು ಹೇಳಿಕೊಂಡಿದ್ದಾರೆ.

    ಅಮೆರಿಕಾ ಮೂಲದ ನರ್ಗೀಸ್ ಬಾಲಿವುಡ್ ಅಂಗಳಕ್ಕೆ ಬಂದಿದ್ದು ರಾಕ್ ಸ್ಟರ್ ಸಿನಿಮಾ ಮೂಲಕ. ಈ ವೇಳೆಯಲ್ಲಿ ಮುಂಬೈಗೆ (Mumbai) ಬಂದಾಗ ಅವರ ಸ್ಮಶಾನದ ಹತ್ತಿರವೇ ಇದ್ದಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಿದ್ದರಂತೆ. ಈ ಸಮಯದಲ್ಲಿ ಬೆಳಗಿನ ಜಾವ ಸರಿಯಾಗಿ ಮೂರು ಗಂಟೆಯ ಹೊತ್ತಿಗೆ ಎಚ್ಚರವಾಗುತ್ತಿತ್ತಂತೆ. ಹಾಗೂ ಕೆಟ್ಟ ಕನಸಿನೊಂದಿಗೆ ಅವರು ಕಣ್ಣು ತೆರೆಯುತ್ತಿದ್ದರಂತೆ. ಇದನ್ನೂ ಓದಿ:ರಿಸೆಪ್ಷನ್ ಸಂಭ್ರಮದಲ್ಲಿ ‘ಕಾಮಿಡಿ ಕಿಲಾಡಿಗಳು’ ಸಂಜು ಬಸಯ್ಯ- ಪಲ್ಲವಿ ಜೋಡಿ

    ಒಂದು ದಿನ ಆಳೆತ್ತರದ ವ್ಯಕ್ತಿಯೊಬ್ಬ ನರ್ಗೀಸ್ ನನ್ನು ಎಳೆದುಕೊಂಡು ಸ್ಮಶಾನಕ್ಕೆ (Graveyard)ಹೋಗಿ ಬಿಟ್ಟನಂತೆ. ಅಲ್ಲಿದ್ದ ಸಮಾಧಿಯನ್ನು ತೆರೆದು ಮಾಂಸ, ಎಲುಬು ತಿನ್ನುತ್ತಿದ್ದನಂತೆ. ತನಗೂ ತಿನ್ನಲು ಹೇಳುತ್ತಿದ್ದನಂತೆ. ಇಂಥದ್ದೊಂದು ಕನಸು ಬಿದ್ದ ತಕ್ಷಣವೇ ಅವರು ಮನೆಯನ್ನೇ ಖಾಲಿ ಮಾಡಿಬಿಟ್ಟರಂತೆ.

     

    ಸದ್ಯ ಅವರು ಹಾರರ್ ವೆಬ್ ಸರಣಿಯು ಬಿಡುಗಡೆಗೆ ಸಿದ್ಧವಾಗಿದೆ. ನರ್ಗೀಸ್ ಆ ಸೀರಿಸ್ ನ ಪ್ರಚಾರದಲ್ಲಿ ತೊಡಗಿದ್ದಾರೆ. ಜೊತೆಗೆ ಪವನ್ ಕಲ್ಯಾಣ್ ನಟನೆಯ ಸಿನಿಮಾದಲ್ಲಿ ಇವರು ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಳೆಗಾಗಿ ವಿಚಿತ್ರವಾದ ಆಚರಣೆ- ಸ್ಮಶಾನದ ಗೋರಿಗಳಿಗೆ ನೀರುಣಿಸಿದ ಗ್ರಾಮಸ್ಥರು

    ಮಳೆಗಾಗಿ ವಿಚಿತ್ರವಾದ ಆಚರಣೆ- ಸ್ಮಶಾನದ ಗೋರಿಗಳಿಗೆ ನೀರುಣಿಸಿದ ಗ್ರಾಮಸ್ಥರು

    ವಿಜಯಪುರ: ಈ ಬಾರಿ ರಾಜ್ಯದೆಲ್ಲೆಡೆ ಮುಂಗಾರು ಮಳೆ (Monsoon Rain) ಕೈ ಕೊಟ್ಟಿದೆ. ಅದರಂತೆ ಬಿಸಿಲನಾಡು ವಿಜಯಪುರ (Vijayapura) ಜಿಲ್ಲೆಯಲ್ಲಿ ಒಂದು ಮಳೆ (Rain) ಆಗದೆ ರೈತರು ಕಂಗಾಲಾಗಿದ್ದಾರೆ. ಅದಕ್ಕೆ ಎಲ್ಲೂ ಕಂಡರಿಯದ ವಿಚಿತ್ರವಾದ ಪ್ರಾರ್ಥನೆ ಮಾಡಿದ್ದಾರೆ.

    ಹೌದು. ಮುಂಗಾರು ಮಳೆ ಇಲ್ಲದೆ ಬಿಸಿಲನಾಡು ವಿಜಯಪುರ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ. ಭೂಮಿಯಲ್ಲಿ ಬಿತ್ತಿದ ರೈತರು ಮತ್ತು ಬಿತ್ತದೆ ಇರುವವರು ಪ್ರತಿದಿನ ಮುಗಿಲಿನತ್ತ ಮುಖಮಾಡಿ ಕುಳಿತಿದ್ದಾರೆ. ಕಾರಣ ಉತ್ತಮ ಮಳೆಗಾಗಿ ಗೋರಿ (Grave) ಗಳಲ್ಲಿ ನೀರನ್ನು ಗ್ರಾಮಸ್ಥರು ಹಾಕಿದ್ದಾರೆ. ಇದನ್ನೂ ಓದಿ: ವಿದೇಶ ಪ್ರವಾಸದಿಂದ ವಾಪಸ್ಸಾಗ್ತಿದ್ದಂತೆ ಮೋದಿ ಮಹತ್ವದ ಸಭೆ

    ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿರುವ ಸ್ಮಶಾನದಲ್ಲಿರುವ ಗೋರಿಗಳಿಗೆ ಗ್ರಾಮಸ್ಥರು ನೀರಿನ ಟ್ಯಾಂಕರ್ ಸಮೇತ ತೆರಳಿದ್ದಾರೆ. ಟ್ಯಾಂಕರ್ ನಿಂದ ಗೋರಿಗಳನ್ನ ಅಗಿದು ಶವಗಳ ಬಾಯಿಗೆ ನೀರು ಹಾಕಿದ್ದಾರೆ. ಅಲ್ಲದೆ ವಾಗೀಶ ಹಿರೇಮಠ ಎಂಬವರು ಗೋರಿ ಮೇಲೆ ಕುಳಿತು ಕೈಯಲ್ಲಿ ಜಪ ಮಣಿ ಹಿಡಿದು ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.

    ಸಾಮಾನ್ಯವಾಗಿ ಮಳೆಗಾಗಿ ಕಪ್ಪೆ ಮದುವೆ (Frog wedding), ಕತ್ತೆ ಮದುವೆ (Donkey Wedding) ಸೇರಿದಂತೆ ಅನೇಕ ರೀತಿಯಲ್ಲಿ ನಾನಾ ಪ್ರಾರ್ಥನೆ, ಆಚರಣೆಗಳು ನಡೆಯತ್ತವೆ. ಆದರೆ ಇದೇ ಮೊದಲ ಬಾರಿಗೆ ಇಂತಹ ವಿಚಿತ್ರ ಆಚರಣೆ ಬೆಳಕಿಗೆ ಬಂದಿದೆ. ಈ ರೀತಿ ಬರಗಾಲ ಬಿದ್ದಾಗಲೆಲ್ಲ ಗ್ರಾಮದ ಹಿರಿಯರು ಹಿಂದೆ ಕೂಡ ಮಾಡ್ತಿದ್ದರಂತೆ. ಆಗೆಲ್ಲ ಉತ್ತಮ ಮಳೆ ಆಗಿತ್ತಂತೆ. ಅದೇ ನಂಬಿಕೆಯಿಂದ ಈಗ ಗ್ರಾಮಸ್ಥರು ಈ ವಿಚಿತ್ರ ಆಚರಣೆ ಮಾಡಿದ್ದಾರೆ.

  • ರಾತ್ರಿ ಮಲಗಲು ಜಾಗ ಸಿಗದೆ ಸ್ಮಶಾನದಲ್ಲೇ ಟೆಂಟ್ ಹಾಕಿದ ವಿದೇಶಿಗರು – ಹೌಹಾರಿದ ಜನ

    ರಾತ್ರಿ ಮಲಗಲು ಜಾಗ ಸಿಗದೆ ಸ್ಮಶಾನದಲ್ಲೇ ಟೆಂಟ್ ಹಾಕಿದ ವಿದೇಶಿಗರು – ಹೌಹಾರಿದ ಜನ

    ಬೆಳಗಾವಿ: ವಿದೇಶದಿಂದ ಬಂದು ದೇಶ ಸುತ್ತಿದ ವಿದೇಶಿಗರು (Foreigners) ಬೇರೆಲ್ಲೂ ಜಾಗ ಸಿಗದೆ ಸ್ಮಶಾನದಲ್ಲಿ (Cemetery) ರೆಸ್ಟ್ ಮಾಡಿರುವ ಘಟನೆ ಜಿಲ್ಲೆಯ ಖಾನಾಪುರ (Khanapur) ತಾಲೂಕಿನ ರುಮೇವಾಡಿ ಗ್ರಾಮದಲ್ಲಿ ನಡೆದಿದೆ.

    ಸ್ಮಶಾನ ಎಂದರೆ ದೂರ ಸರಿಯುವ ಜನರೇ ಹೆಚ್ಚು. ಇವರ ಮಧ್ಯೆ ಸ್ಮಶಾನದಲ್ಲಿಯೇ ವಿದೇಶಿಗರು ವಾಸ್ತವ್ಯ ಹೂಡಿದ್ದಾರೆ. ಬೆಳ್ಳಂಬೆಳಗ್ಗೆ ಸ್ಮಾಶಾನದಲ್ಲಿ ಗಾಢ ನಿದ್ದೆಗೆ ಜಾರಿದ್ದ ವಿದೇಶಿಗರನ್ನು ಕಂಡು ಖಾನಾಪುರದ ಜನರು ಹೌಹಾರಿದ್ದಾರೆ. ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ತವರು ಜಿಲ್ಲೆಯ 20 ಗ್ರಾಮಗಳಲ್ಲಿ ಸುಸಜ್ಜಿತ ರಸ್ತೆಗಳೇ ಇಲ್ಲ!

    ಎರಡು ಬುಲೆಟ್ ಬೈಕ್ ಮೇಲೆ ರೈಡ್‌ಗೆ ಬಂದಿದ್ದ ವಿದೇಶಿಗರು ರಾತ್ರಿ ತಂಗಲು ಎಲ್ಲೂ ಜಾಗ ಸಿಗದ ಹಿನ್ನೆಲೆ ಸ್ಮಶಾನದಲ್ಲಿ ವಾಸ್ತವ್ಯ ಹೂಡಿದ್ದಾರೆ. ಜನ ಸೇರುತ್ತಿದ್ದಂತೆ ಎಚ್ಚರಗೊಂಡ ಅವರು ಯಾರೊಂದಿಗೂ ಮಾತನಾಡದೆ ಬೈಕ್ ಹತ್ತಿ ಹೊರಟು ಹೋಗಿದ್ದಾರೆ. ಇದನ್ನೂ ಓದಿ: ಫ್ರೀ ಬಸ್ ಘೋಷಣೆ ಬಳಿಕ ಮೊದಲ ವೀಕೆಂಡ್ – ಸರ್ಕಾರಿ ಬಸ್‌ಗಳು ಫುಲ್ ರಶ್