Tag: ಸ್ಫರ್ಧೆ

  • ಸ್ಫರ್ಧೆಯಲ್ಲಿ ಭಾಗವಹಿಸಿದ ವಿಕಲಚೇತನ ವ್ಯಕ್ತಿಯ ಡ್ಯಾನ್ಸ್ ವಿಡಿಯೋ ವೈರಲ್!

    ಸ್ಫರ್ಧೆಯಲ್ಲಿ ಭಾಗವಹಿಸಿದ ವಿಕಲಚೇತನ ವ್ಯಕ್ತಿಯ ಡ್ಯಾನ್ಸ್ ವಿಡಿಯೋ ವೈರಲ್!

    ಪುಣೆ: ಒಂದು ಕಾಲನ್ನು ಹೊಂದಿರುವ ವಿಕಲ ಚೇತನ ವ್ಯಕ್ತಿಯೊಬ್ಬರು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ನಂತರ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಭಾನುವಾರ ಪುಣೆಯಲ್ಲಿ ಆಫ್ ಮ್ಯಾರಥಾನ್ ಅನ್ನು ಆಯೋಜಿಸಲಾಗಿತ್ತು. ಅದರಲ್ಲಿ ವಿಕಲಚೇತನ ಜಾವೇದ್ ರಂಜಾನ್ ಚೌಧರಿ ಪಾಲ್ಗೊಂಡು ನಂತರ ಸಖತ್ ಸ್ಟೆಪ್ ಹಾಕಿದ್ದಾರೆ.

    ಮೂಲತಃ ಮಹಾರಾಷ್ಟ್ರದ ಬುಲ್‍ಧನ್ ಜಿಲ್ಲೆಯ ಲೋನಾರ್ ನವರಾದ ಜಾವೇದ್ ವೀಲ್‍ಚೇರ್ ಬಾಸ್ಕೆಟ್‍ಬಾಲ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜನರು ನನಗೆ ಮಾಡಲು ಸಾಧ್ಯವಿಲ್ಲ ಎಂದಿದ್ದನ್ನು ನಾನು ಮಾಡಿ ತೋರಿಸಿದ್ದೇನೆ. ಬೈಕ್ ಸಾಹಸಗಳನ್ನು ಸಹ ಮಾಡುತ್ತೇನೆ ಎಂದು ಜಾವೇದ್ ಸಂತಸ ವ್ಯಕ್ತಪಡಿಸಿದ್ದಾರೆ.

    2015 ರಲ್ಲಿ ಬೈಕ್ ಅಪಘಾತದಲ್ಲಿ ನಾನು ಒಂದು ಕಾಲನ್ನು ಕಳೆದುಕೊಂಡಿದ್ದೇನೆ. ಬಾಸ್ಕೆಟ್ ಬಾಲ್, ಸ್ವಿಮ್ಮಿಂಗ್ ಹೊರತುಪಡಿಸಿ, ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ನನ್ನ ಕುಟುಂಬದಲ್ಲಿ ಯಾರೂ ವಿದ್ಯಾವಂತರಾಗಿಲ್ಲ, ನಾನೇ ಕುಟುಂಬಕ್ಕೆ ಮೊದಲ ಪದವೀಧರರಾಗಿದ್ದೇನೆ ಎಂದು ಜಾವೇದ್ ಹೇಳಿದ್ದಾರೆ.

    ಈ ಆಫ್ ಮ್ಯಾರಥಾನ್ ನಲ್ಲಿ 21 ಕಿ.ಮೀ, 10 ಕಿ.ಮೀ ಮತ್ತು 6 ಕಿ.ಮೀ. ಎಂದು ಮೂರು ವಿಭಿನ್ನ ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಸುಮಾರು 2500 ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜಾವೇದ್‍ಗೂ ಸೇರಿದಂತೆ ಪ್ರತಿ ಸ್ಪರ್ಧಿಗಳಿಗೂ ಪದಕಗಳನ್ನು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ವಚ್ಛ ಭಾರತ್ ಪ್ರಮಾಣಪತ್ರವನ್ನು ಈ ವೇಳೆ ನೀಡಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 123 ಕಿ.ಮೀ ಓಡಿ ವಿಶ್ವ ದಾಖಲೆ ಬರೆದ 85 ರ ವೃದ್ಧ!- ವಿಡಿಯೋ ವೈರಲ್

    123 ಕಿ.ಮೀ ಓಡಿ ವಿಶ್ವ ದಾಖಲೆ ಬರೆದ 85 ರ ವೃದ್ಧ!- ವಿಡಿಯೋ ವೈರಲ್

    ಲಂಡನ್: 85 ವರ್ಷದ ಹರೆಯದ ವೃದ್ಧರೊಬ್ಬರು 24 ಗಂಟೆಯಲ್ಲಿ 123 ಕಿ.ಮಿ(77 ಮೈಲಿ) ಓಡಿ ವಿಶ್ವ ದಾಖಲೆ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ದಕ್ಷಿಣ ಲಂಡನ್‍ನ ಹಿಂಕ್ಲಿ ರನ್ನಿಂಗ್ ಕ್ಲಬ್‍ನ ಜಿಯೋಫ್ ಒಲಿವರ್ ಎಂಬವರೇ ಈ ಸಾಧಕ. ಹರೆಯದವರಿಗೆ ಏರ್ಪಡಿಸಲಾಗಿದ್ದ 24 ಗಂಟೆಗಳ ಓಟದ ಸ್ಫರ್ಧೆಯಲ್ಲಿ ಬರೋಬ್ಬರಿ 77 ಮೈಲಿಗಳಷ್ಟು ದೂರವನ್ನು ಓಡುವ ಮೂಲಕ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

    ಈ ವಿಡಿಯೋವನ್ನುಪತ್ರಕರ್ತೆ ಸೋಫಿ ರಾವರ್ತ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇದು ಜೆಫ್ ಆಲಿವರ್ ಎಂಬವರಿಗೆ 85 ವರ್ಷ. ಅವರು 24 ಗಂಟೆಗಳ ಓಟದ ಸ್ಫರ್ಧೆಯಲ್ಲಿ ಸುಮಾರು 70 ಮೈಲಿಗಿಂತ ಹೆಚ್ಚು ಓಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಒಲಿವರ್ ಈ ಮೊದಲು 50ನೇ ದಶಕದಲ್ಲಿ 65 ವರ್ಷ ವಯಸ್ಸಿದ್ದಾಗ ತನ್ನ ಮೊದಲ ವಿಶ್ವ ದಾಖಲೆಯನ್ನು ಸೃಷ್ಟಿಸಿದರು. ದಕ್ಷಿಣ ಲಂಡನ್ ನಲ್ಲಿ 2009 ರಲ್ಲಿ ನಡೆದ ಒಂದೇ ಕ್ರೀಡಾಕೂಟದಲ್ಲಿ ನಾಲ್ಕು ರಾಷ್ಟ್ರೀಯ ಮತ್ತು ಎರಡು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಜ್ವಲ್ ರೇವಣ್ಣ ಸ್ಪರ್ಧೆ: ಪರೋಕ್ಷವಾಗಿ ಗುಟ್ಟು ಬಿಚ್ಚಿಟ್ಟ ಸಚಿವ ಪುಟ್ಟರಾಜು

    ಪ್ರಜ್ವಲ್ ರೇವಣ್ಣ ಸ್ಪರ್ಧೆ: ಪರೋಕ್ಷವಾಗಿ ಗುಟ್ಟು ಬಿಚ್ಚಿಟ್ಟ ಸಚಿವ ಪುಟ್ಟರಾಜು

    ಮಂಡ್ಯ: 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಕಣಕ್ಕೆ ಇಳಿಯುತ್ತಾರಾ ಇಲ್ಲವೋ ಎನ್ನುವುದರ ಬಗ್ಗೆ ಚರ್ಚೆ ಆರಂಭವಾಗಿದ್ದು, ಈಗ ಮಂಡ್ಯದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವ ಬಗ್ಗೆ ಉಸ್ತುವಾರಿ ಸಚಿವ ಪುಟ್ಟರಾಜು ಸುಳಿವು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ. ಇಲ್ಲವಾದರೆ ಮತ್ತೆ ನಾನೇ ಮಂಡ್ಯ ಲೋಕಸಭೆಗೆ ಸ್ಫರ್ಧಿಸಬಹುದು ಅಥವಾ ಪ್ರಜ್ವಲ್ ರೇವಣ್ಣ ನಿಲ್ಲುತ್ತಾರೋ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ ಎಂದರು.

    ದೇವೇಗೌಡರು ಮತ್ತು ಪ್ರಜ್ವಲ್ ರೇವಣ್ಣ ಇಬ್ಬರ ಹೆಸರನ್ನು ಹೇಳುವ ಮೂಲಕ ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಗ್ಗೆ ಪುಟ್ಟರಾಜು ಗುಟ್ಟು ಬಿಚ್ಚಿಟ್ಟರು. ಅಂಬರೀಷ್ ನಿಲ್ಲತ್ತಾರೆ ಅಂದರೂ ಅವಕಾಶ ನೀಡುತ್ತೇವೆ. ಬಹಳ ಜನ ಅಭ್ಯರ್ಥಿಗಳು ಪಕ್ಷದಲ್ಲಿದ್ದಾರೆ ಅಂತಿಮವಾಗಿ ಯಾರು ಅಭ್ಯರ್ಥಿ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅಲ್ಪಾವಧಿಯಲ್ಲೇ ಅಭಿವೃದ್ಧಿ ಕೆಲ್ಸ ಮಾಡಿದ್ದ ನೀವೇ ಮಂಡ್ಯದಿಂದ ಸ್ಫರ್ಧಿಸಿ- ರಮ್ಯಾ ಅಭಿಮಾನಿಗಳ ಒತ್ತಾಯ

    ಅಲ್ಪಾವಧಿಯಲ್ಲೇ ಅಭಿವೃದ್ಧಿ ಕೆಲ್ಸ ಮಾಡಿದ್ದ ನೀವೇ ಮಂಡ್ಯದಿಂದ ಸ್ಫರ್ಧಿಸಿ- ರಮ್ಯಾ ಅಭಿಮಾನಿಗಳ ಒತ್ತಾಯ

    ಮಂಡ್ಯ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಂಸದೆ ರಮ್ಯಾ ಮಂಡ್ಯದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಸುದ್ದಿಯ ಬೆನ್ನಲ್ಲೇ, ರಮ್ಯಾ ಅವರು ರಾಜ್ಯ ರಾಜಕಾರಣಕ್ಕೆ ಬರಬೇಕು ಅಂತಾ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ರಮ್ಯಾ ಅಭಿಮಾನಿಗಳು ಮನವಿ ಮಾಡಿದ್ದಾರೆ.

    ಸಂಸದೆಯಾಗಿದ್ದ ಅಲ್ಪಾವಧಿಯಲ್ಲೇ ಮಂಡ್ಯ ಜಿಲ್ಲೆಯಲ್ಲಿ ಹಲವು ಯೋಜನೆಗಳನ್ನು ತಂದು ಅಭಿವೃದ್ಧಿ ಕೆಲಸ ಮಾಡಿದ್ದೀರಿ. ಆದುದರಿಂದ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮತ್ತೆ ನೀವು ರಾಜ್ಯ ರಾಜಕಾರಣಕ್ಕೆ ಬರಬೇಕು. ಮಂಡ್ಯ ಜಿಲ್ಲೆಯ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸ್ಬೇಕು ಅಂತಾ ರಮ್ಯಾ ಅಭಿಮಾನಿಗಳು ಮನವಿ ಮಾಡಿದ್ದಾರೆ.

    ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿರೋ ನಮ್ಮ ನೆಚ್ಚಿನ ನಾಯಕಿ ರಮ್ಯಾ ಅವರು ರಾಜ್ಯ ರಾಜಕಾರಣಕ್ಕೆ ಬರಬೇಕು. ಮಂಡ್ಯ ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಿಂದ ಸ್ಫರ್ಧಿಸಿ ಜಿಲ್ಲೆಯ ಜನರ ಕನಸು ನನಸು ಮಾಡಬೇಕು ಅಂತ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ನಿರ್ದೇಶಕ ಶಶಿಕುಮಾರ್ ಮನವಿ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಲೋಕಸಭೆ ಉಪಚುನಾವಣೆ ಮೇಲೆ ಕಣ್ಣು- ರಮ್ಯಾ ಶೀಘ್ರವೇ ಮಂಡ್ಯಕ್ಕೆ ವಾಪಸ್ ಖಚಿತ

    ಇದನ್ನೂ ಓದಿ: ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸ್ತಾರಾ ರಮ್ಯಾ?