Tag: ಸ್ಪೋಟ್ಸ್

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾರತದ ಫುಟ್ ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾರತದ ಫುಟ್ ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ

    ಕೋಲ್ಕತ್ತಾ: ಭಾರತದ ಫುಟ್ ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಬಹುಕಾಲದ ಸ್ನೇಹಿತೆ ಸೋನಮ್ ಭಟ್ಟಚಾರ್ಯ ಜೊತೆ ಸೋಮವಾರ ಕೋಲ್ಕತ್ತಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಮಿಸಿ ನವದಂಪತಿಗೆ ಮೊದಲು ಶುಭಹಾರೈಸಿದರು. ರಾಜಕೀಯ, ಸಿನಿಮಾ, ಫುಟ್ ಬಾಲ್ ಹಾಗೂ ಇತರೆ ಕ್ರೀಡಾ ಸೆಲೆಬ್ರಿಟಿಗಳು ಆಗಮಿಸಿದ್ದರು.

    ನೇಪಾಳದ ಸಾಂಸ್ಕೃತಿಕ ಉಡುಗೆಯನ್ನು ಧರಿಸಿ ಅದ್ದಕ್ಕೆ ಪೇಟಾ ಹಾಕಿ ಕುದುರೆ ಮೇಲೆ ಸವಾರಿ ಮಾಡಿಕೊಂಡು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ನಂತರ ಬಂಗಾಳದ ಸಾಂಸ್ಕೃತಿಕ ಉಡುಗೆಯನ್ನು ಧರಿಸಿದ್ದರು. ನವೆಂಬರ್ ತಿಂಗಳಲ್ಲಿ ಈ ಜೋಡಿ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಂಡಿತ್ತು.

    ಸದ್ಯ ಚೆಟ್ರಿ ಈಗ ಇಂಡಿಯನ್ ಸೂಪರ್ ಲೀಗ್ ಅಲ್ಲಿ ಬೆಂಗಳೂರು ಎಫ್‍ಸಿ ತಂಡದ ನಾಯಕರಾಗಿದ್ದಾರೆ. ಮದುವೆ ನಂತರ ಡಿಸೆಂಬರ್ 8ರಂದು ನಾರ್ಥ್ ಈಸ್ಟ್ ಯುನೈಟೆಡ್ ತಂಡದ ಜೊತೆ ಗುವಾಹಟಿಯಲ್ಲಿ ಪಂದ್ಯ ನಡೆಯಲಿದ್ದು, ಚೆಟ್ರಿ ಯಾವುದೇ ರಜೆಗಳನ್ನು ತೆಗೆದುಕೊಳ್ಳುತ್ತಿಲ್ಲ. ನವೆಂಬರ್ 19ರಂದು ಮುಂಬೈ ಸಿಟಿ ಜೊತೆ ಬೆಂಗಳೂರು 2-0 ಅಂತರದಲ್ಲಿ ಜಯ ಸಾಧಿಸಿತ್ತು. ಆ ನಂತರದ ಪಂದ್ಯದಲ್ಲಿ ಎಫ್‍ಸಿ ಗೋವಾ ವಿರುದ್ಧ ಸೋಲು ಕಂಡಿತ್ತು.

  • ವಿಶ್ವಸುಂದರಿ ಮಾನುಷಿಯ ಖಡಕ್ ಪ್ರಶ್ನೆಗೆ ಕೊಹ್ಲಿ ಮನದಾಳದ ಉತ್ತರ ನೀಡಿದ್ದು ಹೀಗೆ

    ವಿಶ್ವಸುಂದರಿ ಮಾನುಷಿಯ ಖಡಕ್ ಪ್ರಶ್ನೆಗೆ ಕೊಹ್ಲಿ ಮನದಾಳದ ಉತ್ತರ ನೀಡಿದ್ದು ಹೀಗೆ

    ನವದೆಹಲಿ: ಚೀನಾದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ 17 ವರ್ಷಗಳ ನಂತರ ಭಾರತಕ್ಕೆ ಪ್ರಶಸ್ತಿ ಜಯಿಸಿಕೊಟ್ಟ ಮಾನುಷಿ ಚಿಲ್ಲರ್ ಮತ್ತು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದೆಹಲಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

    ಆ ಕಾರ್ಯಕ್ರಮದಲ್ಲಿ ಮಾನುಷಿ ಚಿಲ್ಲರ್ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿಗೆ, ಇಂದು ನೀವು ವಿಶ್ವದ ಅತ್ಯುತ್ತಮ ಬ್ಯಾಟ್ಸ್ ಮನ್ ಆಗಿದ್ದೀರಿ. ನೀವು ಎಲ್ಲರಿಗೂ ಒಂದು ಸ್ಫೂರ್ತಿ ಆಗಿದ್ದೀರಿ ಹಾಗೂ ನಮ್ಮ ಸಮಾಜಕ್ಕಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ. ತುಂಬ ಜನರು ನಿಮ್ಮಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ. ಹೀಗಾಗಿ ಕ್ರಿಕೆಟ್ ಜಗತ್ತಿನ ಮಕ್ಕಳಿಗೆ ನೀವು ಇದನ್ನು ಹೇಗೆ ಹಿಂತಿರುಗಿಸುತ್ತೀರಿ ಎಂದು ಪ್ರಶ್ನಿಸಿದರು.

    ನಾವು ಯಾವಾಗ ಏನು ಮಾಡುತ್ತೇವೆ ಎನ್ನುವುದನ್ನು ವ್ಯಕ್ತಪಡಿಸುವುದು ಮುಖ್ಯ. ನಾವು ಪ್ರಾಮಾಣಿಕವಾಗಿ ಆ ಕೆಲಸವನ್ನು ಮಾಡಬೇಕು. ಅಷ್ಟೇ ಅಲ್ಲದೇ ಮುಕ್ತ ಮನಸ್ಸಿನಿಂದ ಮಾಡಬೇಕು. ಇಲ್ಲದಿದ್ದರೆ ಜನರು ನಾವು ನಟಿಸುತ್ತಿದ್ದೇವೆ ಎಂದು ತಿಳಿದುಕೊಳ್ಳುತ್ತಾರೆ. ನಾನು ಬೇರೆಯವರ ರೀತಿ ಇರಲು ಯಾವತ್ತೂ ಪ್ರಯತ್ನಿಸಿಲ್ಲ. ನಾನು ಯಾವಾಗಲೂ ನಾನಾಗಿಯೇ ಇರಲು ಪ್ರಯತ್ನಿಸುತ್ತೇನೆ. ನಾನು ಇರುವ ರೀತಿ ಹಾಗೂ ನಾನು ತೊಡಗುವ ರೀತಿ ಜನರಿಗೆ ಇಷ್ಟವಾಗುವುದಿಲ್ಲ ಎನ್ನುವುದು ನನಗೆ ತಿಳಿದಿದೆ. ಆದರೆ ಈ ವಿಚಾರಗಳು ನನಗೆ ಎಂದಿಗೂ ತೊಂದರೆಯಾಗಿಲ್ಲ. ಯಾವಾಗ ನಾನು ಬದಲಾಗಬೇಕು ಎಂದು ಅನಿಸುತ್ತದೋ ಆಗ ನಾನು ಆ ಸಮಯದಲ್ಲಿ ಬದಲಾಗಿದ್ದೇನೆ ಎಂದು ವಿರಾಟ್ ಕೊಹ್ಲಿ ದೀರ್ಘ ಉತ್ತರವನ್ನು ನೀಡಿದ್ದಾರೆ.

    ನಾವು ಯಾವತ್ತೂ ನಮ್ಮ ಸ್ವಂತ ಅಸ್ತಿತ್ವವನ್ನು ಕಳೆದುಕೊಳ್ಳಬಾರದು. ಆಗ ನಾವು ಬೇರೆಯವರಿಗೆ ಸ್ಫೂರ್ತಿ ಆಗಲು ಸಾಧ್ಯವಿಲ್ಲ. ನಾವು ಯಾವತ್ತೂ ನಮ್ಮ ಗುರುತನ್ನು, ನಮ್ಮ ಪಾತ್ರವನ್ನು ಹಾಗೂ ವ್ಯಕ್ತಿತ್ವವನ್ನು ಕಳೆದುಕೊಳ್ಳಬಾರದು. ಯಾಕೆಂದರೆ ನೀವು ಬೇರೆಯವರ ರೀತಿ ಆಗಲೂ ಹೊರಟರೆ ನೀವು ಎಂದಿಗೂ ಯಶಸ್ಸು ಕಾಣುವುದಿಲ್ಲ ಹಾಗೂ ಬೇರೆಯವರಿಗೆ ಸ್ಫೂರ್ತಿ ಆಗಲು ಸಾಧ್ಯವಿಲ್ಲ ಎಂದು ಕೊಹ್ಲಿ ಮಾನುಷಿಗೆ ಉತ್ತರಿಸಿದ್ದಾರೆ.

  • ಧೋನಿ ಮಗಳೊಂದಿಗೆ ಕೊಹ್ಲಿಯ ಮುದ್ದು ಮುದ್ದು ಮಾತು-ವಿಡಿಯೋ ನೋಡಿ

    ಧೋನಿ ಮಗಳೊಂದಿಗೆ ಕೊಹ್ಲಿಯ ಮುದ್ದು ಮುದ್ದು ಮಾತು-ವಿಡಿಯೋ ನೋಡಿ

    ಮುಂಬೈ: ವಿರಾಟ್ ಕೊಹ್ಲಿ ಅತ್ಯುತ್ತಮ ಕ್ಯಾಪ್ಟನ್ ಎಂದು ಸರಣಿ ಗೆಲ್ಲುವ ಮೂಲಕ ಸಾಬೀತು ಮಾಡಿದ್ದಾರೆ. ಕೊಹ್ಲಿ ತಮ್ಮ ಆಕರ್ಷಕ ಬ್ಯಾಟಿಂಗ್ ಮತ್ತು ಲುಕ್ ನಿಂದ ಅನೇಕ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಕೊಹ್ಲಿ ಮಾತ್ರ ಧೋನಿ ಮಗಳು ಝಿವಾ ಅವರ ದೊಡ್ಡ ಫ್ಯಾನ್ ಆಗಿದ್ದಾರೆ.

    ಹೌದು. ಕೊಹ್ಲಿ ಬಿಡುವಿದ್ದ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಮಗಳು ಝಿವಾ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ. ಝಿವಾ ಜೊತೆ ಆಟವಾಡುತ್ತಾ, ಸೆಲ್ಫೀ ಮತ್ತು ವಿಡಿಯೋಗಳನ್ನು ತೆಗೆಸಿಕೊಳ್ಳುತ್ತಾರೆ. ಆ ಫೋಟೋ ಅಥವಾ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ, ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡುತ್ತಾರೆ.

    ಕೊಹ್ಲಿ ಇತ್ತೀಚಿಗೆ ಝಿವಾ ಜೊತೆ ಕಾಲ ಕಳೆದಿದ್ದು, ಮಗು ಜೊತೆ ಮುದ್ದಾಗಿ ಮಾತನಾಡಿದ ವಿಡಿಯೋವೊಂದನು ತಮ್ಮ ಇನ್ ಸ್ಟಾಗ್ರಾಂ ಹಾಗೂ ಟ್ವಿಟ್ಟರ್‍ನಲ್ಲಿ ಹಾಕಿದ್ದಾರೆ. ತುಂಬಾ ದಿನಗಳ ನಂತರ ಝಿವಾನನ್ನು ಭೇಟಿ ಮಾಡಿದ್ದೇನೆ ಎಂದು ಬರೆದು ತಮ್ಮ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ಟ್ಟೀಟ್‍ಗೆ 61,000 ಲೈಕ್, 11,000 ರೀ-ಟ್ವೀಟ್‍ಗಳು ಬಂದಿದ್ದೆ.