Tag: ಸ್ಪೈಸ್ ಜೆಟ್

  • ಶಿವಮೊಗ್ಗ–ಚೆನ್ನೈ ನಡುವೆ ವಿಮಾನಯಾನ ಶುರು

    ಶಿವಮೊಗ್ಗ–ಚೆನ್ನೈ ನಡುವೆ ವಿಮಾನಯಾನ ಶುರು

    ಶಿವಮೊಗ್ಗ: ಇಂದಿನಿಂದ ಶಿವಮೊಗ್ಗದಿಂದ ಚೆನ್ನೈ (Shivamogga-Chennai) ಮತ್ತು ಹೈದರಾಬಾದ್‌ಗೆ ಸ್ಪೈಸ್‌ ಜೆಟ್‌ ವಿಮಾನಯಾನ ಸೇವೆ ಆರಂಭವಾಗಿದೆ. ಚೆನ್ನೈನಿಂದ ಶಿವಮೊಗ್ಗಕ್ಕೆ ಆಗಮಿಸಿದ ಮೊದಲ ಸ್ಪೈಸ್‌ ಜೆಟ್‌ ವಿಮಾನಕ್ಕೆ ವಾಟರ್‌ ಸಲ್ಯೂಟ್‌ ನೀಡಲಾಯಿತು.

    ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ ಜೆಟ್‌ ವಿಮಾನದ ಶಿವಮೊಗ್ಗ ಮಾರ್ಗಕ್ಕೆ ಚಾಲನೆ ನೀಡಲಾಯಿತು. ಚೆನ್ನೈ–ಶಿವಮೊಗ್ಗ ಮಾರ್ಗದ ಮೊದಲ ಟಿಕೆಟ್‌ ಖರೀದಿಸಿದ ಪ್ರಯಾಣಿಕರಿಂದಲೇ ದೀಪ ಬೆಳಗಿಸಿ ಹೊಸ ಮಾರ್ಗಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು, ವಿಮಾನದ ಸಿಬ್ಬಂದಿ ಹಾಜರಿದ್ದರು. ಇದನ್ನೂ ಓದಿ: ಬಿಜೆಪಿಗೆ ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಡುವ ಒಪ್ಪಂದ ಆಗಿಲ್ಲ: ಹೆಚ್‌ಡಿಕೆ

    ಇತ್ತ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ ಜೆಟ್‌ ವಿಮಾನಯಾನ ಸೇವೆಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ಕೇಕ್‌ ಕತ್ತರಿಸಿ ಮಕ್ಕಳಿಗೆ ತಿನ್ನಿಸಿ ವಿಮಾನಯಾನ ಸೇವೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಶಿವಮೊಗ್ಗ ವಿಮಾನ ನಿಲ್ದಾಣದ ವ್ಯವಸ್ಥಾಪಕ ಸಿ.ಶಮಂತ್‌, ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

    ಚೆನ್ನೈನಿಂದ ಬೆಳಗ್ಗೆ 10:40ಕ್ಕೆ ಹೊರಡಬೇಕಿದ್ದ ವಿಮಾನ ಇಂದು ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆ ಬೆಳಗ್ಗೆ 11:03ಕ್ಕೆ ಹಾರಾಟ ಆರಂಭಿಸಿತು. ಮಧ್ಯಾಹ್ನ ಶಿವಮೊಗ್ಗಕ್ಕೆ ಬಂದಿಳಿಯಿತು. ಈ ಸಂದರ್ಭ ಸ್ಪೈಸ್‌ ಜೆಟ್‌ ವಿಮಾನಕ್ಕೆ ಎರಡು ಬದಿಯಿಂದ ನೀರು ಹಾಯಿಸಿ ವಾಟರ್‌ ಕೆನಾನ್‌ ಸ್ವಾಗತ ನೀಡಲಾಯಿತು. ಶಿವಮೊಗ್ಗಕ್ಕೆ ಬಂದಿಳಿದ ಪ್ರಯಾಣಿಕರಿಗೆ ಸ್ಪೈಸ್‌ ಜೆಟ್‌ ಸಂಸ್ಥೆ ವತಿಯಿಂದ ವಿಶೇಷ ಸ್ವಾಗತ ನೀಡಲಾಯಿತು. ಇದನ್ನೂ ಓದಿ: 3 ದಿನ ದಸರಾ ರಜೆ ಹಿನ್ನೆಲೆ ಮೆಜೆಸ್ಟಿಕ್‌ನಿಂದ 2000ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ

    ಹೈದರಾಬಾದ್‌ಗೆ ಪ್ರಯಾಣ, ಸಂಜೆ ಚೆನ್ನೈಗೆ
    ಸ್ಪೈಸ್‌ ಜೆಟ್‌ ವಿಮಾನವು ಸದ್ಯ ಹೈದರಾಬಾದ್‌ಗೆ ಪ್ರಯಾಣ ಮಾಡಿದೆ. ಸಂಜೆ ಹೈದರಾಬಾದ್‌ನಿಂದ ಹಿಂತಿರುಗಲಿದೆ. ಶಿವಮೊಗ್ಗದಿಂದ ಪುನಃ ಚೆನ್ನೈಗೆ ತೆರಳಲಿದೆ. ಸ್ಪೈಸ್‌ ಜೆಟ್‌ ವಿಮಾನವು ಬೆಳಗ್ಗೆ 10:40ಕ್ಕೆ ಚೆನ್ನೈನಿಂದ ಹೊರಟು, ಮಧ್ಯಾಹ್ನ 12:10ಕ್ಕೆ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 12:35ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2:05ಕ್ಕೆ ಹೈದರಾಬಾದ್‌ ತಲುಪಲಿದೆ. ಮಧ್ಯಾಹ್ನ 2:40ಕ್ಕೆ ಹೈದರಾಬಾದ್‌ನಿಂದ ಹೊರಟು ಸಂಜೆ 4 ಗಂಟೆಗೆ ಶಿವಮೊಗ್ಗ ತಲುಪಲಿದೆ. ಸಂಜೆ 4:25ಕ್ಕೆ ಶಿವಮೊಗ್ಗದಿಂದ ಹೊರಟು ಸಂಜೆ 5:55ಕ್ಕೆ ಚೆನ್ನೈ ತಲುಪಲಿದೆ.

  • ಸ್ಪೈಸ್‌ಜೆಟ್ ವಿಮಾನದಲ್ಲಿ ಬಾಂಬ್ ಭೀತಿ – ದೆಹಲಿ ವಿಮಾನ ನಿಲ್ದಾಣದಲ್ಲಿ ತೀವ್ರ ಶೋಧ

    ಸ್ಪೈಸ್‌ಜೆಟ್ ವಿಮಾನದಲ್ಲಿ ಬಾಂಬ್ ಭೀತಿ – ದೆಹಲಿ ವಿಮಾನ ನಿಲ್ದಾಣದಲ್ಲಿ ತೀವ್ರ ಶೋಧ

    ನವದೆಹಲಿ: ಪುಣೆಗೆ ಹೋಗಬೇಕಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ (Spice Jet Flight) ಬಾಂಬ್ (Bomb) ಇದೆ ಎಂಬ ದೂರವಾಣಿ ಕರೆ ಬಂದಿದ್ದು, ಈ ಹಿನ್ನೆಲೆ ದೆಹಲಿಯ ವಿಮಾನ ನಿಲ್ದಾಣದಲ್ಲಿ (Delhi Airport) ವಿಮಾನವನ್ನು ತೀವ್ರವಾಗಿ ಶೋಧ ನಡೆಸಲಾಗುತ್ತಿದೆ.

    ಗುರುವಾರ ಸಂಜೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (IGI) ವಿಮಾನ ನಿಲ್ದಾಣದಿಂದ ಪುಣೆಗೆ ಹೋಗಬೇಕಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಬಾಂಬ್ ಇದೆ ಎಂದು ದೂರವಾಣಿ ಕರೆ ಬಂದಿದೆ. ಈ ಹಿನ್ನೆಲೆ ವಿಮಾನದಲ್ಲಿ ತೀವ್ರವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

    ವಿಮಾನ ನಿಲ್ದಾಣದಿಂದ ಸಂಜೆ 6:30ರ ವೇಳೆಗೆ ಟೇಕ್ ಆಫ್ ಆಗಬೇಕಿತ್ತು. ಬಾಂಬ್ ಬೆದರಿಕೆ ಕುರಿತು ಕರೆ ಬಂದ ತಕ್ಷಣ ವಿಮಾನಯಾನ ಅಧಿಕಾರಿಗಳು ಬೋರ್ಡಿಂಗ್ ಅನ್ನು ನಿಲ್ಲಿಸಿದ್ದಾರೆ. ತಕ್ಷಣವೇ ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಿದ್ದಾರೆ. ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದು, ವಿಮಾನವನ್ನು ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಗೆ ಹಾರ ನೀಡಲು ಬಂದಿದ್ದು 10ರ ಬಾಲಕ – ಭದ್ರತೆಯಲ್ಲಿ ಲೋಪ ಆಗಿಲ್ಲ

    ಇಲ್ಲಿಯವರೆಗೆ ವಿಮಾನದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಆದರೂ ಬಾಂಬ್ ಕರೆ ಹಿನ್ನೆಲೆ ಅರೆಸೇನಾ ಪಡೆ ಸಿಐಎಸ್‌ಎಫ್ ಹಾಗೂ ದೆಹಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಬಾಂಬ್ ಇರುವ ಬಗ್ಗೆ ಕರೆ ಮಾಡಿ ತಿಳಿಸಿದವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಹಾಗೂ ಇದು ಹುಸಿ ಬಾಂಬ್ ಬೆದರಿಕೆಯೇ ಎಂಬುದನ್ನು ತಿಳಿಯಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಹೊಸ ಮೀಸಲಾತಿ ಸೂತ್ರಕ್ಕೆ ಬ್ರೇಕ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಏಕಾಏಕಿ ಸ್ಪೈಸ್‌ ಜೆಟ್‌ನ 80 ಪೈಲಟ್ ಮನೆಗೆ – ಕಾರಣವೇನು?

    ಏಕಾಏಕಿ ಸ್ಪೈಸ್‌ ಜೆಟ್‌ನ 80 ಪೈಲಟ್ ಮನೆಗೆ – ಕಾರಣವೇನು?

    ಮುಂಬೈ: ಸ್ಪೈಸ್ ಜೆಟ್ (SpiceJet) ಏರ್‌ಲೈನ್ (AirLine) ಇಂದು ಏಕಾ ಏಕಿ ತನ್ನ 80 ಪೈಲಟ್‌ಗಳನ್ನು ಯಾವುದೇ ವೇತನವಿಲ್ಲದೇ ಮೂರು ತಿಂಗಳ ಕಾಲ ದೀರ್ಘ ರಜೆಯಲ್ಲಿರುವಂತೆ (Leave Without Pay) ಸೂಚಿಸಿದೆ.

    ಸ್ಪೈಸ್‌ಜೆಟ್ ಹೆಚ್ಚಿನ ಸಂಖ್ಯೆಯ ಪೈಲಟ್‌ಗಳನ್ನು (Pilots) ಹೊಂದಿದ್ದು, ನಿರ್ವಹಣಾ ವೆಚ್ಚ ಸರಿದೂಗಿಸಲು ತಾತ್ಕಾಲಿಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುಗ್ರಾಮದಲ್ಲಿರುವ ಪ್ರಧಾನ ಕಚೇರಿಯ ವಿಮಾನಯಾನ (AirLine) ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ತಾಜ್ ಮಹಲ್ ನೋಡಲು ಬಂದಿದ್ದವಳ ಮೇಲೆ ಕೋತಿ ದಾಳಿ- ಗಳಗಳನೆ ಅತ್ತ ಸ್ಪೇನ್ ಸುಂದರಿ

    ಬೋಯಿಂಗ್-737 ವಿಭಾಗದ 40 ಪೈಲಟ್‌ಗಳು ಹಾಗೂ ಕ್ಯೂ-400 ವಿಭಾಗದ 40 ಪೈಲಟ್‌ಗಳು (Pilots) ಸೇರಿ ಒಟ್ಟು 80 ಪೈಲಟ್‌ಗಳನ್ನು ಧೀರ್ಘ ರಜೆ ಮೇಲೆ ಮನೆಗೆ ತೆರಳುವಂತೆ ಸೂಚಿಸಿದೆ. ಡಿಸೆಂಬರ್‌ನಲ್ಲಿ 7 ಹೊಸ ಬೋಯಿಂಗ್ 737 ಮ್ಯಾಕ್ಸ್ ಅನ್ನು ಸೇರಿಸಲು ಏರ್‌ಲೈನ್ ಮುಂದಾಗಿದ್ದು, ಹೊಸ ಮಾರ್ಗದ ಹಾರಾಟ ಶುರು ಮಾಡಿದರೆ ಈ ಪೈಲಟ್‌ಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: BJP ಸರ್ಕಾರದಿಂದ ಹಿಂದುತ್ವ ಅಜೆಂಡಾ ಪ್ರಚಾರ- ಮೆಹಬೂಬಾ ಮುಫ್ತಿ ಆಕ್ಷೇಪ

    2021ರ ಆರಂಭದಲ್ಲಿ ಸ್ಪೈಸ್ ಜೆಟ್ (Spice Jet) 95 ವಿಮಾನಗಳನ್ನು ಹೊಂದಿತ್ತು. ಆದರೆ ಈಗ 50 ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ವಿಮಾನಗಳನ್ನು ಲೀಸ್‌ಗೆ ನೀಡಿದೆ. ಇನ್ನೂ ಕೆಲವು ನಿರ್ವಹಣಾ ಸಮಸ್ಯೆಯಿಂದ ಹಾರಾಟ ನಡೆಸುತ್ತಿಲ್ಲ. ಜೊತೆಗೆ ಸಂಸ್ಥೆಯು ಆರ್ಥಿಕತೆಯ (Economy Problem) ಒತ್ತಡದಲ್ಲಿದೆ. ಹೆಚ್ಚಿನ ಪೈಲಟ್‌ಗಳನ್ನು ಇರಿಸಿಕೊಂಡು ಸಂಸ್ಥೆ ನಷ್ಟದಲ್ಲಿ ಮುನ್ನಡೆಸುವುದಲ್ಲಿ ಯಾವುದೇ ಅರ್ಥವಿಲ್ಲ ಎಂದು ಈ ನಿರ್ಧಾರ ಕೈಗೊಂಡಿದೆ. ಹೊಸ ವಿಮಾನಗಳು ಆಗಮಿಸಿದ ನಂತರ ಪೈಲಟ್‌ಗಳನ್ನು ಮತ್ತೆ ಕರೆಸಲಾಗುವುದು ಎಂದು ಸ್ಪೈಸ್ ಜೆಟ್ ಮಾಹಿತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ದೇಶದ ಮೊದಲ ಸೀಪ್ಲೇನ್‍ಗೆ ಮೋದಿ ಚಾಲನೆ – ಟಿಕೆಟ್ ದರ ಎಷ್ಟು? ಮುಂದೆ ಎಲ್ಲೆಲ್ಲಿ ಜಾರಿ?

    ದೇಶದ ಮೊದಲ ಸೀಪ್ಲೇನ್‍ಗೆ ಮೋದಿ ಚಾಲನೆ – ಟಿಕೆಟ್ ದರ ಎಷ್ಟು? ಮುಂದೆ ಎಲ್ಲೆಲ್ಲಿ ಜಾರಿ?

    ಗಾಂಧಿನಗರ: ದೇಶದ ಮೊದಲ ಸೀಪ್ಲೇನ್‍ಗೆ ಪ್ರಧಾನಿ ನರೇದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜ್ಮದಿನಾಚಣೆಯ ಸಂದರ್ಭದಲ್ಲಿ ಅವರಿಗೆ ವಿಶೇಷ ಗೌರವ ಸಲ್ಲಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದಾರೆ.

    ಸರ್ದಾರ್ ಸರೋವರದ ಡ್ಯಾಮ್‍ನ ಬಳಿಯ ಮೂರನೇ ಡ್ಯಾಮ್ ಬಳಿ ಮೋದಿ ಸೀಪ್ಲೇನ್‍ಗೆ ಚಾಲನೆ ನೀಡಿದರು. ಗುಜರಾತ್‍ನ ಸ್ಟ್ಯಾಚ್ಯೂ ಆಫ್ ಯುನಿಟಿಯ ಕೆವಾಡಿಯಾ ಕಾಲೋನಿ ಸ್ಥಳದಿಂದ ಅಹಮದಾಬಾದ್‍ನ ಸಬರಮತಿ ನಡುವೆ ಸಂಚರಿಸಲಿದೆ. ಅಹಮದಾಬಾದ್ ಮತ್ತು ಕೆವಾಡಿಯಾ ನಡುವೆ ಪ್ರಯಾಣಿಸಲು ನಾಲ್ಕು ಗಂಟೆ ಸಮಯ (205 ಕಿಮೀ) ತೆಗೆದುಕೊಳ್ಳುತ್ತದೆ. ಆದರೆ ಸೀಪ್ಲೇನ್ ಸುಮಾರು ಒಂದು ಗಂಟೆಯಲ್ಲಿ ಪ್ರಯಾಣವನ್ನು ಮಾಡಲಿದೆ.

    ಸೀಪ್ಲೇನ್ ವಿಶೇಷತೆ ಏನು?
    ನೀರಿನ ಮೇಲೆ ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಲು ಸಾಧ್ಯವಿರುವ ಏರೋಪ್ಲೇನ್‍ಗೆ ಸೀಪ್ಲೇನ್ ಎಂದು ಕರೆಯುತ್ತಾರೆ. ಸ್ಪೈಸ್ ಜೆಟ್ ಕಂಪನಿ ಭಾರತದಲ್ಲಿ ಸದ್ಯ ಸೀಪ್ಲೇನ್ ಸರ್ವೀಸ್ ನೀಡಲಿದ್ದು, ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಸೇವೆ ನೀಡಲಾಗುತ್ತಿದೆ. 19 ಆಸನಗಳನ್ನು ಹೊಂದಿರುವ ವಿಮಾನದಲ್ಲಿ 12 ಪ್ರಯಾಣಿಕರು ಈ ವಾಹನದಲ್ಲಿ ಏಕಕಾಲದಲ್ಲಿ ಪ್ರಯಾಣ ಮಾಡಬಹುದಾಗಿದೆ.

    ಟಿಕೆಟ್ ದರ ಎಷ್ಟು?
    ಒಬ್ಬರಿಗೆ 4,800 ರೂ. ನಿಗದಿ ಮಾಡುವ ಸಾಧ್ಯತೆ ಇದೆ. ಪ್ರತಿದಿನ ಸೀಪ್ಲೇನ್ ವಿಮಾನ ಅಹಮದಾಬಾದ್‍ನಿಂದ ಕೆವಾಡಿಯಾಗೆ 4 ಬಾರಿ, ಮತ್ತು ಕೆವಾಡಿಯಿಂದ ಅಹಮದಾಬಾದ್‍ಗೆ 4 ಬಾರಿ ಸಂಚಾರ ಮಾಡಲಿದೆ.

    ಮಾಲ್ಡೀವ್ಸ್‍ನಿಂದ ಅಕ್ಟೋಬರ್ 26 ರಂದು ಸೀಪ್ಲೇನ್ ಬಂದಿಗಳಿದಿತ್ತು. ಸರ್ಕಾರದ ಉಡಾನ್ ಯೋಜನೆಯಡಿ ಇದನ್ನು ಒದಗಿಸಲಾಗಿದೆ. ಯೋಜನೆಗಾಗಿ ಗುಜರಾತ್ ಸರ್ಕಾರ ಜುಲೈನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ತ್ರಿಪಕ್ಷೀಯ ಒಪ್ಪಂದವನ್ನು ಮಾಡಿಕೊಂಡಿತ್ತು. ಸಬರಮತಿ ಮತ್ತು ಸರ್ದಾರ್ ಸರೋವರ ಮಾರ್ಗವನ್ನು ದೇಶದ 16 ಸೀಪ್ಲೇನ್ ಮಾರ್ಗಗಳಲ್ಲಿ ಸೇರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಹೈಡ್ರೋಗ್ರಾಫಿಕ್ ಸಮೀಕ್ಷೆಗಳು ಪೂರ್ಣಗೊಳಿಸಲಾಗಿದೆ. ಸೀಪ್ಲೇನ್‍ಗಳು ಭೂಮಿ ಮತ್ತು ಲಕ್ಷದ್ವೀಪಗಳು ಮತ್ತು ಕೊಚ್ಚಿಯಲ್ಲಿನ ಒಳನಾಡಿನ ನೀರಿನ ಮಾರ್ಗಗಳ ನಡುವೆ ಸಂಚರಿಸ ಬಹುದಾದ ಉತ್ತಮ ತಾಂತ್ರಿಕತೆಯನ್ನು ಹೊಂದಿದೆ.

    ಮುಂದೆ ಎಲ್ಲೆಲ್ಲಿ ಸಾಧ್ಯತೆ?
    ಸಬರಮತಿ ಬಳಿಕ ದೇಶದ ಗುವಾಹಟಿ, ಅಂಡಮಾನ್ ನಿಕೋಬಾರ್, ಯಮುನಾ ಸೇರಿದಂತೆ ಉತ್ತರಾಖಂಡದ ಟಪ್ಪರ್ ಅಣೆಕಟ್ಟಿನ ವಿವಿಧ ಮಾರ್ಗಗಳಲ್ಲಿ ನಿಯಮಿತ ಸೇವೆಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ಭಾರತದ ಸೀಪ್ಲೇನ್ ಬೆಳವಣಿಗೆ ದೇಶಕ್ಕೆ ಹೊಸ ಸಾರಿಗೆ ವಿಧಾನವನ್ನು ಕಲ್ಪಿಸಲಿದ್ದು, ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಹುದೊಡ್ಡ ಉತ್ತೇಜನ ಸಿಕ್ಕಿದಂತಾಗುತ್ತದೆ. ಏಕೆಂದರೆ ಯಾವುದೇ ಕೊಳವನ್ನು ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸಬಹುದಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದು, ಇಂದು ಅವರ ಗುಜರಾತ್ ಭೇಟಿ ಅಂತ್ಯವಾಗಲಿದೆ. ಸ್ಟ್ಯಾಚ್ಯೂ ಆಫ್ ಯುನಿಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಸಶಸ್ತ್ರ ಪಡೆ (ಸಿಎಪಿಎಫ್), ಗುಜರಾತ್ ಪೊಲೀಸರು ಏಕ್ತಾ ದಿವಾಸ್ ಪೆರೇಡನ್ನು ಆಯೋಜಿಸಿದ್ದರು. ಉಳಿದಂತೆ ಶುಕ್ರವಾರ ಗುಜರಾತ್‍ಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು, ನರ್ಮದಾ ಜಿಲ್ಲೆಯ ಕೆವಾಡಿಯಾದ ಸ್ಟ್ಯಾಚ್ಯೂ ಆಫ್ ಯುನಿಟಿ ಬಳಿ ಹೊಸ ಪ್ರವಾಸಿ ಆಕರ್ಷಣೆಗಳು ಸೇರಿದಂತೆ ಗುಜರಾತ್‍ನಲ್ಲಿ 17 ಹೊಸ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಆರೋಗ್ಯ ವ್ಯಾನ್, ಏಕ್ತಾ ಮಾಲ್, ಸರ್ದಾರ್ ಪಟೇಲ್ ಪಾರ್ಕ್, ದೋಣಿ ವಿಹಾರ ಸೇರಿದಂತೆ ಹಲವು ಪ್ರಮುಖ ಆಕರ್ಷಣಿಯ ಯೋಜನೆಗಲು ಇದರಲ್ಲಿ ಸೇರಿದೆ.

  • ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ 6 ತಿಂಗಳ ಮಗು ಸಾವು

    ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ 6 ತಿಂಗಳ ಮಗು ಸಾವು

    ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ 6 ತಿಂಗಳು ಮಗು ಸಾವನ್ನಪ್ಪಿರುವ ಘಟನೆ ಪಾಟ್ನಾ- ದೆಹಲಿಯ ಸ್ಪೈಸ್ ಜೆಟ್ ವಿಮಾನದಲ್ಲಿ ನಡೆದಿದೆ.

    ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದ ಹೆಣ್ಣು ಮಗುವನ್ನು ಚಿಕಿತ್ಸೆಗಾಗಿ ಪಾಟ್ನಾದಿಂದ ದೆಹಲಿಗೆ ಕರೆದೊಯ್ಯುತ್ತಿದ್ದಾಗ ಇನ್ನೇನು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವುದಕ್ಕೂ ಮುನ್ನ ಮಗು ಮೃತಪಟ್ಟಿದೆ.

    ಸ್ಪೈಸ್ ಜೆಟ್ ವಿಮಾನ-ಎಸ್‍ಜಿ8481 ನಲ್ಲಿ ಈ ಘಟನೆ ನಡೆದಿದ್ದು, ಹೆಣ್ಣು ಮಗು ಮೃತಪಟ್ಟಿರುವ ಕುರಿತು ಮಾಹಿತಿ ಕಲೆ ಹಾಕಿದ್ದೇವೆ ಎಂದು ದೆಹಲಿ ವಿಮಾನ ನಿಲ್ದಾಣದ ಉಪ ಪೊಲೀಸ್ ಆಯುಕ್ತ ಸಂಜಯ್ ಭಟಿಯಾ ತಿಳಿಸಿದ್ದಾರೆ.

    ನಮ್ಮ ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿ ವಿಚಾರಣೆ ನಡೆಸಿದ್ದು, ಮೃತಪಟ್ಟ ಮಗು ಬಿಹಾರದ ಬೇಗುಸರಾಯ್ ಪಟ್ಟಣದ್ದಾಗಿದೆ. ಹಲವು ದಿನಗಳಿಂದ ಮಗು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು. ಅಲ್ಲದೆ, ಹೃದಯದಲ್ಲಿ ಸಣ್ಣ ರಂದ್ರ ಇತ್ತು. ಹಿಂದೆಯೂ ದೆಹಲಿಯ ಎಐಐಎಂಎಸ್‍ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮತ್ತೊಮ್ಮೆ ಚಿಕಿತ್ಸೆಗಾಗಿ ಮಗುವನ್ನು ದೆಹಲಿಗೆ ಕೊಂಡೊಯ್ಯಲಾಗುತ್ತಿತ್ತು. ಅಲ್ಲದೆ, ಮಗುವಿನ ಜೊತೆಯಲ್ಲೇ ಇದ್ದ ಪೋಷಕರು ಯಾರ ಮೇಲೂ ಆರೋಪ ಹೊರಿಸಿಲ್ಲ ಹಾಗೂ ಅನುಮಾನಿಸಿಲ್ಲ ಎಂದು ಸಂಜಯ್ ಭಟಿಯಾ ತಿಳಿಸಿದ್ದಾರೆ.

    ಸ್ಪೈಸ್ ಜೆಟ್ ಆಡಳಿತ ಮಂಡಳಿ ಈ ಕುರಿತು ಪ್ರತಿಕ್ರಿಯೆ ನೀಡಿ, ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ವೈದ್ಯಕೀಯ ಸೌಲಭ್ಯವಿರುವುದರಿಂದ ಪಾಟ್ನಾ- ದೆಹಲಿ ವಿಮಾನದ ಸಿಬ್ಬಂದಿ ಆದ್ಯತೆ ಮೇರೆಗೆ ಅಲ್ಲಿಯೇ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ. ವಿಮಾನದಲ್ಲಿಯೇ ಇದ್ದ ವೈದ್ಯರೂ ಸಹ ಮಗುವನ್ನು ಪರೀಕ್ಷಿಸಿದ್ದಾರೆ. ಅಲ್ಲದೆ, ಆದ್ಯತೆ ಲ್ಯಾಂಡಿಂಗ್‍ಗೆ ಸಹ ಅನುಮೋದನೆ ದೊರೆತಿದ್ದು, ವಿಮಾನ ಸುಕ್ಷಿತವಾಗಿ ಲ್ಯಾಂಡ್ ಆಗಿದೆ. ಪೋಷಕರ ಮನವಿ ಮೇರೆಗೆ ವೈದ್ಯಕೀಯ ಸೌಲಭ್ಯವನ್ನೂ ಕಲ್ಪಿಸಲಾಗಿತ್ತು. ಆದರೆ ದುರದೃಷ್ಟವಶಾತ್ ವೈದ್ಯರು ಪರೀಕ್ಷಿಸುವ ಹೊತ್ತಿಗೆ ಮಗು ಮೃತಪಟ್ಟಿತ್ತು ಎಂದು ವಿಮಾನದ ಸಿಬ್ಬಂದಿ ತಿಳಿಸಿದ್ದಾರೆ. ಪ್ರಯಾಣಕ್ಕೂ ಮುನ್ನ ಪೋಷಕರು ಮಗುವಿನ ಆರೋಗ್ಯದ ಸ್ಥಿತಿಗತಿ ಕುರಿತು ಯಾವುದೇ ಮಾಹಿತಿಯನ್ನು ವಿಮಾನಯಾನ ಸಂಸ್ಥೆಗೆ ನೀಡಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

  • ಸುರಕ್ಷತಾ ನಿಯಮ ಉಲ್ಲಂಘನೆ – ಮೂವರು ಪೈಲೆಟ್ ಅಮಾನತು

    ಸುರಕ್ಷತಾ ನಿಯಮ ಉಲ್ಲಂಘನೆ – ಮೂವರು ಪೈಲೆಟ್ ಅಮಾನತು

    ನವದೆಹಲಿ: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಜಾರಿ ನಿರ್ದೇಶನಾಲಯ ಮೂವರು ಪೈಲೆಟ್‍ಗಳನ್ನು ಅಮಾನತುಗೊಳಿಸಿದೆ.

    ಒಬ್ಬರು ಏರ್ ಇಂಡಿಯಾ ಹಾಗೂ ಇನ್ನಿಬ್ಬರು ಸ್ಪೈಸ್ ಜೆಟ್ ವಿಮಾನದ ಪೈಲೆಟ್‍ಗಳನ್ನು ಸುರಕ್ಷತೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಮೂವರು ಪೈಲೆಟ್‍ಗಳ ಜೊತೆಗೆ ಓರ್ವ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯೂ ಅಮಾನತುಗೊಂಡಿದ್ದಾರೆ.

    ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡುವಾಗ ರನ್ ವೇ ಅಂಚಿನಲ್ಲಿರುವ ದೀಪಗಳಿಗೆ ಹಾನಿಯಾಗಿತ್ತು. ಹೀಗಾಗಿ ಸ್ಪೈಸ್ ಜೆಟ್ ವಿಮಾನದ ಇಬ್ಬರು ಪೈಲೆಟ್‍ಗಳ ಫ್ಲೈಯಿಂಗ್ ಪರವಾನಗಿ(ಲೈಸೆನ್ಸ್)ಗಳನ್ನು ಆರು ತಿಂಗಳುಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಜುಲೈ 2ರಂದು ಪುಣೆ-ಕೊಲ್ಕತ್ತಾ ಮಧ್ಯೆ ಆರತಿ ಗುಣಶೇಖರನ್ ಹಾಗೂ ಸೌರಭ್ ಗುಲಿಯಾ ವಿಮಾನ ಹಾರಿಸುತ್ತಿದ್ದರು. ಈ ವೇಳೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ.

    ಘಟನೆ ಕುರಿತು ತನಿಖೆ ನಡೆಸಲಾಗಿದ್ದು, ಸ್ಪೈಸ್ ಜೆಟ್ ವಿಮಾನ ರನ್ ವೇ hಡಿeshoಟಜ ಠಿoiಟಿಣ ನಿಂದ 1300 ಅಡಿಗಳಷ್ಟು ದೂರ ಚಲಿಸಿ ಬಲಗಡೆ ಅಂಚಿನಲ್ಲಿರುವ ದೀಪಗಳಿಗೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

  • ಸ್ಪೈಸ್ ಜೆಟ್ ವಿಮಾನದ ಜೆಟ್ ಬ್ಲಾಸ್ಟ್ ನಿಂದ ಇಂಡಿಗೋ ವಿಮಾನದ ಕಿಟಕಿ ಒಡೆದು ಐವರಿಗೆ ಗಾಯ

    ಸ್ಪೈಸ್ ಜೆಟ್ ವಿಮಾನದ ಜೆಟ್ ಬ್ಲಾಸ್ಟ್ ನಿಂದ ಇಂಡಿಗೋ ವಿಮಾನದ ಕಿಟಕಿ ಒಡೆದು ಐವರಿಗೆ ಗಾಯ

    ನವದೆಹಲಿ: ಸ್ಪೈಸ್ ಜೆಟ್ ವಿಮಾನದ ಜೆಟ್ ಬ್ಲಾಸ್ಟ್ ನಿಂದ ಇಂಡಿಗೋ ವಿಮಾನದ ಕಿಟಕಿ ಒಡೆದ ಪರಿಣಾಮ ಐವರು ಪ್ರಯಾಣಿಕರು ಗಾಯಗೊಂಡಿರೋ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.

    ದೆಹಲಿಯಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನ ಟೇಕ್ ಆಫ್ ಆಗಲು ತಯಾರಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪಾರ್ಕಿಂಗ್ ಸ್ಥಳದ ಬಳಿ ಸ್ಪೈಸ್ ಜೆಟ್ ವಿಮಾನ ಬಂದಿದ್ದು, ವಿಮಾನದ ಜೆಟ್ ಬ್ಲಾಸ್ಟ್ ನಿಂದಾಗಿ ಇಂಡಿಗೋ ವಿಮಾನದ ಕಿಟಕಿ ಒಡೆದು ಚೂರಾಗಿದೆ.

    ಘಟನೆಯಲ್ಲಿ ಐವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ವಿಮಾನ ನಿಲ್ದಾಣದ ಕ್ಲೀನಿಕ್‍ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ನಾಗರೀಕ ವಿಮಾನಯಾನ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

    ಪ್ರಯಾಣಿಕರು ವಿಮಾನವೇರಲು ಇಂಡಿಗೋ ಕೋಚ್ ನಂ. 34ನ್ನು 17ನೇ ಸಾಲಿನಲ್ಲಿ ನಿಲ್ಲಿಸಲಾಗಿತ್ತು. ಇದೇ ವೇಳೆ ಸ್ಪೈಸ್ ಜೆಟ್ ಎಸ್‍ಜಿ-253 ವಿಮಾನ ನಿರ್ದಿಷ್ಟ ಸಾಲಿನಲ್ಲಿ ಪಾರ್ಕ್ ಮಾಡಲು ಟರ್ನ್ ತೆಗೆದುಕೊಳ್ತಿತ್ತು. ಈ ಸಂದರ್ಭದಲ್ಲಿ ವಿಮಾನದ ಜೆಟ್ ಬ್ಲಾಸ್ಟ್ ನಿಂದ ಇಂಡಿಗೋ ವಿಮಾನದ ಕಿಟಕಿ ಗಾಜು ಒಡೆದುಹೋಯ್ತು ಎಂದು ಇಂಡಿಗೋ ಹೇಳಿಕೆ ನೀಡಿದೆ.

    ಜೆಟ್ ಬ್ಲಾಸ್ಟ್ ಅಂದ್ರೇನು?: ಟೇಕ್ ಆಫ್ ಗಿಂತ ಮೊದಲು ಅಥವಾ ಟೇಕ್ ಆಫ್ ಆಗುವ ವೇಳೆ ವಿಮಾನದ ಎಂಜಿನ್ ಬಲವಾದ ಗಾಳಿಯನ್ನ ಹೊರಕ್ಕೆ ತಳ್ಳುವುದನ್ನ ಜೆಟ್ ಬ್ಲಾಸ್ಟ್ ಅಂತಾರೆ.