Tag: ಸ್ಪೇಸ್ ಎಕ್ಸ್

  • ಮಸ್ಕ್‌ ಆಫರ್‌ ತಿರಸ್ಕರಿಸಿದ್ದ ಬೈಡನ್‌ – ಬಾಹ್ಯಾಕಾಶದಲ್ಲೇ 9 ತಿಂಗಳು ಕಳೆದ ಸುನಿತಾ

    ಮಸ್ಕ್‌ ಆಫರ್‌ ತಿರಸ್ಕರಿಸಿದ್ದ ಬೈಡನ್‌ – ಬಾಹ್ಯಾಕಾಶದಲ್ಲೇ 9 ತಿಂಗಳು ಕಳೆದ ಸುನಿತಾ

    – ರಾಜಕೀಯ ಕಾರಣಕ್ಕೆ ನನ್ನ ಆಫರ್‌ ರಿಜೆಕ್ಟ್‌
    – ಅಮೆರಿಕ ಮಾಧ್ಯಮಕ್ಕೆ ಮಸ್ಕ್ ಹೇಳಿಕೆ

    ವಾಷಿಂಗ್ಟನ್‌: ನಾನು ಗಗನಯಾತ್ರಿಗಳನ್ನು ಮರಳಿ ತರುವ ಆಫರ್‌ ನೀಡಿದ್ದೆ. ಆದರೆ ಜೋ ಬೈಡನ್‌ (Joe Biden) ಸರ್ಕಾರ ಈ ಆಫರ್‌ ಅನ್ನು ರಾಜಕೀಯ ಕಾರಣಕ್ಕೆ ತಿರಸ್ಕರಿಸಿತ್ತು ಎಂದು ಸ್ಪೇಸ್‌ ಎಕ್ಸ್‌ (SpaceX) ಸಂಸ್ಥಾಪಕ ಎಲೋನ್‌ ಮಸ್ಕ್‌ (Elon Musk) ಹೇಳಿದ್ದಾರೆ.

    ಮಾಧ್ಯಮದ ಜೊತೆ ಮಾತನಾಡಿದ ಅವರು, ಗಗನಯಾತ್ರಿಗಳು ಕೇವಲ ಎಂಟು ದಿನಗಳವರೆಗೆ ಮಾತ್ರ ಇರಬೇಕಿತ್ತು. ಆದರೆ ಸುಮಾರು 10 ತಿಂಗಳಿನಿಂದ ಅಲ್ಲಿದ್ದರು. ಸ್ಪೇಸ್‌ಎಕ್ಸ್ ಗಗನಯಾನಿಗಳನ್ನು ಕರೆತರುವ ಬಗ್ಗೆ ಬೈಡನ್‌ ಆಡಳಿತಕ್ಕೆ ಪ್ರಸ್ತಾಪ ಸಲ್ಲಿಸಿತ್ತು. ಆದರೆ ರಾಜಕೀಯ ಕಾರಣಗಳಿಗಾಗಿ ಇದನ್ನು ತಿರಸ್ಕರಿಸಲಾಗಿತ್ತು ಎಂದು ತಿಳಿಸಿದರು.

     

    ಇಂದು ಭೂಮಿಗೆ ಮರಳಿದ ಬುಚ್‌ ವಿಲ್ಮೋರ್‌ ಅವರು ಬಾಹ್ಯಾಕಾಶದಲ್ಲಿ ಇದ್ದಾಗ ಈ ಪ್ರಶ್ನೆಯನ್ನು ಕೇಳಲಾಗಿತ್ತು. ಎಲೋನ್ ಮಸ್ಕ್ ಅವರು ನಿಮ್ಮನ್ನು ಮೊದಲೇ ಮರಳಿ ಕರೆತರುವ ಪ್ರಸ್ತಾಪವನ್ನು ನೀಡಿದ್ದಾಗಿ ಹೇಳಿದ್ದಾರೆ ಮತ್ತು ಅದನ್ನು ನಿರಾಕರಿಸಲಾಗಿದೆ ಇದು ನಿಜವೇ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ವಿಲ್ಮೋರ್‌ ಅವರು, ಮಸ್ಕ್ ಹೇಳುವುದು ಸಂಪೂರ್ಣವಾಗಿ ವಾಸ್ತವ. ಇಷ್ಟು ಮಾತ್ರ ಈಗ ನಾನು ಹೇಳಬಲ್ಲೆ ಎಂದಿದ್ದರು. ಇದನ್ನೂ ಓದಿ: ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್- 286 ದಿನಗಳ ಅಂತರಿಕ್ಷ ವಾಸ ಅಂತ್ಯ. ಟಚ್‌ಡೌನ್‌ ಪ್ರಕ್ರಿಯೆ ಹೇಗಾಯ್ತು?

    ಬೋಯಿಂಗ್‌ ಕಳುಹಿಸಿದ ನೌಕೆಯಲ್ಲಿ ಸಮಸ್ಯೆ ಎದುರಾದಾಗ ಮಸ್ಕ್‌ ಸ್ಪೇಸ್‌ ಎಕ್ಸ್‌ ಕ್ಯಾಪ್ಸುಲ್‌ ಮೂಲಕ ಮರಳಿ ಭೂಮಿಗೆ ತರುವ ಪ್ರಸ್ತಾಪ ಇಟ್ಟಿದ್ದರು.

    ಜೋ ರೋಗನ್ ಅವರ ಜೊತೆ ಮಾತನಾಡಿದ್ದ ಮಸ್ಕ್‌, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಅವರ ಪ್ರಚಾರಕ್ಕೆ ಹಾನಿ ಮಾಡಲು ಬಯಸದ ಕಾರಣ ಬೈಡನ್‌ ಸರ್ಕಾರ ರಾಜಕೀಯ ಕಾರಣಗಳಿಗಾಗಿ ತನ್ನ ಮನವಿಯನ್ನು ನಿರಾಕರಿಸಿತ್ತು ಎಂದು ದೂರಿದ್ದರು.

    ಮಸ್ಕ್‌ ಮೇಲೆ ಬೈಡನ್‌ಗೆ ಸಿಟ್ಟಾಕೆ?
    ಮಸ್ಕ್‌ ಈ ಹಿಂದೆ ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಿದ್ದರು. ಮಸ್ಕ್‌ಗೆ ಅಮೆರಿಕ ಪೌರತ್ವ ಸಿಕ್ಕಿದ್ದು 2002ರಲ್ಲಿ. ಈ ಹಿಂದೆ ಬರಾಕ್‌ ಒಬಾಮಾ (Barack Obama) ನಂತರ ಹಿಲರಿ ಕ್ಲಿಂಟನ್‌ (Hillary Clinton) ನಂತರ ಜೋ ಬೈಡನ್‌ (Joe Biden) ಅವರನ್ನು ಮಸ್ಕ್‌ ಬೆಂಬಲಿಸಿದ್ದರು. 2016ರಲ್ಲಿ ಟ್ರಂಪ್‌ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಗೆ ಆಗುವ ವ್ಯಕ್ತಿಯಲ್ಲ ಎಂದಿದ್ದರು. ರಿಪಬ್ಲಿಕನ್‌ ಪಕ್ಷದ ವಿರೋಧಿಯಾಗಿದ್ದ ಮಸ್ಕ್‌ ಈಗ ಆ ಪಕ್ಷದ ಪರ ಒಲವು ಹೊಂದಲು ಕಾರಣವಾದ ಮೊದಲ ಘಟನೆ ಯಾವುದು ಎಂದರೆ ಅದು ಕೋವಿಡ್.

    ಕೊರೊನಾಗೆ ಲಸಿಕೆ ಕಂಡು ಹಿಡಿದ ನಂತರ ವಿಶ್ವಾದ್ಯಂತ ವಿತರಣೆ ಆರಂಭವಾಯಿತು. ಈ ವೇಳೆ ಮಸ್ಕ್‌ ಲಸಿಕೆಯನ್ನು ನಾನು ಲಸಿಕೆಯನ್ನು ತೆಗೆದುಕೊಳ್ಳಲ್ಲ ಎಂದಿದ್ದರು. ಇದು ಅಮೆರಿಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಯಿತು. ನಂತರ ಮಸ್ಕ್ ಲಸಿಕೆಯನ್ನು ತೆಗೆದುಕೊಂಡಿದ್ದರು. ತೆಗೆದುಕೊಂಡಿದ್ದರೂ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎನ್ನುವುದು ಸರಿಯಲ್ಲ ಎಂದು ಹೇಳಿದ್ದರು. ಬೈಡನ್‌ ಸರ್ಕಾರದ ವಿರುದ್ಧ ಅಸಮಾಧಾನವಿದ್ದರೂ ಮಸ್ಕ್‌ ಅದನ್ನು ಎಲ್ಲಿಯೂ ಬಹಿರಂಗವಾಗಿ ತೋರಿಸಿಕೊಂಡಿರಲಿಲ್ಲ.

     

    2021 ರಲ್ಲಿ ಅಮೆರಿಕದ ಅಧ್ಯಕ್ಷರ ನಿವಾಸವಾದ ಶ್ವೇತ ಭವನದಲ್ಲಿ ಎಲೆಕ್ಟ್ರಿಕ್‌ ವಾಹನಕ್ಕೆ ಸಂಬಂಧಿಸಿದಂತೆ ಒಂದು ದೊಡ್ಡ ಕಾರ್ಯಕ್ರಮ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಅಮೆರಿಕದ ಅಟೋಮೊಬೈಲ್‌ ಕಂಪನಿಯ ಮಾಲೀಕರನ್ನು ಆಹ್ವಾನಿಸಲಾಗಿತ್ತು. ಆದರೆ ವಿಶ್ವದ ನಂಬರ್‌ ಒನ್‌ ಎಲೆಕ್ಟ್ರಿಕ್‌ ಕಾರು ಕಂಪನಿಯಾಗಿರುವ ಟೆಸ್ಲಾ ಮಾಲೀಕ ಮಸ್ಕ್‌ ಅವರನ್ನು ಆಹ್ವಾನಿಸಿರಲಿಲ್ಲ. ಉದ್ದೇಶಪೂರ್ವಕವಾಗಿ ಅಮೆರಿಕ ಸರ್ಕಾರ ನನ್ನನ್ನು ಕಡೆಗಣಿಸಿ ಅವಮಾನ ಮಾಡಿದ್ದರೆ ಎಂದು ತಿಳಿದ ಮಸ್ಕ್‌ 2022 ರಿಂದ ರಿಪಬ್ಲಿಕನ್‌ ಗುಂಪುಗಳಿಗೆ ಹಣಕಾಸಿನ ನೆರವು ನೀಡಲು ಆರಂಭಿಸಿದರು. ಇದನ್ನೂ ಓದಿ: ಭೂಮಿಗೆ ಸುನಿತಾ ವಿಲಿಯಮ್ಸ್ ಇಳಿದಾಯ್ತು ಮುಂದೇನು? 45 ದಿನಗಳ ರಿಹ್ಯಾಬಿಲಿಟೇಶನ್‌ನಲ್ಲಿ ಏನಿರುತ್ತೆ?

    ನಂತರದ ದಿನದಲ್ಲಿ ಮಸ್ಕ್‌ ಕಂಪನಿಯ ವಿರುದ್ಧ ಬೈಡನ್‌ ಸರ್ಕಾರ ಹಲವಾರು ತನಿಖೆ ಆರಂಭಿಸಿತು. ಉದ್ಯೋಗಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪ ಬಂದಾಗಲೂ ತನಿಖೆ ನಡೆಯಿತು. ಟ್ವಿಟ್ಟರ್‌ ಕಂಪನಿಯ ಸ್ವಾಧೀನ ಪ್ರಕ್ರಿಯೆ, ಟೆಸ್ಲಾ ಅಟೋಪೈಲಟ್‌ ವಿಶೇಷತೆ ಮೇಲೆ ತನಿಖೆಯನ್ನು ಎದುರಿಸಬೇಕಾಯಿತು. 2023ರಲ್ಲಿ ನೇರವಾಗಿಯೇ ನಾನು ಜೋ ಬೈಡನ್‌ ಅವರನ್ನು ಬೆಂಬಲಿಸುವುದಿಲ್ಲ ಎಂದು ಸಂದರ್ಶನದಲ್ಲಿ ಮಸ್ಕ್‌ ಹೇಳಿದರು.

    ಟ್ಟಿಟ್ಟರ್‌ ಒಡೆತನ ಸಂಪೂರ್ಣ ಸಿಕ್ಕಿದ ಬೆನ್ನಲ್ಲೇ 2022 ರ ನವೆಂಬರ್‌ನಲ್ಲಿ ನಿಷೇಧಗೊಂಡಿದ್ದ ಟ್ರಂಪ್‌ ಖಾತೆಗೆ ಮಸ್ಕ್‌ ಮತ್ತೆ ಜೀವ ನೀಡುತ್ತಾರೆ. ಟ್ರಂಪ್‌ ಖಾತೆ ಮತ್ತೆ ಚಾಲನೆ ಸಿಕ್ಕಿದ್ದು ಬೈಡೆನ್‌ ಸರ್ಕಾರಕ್ಕೆ ಇಷ್ಟವಾಗಿರಲಿಲ್ಲ. ಇದರ ಬೆನ್ನಲ್ಲೇ ಟ್ರಂಪ್‌ ಕಂಪನಿಯ ವಿರುದ್ಧ ತನಿಖೆಗಳು ಮತ್ತಷ್ಟು ತೀವ್ರಗೊಳ್ಳುತ್ತದೆ.

    ತನಿಖೆ ತೀವ್ರಗೊಳ್ಳೊತ್ತಿದ್ದಂತೆ ಚುನಾವಣೆಯಲ್ಲಿ ಟ್ರಂಪ್‌ ಪರ ಪ್ರಚಾರಕ್ಕೆ ಧುಮುಕಿದ್ದರು. ಟ್ರಂಪ್‌ಗೆ ಅತಿ ಹೆಚ್ಚು ದೇಣಿಗೆ ನೀಡಿದ ವ್ಯಕ್ತಿಗಳ ಪೈಕಿ ಮಸ್ಕ್‌ ಮೊದಲ ಸ್ಥಾನದಲ್ಲಿದ್ದಾರೆ. ಚುನಾವಣೆಯಲ್ಲಿ ಮಸ್ಕ್‌ ಅಮೆರಿಕ ಮಾಧ್ಯಮಗಳನ್ನು ಬಹಿರಂಗವಾಗಿಯೇ ದೂರಿದ್ದರು. ಟ್ರಂಪ್‌ ವಿರುದ್ಧ ಉದ್ದೇಶಪೂರ್ವವಾಗಿಯೇ ಅಪಪ್ರಚಾರ ಮಾಡಲಾಗುತ್ತದೆ. ಇವುಗಳಲ್ಲಿ ಬಂದ ಸುದ್ದಿಗಳನ್ನು ನಂಬಬೇಡಿ. ಎಕ್ಸ್‌ನಲ್ಲಿ ಬರುವ ಸುದ್ದಿಗಳನ್ನು ಮಾತ್ರ ನಂಬಿ ಎಂದು ಕರೆ ನೀಡಿದ್ದರು.

    ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ಗೆ ಬಹಿರಂಗ ಬೆಂಬಲ ಘೋಷಿಸಿದ್ದು ಮಾತ್ರವಲ್ಲದೇ ಭಾರೀ ಪ್ರಮಾಣದಲ್ಲಿ ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಪ್ರತಿ ದಿನ 1 ಮಿಲಿಯನ್‌ ಡಾಲರ್‌ ಭಾರತದ ರೂಪಾಯಿಯಲ್ಲಿ ಹೇಳುವುದಾದರೆ ಸುಮಾರು 8.40 ಕೋಟಿ ರೂ ನೀಡುವುದಾಗಿ ಘೋಷಣೆ ಮಾಡಿದ್ದರು. ದೇಣಿಗೆ ನೀಡಿದ್ದು ಮಾತ್ರವಲ್ಲದೇ ಟ್ರಂಪ್‌ ಪರ ಪ್ರಚಾರ ಸಭೆಯಲ್ಲಿ ಕಾಣಿಸಿಕೊಂಡಿದ್ದರು.

    ಅಮೆರಿಕ ಉಳಿಯಬೇಕಾದರೆ ಕಮಲಾ ಹ್ಯಾರಿಸ್‌ ಅವರನ್ನು ಸೋಲಿಸಬೇಕು ಎಂದು ಕರೆ ನೀಡಿದ್ದರು. ಟ್ರಂಪ್‌ ಪರ ಯುವ ಜನತೆಯನ್ನು ಮಸ್ಕ್‌ ಸೆಳೆದಿದ್ದರು. ಇದೆಲ್ಲದರ ಪರಿಣಾಮ ಟ್ರಂಪ್‌ ಈಗ 47ನೇ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

     

  • ಭೂಮಿಗೆ ಸುನಿತಾ ವಿಲಿಯಮ್ಸ್ ಇಳಿದಾಯ್ತು ಮುಂದೇನು? 45 ದಿನಗಳ ರಿಹ್ಯಾಬಿಲಿಟೇಶನ್‌ನಲ್ಲಿ ಏನಿರುತ್ತೆ?

    ಭೂಮಿಗೆ ಸುನಿತಾ ವಿಲಿಯಮ್ಸ್ ಇಳಿದಾಯ್ತು ಮುಂದೇನು? 45 ದಿನಗಳ ರಿಹ್ಯಾಬಿಲಿಟೇಶನ್‌ನಲ್ಲಿ ಏನಿರುತ್ತೆ?

    ವಾಷಿಂಗ್ಟನ್‌: ಅಂತರಿಕ್ಷದಲ್ಲಿ 9 ತಿಂಗಳು ಕಳೆದ ಸುನೀತಾ ವಿಲಿಯಮ್ಸ್ (Sunita Williams) ಬುಚ್ ವಿಲ್ಮೋರ್ ಯಶಸ್ವಿಯಾಗಿ ಧರೆಗೆ ಇಳಿದಿದ್ದಾರೆ. ನಾಸಾ (NASA) ಗಗನಯಾನಿ ನಿಕ್ ಹೇಗ್, ರಷ್ಯಾದ ಅಲೆಕ್ಸಾಂಡರ್ ಗೊರ್ಚನೋವ್ ಜೊತೆಗೂಡಿ ಸುನಿತಾ ಮತ್ತು ವಿಲ್ಮೋರ್ ಯಶಸ್ವಿಯಾಗಿ ಭೂಮಿಗೆ ಬಂದಿದ್ದಾರೆ.

    ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 10.35ಕ್ಕೆ ಸರಿಯಾಗಿ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ಕ್ರೂ ಡ್ರ್ಯಾಗನ್‌ ಗಗನನೌಕೆ (Crew Dragon Capsule) ತನ್ನ 17 ಗಂಟೆಗಳ ಪಯಣವನ್ನು ಆರಂಭಿಸಿ ಅಮೆರಿಕದ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5:57ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ) ಸರಿಯಾಗಿ ಫ್ಲೋರಿಡಾ ಕಡಲ ತೀರದಲ್ಲಿ ಲ್ಯಾಂಡ್ ಆಗಿದೆ.

    ನೌಕೆಯಿಂದ ಹೊರ ಬಂದ ಯಾನಿಗಳನ್ನು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಸಾಗಿಸಲಾಗಿದೆ. ಅಲ್ಲಿ ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ. ಗಗನ ಯಾತ್ರಿಗಳು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇದನ್ನೂ ಓದಿ: ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್- 286 ದಿನಗಳ ಅಂತರಿಕ್ಷ ವಾಸ ಅಂತ್ಯ

    ಭೂಮಿಗೆ ಬಂದಿರುವ ಗಗನಯಾತ್ರಿಗಳಿಗೆ ನಾಸಾ 45 ದಿನಗಳ ರಿಹ್ಯಾಬಿಲಿಟೇಶನ್‌ ಯೋಜನೆ ರೂಪಿಸಿದೆ. 45 ದಿನಗಳಲ್ಲಿ ದೇಹದ ಚಟುವಟಿಕೆ ಮತ್ತು ಆರೋಗ್ಯ ಪರೀಕ್ಷೆಗಳನ್ನು ಗಗನಯಾತ್ರಿಗಳಿಗೆ ಮಾಡಲಾಗುತ್ತದೆ. ಭೂಮಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಅವಕಾಶ ನೀಡಲಾಗುತ್ತದೆ. ನೆಲದ ಮೇಲೆ ನಡೆಯಲು ಸಹಾಯ, ಆಹಾರ, ಅಗತ್ಯ ಔಷಧಗಳನ್ನು ಒದಗಿಸುವುದು, ಕಾಲುಗಳನ್ನು ಬಲಪಡಿಸುವ ವ್ಯಾಯಾಮ, ಕಾಲುಗಳು ತಮ್ಮ ನಿಯಂತ್ರಣಕ್ಕೆ ಬರುವವರೆಗೂ ಮೇಲ್ವಿಚಾರಣೆ ನಡೆಯಲಿದೆ.

    ಏನೇನು ಸಮಸ್ಯೆ ಎದುರಿಸುತ್ತಾರೆ?
    ಗುರುತ್ವಾಕರ್ಷಣೆ ಪ್ರಭಾವ ಇಲ್ಲದ ಕಾರಣ ದೇಹದಲ್ಲಿ ಕೆಲ ಬದಲಾವಣೆ ಆಗುತ್ತದೆ. ದೇಹ ಭಾರವಿಲ್ಲ ಎನ್ನುವಂತೆ ಅವರಿಗೆ ಅನಿಸುತ್ತದೆ. ಜೊತೆಗೆ ಅವರ ದೇಹದ ಚರ್ಮ ಮೊದಲಿನಂತೆ ಇರುವುದಿಲ್ಲ ಸ್ನಾಯು, ಮೂಳೆಗಳ ಸಾಂದ್ರತೆ ಶೇ.30 ಕ್ಷೀಣಿಸುತ್ತದೆ. ಮೂಳೆಗಳು ಬಲ ಮತ್ತು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ಈ ಕಾರಣಗಳಿಂದ ಗಗನಯಾನಿಗಳಿಗೆ ಮೂಳೆ ಮುರಿತದ ಸಮಸ್ಯೆ ಎದುರಿಸುತ್ತಾರೆ.

    ಗಗನಯಾತ್ರಿಗಳ ದೇಹದ ಮೇಲೆ ಭೂಮಿಯ ಗುರುತ್ವಾಕರ್ಷಣೆಯ ಕೊರತೆಯಿಂದ ಮೂಳೆಯ ಸಾಂದ್ರತೆ ಮತ್ತು ಸ್ನಾಯು ಕ್ಷೀಣತೆ ಅನುಭವಿಸುತ್ತಾರೆ. ಶೂನ್ಯ ಗುರುತ್ವಾಕರ್ಷಣೆ ಮತ್ತು ಹೆಚ್ಚಿನ ವಿಕಿರಣದಲ್ಲಿ ದೀರ್ಘಕಾಲ ಬಾಹ್ಯಾಕಾಶದಲ್ಲಿ ಕಾಲ ಕಳೆದಿದ್ದರಿಂದ ಮೂಳೆಗಳ ದೌರ್ಬಲ್ಯ, ದೃಷ್ಟಿಯ ಮೇಲೆ ಪರಿಣಾಮ ಉಂಟಾಗಬಹುದು. ವಿಕಿರಣವು ಕ್ಯಾನ್ಸರ್ ಮತ್ತು ನರಮಂಡಲದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು.

    ಭೂಮಿಗೆ ವಾಪಸ್ ಆದ ತಕ್ಷಣ ಗಗನಯಾನಿಗಳಿಗೆ ನಡೆದಾಡಲು ಆಗುವುದಿಲ್ಲ. ಕೆಲವು ಕಾಲ ನಿಂತುಕೊಳ್ಳಲೂ ಸಮಸ್ಯೆ ಆಗಲಿದೆ. ಅಧಿಕ ರೇಡಿಯೇಷನ್ ಕಾರಣ ಕ್ಯಾನ್ಸರ್ ಭೀತಿ, ಡಿಎನ್‌ಎಗೆ ಹಾನಿಯಯಾಗುವ ಸಾಧ್ಯತೆಯಿದೆ. ಒಂಟಿತನ, ಮಾನಸಿಕ ಒತ್ತಡ, ನಿದ್ರಾಹೀನತೆ, ದೃಷ್ಟಿ ಕೇಂದ್ರೀಕರಿಸಲು ಸಮಸ್ಯೆ ಅನುಭವಿಸುತ್ತಾರೆ. ಈ ಎಲ್ಲವುಗಳಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ.

    ವಿಲಿಯಮ್ಸ್ ಮತ್ತು ವಿಲ್ಮೋರ್ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ 121,347,491 ಮೈಲುಗಳಷ್ಟು ಪ್ರಯಾಣಿಸಿದ್ದಾರೆ. ಬಾಹ್ಯಾಕಾಶದಲ್ಲಿ 286 ದಿನಗಳನ್ನು ಕಳೆದ ಇರವು ಭೂಮಿಯ ಸುತ್ತ 4,576 ಕಕ್ಷೆಗಳನ್ನು ಪೂರ್ಣಗೊಳಿಸಿದರು ಎಂದು ನಾಸಾ ಹೇಳಿದೆ. ವಿಲಿಯಮ್ಸ್ ತನ್ನ ಮೂರು ಹಾರಾಟಗಳಲ್ಲಿ 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ ಮತ್ತು ವಿಲ್ಮೋರ್ ತನ್ನ ಮೂರು ಹಾರಾಟಗಳಲ್ಲಿ 464 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.

     

  • ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್- 286 ದಿನಗಳ ಅಂತರಿಕ್ಷ ವಾಸ ಅಂತ್ಯ

    ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್- 286 ದಿನಗಳ ಅಂತರಿಕ್ಷ ವಾಸ ಅಂತ್ಯ

    ಫ್ಲೋರಿಡಾ: ಭಾರತೀಯ ಮೂಲದ ಅಮೆರಿಕದ ಖ್ಯಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು 286 ದಿನಗಳ ಬಳಿಕ ಇಂದು ಭೂಮಿಗೆ ಯಶಸ್ವಿಯಾಗಿ ಮರಳಿದ್ದಾರೆ. ಬಾಹ್ಯಾಕಾಶ ಕೇಂದ್ರದಲ್ಲಿ (ISS)ಸಿಲುಕಿದ್ದ ಸುನಿತಾ ವಿಲಿಯಮ್ಸ್‌ (Sunita Williams) ಮತ್ತು ನಾಸಾದ (NASA) ಬಾಹ್ಯಾಕಾಶ ಯಾನಿ ಬುಚ್‌ ವಿಲ್ಮೋರ್‌ ಅವರಿದ್ದ ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಬುಧವಾರ ಬೆಳಗ್ಗೆ ಅಮೇರಿಕಾದ ಫ್ಲೋರಿಡಾದ ಕರಾವಳಿಯ ಸಮುದ್ರದಲ್ಲಿ ಟಚ್‌ಡೌನ್‌ ಆಗಿದೆ.

    ಸುನಿತಾ, ಬುಚ್‌ ಜೊತೆಗೆ ರಷ್ಯಾದ ಅಲೆಕ್ಸಾಂಡರ್‌ ಗೋರ್ಬುನೋವ್‌ ಮತ್ತು ಅಮೆರಿಕದ ನಿಕ್‌ ಹೇಗ್‌ ಅವರನ್ನು ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌ಎಕ್ಸ್‌ ಕಂಪನಿಯ ಕ್ರ್ಯೂ ಡ್ರ್ಯಾಗನ್‌ ಕ್ಯಾಪ್ಸೂಲ್‌ ಭೂಮಿಗೆ ಕರೆತಂದಿದೆ. ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸಿದ ನೌಕೆ ನಿಗದಿಯಂತೆ ಅಮೆರಿಕದ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5:57ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ) ಭೂಮಿಯನ್ನು ತಲುಪಿದೆ.

    ಟಚ್‌ಡೌನ್‌ ಪ್ರಕ್ರಿಯೆ ಹೇಗಾಯ್ತು?
    ಕ್ರ್ಯೂ ಡ್ರ್ಯಾಗನ್‌ ಕ್ಯಾಪ್ಸೂಲ್‌ ಫ್ಲೋರಿಡಾದ ಸಮುದ್ರದ ಮೇಲೆ ಟಚ್‌ಡೌನ್‌ ಆಗಿದೆ. ಆಕಾಶದಿಂದ ವೇಗವಾಗಿ ಬರುವ ಕ್ಯಾಪ್ಸೂಲ್‌ ನಿಧಾನವಾಗಿ ಲ್ಯಾಂಡ್‌ ಆಯ್ತು. ಭೂಮಿ ಪ್ರವೇಶದ ಬಳಿಕ ಕ್ಯಾಪ್ಸೂಲ್‌ನಲ್ಲಿರುವ 4 ಪ್ಯಾರಾಚೂಟ್‌ಗಳು ತೆರೆದುಕೊಂಡಿತ್ತು. ಈ ಪ್ಯಾರಾಚೂಟ್‌ಗಳು ಕ್ಯಾಪ್ಸೂಲ್‌ ವೇಗವನ್ನು ತಗ್ಗಿಸಿತ್ತು. ವೇಗ ತಗ್ಗಿದಂತೆ ಕ್ಯಾಪ್ಸೂಲ್‌ ನಿಧನವಾಗಿ ಸಮುದ್ರದಲ್ಲಿ ಟಚ್‌ಡೌನ್‌ ಆಯ್ತು.

    ನಂತರ ವಿಶೇಷ ದೋಣಿಯಲ್ಲಿ ಸ್ಪೇಸ್‌ ಎಕ್ಸ್‌ ಸಿಬ್ಬಂದಿ ನೌಕೆಯನ್ನು ರೋಪ್‌ ಬಳಸಿ ಹತ್ತಿರದಲ್ಲೇ ಇದ್ದ ದೊಡ್ಡ ಬೋಟ್‌ ಬಳಿ ತಂದರು. ಈ ನೌಕೆಯನ್ನು ಕ್ರೇನ್‌ ಬಳಸಿ ಬೋಟ್‌ ಒಳಗಡೆ ಇಡಲಾಯಿತು. ಬೋಟ್‌ ಒಳಗಡೆ ಇಟ್ಟ ನಂತರ ಕ್ಯಾಪ್ಸೂಲ್‌ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿದ ಬಳಿಕ ಕೆಳಗಡೆ ಇರುವ ಬಾಗಿಲು(ಹ್ಯಾಚ್) ತೆರೆಯಲಾಯಿತು. ಈ ಬಾಗಿಲಿನ ಮೂಲಕ ಯಾನಿಗಳನ್ನು ಸ್ಪೇಸ್‌ ಎಕ್ಸ್‌ ಸಿಬ್ಬಂದಿ ಹೊರಗೆ ನಿಧಾನವಾಗಿ ಎಳೆದು ವಿಶೇಷವಾಗಿ ವಿನ್ಯಾಸ ಪಡಿಸಲಾಗಿರುವ ವೀಲ್‌ ಚೇರ್‌ನಲ್ಲಿ ಕುಳ್ಳಿರಿಸಿದರು.


    9 ತಿಂಗಳು ತಡವಾಗಿದ್ದು ಯಾಕೆ?
    2024ರ ಜೂನ್ 6ರಂದು ಸುನಿತಾ ಮತ್ತು ವಿಲ್ಮೋರ್ ಎಂಟು ದಿನಗಳ ಕಾರ್ಯಾಚರಣೆಗಾಗಿ ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಬಾಹ್ಯಾಕಾಶ ನೌಕೆಯ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಹಿಂದಿರುಗಲು ಸಾಧ್ಯವಾಗಿರಲಿಲ್ಲ. ಈ ಮುಂಚೆ 2025ರ ಫೆಬ್ರವರಿ ತಿಂಗಳಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ತಿಳಿಸಿತ್ತು. ಆದರೆ ಇದೀಗ ಮಾರ್ಚ್‌ಗೆ ಮುಂದೂಡಿಕೆ ಆಗಿತ್ತು.

    ಸುನಿತಾ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ಯಾಕೆ?
    ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಸುನಿತಾ ಮತ್ತು ಬುಚ್ ಇಬ್ಬರೂ ಗಗನಯಾತ್ರಿಗಳು ಜೂ.5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಎಂಟು ದಿನಗಳ ಕಾಲ ಅಲ್ಲಿದ್ದು ಜೂ.14 ರಂದು ಸ್ಟಾರ್‌ಲೈನರ್ ಮೂಲಕವೇ ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅವರು ಬಾಹ್ಯಾಕಾಶದಲ್ಲೇ ಉಳಿಯುವಂತಾಗಿತ್ತು.

    ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ನೆಲೆಯಿಂದ ಮಾರ್ಚ್‌ 15 ರಂದು ಕ್ರ್ಯೂ ಡ್ರ್ಯಾಗನ್‌ ಕ್ಯಾಪ್ಸೂಲ್ (Crew Dragon Capsule) ಹೊತ್ತುಕೊಂಡು ಫಾಲ್ಕನ್‌-9 ರಾಕೆಟ್‌ ಹಾರಿತ್ತು. ಉಡ್ಡಯನಗೊಂಡ 29 ಗಂಟೆಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಕ್ರ್ಯೂ ಡ್ರ್ಯಾಗನ್‌ ತಲುಪಿತ್ತು.

  • ಮಸ್ಕ್‌ ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಇಸ್ರೋ ಉಪಗ್ರಹ ಉಡಾವಣೆ ಯಶಸ್ವಿ

    ಮಸ್ಕ್‌ ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಇಸ್ರೋ ಉಪಗ್ರಹ ಉಡಾವಣೆ ಯಶಸ್ವಿ

    ವಾಷಿಂಗ್ಟನ್‌/ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೇ ಮೊದಲ ಬಾರಿಗೆ ವಿಶ್ವದ ಶ್ರೀಮಂತ ಉದ್ಯಮಿ ಎಲೋನ್‌ ಮಸ್ಕ್‌ (Elon Musk) ಮಾಲೀಕತ್ವದ ಸ್ಪೇಸ್‌ಎಕ್ಸ್‌ (Space X) ಕಂಪನಿಯ ರಾಕೆಟ್‌ ಬಳಸಿ ಉಪಗ್ರಹವನ್ನು ಕಕ್ಷೆಗೆ ಸೇರಿಸಿದೆ.

    ಇಸ್ರೋದ ಜಿಸ್ಯಾಟ್‌ -20 ಸಂವಹನ ಉಪಗ್ರಹವನ್ನು ಹೊತ್ತುಕೊಂಡಿದ್ದ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ (Space X Falcon 9 Rocket) ಭಾರತೀಯ ಕಾಲಮಾನ ಸೋಮವಾರ ರಾತ್ರಿ 23:45ಕ್ಕೆ ಅಮೆರಿಕದ ಫ್ಲೋರಿಡಾ ರಾಜ್ಯದ ಕೇಪ್ ಕೆನವೆರಲ್‌ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡಿತು. ಉಡಾವಣೆಗೊಂಡ 34 ನಿಮಿಷದಲ್ಲಿ ರಾಕೆಟ್‌ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ.

    ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಇಸ್ರೋ ಅಧ್ಯಕ್ಷ ಸೋಮನಾಥ್‌, ಜಿಸ್ಯಾಟ್-20 ಮಿಷನ್ ಅವಧಿ 14 ವರ್ಷ. ಅತ್ಯಂತ ಯಶಸ್ವಿಯಾಗಿ ಉಡಾವಣೆಯಾಗಿದೆ ಯಾಕೆಂದರೆ ನಾವು ಉತ್ತಮ ಕಕ್ಷೆಯನ್ನು ಪಡೆದುಕೊಂಡಿದ್ದೇವೆ. ಉಪಗ್ರಹವು ಆರೋಗ್ಯಕರವಾಗಿದ್ದು ಸೌರ ಫಲಕಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

    ಇಸ್ರೋ ಮತ್ತು ಸ್ಪೇಸ್‌ಎಕ್ಸ್ ನಡುವಿನ ಅನೇಕ ವಾಣಿಜ್ಯ ಸಹಯೋಗಗಳಲ್ಲಿ ಇದು ಮೊದಲನೆಯದು ಮತ್ತು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್‌ ಟ್ರಂಪ್‌ (Donald Trump) ಅವಧಿಯಲ್ಲಿ ಅವರ ಸ್ನೇಹಿತ ಮಸ್ಕ್‌ ಜೊತೆಗಿನ ಮೊದಲ ಒಪ್ಪಂದ ಎನ್ನುವುದು ವಿಶೇಷ.

    ಫಾಲ್ಕನ್ 9 ಮರುಬಳಕೆ ಮಾಡಬಹುದಾದ ರಾಕೆಟ್ ಆಗಿದೆ. ಇಲ್ಲಿಯವರೆಗೆ 19 ಬಾರಿ ಈ ರಾಕೆಟ್‌ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಮೊದಲ ಹಂತ ಬೇರ್ಪಟ್ಟ ನಂತರ ಅಟ್ಲಾಂಟಿಕ್ ಸಾಗರದಲ್ಲಿ ನೆಲೆಗೊಂಡಿದ್ದ ಡ್ರೋನ್ ಹಡಗಿನಲ್ಲಿ ಲ್ಯಾಂಡ್‌ ಆಗಿದೆ. ಇದನ್ನೂ ಓದಿ: 95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ – ಇದರ ಹಿಂದಿನ ನಿಗೂಢ ಕಾರಣವೇನು?

    ಉಡಾವಣೆ ಸಂಬಂಧವಾಗಿ ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ (ಎನ್‌ಎಸ್‌ಐಎಲ್) ಸ್ಪೇಸ್‌ಎಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. GSAT-N2 ಅಥವಾ GSAT-20 ಹೆಸರಿನ ಉಪಗ್ರಹವು ಭಾರತದಲ್ಲಿ ವಿಮಾನದಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸಲಿದೆ.

    ಸದ್ಯ ಈಗ ಭಾರತದಲ್ಲಿ ವಿಮಾನದ ಒಳಗಡೆ ಇಂಟರ್ನೆಟ್‌ ಸೇವೆಗೆ ನಿಷೇಧವಿದೆ. ಈ ಸೇವೆಯನ್ನು ಒದಗಿಸುವ ವಿಮಾನಯಾನ ಸಂಸ್ಥೆಗಳು ಭಾರತೀಯ ವಾಯುಪ್ರದೇಶದ ಮೇಲೆ ಹಾರುವಾಗ ಅದನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ.

    ಭಾರತ ಸರ್ಕಾರವು ನವೆಂಬರ್ 4 ರಂದು ನಿಯಮಗಳನ್ನು ತಿದ್ದುಪಡಿ ಮಾಡಿದೆ. ಭಾರತೀಯ ವಾಯುಪ್ರದೇಶ ಒಳಗಡೆ ವಿಮಾನದಲ್ಲಿ 3,000 ಮೀಟರ್ ಎತ್ತರವನ್ನು ತಲುಪಿದ ನಂತರ ವಿಮಾನದಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲು ಅನುಮತಿಸಿದಾಗ ಮಾತ್ರ ವಿಮಾನದಲ್ಲಿನ ಪ್ರಯಾಣಿಕರು ವೈಫೈ ಮೂಲಕ ಇಂಟರ್ನೆಟ್ ಸೇವೆಗಳನ್ನು ಬಳಸಲು ಸಾಧ್ಯವಾಗಲಿದೆ.

    ಸ್ಪೇಸ್‌ ಎಕ್ಸ್‌ನಲ್ಲಿ ಯಾಕೆ?
    ಭಾರತದ ಅತಿದೊಡ್ಡ ಉಡಾವಣಾ ನೌಕೆ ಎಂದೇ ಖ್ಯಾತಿ ಪಡೆದಿರುವ ʼಬಾಹುಬಲಿ’ ಜಿಎಸ್‌ಎಲ್‌ವಿ ಮಾರ್ಕ್‌-3 ಗರಿಷ್ಠ 4,100 ಕೆ.ಜಿ. ತೂಕದ ಉಪಗ್ರಹವನ್ನು ಮಾತ್ರ ಹಾರಿಸುವ ಸಾಮರ್ಥ್ಯ ಹೊಂದಿದೆ. ಸ್ಯಾಟ್‌-20 ಉಪಗ್ರಹವು ಬರೋಬ್ಬರಿ 4,700 ಕೆ.ಜಿ. ತೂಕವಿರುವುದರಿಂದ ಇಸ್ರೋ ಫಾಲ್ಕನ್ 9 ರಾಕೆಟ್‌ ಬಳಸುತ್ತಿದೆ. ಫಾಲ್ಕನ್‌ 9 ಗರಿಷ್ಠ 22,800 ಕೆಜಿ ತೂಕದ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯ ಹೊಂದಿದೆ.

  • ಮಸ್ಕ್‌ ಜೊತೆ ಒಪ್ಪಂದ –  ಫಸ್ಟ್‌ ಟೈಂ ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಹಾರಲಿದೆ ಇಸ್ರೋ ಉಪಗ್ರಹ

    ಮಸ್ಕ್‌ ಜೊತೆ ಒಪ್ಪಂದ – ಫಸ್ಟ್‌ ಟೈಂ ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಹಾರಲಿದೆ ಇಸ್ರೋ ಉಪಗ್ರಹ

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೇ ಮೊದಲ ಬಾರಿಗೆ ವಿಶ್ವದ ಶ್ರೀಮಂತ ಉದ್ಯಮಿ ಎಲೋನ್‌ ಮಸ್ಕ್‌ (Elon Musk) ಮಾಲೀಕತ್ವದ ಸ್ಪೇಸ್‌ಎಕ್ಸ್‌ (Space X) ಕಂಪನಿಯ ರಾಕೆಟ್‌ ಬಳಸಿ ಉಪಗ್ರಹವನ್ನು ಕಕ್ಷೆಗೆ ಸೇರಿಸಲಿದೆ.

    ಇಸ್ರೋದ ಸಂವಹನ ಉಪಗ್ರಹವನ್ನು ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ (Space X Falcon 9 Rocket) ನಭಕ್ಕೆ ಕೊಂಡೊಯ್ಯಲಿದೆ. ಅಮೆರಿಕದ ಕೇಪ್ ಕೆನವೆರಲ್‌ ಉಡಾವಣಾ ಕೇಂದ್ರದಿಂದ ಉಡಾವಣೆಯಾಗಲಿದ್ದು, ಈ ಉಡಾವಣೆಗೆ ಅಂದಾಜು 60-70 ಮಿಲಿಯನ್ ಡಾಲರ್‌ ವೆಚ್ಚವಾಗಲಿದೆ.

    ಇಸ್ರೋ ಮತ್ತು ಸ್ಪೇಸ್‌ಎಕ್ಸ್ ನಡುವಿನ ಅನೇಕ ವಾಣಿಜ್ಯ ಸಹಯೋಗಗಳಲ್ಲಿ ಇದು ಮೊದಲನೆಯದು ಮತ್ತು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್‌ ಟ್ರಂಪ್‌ (Donald Trump) ಅವಧಿಯಲ್ಲಿ ಅವರ ಸ್ನೇಹಿತ ಮಸ್ಕ್‌ ಜೊತೆಗಿನ ಮೊದಲ ಒಪ್ಪಂದ ಎನ್ನುವುದು ವಿಶೇಷ.  ಇದನ್ನೂ ಓದಿ: ಮಸ್ಕ್‌ನ ಸ್ಟಾರ್‌ಲಿಂಕ್‌ಗೆ ಅನುಮತಿ ನೀಡುವ ಮುನ್ನ ನಿರ್ಧಾರ ಪರಿಶೀಲಿಸಿ: ಕೇಂದ್ರಕ್ಕೆ ಜಿಯೋ ಪತ್ರ

    GSAT-N2 ಅಥವಾ GSAT-20 ಹೆಸರಿನ ಉಪಗ್ರಹವು ಭಾರತದಲ್ಲಿ ವಿಮಾನದಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸಲಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್‌ಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣನ್ ದುರೈರಾಜ್ ಅವರು ಸ್ಪೇಸ್‌ಎಕ್ಸ್‌ನೊಂದಿಗೆ ಉಡಾವಣೆ ಮಾಡಲು ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

    ಸದ್ಯ ಈಗ ಭಾರತದಲ್ಲಿ ವಿಮಾನದ ಒಳಗಡೆ ಇಂಟರ್ನೆಟ್‌ ಸೇವೆಗೆ ನಿಷೇಧವಿದೆ. ಈ ಸೇವೆಯನ್ನು ಒದಗಿಸುವ ವಿಮಾನಯಾನ ಸಂಸ್ಥೆಗಳು ಭಾರತೀಯ ವಾಯುಪ್ರದೇಶದ ಮೇಲೆ ಹಾರುವಾಗ ಅದನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ.

    ಭಾರತ ಸರ್ಕಾರವು ನವೆಂಬರ್ 4 ರಂದು ನಿಯಮಗಳನ್ನು ತಿದ್ದುಪಡಿ ಮಾಡಿದೆ. ಭಾರತೀಯ ವಾಯುಪ್ರದೇಶ ಒಳಗಡೆ ವಿಮಾನದಲ್ಲಿ 3,000 ಮೀಟರ್ ಎತ್ತರವನ್ನು ತಲುಪಿದ ನಂತರ ವಿಮಾನದಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲು ಅನುಮತಿಸಿದಾಗ ಮಾತ್ರ ವಿಮಾನದಲ್ಲಿನ ಪ್ರಯಾಣಿಕರು ವೈಫೈ ಮೂಲಕ ಇಂಟರ್ನೆಟ್ ಸೇವೆಗಳನ್ನು ಬಳಸಲು ಸಾಧ್ಯವಾಗಲಿದೆ.

    ಸ್ಪೇಸ್‌ ಎಕ್ಸ್‌ನಲ್ಲಿ ಯಾಕೆ?
    ಭಾರತದ ಅತಿದೊಡ್ಡ ಉಡಾವಣಾ ನೌಕೆ ಎಂದೇ ಖ್ಯಾತಿ ಪಡೆದಿರುವ ʼಬಾಹುಬಲಿ’ ಜಿಎಸ್‌ಎಲ್‌ವಿ ಮಾರ್ಕ್‌-3 ಗರಿಷ್ಠ 4,100 ಕೆ.ಜಿ. ತೂಕದ ಉಪಗ್ರಹವನ್ನು ಮಾತ್ರ ಹಾರಿಸುವ ಸಾಮರ್ಥ್ಯ ಹೊಂದಿದೆ. ಸ್ಯಾಟ್‌-20 ಉಪಗ್ರಹವು ಬರೋಬ್ಬರಿ 4,700 ಕೆ.ಜಿ. ತೂಕವಿರುವುದರಿಂದ ಇಸ್ರೋ ಫಾಲ್ಕನ್ 9 ರಾಕೆಟ್‌ ಬಳಸುತ್ತಿದೆ. ಫಾಲ್ಕನ್‌ 9 ಗರಿಷ್ಠ 22,800 ಕೆಜಿ ತೂಕದ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯ ಹೊಂದಿದೆ.

     

  • ಬಾಹ್ಯಾಕಾಶ ನಿಲ್ದಾಣ ತಲುಪಿತು ಕ್ರ್ಯೂ-9 ಮಿಷನ್ – ಅಪ್ಪಿಕೊಂಡು ಸ್ವಾಗತಿಸಿದ ಗಗನಯಾನಿಗಳು

    ಬಾಹ್ಯಾಕಾಶ ನಿಲ್ದಾಣ ತಲುಪಿತು ಕ್ರ್ಯೂ-9 ಮಿಷನ್ – ಅಪ್ಪಿಕೊಂಡು ಸ್ವಾಗತಿಸಿದ ಗಗನಯಾನಿಗಳು

    ವಾಷಿಂಗ್ಟನ್‌: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆ ತರುವ ನಿಟ್ಟಿನಲ್ಲಿ ಹಾರಿಸಲಾಗಿದ್ದ ಸ್ಪೇಸ್‌ ಎಕ್ಸ್‌ ಕ್ರ್ಯೂ9 ಮಿಷನ್ (Crew9) ಯಶಸ್ವಿಯಾಗಿ ಅಂತರಿಕ್ಷ ನಿಲ್ದಾಣದಲ್ಲಿ ಲ್ಯಾಂಡ್‌ ಆಗಿದೆ.

    ಫಾಲ್ಕನ್ 9 ರಾಕೆಟ್ ಫ್ಲೋರಿಡಾದ ಕೇಪ್ ಕೆನವೆರಲ್‌ನಿಂದ ಶನಿವಾರ ಭಾರತೀಯ ಕಾಲಮಾನ ರಾತ್ರಿ 10:47ಕ್ಕೆ ಉಡಾವಣೆಯಾಗಿತ್ತು. ಸ್ಪೇಸ್‌ ಎಕ್ಸ್ ಕ್ರ್ಯೂ-9 ಮಿಷನ್ (Crew-9 Mission) ಭಾನುವಾರ ಸಂಜೆ ಅಂತರಿಕ್ಷ ನಿಲ್ದಾಣದ ಜೊತೆ ಸಂಪರ್ಕ ಸಾಧಿಸಿತು.

    ಡಾಕ್‌ ಆದ ನಂತರ ನಾಸಾ ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೊವ್ ಅವರು ಅಂತಾರಾಷ್ಟ್ರೀಯ ನಿಲ್ದಾಣದಲ್ಲಿರುವ (ISS) ಗಗನಯಾನಿಗಳನ್ನು ಅಪ್ಪಿಕೊಂಡರು.

    ಫೆಬ್ರವರಿಯಲ್ಲಿ ಹೇಗ್ ಮತ್ತು ಗೋರ್ಬುನೊವ್ ಬಾಹ್ಯಾಕಾಶ ನಿಲ್ದಾಣದಿಂದ ಮರಳುವಾಗ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅವರನ್ನು ಕರೆ ತರುತ್ತಾರೆ.

     

    ಜೂನ್ ತಿಂಗಳಲ್ಲಿ 8 ದಿನಗಳ ಬಾಹ್ಯಾಕಾಶ ಯಾತ್ರೆ ತೆರಳಿದ್ದ ಇಬ್ಬರು ಗಗನಯಾತ್ರಿಗಳು ಬೋಯಿಂಗ್ ಸ್ಟಾರ್‌ಲೈನರ್‌ ಬಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಬಾಹ್ಯಾಕಾಶದಲ್ಲೇ ಉಳಿದಿದ್ದಾರೆ. ಕ್ರ್ಯೂ 9 ಮಿಷನ್‌ ಮೂಲಕ ಸುಮಾರು 200 ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತದೆ.

     

  • ಸುನೀತಾ ವಿಲಿಯಮ್ಸ್‌ ಕರೆತರಲು ಇಂದು ನಭಕ್ಕೆ ನೆಗೆಯಲಿದೆ ಕ್ರ್ಯೂ -9

    ಸುನೀತಾ ವಿಲಿಯಮ್ಸ್‌ ಕರೆತರಲು ಇಂದು ನಭಕ್ಕೆ ನೆಗೆಯಲಿದೆ ಕ್ರ್ಯೂ -9

    ವಾಷಿಂಗ್ಟನ್‌: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆ ತರುವ ನಿಟ್ಟಿನಲ್ಲಿ ನಾಸಾ (NASA) ಮತ್ತು ಸ್ಪೇಸ್ ಎಕ್ಸ್ (SpaceX ) ಸಿದ್ಧತೆ ನಡೆಸಿದೆ.

    ಅಮೆರಿಕದ ಫ್ಲೋರಿಡಾದ ಕೇಪ್ ಕೆನವೆರಲ್ ಬಾಹ್ಯಾಕಾಶ ನಿಲ್ದಾಣದಿಂದ‌ ಸ್ಪೇಸ್‌ ಎಕ್ಸ್ ಕ್ರ್ಯೂ-9 ಮಿಷನ್ ಪ್ರಾರಂಭಿಸಲು ಸಿದ್ಧವಾಗಿವೆ. ಭಾರತೀಯ ಕಾಲಮಾನ ರಾತ್ರಿ 10:47ಕ್ಕೆ ಉಡಾವಣೆಗೆ ಸಮಯ ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಮ್ಯಾಪ್‌ ತೋರಿಸಿ ಭಾರತ ವರ, ಇರಾನ್‌ ಶಾಪ ಎಂದ ಇಸ್ರೇಲ್‌ ಪ್ರಧಾನಿ ನೆತನ್ಯಾಹು

    ಈ ಮೊದಲು ಸೆ.26 ರಂದು ಉಡಾವಣೆಗೆ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಹೆಲೆನ್ ಚಂಡಮಾರುತದಿಂದ ಉಂಟಾದ ಪ್ರತಿಕೂಲ ಹವಾಮಾನದ ಕಾರಣ ಉಡಾವಣೆಯನ್ನು ಮುಂದೂಡಲಾಗಿತ್ತು. ಇದನ್ನೂ ಓದಿ: ಮತ್ತೆ ಸಿಎಂ ಆಸೆ ವ್ಯಕ್ತಪಡಿಸಿದ ಡಿಸಿಎಂ ಡಿಕೆಶಿ

    ಜೂನ್ ತಿಂಗಳಲ್ಲಿ 8 ದಿನಗಳ ಬಾಹ್ಯಾಕಾಶ ಯಾತ್ರೆ ತೆರಳಿದ್ದ ಇಬ್ಬರು ಗಗನಯಾತ್ರಿಗಳು ಬೋಯಿಂಗ್ ಸ್ಟಾರ್ ಲೈನರ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಬಾಹ್ಯಾಕಾಶದಲ್ಲೇ ಉಳಿದಿದ್ದಾರೆ.

     

  • ವಿಶ್ವದ ಮೊದಲ ಖಾಸಗಿ ಬಾಹ್ಯಕಾಶ ನಡಿಗೆ ಯಶಸ್ವಿ – ನಾಲ್ವರು ಗಗನಯಾತ್ರಿಗಳು ಭೂಮಿಗೆ ವಾಪಸ್

    ವಿಶ್ವದ ಮೊದಲ ಖಾಸಗಿ ಬಾಹ್ಯಕಾಶ ನಡಿಗೆ ಯಶಸ್ವಿ – ನಾಲ್ವರು ಗಗನಯಾತ್ರಿಗಳು ಭೂಮಿಗೆ ವಾಪಸ್

    ವಾಷಿಂಗ್ಟನ್‌: ವಿಶ್ವದ ಮೊದಲ ಖಾಸಗಿ ಬಾಹ್ಯಕಾಶ ನಡಿಗೆ (Private Spacewalk) ಯಶಸ್ವಿಯಾಗಿದೆ. ಪೊಲಾರಿಸ್ ಡಾನ್ (Polaris Dawn) ಯೋಜನೆಯಡಿ ಇತ್ತೀಚೆಗೆ ಬಾಹ್ಯಾಕಾಶಕ್ಕೆ ಹೋಗಿದ್ದ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಲ್ಯಾಂಡ್‌ ಆಗಿದ್ದಾರೆ.

    ಇಬ್ಬರು ನಾಸಾ ಪೈಲಟ್‌ಗಳು, ಒಬ್ಬ ಸ್ಪೇಸ್‌ಎಕ್ಸ್ (Space X) ಉದ್ಯೋಗಿ ಹಾಗೂ ಬಿಲಿಯನೇರ್ ಜರೇಡ್ ಐಸಾಕ್‌ಮನ್ ಈ ಖಾಸಗಿ ಬಾಹ್ಯಕಾಶ ನಡಿಗೆ ತಂಡದಲ್ಲಿದ್ದರು. ಇವರನ್ನು ಹೊತ್ತಿದ್ದ ನೌಕೆ ಯಶಸ್ವಿಯಾಗಿ ಮೆಕ್ಸಿಕೋ ಕೊಲ್ಲಿಯಲ್ಲಿ ಇಳಿದಿದೆ. ಭೂಮಿಯಿಂದ ಸುಮಾರು 740 ಕಿ.ಮೀ. ದೂರದಲ್ಲಿ ಯಶಸ್ವಿಯಾಗಿ ಬಾಹ್ಯಕಾಶ ನಡಿಗೆ ನಡೆದಿತ್ತು.  ಇದನ್ನೂ ಓದಿ: ವಿಶ್ವದ ಮೊದಲ ‘ಖಾಸಗಿ’ ಬಾಹ್ಯಾಕಾಶ ನಡಿಗೆ ಯಶಸ್ವಿ – ಅಂತರಿಕ್ಷದಲ್ಲಿ ಗಗನಯಾತ್ರಿಗಳ ಓಡಾಟ

    ಸಾಮಾನ್ಯವಾಗಿ ತರಬೇತಿ ಹೊಂದಿದ್ದ ಗಗನಯಾತ್ರಿಗಳನ್ನು ಮಾತ್ರ ಬಾಹ್ಯಕಾಶಕ್ಕೆ ಕಳುಹಿಸಿ ಕೊಡಲಾಗುತ್ತದೆ. ಆದರೆ ಸಾಮಾನ್ಯರೂ ಬಾಹ್ಯಕಾಶಕ್ಕೆ ಹೋಗುವ ಮೂಲಕ ಬಾಹ್ಯಕಾಶ ನಡಿಗೆ ಕೈಗೊಂಡ ಮೊದಲ ಖಾಸಗಿ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಬಿಲಿಯನೇರ್ ಜರೇಡ್ ಐಸಾಕ್‌ಮನ್ ಪಾತ್ರರಾಗಿದ್ದಾರೆ.


    ಸ್ಪೇಸ್‌ ಎಕ್ಸ್‌ ಮಾಲೀಕ ಎಲೋನ್‌ ಮಸ್ಕ್‌ (Elon Musk) ಎಕ್ಸ್‌ನಲ್ಲಿ ನಾಲ್ವರ ಫೋಟೋ ಹಾಕಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ 18 ವರ್ಷದ ಹಿಂದೆ ಫಾಲ್ಕನ್‌ ಫೈಟ್‌ ರಾಕೆಟ್‌ ಫೇಲ್‌ ಆದ ಸಂದರ್ಭದ ಫೋಟೋವನ್ನು ಅಪ್ಲೋಡ್‌ ಮಾಡಿದ್ದಾರೆ.

  • ಇಸ್ರೋ ಸಾಧನೆ – ಮರುಬಳಕೆ ಮಾಡಬಹುದಾದ ರಾಕೆಟ್ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ

    ಇಸ್ರೋ ಸಾಧನೆ – ಮರುಬಳಕೆ ಮಾಡಬಹುದಾದ ರಾಕೆಟ್ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ

    ಚಿತ್ರದುರ್ಗ/ನವದೆಹಲಿ: ಉಪಗ್ರಹವನ್ನು ಕಕ್ಷೆಗೆ ಸೇರಿಸಿ ಮರಳಿ ಭೂಮಿಗೆ ಲ್ಯಾಂಡ್ ಆಗುವ ರಾಕೆಟ್ (Rocket) ಅಭಿವೃದ್ಧಿ ಪಡಿಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಹತ್ವದ ಸಾಧನೆ ಮಾಡಿದೆ.

    ಭಾನುವಾರ ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ (ATR) ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ (RLV) ಲ್ಯಾಂಡಿಂಗ್ ಪರೀಕ್ಷೆ  ಯಶಸ್ವಿಯಾಗಿ ನಡೆದಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ, ಭಾರತ ಪ್ರಮುಖವಾದ ಮತ್ತೊಂದು ಸಾಧನೆಯನ್ನು ಮಾಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಜೊತೆಗೂಡಿ ಏಪ್ರಿಲ್ 2 ರಂದು ಮುಂಜಾನೆ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ ಆಟಾನಮಸ್ ಲ್ಯಾಂಡಿಂಗ್ ಮಿಷನ್ (RLV LVX) ಅನ್ನು ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದೆ.

    ಪರೀಕ್ಷೆ ಹೇಗಾಯ್ತು?
    ಭಾರತೀಯ ವಾಯುಪಡೆ ಚಿನೂಕ್ ಹೆಲಿಕಾಪ್ಟರ್ ಆರ್‌ಎಲ್‌ವಿ ಎತ್ತಿಕೊಂಡು ಬೆಳಗ್ಗೆ 7:10ರ ವೇಳೆಗೆ ಟೇಕ್ ಆಫ್ ಆಗಿದೆ. 4.5 ಕಿ.ಮೀ ಎತ್ತರದಲ್ಲಿ ಹೆಲಿಕಾಪ್ಟರ್ ಆರ್‌ಎಲ್‌ವಿಯನ್ನು ಬಿಡುಗಡೆ ಮಾಡಿದೆ. ಇಂಟಿಗ್ರೇಟೆಡ್ ನ್ಯಾವಿಗೇಷನ್, ಗೈಡೆನ್ಸ್ ಹಾಗೂ ಕಂಟ್ರೋಲ್ ಸಿಸ್ಟಮ್ ಅನ್ನು ಬಳಸಿಕೊಂಡು 7:40ರ ವೇಳೆಗೆ ಆರ್‌ಎಲ್‌ವಿ ಏರ್‌ಸ್ಟ್ರಿಪ್‌ನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ಇದನ್ನೂ ಓದಿ: ಇಟಲಿಯಲ್ಲಿ ಇಂಗ್ಲಿಷ್ ಭಾಷೆ ಬ್ಯಾನ್ – ಸಂವಹನ ನಡೆಸಿದರೆ ಭಾರೀ ದಂಡ

    ಒಂದು ವೇಳೆ ಬಾಹ್ಯಾಕಾಶದಿಂದ ರಾಕೆಟ್ ಬಂದರೆ ಯಾವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆಯೋ ಅಂಥದ್ದೇ ಪರಿಸ್ಥಿತಿಯಲ್ಲಿ ಮರು ಬಳಕೆ ಮಾಡಬಹುದಾದ ಉಡಾವಣಾ ವಾಹನದ ಸ್ವಾಯತ್ತ ಲ್ಯಾಂಡಿಂಗ್ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. ಅಂದರೆ ಮಾನವ ರಹಿತ ರಾಕೆಟ್, ಲ್ಯಾಂಡಿಂಗ್ ಹೈ ಸ್ಪೀಡ್ ಮತ್ತು ರಿಟರ್ನಿಂಗ್ ಸೇಮ್ ಪಾಥ್‌ನ ಸ್ಥಿತಿಗಳಲ್ಲಿ ಈ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. ಸ್ವಾಯತ್ತ ಲ್ಯಾಂಡಿಂಗ್ ಪರೀಕ್ಷೆಗೆ ಸ್ಥಳೀಯ ನ್ಯಾವಿಗೇಷನ್, ಉಪಕರಣಗಳು, ಸಂವೇದಕಗಳು ಸೇರಿದಂತೆ ಇತ್ಯಾದಿ ಸ್ಥಳೀಯ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗಿದೆ. ಈ ಎಲ್ಲಾ ವ್ಯವಸ್ಥೆಗಳನ್ನು ಇಸ್ರೋ ಅಭಿವೃದ್ಧಿಪಡಿಸಿದೆ.

    ಭಾರತೀಯ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಕನಸು ವಾಸ್ತವಕ್ಕೆ ಬರುವಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

    ಯೋಜನೆಗೆ ಕೈ ಹಾಕಿದ್ದು ಯಾಕೆ?
    ಪ್ರಸ್ತುತ ಇಸ್ರೋ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ರಾಕೆಟ್ ಮೂಲಕ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುತ್ತದೆ. ಆದರೆ ರಾಕೆಟ್ ಮರಳಿ ಬರುವುದಿಲ್ಲ. ಒಂದೊಂದೆ ಹಂತ ದಾಟುತ್ತಿದ್ದಂತೆ ಹೊತ್ತಿ ಉರಿದು ಬೀಳುತ್ತದೆ. ಒಂದು ರಾಕೆಟ್ ನಿರ್ಮಾಣಕ್ಕೆ ಕೋಟ್ಯಂತರ ರೂ. ವೆಚ್ಚವಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವದೆಲ್ಲೆಡೆ ಮರಳಿ ಭೂಮಿಗೆ ಲ್ಯಾಂಡ್ ಆಗುವ ರಾಕೆಟ್ ಅಭಿವೃದ್ಧಿ ಪಡಿಸಲಾಗುತ್ತದೆ. ಟೆಸ್ಲಾ ಕಂಪನಿಯ ಸಂಸ್ಥಾಪಕ, ಟ್ವಿಟ್ಟರ್ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿ ಈಗಾಗಲೇ ಮರುಬಳಕೆ ಮಾಡುವ ರಾಕೆಟ್ ಅಭಿವೃದ್ಧಿ ಪಡಿಸಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ಪ್ರಯೋಗ ನಡೆಸುತ್ತಿದೆ. ಇದನ್ನೂ ಓದಿ: ಮತ್ತೊಮ್ಮೆ ಬೂಸ್ಟರ್ ಡೋಸ್ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಸಲಹೆ

  • ರಷ್ಯಾದ ಮಹಿಳಾ ಗಗನಯಾತ್ರಿ ಸ್ಪೇಸ್ ಎಕ್ಸ್ ಮೂಲಕ ಬಾಹ್ಯಾಕಾಶಕ್ಕೆ

    ವಾಷಿಂಗ್ಟನ್: ಅಮೇರಿಕಾ ಹಾಗೂ ರಷ್ಯಾದ ಒಳ ಜಗಳ ನಿನ್ನೆ ಮೊನ್ನೆಯದಲ್ಲ. ಇತಿಹಾಸದ ಪುಟದಲ್ಲೂ ಬಲಿಷ್ಟ ರಾಷ್ಟ್ರಗಳ ಶೀತಲ ಸಮರದಬಗ್ಗೆ ಕೇಳುತ್ತಲೇ ಬಂದಿದ್ದೇವೆ. ಇದೀಗ ಅಮೇರಿಕಾದ ಸ್ಪೇಸ್ ಎಕ್ಸ್ ಕಂಪನಿ ರಷ್ಯಾದ ಮಹಿಳಾ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳಿಸುವ ಯೋಜನೆ ಮಾಡಿ ಆಶ್ಚರ್ಯ ಮೂಡಿಸಿದೆ

    ನಾಸಾ ಹಾಗೂ ರಷ್ಯಾದ ಸ್ಪೇಸ್ ಏಜೆನ್ಸಿ 2022ರ ಕ್ರ್ಯೂ ಡ್ರ್ಯಾಗನ್ ಒಪ್ಪಂದವನ್ನು ಮಾಡಿಕೊಂಡಿದ್ದು, ಇದರಲ್ಲಿ ಗಗನಯಾತ್ರಿಯನ್ನು ಉಡಾಯಿಸುವ ಯೋಜನೆ ನಡೆದಿದೆ. ಒಪ್ಪಂದದ ಪ್ರಕಾರ ಬಾಹ್ಯಾಕಾಶ ನೌಕೆಯಲ್ಲಿ ರಷ್ಯಾದ ಮೊದಲ ಮಹಿಳಾ ಗಗನಯಾತ್ರಿ ಅನ್ನಾ ಕಿಕಿನಾ ಪ್ರಯಾಣಿಸಲಿದ್ದಾರೆ.

    2022ರಲ್ಲಿ ಸ್ಪೇಸ್ ಎಕ್ಸ್ ಕ್ರ್ಯೂ-5 ಮಿಷನ್‌ನಲ್ಲಿ ಗಗನಯಾತ್ರಿಯನ್ನು ಉಡಾವಣೆ ಮಾಡುವ ವಿಷಯವನ್ನು ಸ್ಪೇಸ್ ಸ್ಟೇಶನ್ ಪ್ರೋಗ್ರಾಮ್ ಮ್ಯಾನೇಜರ್ ಜೋಯಲ್ ಮೊಂಟಲ್ಬಾನೋ ತಿಳಿಸಿದರು. 2025ರ ಹೊತ್ತಿಗೆ ಬಾಹ್ಯಾಕಾಶ ನಿರ್ವಹಣೆಯಲ್ಲಿ ರಷ್ಯಾ ಹಾಗೂ ಅಮೆರಿಕ ಜಂಟಿಯಾಗಿ ಕಾರ್ಯ ನಿರ್ವಹಿಸುವುದರ ಬಗ್ಗೆ ಸುಳಿವನ್ನೂ ನೀಡಿದ್ದಾರೆ. ಇದನ್ನೂ ಓದಿ: ಆಕಾಶದಲ್ಲಿ ಅಚ್ಚರಿ – ಏನಿದು ಸ್ಟಾರ್‌ಲಿಂಕ್‌ ಉಪಗ್ರಹಗಳು? ದರ ಎಷ್ಟು? ನೆಟ್‌ ಹೇಗೆ ಸಿಗುತ್ತೆ?

    ವಾಷಿಂಗ್ಟನ್ ಹಾಗೂ ಮಾಸ್ಕೋ ನಡುವಿನ ಒತ್ತಡದ ಸಂಬಂಧ ಬಾಹ್ಯಾಕಾಶಕ್ಕೆ ವಿಸ್ತರಿಸಿದ್ದರೂ, ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್ ಮಾಸ್ಕೋಗೆ ಭೇಟಿ ನೀಡಿದಾಗ 2022ರ ಕ್ರ್ಯೂ ಡ್ರ್ಯಾಗನ್ ಒಪ್ಪಂದದ ಬಗ್ಗೆ ಯೋಜನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

    ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್‌ನಲ್ಲಿರುವ ಏಕೈಕ ಮಹಿಳಾ ಗಗನಯಾತ್ರಿ ಅನ್ನಾ ಕಿಕಿನಾ ಅವರನ್ನು ಈ ಯೋಜನೆಗೆ ಆಯ್ಕೆ ಮಾಡಿದೆ. ಅವರು ಈಗಾಗಲೇ ಈ ಯೋಜನೆಗಾಗಿ ಸ್ಪೇಸ್ ಎಕ್ಸ್‌ನಲ್ಲಿ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಹಾಗೂ ಕ್ರ್ಯೂ-5 ಮಿಷನ್‌ನಲ್ಲಿ ಗಗನಯಾತ್ರಿಗಳಾದ ನಿಕೋಲ್ ನಮ್ ಹಾಗೂ ಜೋಶ್ ಕಸಾಡಾ ಅವರೊಂದಿಗೆ ಬಾಹ್ಯಾಕಾಶ ಪ್ರಯಾಣ ಬೆಳೆಸಲಿದ್ದಾರೆ ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: 12 ದಿನಗಳ ಬಾಹ್ಯಾಕಾಶ ಪ್ರಯಾಣದಿಂದ ಮರಳಿದ ಜಪಾನ್ ವ್ಯಕ್ತಿ!

    ದಶಕಗಳ ಹಿಂದೆ ಅಮೆರಿಕ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ರಷ್ಯಾವನ್ನು ಅವಲಂಬಿಸಿತ್ತು. ಇತ್ತೀಚೆಗೆ ಅಮೇರಿಕಾ ಸ್ಪೇಸ್ ಎಕ್ಸ್ ಕಂಪನಿಯ ಮೂಲಕ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿದೆ.