Tag: ಸ್ಪೆಷಲ್ ಶೋ

  • ಸಿನಿಮಾ ಶಿವರಾತ್ರಿ : ಬೆಂಗಳೂರಿನಲ್ಲಿ ‘ರಾಜಕುಮಾರ’, ಹೈದರಾಬಾದ್ ನಲ್ಲಿ ‘ಕಾಂತಾರ’

    ಸಿನಿಮಾ ಶಿವರಾತ್ರಿ : ಬೆಂಗಳೂರಿನಲ್ಲಿ ‘ರಾಜಕುಮಾರ’, ಹೈದರಾಬಾದ್ ನಲ್ಲಿ ‘ಕಾಂತಾರ’

    ನಾಳೆ ಮಧ್ಯರಾತ್ರಿ ಕನ್ನಡದ ಎರಡು ಸಿನಿಮಾಗಳು ಶಿವರಾತ್ರಿಗಾಗಿ (Shivratri) ಕಾಯುತ್ತಿವೆ. ಈ ಬಾರಿಯ ಜಾಗರಣೆಯನ್ನು ಸಿನಿಮಾ ನೋಡುವ ಮೂಲಕ ಕಳೆಯಲಿದ್ದಾರೆ ರಿಷಬ್ (Rishabh Shetty) ಮತ್ತು ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿಮಾನಿಗಳು. ಹೈದರಾಬಾದ್ ನ ಸಪ್ತಗಿರಿ ಚಿತ್ರಮಂದಿರದಲ್ಲಿ ಫೆ.19 ರಂದು ಬೆಳಗ್ಗೆ 12 ಗಂಟೆಗೆ ಮತ್ತು 3 ಗಂಟೆಗೆ ಕಾಂತಾರ (Kantara) ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈಗಾಗಲೇ ನೂರಾರು ಕೋಟಿ ಗಳಿಸಿರುವ ಈ ಸಿನಿಮಾ, ಕಿರುತೆರೆಯಲ್ಲೂ ಪ್ರಸಾರವಾಗಿದೆ. ಓಟಿಟಿಯಲ್ಲೂ ಇದೆ. ಆದರೂ, ಶಿವರಾತ್ರಿಗಾಗಿ ಸ್ಪೆಷಲ್ ಶೋ ಆಯೋಜನೆ ಮಾಡಲಾಗಿದೆ.

    ಪುನೀತ್ ರಾಜಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾಗಳಲ್ಲಿ ‘ರಾಜಕುಮಾರ’ (Rajkumar) ಕೂಡ ಒಂದು. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಹಲವಾರು ದಾಖಲೆಗಳನ್ನು ಬರೆದಿದೆ. ಶತದಿನೋತ್ಸವದ ಜೊತೆಗೆ ಕನ್ನಡ ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ 75 ಕೋಟಿ ರೂಪಾಯಿ ಬಾಚಿದ ಸಿನಿಮಾ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಶಿವರಾತ್ರಿಗಾಗಿ ಈ ಸಿನಿಮಾವನ್ನು ಮತ್ತೆ ಮರುಬಿಡುಗಡೆ ಮಾಡಲಾಗುತ್ತಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ಶಿವರಾತ್ರಿಯನ್ನು ವಿಶೇಷವಾಗಿ ಆಚರಿಸುವುದಕ್ಕಾಗಿಯೇ ಫೆಬ್ರವರಿ 19ರಂದು ಬೆಂಗಳೂರಿನ ಪೀಣ್ಯ ಏರಿಯಾದ ಭಾರತಿ ಚಿತ್ರಮಂದಿರದಲ್ಲಿ ಮಧ್ಯರಾತ್ರಿ 12.30ಕ್ಕೆ ಈ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಶಿವರಾತ್ರಿಯ ಜಾಗರಣೆ ಮುಗಿಸಿಕೊಂಡು, ರಾಜಕುಮಾರ ಸಿನಿಮಾ ನೋಡಬಹುದು ಎಂದಿದ್ದಾರೆ ಆಯೋಜಕರು.

    ಶಿವರಾತ್ರಿಗಾಗಿ ನಗೆಜಾಗರಣೆ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ವಿಶೇಷವಾಗಿ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸುವ ಉದ್ದೇಶವೂ ಇದರ ಹಿಂದಿದೆಯಂತೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಅನ್ನು ಥಿಯೇಟರ್ ಮಾಲೀಕರು ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಗಂಧದ ಗುಡಿ’ ಬೆಳ್ಳಂ ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ

    ‘ಗಂಧದ ಗುಡಿ’ ಬೆಳ್ಳಂ ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ

    ಪುನೀತ್ ರಾಜ್ ಕುಮಾರ್ (Puneeth Raj Kumar) ಕನಸಿನ ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ಇಂದು ಬಿಡುಗಡೆ ಆಗಿದೆ. ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ ಆಯೋಜನೆಗೊಂಡಿದ್ದವು. ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಿಸಿತು.

    ಇಂದು ಬೆಳಗ್ಗೆ ಹತ್ತು ಗಂಟೆಯೊಳಗೆ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜನೆ ಮಾಡಿದ್ದು, ಬೆಳಗಿನ ಜಾವವೇ 50 ಬಾರಿ ಈ ಸಿನಿಮಾ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ವಿತರಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ನೂತನ ದಾಖಲೆ ಎಂದೂ ಅವರು ತಿಳಿಸಿದ್ದಾರೆ. ಬೆಳಗಿನ ಜಾವ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ. ಇದನ್ನೂ ಓದಿ: ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ

    ನಿನ್ನೆ ರಾತ್ರಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಪೇಯ್ಡ್ ಪ್ರೀಮಿಯರ್ (Special Show) ಆಯೋಜನೆ ಮಾಡಲಾಗಿತ್ತು. ನಲವತ್ತಕ್ಕೂ ಹೆಚ್ಚು ಪೇಯ್ಡ್ ಪ್ರೀಮಿಯರ್ ಪ್ರದರ್ಶನ ನಡೆದಿರುವುದು ವಿಶೇಷ. ಪೇಯ್ಡ್ ಪ್ರೀಮಿಯರ್ ಶೋ ಆಯೋಜನೆ ಆಗುತ್ತಿದ್ದಂತೆಯೇ ಅಭಿಮಾನಿಗಳು ಟಿಕೆಟ್ ಅನ್ನು ಮುಗಿಬಿದ್ದು ಖರೀದಿಸಿದ್ದರು. ಬಹುತೇಕ ಚಿತ್ರಮಂದಿರಗಳ ಮುಂದೆ ಹೌಸ್ ಫುಲ್ ಬೋರ್ಡ್ ಹಾಕಲಾಗಿತ್ತು. ಪೇಯ್ಡ್ ಪ್ರೀಮಿಯರ್ ಮೂಲಕವೇ 25 ಲಕ್ಷ ರೂಪಾಯಿಗೂ ಅಧಿಕ ಹಣ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದೆ ಎನ್ನುವ ಮಾಹಿತಿಯೂ ಇದೆ.

    ಪುನೀತ್ ರಾಜ್‍ಕುಮಾರ್ ಗಂಧದ ಗುಡಿ (Gandhad Gudi) ಹೆಸರಿನಲ್ಲಿ ಡಾಕ್ಯುಮೆಂಟರಿ ಮಾಡಿದ್ದಾರೆ ಅಂದಾಗ, ಕುತೂಹಲಕ್ಕಿಂತ ಅನುಮಾನಿಸಿದವರೆ ಹೆಚ್ಚು. ಓಟಿಟಿ ಮೂಲಕ ಜಗತ್ತಿನ ಸಿನಿಮಾಗಳು ನಮ್ಮುಂದಿರುವಾಗ, ಡಿಸ್ಕವರಿ ಚಾನೆಲ್ ಗಳು ನಮ್ಮ ಬೆರಳ ತುದಿಯಲ್ಲೇ ನಲಿಯುತ್ತಿರುವಾಗ, ಅದಕ್ಕಿಂತ ಅಪ್ಪು ಇನ್ನೇನು ಮಾಡುವುದಕ್ಕೆ ಸಾಧ್ಯ? ಅಂತ ಅನಿಸಿದ್ದೂ ಇದೆ. ಪುನೀತ್ ಡ್ಯಾನ್ಸ್, ಪುನೀತ್ ಡೈಲಾಗ್, ಪುನೀತ್ ನಟನೆ, ಪುನೀತ್ ನಗುವನ್ನು ಬೆಳ್ಳಿ ಪರದೆಯಲ್ಲಿ ನೋಡಿ, ಕಣ್ತುಂಬಿಕೊಂಡಿರುವ ಅಭಿಮಾನಿಗಳು, ಇದ್ಯಾವುದೂ ಇಲ್ಲದ ಕಾಡು ಮೇಡುಗಳನ್ನು ನೋಡುವುದಕ್ಕೆ ಇಷ್ಟ ಪಡುತ್ತಾರಾ ಅಂತ ಚರ್ಚೆ ಮಾಡಿದ್ದೂ ಇದೆ. ಆದರೆ, ಅದೆಲ್ಲದರ ಆಚೆ ಗಂಧದ ಗುಡಿ ಹೊಸ ಅನುಭವವನ್ನು ನೀಡುತ್ತದೆ. ಸಿನಿಮಾ ಕೊಡುವ ಥ್ರಿಲ್ ಗಿಂತ ಅಪ್ಪು ಇಲ್ಲಿ ಹೊಸ ಅನುಭೂತಿಯನ್ನು ಕಟ್ಟಿ ಕೊಡ ಯತಿ ಡೆತ್ ಕಟ್ಟಿ ಕೊಡುತ್ತಾರೆ. ಅವರು ಬೆಟ್ಟ ಹತ್ತಿದರೇ ನಾವೇ ಬೆಟ್ಟ ಹತ್ತಿದಷ್ಟು ಖುಷಿ, ಅವರು ಕಾಡಲ್ಲಿ ನಡೆದು ಹೊರಟರೇ ಅವರನ್ನು ನಾವೇ ಹಿಂಬಾಲಿಸುವಂತಹ ಅನುಭವ, ನಡು ನಡುವೆ ಅಪ್ಪು ಮಾತು, ತಮಾಷೆ, ಭಯ ಎಲ್ಲವೂ ಇಷ್ಟ ಇಷ್ಟ.

    Live Tv
    [brid partner=56869869 player=32851 video=960834 autoplay=true]

  • ಸಂಸದರಿಗೆ, ಸರಕಾರಿ ಅಧಿಕಾರಿಗಳಿಗಾಗಿ ‘ವಿಕ್ರಾಂತ್ ರೋಣ’ ಸ್ಪೆಷಲ್ ಶೋ

    ಸಂಸದರಿಗೆ, ಸರಕಾರಿ ಅಧಿಕಾರಿಗಳಿಗಾಗಿ ‘ವಿಕ್ರಾಂತ್ ರೋಣ’ ಸ್ಪೆಷಲ್ ಶೋ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಇದೇ ಶುಕ್ರವಾರ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ಕೆಲವು ಕಡೆ ಸ್ಪೆಷಲ್ ಶೋ ಅನ್ನು ಆಯೋಜನೆ ಮಾಡಿದೆ ಚಿತ್ರತಂಡ. ನವ ದೆಹಲಿಯಲ್ಲಿ ಸಂಸದರಿಗೆ ಮತ್ತು ಸರಕಾರಿ ಅಧಿಕಾರಿಗಳಿಗೆ ಸ್ಪೆಷಲ್ ಶೋ ಆಯೋಜನೆ ಮಾಡಿದ್ದು, ಈ ಕುರಿತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟ್ವಿಟ್ ಮಾಡಿದ್ದಾರೆ. ಸಿನಿಮಾ ನೋಡುವುದಕ್ಕಾಗಿ ಕುತೂಹಲದಿಂದ ಕಾಯುತ್ತಿರುವುದಾಗಿ ಬರೆದುಕೊಂಡಿದ್ದಾರೆ.

    ವಿಕ್ರಾಂತ್ ರೋಣ ಸಿನಿಮಾ ಪ್ರಪಂಚದ 27ದೇಶಗಳಲ್ಲಿ ಪ್ರಿವ್ಯೂ ಆಗುತ್ತಿದೆ. ಜೊತೆಗೆ ದುಬೈನಲ್ಲಿ 5 ಭಾಷೆಯಲ್ಲೂ ಪ್ರದರ್ಶನವಾಗಲಿದೆ. ನೇಪಾಳ, ಪಾಕಿಸ್ತಾನದಲ್ಲೂ ವಿಕ್ರಾಂತ್‌ ರೋಣ ರಿಲೀಸಾಗುವ ಸಾಧ್ಯತೆಯಿದೆ. ಪ್ರಪಂಚದಾದ್ಯಂತ 3200ರಿಂದ 3500 ಚಿತ್ರಮಂದಿಗಳಲ್ಲಿ ವಿಕ್ರಾಂತ್ ರೋಣ ರಿಲೀಸಾಗುತ್ತಿದ್ದು, ಕರ್ನಾಟಕದಲ್ಲೇ 400ರಿಂದ 420 ಥೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಇದನ್ನೂ ಓದಿ:`ವಿಕ್ರಾಂತ್ ರೋಣ’ ಚಿತ್ರದ ನಂತರ ಹೊಸ ಸಿನಿಮಾಗೆ ಕಿಚ್ಚ ಸುದೀಪ್ ಗ್ರೀನ್ ಸಿಗ್ನಲ್

    ಕರ್ನಾಟಕಕ್ಕಿಂತ ತೆಲುಗು ರಾಜ್ಯಗಳಲ್ಲಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ನಿರ್ಮಾಪಕ ಜಾಕ್ ಮಂಜು ಹೇಳಿದ್ದು, ಈಗಾಗಲೇ ಬಹುತೇಕ ಕಡೆಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬಾಲಿವುಡ್‌ನಲ್ಲಿ 900 ಚಿತ್ರಮಂದಿರ, ಟಾಲಿವುಡ್‌ನಲ್ಲಿ 350ಕ್ಕೂ ಹೆಚ್ಚು ಥಿಯೇಟರ್ ಅಲ್ಲದೆ ವಿದೇಶಗಳಲ್ಲಿ 800ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ವಿಕ್ರಾಂತ್‌ರೋಣ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]