Tag: ಸ್ಪೂರ್ತಿ ಗೌಡ

  • ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ- ಸ್ಪೂರ್ತಿ ಗೌಡ ಲವ್ವಿ ಡವ್ವಿ

    ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ- ಸ್ಪೂರ್ತಿ ಗೌಡ ಲವ್ವಿ ಡವ್ವಿ

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್ ಈಗ ಓಟಿಟಿಯಲ್ಲಿ ಸದ್ದು ಮಾಡುತ್ತಿದೆ. ಪ್ರತಿ ಸೀಸನ್‌ನಲ್ಲಿ ಸ್ಪರ್ಧಿಗಳ ಲವ್ವಿ ಡವ್ವಿ ಸ್ಟೋರಿ ಇದ್ದೆ ಇರುತ್ತದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಓಟಿಟಿ ಮನೆಯ ರಂಗು ಹೆಚ್ಚಾಗುತ್ತಿದೆ. ಸದ್ಯ ಬಿಗ್ ಬಾಸ್ ಮನೆಯ ಪ್ರೇಮ ಪಕ್ಷಿಗಳಾಗಿ ರಾಕೇಶ್ ಅಡಿಗ ಮತ್ತು ಸ್ಪೂರ್ತಿ ಗೌಡ ಹೈಲೈಟ್ ಆಗುತ್ತಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಈವೆರೆಗೆ ಸಾಕಷ್ಟು ಪ್ರೇಮ ಕಥೆಗಳು ಹುಟ್ಟಿಕೊಂಡಿವೆ. ಈ ಸೀಸನ್‌ನಲ್ಲಿ ರಾಕೇಶ್ ಅಡಿಗ ಮತ್ತು ಸ್ಪೂರ್ತಿ ಗೌಡ ಒಟ್ಟಾಗಿ ಕಾಣಿಸಿಕೊಳ್ಳುತ್ತಾ ಹೈಲೈಟ್ ಆಗ್ತಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ರಾಕೇಶ್ ಅವರ ಕೈಹಿಡಿದುಕೊಂಡು ಭವಿಷ್ಯ ಹೇಳುವುದಾಗಿ ಹೇಳಿದರು ಸ್ಫೂರ್ತಿ ಗೌಡ. ದುಡ್ಡು ಎಷ್ಟೇ ಬಂದರೂ ಅರ್ಧಂಬರ್ಧ ಬರುತ್ತದೆ ಎಂದು ಮಾತು ಆರಂಭಿಸಿದರು. ನಂತರ ಅದೂ ಇದು ಎಂದು ಕಥೆ ಹೇಳೋಕೆ ಶುರು ಮಾಡಿದರು. ಇದನ್ನು ರಾಕೇಶ್ ಹಾಗೂ ರೂಪೇಶ್ ಆಡಿಕೊಂಡು ನಕ್ಕರು.

    ನಂತರ ರಾಕೇಶ್ ಅವರು ಸ್ಫೂರ್ತಿ ಅವರ ಕೈ ಹಿಡಿದುಕೊಂಡು ಭವಿಷ್ಯ ನುಡಿಯುವುದಾಗಿ ಹೇಳಿದರು. ನಿಮಗೆ ಬಿಗ್ ಬಾಸ್ ಮನೆಯ ಮೇಲೆ ಲವ್ ಆಗುತ್ತದೆ. ಅವರು ನಿಮ್ಮ ಕೈ ನೋಡುತ್ತಿರುತ್ತಾರೆ ಎಂದರು ರಾಕೇಶ್. ಅವರು ಫ್ಲರ್ಟ್ ಮಾಡಿದ್ದನ್ನು ನೋಡಿ ಸ್ಫೂರ್ತಿ ನಕ್ಕರು. ಇದನ್ನೂ ಓದಿ:`ರಾಕಿ ಭಾಯ್’ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ

    ಇದರ ಜೊತೆಗೆ ಮತ್ತೊಂದು ಘಟನೆ ವೀಕ್ಷಕರ ಗಮನ ಸೆಳೆದಿದೆ. ನಿಮಗೆ ಯಾರ ಮೇಲಾದರೂ ಲವ್ ಆದರೆ ಹೇಳ್ತೀರಾ ಎಂದು ಸ್ಫೂರ್ತಿಗೆ ಪ್ರಶ್ನೆ ಮಾಡಿದರು ರಾಕೇಶ್. ನಾನಾಗಿ ಯಾರಿಗೂ ಪ್ರಪೋಸ್ ಮಾಡಲ್ಲ. ಹುಡುಗನೇ ನನ್ನ ಬಳಿ ಬಂದು ಪ್ರೀತಿ ಹೇಳಿಕೊಳ್ಳಬೇಕು. ಆ ರೀತಿ ಮಾಡ್ತೀನಿ ಎಂದರು ಸ್ಫೂರ್ತಿ. ನೀನು ಟಿಪಿಕಲ್ ಹುಡುಗಿ ತರ ಆಡ್ತೀರಲ್ಲ. ಲವ್ ಆದ್ರೆ ಲವ್ ಆಗಿದೆ ಎಂದು ಹೇಳಿಕೊಳ್ಳಬೇಕು. ಅಟ್ಲೀಸ್ಟ್ ಇಷ್ಟ ಇದೆ ಎಂದ್ರೆ ಇಷ್ಟ ಇದೆ ಅಂತ ಹೇಳಿ ಎಂದರು ರಾಕೇಶ್. ಇಲ್ಲಿ ಯಾರೂ ಇಷ್ಟ ಆಗಿಲ್ಲ. ಮನೆ ಹೊರಗೆ ಹೋಗಿ ಯಾರಾದರೂ ಇಷ್ಟ ಆದರೆ, ಇಷ್ಟ ಆಗಿದೆ ಅಂತ ಹೇಳ್ತೀನಿ ಎಂದರು. ಇಬ್ಬರ ನಡುವೆ ಏನೋ ಶುರುವಾಗುವ ಸೂಚನೆ ಸಿಗುತ್ತಿದೆ ಎಂದು ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡೌವ್ ರಾಣಿ ಎಂದಿದ್ದಕ್ಕೆ ಸೋನು ಗೌಡಗೆ ಸ್ಪೂರ್ತಿ ಗೌಡ ಕ್ಲಾಸ್

    ಡೌವ್ ರಾಣಿ ಎಂದಿದ್ದಕ್ಕೆ ಸೋನು ಗೌಡಗೆ ಸ್ಪೂರ್ತಿ ಗೌಡ ಕ್ಲಾಸ್

    ಬಿಗ್ ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿ ಎಂಟ್ರಿ ಕೊಡುತ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಓಟಿಟಿ ಮೂಲಕ 16 ಸ್ಪರ್ಧಿಗಳು ಸದ್ದು ಮಾಡ್ತಿದ್ದಾರೆ. ಈಗ ಶೋ ಶುರುವಾಗಿ ಮೂರೇ ದಿನಕ್ಕೆ ಬಿಗ್ ಬಾಸ್ ಮನೆ ರಣರಂಗವಾಗಿದೆ. ಸೋನು ಗೌಡ ಮತ್ತು ಸ್ಪೂರ್ತಿ ಗೌಡ ಮಾತಿನ ಜಟಾಪಟಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ.

    ಕಿರುತೆರೆಯ ದೊಡ್ಡ ಮನೆಯಲ್ಲಿ ಮೊದಲ ಜಗಳ ಶುರುವಾಗಿದೆ. ಸೋನು ಗೌಡ ಮತ್ತು ಸ್ಪೂರ್ತಿ ಗೌಡ ಮಾತಿನ ಚಕಮಕಿ ಜೋರಾಗಿದ್ದು, ಮನೆಯ ವಾತಾವರಣವೇ ಅಲ್ಲೋಲ್ಲ ಕಲ್ಲೋಲವಾಗಿದೆ. ಡೌವ್ ರಾಣಿ ಎಂದಿದ್ದಕ್ಕೆ ಸೋನು ಗೌಡಗೆ ಸ್ಪೂರ್ತಿ ಗೌಡ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಮಲತಂದೆಯ ಅಸಲಿ ಮುಖವಾಡ ಬಿಚ್ಚಿಟ್ಟ ನಟಿ ಸಾನ್ಯ ಅಯ್ಯರ್: ಯುವನಟಿಯ ಬದುಕಿನಲ್ಲಿ ಇದೆಂಥ ಬಿರುಗಾಳಿ?

    ಸ್ಪೂರ್ತಿ ಗೌಡ ಮೇಕಪ್ ಮಾಡುತ್ತಿರುವುದನ್ನು ನೋಡಿದ ಸೋನು ಗೌಡ, ಮೇಕಪ್ ಬಗ್ಗೆ ಒಂದಷ್ಟು ಮಾತನಾಡುತ್ತಾರೆ. ಆಗ ನನಗೆ ಮೇಕಪ್ ಗೊತ್ತಿಲ್ಲ ಎಂದ ಸ್ಪೂರ್ತಿ ಗೌಡಗೆ, ಸೋನು ಗೌಡ ಡವ್ ರಾಣಿ ಎಲ್ಲಾ ಗೊತ್ತಿದ್ದು, ಏನು ಗೊತ್ತಿಲ್ಲದ ಹಾಗೆ ಡವ್ ಮಾಡ್ತಿಯಾ ಎನ್ನುತ್ತಾರೆ. ಇದೇ ಮಾತುಗಳು ಇವರ ಜಗಳಕ್ಕೆ ಕಾರಣವಾಗಿವೆ. ಡವ್ ರಾಣಿ ಎನ್ನುವ ಪದ ಬಳಸಿದ್ದಕ್ಕೆ ಸ್ಪೂರ್ತಿ ಗೌಡ ಸಿಟ್ಟಾಗುತ್ತಾರೆ. ಆ ರೀತಿ ಮಾತನಾಡಬೇಡ ಎಂದು ಸಿಟ್ಟಾಗುತ್ತಾರೆ. ಇದೀಗ ಈ ವಿಚಾರವೇ ಜಗಳಕ್ಕೆ ಕಾರಣವಾಗಿದೆ. ಒಬ್ಬರಿಗೊಬ್ಬರು ಮಾತಿನ ಚಾಟಿ ಬೀಸಿದ್ದಾರೆ. ಇದಾದ ಬಳಿಕ ಒಬ್ಬರಿಗೊಬ್ಬರು ಮಾತನಾಡದೇ, ಮುನಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜನ ನನ್ನ ತಾಯಿಯ ಸಾವಿಗೆ ನಾನೇ ಕಾರಣ ಅಂದ್ರು: ಅಮ್ಮನ ನೆನೆದು ಸ್ಪೂರ್ತಿ ಗೌಡ ಭಾವುಕ

    ಜನ ನನ್ನ ತಾಯಿಯ ಸಾವಿಗೆ ನಾನೇ ಕಾರಣ ಅಂದ್ರು: ಅಮ್ಮನ ನೆನೆದು ಸ್ಪೂರ್ತಿ ಗೌಡ ಭಾವುಕ

    ಬಿಗ್‌  ಬಾಸ್ ಒಟಿಟಿ ಅಲೆ ಜೋರಾಗಿದೆ. ಯಾರೆಲ್ಲಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬುದು ಈಗಾಗಲೇ ರಿವೀಲ್ ಕೂಡ ಆಗಿದೆ. ಸದ್ಯ ಬಿಗ್ ಬಾಸ್ ಒಟಿಟಿಯ ಪ್ರೋಮೋವೊಂದರಲ್ಲಿ ನಟಿ ಸ್ಪೂರ್ತಿ ಗೌಡ ಮಾತು ಸದ್ದು ಮಾಡ್ತಿದೆ. ಜನ ನನ್ನ ತಾಯಿ ಸಾವಿಗೆ ನಾನೇ ಕಾರಣ ಎಂದು ದೂಷಿಸಿರುವ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

    ರಿಯಾಲಿಟಿ ಶೋ, ಜತೆ ಸಾಕಷ್ಟು ಸಿರೀಯಲ್‌ನಲ್ಲಿ ಕಾಣಿಸಿಕೊಂಡಿದ್ದ ಮಲೆನಾಡಿನ ಚೆಲುವೆ ಸ್ಪೂರ್ತಿ ಗೌಡ ಇದೀಗ ಬಿಗ್ ಬಾಸ್ ಒಟಿಟಿನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಜತೆ ತೆಲುಗಿನ ಸೀರಿಯಲ್‌ನಲ್ಲೂ ಸ್ಪೂರ್ತಿ ಗುರುತಿಸಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಕೊಡಲಾಗಿದೆ. `ನಾನು ಯಾರು’ ಎಂಬ ಟಾಸ್ಕ್‌ನಲ್ಲಿ ಸ್ಪರ್ಧಿಗಳು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ನಟಿ ಸ್ಪೂರ್ತಿ ತನ್ನ ತಾಯಿಯ ಸಾವಿಗೆ ನಾನು ಕಾರಣ ಎಂದು ಸಮಾಜ ದೂಷಿಸಿರುವುದರ ಬಗ್ಗೆ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ನಾನು ಸ್ಮೋಕ್ ಮಾಡ್ತೀನಿ, ಅದರಲ್ಲಿ ತಪ್ಪೇನಿದೆ? ಬಿಗ್ ಬಾಸ್‌ನಲ್ಲಿ ಸೋನು ಗೌಡ ಬೋಲ್ಡ್ ಮಾತು

    ಸ್ಪೂರ್ತಿ ಗೌಡ ಅವರ ತಾಯಿ ಕಳೆದ ವರ್ಷ ನಿಧನರಾಗಿದ್ದರು. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಬಿಗ್‌ ಬಾಸ್‌ ಮನೆಯಲ್ಲಿ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. ನನ್ನ ತಾಯಿಗೆ ಥೈರಾಯ್ಡ್ ಕ್ಯಾನ್ಸರ್ ಇತ್ತು. ಜನ ನನ್ನ ತಾಯಿಯ ಸಾವಿಗೆ ನಾನೇ ಕಾರಣ ಎಂದು ಹೇಳುತ್ತಿದ್ದರು. ಜನ ತನ್ನನ್ನು ದೂಷಿಸಿರುವುದರ ಬಗ್ಗೆ ನೆನೆದು ಸ್ಪೂರ್ತಿ ಗೌಡ ಈ ವೇಳೆ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]