Tag: ಸ್ಪೂನ್ಸ್

  • ಹೊಟ್ಟೆಯಲ್ಲಿತ್ತು 8 ಸ್ಪೂನ್ಸ್, 2 ಸ್ಕ್ರೂ ಡ್ರೈವರ್, ಚಾಕು!

    ಹೊಟ್ಟೆಯಲ್ಲಿತ್ತು 8 ಸ್ಪೂನ್ಸ್, 2 ಸ್ಕ್ರೂ ಡ್ರೈವರ್, ಚಾಕು!

    ಶಿಮ್ಲಾ: ಮನುಷ್ಯನೊಬ್ಬನ ಹೊಟ್ಟೆಯೊಳಗೆ 8 ಸ್ಪೂನ್ಸ್ ಮತ್ತು 2 ಸ್ಕ್ರೂ ಡ್ರೈವರ್, 2 ಟೂತ್‍ಬ್ರೆಶ್ ಮತ್ತು ಚಾಕುವನ್ನು ನೋಡಿದ ಡಾಕ್ಟರ್‍ಗಳು ಶಾಕ್ ಆಗಿದ್ದಾರೆ.

    ಈ ಘಟನೆ ಮಂಡಿ ಎಂಬ ನಗರದಲ್ಲಿ ನಡೆದಿದೆ. ಇಲ್ಲಿನ ಕರ್ನ್ ಸೇನ್ ಎಂಬ 35 ವರ್ಷದ ವ್ಯಕ್ತಿಯು ಅಡುಗೆ ಮನೆಯಲ್ಲಿ ಇರಬೇಕಾದ ಸ್ಪೂನ್ಸ್, ಸ್ಕ್ರೂ ಡ್ರೈವರ್, ಟೂತ್‍ಬ್ರೆಶ್ ಮತ್ತು ಚಾಕು ಎಲ್ಲಾ ವಸ್ತುಗಳನ್ನು ಹೊಟ್ಟೆಯಲ್ಲೇ ಇಟ್ಟಕೊಂಡಿದ್ದಾನೆ.

    ಕೆಲ ದಿನಗಳ ಹಿಂದೆ ಕರ್ನ್ ಸೇನ್ ಹೊಟ್ಟೆಯಲ್ಲಿ ಹುಣ್ಣಿದೆ ಎಂದು ಹೇಳಿದ್ದನು. ಇದರಿಂದ ಮನೆಯವರು ಅವನನ್ನು ಸುಂದರ್ ನಗರದ ಅಸ್ಪತ್ರೆಗೆ ಕೆರದುಕೊಂಡು ಬಂದಿದ್ದಾರೆ. ಪ್ರಾಥಮಿಕ ಪರೀಕ್ಷೆಯ ನಂತರ ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ಅಸ್ಪತ್ರೆಗೆ ಕಳುಹಿಸಲಾಗಿದೆ.

    ಇಲ್ಲಿ ಅವರಿಗೆ ಎಕ್ಸ್-ರೇ ಮಾಡಲಾಗಿದೆ. ಈ ವೇಳೆ ಅವರ ಹೊಟ್ಟೆಯಲ್ಲಿ ಹಲವಾರು ವಸ್ತುಗಳು ಇರುವುದು ಕಂಡು ಬಂದಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡ ಮೂರು ಜನ ವೈದ್ಯರ ತಂಡ 4 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಹೊಟ್ಟೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊರಕ್ಕೆ ತೆಗೆದಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಡಾಕ್ಟರ್, ಇದು ತಂಬ ಅಪರೂಪದ ಪ್ರಕರಣ ಎಕ್ಸ್-ರೇ ಯಲ್ಲಿ ಹೊಟ್ಟೆಯಲ್ಲಿ ಹಲವಾರು ವಸ್ತುಗಳು ಇರುವುದು ಕಂಡುಬಂದ ತಕ್ಷಣ ಶಸ್ತ್ರಚಿಕಿತ್ಸೆ ಮಾಡಿ ಹೊರಕ್ಕೆ ತೆಗೆದಿದ್ದೇವೆ. ಈ ರೋಗಿಯು ಮಾನಸಿಕ ಅಸ್ವಸ್ಥನಾಗಿದ್ದಾನೆ. ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ.