ತಾಯ್ತನದ ಖುಷಿಯಲ್ಲಿದ್ದ ದೀಪಿಕಾ ಪಡುಕೋಣೆ (Deepika Padukone) ಸಿನಿಮಾ ರೀ ಎಂಟ್ರಿಗೆ ಭರ್ಜರಿ ಸಿದ್ಧತೆ ನಡೆದಿದೆ. ಪ್ರಭಾಸ್ (Prabhas) ಸಿನಿಮಾದಲ್ಲಿ ನಟಿಸಲು 20 ಕೋಟಿ ರೂ. ಸಂಭಾವನೆ ದೀಪಿಕಾ ಪಾಲಾಗಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಧಿಕ ಸಂಭಾವನೆ ಪಡೆದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ:ಕನ್ನಡತಿ ದಿಶಾ ಮದನ್‌ಗೆ ಕಾನ್ ಫಿಲ್ಮ್ ಫೆಸ್ಟಿವಲ್ ಆಹ್ವಾನ
ದೀಪಿಕಾ ರೀ ಎಂಟ್ರಿ ಆರಂಭದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಮೂಲಕ ದೊಡ್ಡಮಟ್ಟದ ಸುದ್ದಿ ಮಾಡಿದ್ದಾರೆ. ಅನಿಮಲ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್ʼ (Spirit) ಸಿನಿಮಾದಲ್ಲಿ ನಟಿಸಲು ದೀಪಿಕಾಗೆ 20 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನು ಕೇಳಿ ನಟಿಯ ಫ್ಯಾನ್ಸ್ ಅಚ್ಚರಿಯ ಜೊತೆ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ʻನೀವು ಮದ್ವೆ ಆಗ್ಲಿಲ್ಲ ಅಂತ ಮ್ಯಾಕ್ಸಿ ಚೆನ್ನಾಗಿ ಆಡ್ತಿಲ್ಲʼ – ಕಾಮೆಂಟ್ ಮಾಡಿದ ನೆಟ್ಟಿಗನಿಗೆ ಪ್ರೀತಿ ಝಿಂಟಾ ಕ್ಲಾಸ್

ಶಾರುಖ್ ಖಾನ್ ನಟನೆಯ ‘ಕಿಂಗ್’ (King) ಚಿತ್ರದಲ್ಲಿಯೂ ದೀಪಿಕಾ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾ ನಂತರ ‘ಸ್ಪಿರಿಟ್’ ತಂಡಕ್ಕೆ ನಟಿ ಸೇರಿಕೊಳ್ಳಲಿದ್ದಾರೆ. 2027ರಲ್ಲಿ ಈ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ.

ಕಳೆದ ವರ್ಷ ಸೆ.8ರಂದು ಮುದ್ದಾದ ಹೆಣ್ಣುಮಗುವಿಗೆ ನಟಿ ಜನ್ಮ ನೀಡಿದರು. ಈ ಮಗುವಿಗೆ ‘ದುವಾ ಪಡುಕೋಣೆ ಸಿಂಗ್’ (Dua Padukone Singh) ಎಂದು ಹೆಸರಿಟ್ಟಿದ್ದಾರೆ.









ಪ್ರಭಾಸ್ ಎದುರು ಪಡ್ಡೆಹುಡುಗರ ಕನಸಿನ ಸುಂದರಿ ಕರೀನಾ ಕಪೂರ್ ನಟಿಸುತ್ತಿದ್ದಾರೆ. ಆದರೆ ಇಲ್ಲೊಂದು ಟ್ವೀಸ್ಟ್ ಇದೆ. ಹೀರೋಯಿನ್ ಬದಲಾಗಿ ಖಡಕ್ ಲೇಡಿ ವಿಲನ್ ಆಗಿ ಕರೀನಾ ಕಪೂರ್ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ಚಿತ್ರತಂಡ ಈ ಕುರಿತು ಮಾತುಕಥೆ ನಡೆಸಿದ್ದು, ಚಿತ್ರತಂಡ ಕಂಟೆಂಟ್ ಕೇಳಿ ಕರೀನಾ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರೆ. ಇನ್ನು ಪ್ರಭಾಸ್ ಮತ್ತು ಕರೀನಾ ಕಾಳಗ ತೆರೆಯ ಮೇಲೆ ನೋಡೋದೆಂದೇ ಬಾಕಿ. ಪ್ರಭಾಸ್ ಮುಂದೆ ಗಟ್ಟಿ ಲೇಡಿ ವಿಲನ್ ಆಗಿ ಕರೀನಾ ಕಪೂರ್ ಹೇಗೆ ಮಿಂಚ್ತಾರೆ ಎಂಬುದನ್ನ ಕಾದು ನೋಡಬೇಕಿದೆ.