Tag: ಸ್ಪರ್ಧಿ

  • ಒಬ್ಬ ರೈತನ ಮಗನಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು ಸಂತಸ ನೀಡಿದೆ: ಶಶಿಕುಮಾರ್ ತಾಯಿ

    ಒಬ್ಬ ರೈತನ ಮಗನಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು ಸಂತಸ ನೀಡಿದೆ: ಶಶಿಕುಮಾರ್ ತಾಯಿ

    ಬೆಂಗಳೂರು: ಒಬ್ಬ ರೈತನ ಮಗನಾಗಿ ಬಿಗ್ ಬಾಸ್‍ನಲ್ಲಿ ಭಾಗವಹಿಸಿದ್ದು, ನನಗೆ ಹೆಚ್ಚು ಸಂತಸ ತಂದಿದೆ. ಸ್ಪರ್ಧೆಯಲ್ಲಿ ಫೈನಲ್ ಪ್ರವೇಶ ಮಾಡಿದ್ದು ಮತ್ತಷ್ಟು ಖುಷಿ ನೀಡಿದ್ದು, ಒಬ್ಬ ಆಧುನಿಕ ರೈತನಾಗಿ ನಾಡಿನ ಜನರ ಪ್ರೀತಿ ಪಡೆದಿದ್ದಾರೆ ಎಂದು ಬಿಗ್‍ಬಾಸ್ ಸ್ಪರ್ಧಿ ಶಶಿಕುಮಾರ್ ಅವರ ತಾಯಿ ಪದ್ಮ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಸ್ಪರ್ಧೆಯಲ್ಲಿ ಫೈನಲ್ ವರೆಗೂ ಬರಲು ಆತನ ಸ್ಟ್ರೈಟ್ ಫಾವರ್ಡ್ ನಡೆಯೇ ಕಾರಣ. ಬಿಗ್‍ಬಾಸ್ ಹೋಗುವ ಮುನ್ನ ಹೇಗಿದ್ದನೋ ಕಾರ್ಯಕ್ರಮದಲ್ಲೂ ತನ್ನ ತನವನ್ನು ಉಳಿಸಿಕೊಂಡು ಬಂದಿದ್ದಾನೆ. ಅವನಿಗೆ ಅವನ ಮೇಲೆ ಇರುವ ನಂಬಿಕೆಯೇ ಶಕ್ತಿ ಎಂದರು.

    ಪ್ರತಿದಿನ ಕಾರ್ಯಕ್ರಮವನ್ನು ನೋಡುತ್ತಿದ್ದು, ವಿಷ ಸರ್ಪ ಹಾಗೂ ಸಿನಿಮಾ ನಿರ್ದೇಶನ ಮಾಡಿದ ಆಟಗಳು ನನಗೆ ತುಂಬಾ ಇಷ್ಟ ಆಯ್ತು. ಆತನನ್ನು ಭೇಟಿ ಆಗಿ 3 ತಿಂಗಳು ಆಗಿದೆ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದು, ಆತನ ಸಹಾಯ ಮಾಡುವ ಗುಣವೇ ಆತನನ್ನು ಇಲ್ಲಿಯವರೆಗೂ ಕರೆದುಕೊಂಡು ಹೋಗಿದೆ. ನಾಡಿನ ಅಷ್ಟು ಮಂದಿ ತನ್ನ ಮಗನಿಗೆ ಬೆಂಬಲ ನೀಡಿದ್ದು, ಅದು ಹಾಗೆಯೇ ಮುಂದುವರಿಯಲಿ ಎಂದು ಮನವಿ ಮಾಡಿದರು.

    ಮಗ ಬಿಗ್‍ಬಾಸ್ ಆಯ್ಕೆ ಆಗಿದ್ದು ಮೊದಲಿಗೆ ನನಗೆ ಖುಷಿ ತಂದಿದ್ದು, ಆತ ಶಿಕ್ಷಣ ಪಡೆಯುತ್ತಿರುವ ವೇಳೆಯೇ ರೈತನಾಗಿ ಮಾಡಿದ ಕಾರ್ಯಗಳು ನನಗೆ ಮೆಚ್ಚುಗೆ ಇತ್ತು. ಯಾರೇ ಕೃಷಿ ಬಗ್ಗೆ ಮಾಹಿತಿ ಕೇಳಿದ್ರು ತಪ್ಪದೇ ಕೊಡುತ್ತಿದ್ದ. ಬಿಗ್‍ಬಾಸ್ ಶೋ ಸ್ಪರ್ಧೆಯಲ್ಲಿ ಒಬ್ಬ ರೈತ ಯುವಕನಿಗೆ ಅವಕಾಶ ನೀಡುತ್ತಾರೆ ಎಂಬ ಊಹೆಯೂ ನನಗೆ ಇರಲಿಲ್ಲ. ರಾಮನಗರದಲ್ಲಿ ಫಾರ್ಮಿಂಗ್ ಮಾಡುತ್ತಿದ್ದ ಮಗ 3 ತಿಂಗಳಿನಿಂದ ನಮ್ಮೊಂದಿಗೆ ಇಲ್ಲದಿರುವುದು ಮತ್ತೊಂದೆಡೆ ತುಂಬಾ ಬೇಸರ ತಂದಿದೆ. ಆದ್ರೆ ಆತನ ಪ್ರಯತ್ನಗಳು ಈ ನಾಡಿಗೆ ಈ ಮೂಲಕ ತಿಳಿಯಿತು. ಇಷ್ಟು ದಿನ ಶಶಿಕುಮಾರ್ ಗೆ ಬೆಂಬಲ ನಿಂತ ಕನ್ನಡಿಗರಿಗೆ ವಂದನೆ ಎಂದು ಶಶಿಕುಮಾರ್ ತಂದೆ ಶ್ರೀರಾಮ್ ರೆಡ್ಡಿ ಅವರು ತಿಳಿಸಿದರು.

    ಶಶಿಕುಮಾರ್ ಭಾವ ಹರೀಶ್ ಹಾಗೂ ಸತೀಶ್ ಗೌಡ ಮಾತನಾಡಿ, 6 ಆವೃತ್ತಿಗಳಿಂದ ಬಿಗ್‍ಬಾಸ್ ನೀಡುತ್ತಿದ್ದ ಮನರಂಜನೆ ಈ ಬಾರಿ ಡಬಲ್ ಆಗಿದ್ದು, ಒಬ್ಬ ರೈತ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಬಲ್ಲ ಎಂಬುದು ಶಶಿ ಅವರಿಂದ ನಿಜವಾಗಿದೆ. ವಿವಿಧ ಕ್ಷೇತ್ರದಲ್ಲಿ ಶಶಿ ಅವರು ಗಳಿಸಿರುವ ಜ್ಞಾನವೇ ಅವರನ್ನು ಪ್ರಬಲ ಸ್ಪರ್ಧಿಯಾಗಿ ನಿಲ್ಲಿಸಿದೆ. ಬೇರೆ ಸ್ಪರ್ಧಿಗಳ ಬಗ್ಗೆ ಹಿಂದೆ, ಮುಂದೆ ಒಂದು ರೀತಿ ಮಾತನಾಡದೇ ಇರುವುದು ಆತನ ಪ್ಲಸ್ ಪಾಯಿಂಟ್. ಇದುವರೆಗೂ ಸ್ಪರ್ಧೆಯಲ್ಲಿ ಆತ ಜೈಲಿಗೆ ಹೋಗದಿರುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್‍ಬಾಸ್‍ನ ಸ್ಪೆಷಲ್ ವ್ಯಕ್ತಿಯ ಬಗ್ಗೆ ನಿಮಗೆಷ್ಟು ಗೊತ್ತು

    ಬಿಗ್‍ಬಾಸ್‍ನ ಸ್ಪೆಷಲ್ ವ್ಯಕ್ತಿಯ ಬಗ್ಗೆ ನಿಮಗೆಷ್ಟು ಗೊತ್ತು

    ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ‘ಬಿಗ್‍ಬಾಸ್’ ಸೀಸನ್ 6 ಭಾನುವಾರ ಆರಂಭವಾಗಿದ್ದು, ಸಾಮಾನ್ಯ ಸ್ಪರ್ಧಿಗಳು ಸೇರಿದಂತೆ 18 ಮಂದಿ ಬಿಗ್‍ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

    ಈ ಬಾರಿ ಬಿಗ್‍ಬಾಸ್ ನಲ್ಲಿ ಒಂದು ವಿಶೇಷ ಇದ್ದು, ಅದು ಏನೆಂದರೆ ಬಿಗ್ ಮನೆಯಲ್ಲಿ ಎಲ್ಲ ರೀತಿ ಜನರಿಗೂ ಅವಕಾಶ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಈ ಬಾರಿ ತೃತೀಯ ಲಿಂಗಿಯರಿಗೂ ಅವಕಾಶ ಮಾಡಿಕೊಟ್ಟಿದೆ. ಇದು ಈ ಬಾರಿಯ ಬಿಗ್‍ಬಾಸ್ ಶೋನ ವಿಶೇಷವಾಗಿದೆ.

    9ನೇ ಸ್ಪರ್ಧಿಯಾಗಿ ವಿಭಿನ್ನ ಶೈಲಿಯ ನೃತ್ಯ ಮಾಡುವ ಆಡಮ್ ಪಾಶಾ ದೊಡ್ಡ ಮನೆಗೆ ಪ್ರವೇಶ ಪಡೆದಿದ್ದಾರೆ. ಡ್ರ್ಯಾಗ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ಆಡಮ್ ಪಾಶಾ ಬೆಂಗಳೂರಿನ ಫಸ್ಟ್ ಡ್ರ್ಯಾಗ್ ಕ್ವೀನ್ ಹೆಗ್ಗಳಿಕೆ ಹೊಂದಿದ್ದಾರೆ. ಆಡಮ್ ಪಾಶಾ ಬೆಂಗಳೂರಿನಲ್ಲಿ ಹುಟ್ಟಿದ್ದು, ಇಂಗ್ಲೆಂಡ್ ನಲ್ಲಿ ಬೆಳೆದಿದ್ದಾರೆ. ಇವರಿಗೆ ಈಗ 35 ವರ್ಷವಾಗಿದ್ದು, ತಮ್ಮ 13ನೇ ವಯಸ್ಸಿನಲ್ಲಿ ತಾವು ತೃತೀಯ ಲಿಂಗಿ ಅನ್ನೋದು ಗೊತ್ತಾಗಿದೆ. ಇದೀಗ ತೃತೀಯ ಲಿಂಗಿಯೊಬ್ಬರು  ‘ಬಿಗ್ ಬಾಸ್’ ಮನೆಗೆ  ಎಂಟ್ರಿಕೊಟ್ಟಿರುವುದು ಇದೇ ಮೊದಲು.

    ಬಿಗ್‍ಬಾಸ್ ವೇದಿಕೆಯಲ್ಲಿ ಆಡಮ್ ಪಾಶಾ ಮಾತು
    ನನ್ನನ್ನು ಡ್ರ್ಯಾಗ್ ಕ್ವೀನ್ ಅಂತ ಕರೆಯುತ್ತಾರೆ. ಯಾಕೆಂದರೆ ನಾನು ನೋಡಲು ಹುಡುಗನ ತರ ಇದ್ದೀನಿ. ಆದರೆ ನಾನು ಹುಡುಗ ಅಲ್ಲ. ನಾನು ವೇದಿಕೆಯ ಮೇಲೆ ಹುಡುಗಿಯಾಗಿ ಹೋಗುತ್ತೇನೆ. ಹುಡುಗಿಯ ರೀತಿ ಡ್ಯಾನ್ಸ್ ಮಾಡಿ ಎಲ್ಲರನ್ನು ನಗಿಸಿ ಬರುತ್ತೇನೆ. ನಾನು 2018ರಲ್ಲಿ ಬೆಂಗಳೂರಿಗೆ ಬಂದಿದ್ದೆ. ಬ್ಯಾಂಕಾಕ್ ನಲ್ಲಿ ಡ್ರ್ಯಾಗ್ ಕ್ವೀನ್ ಶಾಲೆ ಇದೆ. ಅಲ್ಲಿ ನಾನು ಅಭಿನಯಿಸುವುದು, ಡ್ಯಾನ್ಸ್ ಮಾಡುವುದನ್ನು ಕಲಿತಿದ್ದೇನೆ. ಈಗ ನಾನು ಟ್ರೈನಿ ಕೂಡ ಆಗಿದ್ದೇನೆ. ನಾನು ಯೂರೋಪ್ ಮತ್ತು ಇಂಗ್ಲೆಂಡ್ ನಲ್ಲಿ ಡ್ಯಾನ್ಸ್ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ನನ್ನಂತವರಿಗೆ ಅವಕಾಶ ಕೊಟ್ಟಿದ್ದಕ್ಕೆ ವಾಹಿನಿಗೆ ಧನ್ಯವಾದಗಳು. ಸಾಮಾನ್ಯ ಜನರ ಮಧ್ಯೆ ನಮ್ಮಂತವರು ಇರುತ್ತಾರೆ. ನಾವು ಎಲ್ಲಾ ಕೆಲಸ ಮಾಡುತ್ತೇವೆ ಎಂದು ಜನರಿಗೆ ತೋರಿಸುವುದೇ ನಮ್ಮ ಉದ್ದೇಶವಾಗಿದೆ.

    ಇತ್ತೀಚೆಗೆ ಸುಪ್ರೀಂ ಕೋರ್ಟ್ ತೃತೀಯ ಲಿಂಗಗಳಿಗೆ ಅಂತ ಸೆಕ್ಷನ್ 377 ಕಾಯ್ದೆಯನ್ನು ಜಾರಿಗೆ ತಂದಿದೆ. ನಮ್ಮಂತವರು ನಾನು ಈ ರೀತಿ ಇದ್ದೇನೆ ಎಂದು ಮನೆಯಿಂದ ಹೊರಗೆ ಬರಲು ಭಯಪಡುತ್ತಾರೆ. ನಾನು ಧೈರ್ಯವಾಗಿ ಬಂದಿದ್ದೇನೆ. ನನ್ನನ್ನು ನೋಡಿ ನಮ್ಮ ಸಮುದಾಯದವರು ಇನ್ನು ಮುಂದೆ ಧೈರ್ಯವಾಗಿ ಮನೆಯಿಂದ ಹೊರಗೆ ಬರುತ್ತಾರೆ.  ನಮ್ಮನ್ನು ನಾವು ಪ್ರೀತಿಸದಿದ್ದರೆ ಬೇರೆಯವರು ನಮ್ಮನ್ನು ಪ್ರೀತಿಸುವುದಿಲ್ಲ ಎಂದು ಹೇಳಿದ್ದಾರೆ.

    ಕುಟುಂಬ:
    ನನಗೆ ಕುಟುಂಬ ಇಲ್ಲ, 2010ರಲ್ಲಿ ಅಮ್ಮ ನಿಧರಾದರು. ನಾನು ಅಮ್ಮ ಮೃತಪಟ್ಟ ನಂತರ ಬ್ಯಾಂಕಾಕಿಗೆ ಹೋದೆ. ಯಾಕೆಂದರೆ ನಮ್ಮ ತಂದೆಗೆ ಒಬ್ಬ ಮಗಬೇಕಿತ್ತು. ನಾನು ಗೆ ಅಂತ ಗೊತ್ತಿದ್ದರೂ, ಹುಡುಗನ ರೀತಿ ಇರಲು ಹೇಳುತ್ತಿದ್ದರು. ನನ್ನಿಂದ ನಮ್ಮ ತಂದೆ ಸಂತಸದಿಂದ ಇರುತ್ತಿರಲಿಲ್ಲ. ನನಗೂ ನನ್ನ ತಂದೆಯ ಮಧ್ಯೆ ತುಂಬಾ ಅಂತರ ಇತ್ತು. ಆದ್ದರಿಂದ ನಾನು ಬೆಂಗಳೂರು ಬಿಟ್ಟು ಬ್ಯಾಂಕಾಕಿಗೆ ಹೋದೆ. ನನಗೆ ಇಬ್ಬರು ಸಹೋದರಿಯರು ಇದ್ದಾರೆ.

    https://www.facebook.com/ColorsSuper/videos/2032446550134671/

    ಒಮ್ಮೆ ನನ್ನ ಅಕ್ಕ ಫೋನ್ ಮಾಡಿ ತಂದೆಗೆ ಆರೋಗ್ಯ ಸರಿಯಿಲ್ಲ ಬಾ ಎಂದು ಕರೆದರು. ನಾನು ತಕ್ಷಣ ಬೆಂಗಳೂರಿಗೆ ಬಂದೆ ಆದರೆ ನಮ್ಮ ತಂದೆಯವರಿಗೆ ಕ್ಯಾನ್ಸರ್ ಕೊನೆಯ ಹಂತ ತಲುಪಿತ್ತು. ನಮ್ಮ ತಂದೆ ಸಾಯುವ ಸ್ಥಿತಿಯಲ್ಲಿ ಇದ್ದಾಗಲೂ, ನೀನು ಹಿಜಡಾ ಯಾಕೆ ನನ್ನನ್ನು ನೋಡಲು ಬಂದೆ ಎಂದು ಬೈದರು. ಇತ್ತ ನನ್ನ ಅಕ್ಕ ನನ್ನ ಬಳಿ ಹೆಬ್ಬೆಟ್ಟು ಮಾಡಿಕೊಂಡು ಆಸ್ತಿಯಲ್ಲವನ್ನು ಮಾರಾಟ ಮಾಡಿ ಮೋಸ ಮಾಡಿ ಹೋದರು.

    ನನ್ನನ್ನು ಒಳಗಿನ ಸ್ಪರ್ಧಿಗಳು ಒಪ್ಪಿಕೊಳ್ಳಬೇಕು ಎಂದು ಭಯಸುತ್ತೇನೆ ಎಂದು ಹೇಳಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋದಿಯನ್ನು ಭೇಟಿಯಾಗಲು ಮುಂದಾದ ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ!

    ಮೋದಿಯನ್ನು ಭೇಟಿಯಾಗಲು ಮುಂದಾದ ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ!

    ಹುಬ್ಬಳ್ಳಿ: ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಮಹದಾಯಿ, ಕಳಸಾ ಬಂಡೂರಿ ಯೋಜನೆ ಕುರಿತು ಚರ್ಚೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮೀರ್ ಆಚಾರ್ಯ, ಬಿಗ್ ಬಾಸ್ ಸ್ಪರ್ಧೆಯಲ್ಲಿ ಸಪೋರ್ಟ್ ಮಾಡಿದ ಕರ್ನಾಟಕದ ಪ್ರತಿಯೊಬ್ಬ ನಾಗರಿಕರಿಗೂ ಧನ್ಯವಾದಗಳು. ಮಹದಾಯಿ, ಕಳಸಾ ಬಂಡೂರಿ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಯೋಜನೆ ಬಗ್ಗೆ ಚರ್ಚೆ ಮಾಡೋದಕ್ಕೆ ಸಮಯಾವಕಾಶ ಕೇಳಿದ್ದೇನೆ. ಅವಕಾಶ ಕೊಟ್ಟರೆ ಭೇಟಿ ಮಾಡುವುದಾಗಿ ತಿಳಿಸಿದ್ರು.

    ಫೆಬ್ರವರಿ 4ರಂದು ಬೆಂಗಳೂರು ಬಂದ್ ಗೆ ಕರೆ ನೀಡಿರೋದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ನೀರು ಪಡೆಯುವವರೆಗೂ ಈ ಹೋರಾಟಕ್ಕೆ ನಾನು ಸಾಥ್ ನೀಡುತ್ತೇನೆ ಎಂದು ಹೇಳಿದ್ರು.

  • ಪೊಲೀಸ್ ನೇಮಕಾತಿ ಓಟದ ವೇಳೆ ಹೃದಯಾಘಾತ – ಮೈದಾನದಲ್ಲೇ ಕುಸಿದು ಯುವಕ ಸಾವು

    ಪೊಲೀಸ್ ನೇಮಕಾತಿ ಓಟದ ವೇಳೆ ಹೃದಯಾಘಾತ – ಮೈದಾನದಲ್ಲೇ ಕುಸಿದು ಯುವಕ ಸಾವು

    ಕಲಬುರಗಿ: ಪೊಲೀಸ್ ನೇಮಕಾತಿಯಲ್ಲಿ ಸ್ಪರ್ಧಿಯೊಬ್ಬರು ಓಡಿದ ಬಳಿಕ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಇಂದು ಮುಂಜಾನೆ ನಡೆದಿದೆ.

    ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣ ನಿವಾಸಿ ವಿಕಾಸ್ ಗಾಯಕವಾಡ (23) ಮೃತ ಯುವಕ. ಇಂದು ಕೆಎಸ್‍ಆರ್‍ಪಿ ಬೆಟಾಲಿಯನ್‍ನಲ್ಲಿ ಪೇದೆಗಳ ನೇಮಕಾತಿ ನಡೆಯುವ ವೇಳೆ ಓಟದ ಮೈದಾನದಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದು ವಿಕಾಸ್ ಮೃತಪಟ್ಟಿದ್ದಾರೆ.

    ಪೊಲೀಸ್ ನೇಮಕಾತಿಯ ದೈಹಿಕ ಪರೀಕ್ಷೆಗಾಗಿ ವಿಕಾಸ್ ಕಲಬುರಗಿ ನಗರಕ್ಕೆ ಬಂದಿದ್ದರು. ಸ್ಪರ್ಧೆಯಲ್ಲಿ ಎರಡು ಸಾವಿರ ಮೀಟರ್ ಓಟವನ್ನು ಓಡಿ ಪೂರ್ಣಗೊಳಿಸಿದ್ದರು. ಆದರೆ ಓಟದ ನಂತರ ವಿಕಾಸ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲು ವಾಹನದಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.

    ಆಸ್ಪತ್ರೆಗೆ ಈಶಾನ್ಯ ವಲಯ ಐಜಿ ಮುರುಗನ್ ಹಾಗೂ ಎಸ್ಪಿ ಎನ್ ಶಶಿಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಪ್ಲೋಮಾ ಓದುತ್ತಿದ್ದ ವಿಕಾಸ್ ಪೊಲೀಸ್ ಪೇದೆಯಾಗುವ ಕನಸು ಕಂಡಿದ್ದರು. ಅದಕ್ಕಾಗಿ ಸಾಕಷ್ಟು ತಯಾರಿ ಕೂಡಾ ಮಾಡಿಕೊಂಡಿದ್ದರು. ಇಂದು ರನ್ನಿಂಗ್ ನಲ್ಲಿ ಪಾಸಾಗಿದ್ದರು. ಆದರೆ ನೌಕರಿ ಕನಸು ಇಡೇರುವ ಮುನ್ನವೇ ವಿಕಾಸ್ ಬದುಕು ಕಮರಿಹೋಗಿದೆ. ಇದನ್ನು ಓದಿ: ಬೇಕಿದ್ದ ಅರ್ಹತೆ 168 ಸೆ.ಮೀ ಎತ್ತರ, ಆದ್ರೆ 162 ಸೆ.ಮೀ ಇದ್ರೂ ಸಿಕ್ತು ಕೆಲ್ಸ: ಪೊಲೀಸರಿಗೆ ಶಾಕ್ ಕೊಟ್ಟ ಅಣ್ಣ ತಮ್ಮ

  • ಶಾಸಕ ಸುರೇಶ್ ಗೌಡ ವಿರುದ್ಧ ವಿಡಂಬನಾತ್ಮಕ ಹಾಡು ರಚಿಸಿದ ಯೂತ್ ಕಾಂಗ್ರೆಸ್

    ಶಾಸಕ ಸುರೇಶ್ ಗೌಡ ವಿರುದ್ಧ ವಿಡಂಬನಾತ್ಮಕ ಹಾಡು ರಚಿಸಿದ ಯೂತ್ ಕಾಂಗ್ರೆಸ್

    ತುಮಕೂರು: ಚುನಾವಣೆ ಸಮಿಪಿಸುತ್ತಿದ್ದಂತೆ ಸ್ಪರ್ಧಿಗಳು ಒಬ್ಬರನೊಬ್ಬರು ಹಣಿಯಲು ಆರಂಭಿಸುವುದು ಹೊಸದೇನಲ್ಲ. ತುಮಕೂರಿನಲ್ಲಿ ತುಸು ವಿಶೇಷವಾಗಿ ರಾಜಕಾರಣಿಗಳು ತಮ್ಮ ವಿರೋಧಿಗಳ ಕಾಲು ಎಳೆಯಲು ಪ್ರಯತ್ನಿಸಿದ್ದಾರೆ.

    ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ವಿರುದ್ಧ ವಿಡಂಬನಾತ್ಮಕ ಹಾಡು ರಚಿಸಿ ಫೇಸ್ ಬುಕ್ ನಲ್ಲಿ ಅಪಲೋಡ್ ಮಾಡಲಾಗಿದೆ. ತುಮಕೂರು ಗ್ರಾಮಾಂತರ ಯೂತ್ ಕಾಂಗ್ರೆಸ್ ಎಂಬ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಸುಳ್ಳೇ ಸುಳ್ಳು ಎಂಬ ಹಾಡಿನೊಂದಿಗೆ ಸುರೇಶ್ ಗೌಡರು ಮಾಡಿರುವ ಕೆಲ ತಪ್ಪುಗಳನ್ನು ವಿಡಂಬನಾತ್ಮಕವಾಗಿ ಹೇಳಲಾಗಿದೆ.

    ಆಪರೇಷನ್ ಕಮಲದ ವೇಳೆ ಗುಬ್ಬಿ ಜೆಡಿಎಸ್ ಶಾಸಕರಿಗೆ 25 ಕೋಟಿ ಆಫರ್ ಇಟ್ಟಿದ್ದ ಸರದಾರ, ಕಾರು ಡಿಕ್ಕಿ ಮಾಡಿ ವೃದ್ಧನ ಕೊಂದ ಕಿಲ್ಲರ್, ಬೆಂಗಳೂರಲ್ಲಿ ಸ್ವಂತ ಮನೆ ಇದ್ದರೂ ಜಿ-ಕೆಟಗರಿ ಸೈಟ್ ಗಾಗಿ ಹಪಹಪಿಸುವ ಆಸೆಬರುಕ, ತನ್ನ ಕಾರು ಬಿಡದ ಟೋಲ್ ಗೇಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ರೌಡಿ ಶಾಸಕ….. ಹೀಗೆ ವಿಡಂಬನಾತ್ಮಕವಾಗಿ ಹಾಡು ಬರೆಯಲಾಗಿದೆ.

  • ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಪ್ರವೇಶ ಪಡೆಯಲಿದ್ದಾರೆ?

    ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಪ್ರವೇಶ ಪಡೆಯಲಿದ್ದಾರೆ?

    ಬೆಂಗಳೂರು: ಬಿಗ್‍ಬಾಸ್ ಸೀಸನ್ -5 ರಿಯಾಲಿಟಿ ಶೋ ಮುಂದಿನ ವಾರದಿಂದ ಆರಂಭಗೊಳ್ಳಲಿದ್ದು, ಈ ಆವೃತ್ತಿಯಲ್ಲಿ ಯಾರ್ಯಾರು ಸ್ಪರ್ಧಿಗಳಾಗುತ್ತಾರೆಂಬ ಬಗ್ಗೆ ಕುತೂಹಲ ಎಲ್ಲರಲ್ಲೂ ಮೂಡಿದೆ.

    ಕೆಲ ನಟ-ನಟಿಯರು ಈ ರೇಸಲ್ಲಿ ತಮ್ಮ ಹೆಸರನ್ನೂ ಸೇರಿಸಿಕೊಂಡು ಗಾಳಿ ಸುದ್ದಿ ಹಬ್ಬಿಸಿ ಬಿಟ್ಟಿ ಪ್ರಚಾರ ಪಡೆದುಕೊಂಡಿದ್ದಾರೆ. ಇನ್ನು ಕೆಲವೊಮ್ಮೆ ವಾಹಿನಿಯೇ ಕನ್‍ಫ್ಯೂಸ್ ಮಾಡಲೆಂದೇ ಕೆಲವರ ಹೆಸರನ್ನು ತೇಲಿ ಬಿಟ್ಟಿದ್ದೂ ನಡೆದಿದೆ. ಆದರೆ ಈಗ ಕೆಲವರು ಹೆಸರನ್ನು ಕೇಳಿ ಬಂದಿದ್ದು ಅವರೇ ಫೈನಲ್ ಆಗಬಹುದು ಎಂದು ಹೇಳಲಾಗುತ್ತಿದೆ.

    ರೇಸ್‍ನಲ್ಲಿರೋ ವ್ಯಕ್ತಿಗಳು:
    ಬಿಗ್ ಬಾಸ್-5 ಆವೃತ್ತಿಯಲ್ಲಿ ಹಿರಿಯ ನಟ ಸಿಹಿ ಕಹಿ ಚಂದ್ರು, ಸಿಂಗರ್ ಚಂದನ್ ಶೆಟ್ಟಿ, ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ, ಗಾಯಕಿ ಅನುರಾಧಾ ಭಟ್ ಅಥವಾ ಸುಪ್ರಿಯಾ, ನಿರೂಪಕ ರಿಯಾಜ್, ಕಿರುತೆರೆ ನಟಿ ಕುಸುಮಾ ವರ್ಷಿಣಿ, ರಾಜೇಶ್ ನಟರಂಗ ಸೇರಿದಂತೆ ಇನ್ನೂ ಹಲವರ ಹೆಸರು ಅಂತಿಮ ರೇಸ್‍ನಲ್ಲಿ ಇದ್ದಾರೆ ಎಂದು ಹೇಳಲಾಗಿದೆ.

                                                                                           ಸಿಂಗರ್ ಚಂದನ್ ಶೆಟ್ಟಿ
                                                                                         ಗಾಯಕಿ ಅನುರಾಧಾ ಭಟ್
                                                                                         ಹಿರಿಯ ನಟ ಸಿಹಿ ಕಹಿ ಚಂದ್ರು
                                                                                                    ವಿಜಯಲಕ್ಷ್ಮಿ
                                                                                              ರಾಜೇಶ್ ನಟರಂಗ