ಬೆಂಗಳೂರು: ಬಿಗ್ ಬಾಸ್ ಮನೆಗೆ ಸ್ಪರ್ಧಿ ಚಂದನಾ ಅವರು ಎಂಟ್ರಿ ಕೊಟ್ಟು ಮನೆಯ ಸ್ಪರ್ಧಿಗಳ ಬಳಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಶುಕ್ರವಾರ ಹಾಡು ಹಾಡುವ ಮೂಲಕವೇ ಚಂದನಾ ಕನ್ಛೇಶನ್ ರೂಮಿನಿಂದ ಮನೆಯೊಳಗೆ ಪ್ರವೇಶಿಸಿದರು. ಚಂದನಾ ಬರುತ್ತಿದ್ದಂತೆ ಮೊದಲು ಕಿಶನ್ ಅವರನ್ನು ತಪ್ಪಿಕೊಂಡಿದ್ದಾರೆ. ಬಳಿಕ ಮನೆಯ ಸದಸ್ಯರೆಲ್ಲಾ ಚಂದನಾ ಅವರನ್ನು ತಪ್ಪಿಕೊಂಡು ಸ್ವಾಗತಿಸಿದ್ದಾರೆ. ಚಂದನಾರನ್ನು ನೋಡಿ ಸದಸ್ಯರು ಮೊದಲು ಶಾಕ್ ಆಗಿ ನಂತರ ಖುಷಿಪಟ್ಟಿದ್ದಾರೆ.
ಚಂದನಾ ಲಿವಿಂಗ್ ಏರಿಯಾದಲ್ಲಿ ಕುಳಿತು ನಾನು ನಿಮ್ಮೆಲ್ಲರಾ ಜೊತೆ ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಈ ವಿಷಯವನ್ನು ನಾನು ಇದುವರೆಗೂ ಯಾರ ಬಳಿಯೂ ಹಂಚಿಕೊಂಡಿಲ್ಲ. ಮೊದಲ ಬಾರಿಗೆ ನಿಮ್ಮೆಲ್ಲರಾ ಬಳಿ ಹೇಳುತ್ತಿದ್ದೇನೆ ಎಂದರು. ಚಂದನಾ ಈ ರೀತಿ ಹೇಳುತ್ತಿದ್ದಂತೆ ತಕ್ಷಣ ವಾಸುಕಿ ನಿಮಗೆ ಮದುವೆ ಫಿಕ್ಸ್ ಆಯ್ತಾ ಎಂದು ಹೇಳಿದ್ದಾರೆ. ಇದನ್ನು ಕೇಳಿ ಚಂದನಾ ಹಾಗೂ ಮನೆಯ ಸದಸ್ಯರು ನಕ್ಕಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಹೊಸದೊಂದು ಹಾಡಿನ ಕಾರ್ಯಕ್ರಮ ಶುರುವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಚಂದನಾ ಮೊದಲ ಬಾರಿಗೆ ನಿರೂಪಣೆ ಮಾಡುತ್ತಿದ್ದಾರೆ. ಈ ವಿಷಯವನ್ನು ಚಂದನಾ ಬಿಗ್ ಬಾಸ್ ಮನೆಯ ಸದಸ್ಯರ ಜೊತೆ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಕಾರ್ಯಕ್ರಮಕ್ಕಾಗಿ ವಾಸುಕಿ ಅವರಿಗೆ ಶೀರ್ಷಿಕೆ ಗೀತೆ ಬರೆದುಕೊಡಲು ಹೇಳಿದ್ದಾರೆ. ವಾಸುಕಿ ಕಾರ್ಯಕ್ರಮಕ್ಕಾಗಿ ಹಾಡನ್ನು ಬರೆದು ಅದನ್ನು ಲಿವಿಂಗ್ ಏರಿಯಾದಲ್ಲಿ ಕುಳಿತುಕೊಂಡು ಹಾಡು ಹಾಡಿದ್ದಾರೆ. ವಾಸುಕಿ ಹಾಡು ಹಾಡಿದ ಬಳಿಕ ಬಿಗ್ ಬಾಸ್ ಚಂದನಾರನ್ನು ಮನೆಯಿಂದ ಹೊರಡುವಂತೆ ಹೇಳುತ್ತಾರೆ. ಆಗ ವಾಸುಕಿ, ಚಂದನಾರನ್ನು ತಪ್ಪಿಕೊಂಡು ಮುತ್ತು ನೀಡಿ ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.
ಬೆಂಗಳೂರು: ಮಧ್ಯರಾತ್ರಿ ಮನೆಗೆ ಬಂದ ಅತಿಥಿಯನ್ನು ನೋಡಿ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.
ಸೋಮವಾರ ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಕುಟುಂಬಸ್ಥರು ಬಂದು ಹೋದ ಬೆನ್ನಲ್ಲೇ ಮಧ್ಯರಾತ್ರಿ ಪ್ರಿಯಾಂಕಾ ಅವರ ತಾಯಿ ಸುಕನ್ಯ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮಧ್ಯರಾತ್ರಿ ಸುಮಾರು 12.30ಕ್ಕೆ ಪ್ರಿಯಾಂಕಾ ತಾಯಿ ಸುಕನ್ಯ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಈ ವೇಳೆ ಸದಸ್ಯರೆಲ್ಲಾ ನಿದ್ದೆ ಮಾಡುತ್ತಿದ್ದರು. ಸುಕನ್ಯ ಅವರು ಮನೆಯೊಳಗೆ ಬರುತ್ತಿದ್ದಂತೆ ನಿದ್ದೆಯಲ್ಲಿದ್ದ ವಾಸುಕಿ ಕಣ್ಣು ತೆರೆದು ಜೋರಾಗಿ ಕಿರುಚಿಕೊಂಡಿದ್ದಾರೆ. ವಾಸುಕಿ ಕಿರುಚಿಕೊಳ್ಳುತ್ತಿದ್ದಂತೆ ಮನೆಯ ಇತರ ಸ್ಪರ್ಧಿಗಳು ಜೋರಾಗಿ ಕಿರುಚಾಡಲು ಶುರು ಮಾಡಿದ್ದಾರೆ.
ಸುಕನ್ಯ ಅವರು ರೂಮಿನೊಳಗೆ ಬರುತ್ತಿದ್ದಂತೆ ಪ್ರಿಯಾಂಕಾ ಅವರನ್ನು ಮಾತನಾಡಿಸಿದ್ದಾರೆ. ಇದೇ ವೇಳೆ ಸುಕನ್ಯ ಅವರು ಕೊಬ್ಬರಿ ಮಿಠಾಯಿ ತಂದಿದ್ದು, ಮನೆಯ ಸದಸ್ಯರು ಪರಸ್ಪರ ಕಿತ್ತಾಡಿಕೊಂಡು ಅದನ್ನು ತಿಂದಿದ್ದಾರೆ. ಸುಕನ್ಯ ಮನೆಯ ಸದಸ್ಯರ ಜೊತೆ ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಇಷ್ಟು ದಿನ ಪ್ರಿಯಾಂಕಾ ತನ್ನ ತಾಯಿಗಾಗಿ ಕಾಯುತ್ತಿದ್ದರು. ಇದೀಗ ಅವರ ತಾಯಿ ಮಧ್ಯರಾತ್ರಿ ಎಂಟ್ರಿ ಕೊಟ್ಟಿದ್ದು, ಇದರಿಂದ ಪ್ರಿಯಾಂಕಾ ಖುಷಿಯಾಗಿದ್ದಾರೆ.
ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ಪ್ರತಿವಾರವೂ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುತ್ತಾರೆ. ಆದರೆ 13ನೇ ವಾರ ಎಲಿಮಿನೇಷನ್ ಇಲ್ಲ. ಆದರೂ ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ನಾಲ್ವರು ನಾಮಿನೇಟ್ ಆಗಿದ್ದಾರೆ.
ಮನೆಯ ಸದಸ್ಯರ ಅನುಸಾರ ದೀಪಿಕಾ ದಾಸ್, ಭೂಮಿ ಶೆಟ್ಟಿ, ಪ್ರಿಯಾಂಕಾ ಮತ್ತು ಚಂದನ್ ಆಚಾರ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಆದರೆ ಇವರಲ್ಲಿ ಒಬ್ಬ ಸ್ಪರ್ಧಿಯೂ ಮನೆಯಿಂದ ಹೋಗಲ್ಲ. ಯಾಕೆಂದರೆ ಈ ವಾರ ಎಲಿಮಿನೇಷನ್ ಇಲ್ಲ. ಆದರೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಇದೆ. ಹಾಗಾಗಿ ಈ ವಾರ ಯಾರನ್ನೂ ಮನೆಯಿಂದ ಕಳುಹಿಸಲ್ಲ.
ಬಿಗ್‍ಬಾಸ್ ಸ್ಪರ್ಧಿಗಳ ಮನಸ್ಥಿತಿಯನ್ನು ತಿಳಿದುಕೊಳ್ಳಲು ನಾಮಿನೇಷನ್ ಪ್ರಕ್ರಿಯೆ ಮಾಡಿದ್ದಾರೆ. ಈ ವಿಚಾರ ಮನೆಯ ಸದಸ್ಯರಿಗೆ ಗೊತ್ತಿಲ್ಲ. ಚಂದನಾ ಮನೆಯಿಂದ ಹೊರ ಹೋಗುವಾಗ ಪ್ರಿಯಾಂಕಾರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಇನ್ನೂ ಕ್ಯಾಪ್ಟನ್ ಕಿಶನ್ ಹಾಗೂ ಕಳೆದ ವಾರವೇ ಮುಂದಿನ ವಾರಕ್ಕೆ ಇಮ್ಯುನಿಟಿ ಪಡೆದಿರುವ ಕುರಿ ಪ್ರತಾಪ್, ವಾಸುಕಿ ವೈಭವ್‍ರನ್ನು ಮನೆಯ ಸದಸ್ಯರು ನಾಮಿನೇಟ್ ಮಾಡುವಂತಿರಲಿಲ್ಲ. ಕೊನೆಗೆ ಮನೆಯ ಸದಸ್ಯರು ಈ ವಾರ ದೀಪಿಕಾ ದಾಸ್, ಭೂಮಿ ಶೆಟ್ಟಿ, ಚಂದನ್ ಆಚಾರ್ ಮತ್ತು ಹರೀಶ್ ರಾಜ್ ನಾಲ್ವರನ್ನು ಮನೆಯಿಂದ ಹೊರ ಹೋಗಲು ನಾಮಿನೇಟ್ ಮಾಡಿದ್ದರು.
ಆಗ ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ಆಗಿರುವ ಕಿಶನ್‍ಗೆ ಒಂದು ವಿಶೇಷ ಅವಕಾಶವನ್ನು ಕೊಟ್ಟಿದ್ದರು. ಅದೇನೆಂದರೆ ನಾಮಿನೇಟ್ ಆಗಿರುವ ಒಬ್ಬರನ್ನು ಸೇಫ್ ಮಾಡುವ ಅವಕಾಶವನ್ನು ಬಿಗ್‍ಬಾಸ್ ಕೊಟ್ಟಿದ್ದರು. ಅದರಂತೆ ಕಿಶನ್, ಹರೀಶ್ ರಾಜ್ ಅವರನ್ನು ಸೇಫ್ ಮಾಡಿದ್ದಾರೆ. ಕೊನೆಯಲ್ಲಿ ಈ ವಾರ ದೀಪಿಕಾ ದಾಸ್, ಭೂಮಿ ಶೆಟ್ಟಿ, ಚಂದನ್ ಆಚಾರ್ ಹಾಗೂ ಪ್ರಿಯಾಂಕಾ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಈ ವಾರ ಯಾರೂ ಮನೆಯಿಂದ ಹೊರ ಹೋಗುವುದಿಲ್ಲ. ಆದರೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಇರುತ್ತದೆ.
ಮುಂಬೈ: ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಮನೆ ಕ್ಲೀನ್ ಮಾಡಿ ಸ್ಪರ್ಧಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಸಲ್ಮಾನ್ ಖಾನ್ ಭಾನುವಾರದ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಗಲೀಜು ಪಾತ್ರೆಗಳನ್ನು ತೊಳೆದು ಮನೆಯನ್ನು ಸ್ವಚ್ಛಗೊಳಿಸಿದ್ದಾರೆ. ಅಡುಗೆ ಮನೆ ಹಾಗೂ ಲಿವಿಂಗ್ ಏರಿಯಾ ಸ್ವಚ್ಛಗೊಳಿಸಿದ ಬಳಿಕ ಸಲ್ಮಾನ್ ಶೌಚಾಲಯಕ್ಕೆ ಹೋಗಿ ಅಲ್ಲಿ ಕ್ಲೀನ್ ಮಾಡಿದ್ದಾರೆ. ಅಲ್ಲದೆ ಅಲ್ಲಿ ಸಿಲುಕಿದ್ದ ತಲೆಕೂದಲುಗಳನ್ನು ಎತ್ತು ಕಸದಬುಟ್ಟಿಗೆ ಹಾಕಿದ್ದಾರೆ. ಸಲ್ಮಾನ್ ಮನೆ ಕ್ಲೀನ್ ಮಾಡುತ್ತಿರುವುದನ್ನು ಕಂಡ ಸ್ಪರ್ಧಿಗಳು ಶಾಕ್ ಆಗಿದ್ದರು.
ಇಬ್ಬರು ಸಹಾಯಕರೊಂದಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಈ ವೇಳೆ ಸ್ಪರ್ಧಿಗಳನ್ನು ಬಿಗ್ ಬಾಸ್ ರೂಮಿನಲ್ಲಿ ಲಾಕ್ ಮಾಡಿದ್ದರು. ಸಲ್ಮಾನ್ ಮನೆ ಕ್ಲೀನ್ ಮಾಡುವಾಗ ಸ್ಪರ್ಧಿಗಳು ಮುಜುಗರಕ್ಕೆ ಒಳಗಾದರು. ಸ್ಪರ್ಧಿಗಳು ಎಷ್ಟೇ ಕ್ಷಮೆ ಕೇಳಿದರೂ ಸಲ್ಮಾನ್ ಅವರ ಮಾತು ಕೇಳದೆ ಮನೆಯನ್ನು ಕ್ಲೀನ್ ಮಾಡಿದ್ದಾರೆ. ಕ್ಲೀನ್ ಮಾಡಿದ ಬಳಿಕ ಸಲ್ಮಾನ್ ಮನೆಯಿಂದ ಹೊರ ಹೋಗಿದ್ದಾರೆ.
ಸಲ್ಮಾನ್ ವೇದಿಕೆ ಮೇಲೆ ಹೋಗಿ ಟಿವಿ ಮೂಲಕ ಸ್ಪರ್ಧಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸ್ಪರ್ಧಿಗಳಿಗೆ ತಮ್ಮ ತಪ್ಪು ಅರಿವಾಗಿ ಸಲ್ಮಾನ್ ಬಳಿ ಕ್ಷಮೆ ಕೇಳಿದ್ದಾರೆ. ಆದರೆ ಸಲ್ಮಾನ್ ಅವರ ಕ್ಷಮೆಯನ್ನು ಒಪ್ಪಿಕೊಂಡಿಲ್ಲ. ನೀವು ಯಾವ ವಿಷಯಕ್ಕಾಗಿ ಕ್ಷಮೆ ಕೇಳುತ್ತಿದ್ದೀರಾ. ನಿಮಗೆಲ್ಲಾ ನಾಚಿಕೆಯಿಲ್ಲ. ಪ್ರೇಕ್ಷಕರು ಈಗ ನಿಮ್ಮ ಡ್ರಾಮಾವನ್ನು ನೋಡಲು ಇಷ್ಟಪಡುತ್ತಿಲ್ಲ ಎಂದು ಸ್ಪರ್ಧಿಗಳಿಗೆ ತರಾಟೆಗೆ ತೆಗೆದುಕೊಂಡರು.
ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್-7ರ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಇಂದಿನ ಬಿಗ್ ಬಾಸ್ ಸಂಚಿಕೆಯಲ್ಲಿ ಜಾತ್ರೆ ರೀತಿಯಲ್ಲಿ ಸೆಟ್ ಹಾಕಲಾಗಿದ್ದು, ಇದರಲ್ಲಿ ಮನೆಯ ಎಲ್ಲ ಸದಸ್ಯರು ಎಂಜಾಯ್ ಮಾಡಿದ್ದಾರೆ. ಜಾತ್ರೆಯಲ್ಲಿ ಜೋಕರ್ ವೇಷ ಧರಿಸಿ ಕಿಚ್ಚ ಸುದೀಪ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅವರು ಸುದೀಪ್ ಎಂಬುದು ಮನೆಯವರಿಗೆ ತಿಳಿಯಲಿಲ್ಲ.
ಸುದೀಪ್ ಜೋಕರ್ ವೇಷ ಧರಿಸಿ ಮನೆಯವರ ಜೊತೆ ಹೆಚ್ಚು ಸಮಯ ಕಳೆದರು. ಈ ನಡುವೆ ವಾಸುಕಿ ಹಾಗೂ ಶೈನ್ ಅವರನ್ನು ತಬ್ಬಿಕೊಂಡರು. ಆದರೂ ಅವರಿಗೂ ಸುದೀಪ್ ಎಂಬುದು ತಿಳಿಯಲಿಲ್ಲ. ಬಳಿಕ ಬಿಗ್ ಬಾಸ್ ಟಿವಿಯಲ್ಲಿ ಜೋಕರ್ ವೇಷಧಾರಿಯನ್ನು ತೋರಿಸಿದರು.
ಟಿವಿಯಲ್ಲಿ ಜೋಕರ್ ವೇಷದಲ್ಲಿ ಇರುವುದು ಸುದೀಪ್ ಎಂದು ತಿಳಿದ ಮನೆಯ ಸದಸ್ಯರು ಶಾಕ್ ಆದರು. ಬಳಿಕ ಸುದೀಪ್ ಅವರನ್ನು ಕಂಡು ಹಿಡಿಯಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಖಾಸಗಿ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಪ್ರೋಮೋ ಬಿಡುಗಡೆ ಮಾಡಿದ್ದು, ಇಂದು ಸಂಜೆ ಈ ಸಂಚಿಕೆ ಪ್ರಸಾರವಾಗಲಿದೆ.
ಬಿಗ್ ಬಾಸ್ ಸೀಸನ್ -5ರಲ್ಲಿ ಸುದೀಪ್ ಮಾಸ್ಕ್ ಧರಿಸುವ ಮೂಲಕ ಶೆಫ್ ಆಗಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಆಗಲೂ ಸಹ ಯಾವ ಸ್ಪರ್ಧಿಯೂ ಸುದೀಪ್ ಅವರನ್ನು ಕಂಡು ಹಿಡಿಯಲಿಲ್ಲ. ಬಳಿಕ ಬಿಗ್ ಬಾಸ್ ಟಿವಿಯಲ್ಲಿ ಸುದೀಪ್ ಅವರನ್ನು ತೋರಿಸಿತು.
ಬೆಂಗಳೂರು: ಬಿಗ್ ಬಾಸ್ ಮನೆಗೆ ಚೈತ್ರಾ ಕೋಟೂರು ರೀ-ಎಂಟ್ರಿ ನೀಡಿದ್ದು, ಮನೆಯ ಸದಸ್ಯರು ಶಾಕ್ ಆಗಿದ್ದಾರೆ.
ಮಂಗಳವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಮನರಂಜನೆ ನೀಡಲು ಜಾದೂಗಾರ ಕುದ್ರೋಳಿ ಗಣೇಶ್ ಅವರನ್ನು ಮನೆಗೆ ಕಳುಹಿಸಿದ್ದರು. ಗಣೇಶ್ ಅವರು ಬೆಡ್ ರೂಂ, ಡೈನಿಂಗ್ ಟೇಬಲ್, ಲಿವಿಂಗ್ ಏರಿಯಾದಲ್ಲಿ ಮ್ಯಾಜಿಕ್ ತೋರಿಸಿದ ಬಳಿಕ ಗಾರ್ಡನ್ ಏರಿಯಾದಲ್ಲಿ ಮ್ಯಾಜಿಕ್ ತೋರಿಸುವುದಾಗಿ ಹೇಳಿ ಸ್ಪರ್ಧಿಗಳನ್ನು ಹೊರಗೆ ಕರೆದುಕೊಂಡು ಹೋದರು.
ಗಣೇಶ್ ಮನೆಯ ಮುಖ್ಯದ್ವಾರದ ಬಳಿ ಹೋಗಿ ಮ್ಯಾಜಿಕ್ ಮಾಡಿದ್ದಾರೆ. ಈ ವೇಳೆ ಚೈತ್ರಾ ಕೋಟೂರು ಅಲ್ಲಿ ಪ್ರತ್ಯಕ್ಷವಾಗಿದ್ದಾರೆ. ಚೈತ್ರಾ ಅವರನ್ನು ನೋಡುತ್ತಿದ್ದಂತೆ ಮನೆಯ ಸದಸ್ಯರು ಶಾಕ್ ಆದರು. ಚೈತ್ರಾ ಅವರು ಮನೆಯೊಳಗೆ ಹೋಗುತ್ತಿದ್ದಂತೆ ಗಣೇಶ್ ಅಲ್ಲಿಂದ ಹೊರಟು ಹೋಗಿದ್ದಾರೆ.
ಚೈತ್ರಾ ಮನೆಯೊಳಗೆ ಬಂದ ನಂತರ ನಾನು ಮೊದಲೇ ಹೇಳಿದೆ. ಇಲ್ಲಿ ಯಾವುದು ಶಾಶ್ವತ ಅಲ್ಲ. ಟೈಂ ಬಂದಾಗ ಎಲ್ಲರೂ ಹೋಗಬೇಕು. ಮತ್ತೆ ಟೈಂ ಬಂದಾಗ ಬರಬೇಕು ಎಂದು ಹೇಳಿದ್ದಾರೆ. ಸದ್ಯ ಚೈತ್ರಾ ಮನೆಗೆ ಮತ್ತೆ ಎಂಟ್ರಿ ಕೊಟ್ಟಿರುವುದರಿಂದ ಮನೆಯ ಕೆಲವು ಸದಸ್ಯರು ಶಾಕ್‍ನಲ್ಲಿದ್ದು, ಅವರ ಬಗ್ಗೆಯೇ ಮಾತನಾಡುತ್ತಿದ್ದಾರೆ.
ಸೋಮವಾರವಷ್ಟೇ ವೈಲ್ಡ್ ಕಾರ್ಡ್ ಮೂಲಕ ನಟಿ ರಕ್ಷಾ ಸೋಮಶೇಖರ್ ಅವರು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಅವರು ಎಂಟ್ರಿ ಕೊಟ್ಟ ಮರುದಿನವೇ ಚೈತ್ರಾ ಕೋಟೂರು ಬಿಗ್ ಬಾಸ್ ಮನೆಗೆ ಮತ್ತೆ ಪ್ರವೇಶಿಸಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಸೀಸನ್ -7ರಲ್ಲಿ ಸ್ಪರ್ಧಿಗಳಿಬ್ಬರು ಲಿಪ್ ಲಾಕ್ ಮಾಡಿದ್ದು, ಅದನ್ನು ನೋಡಿ ಗಾಯಕ ವಾಸುಕಿ ವೈಭವ್ ಶಾಕ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನಟಿಯರಾದ ದೀಪಿಕಾ ಹಾಗೂ ಭೂಮಿ ಲಿಪ್ ಲಾಕ್ ಮಾಡಿದ್ದಾರೆ. ಇದನ್ನು ನೋಡಿದ ವಾಸುಕಿ ವೈಭವ್ ಶಾಕ್ ಆಗಿದ್ದಾರೆ. ದೀಪಿಕಾ ಹಾಗೂ ಭೂಮಿ ಬೆಳಗ್ಗೆ ಎದ್ದ ತಕ್ಷಣ ಪರಸ್ಪರ ಲಿಪ್ ಕಿಸ್ ಮಾಡಿದ್ದಾರೆ. ಇದೇ ವೇಳೆ ಕಣ್ಣು ಉಜ್ಜಿಕೊಂಡು ಬರುತ್ತಿದ್ದ ವಾಸುಕಿ ಇಬ್ಬರು ಲಿಪ್ ಲಾಕ್ ಮಾಡುತ್ತಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ಬಳಿಕ ಈ ಬಗ್ಗೆ ವಾಸುಕಿ ನಟ ಹರೀಶ್ ಅವರ ಬಗ್ಗೆ ಹೇಳಿದ್ದಾರೆ.
ವಾಸುಕಿ, ಹರೀಶ್ ಅವರ ಬಳಿ ಹೋಗಿ, ಇವರಿಬ್ಬರು ಸರಿಯಿಲ್ಲ. ನಾನು ಬೆಳಗ್ಗೆ ನಿದ್ದೆ ಕಣ್ಣಿನಲ್ಲಿ ಎದ್ದು ಸ್ಟೋರ್ ರೂಮಿನಲ್ಲಿ ನಿಂತಿದ್ದೆ. ಈ ವೇಳೆ ಇಬ್ಬರು ಲಿಪ್ ಲಾಕ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಹೌದಾ ಎಂದು ಹರೀಶ್ ಪ್ರತಿಕ್ರಿಯಿಸಿದಾಗ ಭೂಮಿ ಹಾಗೂ ದೀಪಿಕಾ ಮತ್ತೆ ಲಿಪ್ ಲಾಕ್ ಮಾಡಿದ್ದಾರೆ. ನಾನು ಅವರಿಬ್ಬರು ಮುತ್ತು ಕೊಡುವುದನ್ನು ನೋಡಿದ್ದಕ್ಕೆ ನೀವು ಏಕೆ ನೋಡಿದ್ದೀರಿ ಎಂದು ಹೇಳಿದ್ದಾರೆ ಎಂದರು. ಬಳಿಕ ಬೇಕಾದರೆ ನೀವಿಬ್ಬರು ಲಿಪ್ ಲಾಕ್ ಮಾಡ್ಕೊಳ್ಳಿ ಎಂದು ದೀಪಿಕಾ ಹೇಳಿದ್ದಾರೆ.
ದೀಪಿಕಾ ಹಾಗೂ ಭೂಮಿ ಲಿಪ್ ಲಾಕ್ ಮಾಡಿದ ದೃಶ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿಲ್ಲ. ಆದರೆ ಈ ದೃಶ್ಯವನ್ನು ವೂಟ್‌ನಲ್ಲಿ ನೋಡಬಹುದಾಗಿದೆ.
ಮಂಗಳವಾರ ಬಿಗ್‌ಬಾಸ್ ಮನೆಯ ಮಂದಿಗೆಲ್ಲಾ ಒಂದು ಟಾಸ್ಕ್ ಕೊಟ್ಟಿದ್ದರು. ಸ್ಪರ್ಧಿಗಳು ಎರಡು ಗುಂಪುಗಳಾಗಿ, ಗಾಳಿಯಲ್ಲಿ ಗೋಪುರ ಕಟ್ಟಬೇಕು ಎಂಬ ಟಾಸ್ಕ್ ಕೊಟ್ಟಿದ್ದರು. ಈ ಟಾಸ್ಕ್ ಮಾಡುವಾಗ ಎರಡು ಗುಂಪುಗಳ ಮಧ್ಯೆ ಜೋರಾಗಿ ಜಗಳ, ಗಲಾಟೆ ನಡೆದಿದೆ. ಕೊನೆಗೆ ಬಿಗ್‌ಬಾಸ್ ಈ ಟಾಸ್ಕ್‌ನಿಂದ ಬ್ರೇಕ್ ಕೊಟ್ಟಿದ್ದರು. ಆಗ ಮನೆಯ ಮಂದಿ ಅಡುಗೆ ಮನೆಯಲ್ಲಿ ಕುಳಿತು ಟಾಸ್ಕ್ ನಲ್ಲಿ ನಡೆದ ಜಗಳದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.
ಟಾಸ್ಕ್ ಮಾಡುವಾಗ ಚಂದನಾ ಕಿಶನ್‌ಗೆ ಗಾಯ ಮಾಡಿದ್ದರು. ಹೀಗಾಗಿ ಎಲ್ಲರ ಜೊತೆ ಮಾತನಾಡುತ್ತಿದ್ದ ಕಿಶನ್‌ಗೆ ದೂರದಿಂದ ನಿಂತುಕೊಂಡು ಸಾರಿ ಕೇಳಿದ್ದಾರೆ. ಆಗ ಕಿಶನ್ ಚಂದನಾ ಬಳಿ ಬಂದು ಆಕೆಯನ್ನು ಅಪ್ಪಿಕೊಂಡು ಪರವಾಗಿಲ್ಲ ಬಿಡಿ ಎಂದು ಹೇಳಿದ್ದಾರೆ. ಇದೇ ವೇಳೆ ಅವರ ಕೆನ್ನೆಗೆ ಮುತ್ತುಕೊಟ್ಟಿದ್ದಾರೆ. ಇದನ್ನು ಹರೀಶ್ ರಾಜ್ ನೋಡಿ ನಕ್ಕಿದ್ದಾರೆ. ಕೊನೆಗೆ ಮನೆಯರು ಏನಾಯ್ತು ಎಂದು ಕೇಳಿದ್ದಾರೆ. ಆಗ ಹರೀಶ್ ರಾಜ್ ಪ್ರೀತಿಯಿಂದ ಕಿಶನ್ ಚಂದನಾ ಅವರಿಗೆ ಮುತ್ತು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಸೀಸನ್-7 ಕಾರ್ಯಕ್ರಮದಲ್ಲಿ ಸ್ಪರ್ಧಿ ಡ್ಯಾನ್ಸರ್ ಕಿಶನ್ ಅವರು ಚಂದನಾ ಅವರನ್ನು ಅಪ್ಪಿಕೊಂಡು ಮುತ್ತು ನೀಡಿದ್ದಾರೆ.
ಮಂಗಳವಾರ ಬಿಗ್‌ಬಾಸ್ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೀಡಿದ್ದು, ಇದರಲ್ಲಿ ಸ್ಪರ್ಧಿಗಳು ಸ್ಪರ್ಧಿಗಳು ಎರಡು ಗುಂಪುಗಳಾಗಿ, ಗಾಳಿಯಲ್ಲಿ ಗೋಪುರ ಕಟ್ಟಬೇಕಿತ್ತು. ಈ ಟಾಸ್ಕ್ ಮಾಡುವಾಗ ಎರಡು ಗುಂಪುಗಳ ನಡುವೆ ಜೋರಾಗಿ ಜಗಳ ನಡೆದಿದೆ.
ಸ್ಪರ್ಧಿಗಳು ಜಗಳವಾಡುತ್ತಿರುವುದನ್ನು ನೋಡಿದ ಬಿಗ್‌ಬಾಸ್ ಕೊನೆಗೆ ಮನೆ ಮಂದಿಗೆ ಈ ಟಾಸ್ಕ್ ನಿಂದ ಸ್ಪಲ್ಪ ಬ್ರೇಕ್ ಕೊಟ್ಟಿದ್ದರು. ಈ ವೇಳೆ ಮನೆಯ ಮಂದಿ ಅಡುಗೆ ಮನೆಯಲ್ಲಿ ಕುಳಿತು ಟಾಸ್ಕ್ ವೇಳೆ ನಡೆದ ಜಗಳದ ಬಗ್ಗೆ ಮಾತನಾಡುತ್ತಿದ್ದರು.
ಈ ಟಾಸ್ಕ್ ಮಾಡುವಾಗ ಚಂದನಾ, ಕಿಶನ್ ಅವರಿಗೆ ಗಾಯ ಮಾಡಿದ್ದರು. ಹೀಗಾಗಿ ಎಲ್ಲರ ಜೊತೆ ಮಾತನಾಡುತ್ತಿದ್ದ ಕಿಶನ್‌ಗೆ ದೂರದಿಂದ ನಿಂತುಕೊಂಡು ‘ಸಾರಿ’ ಕೇಳಿದ್ದಾರೆ. ಚಂದನಾ ಕ್ಷಮೆ ಕೇಳುತ್ತಿದ್ದಂತೆ ಅವರ ಬಳಿ ಬಂದಿದ್ದಾರೆ.
ಚಂದನಾರ ಬಳಿ ಬಂದ ಕಿಶನ್ ಅಪ್ಪಿಕೊಂಡು ಪರವಾಗಿಲ್ಲ ಬಿಡಿ ಎಂದು ಹೇಳಿದ್ದಾರೆ. ಇದೇ ವೇಳೆ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದನ್ನು ಹರೀಶ್ ರಾಜ್ ನೋಡಿ ನಕ್ಕಿದ್ದಾರೆ. ಕೊನೆಗೆ ಮನೆಯರು ಏನಾಯ್ತು ಎಂದು ಕೇಳಿದ್ದಾರೆ. ಆಗ ಹರೀಶ್ ರಾಜ್ ಪ್ರೀತಿಯಿಂದ ಕಿಶನ್, ಚಂದನಾ ಅವರಿಗೆ ಮುತ್ತು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ನಾಲ್ಕನೇ ವಾರ ಮನೆಯಿಂದ ಹೊರ ಹೋಗಲು ಪ್ರಿಯಾಂಕಾ, ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ರಾಜ ತಾಳಿಕೋಟೆ, ಚಂದನ್ ಆಚಾರ್, ಚೈತ್ರಾ ಕೊಟ್ಟೂರು ಮತ್ತು ದೀಪಿಕಾ ದಾಸ್ ನಾಮಿನೇಟ್ ಆಗಿದ್ದಾರೆ.
ಬೆಂಗಳೂರು: ಬಿಗ್‍ಬಾಸ್ ಸೀಸನ್ 7 ಭಾನುವಾರದಿಂದ ಆರಂಭವಾಗಲಿದ್ದು, ಯಾರ್ಯಾರು ಈ ಬಾರಿ `ಬಿಗ್’ಹೌಸ್‍ಗೆ ಬರುತ್ತಿದ್ದಾರೆ ಎನ್ನುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಈಗ ಲಭ್ಯವಾಗಿದೆ.
ಭಾನುವಾರದಿಂದ ಬಿಗ್‍ಬಾಸ್ ಸೀಸನ್ 7 ಶುರುವಾಗಲಿದ್ದು, ಬಿಗ್‍ಹೌಸ್‍ನಲ್ಲಿ ಈ ಬಾರಿ ಏನೆಲ್ಲಾ ನಡೆಯುತ್ತೆ? ಸ್ಪರ್ಧಿಗಳು ಯಾರು? ಎನ್ನುವುದನ್ನು ತಿಳಿಯಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಸೀಸನ್ 7ರಲ್ಲಿ ಕೃಷಿಕರು ಇದ್ದಾರಾ? ಸ್ವಾಮೀಜಿ ಇದ್ದಾರಾ? ಬಿಗ್‍ಹೌಸ್‍ಗೆ ಹೋಗೋ ಹಿರಿತೆರೆ-ಕಿರಿತೆರೆಯ ಕಲಾವಿದರ್ಯಾರು? ಎನ್ನುವ ಸಂಭಾವ್ಯ ಸ್ಪರ್ಧಿಗಳ ಎಕ್ಸ್‌ಕ್ಲೂಸಿವ್ ಲಿಸ್ಟ್ ಇಲ್ಲಿದೆ. ಇದನ್ನೂ ಓದಿ:ಬಿಗ್‍ಬಾಸ್ ಸಂಭಾವನೆ ಎಷ್ಟು – ಪತ್ನಿ ವಿಚಾರ ಪ್ರಸ್ತಾಪಿಸಿ ಸ್ಮಾರ್ಟ್ ಉತ್ತರ ನೀಡಿದ ಕಿಚ್ಚ
ಈ ಪಟ್ಟಿಯಲ್ಲಿ ಇರುವ ಎಲ್ಲ ಕಲಾವಿದರು ಮನೆ ಸೇರುತ್ತಾರಾ ಇಲ್ಲವೋ ಎನ್ನುವುದು ಅಧಿಕೃತವಾಗಿ ತಿಳಿದು ಬಂದಿಲ್ಲ. ಈ ಕಲಾವಿದರ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
`ಬಿಗ್‍ಬಾಸ್’ ಸಂಭಾವ್ಯ ಸ್ಪರ್ಧಿಗಳ ಪಟ್ಟಿ:
ಈ ಬಾರಿ ದೊಡ್ಡ ತಾರಾಗಣವೇ ಬಿಗ್ ಹೌಸ್‍ನಲ್ಲಿ ಮಿಂಚಲಿದ್ದಾರೆ. ತುಪ್ಪದ ಬೆಡಗಿ ನಟಿ ರಾಗಿಣಿ, ನಟ ಜೈಜಗದೀಶ್, ಹಾಸ್ಯನಟ ಕುರಿ ಪ್ರತಾಪ್, ಹಾಸ್ಯನಟ ರಾಜು ತಾಳಿಕೋಟೆ, ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ, ನಟಿ ದುನಿಯಾ ರಶ್ಮಿ, ಕಿರುತೆರೆ ನಟಿ ದೀಪಿಕಾ ದಾಸ್(ನಾಗಿಣಿ- ಅಮೃತಾ), ಕಿರುತೆರೆ ನಟಿ ಸುಜಾತಾ(ರಾಧಾರಮಣ- ಸಿತಾರಾ), ನಟ ರಾಹುಲ್(ನೀನ್ಯಾರೆ, ಜಿಗರ್‍ಥಂಡಾ ಮೂವಿ), ಗಾಯಕಿ ಶಮಿತಾ ಮಲ್ನಾಡ್, ಗುರುಲಿಂಗ ಸ್ವಾಮಿಜಿ, ನಟಿ ರಂಜಿನಿ ರಾಘವನ್(ಪುಟ್ಟ ಗೌರಿ ಮದುವೆ), ನಟ ಪಂಕಜ್ ಎಸ್.ನಾರಾಯಣ್, ಕಿರುತೆರೆ ನಟಿ ಭೂಮಿ ಶೆಟ್ಟಿ(ಕಿನ್ನರಿ), ನಟ ಕಿರಣ್ ರಾಜ್(ಕಿನ್ನರಿ), ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್(ಕಾಸರಗೋಡು), ನಿರೂಪಕಿ ಚೈತ್ರ ವಾಸುದೇವನ್, ಚಂದನ ಅನಂತಸ್ವಾಮಿ.
ಸದ್ಯ ಬಿಗ್‍ಹೌಸ್‍ಗೆ ಎಂಟ್ರಿಕೊಡಲಿದ್ದಾರೆ ಎನ್ನಲಾಗಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಒಟ್ಟು 18 ಮಂದಿ ಹೆಸರು ಕೇಳಿಬಂದಿದೆ. ಇದರಲ್ಲಿ ಸ್ಯಾಂಡಲ್‍ವುಡ್, ಕಿರುತೆರೆ ನಟ-ನಟಿಯರ ಹೆಸರೇ ಹೆಚ್ಚಾಗಿದೆ. ಇದು ಕೇವಲ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಾಗಿದ್ದು, ಬಿಗ್‍ಹೌಸ್‍ನಲ್ಲಿ ಈ ಬಾರಿ ಗಾಸಿಪ್ಸ್, ಗಲಾಟೆ, ಪ್ರೀತಿ, ಸ್ನೇಹ ಹೇಗಿರುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
– ಮೊದಲ ಆವೃತ್ತಿಯ ಸ್ಪರ್ಧಿಗಳು ನೈಜವಾಗಿ ಅಭಿನಯಿಸಿದ್ರು
– ಅಯ್ಯಪ್ಪ ಬಿಟ್ಟರೆ ನಾನು ಯಾರನ್ನೂ ರೆಫರ್ ಮಾಡಿಲ್ಲ
ಬೆಂಗಳೂರು: ಬಿಗ್ ಬಾಸ್ ಶೋ ನಡೆಸುತ್ತಿರುವ ನಿಮ್ಮ ಸಂಭಾವನೆ ಎಷ್ಟು ಎನ್ನುವ ಪ್ರಶ್ನೆಗೆ ಸುದೀಪ್ ಸ್ಮಾರ್ಟ್ ಉತ್ತರ ನೀಡಿದ್ದಾರೆ.
ಬಿಗ್ ಬಾಸ್ ಶೋ ಹಿನ್ನೆಲೆಯಲ್ಲಿ ಇಂದು ವಾಹಿನಿ ಸುದ್ದಿಗೋಷ್ಠಿಯನ್ನು ಆಯೋಜಿಸಿತ್ತು. ಈ ವೇಳೆ ನಿಮ್ಮ ಸಂಭಾವನೆ ಎಷ್ಟು ಎನ್ನುವ ಪ್ರಶ್ನೆಯನ್ನು ಸುದೀಪ್ ಅವರಲ್ಲಿ ಕೇಳಲಾಯಿತು. ಈ ಪ್ರಶ್ನೆಗೆ, ಸಂಭಾವನೆ ವಿಚಾರವನ್ನು ನಾನು ಪತ್ನಿ ಬಿಟ್ಟು ಬೇರೆ ಯಾರ ಜೊತೆಗೂ ಹಂಚಿಕೊಳ್ಳುವುದಿಲ್ಲ ಎಂದು ಸ್ಮಾರ್ಟ್ ಉತ್ತರ ನೀಡಿದರು.
ಈ ವೇಳೆ ಶೋಗೆ ನೀವು ಇಲ್ಲಿಯವರೆಗೆ ಯಾರನ್ನು ರೆಫರ್ ಮಾಡಿದ್ರಾ ಎನ್ನುವ ಪ್ರಶ್ನೆಗೆ, ಒಬ್ಬ ಕ್ರೀಡಾಪಟು ಇದ್ದರೆ ಚಂದ ಎಂಬ ಕಾರಣಕ್ಕೆ ಬಿಗ್ ಬಾಸ್‍ನ 4ನೇ ಆವೃತ್ತಿಯಲ್ಲಿ ಕ್ರಿಕೆಟರ್ ಅಯ್ಯಪ್ಪನನ್ನು ಕರೆದುಕೊಳ್ಳುವಂತೆ ರೆಫರ್ ಮಾಡಿದ್ದೆ ಅಷ್ಟೇ ಎಂದು ಹೇಳಿದರು.
ನಾನು ಇಲ್ಲಿಯವರೆಗೆ ಯಾರನ್ನೂ ಕರೆದುಕೊಳ್ಳಿ ಎಂದು ರೆಫರ್ ಮಾಡಿಲ್ಲ. ಆದರೆ ಒಬ್ಬರು ಸ್ಪರ್ಧಿ ಕೈಕೊಟ್ಟ ಸಂದರ್ಭದಲ್ಲಿ ಕ್ರೀಡಾಪಟು ಇದ್ದರೆ ಚೆಂದ ಎನ್ನುವ ಕಾರಣಕ್ಕೆ ಕ್ರಿಕೆಟರ್ ಅಯ್ಯಪ್ಪನನ್ನು ನಾನು ರೆಫರ್ ಮಾಡಿದ್ದೆ. ಅದನ್ನು ಬಿಟ್ಟರೆ ಮತ್ತೆ ಯಾರನ್ನೂ ನಾನು ರೆಫರ್ ಮಾಡಿಲ್ಲ. ಹಲವು ರಾಜಕಾರಣಿಗಳು ಸೇರಿ ನಮ್ಮ ಕಡೆಯೊಬ್ಬರು ಇರುತ್ತಾರೆ ಎಂದು ಕರೆ ಮಾಡುತ್ತಲೇ ಇರುತ್ತಾರೆ ಎಂದರು.
ಮೊದಲ ಅವೃತ್ತಿಗೆ ಮೆಚ್ಚುಗೆ
ಬಿಗ್ ಬಾಸ್‍ನಲ್ಲಿ ಮತ್ತೆ ಭಾಗಿಯಾಗುತ್ತಿರುವುದು ಖುಷಿ ತಂದಿದೆ. ಏಳು ವರ್ಷ ಕಳೆದಿರುವುದೇ ಗೊತ್ತಾಗಿಲ್ಲ. ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯನ್ನು ನಾನೆಂದೂ ಕೇಳುವುದಿಲ್ಲ. ಬಿಗ್ ಬಾಸ್‍ನಿಂದ ಒಂದೊಳ್ಳೆ ಅನುಭವ ಸಿಕ್ಕಿದೆ. ಮೊದಲ ಆವೃತ್ತಿಯ ಸ್ಪರ್ಧಿಗಳು ನನಗೆ ತುಂಬಾ ಫೇವರಿಟ್. ಅವರೆಲ್ಲ ನೈಜವಾಗಿ ಅಭಿನಯಿಸಿದರು. ಅಲ್ಲದೆ ಅವರಿಗೆ ಬಿಗ್ ಬಾಸ್ ಏನು ಎಂಬುದು ತಿಳಿದಿರಲಿಲ್ಲ. ಹೀಗಾಗಿ ಅವರು ನನಗಿಷ್ಟ ಎಂದು ಬಿಗ್ ಬಾಸ್ ಮೊದಲನೇ ಸೀಸನ್‍ನ ಸ್ಪರ್ಧಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲ ಸೀಸನ್‍ನ ಯಾವೊಬ್ಬ ಸ್ಪರ್ಧಿಗಳಿಗೆ ಬಿಗ್ ಬಾಸ್ ಹೇಗೆ ನಡೆಯುತ್ತದೆ ಎನ್ನುವುದು ಗೊತ್ತಿರಲಿಲ್ಲ. ಆದರೆ ಮುಂದೆ ಬಂದವರು ಗೆಲ್ಲುವುದಕ್ಕೋಸ್ಕರ ಏನೇನು ಮಾಡಬೇಕೋ ಅದೆಲ್ಲವನ್ನೂ ಮಾಡಿದರು. ಆದ್ದರಿಂದ ಫಸ್ಟ್ ಸೀಸನ್ ಸ್ಪರ್ಧಿಗಳು ನನಗೆ ತುಂಬಾ ಇಷ್ಟ ಎಂದರು.
ಈ ಬಾರಿಯ ವಿಜೇತರಿಗೆ ಕೇವಲ 50 ಲಕ್ಷ ರೂಪಾಯಿ ಮಾತ್ರವಲ್ಲ ಬೇರೆ ಮೂಲಗಳಿಂದಲೂ ಲಾಭ ಆಗಲಿದೆ. ಈ ಹಿಂದಿನ ಸೀಸನ್‍ನ ಎಷ್ಟೋ ಸ್ಪರ್ಧಿಗಳು ಕಿರುತೆರೆ, ಬೆಳ್ಳಿತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಒಂದಷ್ಟು ಜನ ಏನೇನೋ ಮಾಡುತ್ತೇನೆ ಎಂದುಕೊಂಡು ಏನೂ ಮಾಡಿಲ್ಲ. ಆದ್ದರಿಂದ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಸ್ಪರ್ಧಿಗಳಿಗೆ ಸುದೀಪ್ ಸಲಹೆ ನೀಡಿದರು.
ಬಿಗ್ ಬಾಸ್‍ನಿಂದ ನಮ್ಮ ಮೇಲಿದ್ದ ದೃಷ್ಟಿ ಬದಲಾಯಿತು. ಇಲ್ಲವಾದಲ್ಲಿ ಅಯ್ಯೋ ಅವನ ಎನ್ನುವ ರೀತಿ ಮಾತನಾಡುತ್ತಿದ್ದರು. ಇದು ಪ್ಯೂರ್ ಸೆಲೆಬ್ರಿಟಿಗಳಿಗಾಗಿ ಇದ್ದದ್ದು, ಆದರೆ ಇದರ ನಡುವೆ ಹೊಸದೊಂದು ಪ್ರಯೋಗ ಆಗಲಿ ಎಂದು ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿತ್ತು. ಆದರೆ ಈ ಬಾರಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಜೊತೆಗೆ ಜನರ ಪ್ರೀತಿ ಸ್ಪರ್ಧಿಗಳಿಗೆ ಸಿಗಲಿದೆ ಎಂದು ತಿಳಿಸಿದರು.
ಬಿಗ್ ಬಾಸ್ ವಿಶೇಷತೆ
ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾತನಾಡಿ, ಈ ಬಾರಿ 1.30 ಗಂಟೆಗಳ ಕಾಲ ಶೋ ಇರಲಿದೆ. ಅಲ್ಲದೆ ಪ್ರತಿ ಭಾನುವಾರ ವಿಶೇಷ ಶೋ ಇರಲಿದೆ. ಜೊತೆಗೆ ಅಕ್ಟೋಬರ್ 13 ರಂದು ಆರು ಮಲ್ಟಿಪ್ಲೆಕ್ಸ್ ಸ್ಕ್ರೀನ್‍ಗಳಲ್ಲಿ ಲೈವ್ ನಡೆಯಲಿದೆ. ಇದು ಲಾಂಚ್ ಡೇ ಶೋ ವಿಶೇಷತೆಯಾಗಿದೆ. ಬೆಂಗಳೂರಿನ 3, ಮೈಸೂರು 1, ಮಣಿಪಾಲ್ ಮತ್ತು ಉಡುಪಿಯಲ್ಲಿ ತಲಾ ಒಂದೊಂದು ಸ್ಕ್ರೀನ್‍ಗಳಲ್ಲಿ ಲೈವ್ ಪ್ರಸಾರವಾಗಲಿದೆ ಮಾಹಿತಿ ನೀಡಿದರು.