Tag: ಸ್ಪರ್ಧಿಗಳು

  • ಬಿಗ್‍ಬಾಸ್ ಮನೆಯಲ್ಲಿ ಅವಾರ್ಡ್ ಪ್ರೊಗ್ರಾಮ್

    ಬಿಗ್‍ಬಾಸ್ ಮನೆಯಲ್ಲಿ ಅವಾರ್ಡ್ ಪ್ರೊಗ್ರಾಮ್

    ಬಿಗ್‍ಬಾಸ್ ಮನೆಯಲ್ಲಿ ಕಣ್ಮಣಿ ಒಂದು ಅವಾರ್ಡ್ ಪ್ರೊಗ್ರಾಮ್ ನಡೆಸಿಕೊಟ್ಟಿದ್ದಾರೆ. ಆಗ ಬಿಗ್‍ಬಾಸ್ ಮನೆಯಲ್ಲಿ ಜಾಸ್ತಿ ಮಾತನಾಡುವವರು, ತುಂಬಾ ಸ್ಲೋ ಯಾರು? ತುಂಬಾ ಸ್ಪೀಡ್ ಆಗಿ ಮಾತನಾಡುವುದು ಯಾರು ಹೀಗೆ ಫನ್ನಿ ಪ್ರಶ್ನೆಗಳನ್ನು ಕೇಳಿದ್ದಾರೆ. ಕಣ್ಮಣಿ ಕೇಳಿದ ಪ್ರಶ್ನೆಗಳಿಗೆ ಸಖತ್ ಮಜವಾಗಿ ಸ್ಪರ್ಧಿಗಳು ಉತ್ತರ ಕೊಟ್ಟಿದ್ದಾರೆ.

    ಅತಿ ಹೆಚ್ಚು ಮಾತನಾಡುವವರು ಯಾರು ? ಎನ್ನು ಪ್ರಶ್ನೆಗೆ ಚಕ್ರವರ್ತಿ ಅವರಿಗೆ ಅವಾರ್ಡ್ ಸಿಕ್ಕಿದೆ. ಸ್ಲೋ ಮೋಶನ್ ಸುಂದರ ಯಾರು ಎನ್ನುವ ಪ್ರಶ್ನೆಗೆ ಮನೆ ಮಂದಿ ನಿಧಿ, ರಘು ಎಂದು ಹೇಳಿದ್ದಾರೆ. ಆಗ ಮನೆಮಂದಿ ಇಬ್ಬರು ತುಂಬಾ ಸ್ಲೋ ಎಂದು ಹೇಳಿದ್ದಾರೆ. ಹೌದು ಇವರು ಇಬ್ಬರು ತುಂಬಾನೇ ಸ್ಲೋ ಆಗಿದ್ದಾರೆ. ಯಾಕೆ ಎಂದರೆ ಎಲ್ಲ ಕೆಲಸವು ಸ್ಲೋ ಆಗಿ ಮಡುತ್ತಾರೆ ಎಂದು ಕೆಲವು ಕಾರಣಗಳನ್ನು ತಮಾಷೆಯಾಗಿ ಹೇಳಿದ್ದಾರೆ.

     ರಘು ಕುರಿತಾಗಿ ನನಗೆ ತುಂಬಾಕೋಪಾ ಇದೆ. ನಾನು ಕ್ಲೋಸ್ ಅಪ್‍ನಲ್ಲಿ ಏನಾದರು ನೋಡುತ್ತಾ ಇರುತ್ತೇನೆ ಅವರು ನನ್ನ ಕಣ್ಣು ಮುಂದೆನೆ ಬಂದು ಓಡಾಡ್ತಾ ಇರುತ್ತಾರೆ ಆಗ ನನಗೆ ತುಂಬಾ ಸಿಟ್ಟು ಬರುತ್ತದೆ. ನಿಧಿ ಊಟಕ್ಕೆ ಹೋದರೆ ಟಾಸ್ಕ್ ಶುರು ಮಾಡೋದಾ ಎಂದು ನಾವು ಯೋಚನೆ ಮಾಡುತ್ತಿರುತ್ತೇವೆ. ವೈಷ್ಣವಿ ಸ್ನಾನಕ್ಕೆ ಹೋದರು ಅಷ್ಟೇ ಟೈಮ್ ತೆಗೆದುಕೊಳ್ಳುತ್ತಾರೆ ಎಂದು ಕಣ್ಮಣಿ ಹೇಳಿದ್ದಾರೆ.

    ತುಂಬಾ ಸ್ಲೋ ಎನ್ನುವುದಕ್ಕೆ ಅತಿಹೆಚ್ಚು ಮತ ರಘು ಅವರಿಗೆ ಬಂದಿರುವುದರಿಂದ ಅತೀ ವೇಗವಾಗಿ ಮಾತನಾಡುವ ಸಂಬರಗಿ ಅವರು ರಘು ಅವರಿಗೆ ಅವಾರ್ಡ್ ಕೊಟ್ಟಿದ್ದಾರೆ. ಹೀಗೆ ಕಣ್ಮಣಿ ಕೆಲವು ಸೀರಿಯಸ್ ಪ್ರಶ್ನೆಗಳನ್ನು ಮಜವಾಗಿ ಕೇಳಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳಿಗೆ ಒಂದೊಂದು ನಡುವಳಿಕೆಯನ್ನು ಆಧರಿಸಿ ಪ್ರತಿಯೊಬ್ಬರಿಗೂ ಒಂದೊಂದು ವಾರ್ಡ್ ಕೊಡಲಾಗಿದೆ. ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಈ ವಾರ್ಡ್ ಕೊಡುತ್ತಿರುವ ಹಿಂದಿರುವ ನಿಜವಾದ ಸಂಗತಿ ತಿಳಿದರೆ ಯಾರು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

  • ಮನೆಯ ಗಂಡೈಕಳುಗಳನ್ನ ಗೋಳಾಡಿಸಿದ ಶುಭಾ

    ಮನೆಯ ಗಂಡೈಕಳುಗಳನ್ನ ಗೋಳಾಡಿಸಿದ ಶುಭಾ

    ಬಿಗ್‍ಬಾಸ್ ಕೆಲವು ಸ್ಪರ್ಧಿಗಳಿಗೆ ಸಿಗರೇಟ್‍ಗಳನ್ನು ನೀಡುತ್ತಾರೆ. ಶುಭಾ ಪೂಂಜಾ ತಮಾಷೆಗಾಗಿ ಸಿಗರೇಟ್‍ಗಳನ್ನು ಬಿಚ್ಚಿಟ್ಟುಕೊಂಡು ಕೆಲವು ಸಮಯಗಳ ಕಾಲ ಕಾಡಿಸಿದ್ದಾರೆ. ಪುರುಷ ಸ್ಪರ್ಧಿಗಳು ಸಿಗರೇಟ್ ನೀಡದ ಬಿಗ್‍ಬಾಸ್ ಬಗ್ಗೆ ಕೊಂಚ ಬೇಸರವಾಗಿ ಕುಳಿತಿದ್ದರು.

    ಬಿಗ್ ಬಾಸ್ ಪುರುಷ ಸ್ಪರ್ಧಿಗಳಿಗೆ ಸಿಗರೇಟ್ ನೀಡಿದ್ದರು. ಅದನ್ನು ಕಂಡ ಶುಭಾ ಪೂಂಜಾ ಅವರು ರಾಜೀವ್ ಮತ್ತು ಅರವಿಂದ್ ಅವರ ಸಿಗರೇಟ್ ಬಿಟ್ಟು ಉಳಿದವರ ಸಿಗರೇಟ್‍ನ್ನು ಮುಚ್ಚಿಟ್ಟಿದ್ದರು. ಈ ವಿಷಯ ಯಾರಿಗೂ ತಿಳಿಯಬಾರದೆಂದು ರಾಜೀವ್ ಹಾಗೂ ಅರವಿಂದ್‍ಗೂ ತಿಳಿಸಿದ್ದರು. ರಘು ಗೌಡ, ಶಮಂತ್ ಬ್ರೊ ಗೌಡ, ಚಕ್ರವರ್ತಿ ಚಂದ್ರಚೂಡ್ ಅವರು ನಮ್ಮ ಸಿಗರೇಟ್ ಎಲ್ಲಿ ಎಂದು ಗಲಿಬಿಲಿಯಿಂದ ಪ್ರಶ್ನೆ ಮಾಡಿದ್ದಾರೆ. ಮಂಜು ಪಾವಗಡ ಕೂಡ ನಮ್ಮ ಸಿಗರೇಟ್ ಎಲ್ಲಿ? ಅರವಿಂದ್ ಅವರಿಗೆ ಮಾತ್ರ ಯಾಕೆ ಸಿಗರೇಟ್ ಕೊಟ್ಟಿದ್ದಾರೆ? ಎಂದು ಗಾಬರಿಯಿಂದ ಮನೆಯ ಸದಸ್ಯರೆಲ್ಲರನ್ನು ಪ್ರಶ್ನೆ ಮಾಡಿದ್ದರು.

    ಸಿಗರೇಟ್ ಕೊಡಲಿಲ್ಲ ಅಂದರೆ ದಂಗೆ, ದಾಳಿಗಳು ಆಗತ್ತೆ, ಯುದ್ಧ, ಬಂಡಾಯ ಆಗತ್ತೆ ಎಂದು ಹೇಳಿದ್ದರು. ಇದೇನಾದರೂ ಟಾಸ್ಕ್ ಇರಬಹುದಾ? ಬೇರೆಯವರು ಎತ್ತಿಟ್ಟುಕೊಂಡಿರಬಹುದಾ? ಎಂಬ ಅನುಮಾನ ಕೂಡ ರಘುಗೆ ಬಂದಿದೆ. ಆದರೆ ಶುಭಾ ಮಾತ್ರ ಏನೂ ಮಾತನಾಡದೆ ಕೆಲವು ಸಮಯಗಳ ಕಾಲ ಪುರುಷ ಸ್ಪರ್ಧಿಗಳನ್ನು ಆಟ ಆಡಿಸಿದ್ದಾರೆ.

     ಪುರುಷ ಸ್ಪರ್ಧಿಗಳ ಕಷ್ಟವನ್ನು ನೋಡಲಾಗದೆ ಕೆಲವು ಸಮಯಗಳ ನಂತರ ಶುಭಾ ಪೂಂಜಾ ಸ್ಮೋಕ್ ಝೋನ್‍ನಲ್ಲಿ ಸಿಗರೇಟ್ ಇಟ್ಟುಬಂದಿದ್ದರು. ಈ ವಿಷಯ ಸಿಗರೇಟ್ ಪ್ರಿಯರಿಗೆ ತಿಳಿದ ನಂತರದಲ್ಲಿ ಇದು ಯಾರೋ ಮಾಡಿದ ಕೆಲಸ ಅಂತ ಕೂಡ ಗೊತ್ತಾಗಿದೆ. ಆಗ ಶುಭಾ ಪೂಂಜಾ ಅವರು ನಮ್ಮ ಮೇಲೆ ಆರೋಪ ಮಾಡಿದ್ರಿ ಅಂತ ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ.

     ಸಿಗರೇಟ್ ಪ್ರಾಣ ಉಳಿಸತ್ತೆ, ಆದರೆ ನಡೆದುಕೊಂಡು ಹೋಗೋಕೆ ಅದಕ್ಕೇನಾದರೂ ಪ್ರಾಣ ಇದೆಯಾ? ಜೇನುಗೂಡಿನಂತೆ ಇರುವ ಮನೆಯ ಮಂದಿ ಮೇಲೆ ಯಾಕೆ ಡೌಟ್ ಪಡೋದು? ಅಂತ ರಘು ಹೇಳಿದ್ದಾರೆ.

    ಆ ಶುಭಾ ಸಿಗರೇಟ್ ಬಚ್ಚಿಟ್ಟಿದ್ದು ನಾನೆ ಎಂದು ರಘು ಬಳಿ ಸತ್ಯ ಒಪ್ಪಿಕೊಂಡಿದ್ದಾರೆ. ಮಂಜುಗೆ ಈ ವಿಷಯ ಹೇಳದೆ, ಸಿಗರೇಟ್ ಮುಚ್ಚಿಡುವ ಅಂತ ಶುಭಾ ಅವರು ರಘುಗೆ ಹೇಳಿದ್ದರು. ಒಟ್ಟಿನಲ್ಲಿ ಸಿಗರೇಟ್ ಬಿಗ್ ಬಾಸ್ ಮನೆಯಲ್ಲಿ ತುಂಬ ಮುಖ್ಯವಾದ ವಿಷಯ. ಕೆಲವು ಪುರುಷ ಸ್ಪರ್ಧಿಗಳಿಗೆ ಸಿಗರೇಟ್ ಇಲ್ಲ ಅಂದ್ರೆ ಆಗುವುದಿಲ್ಲ ಎಂದು ಅನ್ನಿಸಿ ಬಿಡುತ್ತದೆ.

     

  • ದೊಡ್ಮನೆ ಹೆಣ್ಮಕ್ಕಳಿಗೆ ನ್ಯೂಟ್ರಿಕ್ಸ್ ಹೇಳಿಕೊಟ್ಟ ಶುಭಾ ಪೂಂಜಾ!

    ದೊಡ್ಮನೆ ಹೆಣ್ಮಕ್ಕಳಿಗೆ ನ್ಯೂಟ್ರಿಕ್ಸ್ ಹೇಳಿಕೊಟ್ಟ ಶುಭಾ ಪೂಂಜಾ!

    ನೆಯ ಎಲ್ಲ ವಸ್ತುಗಳನ್ನು ಬಿಗ್‍ಬಾಸ್ ವಶಪಡಿಸಿಕೊಂಡು ಪ್ರತಿಯೊಂದು ವಸ್ತುಗಳ ಬೆಲೆಯನ್ನು ಮನೆಯ ಸ್ಪರ್ಧಿಗಳಿಗೆ ಅರ್ಥಮಾಡಿಸುತ್ತಿದ್ದಾರೆ. ಈಗಾಗಲೇ ಹಲವಾರು ಟಾಸ್ಕ್‍ಗಳನ್ನು ನೀಡುವ ಮೂಲಕ ಮನೆಯ ಸದಸ್ಯರಿಗೆ ಒಂದೊಂದಾಗಿ ಮನೆಯ ಸಾಮಾಗ್ರಿಗಳನ್ನು ಹಿಂದಿರುಗಿಸುತ್ತಿದ್ದಾರೆ.

    ಈ ವಾರ ಮನೆಯ ಸ್ಪರ್ಧಿಗಳು ಊಟ, ತಿಂಡಿ, ನಿದ್ದೆ, ಬೆಡ್ ರೂಮ್ ಎಲ್ಲವನ್ನು ಕಳೆದುಕೊಂಡು ಪರದಾಡುತ್ತಿದ್ದಾರೆ. ಅಲ್ಲದೇ ಸ್ನಾನ ಮಾಡಲು ಸೋಪು ಕೂಡ ಇಲ್ಲದೇ ಒದ್ದಾಡುತ್ತಿದ್ದಾರೆ. ಆದರೆ ಈ ಮಧ್ಯೆ ನಿನ್ನೆ ಶುಭಾ ಪೂಂಜಾ ಸೋಪು, ಶ್ಯಾಂಪೂ ಇಲ್ಲದೇ ಹೇಗೆ ಸ್ನಾನ ಮಾಡಬೇಕೆಂದು ಮನೆಯ ಸದಸ್ಯರಿಗೆ ಪಾಠ ಮಾಡಿದ್ದಾರೆ.

    ಹೌದು ನಿನ್ನೆ ಶುಭಾ ಪೂಂಜಾ, ವೈಷ್ಣವಿ, ದಿವ್ಯಾ ಉರುಡುಗ, ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಗೆ ಸ್ನಾನ ಮಾಡುವ ವಿಧಾನವನ್ನು ಹೇಳಿ ಕೊಟ್ಟಿದ್ದಾರೆ. ಮೊದಲಿಗೆ ಕೈಗೆ ಹ್ಯಾಂಡ್ ವಾಶ್ ತೆಗೆದು ಒಂದು ಮಗ್‍ಗೆ ಹಾಕಿಕೊಳ್ಳಿ, ನಂತರ ಅದನ್ನು ನೀರಿಗೆ ಮಿಕ್ಸ್ ಮಾಡಿ, ನಂತರ ಅದನ್ನು ಮೈಗೆ ಚೆನ್ನಾಗಿ ಉಜ್ಜಿಕೊಳ್ಳಿ, ಆದಾದ ನಂತರ ನೀರು ಹಾಕಿಕೊಂಡು ಸ್ನಾನ ಮಾಡಿ ಮುಗಿಸಿಕೊಳ್ಳಿ.

    ಸ್ನಾನದ ಬಳಿಕ ಒಂದು ನಿಮಿಷ ಹಾಗೆಯೇ ನಿಂತುಕೊಳ್ಳಿ. ನಂತರ ಕೈನಲ್ಲಿ ಮೈನಲ್ಲಿರುವ ನೀರನ್ನು ತೆಗೆದು ಹಾಕಿ. ಆದಾದ ಬಳಿಕ ಮತ್ತೆ ಟಿಶ್ಯೂ ಪೇಪರ್ ತೆಗೆದುಕೊಂಡು ಅದನ್ನು ಸ್ವಲ್ಪ ರೋಲ್ ಮಾಡಿ ಮೈ ಒರೆಸಿಕೊಳ್ಳಿ. ಇಷ್ಟೇ ಕೆಲಸ ಮುಗಿಯಿತು ಹಾಕಿರುವ ಬಟ್ಟೆಯನ್ನು ಮತ್ತೆ ಹಾಕಿಕೊಳ್ಳಿ. ಇಲ್ವಾ ಗಾರ್ಬೆಜ್ ಬ್ಯಾಗ್ಸ್‍ನಲ್ಲಿ ಡ್ರೆಸ್ ಮಾಡಿಕೊಳ್ಳೋಣ ಅಷ್ಟೇ ಎಂದು ಹೇಳಿದ್ದಾರೆ.

    ಬಿಗ್‍ಬಾಸ್ ನೀವ್ ನಮಗೆ ಏನ್ ಕೊಡದೇ ಹೋದರು ಪರವಾಗಿಲ್ಲ ಬದುಕ್ತೀವಿ. ಆದರೆ ಮಾತನಾಡುವುದಿಲ್ಲ. ಟೂ ಟೂ ಆನೆ ಮೇಲೆ, ಕುದುರೆ ಮೇಲೆ, ಒಂಟೆ ಮೇಲೆ, ಕೋಳಿ ಮೇಲೆ, ಹುಂಜ ಮೇಲೆ ಎಲ್ಲಾದರ ಮೇಲೆ ಟೂ ಟೂ ಟೂ ಎಂದು ಬಿಗ್‍ಬಾಸ್‍ಗೆ ಹೇಳಿದ್ದಾರೆ.

  • ನೀರು, ಊಟ, ನಿದ್ದೆ ಇಲ್ಲದೆ ಪರದಾಡಿದ ಸ್ಪರ್ಧಿಗಳು!

    ನೀರು, ಊಟ, ನಿದ್ದೆ ಇಲ್ಲದೆ ಪರದಾಡಿದ ಸ್ಪರ್ಧಿಗಳು!

    ಪ್ರತಿನಿತ್ಯದಂತೆ ನಿನ್ನೆ ಕೂಡ ಬೆಳಗ್ಗೆ ಬಿಗ್‍ಬಾಸ್ ಮನೆಯಲ್ಲಿ ಸಾಂಗ್ ಪ್ಲೇ ಆಗುತ್ತಿದ್ದಂತೆ ಮನೆಮಂದಿ ಏಳುತ್ತಾರೆ, ಎದ್ದ ಕೂಡಲೇ ರೂಮಿನಿಂದ ಹೊರಬಂದ ಮನೆ ಮನೆಮಂದಿಗೆ ಬಿಗ್‍ಬಾಸ್ ದೊಡ್ಡ ಶಾಕ್ ಅನ್ನೇ ನೀಡಿದ್ದಾರೆ.

    ಹೌದು, ನಿನ್ನೆ ಬಿಗ್‍ಬಾಸ್ ಕಾಣದಂತೆ ಮಾಯಾವಾದನೂ ಸಾಂಗ್ ಹಾಕಿ ಮನೆಮಂದಿಯನ್ನು ಎಚ್ಚರಗೊಳಿಸಿದರು. ಎದ್ದ ಕೂಡಲೇ ಲಿವಿಂಗ್ ಏರಿಯಾಗೆ ಬಂದ ಎಲ್ಲಾ ಸ್ಫರ್ದಿಗಳಿಗೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ನಾಪತ್ತೆಯಾಗಿರುವುದನ್ನು ಕಂಡು ಅಚ್ಚರಿಗೊಳ್ಳುತ್ತಾರೆ.

    ನಂತರ ಕಿಚನ್ ರೂಮ್‍ಗೆ ಹೋಗಿ ನೋಡಿದಾಗ ಅಲ್ಲಿದ್ದ ಅಡುಗೆ ಸಾಮಗ್ರಿಗಳು, ಅಡುಗೆ ಪದಾರ್ಥಗಳು ಎಲ್ಲವೂ ಮಾಯವಾಗಿತ್ತು. ಬಳಿಕ ಅಲ್ಲಿಂದ ಗಾರ್ಡನ್ ಏರಿಯಾಗೆ ಹೋಗಿ ನೋಡಿದಾಗ ಜಿಮ್ ಐಟಮ್ಸ್ ಕೂಡ ಇರಲಿಲ್ಲ. ಇದಾದ ನಂತರ ಬಾತ್‍ರೂಮ್ ಏರಿಯಾಗೆ ಹೋಗಿ ನೋಡಿದಾಗ ಬ್ರಶ್ ಸೋಪ್ ಎಲ್ಲವು ನಾಪತ್ತೆಯಾಗಿತ್ತು. ಅಷ್ಟೇ ಅಲ್ಲದೇ ಮನೆಯಲ್ಲಿ ನೀರು ಕೂಡ ನಿಲ್ಲಿಸಿದರು.

    ಈ ವೇಳೆ ಶುಭಾ ಪೂಂಜಾ ಬಿಗ್‍ಬಾಸ್ ಬ್ರಶ್ ಆದರೂ ಕೊಡಿ ಬಿಗ್‍ಬಾಸ್ ಎಂದು ಕೇಳಿಕೊಳ್ಳುತ್ತಾರೆ. ಈ ವೇಳೆ ದಿವ್ಯಾ ಉರುಡುಗ, ಮಂಜು ಸ್ಟಾರ್ಟ್ ಆಯ್ತು ಇವಳದ್ದು ಅಂತಾರೆ. ಇದಕ್ಕೆ ಶುಭಾ ನಾನು ನನ್ನ ಪಾಡಿಗೆ ನಾನು ಕೇಳುತ್ತಿದ್ದೇನೆ. ನಿಮಗೆಲ್ಲಾ ಬೇಕಾದರೆ ಶುಭಾ ಕೇಳು ಎಂದು ಹೇಳುತ್ತೀರಾ, ಆಗ ಮಾತ್ರ ನಾನು ನಿಮಗೆ ಬೇಕು ಎನ್ನುತ್ತಾರೆ. ಆಗ ದಿವ್ಯಾ ಉರುಡುಗ ಸರಿ ಈಗ ಎಲ್ಲರಿಗೂ ಕೇಳು ಎಂದಾಗ, ಶುಭಾ, ಬಿಗ್‍ಬಾಸ್ ಎಲ್ಲಾರಿಗೂ ಬೇಡ, ನನ್ನ ಬ್ರಶ್ ಮಾತ್ರ ಕಳುಹಿಸಿಕೊಡಿ ಎಂದು ಹೇಳುತ್ತಾರೆ.

    ಒಟ್ಟಾರೆ ಮನೆಯೆಲ್ಲಾ ಖಾಲಿ ಖಾಲಿಯಾಗಿರುವುದನ್ನು ನೋಡಿ ಮನೆ ಮಂದಿ ಸದ್ಯ ನೀರು, ಊಟ, ನಿದ್ದೆ ಇಲ್ಲದೆ  ಆತಂಕ್ಕೊಳಗಾಗಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ರಂಗೇರ್ತು ರಂಗು ರಂಗಿನ ಹೋಳಿ ಹಬ್ಬ!

    ಬಿಗ್‍ಬಾಸ್ ಮನೆಯಲ್ಲಿ ರಂಗೇರ್ತು ರಂಗು ರಂಗಿನ ಹೋಳಿ ಹಬ್ಬ!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಗನಿಂದಲೂ ಮನೆಕೆಲಸ, ಟಾಸ್ಕ್ ಗಳಲ್ಲಿ ಬ್ಯುಸಿಯಾಗಿದ್ದ ಮಂದಿ ನಿನ್ನೆ ಬಣ್ಣದೋಕುಳಿಯಲ್ಲಿ ಮಿಂದಿದ್ದಾರೆ.

    ಬೆಳಗ್ಗೆ ಎದ್ದೆ ಎಳುತ್ತಿದ್ದಂತೆಯೇ ನಟ ಶಿವರಾಜ್‍ಕುಮಾರ್ ಅಭಿನಯದ ಪ್ರೀತ್ಸೆ ಸಿನಿಮಾದ ‘ಹೋಳಿ’ ಸಾಂಗ್ ಪ್ಲೇ ಮಾಡುವುದರ ಮೂಲಕ ಮನೆಮಂದಿಗೆ ಬಿಗ್‍ಬಾಸ್ ವಿಶ್ ಮಾಡಿದ್ದಾರೆ. ಹಾಡು ಪ್ರಾರಂಭವಾಗುತ್ತಿದ್ದಂತೆಯೇ ಮೈ ಮುರಿದುಕೊಂಡು ಎಂದ ಮನೆಯ ಮಂದಿ ಗಾರ್ಡನ್ ಏರಿಯಾಗೆ ಬಂದಾಗ ಅಲ್ಲಿದ್ದ ಹೋಳಿಯನ್ನು ನೋಡಿ ಫುಲ್ ಖುಷ್ ಆಗುತ್ತಾರೆ.

    ಬಳಿಕ ಫ್ರೆಶ್ ಆಪ್ ಆಗಿ ಬಟ್ಟೆ ಬದಲಾಯಿಸಿಕೊಂಡು ಬಂದ ಮನೆಮಂದಿ ಗಾರ್ಡನ್ ಏರಿಯಾದ ಮೇಜಿನ ಮೇಲೆ ಇರಿಸಿದ್ದ ಬಣ್ಣಗಳನ್ನು ಎತ್ತಿಕೊಂಡು ಒಬ್ಬರಿಗೊಬ್ಬರು ಹಚ್ಚಿಕೊಳ್ಳುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಈ ವೇಳೆ ಬಿಗ್‍ಬಾಸ್ ಮನೆ ಮಂದಿಗಾಗಿ  ಪ್ರೇಮ್ ಅಭಿನಯದ ಡಿಕೆ ಸಿನಿಮಾದ ‘ಸೆಸಮ್ಮ’ ಸಾಂಗ್‍ನನ್ನು ಪ್ಲೇ ಮಾಡುತ್ತಾರೆ. ಹಾಡಿಗೆ ಶುಭ ಹಾಗೂ ಮಂಜು ಮಸ್ತ್ ಮಸ್ತ್ ಸ್ಟೆಪ್ ಹಾಕಿದರೆ, ರಾಜೀವ್, ವಿಶ್ವನಾಥ್, ರಘು ಸೇರಿದಂತೆ ಮತ್ತೆ ಕೆಲವರು ನೆಲದ ಮೇಲೆ ಉರುಳಾಡಿ ಸಖತ್ ಡ್ಯಾನ್ಸ್ ಮಾಡಿದ್ದಾರೆ.

    ಕೊನೆಗೆ ಹಾಡು ಮುಕ್ತಾಯವಾಗುತ್ತಿದ್ದಂತೆಯೇ ಮನೆಯ ಮಂದಿ ಕ್ಯಾಮೆರಾ ಮುಂದೆ ನಿಂತು ಸಮಸ್ತ ನಾಡಿನ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಶುಭಾಶಯ ತಿಳಿಸಿದ್ದಾರೆ.

    ಒಟ್ಟಾರೆ ಇಷ್ಟು ದಿನ ಹೊರಗಡೆ ಹೋಳಿ ಹಬ್ಬ ಆಚರಿಸುತ್ತಿದ್ದ ಮಂದಿ, ಇದೀಗ ಬಿಗ್‍ಬಾಸ್ ಮನೆಯಲ್ಲಿ ಬಣ್ಣದ ಆಟ ಆಡುವ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ನಡಿತು ಮಂಜು ತುಲಾಭಾರ!

    ಬಿಗ್‍ಬಾಸ್ ಮನೆಯಲ್ಲಿ ನಡಿತು ಮಂಜು ತುಲಾಭಾರ!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಾಗಿನಿಂದಲೂ ದೊಡ್ಮನೆಯಲ್ಲಿ ಹಳ್ಳಿಹೈದ ಮಂಜುದೇ ಹವಾ. ದೊಡ್ಮನೆಗೆ ಬಂದ ಕೆಲವೇ ದಿನಗಳಲ್ಲಿ ದಿವ್ಯಾ ಸುರೇಶ್‍ರನ್ನು ಪಟಾಯಿಸಿದ್ದ ಮಂಜು, ಮನೆಮಂದಿ ಮನಸ್ಸನ್ನು ಗೆದ್ದಿದ್ದಾರೆ. ಎಲ್ಲೆ ಹೋದರೂ, ಬಂದರೂ ಮಂಜು ಜಪ ಮಾಡುವ ದೊಡ್ಮನೆ ಸದಸ್ಯರು, ನಿಜಕ್ಕೂ ಮಂಜುರನ್ನು ಎಷ್ಟು ಇಷ್ಟಪಡುತ್ತಾರೆ ಎಂದು ಕಿಚ್ಚ ತುಲಾಭಾರ ಕಾರ್ಯಕ್ರಮ ನಡೆಸಿದ್ದಾರೆ.

    ಅದರ ಅನುಸಾರ ತಕ್ಕಡಿಯ ಒಂದು ಭಾಗದಲ್ಲಿ ಮಂಜು ಕುಳಿತುಕೊಳ್ಳುತ್ತಾರೆ. ಇನ್ನೊಂದು ಭಾಗದಲ್ಲಿ ಮನೆಯ ಸದಸ್ಯರು ಬಹಳ ಇಷ್ಟಪಡುವಂತಹ ವಸ್ತುಗಳನ್ನು ತಂದು ಅದರೊಳಗೆ ಇಡಬೇಕು. ಅದು ವಸ್ತುವಾದರೂ ಸರಿ, ವ್ಯಕ್ತಿಯಾದರೂ ಸರಿ ಮತ್ತೆ ನಿಮಗೆ ವಾಪಸ್ ಸಿಗಲ್ಲ ಅಂತ ಸುದೀಪ್ ಸೂಚಿಸುತ್ತಾರೆ.

    ಅದರಂತೆ ರಾಜೀವ್, ಅರವಿಂದ್ ತಾವು ಇಷ್ಟಪಡುವಂತಹ ಡಂಬಲ್ಸ್ ಹಾಕುತ್ತಾರೆ. ನಿಧಿ ಬೆಲ್ಟ್, ವೈಷ್ಣವಿ ಯೋಗ ಮ್ಯಾಟ್, ವಿಶ್ವನಾಥ್ ಶೂ, ರಘು ಪಫ್ಯೂಮ್, ಶುಭ ಪೂಂಜಾ ಬಾಯಿಲ್ಡ್ ರೈಸ್, ಪ್ರಶಾಂತ್ ಸಂಬರ್ಗಿ ಕಾಫಿ ಕಪ್, ದಿವ್ಯಾ ಉರುಡುಗ ಜಾಕೆಟ್ ಹಾಗೂ ಶೂ, ಗೀತಾ ಡ್ರಸ್, ಶಂಕರ್ ಅಶ್ವತ್ ಕರ್ಪೂರ, ಶಮಂತ್ ಭೀಮ್ ಬ್ಯಾಗ್, ಚಂದ್ರಕಲಾ ಟೀ ಕಪ್ ಇಡುತ್ತಾರೆ. ಆದರೆ ಎಲ್ಲರ ಮಧ್ಯೆ ದಿವ್ಯಾ ಸುರೇಶ್ ಮಾತ್ರ ನಾನು ಶಮಂತ್‍ನನ್ನು ಆ ಸ್ಥಳದಲ್ಲಿ ಕೂರಿಸಲು ಇಷ್ಟಪಡುತ್ತೇನೆ. ನನಗೆ ಅವರೆಂದರೆ ಇಷ್ಟವಿಲ್ಲ ಎಂದು ನೇರವಾಗಿ ನುಡಿಯುತ್ತಾರೆ.

    ಬಳಿಕ ನೀವು ಹಾಕಿರುವ ವಸ್ತುಗಳನ್ನು ಮತ್ತೆ ಉಪಯೋಗಿಸುವಂತಿಲ್ಲ ಎಂದು ಕಿಚ್ಚ ಸೂಚಿಸಿದಾಗ, ಅರವಿಂದ್ ನನಗೆ ಡಂಬಲ್ಸ್ ಎಂದರೆ ಬಹಳ ಇಷ್ಟ. ಒಂದು ದಿನ ಡಂಬಲ್ಸ್ ಇಲ್ಲದೇ ವರ್ಕ್ ಔಟ್ ಮಾಡದಿರಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಹಿಂಪಡೆಯುತ್ತೇನೆ ಎಂದು ಹೇಳುತ್ತಾರೆ. ಶುಭ ಪೂಂಜಾ ಕೂಡ ನನಗೆ ಬಾಯಿಲ್ಡ್ ರೈಸ್ ಅಂದರೆ ಇಷ್ಟ ಹಾಗಾಗಿ ಅದನ್ನು ಹಿಂಪಡೆದು ಅದರ ಬದಲಿಗೆ ಶೂ ಇಡುತ್ತೇನೆ ಎಂದು ಹೇಳುತ್ತಾರೆ.

    ಹೀಗೆ ಮನೆಯ ಸದಸ್ಯರು ಮಂಜುರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುವುದಕ್ಕೆ ತಾವು ಇಷ್ಟಪಡುವಂತಹ ವಸ್ತುಗಳನ್ನು ತಕ್ಕಡಿಯಲ್ಲಿ ಇಡುವ ಮೂಲಕ ತೋರಿಸುತ್ತಾರೆ. ಕೊನೆಗೆ ಸುದೀಪ್ ಅವರು ಮಂಜು ಅವರನ್ನು ತಕ್ಕಡಿಯಿಂದ ನಿದಾನವಾಗಿ ಇಳಿಯುವಂತೆ ಹೇಳಿದ್ದು, ಎಲ್ಲರೂ ಒಟ್ಟಾಗಿ ಕುಳಿತುಕೊಳ್ಳುತ್ತಾರೆ.

  • ದೀಪಿಕಾ ಬರ್ತ್ ಡೇ ಪಾರ್ಟಿಯಲ್ಲಿ ಬಿಗ್ ಮಂದಿ ಎಂಜಾಯ್

    ದೀಪಿಕಾ ಬರ್ತ್ ಡೇ ಪಾರ್ಟಿಯಲ್ಲಿ ಬಿಗ್ ಮಂದಿ ಎಂಜಾಯ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಸ್ಪರ್ಧಿ ದೀಪಿಕಾ ದಾಸ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಿಗ್‍ಬಾಸ್ ಸ್ಪರ್ಧಿಗಳು ಭಾಗಿಯಾಗಿ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ.

    ಇತ್ತೀಚೆಗಷ್ಟೆ ದೀಪಿಕಾ ದಾಸ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದರು. ಇದೀಗ ಮತ್ತೆ ಬಿಗ್‍ಬಾಸ್ ಸ್ಪರ್ಧಿಗಳ ಜೊತೆ ತಮ್ಮ ಬರ್ತ್ ಡೇ ಪಾರ್ಟಿಯನ್ನು ಮಾಡಿಕೊಂಡಿದ್ದಾರೆ. ಈ ಬಾರಿ ದೀಪಿಕಾ ಹುಟ್ಟುಹಬ್ಬ ತುಂಬಾ ವಿಶೇಷವಾಗಿತ್ತು. ಯಾಕೆಂದರೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ‘ಬಿಗ್‍ಬಾಸ್-7’ ನ ಸ್ಪರ್ಧಿಗಳೆಲ್ಲರೂ ಭಾಗಿಯಾಗಿ ಸಂಭ್ರಮಿಸಿದ್ದಾರೆ.

    https://www.instagram.com/p/B9JC2TkFPg1/

    ಪಾರ್ಟಿಯಲ್ಲಿ ಜೈ ಜಗದೀಶ್, ಅವರ ಪತ್ನಿ ವಿಜಯಲಕ್ಷ್ಮಿ, ಸುಜಾತ, ಶೈನ್ ಶೆಟ್ಟಿ, ಚಂದನ್ ಆಚಾರ್, ಕಿಶನ್, ವಾಸುಕಿ, ಚಂದನಾ, ಹರೀಶ್ ರಾಜ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಬಿಗ್‍ಬಾಸ್ ನಂತರ ದೀಪಿಕಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಲ್ಲರೂ ಮತ್ತೆ ಒಟ್ಟಾಗಿ ಸೇರಿ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ.

    https://www.instagram.com/p/B9JCrOCFxZA/

    ದೀಪಿಕಾ ದಾಸ್ ಪಾರ್ಟಿಯಲ್ಲಿ ಕ್ಲಿಕ್ಕಿಸಿಕೊಂಡಿದ್ದ ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಕೇಕ್ ಮಾಡಿ ಎಲ್ಲರಿಗೂ ತಿನ್ನಿಸಿದ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡಿದ್ದು, ಎಲ್ಲರೀಗೂ ಧನ್ಯವಾದ ತಿಳಿಸಿದ್ದಾರೆ. ದೀಪಿಕಾ ದಾಸ್ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದರು. ಅಲ್ಲಿಂದ ಬಿಗ್‍ಬಾಸ್ ಮನೆಗೆ ಹೋಗಿ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

  • ಮಿಡ್‍ನೈಟ್‍ನಲ್ಲಿ ಹರೀಶ್ ರಾಜ್ ಎಲಿಮಿನೇಟ್

    ಮಿಡ್‍ನೈಟ್‍ನಲ್ಲಿ ಹರೀಶ್ ರಾಜ್ ಎಲಿಮಿನೇಟ್

    ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ಸ್ಪರ್ಧಿ ಹರೀಶ್ ರಾಜ್ ಅವರು ಮಿಡ್‍ನೈಟ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

    ಮಂಗಳವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆಲ್ಲಾ ಗಾರ್ಡನ್ ಏರಿಯಾಗೆ ಕರೆಸಿ ಕ್ರೇನ್‍ನಲ್ಲಿ ನಿಲ್ಲಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳಲು ಹೇಳಿದ್ದರು. ಈ ವೇಳೆ ಕೊಟ್ಟ ಬೋರ್ಡಿಂಗ್ ಪಾಸ್ ಸ್ವೈಪ್ ಮಾಡಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ಸ್ವೈಪ್ ಮಾಡಿದಾಗ ಹಸಿರು ದೀಪ ಬೆಳೆಗಿದರೆ ಆ ಸ್ಪರ್ಧಿ ಸೇಫ್ ಆಗಲಿದ್ದು, ಕೆಂಪು ದೀಪ ಬೆಳಗಿದರೆ ಆ ಸ್ಪರ್ಧಿ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ.

    ಮೊದಲು ಶೈನ್ ಶೆಟ್ಟಿ ಸ್ವೈಪ್ ಮಾಡಿದ್ದು, ಅವರು ಸೇಫ್ ಆಗಿದ್ದಾರೆ. ಬಳಿಕ ಕುರಿ ಪ್ರತಾಪ್, ಭೂಮಿ ಶೆಟ್ಟಿ ಸ್ವೈಪ್ ಮಾಡಿ ತಮ್ಮ ಬಿಗ್ ಬಾಸ್ ಜರ್ನಿಯನ್ನು ಮುಂದುವರಿಸಿದ್ದಾರೆ. ನಂತರ ಹರೀಶ್ ರಾಜ್ ಅವರು ಬೋರ್ಡಿಂಗ್ ಪಾಸ್ ಸ್ವೈಪ್ ಮಾಡಿದ್ದಾರೆ. ಈ ವೇಳೆ ಕೆಂಪು ದೀಪ ಬೆಳಗಿದ್ದು, ಹರೀಶ್ ಅವರು ಎಲಿಮಿನೇಟ್ ಆಗಿದ್ದಾರೆ. ಹರೀಶ್ ಅವರನ್ನು ಕ್ರೇನ್ ಮೂಲಕವೇ ಮನೆಯಿಂದ ಹೊರ ಕರೆದುಕೊಂಡು ಹೋಗಲಾಯಿತು.

    ಹರೀಶ್ ಮಧ್ಯರಾತ್ರಿ ಎಲಿಮಿನೇಟ್ ಆದ ಕಾರಣ ಅವರು ಸುದೀಪ್ ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತಿಲ್ಲ. ಇನ್ನು ಹರೀಶ್ ಮನೆಯಿಂದ ಹೊರ ಹೋಗುತ್ತಿದ್ದಂತೆ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ. ಈ ವಾರ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ವಾಸುಕಿ, ಶೈನ್, ಭೂಮಿ, ದೀಪಿಕಾ ಹಾಗೂ ಕುರಿ ಪ್ರತಾಪ್ ಫೈನಲಿಸ್ಟ್ ಆಗಿದ್ದಾರೆ.

  • ಸ್ಪರ್ಧಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್

    ಸ್ಪರ್ಧಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಫಿನಾಲೆ ತಲುಪಲಿದೆ. ಹೀಗಾಗಿ ಬಿಗ್‍ಬಾಸ್, ಮನೆಯ ಸದಸ್ಯರಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಡುತ್ತಿದ್ದಾರೆ.

    ಸೋಮವಾರ ಬೆಳ್ಳಂಬೆಳಗ್ಗೆ ಗಾಯಕಿ ಇಂದು ನಾಗರಾಜ್ ಅವರು ಬಿಗ್‍ಬಾಸ್ ಮನೆಗೆ ಬಂದು ಹಾಡು ಹೇಳುವ ಮೂಲಕ ಎಲ್ಲರನ್ನು ಎದ್ದೇಳಿಸಿದ್ದಾರೆ. ಇವರು ಮನೆಯಿಂದ ಹೋದ ತಕ್ಷಣ ಎಲಿಮಿನೇಟ್ ಆಗಿದ್ದ ಸುಜಾತಾ ಹಾಗೂ ದುನಿಯಾ ರಶ್ಮಿ ಆಗಮಿಸಿದ್ದಾರೆ. ಇವರು ಮನೆಯ ಸದಸ್ಯರ ಜೊತೆಗೆ ಸ್ವಲ್ಪ ಹೊತ್ತು ಮಾತನಾಡಿದ್ದಾರೆ. ಜೊತೆಗೆ ಅವರೇ ಸ್ಪರ್ಧಿಗಳಿಗೆ ತಿಂಡಿ ಕೂಡ ಮಾಡಿ ಕೊಟ್ಟಿದ್ದಾರೆ.

    ಕೊನೆಗೆ ಸುಜಾತಾ ಹಾಗೂ ರಶ್ಮಿ ಹೊರಡುವಾಗ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಿದ್ದಾರೆ. ನಂತರ ಗುರುಲಿಂಗ ಸ್ವಾಮಿಜಿಗಳು ಬಿಗ್‍ಬಾಸ್‍ಗೆ ಬಂದಿದ್ದು, ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ ಹೋಗಿದ್ದಾರೆ. ಬಳಿಕ ಚೈತ್ರಾ ವಾಸುದೇವನ್ ಆಗಮಿಸಿ, ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತಿದೆ ಎಂದು ಎಲ್ಲರಿಗೂ ದೃಷ್ಟಿ ತೆಗೆದಿದ್ದಾರೆ. ಇದೇ ಸಂದರ್ಭದಲ್ಲಿ ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಡು ಪ್ಲೇ ಆಗಿದೆ. ಆಗ ಮನೆಯವರ ಜೊತೆ ಸೇರಿಕೊಂಡು ಚೈತ್ರಾ ಕೂಡ ಡ್ಯಾನ್ಸ್ ಮಾಡಿ ಬಿಗ್ ಮನೆಯಿಂದ ಹೊರ ಹೋಗಿದ್ದಾರೆ.

    ಜೈ ಜಗದೀಶ್ ಬಿಗ್‍ಬಾಸ್ ಮನೆಗೆ ಆಗಮಿಸಿದ್ದು, ಬಿಗ್‍ಬಾಸ್ ಪಯಣದ ತಮ್ಮ ಅನುಭವವನ್ನು ಸದಸ್ಯರ ಬಳಿ ಹಂಚಿಕೊಂಡು ಮನೆಯಿಂದ ಹೋಗಿದ್ದಾರೆ. ನಂತರ ರಕ್ಷಾ ಅವರು ಮನೆಗೆ ಆಗಮಿಸಿದರು. ಇವರ ಜೊತೆಗೆ ಶೈನ್ ಶೆಟ್ಟಿ, ವಾಸುಕಿ ವೈಭವ್, ಹರೀಶ್ ರಾಜ್ ಹಾಗೂ ಕುರಿ ಪ್ರತಾಪ್ ತುಂಬಾ ಕ್ಲೋಸ್ ಆಗಿ ನಡೆದುಕೊಂಡಿದ್ದಾರೆ. ಜೊತೆಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇದರಿಂದ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಮುನಿಸಿಕೊಂಡು ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವಿಶೇಷ ಎಂದರೆ ಕಿಶನ್ ಮನೆಗೆ ಬಂದು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಆದರೆ ಕಿಶನ್ ಸಿಕ್ಕಿದ್ದೇ ಚಾನ್ಸ್ ಎಂಬಂತೆ ಮತ್ತೊಮ್ಮೆ ದೀಪಿಕಾ ದಾಸ್ ಜೊತೆಗೆ ಈಜುಕೊಳಕ್ಕೆ ಜಿಗಿದು ಮನೆಯಿಂದ ಹೊರಹೋಗಿದ್ದಾರೆ.

    ಫಿನಾಲೆ ವಾರದಲ್ಲಿ ಮಿಡ್‍ವೀಕ್ ಎಲಿಮಿನೇಷನ್ ಮೂಲಕ ಮನೆಯಿಂದ ಒಬ್ಬ ಸದಸ್ಯ ಮನೆಯಿಂದ ಹೊರ ಹೋಗುತ್ತಾರೆ. ಈಗಾಗಲೇ ವಾಸುಕಿ ವೈಭವ್ ಟಿಕೆಟ್ ಟು ಫಿನಾಲೆ ಗೆದ್ದು ನೇರವಾಗಿ ಫಿನಾಲೆ ಹಂತ ತಲುಪಿದ್ದಾರೆ. ಉಳಿದ ಐದು ಮಂದಿಯಲ್ಲಿ ಅಂದರೆ ಶೈನ್ ಶೆಟ್ಟಿ, ಕುರಿ ಪ್ರತಾಪ್, ದೀಪಿಕಾ ದಾಸ್, ಹರೀಶ್ ರಾಜ್ ಹಾಗೂ ಭೂಮಿ ಶೆಟ್ಟಿ ಯಾರು ಹೊರಹೋಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

  • ಫಿನಾಲೆ ತಲುಪಲು ಸ್ಪರ್ಧಿಗಳಿಗೆ ಬಿಗ್ ಆಫರ್

    ಫಿನಾಲೆ ತಲುಪಲು ಸ್ಪರ್ಧಿಗಳಿಗೆ ಬಿಗ್ ಆಫರ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪುತ್ತಿದೆ. ಹೀಗಾಗಿ ಬಿಸ್‍ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಫಿನಾಲೆ ಹಂತ ತಲುಪಲು ಅವಕಾಶವೊಂದನ್ನು ನೀಡಿದ್ದಾರೆ.

    ಸೋಮವಾರ ಬಿಗ್‍ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಸದಸ್ಯರ ಅನುಸಾರ ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ಪ್ರಿಯಾಂಕಾ, ವಾಸುಕಿ ವೈಭವ್, ಶೈನ್ ಶೆಟ್ಟಿ, ಹರೀಶ್ ರಾಜ್, ದೀಪಿಕಾ ದಾಸ್, ಕುರಿ ಪ್ರತಾಪ್ ಮತ್ತು ಭೂಮಿ ಶೆಟ್ಟಿ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.

    ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆದರೂ ಬಿಗ್‍ಬಾಸ್ ಸ್ಪರ್ಧಿಗಳಿಗೆ ಫಿನಾಲೆ ಹಂತ ತಲುಪಲು ಒಂದು ಬಿಗ್ ಆಫರ್ ನೀಡಿದ್ದಾರೆ. ಅದೇನೆಂದರೆ ಈ ವಾರ ಅತಿ ಹೆಚ್ಚು ಪದಕ ಪಡೆಯುವ ಒಬ್ಬ ಸ್ಪರ್ಧಿ ‘ಬಿಗ್‍ಬಾಸ್ ಸೀಸನ್ 7’ ರ ಫಿನಾಲೆ ಹಂತವನ್ನು ತಲುಪಲಿದ್ದಾರೆ.

    ಬಿಗ್‍ಬಾಸ್ ಕಾಲಕಾಲಕ್ಕೆ ಸ್ಪರ್ಧಿಗಳಿಗೆ ಟಾಸ್ಕ್ ಕೊಡುತ್ತಿರುತ್ತಾರೆ. ಆ ಟಾಸ್ಕ್ ನಲ್ಲಿ ಗೆದ್ದವರಿಗೆ ಬಿಗ್‍ಬಾಸ್ ಒಂದು ಪದಕ ಕೊಡುತ್ತಾರೆ. ಹೀಗಾಗಿ ಈ ವಾರದ ಕೊನೆಯಲ್ಲಿ ಅತಿ ಹೆಚ್ಚು ಪದಕ ಗೆದ್ದ ಒಬ್ಬ ಸದಸ್ಯ ಮುಂದಿನ ವಾರಕ್ಕೆ ಇಮ್ಯುನಿಟಿ ಪಡೆದು ಫಿನಾಲೆ ತಲುಪಲಿದ್ದಾರೆ. ಈಗಾಗಲೇ ಸೋಮವಾರ ನಡೆದ ಎರಡು ಸ್ಪರ್ಧೆಗಳಲ್ಲಿ ಒಂದು ಪದಕವನ್ನು ದೀಪಿಕಾ ದಾಸ್ ಗೆದ್ದಿದ್ದರೆ, ಇನ್ನೊಂದನ್ನು ವಾಸುಕಿ ತಮ್ಮದಾಗಿಸಿಕೊಂಡಿದ್ದಾರೆ.