Tag: ಸ್ಪರ್ಧಿ

  • ಬಿಗ್‍ಬಾಸ್ ವಿನ್ನರ್ ಯಾರೆಂದು ಬಹಿರಂಗಪಡಿಸಿದ ಕಿಚ್ಚ

    ಬಿಗ್‍ಬಾಸ್ ವಿನ್ನರ್ ಯಾರೆಂದು ಬಹಿರಂಗಪಡಿಸಿದ ಕಿಚ್ಚ

    ಬಿಗ್‍ಬಸ್ ಜರ್ನಿ ಎಂಡ್ ಆಗುತ್ತಿರುವುದರ ಕುರಿತಾಗಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಕಿವಿ ಮಾತು ಹೇಳಿದ್ದಾರೆ. ನೀವೆಲ್ಲಾ ವಿನ್ನರ್ ಆಗಿದ್ದೀರ. ನಿಮಗೆ ನನ್ನ ವಿಶ್ ಯಾವಾಗಲೂ ಇರುತ್ತದೆ ಎಂದು ಸಿದೀಪ್ ಕೆಲವು ಸಮಯ ಸ್ಪರ್ಧಿಗಳ ಜೊತೆಗೆ ಮಾತನಾಡಿದ್ದಾರೆ. ಬೇಸರದಲ್ಲಿದ್ದ ಸ್ಪರ್ಧಿಗಳಿಗೆ ಕಿಚ್ಚ ಆವರ ಮಾತುಗಳು ಕೊಂಚ ಸಮಾಧಾನವನ್ನುಂಟು ಮಾಡಿದೆ.

    ಬಿಗ್‍ಬಾಸ್ ಮನೆಯಿಂದ ಇನ್ನೇನು ಕೆಲವು ಗಂಟೆಯಲ್ಲಿ ಆಚೆ ಹೋಗುತ್ತವೆ ಎಂಬ ವಿಷಯವನ್ನು ತಿಳಿದ ಸ್ಪರ್ಧಿಗಳು ಕಣ್ಣೀರು ಹಾಕಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು. ತಮ್ಮ ಜರ್ನಿಯ ನೋವು, ನಲಿವಿನ ಕ್ಷಣಗಳಿರುವ ವೀಡಿಯೋವನ್ನು ನೋಡಿ ಸಂತೋಷದ ಜೊತೆಗೆ ಕಣ್ಣೀರುನ್ನು ಹಾಕಿದ್ದರು. ಕೊನೆಯಲ್ಲಿ ನಾನುವು ಸುದೀಪ್ ಸರ್ ಜೊತೆಗೆ ಮಾತನಾಡಬೇಕು ಎಂದು ಸ್ಪರ್ಧಿಗಳು ಕೇಳಿದ್ದಾರೆ. ಆಗ ಕಣ್ಮಣಿ ಕಿಚ್ಚಾ ಅವರ ಮಾತಿಲ್ಲದೆ ಈ ಕಾರ್ಯಕ್ರಮದ ಮುಗಿಯುವುದಿಲ್ಲ ಎಂದು ಹೇಳಿದ್ದಾರೆ.

    ಎಲ್ಲಾರಿಗೂ ಈ ಕಿಚ್ಚನ ನಮಸ್ಕಾರಗಳು…ಕೆಲವು ವಾರಗಳ ದಿಂದ ನನಗೆ ಬರಲು ಸಾಧ್ಯವಾಗಿರಲಿಲ್ಲ. ಕೊರೊನಾ ಇರುವ ಕಾರಣದಿಂದಾಗಿ ಕಾರ್ಯಕ್ರಮವನ್ನು ವಿಕೇಂಡ್‍ನಲ್ಲಿ ನಡೆಸಲು ಸಾಧ್ಯಗುತ್ತಿರಲಿಲ್ಲ. ಈ ಬಿಗ್‍ಬಾಸ್ ಜರ್ನಿ ನಿಮಗೆ ಒಳ್ಳೆಯದ್ದು ಮಾಡಲಿ. ಬಿಗ್‍ಬಾಸ್ ಅರ್ಧಕ್ಕೆ ಮುಗಿಯುತ್ತಿರುವುದಕ್ಕೆ ನನಗೆ ತುಂಬಾ ದುಃಖವಾಗುತ್ತಿದೆ. ನೀವೆಲ್ಲರೂ ಬಿಗ್‍ಬಾಸ್ ವಿನ್ನರ್ ಆಗಿದ್ದೀರಾ…. ನಾನು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಾ ಸಮಾಧಾನದ ಕೆಲವು ಹೀತ ನುಡಿಗಳನ್ನು ಸುದೀಪ್ ಬೇಸರದಿಂದ ಸ್ಪರ್ಧಿಗಳಿಗೆ ಹೇಳಿದ್ದಾರೆ.

    ಸುದೀಪ್ ಅವರ ಕೆಲವು ಮಾತುಗಳು ಸ್ಪರ್ಧಿಗಳಿಗೆ ಕೊಂಚ ಸಮಾಧಾನವನ್ನುಂಟು ಮಾಡಿದೆ. ಬಿಗ್‍ಬಾಸ್‍ನಲ್ಲಿ ಸ್ಪರ್ಧಿಗಳ ಜರ್ನಿ ಅಂತ್ಯವಾಗಿರಬಹುದು ಆದರೆ ಸಾಧನೆಯ ಹಾದಿ ಇನ್ನು ಇದೆ. ಬಿಗ್‍ಬಾಸ್ ನಂತರದ ಜೀವನ ಹೇಗಿರಲಿದೆ ಎನ್ನುವುದು ಸ್ಪರ್ಧಿಗಳ ಮುಂದೆ ಇರುವ ದೊಡ್ಡ ಪ್ರಶ್ನೆಯಾಗಿದೆ.

  • ಬಿಗ್ ಬಾಸ್ ಮನೆಗೆ ಮತ್ತೊಬ್ಬ ಸದಸ್ಯನ ರೀ-ಎಂಟ್ರಿ

    ಬಿಗ್ ಬಾಸ್ ಮನೆಗೆ ಮತ್ತೊಬ್ಬ ಸದಸ್ಯನ ರೀ-ಎಂಟ್ರಿ

    ಬೆಂಗಳೂರು: ಬಿಗ್ ಬಾಸ್ ಸೀಸನ್- 7ರಲ್ಲಿ ಮತ್ತೊಬ್ಬ ಸ್ಪರ್ಧಿ ಆರ್.ಜೆ ಪೃಥ್ವಿ ರೀ-ಎಂಟ್ರಿ ಕೊಟ್ಟಿದ್ದಾರೆ.

    ಈ ಮೊದಲು ಪೃಥ್ವಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದರು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಕೆಲವೇ ವಾರಗಳಲ್ಲಿ ಪೃಥ್ವಿ ಎಲಿಮಿನೇಟ್ ಆಗಿದ್ದರು. ಇದೀಗ ಅವರು ಮನೆಗೆ ಮತ್ತೆ ರೀ-ಎಂಟ್ರಿ ಕೊಟ್ಟಿದ್ದು, ಅವರನ್ನು ನೋಡಿ ಸ್ಪರ್ಧಿಗಳು ಶಾಕ್ ಆದರು. ಪೃಥ್ವಿ ಟಾಸ್ಕ್ ಸಲುವಾಗಿ ಒಂದು ದಿನ ಮಟ್ಟಕ್ಕೆ ಬಿಗ್ ಬಾಸ್ ಮನೆ ಪ್ರವೇಶಿ ಸ್ಪರ್ಧಿಗಳ ಜೊತೆ ಸಮಯ ಕಳೆದಿದ್ದಾರೆ.

    ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಬಿಗ್ ಬಾಸ್ ಶಾಲೆ ಎಂಬ ಟಾಸ್ಕ್ ನೀಡಿತ್ತು. ಈ ಟಾಸ್ಕ್ ನಲ್ಲಿ ಸ್ಪರ್ಧಿಗಳು ನರ್ಸರಿ ಮಕ್ಕಳಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಂತೆ ನಟಿಸಬೇಕಿತ್ತು. ಪ್ರತಿ ಒಂದು ವಿಷಯಕ್ಕೆ ಸ್ಪರ್ಧಿಗಳೇ ಟೀಚರ್ ಆಗಿ ಬರುತ್ತಿದ್ದರು. ಶುಕ್ರವಾರ ಈ ಟಾಸ್ಕ್ ನ ಕೊನೆಯ ದಿನವಾಗಿದ್ದು, ಸ್ಪರ್ಧಿಗಳಿಗೆ ಪರೀಕ್ಷೆ ನೀಡಲಾಯಿತು. ಪರೀಕ್ಷೆಗೆ ಮೇಲ್ವಿಚಾರಕರಾಗಿ ಆರ್.ಜೆ ಪೃಥ್ವಿ ಬಿಗ್ ಬಾಸ್ ಮನೆಗೆ ಬಂದಿದ್ದರು.

    ಪರೀಕ್ಷೆ ಎಲ್ಲಾ ಮುಗಿದ ಮೇಲೆ ಪೃಥ್ವಿ ಸ್ಪರ್ಧಿಗಳಿಗೆ ಆಟ ಕೂಡ ಆಡಿಸಿದ್ದರು. ನಂತರ ಬಿಗ್ ಬಾಸ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಸ್ಪರ್ಧಿಗಳಿಗೆ ಟ್ರೋಫಿಯನ್ನು ನೀಡಿದ್ದರು. ಇದೇ ವೇಳೆ ಸ್ಪರ್ಧಿಗಳು ಪ್ರಾರ್ಥನಾ ಗೀತೆ, ಭಾಷಣ ಹಾಗೂ ಡ್ಯಾನ್ಸ್ ಮಾಡುವ ಮೂಲಕ ಎಲ್ಲರಿಗೂ ಮನರಂಜನೆ ನೀಡಿದ್ದರು. ಆ ಎಲ್ಲಾ ಕಾರ್ಯಕ್ರಮ ಮುಗಿದ ನಂತರ ಬಿಗ್ ಬಾಸ್ ಪೃಥ್ವಿಯನ್ನು ಕಳುಹಿಸಿಕೊಡುವಂತೆ ಹೇಳಿದ್ದರು. ಆಗ ಎಲ್ಲಾ ಸ್ಪರ್ಧಿಗಳು ಪೃಥ್ವಿ ಅವರಿಗೆ ಬೀಳ್ಕೊಡುಗೆ ನೀಡಿದ್ದರು.

  • ಬಿಗ್ ಬಾಸ್ ಮನೆಗೆ ಹೊಸ ಸ್ಪರ್ಧಿ ಎಂಟ್ರಿ

    ಬಿಗ್ ಬಾಸ್ ಮನೆಗೆ ಹೊಸ ಸ್ಪರ್ಧಿ ಎಂಟ್ರಿ

    ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ಹೊಸ ಸ್ಪರ್ಧಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ.

    ಬಿಗ್ ಬಾಸ್ ಮನೆಗೆ ಶೇಷಮ್ಮ ಎಂಬವರು ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿ ಹರೀಶ್ ರಾಜ್ ಅವರು ಮಹಿಳೆಯಂತೆ ಸೀರೆ ಧರಿಸಿ, ಮೇಕಪ್ ಮಾಡಿಕೊಂಡಿದ್ದರು. ಅಲ್ಲದೆ ಮಹಿಳೆಯಂತೆ ಮಾತನಾಡುವ ಮೂಲಕ ಮನೆ ಮಂದಿಗೆ ಮನರಂಜನೆ ನೀಡಿದ್ದಾರೆ. ಪ್ರಿಯಾಂಕಾ ಅವರು ಹರೀಶ್‍ಗೆ ತಮ್ಮ ಸೀರೆಯನ್ನೇ ಉಡಿಸಿದ್ದಾರೆ. ಸದ್ಯ ಮಹಿಳೆಯಂತೆ ವೇಷ ಧರಿಸಿದ ಬಳಿಕ ಶೇಷಮ್ಮ ನಾನು ಹರೀಶ್ ತಂಗಿ ಎಂದುಕೊಂಡು ಮನೆ ತುಂಬಾ ಓಡಾಡಿದ್ದಾರೆ.

    ಹರೀಶ್ ಅವರು ಮಹಿಳೆ ಸೀರೆ ಹಾಕಿರುವುದನ್ನು ನೋಡಿ ಸ್ಪರ್ಧಿಗಳು ಮೊದಲು ಬಿಗ್ ಬಾಸ್ ಟಾಸ್ಕ್ ನೀಡಿದ್ದಾರೆ ಎಂದುಕೊಂಡಿದ್ದರು. ಬಳಿಕ ಹರೀಶ್ ಮನರಂಜನೆಗಾಗಿ ಈ ರೀತಿ ಮಾಡಿದ್ದಾರೆ ಎಂಬುದು ಮನೆ ಮಂದಿಗೆ ತಿಳಿಯಿತು. ಹರೀಶ್ ಮಹಿಳೆಯಂತೆ ಮಾತನಾಡುವಾಗ ಗಾರ್ಡನ್ ಏರಿಯಾದಲ್ಲಿದ್ದ ಭೂಮಿ ಹಾಗೂ ವಾಸುಕಿ ಹೊಸ ಸ್ಪರ್ಧಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎಂದುಕೊಂಡಿದ್ದರು. ಬಳಿಕ ಮನೆಯೊಳಗೆ ಬಂದು ನೋಡಿದಾಗ ಹರೀಶ್ ಅವರನ್ನು ನೋಡಿ ಶಾಕ್ ಆದರು.

    ಈ ಹಿಂದೆ ಕಳ್ಳ- ಪೊಲೀಸ್ ಟಾಸ್ಕ್ ನಲ್ಲಿ ಹರೀಶ್ ಶೇಷಪ್ಪ ಎಂಬ ಪಾತ್ರವನ್ನು ಹುಟ್ಟು ಹಾಕಿದ್ದರು. ಈ ವೇಳೆ ಅವರು ಹೋರಾಟಗಾರನಂತೆ ನಟಿಸಿದ್ದರು. ಇತ್ತೀಚೆಗೆ ಅವರು ಕ್ಯಾಪ್ಟನ್ ಆಗಿದ್ದಾಗ ತೆಲುಗು ರೆಡ್ಡಿಗಾರು ಎಂಬ ಪಾತ್ರವನ್ನು ಸೃಷ್ಟಿಸಿ ಅದರಂತೆ ನಟಿಸಿದ್ದರು. ಹರೀಶ್ ಪ್ರತಿ ಬಾರಿ ಹೊಸ ಪಾತ್ರವನ್ನು ಸೃಷ್ಟಿಸಿ ತಮ್ಮ ಟ್ಯಾಲೆಂಟ್ ಅನ್ನು ಹೊರ ಹಾಕುತ್ತಾರೆ. ಸದ್ಯ ಹರೀಶ್ ಅವರ ಶೇಷಮ್ಮ ಪಾತ್ರವನ್ನು ಮನೆಯವರು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.

  • ರ್‍ಯಾಂಪ್‌ವಾಕ್ ವೇಳೆ ಜಾರಿ ಬಿದ್ದ ಮಿಸ್ ಫ್ರಾನ್ಸ್: ವಿಡಿಯೋ

    ರ್‍ಯಾಂಪ್‌ವಾಕ್ ವೇಳೆ ಜಾರಿ ಬಿದ್ದ ಮಿಸ್ ಫ್ರಾನ್ಸ್: ವಿಡಿಯೋ

    – ಘಟನೆಯಿಂದ ಆತ್ಮವಿಶ್ವಾಸ ಬಂದಿದೆ

    ಅಟ್ಲಾಂಟಾ: ಅಮೆರಿಕದ ಅಟ್ಲಾಂಟಾದಲ್ಲಿ ನಡೆದ ಮಿಸ್ ಯೂನಿವರ್ಸ್-2019 ಸ್ಪರ್ಧೆಯ ಸಂದರ್ಭದಲ್ಲಿ, ಅನೇಕ ಸ್ಪರ್ಧಿಗಳು ಬಿಕಿನಿ ಸುತ್ತಿನಲ್ಲಿ ಒದ್ದೆಯಾದ ನೆಲದ ಮೇಲೆ ಜಾರಿಬಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಫ್ರಾನ್ಸ್ ಪ್ರತಿನಿಧಿಸಿದ್ದ ಮಿಸ್ ಮೇವಾ ಕೂಕಾ ಕೂಡ ರ್‍ಯಾಂಪ್‌ ಮೇಲೆ ಜಾರಿ ಬಿದ್ದರು. ಈ ವಿಡಿಯೋವನ್ನು ಸ್ವತಃ ಮೇವಾ ಕೂಕಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯು ಜೀವನದಲ್ಲಿ ಕೆಳಗೆ ಬೀಳುವುದು ಅತ್ಯಂತ ಮುಖ್ಯವಾದ ವಿಷಯ ಎನ್ನುವುದು ಘಟನೆಯಿಂದ ನನಗೆ ತಿಳಿಯುವಂತಾಗಿದೆ ಎಂದು ಬರೆದುಕೊಂಡಿದ್ದಾರೆ. ಮೇವಾ ಕೂಕಾ 2018ರಲ್ಲಿ ಮಿಸ್ ವರ್ಲ್ಡ್  ಆಗಿದ್ದರು.

    https://www.instagram.com/p/B5zubWiiVSt/?utm_source=ig_embed

    ಒದ್ದೆಯಾದ ರ್‍ಯಾಂಪ್‌ ಮೇಲೆ ಮಿಸ್ ಉರುಗ್ವೆ, ಮಿಸ್ ಇಂಡೋನೇಷ್ಯಾ, ಮಿಸ್ ಮಲೇಷ್ಯಾ, ಮಿಸ್ ನ್ಯೂಜಿಲೆಂಡ್, ಮಿಸ್ ಮಾಲ್ಟಾ ವಾಕ್ ಮಾಡಿ ಸೈ ಎನಿಸಿಕೊಂಡರು. ಆದರೆ ಮಿಸ್ ಫ್ರಾನ್ಸ್ ಕೊನೆಯ ಹಂತದಲ್ಲಿ ಸಮತೋಲನ ಕಳೆದುಕೊಂಡು ಜಾರಿ ಬಿದ್ದರು. ಕೆಳಗೆ ಬಿದ್ದ ಮೇಲೂ ಮಿಸ್ ಫ್ರಾನ್ಸ್‌ನ ಆತ್ಮವಿಶ್ವಾಸ ಕಡಿಮೆಯಾಗಲಿಲ್ಲ. ಅವರು ನಗುತ್ತಲೇ ಮೇಲೆದ್ದು ತೀರ್ಪುಗಾರರಿಗೆ ಚಪ್ಪಾಳೆ ತಟ್ಟಿ, ಹಿಂದಿರುಗಿದರು. ಅವರ ವಿಶ್ವಾಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

    68ನೇ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾದ ಜೋಜಿಬಿನಿ ತುಂಜಿ ಭಾನುವಾರ ಗೆದ್ದುಕೊಂಡಿದ್ದಾರೆ. ಪೋರ್ಟೊ ರಿಕೊದ ಮ್ಯಾಡಿಸನ್ ಆಂಡರ್ಸನ್ ಮೊದಲ ರನ್ನರ್ ಅಪ್ ಆಗಿದ್ದರೆ, ಮೆಕ್ಸಿಕೊದ ಸೋಫಿಯಾ ಅರಾಗೊನ್ ಎರಡನೇ ರನ್ನರ್ ಅಪ್ ಆಗಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ 26 ವರ್ಷದ ವರ್ತಿಕಾ ಸಿಂಗ್ ಅವರು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ 90 ದೇಶದ ಪ್ರತಿನಿಧಿಗಳು ಭಾಗವಹಿಸಿದ್ದರು.

    https://www.instagram.com/p/B5ygN-2ijVh/?utm_source=ig_embed

  • ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಬ್ಬರ ರೊಮ್ಯಾನ್ಸ್: ವಿಡಿಯೋ ವೈರಲ್

    ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಬ್ಬರ ರೊಮ್ಯಾನ್ಸ್: ವಿಡಿಯೋ ವೈರಲ್

    – ರೊಮ್ಯಾನ್ಸ್ ದೃಶ್ಯವನ್ನು ಚಿತ್ರೀಕರಿಸಿದ ಮತ್ತೊಮ್ಮ ಸ್ಪರ್ಧಿ
    – ಗುಲಾಬಿ ದಳದಿಂದ ಅಲಂಕಾರಗೊಂಡ ಹಾಸಿಗೆಯಲ್ಲಿ ರೊಮ್ಯಾನ್ಸ್

    ಮುಂಬೈ: ಬಿಗ್ ಬಾಸ್ ಸೀಸನ್-13 ಹಿಂದಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಬ್ಬರು ಎಲ್ಲರ ಮುಂದೆಯೇ ರೊಮ್ಯಾನ್ಸ್ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಸ್ಪರ್ಧಿಗಳಾದ ಸಿದ್ಧಾರ್ಥ್ ಶುಕ್ಲಾ ಹಾಗೂ ರಶ್ಮಿ ದೇಸಾಯಿ ಬಿಗ್ ಬಾಸ್ ಮನೆಯಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ. ಇವರ ರೊಮ್ಯಾನ್ಸ್ ದೃಶ್ಯವನ್ನು ಮತ್ತೊಬ್ಬ ಸ್ಪರ್ಧಿ ಶೆಹ್ನಾಜ್ ಗಿಲ್ ಮೊಬೈಲಿನಲ್ಲಿ ಚಿತ್ರಿಕರಿಸಿದ್ದು, ಇದು ಟಾಸ್ಕ್ ನ ಒಂದು ಭಾಗ ಎಂದು ಹೇಳಲಾಗುತ್ತಿದೆ. ಖಾಸಗಿ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಶೆಹ್ನಾಜ್ ನಿರ್ದೇಶಕರಾಗಿ ಸಿದ್ಧಾರ್ಥ್ ಹಾಗೂ ರಶ್ಮಿ ಅವರಿಗೆ ರೊಮ್ಯಾನ್ಸ್ ಹೇಗೆ ಮಾಡಬೇಕು ಎಂದು ಹೇಳಿಕೊಡುತ್ತಿದ್ದಾರೆ.

    ಪ್ರೋಮೋದಲ್ಲಿ ಧಾರವಾಹಿಗಾಗಿ ಕೆಲವು ವರ್ಷಗಳ ಹಿಂದೆ ಸಿದ್ಧಾರ್ಥ್ ಹಾಗೂ ರಶ್ಮಿ ರೊಮ್ಯಾಂಟಿಕ್ ಸೀನ್‍ನಲ್ಲಿ ನಟಿಸಿದ್ದರು. ಈ ವಿಡಿಯೋವನ್ನು ಬಿಗ್ ಬಾಸ್ ಮನೆಯಲ್ಲಿ ಪ್ರಸಾರ ಮಾಡಿದ್ದರು. ಸಿದ್ಧಾರ್ಥ್ ವಿಡಿಯೋ ನೋಡಿ ಖುಷಿಪಟ್ಟರೆ, ರಶ್ಮಿ ತಮ್ಮ ಮುಖದ ಮೇಲೆ ಕೈ ಇಟ್ಟುಕೊಂಡು ನಾಚಿಕೊಳ್ಳುತ್ತಾರೆ. ಬಳಿಕ ಇಬ್ಬರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಸಮ್ಮುಖದಲ್ಲಿ ರೊಮ್ಯಾನ್ಸ್ ಮಾಡುತ್ತಾರೆ. ಇವರು ರೊಮ್ಯಾನ್ಸ್ ಮಾಡುವಾಗ ಬಿಗ್ ಬಾಸ್ ‘ಸಾತಿಯಾ’ ಚಿತ್ರದ ‘ಅಯೇ ಉಡಿ ಉಡಿ ಉಡಿ’ ಹಾಡನ್ನು ಪ್ರಸಾರ ಮಾಡಿದ್ದಾರೆ.

    ರೊಮ್ಯಾಂಟಿಕ್ ಸೀನ್‍ಗಾಗಿ ಸಿದ್ಧಾರ್ಥ್ ಹಾಗೂ ರಶ್ಮಿ ಬಳಿ ಬಣ್ಣ ಶರ್ಟ್ ಧರಿಸಿದ್ದಾರೆ. ಇವರ ರೊಮ್ಯಾನ್ಸ್‍ಗಾಗಿ ಹಾಸಿಗೆ ಮೇಲೆ ಗುಲಾಬಿ ದಳದಿಂದ ಹೃದಯದ ಆಕಾರದಲ್ಲಿ ಜೋಡಿಸಲಾಗಿತ್ತು. ಬಳಿಕ ಶೆಹ್ನಾಜ್ ಇಬ್ಬರಿಗೆ ಲಿವಿಂಗ್ ಏರಿಯಾ ಆಗೂ ಸ್ವಿಮ್ಮಿಂಗ್ ಪೂಲ್‍ನಲ್ಲಿ ರೊಮ್ಯಾನ್ಸ್ ಮುಂದುವರಿಸಲು ಹೇಳಿದ್ದಾರೆ. ಸ್ವಿಮ್ಮಿಂಗ್ ಪೂಲ್ ಸಹ ಗುಲಾಬಿ ದಳದಿಂದ ಅಲಂಕರಿಸಲಾಗಿತ್ತು. ಬಳಿಕ ಇಬ್ಬರು ಸ್ವಿಮ್ಮಿಂಗ್ ಪೂಲ್‍ನಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ.

    https://twitter.com/BiggBoss/status/1198873490557767680?ref_src=twsrc%5Etfw%7Ctwcamp%5Etweetembed%7Ctwterm%5E1198873490557767680&ref_url=https%3A%2F%2Fwww.hindustantimes.com%2Ftv%2Fbigg-boss-13-sidharth-shukla-rashami-desai-s-shoot-romatic-sequence-fans-hail-shehnaaz-gill-for-uniting-them%2Fstory-osWybskWLHlSaegY74lU4N.html

  • ಬಿಗ್ ಬಾಸ್ ಮನೆಗೆ ಹೊಸ ಸ್ಪರ್ಧಿ ಎಂಟ್ರಿ

    ಬಿಗ್ ಬಾಸ್ ಮನೆಗೆ ಹೊಸ ಸ್ಪರ್ಧಿ ಎಂಟ್ರಿ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೊಸ ಸ್ಪರ್ಧಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

    ಪ್ರತಿ ಸೀಸನ್‍ನಲ್ಲಿ ಬಿಗ್ ಬಾಸ್ ಮನೆಗೆ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡುತ್ತಾರೆ. ಹಾಗೆಯೇ ಈ ಬಾರಿಯೂ ಕೂಡ ಇಬ್ಬರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ಆರ್ ಜೆ ಪೃಥ್ವಿ ಎಂಟ್ರಿ ಕೊಟ್ಟಿದ್ದು, ಈಗ ಮತ್ತೊಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ.

    ಖಾಸಗಿ ವಾಹಿನಿ ಪ್ರೋಮೋವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಯುವತಿಯೊಬ್ಬರು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಪ್ರವೇಶಿಸಿದ ಸ್ಪರ್ಧಿ ಯಾರಿಗೂ ಪರಿಚಯ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ ವೈಲ್ಡ್ ಕಾರ್ಡ್ ಸ್ಪರ್ಧಿ ಕಿಶನ್ ಅವರಿಗೆ ಮಾತ್ರ ಪರಿಚಯ ಇದ್ದಾರೆ ಎಂಬುದು ಪ್ರೋಮೋ ನೋಡಿದರೆ ತಿಳಿಯುತ್ತಿದೆ. ಏಕೆಂದರೆ ಸ್ಪರ್ಧಿ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಕಿಶನ್ ಅವರನ್ನು ತಪ್ಪಿಕೊಂಡಿದ್ದಾರೆ. ಈ ವೇಳೆ ಮನೆಯ ಸದಸ್ಯರು ಹೊಸ ಎಂಟ್ರಿ ಯಾರು? ಎಂದು ಅಚ್ಚರಿಗೊಂಡಿದ್ದಾರೆ.

    ಮಾಹಿತಿ ಪ್ರಕಾರ, ವೈಲ್ಡ್ ಕಾರ್ಡ್ ಮೂಲಕ ನಟಿ ರಕ್ಷಾ ಸೋಮಶೇಖರ್ ಎಂಟ್ರಿಯಾಗಿದ್ದಾರೆ ಎನ್ನಲಾಗಿದೆ. ರಕ್ಷಾ, ನಟ ಕಾರ್ತಿಕ್ ಜಯರಾಂ ನಟಿಸಿದ್ದ `ಮೇ 1′ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇವರೇ ಈಗ ಬಿಗ್ ಮನೆಗೆ ಎಂಟ್ರಿ ಕೊಟ್ಟಿರುವುದು ಎನ್ನಲಾಗಿದೆ.

  • ಸೊಸೆಯನ್ನು ಹೊಗಳಿದ ಸ್ಪರ್ಧಿ ಮೇಲೆ ಬೇಸರಗೊಂಡ ಬಿಗ್-ಬಿ

    ಸೊಸೆಯನ್ನು ಹೊಗಳಿದ ಸ್ಪರ್ಧಿ ಮೇಲೆ ಬೇಸರಗೊಂಡ ಬಿಗ್-ಬಿ

    ಮುಂಬೈ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕೌನ್ ಬನೇಗಾ ಕರೋಡ್‍ಪತಿ’ ಕಾರ್ಯಕ್ರಮದಲ್ಲಿ ನಟಿ ಐಶ್ವರ್ಯ ರೈ ಅವರನ್ನು ಹೊಗಳಿದ ಸ್ಪರ್ಧಿ ಮೇಲೆ ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಬೇಸರಗೊಂಡಿದ್ದಾರೆ.

    ಪೂಜಾ ಜಾ ಎಂಬವರು ಕೌನ್ ಬನೇಗಾ ಕರೋಡ್‍ಪತಿ ಕಾರ್ಯಕ್ರಮದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಅಮಿತಾಬ್ ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಹಾಗೂ ಐಶ್ವರ್ಯ ಅಣ್ಣ – ತಂಗಿಯಾಗಿ ನಟಿಸಿದ ಚಿತ್ರ ಯಾವುದು ಎಂದು ಪ್ರಶ್ನೆ ಕೇಳಿದ್ದಾರೆ.

    ಈ ಪ್ರಶ್ನೆಗೆ ಪೂಜಾ ‘ಜೋಶ್’ ಎಂದು ಉತ್ತರಿಸಿದ್ದರು. ಉತ್ತರ ನೀಡಿದ ಬಳಿಕ ಪೂಜಾ ನಟಿ ಐಶ್ವರ್ಯರನ್ನು ಹೊಗಳಲು ಶುರು ಮಾಡುತ್ತಾರೆ. “ನಾನು ಐಶ್ವರ್ಯ ಅವರ ದೊಡ್ಡ ಅಭಿಮಾನಿ. ನನಗೆ ಅವರ ಕಣ್ಣುಗಳೆಂದರೆ ನನಗೆ ತುಂಬಾ ಇಷ್ಟ” ಎಂದು ಹೇಳಿದ್ದರು.

    ಪೂಜಾ ಅವರ ಮಾತಿನಿಂದ ಅಚ್ಚರಿಗೊಂಡ ಬಿಗ್-ಬಿ, ನಾನು ತುಂಬಾ ಬೇಸರಗೊಂಡಿದ್ದೆನೆ. ನೀನು ನನ್ನ ಕಣ್ಣುಗಳನ್ನು ಹೊಗಳಲಿಲ್ಲ. ಆದರೆ ನಾನು ನಿಮ್ಮ ಈ ಮಾತನ್ನು ಐಶ್ವರ್ಯಗೆ ಮರೆಯದೆ ಹೇಳುತ್ತೇನೆ ಎಂದು ಹೇಳಿ ಅಮಿತಾಬ್ ನಗಲು ಶುರು ಮಾಡುತ್ತಾರೆ.

    2007ರಲ್ಲಿ ಐಶ್ವರ್ಯ ರೈ ನಟ ಅಭಿಷೇಕ್ ಬಚ್ಚನ್‍ರನ್ನು ಮದುವೆಯಾಗಿದ್ದರು. ದೀಪಾವಳಿ ಹಬ್ಬಕ್ಕೆ ಅಮಿತಾಬ್ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿದ್ದು, ನಟ ಶಾರೂಕ್ ಖಾನ್-ಗೌರಿ ಖಾನ್, ಅಜಯ್ ದೇವಗನ್-ಕಾಜೋಲ್, ಅಕ್ಷಯ್ ಕುಮಾರ್- ಟ್ವಿಂಕಲ್ ಖನ್ನಾ, ಕರಣ್ ಜೋಹರ್ ಸೇರಿದಂತೆ ಹಲವು ಕಲಾವಿದರಿಗೆ ಆಹ್ವಾನ ನೀಡಿದ್ದಾರೆ.

  • ನಾನು ಸತ್ತು ಹುಟ್ಟಿದ್ದವಳು: ಕಷ್ಟಪಟ್ಟಿದ್ದನ್ನು ನೆನೆದು ದುನಿಯಾ ರಶ್ಮಿ ಕಣ್ಣೀರು

    ನಾನು ಸತ್ತು ಹುಟ್ಟಿದ್ದವಳು: ಕಷ್ಟಪಟ್ಟಿದ್ದನ್ನು ನೆನೆದು ದುನಿಯಾ ರಶ್ಮಿ ಕಣ್ಣೀರು

    ಬೆಂಗಳೂರು: ಬಿಗ್ ಬಾಸ್ ಸೀಸನ್ -7 ಸ್ಪರ್ಧಿ ದುನಿಯಾ ರಶ್ಮಿ ಅವರು ನಾನು ಸತ್ತು ಹುಟ್ಟಿದ್ದವಳು ಎಂಬ ವಿಷಯವನ್ನು ಹೇಳಿದ್ದಾರೆ.

    ಗುರುವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದ್ದರು. ಈ ವೇಳೆ ಸ್ಪರ್ಧಿಗಳ ತಮ್ಮ ತಂದೆ-ತಾಯಿ ಬಗ್ಗೆ ಮಾತನಾಡಬೇಕಿತ್ತು. ಈ ಟಾಸ್ಕ್ ನಲ್ಲಿ ಮೊದಲು ಚಂದನಾ ಹಾಗೂ ಕಿಶನ್ ಶುರು ಮಾಡಿದ್ದರು. ಬಳಿಕ ಸ್ಪರ್ಧಿಗಳು ತಮ್ಮ ತಂದೆ-ತಾಯಿ ಜೊತೆ ಆಗಿರುವ ಅನುಭವವನ್ನು ಹಂಚಿಕೊಂಡರು.

    ಈ ಟಾಸ್ಕ್ ನಲ್ಲಿ ಮಾತನಾಡಿದ ದುನಿಯಾ ರಶ್ಮಿ, ನಮ್ಮ ತಂದೆ-ತಾಯಿಗೆ ಮೂರು ಜನ ಮಕ್ಕಳಿದ್ದರು. ಮೊದಲು ನನ್ನ ಅಣ್ಣ ಹುಟ್ಟಿದ್ದ. ಬಳಿಕ ನಾನು ಹುಟ್ಟಿದೆ. ಆದರೆ ನನ್ನ ತಂದೆಗೆ ಹೆಣ್ಣು ಮಕ್ಕಳೆಂದರೆ ಇಷ್ಟವಿರಲಿಲ್ಲ. ನನ್ನ ತಾಯಿ ಹಾಗೂ ದೊಡ್ಡಮ್ಮ ನನ್ನ ತಂದೆಗೆ ಸಮಾಧಾನ ಮಾಡಿದ್ದರು. ಬಳಿಕ ನಮ್ಮ ಫ್ಯಾಮಿಲಿ ಚೆನ್ನಾಗಿಯೇ ಇತ್ತು. ನನ್ನ ತಂದೆ ಕೂಡ ನನಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದರು.

    ಈ ನಡುವೆ ನನ್ನ ತಾಯಿ ರಾಜಕೀಯಕ್ಕೆ ಪ್ರವೇಶಿದ್ದರು. ನನ್ನ ತಂದೆಯೇ ಅಮ್ಮನಿಗೆ ಬಲವಂತ ಮಾಡಿ ರಾಜಕೀಯದಲ್ಲಿ ಕೆಲಸ ಮಾಡುವಂತೆ ಹೇಳಿದ್ದರು. ಅಮ್ಮ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ನಂತರ ನನ್ನ ತಾಯಿ ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದನು. ಆಗ ನನ್ನ ತಂದೆ ನನ್ನ ತಾಯಿ ಮೇಲೆ ಅನುಮಾನಪಡಲು ಶುರು ಮಾಡಿದ್ದರು. ನನ್ನ ತಾಯಿ ವೀಝಿಂಗ್ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಮಲಗಲು ತುಂಬಾ ಕಷ್ಟಪಡುತ್ತಿದ್ದರು ಎಂದು ಹೇಳುತ್ತಾ ಭಾವುಕರಾದರು.

    ಒಂದು ದಿನ ಅಪ್ಪ-ಅಮ್ಮನ ನಡುವೆ ಜಗಳವಾಗುತ್ತಿತ್ತು. ಶಬ್ದ ಕೇಳಿ ನಾನು ಒಳಗಡೆ ಹೋಗಿ ನೋಡಿದೆ. ಆಗ ನನ್ನ ತಂದೆ ತಾಯಿಯ ತಾಳಿ ಎಳೆಯುತ್ತಿದ್ದರು. ಇದಾದ ಬಳಿಕ ನನ್ನ ತಾಯಿ, ನನ್ನ ಜೊತೆ ಬರುತ್ತೀರಾ. ಈ ಮನೆಯಲ್ಲಿ ಇರುವುದು ಬೇಡ. ಬೇರೆ ಎಲ್ಲಿಯಾದರೂ ದೂರ ಹೋಗೋಣ ಎಂದರು. ಬಳಿಕ ಆ ರಾತ್ರಿಯೇ ನಾವು ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದೇವು. ಆ ಸಂದರ್ಭದಲ್ಲಿ ನಮ್ಮ ಬಳಿ ಹಣವಿರಲಿಲ್ಲ, ಕೇವಲ ಚಿನ್ನವಿತ್ತು. ಮನೆ ಬಿಟ್ಟು ಬಂದ ನಂತರ ನನ್ನ ತಂದೆಗೆ ಕರೆ ಮಾಡಿದಾಗ ನೀನು ಯಾರು ಎಂದು ಪ್ರಶ್ನಿಸಿದರು ಎಂದರು.

    ನೀನು ಯಾರು ಎಂದು ನನ್ನ ತಂದೆ ಪ್ರಶ್ನಿಸಿದಾಗ ನಾವು ಮತ್ತೆ ಅವರನ್ನು ಕರೆ ಮಾಡಲು ಹೋಗಲಿಲ್ಲ. ಬಳಿಕ ದೊಡಮ್ಮನಿಗೆ ಕರೆ ಮಾಡಿದಾಗ ಅವರು ನಮಗೆ ಮಡಿಕೇರಿಗೆ ಕರೆದುಕೊಂಡು ಹೋದರು. ನನ್ನ ತಾಯಿಗೆ ವೀಝಿಂಗ್ ಇದ್ದ ಕಾರಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದೆ. ಆದರೆ ನನ್ನ ಬಳಿ ಹಣವಿರಲಿಲ್ಲ. ಹೀಗೆ ರಸ್ತೆಯಲ್ಲಿ ಹೋಗುವಾಗ ಕಾಲ್ಗೆಜ್ಜೆ ಬಿದ್ದಿತ್ತು. ಅದನ್ನು ಮಾರಿ ನನ್ನ ತಾಯಿಗೆ ಚಿಕಿತ್ಸೆ ಕೊಡಿಸಿದ್ದೇನೆ. ಇದುವರೆಗೂ ನನ್ನ ತಾಯಿಗೆ ಕೊರತೆ ಆಗದಂತೆ ನೋಡಿಕೊಂಡಿದ್ದೇನೆ ಎಂದು ರಶ್ಮಿ ಟಾಸ್ಕ್ ನಲ್ಲಿ ತಿಳಿಸಿದರು.

  • ಬಿಗ್‍ಬಾಸ್ ಸೆಟ್‍ನಲ್ಲೇ ಸ್ಪರ್ಧಿ ಅರೆಸ್ಟ್

    ಬಿಗ್‍ಬಾಸ್ ಸೆಟ್‍ನಲ್ಲೇ ಸ್ಪರ್ಧಿ ಅರೆಸ್ಟ್

    ಮುಂಬೈ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸೆಟ್‍ನಿಂದಲೇ ನೇರವಾಗಿ ಸ್ಪರ್ಧಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆಯೊಂದು ಮರಾಠಿ ಬಿಗ್ ಬಾಸ್ ಎರಡನೇ ಅವೃತ್ತಿಯಲ್ಲಿ ನಡೆದಿದೆ.

    ಬಿಗ್‍ಬಾಸ್ ಸ್ಪರ್ಧಿಯಾದ ಅಭಿಜಿತ್ ಬಿಚುಕಲೆ ಅವರ ವಿರುದ್ಧ ಸತಾರಾ ಪೊಲೀಸ್ ಠಾಣೆಯಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು ಈ ಪ್ರಕರಣದ ಮೇಲೆ ಅವರನ್ನು ಬಂಧಿಸಲಾಗಿದೆ. ರಾಜಕೀಯ ಕಾರ್ಯಕರ್ತನಾಗಿರುವ ಅಭಿಜೆತ್ ಬಿಚುಕಲೆ ಅವರನ್ನು ರಾಜಕೀಯ ಕೋಟಾದ ಮೇಲೆ ಬಿಗ್‍ಬಾಸ್‍ಗೆ ಆಯ್ಕೆ ಮಾಡಲಾಗಿತ್ತು.

    2015ದಿಂದ ಈ ಚೆಕ್ ಬೌನ್ಸ್ ಪ್ರಕರಣ ಕೋರ್ಟಿನಲ್ಲಿ ಇತ್ತು. ಈ ವಿಚಾರವಾಗಿ ಕೋರ್ಟ್ ಅಭಿಜಿತ್ ಅವರಿಗೇ ಎಷ್ಟು ಸಲ ಸಮನ್ಸ್ ಕಳುಹಿಸಿದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅದ್ದರಿಂದ ಕೋರ್ಟ್ ಅವರ ಮೇಲೆ ವಾರೆಂಟ್ ಜಾರಿ ಮಾಡಿತ್ತು. ಈ ಕಾರಣದಿಂದ ಅವರು ಬಿಗ್ ಬಾಸ್ ಸ್ಪರ್ಧಿಯಾಗಿದ್ದರೂ ಅವರನ್ನು ಅಲ್ಲಿಂದಲೇ ನೇರವಾಗಿ ಬಂಧಿಸಿ ಕರೆದುಕೊಂಡು ಬರಲಾಗಿದೆ.

    ಕೋರ್ಟ್ ವಾರೆಂಟ್ ನೀಡಿದ ಬಳಿಕ ಸತಾರಾ ಠಾಣಾ ಪೊಲೀಸರು ಮತ್ತು ಗೋರೆಗಾಂವ್ ಪೂರ್ವದ ಆರೆ ಕಾಲೋನಿ ಪೊಲೀಸ್ ಠಾಣೆ ಸಿಬ್ಬಂದಿಗಳು ಸೇರಿ ಫಿಲ್ಮ್ ಸಿಟಿ ಮೈದಾನದಲ್ಲಿ ನಡೆಯುತ್ತಿರುವ ಬಿಗ್‍ಬಾಸ್ ಸೀಸನ್ 2 ರ ಸೆಟ್‍ಗೆ ನೇರವಾಗಿ ಹೋಗಿ ಅಲ್ಲಿಂದಲೇ ಅಭಿಜಿತ್ ಅವರನ್ನು ಬಂಧಿಸಿ ಕರೆದುಕೊಂದು ಕೊಂಡು ಬಂದಿದ್ದಾರೆ. ಈ ಸಮಯದಲ್ಲಿ ಶೋನ ಸಿಬ್ಬಂದಿ ಯಾರೂ ವಿರೋಧ ಪಡಿಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ವಿವಾದತ್ಮಾಕ ವ್ಯಕ್ತಿಯಾಗಿರುವ ಅಭಿಜಿತ್ ಪುರಸಭೆ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಯಾವುದೇ ಯಶಸ್ಸು ಕಂಡಿರಲಿಲ್ಲ. ಅಭಿಜಿತ್ ಅವರನ್ನು ಬಂಧಿಸಿ ಸತಾರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ಇಂದು ಕೋರ್ಟ್‍ಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ರಾಯಚೂರಿಗೆ ಹನುಮಂತ ಭೇಟಿ – ಸೆಲ್ಫಿಗಾಗಿ ಮುಗಿಬಿದ್ದ ಜನ

    ರಾಯಚೂರಿಗೆ ಹನುಮಂತ ಭೇಟಿ – ಸೆಲ್ಫಿಗಾಗಿ ಮುಗಿಬಿದ್ದ ಜನ

    ರಾಯಚೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ’ ಕಾರ್ಯಕ್ರಮದ ರನ್ನರ್ ಅಪ್ ಹನುಮಂತ ರಾಯಚೂರಿಗೆ ಆಗಮಿಸಿದ್ದ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

    ಕರ್ನಾಟಕದ ಮನೆ ಮಾತಾಗಿರುವ ಹನುಮಂತನನ್ನು ನೋಡಲು ಬಿಸಿಲನಾಡು ರಾಯಚೂರಿನಲ್ಲಿ ಜನ ಮುಗಿಬಿದ್ದರು. ರಾಯಚೂರಿನ ಮಸ್ಕಿಯಲ್ಲಿ ನಡೆದ ಸಂತ ಸೇವಾಲಾಲ್ ಮಹಾರಾಜ್ ಜಯಂತಿಗೆ ಮುಖ್ಯ ಅತಿಥಿಯಾಗಿ ಬಂದಿದ್ದ ಹನುಮಂತಣ್ಣನನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.

    ಕಾರ್ಯಕ್ರಮದಲ್ಲಿ ಹನುಮಂತನಿಗೆ ಲಂಬಾಣಿ ಸಮಾಜದವರು ಅವರದೇ ಶೈಲಿಯ ಟೋಪಿ ಹಾಗೂ ಶಾಲು ಹಾಕಿ ಸನ್ಮಾನಿಸಿದರು. ಮಸ್ಕಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆದ ಬಂಜಾರ್ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ ಹನುಮಂತನಿಗೆ ಕೈಬೀಸಿ ಜನ ಅಭಿಮಾನ ಮೆರೆದು ಸೆಲ್ಫಿಗಾಗಿ ಮುಗಿಬಿದ್ದರು. ಅಲ್ಲದೇ ಮನೆ, ಕಟ್ಟಡಗಳ ಮೇಲೆ ನಿಂತು ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ಕುತೂಹಲದ ಕಣ್ಣುಗಳಿಂದ ಬಿಸಿಲಲ್ಲಿ ಕಾದು ಹನುಮಂತನನ್ನು ನೋಡಿ ಖುಷಿಪಟ್ಟರು.

    ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಸಂತ ಸೇವಾಲಾಲ ಜಯಂತಿಯನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಸರಿಗಮಪ ಸೀಸನ್ 15ರ ರನ್ನರಪ್ ಹನುಮಂತ ಹಾಗೂ ಸೀಸನ್ 13ರ ಚಾಂಪಿಯನ್ ಸುನಿಲ್ ಗುಜಗುಂಡ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದ್ದರು. ಆ ಕಾರ್ಯಕ್ರಮದಲ್ಲಿ ಹನುಮಂತ ಅವರೇ ಕೇಂದ್ರ ಬಿಂದುವಾಗಿದ್ದರು. ಹನುಮಂತ ಅವರನ್ನು ಪ್ರೀತಿಯಿಂದ ಅಭಿಮಾನಿಗಳು ಯಡ್ರಾಮಿ ಪಟ್ಟಣದ ಪ್ರಮುಖ ವೃತಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಗೌರವಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv