Tag: ಸ್ಪಂದನಾ

  • ನಾನೆಂದೂ ನಿನ್ನವ, ಕೇವಲ ನಿನ್ನವ- ಸ್ಪಂದನಾ ಬಗ್ಗೆ ವಿಜಯ ರಾಘವೇಂದ್ರ ಭಾವುಕ ಪತ್ರ

    ನಾನೆಂದೂ ನಿನ್ನವ, ಕೇವಲ ನಿನ್ನವ- ಸ್ಪಂದನಾ ಬಗ್ಗೆ ವಿಜಯ ರಾಘವೇಂದ್ರ ಭಾವುಕ ಪತ್ರ

    ಟ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅಗಲಿ ಇಂದಿಗೆ 13 ದಿನಗಳು ಕಳೆದಿವೆ. ಪತ್ನಿಯ ನಿಧನದಿಂದ ಮೌನಕ್ಕೆ ಶರಣಾಗಿದ್ದ ವಿಜಯ ಈಗ ಸ್ಪಂದನಾ ಬಗ್ಗೆ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಸ್ಪಂದನಾ ನೆನಪನ್ನ ತಮ್ಮೊಳಗಿನ ಪ್ರೀತಿಯನ್ನ ಅವರು ಇದೀಗ ಬಿಚ್ಚಿಟ್ಟಿದ್ದಾರೆ.

    ಸ್ಪಂದನಾ ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ. ಕೇವಲ ನಿನ್ನವ ಎಂದು ವಿಜಯ್ ರಾಘವೇಂದ್ರ ಅವರು ಭಾವನ್ಮಾತಕವಾಗಿ ಸಾಲುಗಳನ್ನು ಹೇಳಿಕೊಂಡಿದ್ದಾರೆ.  ಇದನ್ನೂ ಓದಿ:ಮದುವೆ ಮುನ್ನ ಅಭಿಮಾನಿಗಳಿಗೆ ಹರ್ಷಿಕಾ-ಭುವನ್ ಕೊಟ್ಟರು ಗುಡ್ ನ್ಯೂಸ್

    View this post on Instagram

    A post shared by Vijay Raghavendra (@raagu.vijay)

    ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಆಗಸ್ಟ್ 26ರಂದು 2017ರಲ್ಲಿ ವಿಜಯ-ಸ್ಪಂದನಾ ಮದುವೆಯಾದರು. ಅವರ ದಾಂಪತ್ಯಕ್ಕೆ ಪ್ರೀತಿಗೆ ಶೌರ್ಯ ಎಂಬ ಪುತ್ರ ಸಾಕ್ಷಿಯಾಗಿದ್ದಾರೆ. ಸ್ಪಂದನಾ ಅನಿರೀಕ್ಷಿತ ಅಗಲಿಕೆ ಕುಟುಂಬಕ್ಕೆ ಶಾಕ್ ನೀಡಿದೆ.

    ಆಗಸ್ಟ್ 6ರಂದು ಹೃದಯಾಘಾತದಿಂದ (Heart Attack) ಸ್ಪಂದನಾ ಬ್ಯಾಕಾಂಕ್‌ನಲ್ಲಿ ನಿಧನರಾದರು. ಆಗಸ್ಟ್ 9ರಂದು ಸ್ಪಂದನಾ ಅಂತ್ಯಕ್ರಿಯೆ ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಪಂದನಾ ಪುಣ್ಯ ಸ್ಮರಣೆಯಲ್ಲಿ ಕುಂಟುತ್ತಲೇ ಎಂಟ್ರಿ ಕೊಟ್ಟ ನಟ- ಏನಾಯ್ತು ಶ್ರೀಮುರಳಿಗೆ?

    ಸ್ಪಂದನಾ ಪುಣ್ಯ ಸ್ಮರಣೆಯಲ್ಲಿ ಕುಂಟುತ್ತಲೇ ಎಂಟ್ರಿ ಕೊಟ್ಟ ನಟ- ಏನಾಯ್ತು ಶ್ರೀಮುರಳಿಗೆ?

    ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) 11ನೇ ದಿನದ ಪುಣ್ಯಸ್ಮರಣೆಯಲ್ಲಿ ಶ್ರೀಮುರಳಿ (Srimurali) ಭಾಗಿಯಾಗಿದ್ದಾರೆ. ಸಹೋದರ ವಿಜಯ- ಪುತ್ರ ಶೌರ್ಯ ಆಗಮನದ ಬಳಿಕ ಮುರಳಿ ಕೂಡ ಭಾಗವಹಿಸಿದ್ದು, ಮತ್ತೆ ಕಾಲು ನೋವಿನ ಸ್ಥಿತಿಯಲ್ಲಿಯೇ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ನಟನಿಗೆ ಏನಾಯ್ತು ಅಂತಾ ಅಭಿಮಾನಿಗಳು ಆತಂಕಗೊಂಡಿದ್ದಾರೆ.

    ಉತ್ತರಕ್ರಿಯೆ ಇಂದು (ಆಗಸ್ಟ್ 16) ಬೆಳಿಗ್ಗೆ 8:30ರಿಂದ ಸ್ಪಂದನಾ ಸ್ವಗೃಹದಲ್ಲಿ ಶಾಂತಿ ಹೋಮ ನೆರವೇರಿದೆ. ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆಯಲ್ಲಿ ಶಿವಣ್ಣ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಮಗನ ಕೈ ಹಿಡಿದು ವಿಜಯ ಎಂಟ್ರಿ ಕೊಟ್ಟರೆ, ಅತ್ತಿಗೆ ಸ್ಪಂದನಾ ಪುಣ್ಯಸ್ಮರಣೆಯಲ್ಲಿ ಕುಂಟುತ್ತಾಲೇ ಶ್ರೀಮುರಳಿ (Srimurali) ಎಂಟ್ರಿ ಕೊಟ್ಟಿದ್ದಾರೆ. ಕಾಲಿನ ನೋವಿನಿಂದಲೇ ನಿಧಾನಕ್ಕೆ ಹೆಜ್ಜೆ ಇಡುತ್ತಾ ಬಂದಿದ್ದಾರೆ. ಕೆಲ ದಿನಗಳ ಹಿಂದೆ ಬಘೀರ ಸಿನಿಮಾದ ಶೂಟಿಂಗ್‌ನಲ್ಲಿ ಶ್ರೀಮುರಳಿಗೆ ಪೆಟ್ಟಾಗಿತ್ತು. ಬಳಿಕ ಚೇತರಿಸಿಕೊಂಡಿದ್ದರು. ಸ್ಪಂದನಾ ಅಂತ್ಯಕ್ರಿಯೆ ಸಂದರ್ಭದಲ್ಲಿ ಚೆನ್ನಾಗಿದ್ರಲ್ಲಾ ಈಗ ಶ್ರೀಮುರಳಿಗೆ ಏನಾಯ್ತು ಎಂದು ಫ್ಯಾನ್ಸ್ ಆತಂಕಗೊಂಡಿದ್ದಾರೆ.

    ಶಾಂತಿ ಹೋಮ(Shanthi Homa) ನೆರವೇರಿದ ಬಳಿಕ ಮಧ್ಯಾಹ್ನ 1 ಗಂಟೆಯಿಂದ ನಂತರ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನ ಆರಂಭವಾಗಿದೆ. ಮನೆಮಗಳು ಸ್ಪಂದನಾ ಆತ್ಮಕ್ಕೆ ಚಿರಶಾಂತಿ ಕೋರಲು ಸರ್ವರಿಗೂ ಭಾಗಿಯಾಗುವಂತೆ ಬಿ.ಕೆ ಶಿವರಾಂ ಮತ್ತು ಎಸ್.ಎ ಚಿನ್ನೆಗೌಡರು ಮತ್ತು ಕುಟುಂಬಸ್ಥರು ಸರ್ವರಿಗೂ ಆಹ್ವಾನ ನೀಡಿದ್ದರು. ಇದನ್ನೂ ಓದಿ:ತೆಲುಗಿನಲ್ಲಿ ಬರಲಿದೆ ಹಾಸ್ಟೆಲ್ ಹುಡುಗರ ಕಥೆ- ರಮ್ಯಾ ನಟಿಸಿದ್ದ ಪಾತ್ರಕ್ಕೆ ರಶ್ಮಿ ಗೌತಮ್ ನಟನೆ

    ಸುಮಾರು 4000 ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ವಿಐಪಿ- ಸಾರ್ವಜನಿಕರಿಗೆ ಬೇರೆ ಬೇರೆ ಊಟದ ವ್ಯವಸ್ಥೆ ಮಾಡಲಾಗಿದೆ. 80ಕ್ಕೂ ಹೆಚ್ಚು ಅಡುಗೆಯವರಿಂದ ಭೋಜನ ತಯಾರಿ ಮಾಡಿಸಿದ್ದಾರೆ. ಬರುವ ಗೆಸ್ಟ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲಿದ್ದು, ಪೊಲೀಸ್ ಸಿಬ್ಬಂದಿಗಳು ಜವಾಬ್ದಾರಿ ವಹಿಸಿಕೊಂಡಿದ್ದಾರೆ.

    ಭೋಜನಕ್ಕೆ ಉಪ್ಪಿಟ್ಟು, ಪಲಾವ್, 2500 ಲಡ್ಡು, ಮಸಾಲಾ ವಡೆ, ಉದ್ದಿನ ವಡೆ, ಕೊಸಂಬರಿ, ಅನ್ನದ ಜೊತೆ ತರಕಾರಿ ಸಾರು ಮತ್ತು ತಿಳಿಸಾರು ಹಾಗೂ ಪಾಯಸ, ಮೊಸರು, ಹಪ್ಪಳ, ಆಬೊಂಡೆ ಸೇರಿದಂತೆ 21 ಬಗೆಯ ವಿವಿಧ ಖಾದ್ಯಗಳ ತಯಾರಿ ಮಾಡಲಾಗಿದೆ.

    ಆಗಸ್ಟ್ 6ರಂದು ಭಾನುವಾರ ಬ್ಯಾಕಾಂಕ್‌ನಲ್ಲಿ ಹೃದಯಾಘಾತದಿಂದ ಸ್ಪಂದನಾ ನಿಧನರಾಗಿದ್ದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆಯಲ್ಲಿ ಶಿವಣ್ಣ ದಂಪತಿ, ಅಶ್ವಿನಿ ಪುನೀತ್ ಭಾಗಿ

    ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆಯಲ್ಲಿ ಶಿವಣ್ಣ ದಂಪತಿ, ಅಶ್ವಿನಿ ಪುನೀತ್ ಭಾಗಿ

    ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾರ(Spandana) ಉತ್ತರಕ್ರಿಯೆ ವಿಧಿವಿಧಾನ ಇಂದು (ಆಗಸ್ಟ್ 16)ರಂದು ಸ್ಪಂದನಾ ಸ್ವಗೃಹದಲ್ಲಿ ನೆರವೇರಿದೆ. ಇದೀಗ ಸ್ಪಂದನಾ ಉತ್ತರಕ್ರಿಯೆ ವಿಧಿವಿಧಾನದಲ್ಲಿ ಶಿವರಾಜ್‌ಕುಮಾರ್ (Shivarajkumar) ದಂಪತಿ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್(Ashwini Puneeth Rajkumar) ಭಾಗಿಯಾಗಿದ್ದಾರೆ.

    ಉತ್ತರಕ್ರಿಯೆ ಇಂದು (ಆಗಸ್ಟ್ 16) ಬೆಳಿಗ್ಗೆ 8:30ರಿಂದ ಸ್ಪಂದನಾ ಸ್ವಗೃಹದಲ್ಲಿ ಶಾಂತಿ ಹೋಮ ನೆರವೇರಿದೆ. ವಿಜಯ ಪತ್ನಿ ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆಯಲ್ಲಿ ನಟ ಶಿವಣ್ಣ ದಂಪತಿ, ಅಶ್ವಿನಿ ಜೊತೆ ಪುನೀತ್‌ ಪುತ್ರಿ, ಅನು ಪ್ರಭಾಕರ್-‌ ರಘು ಮುಖರ್ಜಿ ದಂಪತಿ, ಲಹರಿ ವೇಲು ಕೂಡ ಭಾಗಿಯಾಗಿದ್ದಾರೆ. ಶಾಂತಿ ಹೋಮ ಇದೀಗ ನೆರವೇರಿದ್ದು, ಮಧ್ಯಾಹ್ನ 1 ಗಂಟೆಯ ನಂತರ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನ ಆರಂಭವಾಗಲಿದೆ. ಮನೆಮಗಳು ಸ್ಪಂದನಾ ಆತ್ಮಕ್ಕೆ ಚಿರಶಾಂತಿ ಕೋರಲು ಸರ್ವರಿಗೂ ಭಾಗಿಯಾಗುವಂತೆ ಬಿ.ಕೆ ಶಿವರಾಂ ಮತ್ತು ಎಸ್.ಎ ಚಿನ್ನೆಗೌಡರು ಮತ್ತು ಕುಟುಂಬಸ್ಥರು ಸರ್ವರಿಗೂ ಆಹ್ವಾನ ನೀಡಿದ್ದರು.

    ಸುಮಾರು 4000 ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ವಿಐಪಿ- ಸಾರ್ವಜನಿಕರಿಗೆ ಬೇರೆ ಬೇರೆ ಊಟದ ವ್ಯವಸ್ಥೆ ಮಾಡಲಾಗಿದೆ. 80ಕ್ಕೂ ಹೆಚ್ಚು ಅಡುಗೆಯವರಿಂದ ಭೋಜನ ತಯಾರಿ ಮಾಡಿಸಿದ್ದಾರೆ. ಬರುವ ಗೆಸ್ಟ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲಿದ್ದು, ಪೊಲೀಸ್ ಸಿಬ್ಬಂದಿಗಳು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ತೆಲುಗಿನಲ್ಲಿ ಬರಲಿದೆ ಹಾಸ್ಟೆಲ್ ಹುಡುಗರ ಕಥೆ- ರಮ್ಯಾ ನಟಿಸಿದ್ದ ಪಾತ್ರಕ್ಕೆ ರಶ್ಮಿ ಗೌತಮ್ ನಟನೆ

    ಭೋಜನಕ್ಕೆ ಉಪ್ಪಿಟ್ಟು, ಪಲಾವ್, 2500 ಲಡ್ಡು, ಮಸಾಲಾ ವಡೆ, ಉದ್ದಿನ ವಡೆ, ಕೊಸಂಬರಿ, ಅನ್ನದ ಜೊತೆ ತರಕಾರಿ ಸಾರು ಮತ್ತು ತಿಳಿಸಾರು ಹಾಗೂ ಪಾಯಸ, ಮೊಸರು, ಹಪ್ಪಳ, ಆಬೊಂಡೆ ಸೇರಿದಂತೆ 21 ಬಗೆಯ ವಿವಿಧ ಖಾದ್ಯಗಳ ತಯಾರಿ ಮಾಡಲಾಗಿದೆ.

    ಆಗಸ್ಟ್ 6ರಂದು ಭಾನುವಾರ ಬ್ಯಾಕಾಂಕ್‌ನಲ್ಲಿ ಹೃದಯಾಘಾತದಿಂದ ಸ್ಪಂದನಾ ನಿಧನರಾಗಿದ್ದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದು ಸ್ಪಂದನಾ ಉತ್ತರಕ್ರಿಯೆ ವಿಧಿವಿಧಾನ

    ಇಂದು ಸ್ಪಂದನಾ ಉತ್ತರಕ್ರಿಯೆ ವಿಧಿವಿಧಾನ

    ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅಗಲಿಕೆ ಹಿನ್ನೆಲೆ ಇಂದು (ಆಗಸ್ಟ್ 16)ರಂದು ಉತ್ತರಕ್ರಿಯೆ (Uttara Kriya) ವಿಧಿವಿಧಾನ ನಡೆಯುತ್ತಿದೆ. ಬೆಂಗಳೂರಿನ ಮಲ್ಲೇಶ್ವರಂನ ಬಿಬಿಎಂಪಿ ಆಟದ ಮೈದಾನದಲ್ಲಿ ಸರ್ವರಿಗೂ ಭೋಜನ ವ್ಯವಸ್ಥೆ ಮಾಡಲಾಗಿದೆ.

    ಉತ್ತರಕ್ರಿಯೆ ಇಂದು (ಆಗಸ್ಟ್ 16) ಬೆಳಿಗ್ಗೆ 8:30ರಿಂದ ಸ್ಪಂದನಾ ಸ್ವಗೃಹದಲ್ಲಿ ಶಾಂತಿ ಹೋಮ ನಡೆಯುತ್ತಿದೆ. ಬಳಿಕ 11:30ರ ನಂತರ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನ ಆರಂಭವಾಗಲಿದೆ. ಮನೆಮಗಳು ಸ್ಪಂದನಾ ಆತ್ಮಕ್ಕೆ ಚಿರಶಾಂತಿ ಕೋರಲು ಸರ್ವರಿಗೂ ಭಾಗಿಯಾಗುವಂತೆ ಬಿ.ಕೆ ಶಿವರಾಂ ಮತ್ತು ಎಸ್.ಎ ಚಿನ್ನೆಗೌಡರು ಮತ್ತು ಕುಟುಂಬಸ್ಥರು ಸರ್ವರಿಗೂ ಆಹ್ವಾನ ನೀಡಿದ್ದರು.

    ಸುಮಾರು 4000 ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ವಿಐಪಿ- ಸಾರ್ವಜನಿಕರಿಗೆ ಬೇರೆ ಬೇರೆ ಊಟದ ವ್ಯವಸ್ಥೆ ಮಾಡಲಾಗಿದೆ. 80ಕ್ಕೂ ಹೆಚ್ಚು ಅಡುಗೆಯವರಿಂದ ಭೋಜನ ತಯಾರಿ ಮಾಡಿಸಿದ್ದಾರೆ. ಬರುವ ಗೆಸ್ಟ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲಿದ್ದು, ಪೊಲೀಸ್ ಸಿಬ್ಬಂದಿಗಳು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಆಗಸ್ಟ್ 16ರಂದು ಸ್ಪಂದನಾ ಉತ್ತರಕ್ರಿಯೆ- ನಾಳೆಗೆ ಸಿದ್ಧತೆ ಹೇಗಿದೆ?

    ಭೋಜನಕ್ಕೆ ಉಪ್ಪಿಟ್ಟು, ಪಲಾವ್, 2500 ಲಡ್ಡು, ಮಸಾಲಾ ವಡೆ, ಉದ್ದಿನ ವಡೆ, ಕೊಸಂಬರಿ, ಅನ್ನದ ಜೊತೆ ತರಕಾರಿ ಸಾರು ಮತ್ತು ತಿಳಿಸಾರು ಹಾಗೂ ಪಾಯಸ, ಮೊಸರು, ಹಪ್ಪಳ, ಆಬೊಂಡೆ ಸೇರಿದಂತೆ 21 ಬಗೆಯ ವಿವಿಧ ಖಾದ್ಯಗಳ ತಯಾರಿ ಮಾಡಲಾಗಿದೆ.

    ಆಗಸ್ಟ್ 6ರಂದು ಭಾನುವಾರ ಬ್ಯಾಕಾಂಕ್‌ನಲ್ಲಿ ಹೃದಯಾಘಾತದಿಂದ (Heart Attack) ಸ್ಪಂದನಾ (Spandana) ನಿಧನರಾಗಿದ್ದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಗಸ್ಟ್ 16ರಂದು ಸ್ಪಂದನಾ ಉತ್ತರಕ್ರಿಯೆ- ನಾಳೆಗೆ ಸಿದ್ಧತೆ ಹೇಗಿದೆ?

    ಆಗಸ್ಟ್ 16ರಂದು ಸ್ಪಂದನಾ ಉತ್ತರಕ್ರಿಯೆ- ನಾಳೆಗೆ ಸಿದ್ಧತೆ ಹೇಗಿದೆ?

    ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅಗಲಿಕೆ ಹಿನ್ನೆಲೆ ನಾಳೆ (ಆಗಸ್ಟ್ 16ರಂದು) ಉತ್ತರಕ್ರಿಯೆ ನಡೆಯಲಿದೆ. ಬೆಂಗಳೂರಿನ ಮಲ್ಲೇಶ್ವರಂನ ಬಿಬಿಎಂಪಿ ಆಟದ ಮೈದಾನದಲ್ಲಿ ಸರ್ವರಿಗೂ ಭೋಜನ ವ್ಯವಸ್ಥೆ ಮಾಡಲಾಗಿದೆ. ಸ್ಪಂದನಾ ಉತ್ತರ ಕ್ರಿಯೆಗೆ ಸಕಲ ಸಿದ್ಧತೆ ಮಾಡಲಾಗುತ್ತಿದೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

    ಸ್ಪಂದನಾ ಉತ್ತರ ಕ್ರಿಯೆಗೆ (Uttara Kriya) ಭಾಗಿಯಾಗಲು ಸರ್ವರಿಗೂ ಕುಟುಂಬ ಆಹ್ವಾನ ನೀಡಿದ್ದಾರೆ. ಉತ್ತರ ಕ್ರಿಯೆ ಆಗಸ್ಟ್ 16ರ ಬೆಳಿಗ್ಗೆ 8 ಗಂಟೆಯಿಂದ ಸ್ಪಂದನಾ ಸ್ವಗೃಹದಲ್ಲಿ ಶಾಂತಿ ಹೋಮ ನಡೆಯಲಿದೆ. ಮಧ್ಯಾಹ್ನ 12:30ರ ನಂತರ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನವನ್ನು ಹಮ್ಮಿಕೊಳ್ಳಲಾಗಿದೆ. ಮನೆಮಗಳು ಸ್ಪಂದನಾ ಆತ್ಮಕ್ಕೆ ಚಿರಶಾಂತಿ ಕೋರಲು ಭಾಗಿಯಾಗುವಂತೆ ಬಿ.ಕೆ ಶಿವರಾಂ ಮತ್ತು ಎಸ್.ಎ ಚಿನ್ನೆಗೌಡರು ಮತ್ತು ಕುಟುಂಬಸ್ಥರು ಸರ್ವರಿಗೂ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ:‘ಸಲಾರ್’ ತೆರೆಗೆ ಅಬ್ಬರಿಸಲು ದಿನಗಣನೆ- ಪ್ರಭಾಸ್ ಸಿನಿಮಾದ ಬಿಗ್ ಅಪ್‌ಡೇಟ್

    ಸುಮಾರು 4000 ಜನರಿಗೆ ಊಟದ ವ್ಯವಸ್ಥೆಗೆ ಪ್ಲ್ಯಾನ್‌ ಮಾಡಿದ್ದಾರೆ. ವಿಐಪಿ- ಸಾರ್ವಜನಿಕರಿಗೆ ಒಂದೇ ಜಾಗದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಯಾವುದೇ ರೀತಿಯ ಪಂಕ್ತಿ ಸಿಸ್ಟಮ್ ಇರೋದಿಲ್ಲ. ಬರುವ ಗೆಸ್ಟ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲಿದ್ದು, ಪೊಲೀಸ್ ಸಿಬ್ಬಂದಿಗಳು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

    ಭೋಜನಕ್ಕೆ ಉಪ್ಪಿಟ್ಟು, ಪಲಾವ್, 2500 ಲಂಡು, ಮಸಾಲಾ ವಡೆ, ಉದ್ದಿನ ವಡೆ, ಕೋಸುಂಬರಿ, ಅನ್ನದ ಜೊತೆ ತರಕಾರಿ ಸಾರು ಮತ್ತು ತಿಳಿಸಾರು ಹಾಗೂ ಪಾಯಸ, ಮೊಸರು, ಹಪ್ಪಳ ಇರಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಷ್ಟು ದಿನ ಬದುಕಬೇಕು ಅನ್ನೋದು ದೇವರ ಕೈಯಲ್ಲಿ ಇದೆ:  ರಾಘವೇಂದ್ರ ರಾಜ್‍ಕುಮಾರ್

    ಎಷ್ಟು ದಿನ ಬದುಕಬೇಕು ಅನ್ನೋದು ದೇವರ ಕೈಯಲ್ಲಿ ಇದೆ: ರಾಘವೇಂದ್ರ ರಾಜ್‍ಕುಮಾರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಟ್ಟೋದು ಸಾಯೋದು ಎರಡೇ ಸತ್ಯ- ಸ್ಪಂದನಾ ಸಾವಿನ ಬಗ್ಗೆ ರಾಘಣ್ಣ ಪ್ರತಿಕ್ರಿಯೆ

    ಹುಟ್ಟೋದು ಸಾಯೋದು ಎರಡೇ ಸತ್ಯ- ಸ್ಪಂದನಾ ಸಾವಿನ ಬಗ್ಗೆ ರಾಘಣ್ಣ ಪ್ರತಿಕ್ರಿಯೆ

    ಸ್ಯಾಂಡಲ್ವುಡ್ ನಟ ರಾಘವೇಂದ್ರ ರಾಜ್‌ಕುಮಾರ್ ಇಂದು (ಆಗಸ್ಟ್‌ 15)ರಂದು 58ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಾಗಿದೆ. ಈ ವೇಳೆ ಸ್ಪಂದನಾ (Spandana) ಸಾವಿನ ಬಗ್ಗೆ ರಾಘಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹುಟ್ಟೋದು ಸಾಯೋದು ಎರಡೇ ಸತ್ಯ, ಇದರ ನಡುವೆ ನಾವು ಹೇಗೆ ಜೀವಿಸಿ ತೋರಿಸುತ್ತೀವಿ ಅನ್ನೋದು ಮುಖ್ಯ ಎಂದು ಮಾಧ್ಯಮಕ್ಕೆ ನಟ ಮಾತನಾಡಿದ್ದಾರೆ.

    ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ ನಿಧನದ ಬಗ್ಗೆ ರಾಘಣ್ಣ ಮುಕ್ತವಾಗಿ ಮಾತನಾಡಿದ್ದಾರೆ. ಹುಟ್ಟೋದು ಸಾಯೋದು ಎರಡೇ ಸತ್ಯ. ಮಧ್ಯೆ ಬದುಕೋದು ಇದೆಯಲ್ಲ ಅದು ನಮ್ಮ ಕೈಯಲ್ಲಿದೆ. ನಾವು ಎಷ್ಟು ದಿನ ಬದುಕಬೇಕು ಅಂತಾ ದೇವರು ನಿರ್ಧರಿಸುತ್ತಾನೆ. ಸಾವು ಕೆಲವರಿಗೆ ಬೇಗ ಬರುತ್ತೆ. ಕೆಲವರಿಗೆ ಲೇಟ್ ಬರುತ್ತೆ. ಸ್ಪಂದನಾ ಇಲ್ಲ ಆ ನೋವಿನ ಜೊತೆನೇ ನಾವು ಬದುಕುತ್ತಾ ಹೋಗಬೇಕು. ಅವರು ಇಲ್ಲ ಅನ್ನೋ ಆ ನೋವನ್ನ ನಾವು ಮರಿಯೋಕೆ ಆಗಲ್ಲ. ಆ ನೋವಿನ ಜೊತೆಗೆ ನಾವು ಜೀವಿಸಬೇಕು ಎಂದು ರಾಘಣ್ಣ ಭಾವುಕರಾಗಿದ್ದಾರೆ. ಇದನ್ನೂ ಓದಿ:ಲಾಲ್‌ಬಾಗ್ ಸಿಬ್ಬಂದಿಯನ್ನು ಮನೆಗೆ ಆಹ್ವಾನಿಸಿ ಕ್ಷಮೆ ಕೋರಿದ ರಚಿತಾ ರಾಮ್

    ಬಳಿಕ ಮಾತು ಮುಂದುವರೆಸಿ, ಪುನೀತ್ ಹೋದ ಮೇಲೆ ಬೇಜಾರ್ ಆಗಿದೆ. ನನ್ನ ತಮ್ಮ ಇದ್ದಾಗ್ಲೇ ನನ್ನ ಹುಟ್ಟುಹಬ್ಬ ಎಂದು ತೀರ್ಮಾನ ಮಾಡಿದ್ದೆ. ಬೆಳಿಗ್ಗೆ ಹೋಗಿ ಅವರ ಸಮಾಧಿ ಬಳಿ ಹೋಗಿ ನಮಸ್ಕಾರ ಮಾಡಿಕೊಂಡು ಬಂದೆ. ಅಪ್ಪು ಅಗಲಿಕೆಯ ನಂತರ ಅದಕ್ಕೆ ಸ್ವೀಟ್ ತಿನ್ನಲ್ಲ. ಹಾರಾ ಹಾಕಿಸಿಕೊಳ್ಳಲ್ಲ. ನನಗಿಂತ 10 ವರ್ಷ ಚಿಕ್ಕೋನು. ಅದಕ್ಕೆ ಬಿಳಿ ಬಟ್ಟೆ ಬಿಟ್ಟರೇ ಬೇರೆ ಹಾಕಲ್ಲ. ಅಪ್ಪು ಇದ್ದ ದಿನಕ್ಕಿಂತ ಹೋದ ಮೇಲೆ ತುಂಬಾ ಹಚ್ಕೋಂಡೆ.

    ಇಂದು ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಕೂಡ ಆಗಿದೆ. ತಂದೆ ಯಾವಾಗಲೂ ಹೇಳೋರು. ಇಂಡಿಯಾ ಅನ್ನೋದನ್ನ ನಿಲ್ಲಿಸಬೇಕು. ಭಾರತ ಅಂತಾ ಹೇಳಬೇಕು ಎಂದು ಹೇಳಿ ಕೊಟ್ಟಿದ್ದರು ಎಂದು ರಾಘಣ್ಣ ಹಳೆಯ ದಿನಗಳನ್ನ ಸ್ಮರಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ‌ಗಸ್ಟ್‌ 16ರಂದು ಸ್ಪಂದನಾ ಉತ್ತರ ಕ್ರಿಯೆಗೆ ಸರ್ವರಿಗೂ ಆಹ್ವಾನಿಸಿದ ವಿಜಯ ರಾಘವೇಂದ್ರ ಕುಟುಂಬ

    ಆ‌ಗಸ್ಟ್‌ 16ರಂದು ಸ್ಪಂದನಾ ಉತ್ತರ ಕ್ರಿಯೆಗೆ ಸರ್ವರಿಗೂ ಆಹ್ವಾನಿಸಿದ ವಿಜಯ ರಾಘವೇಂದ್ರ ಕುಟುಂಬ

    ಟ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅವರು ಕೆಲದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಇದೀಗ ಸ್ಪಂದನಾ ಉತ್ತರ ಕ್ರಿಯೆಗೆ ಕುಟುಂಬ ಸಿದ್ಧತೆ ಮಾಡುಕೊಳ್ಳುತ್ತಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಭಾಗವಹಿಸುವಂತೆ ವಿಜಯ ಕುಟುಂಬ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ:ಪಡ್ಡೆಗಳ ನಿದ್ದೆಗೆಡಿಸಿದ ‘ನನ್ನರಿಸಿ ರಾಧೆ’ಯ ಕೌಸ್ತುಭ

    ಆತ್ಮೀಯರೇ ನಮ್ಮ ಮನೆಯ ಮಗಳು ಸ್ಪಂದನಾ ವಿಜಯ ರಾಘವೇಂದ್ರ ಅವರು ಆಗಸ್ಟ್ 6ರಂದು ನಮ್ಮನ್ನಗಲಿರಿವುದು ನಿಮಗೆಲ್ಲರಿಗೂ ತಿಳಿದ ವಿಷಯ. ಉತ್ತರ ಕ್ರಿಯೆ ಆಗಸ್ಟ್ 16ರ ಬುಧವಾರದಂದು ಮಲ್ಲೇಶ್ವರ ಸ್ವಗೃಹದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಶಾಂತಿ ಹೋಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನವನ್ನು ಹಮ್ಮಿಕೊಂಡಿದ್ದೇನೆ. ಆದ್ದರಿಂದ ತಾವುಗಳು ಭಾಗವಹಿಸಿ ಅವರ ಆತ್ಮಕ್ಕೆ ಚಿರಶಾಂತಿ ಕೋರಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಬಿ.ಕೆ ಶಿವರಾಂ ಮತ್ತು ಎಸ್.ಎ ಚಿನ್ನೆಗೌಡರು ಮತ್ತು ಕುಟುಂಬಸ್ಥರು ಸರ್ವರಿಗೂ ಆಹ್ವಾನ ನೀಡಿದ್ದಾರೆ.

    ಕೆಲದಿನಗಳ ಹಿಂದೆ ಸ್ಪಂದನಾ ಸ್ನೇಹಿತರ ಜೊತೆ ಬ್ಯಾಂಕಾಕ್‌ಗೆ ತೆರಳಿದ್ದರು. ಆಗಸ್ಟ್ 6ರಂದು ಹೃದಯಾಘಾತದಿಂದ (Heart Attack) ಸ್ಪಂದನಾ ವಿಧಿವಶರಾಗಿದ್ದರು. ಆಗಸ್ಟ್ 9ರಂದು ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾರ ಅಂತಿಮ ಸಂಸ್ಕಾರ ನಡೆಯಿತು. ಸ್ಪಂದನಾ ಹಠಾತ್ ನಿಧನ ವಿಜಯ ಮತ್ತು ಅವರ ಕುಟುಂಬಕ್ಕೆ ಶಾಕ್ ನೀಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Exclusive: ಸ್ಪಂದನಾ ಇಲ್ಲ ಅನ್ನೋ ಆ ನೋವಿನ ಭಾರ ಯಾವತ್ತೂ ಕಮ್ಮಿಯಾಗಲ್ಲ- ಶಿವಣ್ಣ ಫಸ್ಟ್ ರಿಯಾಕ್ಷನ್

    Exclusive: ಸ್ಪಂದನಾ ಇಲ್ಲ ಅನ್ನೋ ಆ ನೋವಿನ ಭಾರ ಯಾವತ್ತೂ ಕಮ್ಮಿಯಾಗಲ್ಲ- ಶಿವಣ್ಣ ಫಸ್ಟ್ ರಿಯಾಕ್ಷನ್

    ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ನಿಧನರಾಗಿ ಎರಡು ವರ್ಷಗಳು ಕಳೆದಿದೆ. ಈ ನೋವಿನಿಂದ ಹೊರಬರುವ ಮುನ್ನವೇ ಸ್ಪಂದನಾ ಸಾವು ಕುಟುಂಬಕ್ಕೆ ಆಘಾತವುಂಟು ಮಾಡಿದೆ.  ಸಂಬಂಧಿ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ(Spandana) ಹಠಾತ್ ನಿಧನದ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva Rajkumar)  ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ಸ್ಪಂದನಾ ಇಲ್ಲ ಅನ್ನೋ ಆ ನೋವಿನ ಭಾರ ಯಾವತ್ತೂ ಕಮ್ಮಿ ಆಗಲ್ಲ ಅಂತಾ ಶಿವಣ್ಣ ಭಾವುಕರಾಗಿದ್ದಾರೆ.

    ಕೆಲದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿರುವ ಸ್ಪಂದನಾ (Spandana) ಬಗ್ಗೆ ಶಿವಣ್ಣ ಪ್ರತಿಕ್ರಿಯಿಸಿ, ರಾಘು ಅವರನ್ನ ಚಿಕ್ಕ ಮಗುವಿನಿಂದ ನಾವು ನೋಡಿಕೊಂಡು ಬಂದಿದ್ದೇವೆ. ಚಿಕ್ಕ ವಯಸ್ಸಿನಲ್ಲೇ ಸ್ಪಂದನಾ ಹೋದರು. ನನ್ನ ಮಾವನ ಮಗ ರಾಘು, ಹಾರ್ಟಲಿ ತುಂಬಾ ಒಳ್ಳೆಯ ವ್ಯಕ್ತಿ. ಅವನು ಜೋರಾಗಿ ಮಾತನಾಡಿದ್ದು, ನನ್ನ ಲೈಫ್‌ನಲ್ಲಿ ನಾನು ನೋಡೇ ಇಲ್ಲ. ಸ್ಪಂದನಾ ಸಾವಿನ ವಿಚಾರ ಕೇಳಿದಾಗಿನಿಂದ ನಾವೆಲ್ಲರೂ ನೋವಿನಲ್ಲೇ ಇದ್ದೀವಿ.

    ಸ್ಪಂದನಾ ಇಲ್ಲ ಅನ್ನೋ ಆ ನೋವಿನ ಭಾರ ಯಾವತ್ತು ಹೋಗಲ್ಲ. ಅವರು ಯಾವಾಗಲೂ ನಮ್ಮ ಜೊತೆಯಲ್ಲೇ ಇದ್ದಾರೆ ಅಂದುಕೋ ಎಂದು ನಾವು ರಾಘುಗೆ ಹೇಳ್ತಾ ಇದ್ದೀವಿ. ಒಬ್ಬ ಮನುಷ್ಯನ ಅಷ್ಟು ಈಸಿಯಾಗಿ ಕಳುಹಿಸಬಾರದು. ಅವರ ನೆನಪು ಜೊತೆಯಲ್ಲೇ ತೆಗೆದುಕೊಂಡು ಹೋಗಬೇಕು. ಮಗ ಶೌರ್ಯನಿಗೂ ಒಳ್ಳೆಯದಾಗುತ್ತೆ. ವಿಜಯ ಕುಟುಂಬಕ್ಕೆ ದೇವರು ಶಕ್ತಿ ಕೊಡಬೇಕು ಎಂದು ಶಿವಣ್ಣ ಮಾತನಾಡಿದ್ದಾರೆ. ಇದನ್ನೂ ಓದಿ:ಸಕ್ಸಸ್ ಸೀಕ್ರೆಟ್ ಬಿಚ್ಚಿಟ್ಟ ನಟಿ- ಡಿಸೆಂಬರ್ ನನ್ನ ಲಕ್ಕಿ ತಿಂಗಳು ಎಂದ ರಶ್ಮಿಕಾ ಮಂದಣ್ಣ

    ಸ್ಪಂದನಾ ಅವರನ್ನ ಸಾಕಷ್ಟು ವರ್ಷಗಳಿಂದ ನೋಡಿದ್ದೇನೆ. ಒಮ್ಮೆ ನಮ್ಮ ಲೀಡರ್ (Leader Film) ಸಿನಿಮಾ ಸೆಟ್‌ಗೆ ಅವರು ಬಂದಿದ್ದರು. ನಾವು ಒಳ್ಳೆಯ ಸಮಯ ಕಳೆದಿದ್ವಿ. ಒಳ್ಳೆಯ ವ್ಯಕ್ತಿ ಅವರು. ಯಾವಾಗಲೂ ನಗು ನಗುತ್ತಲೇ ಮಾತನಾಡುತ್ತಿದ್ದರು. ಸಿಟ್ಟು ಮಾಡಿಕೊಂಡಿದ್ದು ನಾವು ನೋಡಿಲ್ಲ. ಆಕೆಯ ಮುಖ ನಾವು ಮರಿಯೋಕೆ ಆಗಲ್ಲ. ಆಕೆ ಇಲ್ಲಾ ಅಂತಾ ಅಂದುಕೊಳ್ಳೋಕೆ ಆಗಲ್ಲ. ಸ್ಪಂದನಾ ನಮ್ಮ ಜೊತೆಯಾಗಿಯೇ ಇದ್ದಾರೆ ಎಂದು ಶಿವಣ್ಣ ಭಾವುಕರಾಗಿದ್ದಾರೆ.

    ವಿಜಯ ರಾಘವೇಂದ್ರಗೆ ಬೆಂಬಲವಾಗಿ ನಾವು ಇದ್ದೀವಿ. ಎಲ್ಲರೂ ಅವರ ಜೊತೆ ಇರುತ್ತೀವಿ. ಅಂತ್ಯಕ್ರಿಯೆ ದಿನ ಎಷ್ಟು ಜನ ನೋಡೋಕೆ ಬಂದಿದ್ರು. ಅಷ್ಟು ಪ್ರೀತಿ ಅವರು ಗಳಿಸಿದ್ದಾರೆ ಎಂದು ಗೊತ್ತಾಗುತ್ತದೆ. ನಮ್ಮ ಅಳು ಶೌರ್ಯಗೆ ಪರಿಣಾಮ ಬೀರಬಾರದು. ಆ ಮಗು ಮುಂದೆ ನಡೆಯಬೇಕು. ಅವನ ಜೀವನಕ್ಕೆ ಆಧಾರವಾಗಿ ನಿಲ್ಲಬೇಕು. ಅದಕ್ಕೆ ನಾವು ಸ್ಟ್ರಾಂಗ್‌ ಆಗಿ ನಿಲ್ಲಬೇಕು ಎಂದು ಶಿವಣ್ಣ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಕೆಲ ದಿನಗಳ ಹಿಂದೆ ಸ್ಪಂದನಾ ಸ್ನೇಹಿತರ ಜೊತೆ ಬ್ಯಾಂಕಾಕ್‌ಗೆ ತೆರಳಿದ್ದರು. ಹೃದಯಾಘಾತದಿಂದ ಸ್ಪಂದನಾ ವಿಧಿವಶರಾಗಿದ್ದರು. ಆಗಸ್ಟ್ 9ರಂದು ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾರ ಅಂತಿಮ ಸಂಸ್ಕಾರ ನಡೆಯಿತು. ಸ್ಪಂದನಾ ಹಠಾತ್ ನಿಧನ ವಿಜಯ ಮತ್ತು ಅವರ ಕುಟುಂಬಕ್ಕೆ ಶಾಕ್ ನೀಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿ ಅಸ್ಥಿಯನ್ನು ಕೈಯಲ್ಲೇ ಹಿಡಿದು ನಿಂತ ರಾಘು

    ಪತ್ನಿ ಅಸ್ಥಿಯನ್ನು ಕೈಯಲ್ಲೇ ಹಿಡಿದು ನಿಂತ ರಾಘು