Tag: ಸ್ಪಂದನಾ ವಿಜಯ್

  • ಹ್ಯಾಪಿ ಆ್ಯನಿವರ್ಸರಿ ಚಿನ್ನ- ಅಗಲಿದ ಪತ್ನಿಗೆ ವಿಜಯ್ ರಾಘವೇಂದ್ರ ವಿಶ್

    ಹ್ಯಾಪಿ ಆ್ಯನಿವರ್ಸರಿ ಚಿನ್ನ- ಅಗಲಿದ ಪತ್ನಿಗೆ ವಿಜಯ್ ರಾಘವೇಂದ್ರ ವಿಶ್

    ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ (Vijay Raghavendra) ಮತ್ತು ಸ್ಪಂದನಾ (Spandana Vijay) ಇಂದು (ಆ.26) ದಾಂಪತ್ಯ ಜೀವನಕ್ಕೆ ಕಾಲಿಟ್ಟು 17 ವರ್ಷಗಳು ಕಳೆದಿವೆ. ಅಗಲಿದ ಪತ್ನಿಯನ್ನು ನೆನೆದು ಹ್ಯಾಪಿ ಆ್ಯನಿವರ್ಸರಿ ಚಿನ್ನ ಎಂದು ನಟ ಭಾವುಕವಾಗಿ ಇನ್ಸ್ಟಾಗ್ರಾಂನಲ್ಲಿ ನಟ ಬರೆದುಕೊಂಡಿದ್ದಾರೆ.

    ಇಂದಿಗೆ 17 ವರ್ಷಗಳು. ಹ್ಯಾಪಿ ಆ್ಯನಿವರ್ಸರಿ ಚಿನ್ನ ಎಂದು ವಿಶ್ ಮಾಡಿ, ಸ್ಪಂದನಾ ಜೊತೆಗಿನ ಹಳೆಯ ಫೋಟೋವೊಂದನ್ನು ವಿಜಯ್ ರಾಘವೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಬಿ ಮೈ ಲೈಟ್‌ ಅಂತಲೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:‘ಫೈರ್‌ ಫ್ಲೈ’ ಶೂಟಿಂಗ್ ಮುಕ್ತಾಯ- ಮರೆಯಲಾಗದ ಪಯಣ ಎಂದ ನಿವೇದಿತಾ ಶಿವರಾಜ್‌ಕುಮಾರ್

    View this post on Instagram

    A post shared by Vijay Raghavendra (@raagu.vijay)

    ಈ ಹಿಂದೆ ಪ್ರತಿ ವರ್ಷ ಸ್ಪಂದನಾ ಜೊತೆ ಮದುವೆ ವಾರ್ಷಿಕೋತ್ಸವನ್ನು ವಿಜಯ್ ವಿಶೇಷವಾಗಿ ಸೆಲೆಬ್ರೇಟ್ ಮಾಡುತ್ತಿದ್ದರು. ಆದರೆ ಈಗ ಸ್ಪಂದನಾ ಇಲ್ಲ ಅನ್ನೋ ನೋವು ಕೂಡ ಅವರಿಗದೆ. ಹಾಗಂತ ಪತ್ನಿಗೆ ವಿಶ್ ಮಾಡೋದನ್ನು ವಿಜಯ್ ಮರೆತಿಲ್ಲ.

    ಅಂದಹಾಗೆ, ಆಗಸ್ಟ್ 6ರಂದು ಹೃದಯಾಘಾತದಿಂದ ಸ್ಪಂದನಾ ಬ್ಯಾಕಾಂಕ್‌ನಲ್ಲಿ ನಿಧನರಾದರು. ಆಗಸ್ಟ್ 9ರಂದು ಸ್ಪಂದನಾ ಅಂತ್ಯಕ್ರಿಯೆ ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿತ್ತು.

  • ಮಗನನ್ನು ಹೀರೋ ಆಗಿ ನೋಡೋದು ಸ್ಪಂದನಾ ಕನಸಾಗಿತ್ತು- ನಿರ್ದೇಶಕ ಮಹೇಶ್

    ಮಗನನ್ನು ಹೀರೋ ಆಗಿ ನೋಡೋದು ಸ್ಪಂದನಾ ಕನಸಾಗಿತ್ತು- ನಿರ್ದೇಶಕ ಮಹೇಶ್

    ಸ್ಯಾಂಡಲ್‌ವುಡ್‌ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾಗೆ ಎಲ್ಲಾ ಪೋಷಕರಂತೆಯೇ ತನ್ನ ಮಗನ ಮೇಲೆ ಸಾವಿರಾರು ಕನಸನ್ನು ಕಟ್ಟಿಕೊಂಡಿದ್ದರು. ವಿಜಯ ಅವರಂತೆಯೇ ಮಗ ಶೌರ್ಯ ಹೀರೋ ಆಗಬೇಕು ಎಂಬುದು ಸ್ಪಂದನಾ ಕನಸಾಗಿತ್ತು ಎಂದು  ‘ಮದಗಜ’ ಚಿತ್ರದ ನಿರ್ದೇಶಕ ಮಹೇಶ್ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಕುಟುಂಬಕ್ಕೆ ಸ್ಪಂದನಾ ಮೃತದೇಹ ಹಸ್ತಾಂತರ ಪ್ರಕ್ರಿಯೆ ಪೂರ್ಣ

    ನಿರ್ದೇಶಕ ಮಹೇಶ್ ಈ ಬಗ್ಗೆ ಮಾತನಾಡಿದ್ದು, ಸ್ಪಂದನಾಗೆ ತಮ್ಮ ಮಗನನ್ನ ಹೀರೋ ಮಾಡಬೇಕು ಅನ್ನೋ ದೊಡ್ಡ ಕನಸಿತ್ತು. ಮಗನ ಮೊದಲ ಸಿನಿಮಾವನ್ನ ವಿಜಯ ರಾಘವೇಂದ್ರ ಅವರೇ ಡೈರೆಕ್ಷನ್ ಮಾಡುವ ಯೋಚನೆಯಿತ್ತು. ಶ್ರೀಮುರಳಿ ಮತ್ತು ವಿಜಯ್ ಪುತ್ರರನ್ನು ಅವರ ವಿದ್ಯಾಭ್ಯಾಸದ ನಂತರ ಮುಂದಿನ ವರ್ಷಗಳಲ್ಲಿ ನಾಯಕ ನಟನಾಗಿ ಪರಿಚಯಿಸೋ ಆಸೆ ಸ್ಪಂದನಾದಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ:ರಾಹುಲ್ ಮದ್ವೆಯಾಗ್ತೀನಿ – ಒಂದು ಷರತ್ತು ಪಾಲಿಸಬೇಕು ಎಂದ ಶೆರ್ಲಿನ್ ಚೋಪ್ರಾ

    ಸ್ಪಂದನಾ ಸಾವು ಸಹಿಸಿಕೊಳ್ಳುವ ಶಕ್ತಿ ಶ್ರೀಮುರಳಿ ಅವರಿಗಿಲ್ಲ. ನನ್ನ ಕುಟುಂಬಕ್ಕೆ ಯಾಕೆ ಪದೇ ಪದೇ ಹೀಗೆ ಆಗುತ್ತಿದೆ. ನಾನು ಎಂದಿಗೂ ಯಾರಿಗೂ ದ್ರೋಹ ಮಾಡಿಲ್ಲ. ದೇವರು ಯಾಕೆ ಪದೇ ಪದೇ ನೋವು ಕೊಡ್ತಾ ಇದ್ದಾನೆ ಅಂತಾ ಮುರಳಿ ಬೇಸರ ವ್ಯಕ್ತಪಡಿಸಿದ್ದಾರೆ. ಅಪ್ಪು ಅಗಲಿಕೆಯನ್ನು ಅವ್ರು ಅರಗಿಸಿಕೊಂಡಿಲ್ಲ. ಅಷ್ಟರಲ್ಲಿ ಸೂರಜ್‌ಗೆ ಆಕ್ಸಿಡೆಂಟ್ ಆಗಿ ಕಾಲು ಕಟ್ ಆಗಿತ್ತು. ಸೂರಜ್‌ಗೆ ನೆರವಾಗಬೇಕು ಅಂತೆಲ್ಲ ಶ್ರೀಮುರಳಿ- ವಿಜಯ್ ಪ್ಲ್ಯಾನ್ ಹಾಕಿಕೊಂಡಿದ್ರು. ಅಷ್ಟರಲ್ಲಿ  ಸ್ಪಂದನಾ ಅವರಿಗೆ ಈಗಾಗಿದೆ. ನಿಜವಾಗ್ಲೂ ಇದನ್ನು ತಡೆದುಕೊಳ್ಳುವ ಶಕ್ತಿ ಮುರಳಿಗೂ ಇಲ್ಲ ವಿಜಯ್‌ಗೂ ಇಲ್ಲಾ ಎಂದು ಮಹೇಶ್ ಮಾತನಾಡಿದ್ದಾರೆ.

    ಚಿನ್ನೇಗೌಡ್ರನ್ನು ತಂದೆಯಂತೆ ಪ್ರೀತಿಯಿಂದ ಕಾಣುತ್ತಿದ್ದರು ಸ್ಪಂದನಾ. ಮನೆಯಲ್ಲಿದ್ದಾಗ ಅವರೇ ಮಾವನಿಗೆ ಊಟ ಬಡಿಸುತ್ತಿದ್ರು. ತುಂಬಾ ಒಳ್ಳೆಯ ಬಾಂದವ್ಯ ಇತ್ತು. ಚಿನ್ನೇಗೌಡ್ರಿಗೆ ಈ ನೋವು ಸಹಿಸೋ ಶಕ್ತಿ ಇರಲ್ಲ. ಸೊಸೆ ಮನೆ ಮಗಳಂತೆ ಕಾಣುತ್ತಿದ್ದರು. ಸ್ಪಂದನಾ ಅತ್ತಿಗೆ ಮನೆಗೆ ಬಂದಾಗೆಲ್ಲ ಮುರಳಿ ರೇಗಿಸುತ್ತಿದ್ದರು. ಈಗ ಎಲ್ಲರನ್ನು ಶಾಪಿಂಗ್‌ಗೆ ಕರೆಕೊಂಡು ಅಂಗಡಿಗಳನ್ನು ಮನೆಬಾಗಿಲಿಗೆ ತೆಗೆದುಕೊಂಡು ಬರುತ್ತಾರೆ ಅಂತಾ ರೇಗಿಸುತ್ತಿದ್ದರು. ಸ್ಪಂದನಾ ಮನೆಗೆ ಬಂದಾಗಲೆಲ್ಲ ಮುರುಳಿ ಮಕ್ಕಳ ಜೊತೆಗೂಡಿ ಶಾಪಿಂಗ್‌ಗೆ ಹೋಗುತ್ತಿದ್ರು. ಮಕ್ಕಳಿಗೆ ಬಟ್ಟೆ, ಫುಡ್ ಕೊಡಿಸೋದು ಅವರಿಗೆ ಇಷ್ಟ. ಅವರ ಚಂದದ ಕುಟುಂಬದ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತು ಗೊತ್ತಿಲ್ಲ ಎಂದು ಎಸ್. ಮಹೇಶ್ ವಿಷಾದ ವ್ಯಕ್ತಪಡಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ವಿಜಯ ರಾಘವೇಂದ್ರ ಪತ್ನಿ ನಿಧನ

    ನಟ ವಿಜಯ ರಾಘವೇಂದ್ರ ಪತ್ನಿ ನಿಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಯವಿಟ್ಟು ಊಹಾಪೋಹ ಎಬ್ಬಿಸಬೇಡಿ, ಪರ್ಸನಲ್ ಲೈಫ್ ಇರತ್ತೆ: ಬಿ.ಕೆ ಹರಿಪ್ರಸಾದ್ ಮನವಿ

    ದಯವಿಟ್ಟು ಊಹಾಪೋಹ ಎಬ್ಬಿಸಬೇಡಿ, ಪರ್ಸನಲ್ ಲೈಫ್ ಇರತ್ತೆ: ಬಿ.ಕೆ ಹರಿಪ್ರಸಾದ್ ಮನವಿ

    ಬೆಂಗಳೂರು: ದಯವಿಟ್ಟು ಊಹಾಪೋಹಗಳನ್ನು ಹಬ್ಬಿಸಬೇಡಿ. ಪರ್ಸನಲ್ ಲೈಫ್ ಇರುತ್ತೆ ಎಂದು  ಸ್ಪಂದನಾ ವಿಜಯ್ ಅವರ ತಂದೆ ಬಿ.ಕೆ ಶಿವರಾಂ ಸಹೋದರ ಬಿ.ಕೆ ಹರಿಪ್ರಸಾದ್ (B K Hariprasad) ಮನವಿ ಮಾಡಿಕೊಂಡಿದ್ದಾರೆ.

    ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್ (Spandana Vijay) ನಿಧನದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪಂದನಾ ತನ್ನ ಕಸಿನ್ಸ್ ಜೊತೆಗೆ ಟ್ರಿಪ್ ಹೋಗಿದ್ರು. ವಿಜಯ ರಾಘವೇಂದ್ರಗೆ ಚಿತ್ರೀಕರಣ ಇತ್ತು. ಅದನ್ನು ಮುಗಿಸಿಕೊಂಡು ಅವರು ಕೂಡ ಸೇರಿಕೊಂಡಿದ್ದಾರೆ ಎಂದರು.

    ದಯವಿಟ್ಟು ಈ ಸಂಬಂಧ ಊಹಾಪೋಹಗಳಿಗೆ ಅವಕಾಶ ಕೊಡಬೇಡಿ. ಅವರ ಕಸಿನ್ಸ್ ಇದ್ರು. ವಿಜಯ ರಾಘವೇಂದ್ರ ಕೂಡ ಶೂಟಿಂಗ್ ಮುಗಿಸಿ ಅಲ್ಲಿಯೇ ಹೋಗಿದ್ದಾರೆ. ಪೋಸ್ಟ್ ಮಾರ್ಟಂ ರಿಪೋರ್ಟ್ ಆಗ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಅತ್ತಿಗೆ ಮಲಗಿದವರು ಎದ್ದೇಳಲಿಲ್ಲ ಅಂತ ನನಗೆ ಸಿಕ್ಕಿರುವ ಮಾಹಿತಿ : ನಟ ಶ್ರೀಮುರಳಿ

    ಸ್ವಲ್ಪ ಆರೋಗ್ಯದಲ್ಲಿ ವೀಕ್ ಇದ್ದರು. ರೂಮರ್ರ್ಸ್ ಮಾಡಬೇಡಿ ಪರ್ಸನಲ್ ಲೈಫ್ ಇರುತ್ತೆ. ಮಗ ಸದ್ಯ ಇಲ್ಲೆ ಇದ್ದಾನೆ. ಅಂತ್ಯಕ್ರಿಯೆಯ ಬಗ್ಗೆ ಮೃತದೇಹ ಸಿಕ್ಕ ಬಳಿಕ ನಿರ್ಧಾರ ಮಡುತ್ತೇವೆ. ಮಂಗಳವಾರ ಮೃತದೇಹ ಬರುವ ಸಾಧ್ಯತೆ ಇದೆ ಎಂದು ಹರಿಪ್ರಸಾದ್ ತಿಳಿಸಿದರು.

    ನಾಲ್ಕು ದಿನಗಳ ಹಿಂದೆಯಷ್ಟೇ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರು ತನ್ನ ಕಾಲೇಜು ಸ್ನೇಹಿತರೊಂದಿಗೆ ಥಾಯ್ ಲ್ಯಾಂಡ್‍ಗೆ ಪ್ರವಾಸ ಹೋಗಿದ್ದರು. ಭಾನುವಾರ ಸಂಜೆ ಶಾಫಿಂಗ್ ಮುಗಿಸಿ ಹೋಟೇಲ್ ನತ್ತ ಹೋಗಬೇಕಾದರೆ ಸ್ಪಂದನಾ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ನೇಹಿತರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸ್ಪಂದನಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇತ್ತ ವಿಷಯ ತಿಳಿಯುತ್ತಿದ್ದಂತೆ ವಿಜಯ ರಾಘವೇಂದ್ರ ಬ್ಯಾಂಕಾಕ್ ಗೆ ಪ್ರಯಾಣ ಬೆಳೆಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಪಂದನಾ ವಿಜಯ್ ನಿಧನ- ಡಿಕೆಶಿ ಸಂತಾಪ

    ಸ್ಪಂದನಾ ವಿಜಯ್ ನಿಧನ- ಡಿಕೆಶಿ ಸಂತಾಪ

    ಬೆಂಗಳೂರು: ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ (Vijaya Raghavendra) ಅವರು ಧರ್ಮಪತ್ನಿ ಸ್ಪಂದನಾ (Spandana Vijay) ನಿಧನಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಸಂತಾಪ ಸೂಚಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನಾ ರಾಘವೇಂದ್ರ ಅವರು ಬ್ಯಾಂಕಾಕ್‍ನಲ್ಲಿ ದಿಢೀರ್ ಸಾವಿಗೀಡಾಗಿರುವ ಸಂಗತಿ ತಿಳಿದು ಅಪಾರ ನೋವುಂಟಾಯಿತು ಎಂದು ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಅವರು ನನ್ನನ್ನು ಭೇಟಿಯಾಗಿ ಶುಭ ಹಾರೈಸಿದ್ದರು. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗದವರು ಹಾಗೂ ಸ್ನೇಹಿತ ವರ್ಗಕ್ಕೆ ನನ್ನ ಸಾಂತ್ವನಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ನಿಧನ