ನಟ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅಗಲಿ ಇಂದಿಗೆ ಒಂದು ವರ್ಷ ಕಳೆದಿವೆ. ಹಾಗಾಗಿ ಮಗ ಮತ್ತು ಪತ್ನಿ ಜೊತೆಗಿರೋ ಫೋಟೋವನ್ನು ನಟ ವಿಜಯ ರಾಘವೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಭಾವುಕ ಪೋಸ್ಟ್ ಮಾಡಿದ್ದಾರೆ. ಪತ್ನಿಯೊಂದಿಗಿನ ನೆನಪುಗಳನ್ನು ಅವರು ಹಂಚಿಕೊಂಡಿದ್ದಾರೆ.
ಪತ್ನಿಯ ನಿಧನದ ನಂತರ ಮೌನಕ್ಕೆ ಶರಣಾಗಿದ್ದ ವಿಜಯ ನಂತರ ದಿನಗಳಲ್ಲಿ ಚೇತರಿಸಿಕೊಂಡು ಸ್ಪಂದನಾ ಬಗ್ಗೆ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದರು. ಸ್ಪಂದನಾ ನೆನಪನ್ನ ತಮ್ಮೊಳಗಿನ ಪ್ರೀತಿಯನ್ನ ಅವರು ಈ ಹಿಂದೆಯೂ ಬಿಚ್ಚಿಟ್ಟಿದ್ದರು.
ಸ್ಪಂದನಾ ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ. ಕೇವಲ ನಿನ್ನವ ಎಂದು ವಿಜಯ್ ರಾಘವೇಂದ್ರ ಅವರು ಭಾವನ್ಮಾತಕವಾಗಿ ಸಾಲುಗಳನ್ನು ಹೇಳಿಕೊಂಡಿದ್ದರು.
ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಆಗಸ್ಟ್ 26ರ 2017ರಲ್ಲಿ ವಿಜಯ-ಸ್ಪಂದನಾ ಮದುವೆಯಾದರು. ಅವರ ದಾಂಪತ್ಯಕ್ಕೆ ಪ್ರೀತಿಗೆ ಶೌರ್ಯ ಎಂಬ ಪುತ್ರ ಸಾಕ್ಷಿಯಾಗಿದ್ದಾರೆ. ಸ್ಪಂದನಾ ಅನಿರೀಕ್ಷಿತ ಅಗಲಿಕೆ ಕುಟುಂಬಕ್ಕೆ ಶಾಕ್ ನೀಡಿತ್ತು.
ಆಗಸ್ಟ್ 6ರಂದು ಹೃದಯಾಘಾತದಿಂದ (Heart Attack) ಸ್ಪಂದನಾ ಬ್ಯಾಕಾಂಕ್‌ನಲ್ಲಿ ನಿಧನರಾದರು. ಆಗಸ್ಟ್ 9ರಂದು ಸ್ಪಂದನಾ ಅಂತ್ಯಕ್ರಿಯೆ ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿತ್ತು.
ನಟ ವಿಜಯ್ ರಾಘವೇಂದ್ರ ಅವರು ಅಗಲಿದ ಪತ್ನಿ ಸ್ಪಂದನಾ (Spandana) ಅವರನ್ನು ನೆನಪಿಸಿಕೊಂಡು ಮತ್ತೆ ಭಾವುಕ ಸಾಲುಗಳನ್ನು ಬರೆದಿದ್ದಾರೆ. ‘ಮಾಸಗಳು ಕಳೆದರೂ ಮಾಸದ ಹೃದಯದೊಳಗಿನ ಈ ಮಂದಹಾಸ… ಐ ಲವ್ ಯೂ ಚಿನ್ನಾ’ ಎಂದು ಭಾವುಕ ಸಾಲುಗಳನ್ನು ಬರೆದು, ಹೆಂಡತಿ ಜೊತೆಗಿನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.
ಈ ಹಿಂದೆಯೂ ವಿಜಯ ರಾಘವೇಂದ್ರ (Vijaya Raghavendra) ತಮ್ಮ 16ನೇ ವಿವಾಹ ವಾರ್ಷಿಕೋತ್ಸವ (Wedding Anniversary)ದ ಸಂದರ್ಭದಲ್ಲಿ ಈ ರೀತಿಯ ಭಾವುಕ ಸಾಲುಗಳನ್ನು ಬರೆದಿದ್ದರು. ಪ್ರತಿ ವರ್ಷವೂ ಸಂಭ್ರಮದಿಂದ ಆ ದಿನವನ್ನು ಬರಮಾಡಿಕೊಳ್ಳುತ್ತಿದ್ದವರು, ಸ್ಪಂದನಾ ಹೃದಯಾಘಾತದಿಂದ ನಿಧನರಾಗಿ, ವಿಜಯ್ ಅವರ ಎದೆಯಲ್ಲಿ ಆರದ ಗಾಯ ಮಾಡಿ ಹೋಗಿದ್ದಾರೆ. ಅಗಲಿದ ಪತ್ನಿಗೆ ವಿಜಯ ರಾಘವೇಂದ್ರ ಭಾವುಕ ಸಾಲುಗಳ ಮೂಲಕ ವಿಶ್ ಮಾಡಿದ್ದರು. ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಆಗಸ್ಟ್ 26ರಂದು 2017ರಲ್ಲಿ ವಿಜಯ-ಸ್ಪಂದನಾ ಮದುವೆಯಾದವರು. ಅವರ ದಾಂಪತ್ಯಕ್ಕೆ ಪ್ರೀತಿಗೆ ಶೌರ್ಯ ಎಂಬ ಪುತ್ರ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ:ಟ್ರೈಲರ್ ಮೂಲಕ ಕಿಚ್ಚು ಹಚ್ಚಿದ `ಇನಾಮ್ದಾರ್’ ಸಿನಿಮಾ
ಭಾವುಕ ಸಾಲುಗಳನ್ನು ಬರೆದು, ಅದಕ್ಕೆ ವಿಡಿಯೋ ಸ್ಪರ್ಶ ಕೂಡ ನೀಡಿರುವ ವಿಜಯ ರಾಘವೇಂದ್ರ “ಚಿನ್ನ, ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ.. ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ.. ಬದುಕನ್ನು ಕಟ್ಟಿ ಸರ್ವಸ್ವವಾದೆ.. ಉಸಿರಲ್ಲಿ ಬೆರೆತು ಜೀವಂತವಾದೆ.. ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು.. ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ..” ಎಂದು ಬರೆದುಕೊಂಡಿದ್ದರು.
ಪತ್ನಿಯ ನಿಧನದಿಂದ ಮೌನಕ್ಕೆ ಶರಣಾಗಿದ್ದ ವಿಜಯ್ ಆನಂತರ ಸ್ಪಂದನಾ ಬಗ್ಗೆ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದರು. ಸ್ಪಂದನಾ ನೆನಪನ್ನ ತಮ್ಮೊಳಗಿನ ಪ್ರೀತಿಯನ್ನ ಅವರು ಬಿಚ್ಚಿಟ್ಟಿದ್ದರು. ಆ ಸಾಲುಗಳು ಕೂಡ ಅನೇಕರನ್ನು ಭಾವುಕರನ್ನಾಗಿಸಿದ್ದವು.
ಸ್ಪಂದನಾ ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ. ಕೇವಲ ನಿನ್ನವ ಎಂದು ವಿಜಯ ರಾಘವೇಂದ್ರ ಭಾವನ್ಮಾತಕವಾಗಿ ಸಾಲುಗಳನ್ನು ಬರೆದುಕೊಂಡಿದ್ದರು.
ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಅಗಲಿ ಒಂದು ತಿಂಗಳು ಕಳೆದಿದೆ. ರಾಘು ಕುಟುಂಬಕ್ಕೆ, ಆಪ್ತರಿಗೆ ಸ್ಪಂದನಾ ಅಗಲಿಕೆಯ ಶಾಕ್‌ನಿಂದ ಹೊರಬಂದಿಲ್ಲ. ಈ ವೇಳೆ ‘ಭೂಮಿಗೆ ಬಂದ ಭಗವಂತ’ ಸೀರಿಯಲ್ ನಟ ನವೀನ್ ಕೃಷ್ಣ (Naveen Krishna) ಸ್ಪಂದನಾ ವಿಜಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಪಂದನಾ ನಿರ್ಮಾಣದ (Production) ವಿಜಯ ನಟನೆಯ ‘ಕಿಸ್ಮತ್’ (Kismat Film) ಸಿನಿಮಾದಲ್ಲಿ ನವೀನ್ ಕೃಷ್ಣ ಅವರು ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಸಂಭಾಷಣೆಯನ್ನ ಬರೆದಿದ್ದಾರೆ. ಈ ವೇಳೆ, ಕಿಸ್ಮತ್ ಸಿನಿಮಾದಲ್ಲಿ ಹೀರೋಯಿನ್‌ಗೆ ಸ್ಪಂದನಾ ಹೆಸರಿಟ್ಟಿದ್ದರು. ಪಾತ್ರಕ್ಕೆ ಪತ್ನಿಯ ಹೆಸರಿಟ್ಟಿದ್ದಕ್ಕೆ ಆ ಹೆಸರನ್ನೇ ರಾಘು ಬದಲಾಯಿಸಿದ್ಯಾಕೆ? ಎಂದು ನಟ ನವೀನ್ ಕೃಷ್ಣ ಬಿಚ್ಚಿಟ್ಟಿದ್ದಾರೆ.
ಕಿಸ್ಮತ್ (Kismat) ಚಿತ್ರಕ್ಕೆ ನಾನೇ ಸಂಭಾಷಣೆ ಬರೆದಿದ್ದೆ, ಅವರಿಲ್ಲ ಅಂತಾ ನಾನು ಅನಿಸಿಕೊಳ್ಳೋಕೆ ನಾನು ಇಷ್ಟಪಡಲ್ಲ. ಅವರ ನಿಧನರಾದ ದಿನದಿಂದ ರಾಘು ಹತ್ತಿರ ನಾನು ಮಾತನಾಡಲಿಲ್ಲ. ಆ ಧೈರ್ಯ ನನಗಿಲ್ಲ. ವಿಜಯ, ಮಗ ಶೌರ್ಯ ಅವರು ಸಂತೋಷವಾಗಿರಲಿ ಎಂದು ಆಶಿಸುತ್ತೇನೆ. ಆದರೆ ಅವರ ನೋವು ಏನೀದೆ ಅದು ಮಾಯ ಆಗಲ್ಲ. ಆದರೂ ಜೀವನ ಮುಂದೆವರಿಯಬೇಕು. ಹಾಗಾಗಿ ರಾಘುಗೆ ಟೇಕ್ ಕೇರ್ ಎಂದು ಹೇಳುತ್ತೇನೆ.
ಕಿಸ್ಮತ್ (Kismat) ಚಿತ್ರದಲ್ಲಿ ನಾನು ಡೈಲಾಗ್ ಬರಿಬೇಕಾದ್ರೆ, ಆ್ಯಕ್ಚುಲಿ ಹೀರೋಯಿನ್‌ಗೆ ಸ್ಪಂದನಾ (Spandana) ಎಂದು ಹೆಸರಿಟ್ಟೆ. ಡೈಲಾಗ್ ಕೊಡುವಾಗ ವಿಜಯ ಸಖತ್ ಎಂಜಾಯ್ ಮಾಡಿ ಹೇಳ್ತಿದ್ದರು. ಆ ಹೀರೋಯಿನ್‌ಗೆ ಬೇರೆ ಪಾತ್ರಧಾರಿ ಫ್ಲರ್ಟ್ ಮಾಡೋ ತರಹ ಸೀನ್ ಇತ್ತು. Hai Baby What’s Your Name ಎಂದು ಕೇಳ್ತಾನೆ. ಹೀರೋಯಿನ್ ಸ್ಪಂದನಾ ಎನ್ನುತ್ತಾರೆ. ಆತ ನೋ ಡೌಂಟ್ ಯು ಸೋ ಬ್ಯೂಟಿಫುಲ್, ನಿಮ್ಮ ಹೆಸರಲ್ಲೇ ಸ್ಪಾ ಇದೆ ಎಂದು ಡೈಲಾಗ್ ಹೊಡಿತ್ತಾನೆ.
ಈ ಡೈಲಾಗ್ ವಿಜಯ ಕೇಳಿ, ಹೇ ಬೇಡ ಬೇಡ ನನ್ನ ಹೆಂಡ್ತಿ ಹೆಸರನ್ನ ಹೀರೋಯನ್ ಇಡಬೇಡ ಅಂದಿದ್ರು. ಎಷ್ಟು ಚೆನ್ನಾಗಿದೆ ಈ ಡೈಲಾಗ್ ಹೇಳಿದ್ರೆ ಎನಾಗುತ್ತೆ ಎಂದು ಹೇಳಿದ್ದೆ. ಅದಕ್ಕೆ ರಾಘು ನನ್ನ ಹೆಂಡ್ತಿ ಕೇಳಿ ಬೈತಾರೆ ಬೇಡ ಅಂದಿದ್ದರು. ಅವತ್ತು ಹೀರೋಯನ್ ಹೆಸರನ್ನ ಚೇಂಜ್ ಮಾಡಿದ್ವಿ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ‘ಸೀತಾರಾಮಂ’ ಬೆಡಗಿ
ಈ ಘಟನೆ ನಡೆದ ಮೇಲೆ ಸ್ಪಂದನಾನೇ ಬಂದು ತುಂಬಾ ಚೆನ್ನಾಗಿ ಸಂಭಾಷಣೆ ಬರೆದಿದ್ದೀರಾ ಎಂದು ಹೇಳಿದ್ದರು. ನನ್ನ ಕೆಲಸಕ್ಕೆ ಸ್ಪಂದನಾ ಬೆಂಬಲಿಸಿದ್ದರು. ತುಂಬಾ ಒಳ್ಳೆಯ ಹೆಣ್ಣು ಮಗಳು, ಒಳ್ಳೆಯ ಗೃಹಿಣಿ, ಎಲ್ಲಾ ರೀತಿಯ ಒಳ್ಳೆಯತನ ಇದ್ದಂತಹ ಹೃದಯ ಸ್ಪಂದನಾ ಅವರದ್ದು. ಆದರೆ ಇವತ್ತು ಅವರು ನಮ್ಮ ಜೊತೆ ಇಲ್ಲ ಎಂದು ನಟ ನವೀನ್ ಕೃಷ್ಣ ಭಾವುಕರಾಗಿದ್ದಾರೆ.
ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 6ರಂದು ಥೈಲ್ಯಾಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಿತು.
ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಅಗಲಿ ಒಂದು ತಿಂಗಳು ಕಳೆದಿದೆ. ವಿಜಯ ಕುಟುಂಬಕ್ಕೆ, ಆಪ್ತರಿಗೆ ಸ್ಪಂದನಾ ಅಗಲಿಕೆಯ ಶಾಕ್‌ನಿಂದ ಇನ್ನೂ ಹೊರಬಂದಿಲ್ಲ. ಈ ವೇಳೆ ‘ಭೂಮಿಗೆ ಬಂದ ಭಗವಂತ’ ಸೀರಿಯಲ್ ನಟ ನವೀನ್ ಕೃಷ್ಣ (Naveen Krishna) ಸ್ಪಂದನಾ ವಿಜಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಪಂದನಾ ನಿರ್ಮಾಣದ (Produce) ವಿಜಯ ನಟನೆಯ ‘ಕಿಸ್ಮತ್’ (Kismat Film) ಸಿನಿಮಾದಲ್ಲಿ ನವೀನ್ ಕೃಷ್ಣ (Naveen Krishna) ಅವರು ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಸಂಭಾಷಣೆಯನ್ನ ಬರೆದಿದ್ದಾರೆ. ಈ ವೇಳೆ ರಾಘು ಅವರಿದ್ದ ಸ್ಪಂದನಾ ಮೇಲಿನ ಪ್ರೀತಿ, ಗೌರವದ ಬಗ್ಗೆ ನವೀನ್ ಕೃಷ್ಣ ಬಿಚ್ಚಿದ್ದಾರೆ. ಇದನ್ನೂ ಓದಿ:‘ಕಂಬಳ’ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಅನುಷ್ಕಾ ಶೆಟ್ಟಿ
‘ಕಿಸ್ಮತ್’ ಚಿತ್ರಕ್ಕೆ ನಾನೇ ಸಂಭಾಷಣೆ ಬರೆದಿದ್ದೆ, ಸ್ಪಂದನಾ ಅವರಿಲ್ಲ ಅಂತಾ ನಾನು ಅನಿಸಿಕೊಳ್ಳೋಕೆ ನಾನು ಇಷ್ಟಪಡಲ್ಲ. ಅವರ ನಿಧನರಾದ ದಿನದಿಂದ ರಾಘು ಹತ್ತಿರ ನಾನು ಮಾತನಾಡಲಿಲ್ಲ. ಆ ಧೈರ್ಯ ನನಗಿಲ್ಲ. ರಾಘು, ಮಗ ಶೌರ್ಯ ಅವರು ಸಂತೋಷವಾಗಿರಲಿ ಎಂದು ಆಶಿಸುತ್ತೇನೆ. ಆದರೆ ಅವರ ನೋವು ಏನೀದೆ ಅದು ಮಾಯ ಆಗಲ್ಲ. ಆದರೂ ಜೀವನ ಮುಂದೆವರಿಯಬೇಕು. ಹಾಗಾಗಿ ರಾಘುಗೆ ಟೇಕ್ ಕೇರ್ ಎಂದು ಹೇಳುತ್ತೇನೆ.
‘ಕಿಸ್ಮತ್’ ಚಿತ್ರದಲ್ಲಿ ನಾನು ಡೈಲಾಗ್ ಬರಿಬೇಕಾದ್ರೆ, ಆ್ಯಕ್ಚುಲಿ ಹೀರೋಯಿನ್‌ಗೆ ಸ್ಪಂದನಾ ಎಂದು ಹೆಸರಿಟ್ಟೆ. ಡೈಲಾಗ್ ಕೊಡುವಾಗ ವಿಜಯ ಸಖತ್ ಎಂಜಾಯ್ ಮಾಡಿ ಹೇಳ್ತಿದ್ದರು. ಆ ಹೀರೋಯಿನ್‌ಗೆ ಬೇರೆ ಪಾತ್ರಧಾರಿ ಫ್ಲರ್ಟ್ ಮಾಡೋ ತರಹ ಸೀನ್ ಇತ್ತು. Hai Baby Whats Your Name ಎಂದು ಕೇಳ್ತಾನೆ. ಹೀರೋಯಿನ್ ಸ್ಪಂದನಾ ಎನ್ನುತ್ತಾರೆ. ಆತ ನೋ ಡೌಂಟ್ ಯು ಸೋ ಬ್ಯೂಟಿಫುಲ್, ನಿಮ್ಮ ಹೆಸರಲ್ಲೇ ಸ್ಪಾ.. ಇದೆ ಎಂದು ಡೈಲಾಗ್ ಹೊಡಿತ್ತಾನೆ.
ಈ ಡೈಲಾಗ್ ರಾಘು ಕೇಳಿ, ಹೇ ಬೇಡ ಬೇಡ ನನ್ನ ಹೆಂಡ್ತಿ ಹೆಸರನ್ನ ಹೀರೋಯಿನ್ ಇಡಬೇಡ ಅಂದಿದ್ರು. ಎಷ್ಟು ಚೆನ್ನಾಗಿದೆ ಈ ಡೈಲಾಗ್ ಹೇಳಿದ್ರೆ ಎನಾಗುತ್ತೆ ಎಂದು ಹೇಳಿದ್ದೆ. ಅದಕ್ಕೆ ರಾಘು ನನ್ನ ಹೆಂಡ್ತಿ ಕೇಳಿ ಬೈತಾರೆ ಬೇಡ ಅಂದಿದ್ದರು. ಅವತ್ತು ಹೀರೋಯಿನ್ ಹೆಸರನ್ನ ಚೇಂಜ್ ಮಾಡಿದ್ವಿ.
ಈ ಘಟನೆ ನಡೆದ ಮೇಲೆ ಸ್ಪಂದನಾನೇ ಬಂದು ತುಂಬಾ ಚೆನ್ನಾಗಿ ಸಂಭಾಷಣೆ ಬರೆದಿದ್ದೀರಾ ಎಂದು ಹೇಳಿದ್ದರು. ನನ್ನ ಕೆಲಸಕ್ಕೆ ಸ್ಪಂದನಾ ಬೆಂಬಲಿಸಿದ್ದರು. ತುಂಬಾ ಒಳ್ಳೆಯ ಹೆಣ್ಣು ಮಗಳು, ಒಳ್ಳೆಯ ಗೃಹಿಣಿ, ಎಲ್ಲಾ ರೀತಿಯ ಒಳ್ಳೆಯತನ ಇದ್ದಂತಹ ಹೃದಯ ಸ್ಪಂದನಾ ಅವರದ್ದು. ಆದರೆ ಇವತ್ತು ಅವರು ನಮ್ಮ ಜೊತೆ ಇಲ್ಲ ಎಂದು ನಟ ನವೀನ್ ಕೃಷ್ಣ ಭಾವುಕರಾಗಿದ್ದಾರೆ.
ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ (Spandana) ಆಗಸ್ಟ್ 6ರಂದು ಥೈಲ್ಯಾಂಡ್‌ನಲ್ಲಿ ಹೃದಯಾಘಾತದಿಂದ (Heart Attack) ನಿಧನರಾದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಿತು.
ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ (Vijay Raghavendra) ಅವರು ಶಿರಡಿ ದೇವಸ್ಥಾನಕ್ಕೆ (Shiradi Temple) ಭೇಟಿ ನೀಡಿದ್ದಾರೆ. ಸಿನಿಮಾವೊಂದರ ರಿಲೀಸ್ ಬಳಿಕ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೆ ಹೋಗಿದ್ದಾರೆ. ಈ ಕುರಿತ ಫೋಟೋವೊಂದನ್ನ ನಟ ಹಂಚಿಕೊಂಡಿದ್ದಾರೆ.
ವಿಜಯ್ ರಾಘವೇಂದ್ರ ಅವರು ಶಿರಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಸ್ಪಂದನಾ ಅಗಲಿ ಒಂದು ತಿಂಗಳಾಗಿದೆ. ಮತ್ತೆ ನಟ ಸಿನಿಮಾ ಕೆಲಸಗಳತ್ತ ಮುಖ ಮಾಡಿದ್ದಾರೆ. ಸದ್ಯ ಕೆಲಸಕ್ಕೆಲ್ಲಾ ಬ್ರೇಕ್ ನೀಡಿ ದೇವರ ಸನ್ನಿಧಿಗೆ ನಟ ತೆರಳಿದ್ದಾರೆ. ಇದನ್ನೂ ಓದಿ:ಕಾಗೆ ಮೇಲಿನ ಕಥೆಯ ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದ ದಿಲೀಪ್
ಸ್ಪಂದನಾ (Spandana) ಪತಿಯ ಕೆಲಸಕ್ಕೆ ಸದಾ ಸಾಥ್ ನೀಡುತ್ತಿದ್ದರು. ವಿಜಯ್ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಸ್ಪಂದನಾ, ನಿರ್ಮಾಪಕಿಯಾಗಿ ಗಟ್ಟಿ ನೆಲೆ ನಿಲ್ಲುವ ಹಂಬಲವಿತ್ತು. ಮಗ ಶೌರ್ಯನನ್ನು ಹೀರೋ ಮಾಡುವ ಕನಸು ಕಂಡಿದ್ದರು. ಅದು ನನಸಾಗದೇ ಹೋಯ್ತು.
ಆಗಸ್ಟ್ 6ರಂದು ಭಾನುವಾರ ಹೃದಯಾಘಾತದಿಂದ ಸ್ಪಂದನಾ ವಿಜಯ್ ವಿಧಿವಶರಾದರು. ಥೈಲ್ಯಾಂಡ್‌ನಲ್ಲಿ ವಿಜಯ್ ಪತ್ನಿ ಕೊನೆಯುಸಿರೆಳೆದರು.
ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ(Spandana) ಹಠಾತ್ ನಿಧನ ಬಳಿಕ ಮತ್ತೆ ಡಿಕೆಡಿ (Dkd) ಶೋಗೆ ಭಾಗಿಯಾಗಿದ್ದಾರೆ. ಪತ್ನಿ ಅಗಲಿಕೆಯ ನೋವಿನಲ್ಲೇ ಮತ್ತೆ ಕೆಲಸಗಳತ್ತ ಆ್ಯಕ್ಟಿವ್ ಆಗಿದ್ದಾರೆ.
ಸಿನಿಮಾ-ಕಿರುತೆರೆ ಎರಡರಲ್ಲೂ ವಿಜಯ ಆ್ಯಕ್ಟಿವ್ ಆಗಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7 (Dance Karnataka Dance 7) ಮತ್ತೆ ಜಡ್ಜ್ (Judge) ಆಗಿ ಭಾಗವಹಿಸಿದ್ದಾರೆ. ಡಿಕೆಡಿಯಲ್ಲಿ ಶಿವರಾಜ್‌ಕುಮಾರ್(Shivarajkumar), ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ ಜೊತೆ ವಿಜಯ ಕೂಡ ಜಡ್ಜ್ ಆಗಿ ಗಮನ ಸೆಳೆದಿದ್ದರು. ಇದನ್ನೂ ಓದಿ:ಸೋಶಿಯಲ್ ಮೀಡಿಯಾ ಜಗತ್ತಿಗೆ ಕಾಲಿಟ್ಟ ನಯನತಾರಾ
ವಿಜಯ-ಸ್ಪಂದನಾ ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಮಾದುವೆಯಾಗಿದ್ದರು. ಈ ಜೋಡಿಗೆ ಪುತ್ರ ಶೌರ್ಯ ಜನಿಸಿದರು. ಕಳೆದ ತಿಂಗಳು ಕುಟುಂಬದ ಆಪ್ತರ ಜೊತೆ ಥೈಲ್ಯಾಂಡ್‌ಗೆ ಹೋಗಿದ್ದಾಗ, ಹಾರ್ಟ್ ಅಟ್ಯಾಕ್‌ನಿಂದ ವಿಜಯ ಪತ್ನಿ ನಿಧನರಾದರು. ಸ್ಪಂದನಾ ಅಗಲಿಕೆ ವಿಜಯ ಕುಟುಂಬಕ್ಕೆ ಶಾಕ್ ಕೊಟ್ಟಿದೆ.
ಪತ್ನಿ ಸ್ಪಂದನಾ ಅಗಲಿಕೆಯ ಬಳಿಕ ಮೊದಲ ಬಾರಿ ವೇದಿಕೆಯಲ್ಲಿ ಕಾಣಿಸಿಕೊಂಡ ನಟ ವಿಜಯ್ ರಾಘವೇಂದ್ರ (Vijay Raghavendra) ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ `ಕದ್ದ ಚಿತ್ರ’ (Kaddha Chitra) ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.
ಇದೇ ಆಗಸ್ಟ್ 26ಕ್ಕೆ ತೆರೆ ಕಾಣಬೇಕಿದ್ದ ಸಿನಿಮಾ (Cinema) ಸ್ಪಂದನಾ ನಿಧನದಿಂದ ಮುಂದೂಡಲಾಗಿತ್ತು. ಇಂದು ನಟ ವಿಜಯ ರಾಘವೇಂದ್ರ ಮತ್ತು ಸ್ಪಂದನಾ (Spandana) ಅವರ 16ನೇ ವಿವಾಹ ವಾರ್ಷಿಕೋತ್ಸವದ ನೆನಪಿನೊಂದಿಗೆ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿದ್ದು, ನಟ ವಿಜಯ್ ರಾಘವೇಂದ್ರ ಈ ಸಿನಿಮಾವನ್ನ ಪತ್ನಿ ಸ್ಪಂದನಾಗೆ ಅರ್ಪಿಸಿದ್ದಾರೆ. ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವ: ಭಾವುಕ ಸಾಲುಗಳ ಬರೆದು ಪತ್ನಿಗೆ ವಿಶ್ ಮಾಡಿದ ವಿಜಯ ರಾಘವೇಂದ್ರ
ಬಳಿಕ `ಕದ್ದ ಚಿತ್ರ’ ಚಿತ್ರದ ಕುರಿತು ಮಾತನಾಡಿದ ವಿಜಯ್ ರಾಘವೇಂದ್ರ, ಇದು ಬರೀ ತಂಡ ಅಲ್ಲ, ಸ್ನೇಹಿತರ ಬಳಗ, ವಿಶ್ವಾಸದ ಕನಸು ಇದು. ಮೊದಲು ಹಿಂಜರಿದಿದ್ದೆ, ನಂಬಿಕೆ ಮೇಲೆ ಕೆಲಸ ಮಾಡ್ತೀನಿ ಅಂದಿದ್ದೆ. ಒಳ್ಳೆಯ ತಂಡ ಬಂದಾಗ ಹೊರೆ ಆಗ್ತಿನೇನೋ ಅನಿಸುತ್ತೆ. ಇಂದು ಟ್ರೈಲರ್ ಬಿಡುಗಡೆಯಾಗಿದೆ. ಸಿನಿಮಾ ರಿಲೀಸ್ ಆದ ಬಳಿಕ ಮಾತನಾಡೋಕೆ ಸಾಕಷ್ಟು ವಿಷಯಗಳು ಇರುತ್ವೆ. ಆಗ ಮಾತಾಡೋಕೆ ಕಾಯ್ತಾ ಇರ್ತಿನಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್: ರಾಷ್ಟ್ರ ಪ್ರಶಸ್ತಿ ಬಗ್ಗೆ ಅಸಮಾಧಾನ ಹೊರ ಹಾಕಿದ ಅನುಪಮ್ ಖೇರ್
ಮಾತಾಡುವ ಕಥೆ ನಾವೇ ಆದಾಗ ನೀವೆಲ್ಲಾ ಜೊತೆಗೆ ನಿಂತ್ರಿ, ತಾಯಿ ಸ್ಥಾನದಲ್ಲಿ ನಿಂತಿದ್ರಿ, ಯಾರೂ ಹೊರಗಿನವರ ರೀತಿ ಇರಲಿಲ್ಲ ಮನೆಯವರ ರೀತಿ ಇದ್ರಿ. ಕಣ್ಣೀರು ಹಾಕಬಾರದು ಅಂತಾ ನಿರ್ಧಾರ ಮಾಡ್ಕೊಂಡು ಬಂದಿದ್ದೀನಿ. ಅದು ಅವಳಿಗೂ ಇಷ್ಟ ಆಗ್ತಿರಲಿಲ್ಲ. ನಿಮ್ಮ ಕುಟುಂಬದಲ್ಲಿ ನನ್ನನ್ನೂ ಒಬ್ಬನನ್ನಾಗಿಸಿಕೊಂಡಿದ್ದೀರಿ. ಪ್ರಮೋಷನ್‌ಗೆ ನಿಲ್ಲೋದು ನನ್ನ ಕರ್ತವ್ಯ ನೀವೆಲ್ಲಾ ನನ್ನ ಜೊತೆ ಇರ್ತೀರಾ ಅಂದ್ಕೊಂಡಿದ್ದೀನಿ. ನನ್ನ ಹಾಗೂ ನನ್ನ ಮಗನನ್ನ ಕೈ ಹಿಡಿದು ನಡೆಸ್ತೀರಿ ಅಂದ್ಕೊಂಡಿದ್ದೀನಿ. ಈ ಸಿನಿಮಾದ ಗೀತೆಗಳು ತುಂಬಾ ಚೆನ್ನಾಗಿವೆ. ಮ್ಯೂಸಿಕ್ ಡೈರೆಕ್ಟರ್ ಒಳ್ಳೆಯ ಸಾಂಗ್ ಕೊಟ್ಟಿದ್ದಾರೆ ಎಂದು ನಟ ಭಾವುಕರಾದರು.
ಇಂದು ನಟ ವಿಜಯ ರಾಘವೇಂದ್ರ (Vijaya Raghavendra) ಮತ್ತು ಸ್ಪಂದನಾ (Spandana) ಅವರ 16ನೇ ವಿವಾಹ ವಾರ್ಷಿಕೋತ್ಸವ (Wedding Anniversary). ಪ್ರತಿ ವರ್ಷವೂ ಸಂಭ್ರಮದಿಂದ ಈ ದಿನವನ್ನು ಬರಮಾಡಿಕೊಳ್ಳುತ್ತಿದ್ದರು ಈ ದಂಪತಿ. ಆದರೆ, ವಿಧಿಯಾಟ ಈ ಬಾರಿ ಬೇರೆಯೇ ಆಗಿದೆ. ಸ್ಪಂದನಾ ಹೃದಯಾಘಾತದಿಂದ ನಿಧನರಾಗಿ, ವಿಜಯ್ ಅವರ ಎದೆಯಲ್ಲಿ ಆರದ ಗಾಯ ಮಾಡಿ ಹೋಗಿದ್ದಾರೆ. ಅಗಲಿದ ಪತ್ನಿಗೆ ವಿಜಯ ರಾಘವೇಂದ್ರ ಭಾವುಕ ಸಾಲುಗಳ ಮೂಲಕ ವಿಶ್ ಮಾಡಿದ್ದಾರೆ. ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಆಗಸ್ಟ್ 26ರಂದು 2017ರಲ್ಲಿ ವಿಜಯ-ಸ್ಪಂದನಾ ಮದುವೆಯಾದವರು. ಅವರ ದಾಂಪತ್ಯಕ್ಕೆ ಪ್ರೀತಿಗೆ ಶೌರ್ಯ ಎಂಬ ಪುತ್ರ ಸಾಕ್ಷಿಯಾಗಿದ್ದಾರೆ.
ಭಾವುಕ ಸಾಲುಗಳನ್ನು ಬರೆದು, ಅದಕ್ಕೆ ವಿಡಿಯೋ ಸ್ಪರ್ಶ ಕೂಡ ನೀಡಿರುವ ವಿಜಯ ರಾಘವೇಂದ್ರ “ಚಿನ್ನ, ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ.. ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ.. ಬದುಕನ್ನು ಕಟ್ಟಿ ಸರ್ವಸ್ವವಾದೆ.. ಉಸಿರಲ್ಲಿ ಬೆರೆತು ಜೀವಂತವಾದೆ.. ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು.. ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ..” ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹರ್ಷಿಕಾ ಪೂಣಚ್ಚ- ಭುವನ್
ಪತ್ನಿಯ ನಿಧನದಿಂದ ಮೌನಕ್ಕೆ ಶರಣಾಗಿದ್ದ ವಿಜಯ್ ಮೊನ್ನೆಯಷ್ಟೇ ಸ್ಪಂದನಾ ಬಗ್ಗೆ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದರು. ಸ್ಪಂದನಾ ನೆನಪನ್ನ ತಮ್ಮೊಳಗಿನ ಪ್ರೀತಿಯನ್ನ ಅವರು ಬಿಚ್ಚಿಟ್ಟಿದ್ದರು. ಆ ಸಾಲುಗಳು ಕೂಡ ಅನೇಕರನ್ನು ಭಾವುಕರನ್ನಾಗಿಸಿದ್ದವು.
ಸ್ಪಂದನಾ ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ. ಕೇವಲ ನಿನ್ನವ ಎಂದು ವಿಜಯ ರಾಘವೇಂದ್ರ ಭಾವನ್ಮಾತಕವಾಗಿ ಸಾಲುಗಳನ್ನು ಬರೆದುಕೊಂಡಿದ್ದರು.
ವಿಜಯ ರಾಘವೇಂದ್ರ ನಟನೆಯ ‘ಕದ್ದಚಿತ್ರ’ (Kadda Chitra) ಸಿನಿಮಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 25ರಂದು ರಿಲೀಸ್ ಆಗಬೇಕಿತ್ತು. ಅದಕ್ಕಾಗಿ ಎಲ್ಲ ಸಿದ್ಧತೆಯನ್ನೂ ಚಿತ್ರತಂಡ ಮಾಡಿಕೊಂಡಿತ್ತು. ಆದರೆ ವಿಧಿಯಾಟವೇ ಬೇರೆ ಇತ್ತು. ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ (Spandana) ನಿಧನರಾದ ಹಿನ್ನೆಲೆಯಲ್ಲಿ ತಮ್ಮ ಚಿತ್ರವನ್ನು ನಿಗದಿತ ದಿನಾಂಕದಂದು ರಿಲೀಸ್ ಮಾಡುತ್ತಿಲ್ಲ ಎಂದು ಚಿತ್ರತಂಡ ತಿಳಿಸಿದೆ. ಸಿನಿಮಾ ಪ್ರಚಾರದ ಕಾರ್ಯದಲ್ಲಿ ವಿಜಯ ರಾಘವೇಂದ್ರ ಭಾಗಿಯಾಗುವುದು ಸಾಧ್ಯವಿಲ್ಲವಾದ್ದರಿಂದ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿರುವುದಾಗಿ ಚಿತ್ರತಂಡ ತಿಳಿಸಿದೆ.
ಚಿನ್ನಾರಿಮುತ್ತ ಮೂಲಕ ಬಾಲನಟನಾಗಿ ಎಂಟ್ರಿ ಕೊಟ್ಟು, ಆ ನಂತರ ನಾನಾ ಚಿತ್ರಗಳಲ್ಲಿ ನಟಿಸಿದವರು ವಿಜಯ ರಾಘವೇಂದ್ರ (Vijay Raghavendra). ಇತ್ತೀಚಿನ ವರ್ಷಗಳಲ್ಲಂತೂ ಅವರನ್ನು ಹೊಸ ಹೊಸ ಕಥೆಗಳು ಹುಡುಕಿಕೊಂಡು ಬಂದಿವೆ. ಸೈಕಾಲಾಜಿಕಲ್ ಥ್ರಿಲ್ಲರ್ ಜಾನರ್ ನ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರು ಮೂರು ಶೇಡ್ ಇರುವಂತಹ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಖ್ಯಾತ ಬರಹಗಾರನ ಪಾತ್ರವಂತೆ.
ಲುಕ್ ಸೇರಿದಂತೆ ಈವರೆಗೂ ಎಲ್ಲಿಯೂ ಕಾಣಿಸದೇ ಇರುವಂತ ವಿಜಯ ರಾಘವೇಂದ್ರ ಅವರನ್ನು ಈ ಸಿನಿಮಾದಲ್ಲಿ ನೋಡಬಹುದು ಎನ್ನುತ್ತಾರೆ ಚಿತ್ರದ ನಿರ್ದೇಶಕರು. ಈಗಾಗಲೇ ತೆಲುಗು ಸಿನಿಮಾವೊಂದರಲ್ಲಿ ನಟಿಸಿ, ಶಿವಾಜಿ ಸುರತ್ಕಲ್, ಮಿರ್ಚಿ ಮಂಡಕ್ಕಿ ಖಡಕ್ ಚಾಯ್ ಮುಂತಾದ ಸಿನಿಮಾಗಳ ಮೂಲಕ ಒಂದಷ್ಟು ಹೆಸರು ಮಾಡಿರುವ ನಮ್ರತಾ ಸುರೇಂದ್ರನಾಥ್ (Namrata Surendranath) ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ನಿರ್ದೇಶಕನಾಗಿಯೂ ಹೆಸರು ಮಾಡಿರುವ ರಾಘು ಶಿವಮೊಗ್ಗ ಪಬ್ಲಿಷರ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಜಯ್ ಮಗಳ ಪಾತ್ರದಲ್ಲಿ ಬೇಬಿ ಆರಾಧ್ಯ ನಟಿಸಿದ್ದಾಳೆ. ಸುಜಿತ್ ಸುಪ್ರಭ, ಸ್ಟೀಫನ್, ವಿನಯ್ ಕುಮಾರ್ ನೆಗೆಟಿವ್ ಶೇಡಿನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆಯಲ್ಲಿ ಮಾತ್ರವಲ್ಲದೇ, ಸ್ಕ್ರೀನ್ ಪ್ಲೇ ವಿಚಾರದಲ್ಲಿಯೂ ಕದ್ದ ಚಿತ್ರ ಖಡಕ್ಕಾಗಿದೆ. ಸೆಕೆಂಡ್ ಹಾಫ್‍ನಲ್ಲಿ ಪ್ಯಾರಲೆಲ್ ಮೆಥೆಡ್ಡಿನ ಸ್ಕ್ರೀನ್ ಪ್ಲೇ ಮೂಲಕ ದೃಶ್ಯಗಳು ಚಲಿಸಲಿವೆ. ಸಿಂಗಲ್ ಟೇಕ್‍ನಲ್ಲಿ ಒಂದಷ್ಟು ಪ್ರಯೋಗಗಳನ್ನು ಮಾಡಲಾಗಿದೆಯಂತೆ.
ಎ.ಎಸ್ ಮೂರ್ತಿ ಸಾರಥ್ಯದ ಅಭಿನಯ ತರಂಗದಲ್ಲಿ ನಟನೆ, ನಿರ್ದೇಶನ ಸೇರಿದಂತೆ ಒಂದಷ್ಟು ಪ್ರಕಾರಗಳಲ್ಲಿ ಪಳಗಿಕೊಂಡಿರುವವರು ನಿರ್ದೇಶಕ ಸುಹಾಸ್ ಕೃಷ್ಣ(Suhas Krishna). ಹಾಗೆ ಎರಡ್ಮೂರು ವರ್ಷ ರಂಗಭೂಮಿಯಲ್ಲಿ ಪಳಗಿಕೊಂಡಿದ್ದ ಸುಹಾಸ್ ಆ ಬಳಿಕ, ರವಿ ಶ್ರೀವತ್ಸ, ಸಾಯಿ ಕೃಷ್ಣ, ಅರವಿಂದ್ ಕೌಶಿಕ್, ರಾಘು ಶಿವಮೊಗ್ಗ ಮುಂತಾದ ನಿರ್ದೇಶಕರ ಜೊತೆಗೂ ಕೆಲಸ ಮಾಡಿ ಅನುಭವ ಪಡೆದವರು. ಇದೀಗ ಕದ್ದ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ, ಗೌತಮ್ ಮನು ಸಂಕಲನ, ಸ್ಟೀಫನ್ ಕೊರಿಯೋಗ್ರಫಿ, ದುಷ್ಯಂತ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.