Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]
Tag: ಸ್ಪಂದನ
-

ವಿಜಯ ರಾಘವೇಂದ್ರಗೆ ಧೈರ್ಯ ತುಂಬಿದ ಯಶ್
ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಅಂತಿಮ ದರ್ಶನದಲ್ಲಿ ಯಶ್ (Yash) ಭಾಗಿಯಾಗಿದ್ದಾರೆ. ನೋವಿನಲ್ಲಿರೋ ಸ್ನೇಹಿತ ವಿಜಯಗೆ ಯಶ್ ತಬ್ಬಿ ಧೈರ್ಯ ತುಂಬಿದ್ದಾರೆ.

ಬಿ.ಕೆ ಶಿವರಾಂ ಅವರ ನಿವಾಸಕ್ಕೆ ಯಶ್ ಭೇಟಿ ನೀಡಿದ್ದಾರೆ. ಕಣ್ಣೀರ ಕಡಲಲ್ಲಿರೋ ವಿಜಯಗೆ ಯಶ್ ಧೈರ್ಯ ತುಂಬಿದ್ದಾರೆ. ಸ್ನೇಹಿತನಿಗೆ ಶಕ್ತಿ ತುಂಬುವ ಮಾತುಗಳನ್ನಾಡಿದ್ದಾರೆ. ರಾಘು ಸಂಕಷ್ಟದ ಸಮಯದಲ್ಲಿ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ:ಸ್ಪಂದನಾ ಸಾವಿನ ಬಗ್ಗೆ ಅಪಪ್ರಚಾರ ಮಾಡಬೇಡಿ- ಮೇಘನಾ ರಾಜ್
ವಿಜಯ ರಾಘವೇಂದ್ರ ಸ್ನೇಹಿತರಾದ ರಾಧಿಕಾ ಕುಮಾರಸ್ವಾಮಿ, ಧ್ರುವ ಸರ್ಜಾ, ರಕ್ಷಿತಾ ಪ್ರೇಮ್, ಅನುಶ್ರೀ, ಡಿಕೆಡಿ ಡ್ಯಾನ್ಸ್ ಟೀಮ್ ಸ್ಪಂದನಾ ಅಂತಿಮ ದರ್ಶನದಲ್ಲಿ ಭಾಗಿಯಾಗಿ ನೋವಿನಲ್ಲಿರೋ ವಿಜಯಗೆ ಸಾಂತ್ವಾನ ಹೇಳಿದ್ದಾರೆ. ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆಪ್ತರಿಗೆ, ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಹರಿಶ್ಚಂದ್ರಘಾಟ್‌ನಲ್ಲಿ ಮಧ್ಯಾಹ್ನ 3:30ಕ್ಕೆ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]
-

ಮದುವೆ ವಾರ್ಷಿಕೋತ್ಸವಕ್ಕೆ 19 ದಿನ ಬಾಕಿ- ವಿಜಯ್ ಪತ್ನಿ ಸ್ಪಂದನಾ ಹಠಾತ್ ನಿಧನ
ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ (Vijay Raghavendra) ಅವರು ಪತ್ನಿ ಸ್ಪಂದನಾ(Spadana) ಅವರು ಹೃದಯಾಘಾತದಿಂದ ಆಗಸ್ಟ್ 6ರ ರಾತ್ರಿ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಬ್ಯಾಂಕಾಕ್‌ಗೆ ಸ್ಪಂದನಾ ತೆರಳಿದ್ದರು. ವಿಜಯ್-ಸ್ಪಂದನಾ ಮದುವೆ ವಾರ್ಷಿಕೋತ್ಸವಕ್ಕೆ 19 ದಿನಗಳು ಬಾಕಿಯಿದ್ದು, ಈ ಬೆನ್ನಲ್ಲೇ ಈ ಆಫಾತಕಾರಿ ಘಟನೆ ನಡೆದಿದೆ.
ಕೆಲಸದ ಸಂಬಂಧವಾಗಿ 5-6 ಸ್ನೇಹಿತರ ಜೊತೆ ಬ್ಯಾಂಕಾಕ್‌ಗೆ ಸ್ಪಂದನಾ ತೆರಳಿದ್ದರು. ಆಗಸ್ಟ್ 6ರ ಸಂಜೆ ಸ್ಪಂದನಾಗೆ ಎದೆನೋವು ಕಾಣಿಸಿಕೊಂಡಿತ್ತು. ಇದೀಗ ವಿಜಯ್ ಪತ್ನಿ ನಿಧನರಾಗಿದ್ದಾರೆ. ಮಲೇಶ್ವರಂ ಸ್ಪಂದನಾ ತಂದೆ ಬಿ.ಕೆ ಶಿವರಾಮ್ ಮನೆಗೆ ಶ್ರೀಮುರಳಿ ದಂಪತಿ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ನಿಧನ
ವಿಜಯ್ ಪತ್ನಿ ಸ್ಪಂದನ ಅವರು ಇತ್ತೀಚಿಗೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಪ್ಪು ನಿಧನದ ಶಾಕ್‌ನಿಂದ ಹೊರ ಬಂದಾಗಲೇ ಮತ್ತೊಂದು ಆಘಾತಕಾರಿ ವಿಚಾರ ಕುಟುಂಬಕ್ಕೆ ಶಾಕ್ ನೀಡಿದೆ. ಲೋ ಬಿಪಿ ಮತ್ತು ಹೃದಯಾಘಾತದಿಂದ ವಿಜಯ್ ಪತ್ನಿ ಸ್ಪಂದನ ವಿಧಿವಶರಾಗಿದ್ದಾರೆ.
ವಿಜಯ್ ಸ್ಪಂದನಾ ಮದುವೆ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿಯಿತ್ತು. ಈ ಸಂದರ್ಭದಲ್ಲಿ ವಿಧಿ, ವಿಜಯ್- ಸ್ಪಂದನಾ ಬದುಕಿನಲ್ಲಿ ಕ್ರೂರ ಆಟವಾಡಿದೆ. 2007ರಲ್ಲಿ ಆಗಸ್ಟ್ 16ರಂದು ರಂದು ವಿಜಯ್ – ಸ್ಪಂದನಾ ಮದುವೆಯಾಗಿದ್ದರು. 2004ರಲ್ಲಿ ಮಲ್ಲೇಶ್ವರದ ಕಾಫೀ ಡೇ ನಲ್ಲಿ ಮೊದಲು ಪರಿಚಯವಾಗಿತ್ತು. ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಅದಾಗಿ 3 ವರ್ಷಗಳ ಬಳಿಕ ಮತ್ತೆ ಕಾಫೀ ಡೇ ನಲ್ಲಿ ಮರು ಭೇಟಿಯಾಗಿದ್ದರು. ಆಗ ವಿಜಯ್ ರಾಘುವೇಂದ್ರ ಸ್ಪಂದನರನ್ನು ಪರಿಚಯ ಮಾಡಿಕೊಂಡು ಮಾತಾನಾಡಿದ್ದಾರೆ. ಅದಾದ ಬಳಿಕ ಮದುವೆ ಮಾತುಕತೆ ನಡೆದು, ಎರಡು ಕುಟುಂಬದ ಒಪ್ಪಿಗೆ ಪಡೆದು ಮದುವೆಯಾದರು. ಈ ಜೋಡಿಗೆ ಒಬ್ಬ ಮಗನಿದ್ದಾನೆ.
ನಾಳೆ ಬೆಂಗಳೂರಿಗೆ ವಿಜಯ್ ಪತ್ನಿ ಪಾರ್ಥಿವ ಶರೀರ ಬರುವ ಸಾಧ್ಯತೆಯಿದ್ದು, ವಿಧಿ ವಿಧಾನ ಕಾರ್ಯವೆಲ್ಲ ಬೆಂಗಳೂರಿನಲ್ಲಿ ಜರುಗಲಿದೆ. ನಿವೃತ್ತ ಅಸಿಸ್ಟೆಂಟ್ ಪೊಲೀಸ್ ಆಫೀಸರ್ ಬಿ.ಕೆ ಶಿವರಾಮ್ ಅವರ ಪುತ್ರಿ ಸ್ಪಂದನ.