Tag: ಸ್ನ್ಯಾಕ್ಸ್

  • ಸಂಜೆ ತಿಂಡಿಗೆ ಸ್ಪೆಷಲ್ ಮಸಾಲೆ ಬಟಾಣಿ ಉಸ್ಲಿ ಮಾಡಿ

    ಸಂಜೆ ತಿಂಡಿಗೆ ಸ್ಪೆಷಲ್ ಮಸಾಲೆ ಬಟಾಣಿ ಉಸ್ಲಿ ಮಾಡಿ

    ಇಂದು ವೀಕೆಂಡ್, ನಾಳೆ ಪೂರ್ತಿ ದಿನ ಮನೆಯಲ್ಲಿತೇ ಇರುತ್ತೀರಿ. ದಂಪತಿ ಉದ್ಯೋಗಿಗಳಾಗಿದ್ರೆ ಇಡೀ ವಾರದ ಕೆಲಸವೆಲ್ಲಾ ಬಾಕಿ ಉಳಿದಿರುತ್ತೆ. ಮನೆ ಸ್ವಚ್ಛ, ಬಟ್ಟೆ ತೊಳೆಯುವುದು ಸೇರಿದಂತೆ ಸಾಲು ಸಾಲು ಕೆಲಸಗಳು ಕ್ಯೂನಲ್ಲಿರುತ್ತವೆ. ಅಬ್ಬಾ ಎಲ್ಲ ಕೆಲಸ ಮುಗಿತು ಅನ್ನೋಷ್ಟರಲ್ಲಿ ಸಂಜೆ ಆಗಿರುತ್ತೆ. ಬೆಳಗ್ಗೆಯಿಂದ ದಣಿದ ದೇಹಕ್ಕೆ ಒಂದು ಕಪ್ ಟೀ/ಕಾಫೀ ನೀಡೋ ರಿಲ್ಯಾಕ್ಸ್ ಗೆ ಪದಗಳೇ ಇಲ್ಲ. ಕೆಲಸದ ಒತ್ತಡ ನಡುವೆಯೂ ನೀವು ಸಂಜೆ ಸರಳವಾದ ತಿಂಡಿ ಮಾಡಬಹುದು. ಇಲ್ಲಿದೆ ಸ್ಪೆಷಲ್ ಬಟಾಣಿ ಉಸ್ಲಿ ಮಾಡುವ ವಿಧಾನ

    ಬೇಕಾಗುವ ಸಾಮಾಗ್ರಿಗಳು:
    ಬಟಾಣಿ – 1 ಕಪ್
    (ಹಸಿ ಅಥವಾ ಒಣಗಿದ್ದು, ಒಣಗಿದ ಬಟಾಣಿಯನ್ನು 6-7 ಗಂಟೆ ನೀರಿನಲ್ಲಿ ನೆನೆಸಬೇಕು)
    ಹಸಿಮೆಣಸಿನಕಾಯಿ – 2-3
    ಕೆಂಪು ಮೆಣಸಿನಕಾಯಿ – 2
    ಸಾಸಿವೆ – ಸ್ವಲ್ಪ
    ಕರಿಬೇವು – ಸ್ವಲ್ಪ
    ಇಂಗು – ಚಿಟಿಕೆ
    ಕೊಬ್ಬರಿ ತುರಿ – 3 ಸ್ಪೂನ್
    ಜೀರಿಗೆ ಪುಡಿ – ಚಿಟಿಕೆ
    ಪೆಪ್ಪರ್ ಪುಡಿ – ಚಿಟಿಕೆ
    ಎಣ್ಣೆ – 2 ಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕೊತ್ತಂಬರಿ ಸೊಪ್ಪು – ಸ್ವಲ್ಪ

    ಮಾಡುವ ವಿಧಾನ
    * ಒಣಗಿದ ಬಟಾಣಿಯಾದರೇ ಅದನ್ನು 6-7 ಗಂಟೆ ಕಾಲ ನೀರಿನಲ್ಲಿ ನೆನೆಸಿ ಬೇಯಿಸಿಕೊಳ್ಳಬೇಕು.
    * ಹಸಿ ಬಟಾಣಿಯಾದರೂ ಹಾಗೆಯೆ ಬೇಯಿಸಿಕೊಳ್ಳಬೇಕು.
    * ಬಟಾಣಿ ಬೇಯಿಸಿದ ಮೇಲೆ ಸೋಸಿಕೊಳ್ಳಿ.
    * ಈಗ ಒಂದು ಪ್ಯಾನ್‍ಗೆ ಎಣ್ಣೆ ಹಾಕಿ, ಕಾದ ಮೇಲೆ ಸಾಸಿವೆ, ಇಂಗು, ಕರಿಬೇವು ಹಾಕಿ.
    * ಬಳಿಕ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಮುರಿದ ಕೆಂಪು ಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿ.
    * ಈಗ ನೀರಿಲ್ಲದಂತೆ ಸೋಸಿಕೊಂಡ ಬಟಾಣಿಯನ್ನು ಪ್ಯಾನ್‍ಗೆ ಹಾಕಿ ಮಿಕ್ಸ್ ಮಾಡಿ.
    * 2 ನಿಮಿಷ ಆದ್ಮೇಲೆ ಅದಕ್ಕೆ ಜೀರಿಗೆ, ಪೆಪ್ಪರ್ ಪುಡಿ, ಕೊಬ್ಬರಿ ತುರಿ ಸೇರಿಸಿ.. ಮಿಕ್ಸ್ ಮಾಡಿ.. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿದ್ರೆ ಕಾಫಿ ಜೊತೆ ಸವಿಯಲು ಮಸಾಲೆ ಬಟಾಣಿ ಉಸ್ಲಿ ರೆಡಿ.

  • 2 ಕಪ್ ಅಕ್ಕಿ, 2 ಆಲೂಗಡ್ಡೆಯಿಂದ ಮಾಡ್ಕೊಳ್ಳಿ ಹೊಸ ತಿಂಡಿ

    2 ಕಪ್ ಅಕ್ಕಿ, 2 ಆಲೂಗಡ್ಡೆಯಿಂದ ಮಾಡ್ಕೊಳ್ಳಿ ಹೊಸ ತಿಂಡಿ

    ರಡನೇ ಹಂತದ ಲಾಕ್‍ಡೌನ್ ಅಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆಲ ಭಾಗಗಳಿಗೆ ಸಡಿಲಿಕೆ ನೀಡದಿದ್ರೂ ಹೊರಗಡೆ ಹೋಗಿ ತಿಂಡಿ ತಿನ್ನಲು ಕೊರೊನಾ ಭಯ ಕಾಡುತ್ತೆ. ಒಂದೂವರೆ ತಿಂಗಳಿನಿಂದ ಗೃಹ ಬಂಧನದಲ್ಲಿರೋ ಜನರಿಗೆ ಹೊಸ ಹೊಸ ತಿಂಡಿ ತಿನ್ನಬೇಕೆನಿಸುತ್ತಿದೆ. ಕೆಲವು ಭಾಗಗಳಲ್ಲಿ ಮಳೆ ಆಗುತ್ತಿದ್ದು, ಮೋಡ ಮುಸುಕಿದ ವಾತಾವರಣದಲ್ಲಿ ಏನಾದ್ರೂ ತಿಂಡಿ ಬೇಕೆನಿಸುತ್ತೆ. ಹಾಗಾದ್ರೆ ಎರಡು ಆಲೂಗಡ್ಡೆ, ಎರಡು ಕಪ್ ನಿಂದ ಹೊಸ ಗರಿ ಗರಿಯಾದ ತಿಂಡಿ ಮಾಡ್ಕೊಳ್ಳಿ.

    ಬೇಕಾಗುವ ಸಾಮಾಗ್ರಿಗಳು
    ಅಕ್ಕಿ- 2 ಕಪ್
    ಆಲೂಗಡ್ಡೆ-2
    ಜೀರಿಗೆ- 1/2 ಟೇಬಲ್ ಸ್ಪೂನ್
    ಹಸಿ ಮೆಣಸಿನಕಾಯಿ-2
    ಬೆಳ್ಳುಳ್ಳಿ-ಶುಂಠಿ ಪೇಸ್ಟ್- 1/2 ಟೇಬಲ್ ಸ್ಪೂನ್
    ಕೋತಂಬರಿ ಸೊಪ್ಪು
    ಎಣ್ಣೆ
    ಉಪ್ಪು-ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಎರಡು ಕಪ್ ಅಕ್ಕಿಯನ್ನು ತೊಳೆದುಕೊಂಡು ಮೂರು ಗಂಟೆ ನೆನಸಿಟ್ಟುಕೊಳ್ಳಬೇಕು.
    * ಆಲೂಗಡ್ಡೆಯ ಸಿಪ್ಪೆ ತೆಗೆದು ಸ್ಲೈಸ್ ಮಾಡಿಕೊಂಡು 10 ರಿಂದ 15 ನಿಮಿಷ ಸ್ಟೀಮ್ ಮಾಡಿಕೊಳ್ಳಬೇಕು.
    ( ಜರಡಿಗೆ ಎಣ್ಣೆ ಸವರಿ ಸ್ಲೈಸ್ ಮಾಡಿರುವ ಆಲೂಗಡ್ಡೆ ಹಾಕಿ. ದೊಡ್ಡ ಪಾತ್ರೆಯಲ್ಲಿ ಒಂದರಿಂದ ಎರಡು ಗ್ಲಾಸ್ ನೀರು ಹಾಕಿ ಜರಡಿಯನ್ನ ಮೇಲಿಟ್ಟು ಮುಚ್ಚಳದಿಂದ ಮುಚ್ಚಿದ್ರೆ ಆಲೂಗಡ್ಡೆ ಸ್ಟೀಮ್ ಆಗುತ್ತೆ)


    * ನೆನದ ಅಕ್ಕಿಯನ್ನು ಮಿಕ್ಸಿ ಜಾರ್ಗೆ ಹಾಕಿ ಕಡಿಮೆ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿದ ಅಕ್ಕಿ ಹಿಟ್ಟನ್ನು ಮಿಕ್ಸಿಂಗ್ ಬೌಲ್ ನಲ್ಲಿ ಹಾಕಿಕೊಂಡು ಜೀರಿಗೆ, ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಕೋತಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
    * ಇನ್ನು ಸ್ಟೀಮ್ ಆಗಿರುವ ಆಲೂಗಡ್ಡೆಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. (ಆಲೂಗಡ್ಡೆ ರುಬ್ಬಿಕೊಳ್ಳುವಾಗ ನೀರು ಮಿಕ್ಸ್ ಮಾಡಬಾರದು)
    * ರುಬ್ಬಿದ ಆಲೂಗಡ್ಡೆಯನ್ನು ಅಕ್ಕಿಹಿಟ್ಟಿನ ಮಿಶ್ರಣದೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಪಾತ್ರೆಯ ಮುಚ್ಚಳ ಮುಚ್ಚಿ ಐದು ನಿಮಿಷ ಬಿಟ್ಟರೆ ಹಿಟ್ಟು ಹದವಾಗುತ್ತೆ.


    * ಸ್ಟೌವ್ ಮೇಲಿಟ್ಟುಕೊಂಡು ಒಂದು ಪ್ಯಾನ್ ಗೆ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.
    * ಆಲೂಗಡ್ಡೆ ಮತ್ತು ಅಕ್ಕಿ ಮಿಶ್ರಣ ರೆಡಿಯಾದ ಮೇಲೆ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಬೇಕು. ಉಂಡೆಗಳನ್ನು ಕಾದ ಎಣ್ಣೆಗೆ ಹಾಕಿ ಫ್ರೈ ಮಾಡಿದ್ರೆ ನಿಮ್ಮ ತಿಂಡಿ ರೆಡಿ.

  • ಸ್ನ್ಯಾಕ್ ಟೈಮ್ ಗೆ ವೆಜ್ ಕಬಾಬ್ ಮಾಡೋ ಸಿಂಪಲ್ ವಿಧಾನ

    ಸ್ನ್ಯಾಕ್ ಟೈಮ್ ಗೆ ವೆಜ್ ಕಬಾಬ್ ಮಾಡೋ ಸಿಂಪಲ್ ವಿಧಾನ

    ಸಂಜೆ ವೇಳೆಯ ಕಾಫಿ, ಟೀ ಜೊತೆಗೆ ಏನಾದ್ರೂ ಸ್ನ್ಯಾಕ್ ಸೇವಿಸಬೇಕು ಅಂತಾ ಎಲ್ಲರ ಮನಸ್ಸು ಚಡಪಡಿಸುತ್ತದೆ. ಕೆಲಸದ ಒತ್ತಡದಲ್ಲಿ ಸ್ಪೈಸಿಯಾಗಿ ಏನಾದ್ರೂ ಮಾಡೋಣ ಅಂದ್ರೆ ಟೈಮ್ ಇಲ್ಲ ಅಂತಾ ಹೇಳ್ತಾರೆ. ಹೀಗಾಗಿ ಕಡಿಮೆ ಸಮಯದಲ್ಲಿ ವೆಜ್ ಕಬಾಬ್ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    * ಕ್ಯಾರೆಟ್ – 1/2 ಕಪ್ (ಸಣ್ಣಗೆ ಹಚ್ಚಿದ್ದು)
    * ಹಸಿರು ಬಟಾಣಿ – 1/2 ಕಪ್
    * ಹೂ ಕೋಸು – 1/2ಕಪ್ (ಸಣ್ಣಗೆ ಹಚ್ಚಿದ್ದು)
    * ಈರುಳ್ಳಿ – ಮಿಡಿಯಂ ಸೈಜ್‍ದು (ಸಣ್ಣಗೆ ಹಚ್ಚಿದ್ದು)
    * ಕ್ಯಾಪ್ಸಿಕಮ್- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
    * ಚಾಟ್ ಮಸಾಲ – 1 ಟಿಎಸ್‍ಪಿ(ಟೀ ಸ್ಪೂನ್)
    * ಜೀರಾ ಪೌಡರ್ – 1/2 ಟಿಎಸ್‍ಪಿ
    * ಹಸಿಮೆಣಸಿನ ಕಾಯಿ – 5-6 ಸಣ್ಣಗೆ ಹೆಚ್ಚಿದ್ದು
    * ಬೇಯಿಸಿದ ಆಲೂಗಡ್ಡೆ – 2 ಮೀಡಿಯಂ
    * ಕೆಂಪು ಮೆಣಸಿನಕಾಯಿ ಪುಡಿ – 1 ಟಿಎಸ್‍ಪಿ
    * ಅರಿಶಿನ ಪುಡಿ – ಚಿಟಿಕೆ
    * ಮೈದಾ – 1/2 ಕಪ್
    * ಜೋಳದ ಹಿಟ್ಟು – 1/2 ಕಪ್
    * ಉಪ್ಪು – ರುಚಿಗೆ
    * ಎಣ್ಣೆ – ಕರಿಯಲು
    * ಬ್ರೆಡ್ ಕ್ರಮ್ಸ್
    * ಉಪ್ಪು-ರುಚಿಗೆ ತಕ್ಕಷ್ಟು

     

    ಮಾಡುವ ವಿಧಾನ:
    * ಪ್ಯಾನ್‍ನ ಬಿಸಿಗಿಟ್ಟು 2 ಚಮಚ ಎಣ್ಣೆ ಹಾಕಿ ಅದಕ್ಕೆ ಕ್ಯಾರೆಟ್, ಬಟಾಣಿ, ಹೂ ಕೋಸು, ಈರುಳ್ಳಿ, ಕ್ಯಾಪ್ಸಿಕಮ್ ಹಾಕಿ ಫ್ರೈ ಮಾಡಿ.
    * ಬಳಿಕ ಅದಕ್ಕೆ ಜೀರಾ ಪೌಡರ್ 1/2 ಟಿಎಸ್‍ಪಿ, ಚಾಟ್ ಮಸಾಲ 1 ಟಿಎಸ್‍ಪಿ ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಿ. ನಂತರ ಆರಲು ಬಿಡಿ.
    * ಒಂದು ಅಗಲವಾದ ಪಾತ್ರೆಗೆ ಮೈದಾ 1/2 ಕಪ್, ಜೋಳದ ಹಿಟ್ಟು 1/2 ಕಪ್ ನೀರು ಹಾಕಿ ಬ್ಯಾಟರ್ ತಯಾರಿಸಿಕೊಳ್ಳಿ. ದೋಸೆ ಹಿಟ್ಟಿನ ಹದಕ್ಕೆ ಹಿಟ್ಟು ಸಿದ್ಧಪಡಿಸಿ, ಅದಕ್ಕೆ 1 ಚಮಚ ಎಣ್ಣೆ ಸೇರಿಸಿಡಿ.
    * ಬಳಿಕ ಬೇಯಿಸಿದ ಆಲೂಗಡ್ಡೆಯನ್ನು ಸ್ಮ್ಯಾಶ್ ಮಾಡಿ. ಅದಕ್ಕೆ ಫ್ರೈ ಮಾಡಿದ ತರಕಾರಿಗಳು, ಚಿಲ್ಲಿ ಪೌಡರ್, ಅರಿಶಿನ ಪುಡಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಮೈದಾ ಹಾಕಿ ಕಲಸಿ.
    * ಕಲಸಿದ ಆಲೂ ವೆಜ್‍ನ್ನು ಬಿಸ್ಕತ್ ಶೇಪ್ ಮಾಡಿ ಅದನ್ನು ಕಲಸಿದ ಮೈದಾ ಬ್ಯಾಟರ್‍ನಲ್ಲಿ ಉರುಳಿಸಿ. ಬ್ರೆಡ್ ಕ್ರಮ್ಸ್ ನಲ್ಲಿ ಡಿಪ್ ಮಾಡಿ. ಒಂದು ಕಡೆ ಇಟ್ಟುಕೊಳ್ಳಿ.
    * ಪ್ಯಾನ್‍ಗೆ ಎಣ್ಣೆ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೂ ಪ್ರೈ ಮಾಡಿ. ಈಗ ವೆಜ್ ಕಬ್ ಸವಿಯಲು ರೆಡಿ.