Tag: ಸ್ನೇಹ ಆಚಾರ್ಯ

  • ‘ಬಿಗ್ ಬಾಸ್’ ಸ್ನೇಹಾ ಆಚಾರ್ಯ ಬೇಬಿ ಬಂಪ್ ಫೋಟೋಸ್

    ‘ಬಿಗ್ ಬಾಸ್’ ಸ್ನೇಹಾ ಆಚಾರ್ಯ ಬೇಬಿ ಬಂಪ್ ಫೋಟೋಸ್

    ಜೋಶ್, ಸಂತು ಸ್ಟೇಟ್ ಫಾರ್ವರ್ಡ್, ಕೃಷ್ಣಲೀಲಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸ್ನೇಹಾ ಆಚಾರ್ಯ (Sneha Acharya) ಸದ್ಯ ತಮ್ಮ ಬೇಬಿ ಬಂಪ್ (Baby Bump) ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಪತಿ ಜೊತೆ ಯೋಗ ಸ್ಟೈಲಿನಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ:ಗಂಗಮ್ಮ ಜಾತ್ರೆಯಲ್ಲಿ ‘ಪುಷ್ಪ 2’ ರೀತಿ ವೇಷ ಧರಿಸಿ ಎಂಟ್ರಿ ಕೊಟ್ಟ ಸಂಸದ

    ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಸ್ನೇಹಾ ಅವರು 2018ರಲ್ಲಿ ವಿದೇಶಿ ಮೂಲದ ರಾಯನ್ (Rayan) ಅವರನ್ನು ಮದುವೆಯಾಗಿದ್ದರು. ಇದೀಗ ವಿದೇಶದಲ್ಲಿಯೇ ಸೆಟಲ್ ಆಗಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಇತ್ತೀಚಿಗಷ್ಟೇ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದರು.

    ವಿಶ್ವ ತಾಯಂದಿರ ದಿನ ಮೇ 14ರಂದು ನಟಿ ಸ್ನೇಹಾ ವಿಶೇಷ ಫೋಟೋಶೂಟ್‌ವೊಂದನ್ನ ಮಾಡಿಸಿದ್ದಾರೆ. ಕಪಲ್ ಯೋಗ (Yoga) ಪೋಸ್ ಕೊಡುವ ಮೂಲಕ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಕಪ್ಪು ಬಣ್ಣದ ಬಾಡಿ ಫಿಟ್ ಸೂಟ್ ಧರಿಸಿದ್ದಾರೆ. ಈ ಫೋಟೋಸ್ ಎಲ್ಲೆಡೆ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Sneha Acharya (@acharyasneh_official)

    ವಿದೇಶಿ ಮೂಲದ ರಾಯನ್ (Rayan) ಅವರ ಹೆಡ್ ಕಂಪೆನಿ ಅಮೆರಿಕದಲ್ಲಿದ್ದು, ಹೀಗಾಗಿ ಅವರು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಬಾಲಿವುಡ್‌ನಲ್ಲಿ ನಟ ಶಾಹಿದ್ ಕಪೂರ್, ಗೋವಿಂದ ಅವರಿಗೆ ನೃತ್ಯ ನಿರ್ದೇಶನ ಮಾಡಿರುವ ಸ್ನೇಹಾ ಅವರು ಡಾನ್ಸ್, ಯೋಗಕ್ಕೆ ಸಂಬಂಧಪಟ್ಟಂತೆ ಸ್ವಂತ ಕಂಪನಿ ಸ್ಥಾಪಿಸುವ ಉದ್ದೇಶ ಹೊಂದಿದ್ದರು. ಕಲರ್ಸ್ ಕನ್ನಡದ ತಕಧಿಮಿತ ರಿಯಾಲಿಟಿ ಶೋನಲ್ಲಿ ಸ್ನೇಹಾ ಭಾಗವಹಿಸಿ ಜಡ್ಜ್ಗಳಿಂದ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೋಶ್ ಸಿನಿಮಾದಲ್ಲಿ ನಟಿಸಿದ್ದ ಸ್ನೇಹಾಗೆ ಬಾಲಿವುಡ್‌ನಲ್ಲಿ ಒಳ್ಳೆಯ ಪ್ರಶಂಸೆ ಸಿಕ್ಕಿತ್ತು.

  • ಬಿಗ್‍ಬಾಸ್ ಮನೆಯಿಂದ ಹೊರಬಂದು ಅದ್ಧೂರಿಯಾಗಿ ಮದ್ವೆಯಾದ ಸ್ನೇಹ

    ಬಿಗ್‍ಬಾಸ್ ಮನೆಯಿಂದ ಹೊರಬಂದು ಅದ್ಧೂರಿಯಾಗಿ ಮದ್ವೆಯಾದ ಸ್ನೇಹ

    ಬೆಂಗಳೂರು: ಬಿಗ್ ಬಾಸ್ ಸೀಸನ್-6 ಮನೆಯಿಂದ ಹೊರಬಂದ ಸ್ಪರ್ಧಿ ಸ್ನೇಹ ಆಚಾರ್ಯ ಅವರು ಅದ್ಧೂರಿಯಾಗಿ ತಮ್ಮ ಮದುವೆಯನ್ನು ಮಾಡಿಕೊಂಡಿದ್ದಾರೆ.

    ಸ್ನೇಹ ತಾವು ಪ್ರೀತಿಸಿದ ಗೆಳೆಯ ರಾಯನ್ ಅವರ ಜೊತೆ ನವೆಂಬರ್ 25ರಂದು ನಗರದ ಸಿರಿ ಕನ್ವೆನ್ಷನ್ ಹಾಲ್‍ನಲ್ಲಿ ಮದುವೆಯಾದರು. ನವೆಂಬರ್ 24 ಶನಿವಾರ ಸಂಜೆ ಆರತಕ್ಷತೆ ನಡೆದಿದ್ದು, ಭಾನುವಾರ ಮುಂಜಾನೆ 5.25ಕ್ಕೆ ಸಪ್ತಪದಿ ತುಳಿದಿದ್ದಾರೆ.

     

    View this post on Instagram

     

    A post shared by Sneha Acharya (@acharyasneh_official) on

    ರಾಯನ್ ಕೊಪ್ಕೊ ಮೂಲತಃ ನ್ಯೂಯಾರ್ಕ್‍ನವರಾಗಿದ್ದು, ತಮ್ಮ ಕಂಪನಿಯ ಅಭಿವೃದ್ಧಿಗಾಗಿ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಈ ವೇಳೆ ಅವರಿಗೆ ಸ್ನೇಹ ಅವರ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಈಗ ದಂಪತಿಗಳಾಗಿದ್ದಾರೆ.

    ಸ್ನೇಹ ವೃತ್ತಿಯಲ್ಲಿ ಡ್ಯಾನ್ಸರ್ ಆಗಿದ್ದು, ಮುಂಬೈನಲ್ಲಿ ನೃತ್ಯ ಸಂಯೋಜಕಿ ಆಗಿ ಗೋವಿಂದ, ಶಾಹಿದ್ ಕಪೂರ್, ಪ್ರಭುದೇವ, ಪ್ರಿಯಾಂಕಾ ಛೋಪ್ರಾಗೆ ಕೊರಿಯೋಗ್ರಾಫಿ ಮಾಡುವ ತಂಡದಲ್ಲಿದ್ದಾರೆ. ಸ್ನೇಹ ಅವರ ನೃತ್ಯ ನೋಡಿ ರಾಯನ್ ಇಷ್ಟಪಟ್ಟಿದ್ದಾರೆ.

     

    View this post on Instagram

     

    With the bride’s #tribe

    A post shared by Sneha Acharya (@acharyasneh_official) on

    ಪ್ರೀತಿ ಹುಟ್ಟಿದ್ದು ಹೇಗೆ..?
    ರಾಯನ್ ಕೊಪ್ಕೊ ಬೆಂಗಳೂರಿಗೆ ಬಂದು ತಮ್ಮ ಕಂಪನಿಯ ಕೆಲಸವನ್ನು ಮುಗಿಸುತ್ತಿದ್ದರು. ಕೊನೆಯ ಎರಡು ತಿಂಗಳಲ್ಲಿ ನಾನು ಸಾಲ್ಸಾ ಡ್ಯಾನ್ಸ್ ಮಾಡಬೇಕಾದರೆ ಅವರು ನೋಡಿ ನನ್ನ ಬಳಿ ಬಂದು `ನಾನು ನಿಮ್ಮ ಜೊತೆ ಡ್ಯಾನ್ಸ್ ಮಾಡಬಹುದಾ’ ಎಂದು ಕೇಳಿದ್ದರು. ನಾನು ಓಕೆ ಎಂದೆ. ನಂತರ ಅವರಿಗೆ ಡ್ಯಾನ್ಸ್ ಬರಲ್ಲ ಎಂದು ನನಗೆ ಗೊತ್ತಾಯಿತು. ಆಗ ಅವರ ಸೀನಿಯರ್ ಒಬ್ಬರನ್ನು ತೋರಿಸಿ, `ನೀವು ಅವರ ಬಳಿ ಡ್ಯಾನ್ಸ್ ಕಲಿತು ಬನ್ನಿ, ಆಮೇಲೆ ನನ್ನ ಜೊತೆ ಡ್ಯಾನ್ಸ್ ಮಾಡಬಹುದು’ ಎಂದು ಸ್ನೇಹ ಈ ಮೊದಲು ಹೇಳಿದರು.

     

    View this post on Instagram

     

    Mommy & son moment. #mehendinight.

    A post shared by Sneha Acharya (@acharyasneh_official) on

    ಸಿಕ್ಕಾಗ ಹಾಯ್, ಬಾಯ್ ಎಂದು ಮಾತನಾಡುತ್ತಿದ್ವಿ. ಅವರೇ ನನ್ನ ಬಳಿ ಬಂದು ಕಾಫಿ, ಟೀ, ತಿಂಡಿಗೆ ಕರೆಯುತ್ತಿದ್ದರು. ಆದರೆ ನಾನು ಹೋಗುತ್ತಿರಲಿಲ್ಲ. ಒಮ್ಮೆ ನಾನು ಮಕ್ಕಳಿಗೆ ನಾಟಕ ಹೇಳಿಕೊಡುವಾಗ ಒಂದು ಪಾತ್ರ ಬೇಕಿತ್ತು. ಇಂಗ್ಲೀಷ್ ಕಲಿಸುವ ವ್ಯಕ್ತಿ ಬೇಕಿತ್ತು. ಆಗ ನನಗೆ ಇವರು ನೆನಪಾಗಿ ಅವರನ್ನು ಕೇಳಿದೆ. ಅದಕ್ಕೆ ಅವರು ಒಪ್ಪಿಕೊಂಡು ಅಲ್ಲಿಂದ ಪರಸ್ಪರ ಇಬ್ಬರು ಸಮಯ ಕಳೆಯಲು ಅವಕಾಶ ಸಿಕ್ಕಿತ್ತು ಎಂದು ತಮ್ಮ ಮೊದಲ ಪರಿಚಯದ ಬಗ್ಗೆ ಸ್ನೇಹ ಬಿಗ್‍ಬಾಸ್ ಮನೆಗೆ ಹೋಗುವಾಗ ಹೇಳಿಕೊಂಡಿದರು.

     

    View this post on Instagram

     

    A post shared by Sneha Acharya (@acharyasneh_official) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

     

  • ಫಾರೀನ್ ಹುಡ್ಗನ ಜೊತೆ ಇದೇ ತಿಂಗ್ಳು ಮದ್ವೆಯಾಗಲಿದ್ದಾರೆ ಬಿಗ್‍ಬಾಸ್ ಸ್ಪರ್ಧಿ

    ಫಾರೀನ್ ಹುಡ್ಗನ ಜೊತೆ ಇದೇ ತಿಂಗ್ಳು ಮದ್ವೆಯಾಗಲಿದ್ದಾರೆ ಬಿಗ್‍ಬಾಸ್ ಸ್ಪರ್ಧಿ

    -ಲವ್ ಆದ ಬಗ್ಗೆ ಸ್ನೇಹಾ ಆಚಾರ್ಯ ಮಾತು

    ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯ ಸ್ಪರ್ಧಿ ಸ್ನೇಹಾ ಆಚಾರ್ಯ ಮೂರೇ ವಾರಕ್ಕೆ ಮನೆಯಿಂದ ಹೊರಬಂದಿದ್ದು, ಈಗ ತಮ್ಮ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಸ್ನೇಹ ಆಚಾರ್ಯ ಬಿಗ್‍ಬಾಸ್ ಮನೆಗೆ ಹೋಗುವುದಕ್ಕೂ ಮುಂಚೆಯೇ ಮದುವೆ ಬಗ್ಗೆ ಖಚಿತಪಡಿಸಿದ್ದರು. ಸ್ನೇಹ ವಿದೇಶಿ ಹುಡುಗನ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ತಮಗೆ ವಿದೇಶಿ ಹುಡುಗನ ಜೊತೆ ಪ್ರೀತಿ ಆದ ಸಂದರ್ಭವನ್ನು ಮಾಧ್ಯಮ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

    ಪ್ರೀತಿ ಹುಟ್ಟಿದ್ದು ಹೇಗೆ..?
    ನನ್ನ ಭಾವಿ ಪತಿ ಹೆಸರು ರಾಯನ್ ಕೊಪ್ಕೊ. ಮೂಲತಃ ನ್ಯೂಯಾರ್ಕ್ ಅವರು, ತಮ್ಮ ಕಂಪನಿಯ ಅಭಿವೃದ್ಧಿಗಾಗಿ ಎರಡು ವರ್ಷ ಬೆಂಗಳೂರಿನಲ್ಲಿ ಇರಲು ನಿರ್ಧರಿಸಿ ಬಂದಿದ್ದರು. ಅದೇ ರೀತಿ ಅವರ ಕಂಪನಿಯ ಕೆಲಸವನ್ನು ಮುಗಿಸುತ್ತಿದ್ದರು. ಕೊನೆಯ ಎರಡು ತಿಂಗಳಲ್ಲಿ ನಾನು ಸಾಲ್ಸಾ ಡ್ಯಾನ್ಸ್ ಮಾಡಬೇಕಾದರೆ ಅವರು ನೋಡಿ ನನ್ನ ಬಳಿ ಬಂದು ‘ನಾನು ನಿಮ್ಮ ಜೊತೆ ಡ್ಯಾನ್ಸ್ ಮಾಡಬಹುದಾ’ ಎಂದು ಕೇಳಿದ್ದರು. ನಾನು ಓಕೆ ಎಂದೆ. ನಂತರ ಅವರಿಗೆ ಡ್ಯಾನ್ಸ್ ಬರಲ್ಲ ಎಂದು ನನಗೆ ಗೊತ್ತಾಯಿತು. ಆಗ ಅವರ ಸೀನಿಯರ್ ಒಬ್ಬರನ್ನ ತೋರಿಸಿ, ‘ನೀವು ಅವರ ಬಳಿ ಡ್ಯಾನ್ಸ್ ಕಲಿತು ಬನ್ನಿ, ಆಮೇಲೆ ನನ್ನ ಜೊತೆ ಡ್ಯಾನ್ಸ್ ಮಾಡಬಹುದು’ ಎಂದಿದ್ದೆ.

    ಸಿಕ್ಕಾಗ ಹಾಯ್, ಬಾಯ್ ಎಂದು ಮಾತನಾಡುತ್ತಿದ್ವಿ. ಅವರೇ ನನ್ನ ಬಳಿ ಬಂದು ಕಾಫಿ, ಟೀ, ತಿಂಡಿಗೆ ಕರೆಯುತ್ತಿದ್ದರು. ಆದರೆ ನಾನು ಹೋಗುತ್ತಿರಲಿಲ್ಲ. ಒಮ್ಮೆ ನಾನು ಮಕ್ಕಳಿಗೆ ನಾಟಕ ಹೇಳಿಕೊಡುವಾಗ ಒಂದು ಪಾತ್ರ ಬೇಕಿತ್ತು. ಇಂಗ್ಲೀಷ್ ಕಲಿಸುವ ವ್ಯಕ್ತಿ ಬೇಕಿತ್ತು. ಆಗ ನನಗೆ ಇವರು ನೆನಪಾಗಿ ಅವರನ್ನು ಕೇಳಿದೆ. ಅದಕ್ಕೆ ಅವರು ಒಪ್ಪಿಕೊಂಡು ಅಲ್ಲಿಂದ ಪರಸ್ಪರ ಇಬ್ಬರು ಸಮಯ ಕಳೆಯಲು ಅವಕಾಶ ಸಿಕ್ಕಿತ್ತು ಎಂದು ತಮ್ಮ ಮೊದಲ ಪರಿಚಯದ ಬಗ್ಗೆ ಹೇಳಿಕೊಂಡಿದ್ದಾರೆ.

    ಡೈರಿ ಬರೆಯುವ ಅವ್ಯಾಸ ಇತ್ತು:
    ರಾಯನ್ ಗೆ ಡೈರಿ ಬರೆಯುವ ಅಭ್ಯಾಸವಿತ್ತು. ಅವರು ಡೈರಿಯನ್ನು ಯಾವಾಗಲೂ ಜೊತೆಯಲ್ಲೇ ಇಟ್ಟುಕೊಳ್ಳುತ್ತಿದ್ದರು. ಆದರೆ ಒಮ್ಮೆ ನನ್ನ ಕೈಗೆ ಸಿಕ್ಕಿತ್ತು. ಅದನ್ನ ನಾನು ಮನೆಗೆ ತೆಗೆದುಕೊಂಡು ಹೋಗಿ ಓದಿದೆ. ಆದರೆ ಡೈರಿಯಲ್ಲಿ ನನ್ನ ಬಗ್ಗೆನೇ ಬರೆದಿದ್ದರು. ಆಗ ಗೊತ್ತಾಯ್ತು ಅವರು ನನ್ನನ್ನು ಪ್ರೀತಿ ಮಾಡುತ್ತಾರೆ ಅಂತ. ಬಳಿಕ ಅವರು ನನಗಾಗಿ ಇನ್ನು ಒಂದು ವರ್ಷ ಬೆಂಗಳೂರಿನಲ್ಲಿ ಇರಬೇಕು ಎಂದು ನಿರ್ಧಾರ ಮಾಡಿದ್ದರು.

    ಇಂದಿನ ವಾಟ್ಸಪ್, ಫೇಸ್‍ಬುಕ್, ಮೆಸೇಜ್ ನಡುವೆ ಪತ್ರ ಬರೆದು, ಅದನ್ನು ಹೇಳೋಕು ಕಷ್ಟ ಪಡುತ್ತಿದ್ದನ್ನು ನೋಡಿ ನನಗೂ ಇಷ್ಟ ಆಯಿತು. ಮೊದಲಿಗೆ ಅವರು ನನ್ನ ಡೈರಿ ಓದಬೇಡಿ ಎಂದು ಹೇಳಿದ್ದರು. ಬಳಿಕ ನಾನು ಓದಿರುವ ಬಗ್ಗೆ ಅವರಿಗೆ ತಿಳಿಯಿತು. ಬಂದು ಅವರೇ ಪ್ರಪೋಸ್ ಮಾಡಿದರು. ನಾನು ಒಪ್ಪಿಕೊಂಡೆ. ಆದರೆ ಮನೆಯಲ್ಲಿ ಒಪ್ಪಿಕೊಳ್ಳಲ್ಲ ಅಂತ ಭಯವಾಗಿತ್ತು. ಬಳಿಕ ಮನೆಯವರಿಗೂ ಅವರು ಇಷ್ಟವಾದರು ಎಂದು ತನ್ನ ಪ್ರೀತಿಯ ಗುಟ್ಟು ಬಿಚ್ಚಿಟ್ಟಿದ್ದಾರೆ.

    ಇದೇ ನವೆಂಬರ್ 25 ರಂದು ಬೆಂಗಳೂರಿನಲ್ಲಿ ಮದುವೆ ನಡೆಯಲಿದೆ. ಮೈಸೂರು ರಸ್ತೆಯಲ್ಲಿರುವ ‘ಎಂಸಿರಿ ಕನ್ವೆನ್ಷನ್ ಹಾಲ್’ನಲ್ಲಿ ವಿವಾಹ ನಡೆಯಲಿದೆ. ಸದ್ಯಕ್ಕೆ ಮದುವೆ ನಂತರ ಪ್ಲಾನ್ ಏನು ಇಲ್ಲ. ಆದರೆ ನಾವಿಬ್ಬರೂ ಟ್ರಾವೆಲ್ ಮಾಡೋಣ ಅಂದುಕೊಂಡಿದ್ದೇವೆ ಎಂದು ಸ್ನೇಹ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews