Tag: ಸ್ನೇಹಿತರು

  • ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ – ಕೊಲೆಯಲ್ಲಿ ಅಂತ್ಯ

    ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ – ಕೊಲೆಯಲ್ಲಿ ಅಂತ್ಯ

    ಚಿಕ್ಕೋಡಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳ ನಡೆದು, ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಹುಸೇನ್ ಸಾಬ್ ದಸ್ತಗಿರ ಪರೀಟ್ (25) ಕೊಲೆಯಾದ ದುರ್ದೈವಿ. ಇಮ್ತಿಯಾಜ್ ಶೇಗಡಿ (25) ಕೊಲೆ ಮಾಡಿರುವ ಆರೋಪಿ. ಇದನ್ನೂ ಓದಿ: ಬಿಹಾರ | ಕನ್ವರ್‌ ಯಾತ್ರಾರ್ಥಿಗಳಿದ್ದ ವ್ಯಾನ್ ಕಂದಕಕ್ಕೆ ಪಲ್ಟಿ – ಐವರ ದುರ್ಮರಣ

    ಬೆಳಗಾವಿ ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಯಮಕನಮರಡಿ ಗ್ರಾಮದ ನಿವಾಸಿಗಳಾದ ಹುಸೇನ್ ಸಾಬ್ ಪರೀಟ್ ಹಾಗೂ ಸ್ನೇಹಿತ ಇಮ್ತಿಯಾಜ್ ಇಬ್ಬರು ಅಂಕಲಿ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಬಂದಿದ್ದರು. ಇದನ್ನೂ ಓದಿ: ಮತಾಂತರ, ಮದುವೆ ಆಗಲು ನಿರಾಕರಿಸಿದ್ದಕ್ಕೆ ಹರಿಯಿತು ನೆತ್ತರು – ಹಿಂದೂ ಮಹಿಳೆಯ ಕ್ರೂರ ಹತ್ಯೆ

    ಮಹಾರಾಷ್ಟ್ರದ ಸಾಂಗಲಿ ನಗರಕ್ಕೆ ಹೋಗುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಕೋಪಗೊಂಡ ಇಮ್ತಿಯಾಜ್ ಕಟ್ಟಿಗೆಯಿಂದ ಹುಸೇನ್ ಸಾಬ್ ತಲೆಗೆ ಹೊಡೆದ ಪರಿಣಾಮ ಹುಸೇನ್ ಸಾಬ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Bengaluru | ಪಾರ್ಟಿ ಮಾಡಲು ಪಬ್‌ಗೆ ಕರೆಸಿ, ಸುಪಾರಿ ನೀಡಿ ಗೆಳೆಯನ ಸುಲಿಗೆ

    Bengaluru | ಪಾರ್ಟಿ ಮಾಡಲು ಪಬ್‌ಗೆ ಕರೆಸಿ, ಸುಪಾರಿ ನೀಡಿ ಗೆಳೆಯನ ಸುಲಿಗೆ

    – 3 ಲಕ್ಷ ಮೌಲ್ಯದ ಚಿನ್ನ, ನಗದು ದೋಚಿದ ದುಷ್ಕರ್ಮಿಗಳು

    ಬೆಂಗಳೂರು: ಪಾರ್ಟಿ ಮಾಡಲು ಪಬ್‌ಗೆ ಕರೆಸಿ, ಸುಪಾರಿ ನೀಡಿ ಗೆಳೆಯನ ಸುಲಿಗೆ ಮಾಡಿಸಿರುವ ಘಟನೆಯೊಂದು ಬೆಂಗಳೂರಿನ (Bengaluru) ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಚಂದನ್ ಸುಲಿಗೆಗೆ ಒಳಗಾದ ಯುವಕ. ಚಂದನ್‌ಗೆ ಪವನ್ ಮತ್ತು ಅಚಲ್ ಎಂಬ ಇಬ್ಬರು ಸ್ನೇಹಿತರಿದ್ದರು. ಚಂದನ್ ಅರ್ಥಿಕವಾಗಿ ಚೆನ್ನಾಗಿದ್ದ. ಕಳೆದ ಮೇ 1ರಂದು ಚಂದನ್‌ಗೆ ಇಬ್ಬರು ಸ್ನೇಹಿತರು ಕರೆ ಮಾಡಿ ಚಿಕ್ಕಜಾಲ ಬಳಿಯ ಪಬ್‌ಗೆ ಬರಲು ಹೇಳಿದ್ದರು. ತಡರಾತ್ರಿ ತನಕ ಅಚಲ್ ಮತ್ತು ಪವನ್, ಚಂದನ್ ಮೂವರು ಸೇರಿ ಪಾರ್ಟಿ ಮಾಡಿದ್ದರು. ಇದನ್ನೂ ಓದಿ: Israel-Iran Conflict | ಇಸ್ರೇಲ್‌ನಲ್ಲಿ ಸಿಲುಕಿದ 18 ಮಂದಿ ಕನ್ನಡಿಗರು

    ನಂತರ ಜಾಲಿ ರೈಡ್ ಹೋಗೋಣ ಎಂದು ಚಂದನ್ ಕಾರಿನಲ್ಲೇ ಏರ್‌ಪೋರ್ಟ್ ಕಡೆಗೆ ಹೊರಟಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರಿನಲ್ಲಿದ್ದ ಮೂವರ ಮೇಲೂ ಹಲ್ಲೆ ಮಾಡಿ ಚಂದನ್ ಬಳಿಯಿದ್ದ 3 ಲಕ್ಷ ಮೌಲ್ಯದ ಚಿನ್ನ, ನಗದು ದೋಚಿ ಎಸ್ಕೇಪ್ ಆಗಿದ್ದರು. ಇದನ್ನೂ ಓದಿ: ಬಿಎಂಟಿಸಿ ಡ್ರೈವರ್‌ಗೆ ಚಪ್ಪಲಿಯಿಂದ ಮಹಿಳೆ ಹಲ್ಲೆ ಪ್ರಕರಣ – ಕಠಿಣ ಕ್ರಮಕ್ಕೆ ರಾಮಲಿಂಗಾ ರೆಡ್ಡಿ ಪತ್ರ

    ಈ ವೇಳೆ ಜೊತೆಗಿದ್ದ ಅಚಲ್ ಮತ್ತು ಪವನ್ ಪೊಲೀಸರಿಗೆ ದೂರು ನೀಡೋದು ಬೇಡ ಎಂದು ಚಂದನ್ ಮನವೊಲಿಸಿದ್ದರು. ಇದಾದ 1 ವಾರದ ನಂತರದ ಘಟನೆ ಬಗ್ಗೆ ಅನುಮಾನಗೊಂಡ ಚಂದನ್ ಪೊಲೀಸರಿಗೆ ದೂರು ನೀಡಿದ್ದ. ಇದನ್ನೂ ಓದಿ: ಗೋಲ್ಡ್‌ ಪ್ರಿಯರಿಗೆ ಶಾಕ್‌ – 1 ವಾರದಲ್ಲಿ ಚಿನ್ನದ ದರ 3,645 ರೂ. ಏರಿಕೆ

    ಪೊಲೀಸ್ ತನಿಖೆಯಲ್ಲಿ ಜೊತೆಗಿದ್ದ ಸ್ನೇಹಿತರೇ ಸುಪಾರಿ ನೀಡಿ, ಸುಲಿಗೆ ಮಾಡಿಸಿರುವುದು ಗೊತ್ತಾಗಿದೆ. ಸದ್ಯ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ (Chikkajala Police Station) ಪ್ರಕರಣ ದಾಖಲಾಗಿದ್ದು, ಆರೋಪಿಗಳಾಗಿ ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ.

  • Kolar | ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ – ಕೊಲೆಯಲ್ಲಿ ಅಂತ್ಯ

    Kolar | ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ – ಕೊಲೆಯಲ್ಲಿ ಅಂತ್ಯ

    ಕೋಲಾರ: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ, ಕೊಲೆಯಲ್ಲಿ ಅಂತ್ಯವಾದ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ಜಿಲ್ಲೆ ಮುಳಬಾಗಿಲು (Mulabagilu) ನಗರದ ಹೊರವಲಯದಲ್ಲಿರುವ ಬಾರ್ ಎದುರು ಘಟನೆ ನಡೆದಿದೆ. ಮುಳಬಾಗಿಲು ಹೈದರ್ ನಗರ ನಿವಾಸಿ ಮತೀನ್ (25) ಕೊಲೆಯಾದ ವ್ಯಕ್ತಿ. ಸ್ನೇಹಿತ ಮೊಯಿನ್‌ನಿಂದಲೇ ಮತೀನ್ ಹತ್ಯೆಯಾಗಿದ್ದಾನೆ. ಕುಡಿದ ಮತ್ತಿನಲ್ಲಿ ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಮೋದಿ ನಿವೃತ್ತಿ ಘೋಷಣೆ ಬಗ್ಗೆ ಮಾತನಾಡಿದ್ದಾರೆ: ಸಂಜಯ್ ರಾವತ್

    ಬಾರ್‌ನಲ್ಲಿ ಕುಡಿದ ಬಳಿಕ ಎದುರಿಗೆ ಇದ್ದ ಮರದ ಕೆಳಗೆ ಮತೀನ್ ಹಾಗೂ ಮೊಯಿನ್ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಮತೀನ್ ಸ್ನೇಹಿತ (Friends) ಮೊಯಿನ್‌ನನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಕೋಪಗೊಂಡ ಮೊಯಿನ್ ಕಬ್ಬಿಣದ ರಾಡ್‌ನಿಂದ ಮತೀನ್‌ಗೆ ಇರಿದು ಪರಾರಿಯಾಗಿದ್ದಾನೆ. ಇದನ್ನೂ ಓದಿ: ದಕ್ಷಿಣ ಭಾರತದ ಅತಿ ದೊಡ್ಡ ಅಂಗಾಂಗ ಮರು ಪಡೆಯುವ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆ

    ಕೊಲೆಯ ದೃಶ್ಯಗಳು ಬಾರ್‌ಗೆ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಏ.2ಕ್ಕೆ ವಕ್ಫ್ ತಿದ್ದುಪಡಿ ಬಿಲ್‌ಗೆ ಕೇಂದ್ರ ಸಿದ್ಧತೆ – ಈಗ ಏನಿದೆ? ಏನು ಬದಲಾಗಲಿದೆ?

  • ಸ್ನೇಹಿತೆಯನ್ನ ಭೇಟಿಯಾಗಲು ಬುರ್ಖಾ ಧರಿಸಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿದ ಯುವಕ

    ಸ್ನೇಹಿತೆಯನ್ನ ಭೇಟಿಯಾಗಲು ಬುರ್ಖಾ ಧರಿಸಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿದ ಯುವಕ

    – ಯುವಕನಿಗೆ ಉಳಿದುಕೊಳ್ಳಲು ಸ್ಥಳವಿಲ್ಲದ ಕಾರಣ ಸ್ನೇಹಿತೆಯಿಂದ ಹಾಸ್ಟೆಲ್‌ನಲ್ಲಿ ವ್ಯವಸ್ಥೆ
    – ಬೆಂಗಳೂರಿನ ಜ್ಞಾನಭಾರತಿ ಹಾಸ್ಟೆಲ್‌ನಲ್ಲಿ ಘಟನೆ

    ಬೆಂಗಳೂರು: ಯುವಕನೋರ್ವ ಸ್ನೇಹಿತೆಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಹುಡುಗಿಯರ ಹಾಸ್ಟೆಲ್‌ಗೆ ನುಗ್ಗಿರುವ ಘಟನೆ ಬೆಂಗಳೂರಿನ (Bengaluru) ಜ್ಞಾನಭಾರತಿ ಕಾಲೇಜು (Gnana Bhrathi College) ಆವರಣದಲ್ಲಿ ನಡೆದಿದೆ.

    ಜ್ಞಾನಭಾರತಿ ಕಾಲೇಜಿನ ರಮಾಬಾಯಿ ಹಾಸ್ಟೆಲ್‌ಗೆ ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಯುವಕ ಬುರ್ಖಾ ಧರಿಸಿ ಪ್ರವೇಶಿಸಿದ್ದ. ಬುರ್ಖಾ ಧರಿಸಿದ ಯುವಕನನ್ನ ಮಾಲೂರು (Malur) ಮೂಲದವನು ಎನ್ನಲಾಗಿದೆ. ಯುವಕನ್ನು ಕಂಡ ವಿದ್ಯಾರ್ಥಿನಿಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಎರಡನೇ ಬಾರಿ ಹೋಗಿ ರಾಜಣ್ಣ ಕೈಗೆ ಸಿಕ್ಕಿ ಬಿದ್ದ ಹನಿಟ್ರ್ಯಾಪ್‌ ಅಸಾಮಿಗಳು!

    ಸ್ಥಳಕ್ಕಾಗಮಿಸಿದ ಜ್ಞಾನಭಾರತಿ ಠಾಣೆಯ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದರು. ವಿದ್ಯಾರ್ಥಿನಿಯರಿರುವ ಹಾಸ್ಟೆಲ್‌ಗೆ ನುಗ್ಗಿರುವ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಸ್ನೇಹಿತೆಯಿಂದಲೇ ಬಟ್ಟೆ ತೆಗೆದುಕೊಂಡು ಹಾಸ್ಟೆಲ್‌ಗೆ ನುಗ್ಗಿದ್ದ ಯುವಕನಿಗೆ ಉಳಿದುಕೊಳ್ಳಲು ಸ್ಥಳವಿಲ್ಲದ ಕಾರಣ ಆಕೆಯೇ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಮಾಡಿರುವುದು ತಿಳಿದುಬಂದಿದೆ. ಇದನ್ನೂ ಓದಿ: `ಮಂಡ್ಯದ ಗಂಡು’ ಸಿನಿಮಾ ನಿರ್ದೇಶಕ, ಬರಹಗಾರ ಎಟಿ ರಘು ನಿಧನ

    ಮುಂಜಾಗ್ರತ ಕ್ರಮವಾಗಿ ಹುಡುಗಿಯರ ಹಾಸ್ಟೆಲ್‌ಗೆ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ (Gnana Bharathi Police Station) ಪ್ರಕರಣ ದಾಖಲಾಗಿದೆ.

  • ಕಲಬುರಗಿ | ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ

    ಕಲಬುರಗಿ | ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ

    ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಲಬುರಗಿ (Kalaburgi) ನಗರದ ರಾಜಾಪುರ ಬಡಾವಣೆಯ ಹೋಟೆಲ್ ಮುಂಭಾಗದಲ್ಲಿ ತಡರಾತ್ರಿ ನಡೆದಿದೆ.

    ರೇವಣಸಿದ್ದಪ್ಪ ಪಾಳೇಕಾರ್ (33) ಕೊಲೆಯಾದ ಯುವಕ. ಇದನ್ನೂ ಓದಿ: ಅಂಬಿ ಮೊಮ್ಮಗನ ನಾಮಕರಣ ಸಂಭ್ರಮ: ಕಿಚ್ಚ ಸುದೀಪ್‌ ಭಾಗಿ

    ಸ್ನೇಹಿತರ ಜೊತೆಗೆ ಸಿಗರೇಟ್ ಸೇದಲು ಹೋದಾಗ ಗಲಾಟೆಯಾಗಿ ಕೊಲೆ ನಡೆದಿದೆ ಎನ್ನಲಾಗಿದೆ. ಸ್ನೇಹಿತರೇ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ದಡೇಸೂಗುರು ಪತ್ನಿ ಎಂದು ಹೇಳಿಕೊಂಡಿದ್ದ ಅಧಿಕಾರಿ ವಿರುದ್ಧ ಸ್ವಯಂ ಪ್ರೇರಿತ ಕೇಸ್

    ಇನ್ನೂ ಕೊಲೆಯ ದೃಶ್ಯ ಸಿಸಿಟಿವಿ ಕ್ಯಾಮೆರಾಯಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಳೇ ದ್ವೇಷಕ್ಕೆ ಹರಿದ ನೆತ್ತರು – ಜೊತೆಯಲ್ಲೇ ಕುಡಿದು ಸ್ನೇಹಿತನ ಕೊಲೆ

    ಹಳೇ ದ್ವೇಷಕ್ಕೆ ಹರಿದ ನೆತ್ತರು – ಜೊತೆಯಲ್ಲೇ ಕುಡಿದು ಸ್ನೇಹಿತನ ಕೊಲೆ

    ಬೆಂಗಳೂರು: ಹಳೆಯ ದ್ವೇಷಕ್ಕೆ ಮತ್ತೆ ನೆತ್ತರು ಹರಿದಿದೆ. ಜೊತೆಯಲ್ಲೇ ಕುಡಿದು ಸ್ನೇಹಿತನನ್ನೇ ಹತ್ಯೆಗೈದಿರುವ ಘಟನೆ ಬೆಂಗಳೂರಿನ (Bengaluru) ಸ್ಯಾಟಲೈಟ್‌ ಬಸ್‌ ನಿಲ್ದಾಣದ (Satellite Bus Stand) ಬಳಿಯ ಬಾರ್ ಒಳಗೆ ನಡೆದಿದೆ.

    25 ವರ್ಷದ ಯೋಗೆಂದ್ರ ಸಿಂಗ್ ಕೊಲೆಯಾದ ವ್ಯಕ್ತಿ. ಈತ ಕಸ್ತೂರಿ ನಗರದ ನಿವಾಸಿ. 28 ವರ್ಷದ ಉಮೇಶ್‌ ಕೊಲೆ ಆರೋಪಿಯಾಗಿದ್ದಾನೆ. ಸ್ಯಾಟಲೈಟ್ ನಿಲ್ದಾಣದ ಬಳಿಯ ಕಲಾ ವೈನ್ಸ್ ಬಾರ್ ಒಳಗೆ ಕೊಲೆ ನಡೆದಿದೆ. ಘಟನೆಗೆ ಹಳೆಯ ದ್ವೇಷ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಜೊತೆಯಲ್ಲೇ ಕುಡಿಯುತ್ತಿದ್ದ ಸ್ನೇಹಿತನಿಂದಲೇ ಘಟನೆ ನಡೆದಿದೆ. ಇದನ್ನೂ ಓದಿ: ಮುಂಬೈನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ

    ಸದ್ಯ ಕೊಲೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್‌ | ಆರೋಪಿ ಧರ್ಮರಾಜ್ ಕಶ್ಯಪ್‌ ಅಪ್ರಾಪ್ತನಲ್ಲ – ಮೂಳೆ ಪರೀಕ್ಷೆಯಲ್ಲಿ ಸಾಬೀತು

    ಈ ಕುರಿತು ಮಾಹಿತಿ ನೀಡಿರುವ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್, ರಾತ್ರಿ 10.45ರ ಸುಮಾರಿಗೆ ಘಟನೆ ನಡೆದಿದೆ. ಆರೋಪಿ ಮತ್ತು ಕೊಲೆಯಾದವನು ಪರಸ್ಪರ ಸ್ನೇಹಿತರು. ಇಬ್ಬರು ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಹಳೇ ಜಗಳದ ವಿಚಾರದ ತೆಗೆದು ಗಲಾಟೆಯಾಗಿದೆ. ಉಮೇಶ್‌ ಬಾಟಲ್‌ನಿಂದ ಕತ್ತಿಗೆ ಚುಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಆರೋಪಿಯನ್ನ ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ವಾಪಸ್‌ – ಹೊಸ ಸರ್ಕಾರ ರಚನೆಗೆ ಅಸ್ತು

  • ಎಣ್ಣೆ ಬೇಡ ಎಂದಿದ್ದಕ್ಕೆ ಸ್ನೇಹಿತನೇ ಮನೆಯ ಟೆರೇಸ್‌ನಿಂದ ತಳ್ಳಿದ!

    ಎಣ್ಣೆ ಬೇಡ ಎಂದಿದ್ದಕ್ಕೆ ಸ್ನೇಹಿತನೇ ಮನೆಯ ಟೆರೇಸ್‌ನಿಂದ ತಳ್ಳಿದ!

    – ಕೆಳಕ್ಕೆ ಬಿದ್ದ ನಂತ್ರ ಮನಬಂದಂತೆ ಗೆಳೆಯರಿಂದ ಥಳಿತ

    ಲಕ್ನೋ: ಮದ್ಯ (Alcohol) ಸೇವಿಸಲು ನಿರಾಕರಿಸಿದನೆಂದು ಆತನ ಸ್ನೇಹಿತನೇ ಮನೆಯ ಟೆರೇಸ್‌ನಿಂದ ಕೆಳಕ್ಕೆ ತಳ್ಳಿದ ಘಟನೆ ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ.

    ಗಾಯಾಳುವನ್ನು ರಂಜೀತ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಈತನನ್ನು ಲಕ್ನೋದ ರುಪ್ಪುರ್ ಖಾದ್ರಾದಲ್ಲಿರುವ ಅವರ ಮನೆಯ ಟೆರೇಸ್‌ನಿಂದ ಓರ್ವ ಕೆಳಕ್ಕೆ ತಳ್ಳಿದ್ದಾನೆ. ಅಲ್ಲದೇ ಕೆಳಗೆ ಬಿದ್ದ ಬಳಿಕ ಇತರ ಮೂವರು ಸೇರಿ ರಂಜೀತ್‌ಗೆ ಮನಬಂದಂತೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ; ಗೋವಾದಲ್ಲಿ ಕನ್ನಡ ನಿರ್ಮಾಪಕರ ಗಲಾಟೆ

    ಘಟನೆಯ ಸಂಪೂರ್ಣ ದೃಶ್ಯ ಮನೆಯ ಸುತ್ತಮುತ್ತ ಇರುವ ಕಟ್ಟಡದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋದಲ್ಲಿ ಯುವಕನೊಬ್ಬ ರಂಜೀತ್ ಸಿಂಗ್‌ನನ್ನು ಟೆರೇಸ್‌ನಿಂದ ತಳ್ಳುತ್ತಿರುವುದನ್ನು ತೋರಿಸುತ್ತದೆ. ಇನ್ನು ಇತರ ಮೂವರು ರಸ್ತೆಯಲ್ಲಿ ನಿಂತಿರುವುದನ್ನು ಕಾಣಬಹುದು. ಹಲ್ಲೆ ಅಲ್ಲಿಗೆ ನಿಲ್ಲುವುದಿಲ್ಲ. ರಂಜೀತ್‌ ಕೆಳಕ್ಕೆ ಬಿದ್ದ ಬಳಿಕ ಆತನ ಮೇಲೆ ಹಿಗ್ಗಾಮುಗ್ಗ ಥಳಿಸುವುದನ್ನು ಕೂಡ ಕಾಣಬಹುದಾಗಿದೆ.

    ಘಟನೆ ನಡೆದ ಕೂಡಲೇ ರಂಜೀತ್ ಸಿಂಗ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಡಿಸ್ಚಾರ್ಜ್ ಮಾಡಲಾಗಿದೆ. ಪ್ರಕರಣ ಸಂಬಂಧ ನಾಲ್ವರ ಪೈಕಿ ಮೂವರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ನಾಲ್ಕನೇ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

  • ವಿದ್ಯಾರ್ಥಿ ಮೇಲೆ ಹಲ್ಲೆಗೈದು ಗುದದ್ವಾರಕ್ಕೆ ಮರದ ಕೋಲು ತುರುಕಿದ ಸ್ನೇಹಿತರು!

    ವಿದ್ಯಾರ್ಥಿ ಮೇಲೆ ಹಲ್ಲೆಗೈದು ಗುದದ್ವಾರಕ್ಕೆ ಮರದ ಕೋಲು ತುರುಕಿದ ಸ್ನೇಹಿತರು!

    -ವಿಚಾರ ಬಯಲು ಮಾಡಿದ್ರೆ ಸಹೋದರಿಗೆ ತೊಂದರೆ ಬೆದರಿಕೆ

    ನವದೆಹಲಿ: ಎಂಟನೇ ತರಗತಿ ವಿದ್ಯಾರ್ಥಿಯೊಬ್ಬನ ಮೇಲೆ ಆತನ ಸ್ನೇಹಿತರೇ ಹಲ್ಲೆ ಮಾಡಿ ಬಳಿಕ ಅವರಲ್ಲಿ ಓರ್ವ ಆತನ ಗುದದ್ವಾರಕ್ಕೆ ಮರದ ಕೋಲನ್ನು ತುರುಕಿದ ವಿಲಕ್ಷಣ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (NewDelhi) ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆ ಮಾರ್ಚ್‌ 18 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

    ನಡೆದಿದ್ದೇನು..?: 14 ವರ್ಷದ ಬಾಲಕ ಶಾಲೆಯಲ್ಲಿ (School Boy) ತನ್ನ ಸ್ನೇಹಿತರ ಜೊತೆ ವಿಚಾರವೊಂದಕ್ಕೆ ಜಗಳವಾಡಿದ್ದಾನೆ. ಈ ಗಲಾಟೆಯು ತಾರಕಕ್ಕೇರಿದ್ದು, ನಾಲ್ವರು ಸ್ನೇಹಿತರು ಬಾಲಕನನ್ನು ಮೂಲೆಗೆ ತಳ್ಳಿ ಮನಬಂದಂತೆ ಥಳಿಸಿದ್ದಾರೆ. ಅಲ್ಲದೇ ನಾಲ್ವರಲ್ಲಿ ಓರ್ವ ಮರದ ತುಂಡಿನಿಂದ ಬಾಲಕನ ಗುದದ್ವಾರಕ್ಕೆ (Anal Region) ಹಾನಿ ಮಾಡಿದ್ದಾನೆ. ಈ ಸಂಬಂಧ ವಿದ್ಯಾರ್ಥಿಯ ಪೋಷಕರು, ಪೊಲೀಸರು ಮತ್ತು ಶಾಲಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಘಟನೆಯನ್ನು ಯಾರಿಗೂ ಹೇಳದಂತೆ ವಿದ್ಯಾರ್ಥಿಗೆ ಆತನ ಗೆಳೆಯರು ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ವಿಚಾರವನ್ನು ಬಯಲು ಮಾಡಿದರೆ ಅದೇ ಶಾಲೆಯಲ್ಲಿ ಓದುತ್ತಿರುವ ತನ್ನ ಸಹೋದರಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಬೆದರಿಸಿರುವುದಾಗಿ ವಿದ್ಯಾರ್ಥಿ ಹೇಳಿದ್ದಾನೆ.

    ದೂರಿನ ಪ್ರಕಾರ, ಮಾರ್ಚ್ 13 ರಂದು ತನ್ನ ಸಹಪಾಠಿಯೊಂದಿಗೆ ವಿದ್ಯಾರ್ಥಿ ಜಗಳವಾಡಿದ್ದಾನೆ. ಇದೇ ವಿಚಾರಕ್ಕೆ ಮಾರ್ಚ್ 18 ರಂದು ಆರೋಪಿಗಳು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ ಪ್ರತೀಕಾರದ ಭಯದಿಂದ ವಿದ್ಯಾರ್ಥಿ, ಮೊದಲು ಘಟನೆಯ ಬಗ್ಗೆ ಯಾರಿಗೂ ಹೇಳಲಿಲ್ಲ. ಇತ್ತ ಮಾರ್ಚ್ 20 ರಂದು ವಿದ್ಯಾರ್ಥಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ವಿದ್ಯಾರ್ಥಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿಲ್ಲ.

    ಮಾರ್ಚ್ 28 ರಂದು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಪರೇಷನ್ ಮಾಡಬೇಕು. ಯಾವುದೋ ಅಹಿತಕರ ಘಟನೆಗೆ ಮಗು ಬಲಿಯಾಗಿರಬಹುದು ಎಂದು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಆತನಿಗೆ ಆಪರೇಷನ್‌ ಕೂಡ ಮಾಡಲಾಗಿದೆ. ಏಪ್ರಿಲ್ 2 ರಂದು ವಿದ್ಯಾರ್ಥಿಗೆ ಪ್ರಜ್ಞೆ ಬಂದಾಗ, ಅವನು ತನ್ನ ಕುಟುಂಬಕ್ಕೆ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾನೆ. ನಂತರ ಪೊಲೀಸ್ ದೂರು ದಾಖಲಿಸಲಾಗಿದೆ.

    ವಿದ್ಯಾರ್ಥಿಯ ಗುದದ್ವಾರದಲ್ಲಿ ಮರದ ಕೋಲನ್ನು ತೂರಿಸಲು ಪ್ರಯತ್ನಿಸಿದ್ದರಿಂದ ಅಲ್ಲಿ ತೀವ್ರ ಗಾಯಗಳಾಗಿವೆ ಎಂದು ವೈದ್ಯಕೀಯ ವರದಿಯು ಬಹಿರಂಗಪಡಿಸಿತು. ಅಂತೆಯೇ ವಿದ್ಯಾರ್ಥಿ ಕೂಡ ಇದನ್ನು ಒಪ್ಪಿಕೊಂಡಿದ್ದಾನೆ. ತನ್ನ ಗೆಳೆಯ ಮರದ ಕೋಲನ್ನು ತುರುಕಿಸಲು ಪ್ರಯತ್ನಿಸಿದ್ದಾನೆ ಎಂದು ಬಾಯ್ಬಿಟ್ಟಿದ್ದಾನೆ. ಅಲ್ಲದೇ ಘಟನೆಯನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಲಾಗಿದೆ ಎಂದು ತಿಳಿಸಿದ್ದು, ಇದನ್ನು ಪೊಲೀಸರು ಎಫ್‌ಐಆರ್‌ ನಲ್ಲಿ ದಾಖಲಿಸಿಕೊಂಡಿದ್ದಾರೆ.

    ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 341 (ತಪ್ಪು ಸಂಯಮ), 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಮತ್ತು 377 (ಅಸ್ವಾಭಾವಿಕ ಅಪರಾಧಗಳು), ಜೊತೆಗೆ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು ಪೋಕ್ಸೊ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

  • ಅಸ್ವಾಭಾವಿಕ ಲೈಂಗಿಕ ಬೇಡಿಕೆ ನಿರಾಕರಿಸಿದ್ದಕ್ಕೆ ಸ್ನೇಹಿತನನ್ನೇ ಕೊಲೆಗೈದ 20ರ ಯುವಕ

    ಅಸ್ವಾಭಾವಿಕ ಲೈಂಗಿಕ ಬೇಡಿಕೆ ನಿರಾಕರಿಸಿದ್ದಕ್ಕೆ ಸ್ನೇಹಿತನನ್ನೇ ಕೊಲೆಗೈದ 20ರ ಯುವಕ

    ನವದೆಹಲಿ: 20 ವರ್ಷದ ಯುವಕ ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕತೆಗೆ ತಿರಸ್ಕರಿಸಿದ್ದಕ್ಕೆ ಸ್ನೇಹಿತನನ್ನೇ (Friend) ಕೊಲೆ ಮಾಡಿರುವ ಘಟನೆ ದೆಹಲಿಯ (Delhi)  ಡಿಡಿಎ ಪಾರ್ಕ್ ಮೋರಿ ಗೇಟ್ ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶ (Uttar Pradesh)  ಜಲೋನ್ ಜಿಲ್ಲೆಯ ರುದೂರಪುರ ಗ್ರಾಮದ ಪ್ರಮೋದ್ ಕುಮಾರ್ ಶುಕ್ಲಾ ಎಂದು ಗುರುತಿಸಲಾಗಿದೆ. ರಾಕೇಶ್ ತೋಮರ್ ಅವರ ಅಂಗಡಿಯಲ್ಲಿರುವ ಖೋಯಾ ಮಂಡಿಯಲ್ಲಿ ಪ್ರಮೋದ್ ಕೆಲಸ ಮಾಡುತ್ತಿದ್ದು, ಅಲ್ಲೇ ಪಕ್ಕದಲ್ಲಿದ್ದ ಮೋರಿ ಗೇಟ್‌ನಲ್ಲಿರುವ ರೈನ್ ಬಸೇರಾದಲ್ಲಿ ಗೆಳೆಯ ರಾಜೇಶ್ ಜೊತೆಗೆ ವಾಸಿಸುತ್ತಿದ್ದ. ಇದನ್ನೂ ಓದಿ: ನಮ್ಮ ಮಕ್ಕಳು ಲೆಹೆಂಗಾ ಧರಿಸಿ ಶಾಲೆಗೆ ಹೋಗ್ತಾರೆ: ಹಿಜಬ್‌ ವಿರುದ್ಧ ಬಿಜೆಪಿ ಶಾಸಕ ಹೇಳಿಕೆ

    ಪ್ರಮೋದ್ ಕೊಲೆಯ ಹಿಂದಿನ ದಿನ ಗೆಳೆಯರಿಬ್ಬರು ಜೊತೆಗೆ ಇದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಬಳಿಕ ಕಾಣೆಯಾಗಿದ್ದ ಆರೋಪಿ ರಾಜೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣದ ಬಗ್ಗೆ ಬಾಯಿಬಿಟ್ಟಿದ್ದಾನೆ. ಸ್ನೇಹಿತನೊಂದಿಗೆ ಅಸ್ವಾಭಾವಿಕ ಸಂಭೋಗ ನಡೆಸುವಂತೆ ಒತ್ತಡ ನೀಡಿದ್ದ. ಆದರೆ ಅಸ್ವಾಭಾವಿಕ ಲೈಂಗಿಕತೆಯನ್ನು ಪ್ರಮೋದ್ ನಿರಾಕರಿಸಿದ್ದಾನೆ. ಇದಕ್ಕೆ ಮತ್ತಷ್ಟು ಕೋಪಗೊಂಡ ರಾಜೇಶ್ ಜಗಳ ಮಾಡಿದ್ದಾನೆ. ನಂತರ ದಾರುಣವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿದ ನಂತರ ಪ್ರಮೋದ್ ಬಳಿ ಇದ್ದ 18,500 ರೂಪಾಯಿ ಮತ್ತು ಮೊಬೈಲ್ ಫೋನ್ ತೆಗೆದುಕೊಂಡು ಆರೋಪಿ ಪರಾರಿಯಾಗಿದ್ದ. ಇದನ್ನೂ ಓದಿ: ವಿಷ್ಣುವಿನ 11ನೇ ಅವತಾರವಾಗಲು ಮೋದಿ ಪ್ರಯತ್ನಿಸ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

    ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಅಕೌಂಟ್, ಇನ್ಶುರೆನ್ಸ್‌ಗೆ ನಾಮಿನಿ ಮಾಡದ್ದಕ್ಕೆ ಮ್ಯಾಜಿಸ್ಟ್ರೇಟ್ ಪತ್ನಿಯನ್ನೇ ಕೊಂದ ಪತಿ!

  • ಸ್ನೇಹಿತನ ಮೇಲೆ ಹಲ್ಲೆ – ಪ್ರಶ್ನೆ ಮಾಡಿದಕ್ಕೆ ಕುಚಿಕುಗಳಿಂದಲ್ಲೇ ಕೊಲೆ

    ಸ್ನೇಹಿತನ ಮೇಲೆ ಹಲ್ಲೆ – ಪ್ರಶ್ನೆ ಮಾಡಿದಕ್ಕೆ ಕುಚಿಕುಗಳಿಂದಲ್ಲೇ ಕೊಲೆ

    -ಪಾರ್ಟಿ ಮಾಡಲೇಂದು ಬಂದವನಿಗೆ ಚಟ್ಟ ಕಟ್ಟಿದ ಸ್ನೇಹಿತರು

    ಬೆಂಗಳೂರು: ಜಗಳವಾಡುತ್ತಿದ್ದ ಸ್ನೇಹಿತನನ್ನು ಪ್ರಶ್ನೆ ಮಾಡಿದಕ್ಕೆ ಇಟ್ಟಿಗೆಯಿಂದ ಹೊಡೆದು ಕುಚಿಕುಗಳೇ (Friends) ಕೊಲೆ (Murder) ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ದರ್ಶನ್ ಕೊಲೆಯಾದ ದುರ್ದೈವಿ. ಬಾರ್‌ನಲ್ಲಿ ಪಾರ್ಟಿ ಮಾಡುವ ವೇಳೆ ಸ್ನೇಹಿತರ ಮಧ್ಯೆ ಕಿರಿಕ್ ನಡೆದಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಚಂದ್ರಶೇಖರ್ ಅಲಿಯಾಸ್ ಪ್ರೀತಂ, ಯಶವಂತ,  ದರ್ಶನ್,  ಪ್ರಶಾಂತ್ ಮತ್ತು ಲಂಕೇಶ್ ಸೇರಿ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.  ಇದನ್ನೂ ಓದಿ: ಕಲ್ಕಾಜಿ ದೇಗುಲದಲ್ಲಿ ವೇದಿಕೆ ಕುಸಿದುಬಿದ್ದು ಮಹಿಳೆ ಸಾವು – 17 ಮಂದಿಗೆ ಗಾಯ

    ನಡೆದಿದ್ದೇನು?
    ಕೊಲೆಯಾದ ದರ್ಶನ್ ದೊಡ್ಡಮ್ಮ ತನ್ನ ತಾಯಿಗೆ ಹಣ ನೀಡುವಂತೆ 3,000 ರೂ.ಗಳನ್ನ ಕೊಟ್ಟಿದ್ದರು. ಆದ್ರೆ ದರ್ಶನ್ ಆ ಹಣವನ್ನ ತಾಯಿಗೆ ಕೊಡದೇ ಗೆಳೆಯರಾದ ನಿತಿನ್ ಹಾಗೂ ರಮೇಶ್ ಜೊತೆ ದರ್ಶನ್ ಪಾರ್ಟಿ ಮಾಡಲು ತೆಗೆದುಕೊಂಡು ಹೋಗಿದ್ದ. ಇದನ್ನೂ ಓದಿ: ಹನುಮಧ್ವಜ ಕೆಳಗಿಳಿಸಿದ ಪೊಲೀಸರು – ಸ್ಥಳೀಯರ ಮೇಲೆ ಲಾಠಿ ಚಾರ್ಜ್‌, ಕೆರಗೋಡು ಗ್ರಾಮ ಉದ್ವಿಗ್ನ

    ಜೊತೆಗೆ ಆರೋಪಿಗಳಾದ ಪ್ರೀತಂ, ಯಶವಂತ, ದರ್ಶನ್, ಪ್ರಶಾಂತ್, ಮತ್ತು ಲಂಕೇಶ್ ಕೂಡ ಪಾರ್ಟಿಗೆ ಬಂದಿದ್ದರು. ಆರೋಪಿಗಳು ಮತ್ತು ದರ್ಶನ್ ಟೀಂ ಎಲ್ಲರು ಸಹ ಸ್ನೇಹಿತರು. ಬಾರ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ನಿತಿನ್ ಹಾಗೂ ಪ್ರೀತಂ ನಡುವೆ ಜಗಳವಾಗಿದೆ. ಇದ್ದಾದ ಬಳಿಕ ದರ್ಶನ್ ಹಾಗೂ ಸ್ನೇಹಿತರು ರಮೇಶ್ ಅವರ ಮನೆ ಬಳಿ ಹೋಗಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಗೆ ಕಿರುಕುಳ; ಅನ್ಯಕೋಮಿನ ಯುವಕ ಅರೆಸ್ಟ್ – ಹಿಂದೂ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ಮುತ್ತಿಗೆ

    ನಂತರ ರಮೇಶ್ ಮನೆ ಬಳಿ ಪ್ರೀತಂ ಅಂಡ್ ಗ್ಯಾಂಗ್ ಕೂಡ ಹೋಗಿದೆ. ಈ ವೇಳೆ ನಿತಿನ್ ಮತ್ತು ಪ್ರೀತಂ ನಡುವೆ ಜಗಳ ಶುರುವಾಗಿದೆ. ಜಗಳದಲ್ಲಿ ಪ್ರೀತಂ, ನಿತಿನ್‌ಗೆ ಹೊಡೆದಿದ್ದಾನೆ. ಇದನ್ನು ಕಂಡ ದರ್ಶನ್ ಮಧ್ಯಪ್ರವೇಶಿಸಿ, ನಿತಿನ್‌ಗೆ ಹೊಡೆದಿದ್ದನ್ನು ಪ್ರಶ್ನೆ ಮಾಡಿದ್ದಾನೆ. ಇದರಿಂದ ಇನ್ನಷ್ಟು ಕೋಪಗೊಂಡ ಪ್ರೀತಂ ಅಲ್ಲೇ ಇದ್ದ ಹಾಲೋಬ್ಲಾಕ್ ಇಟ್ಟಿಗೆಯಿಂದ ದರ್ಶನ್‌ಗೆ ಹೊಡೆದಿದ್ದಾನೆ. ಇದರಿಂದ ದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಧ್ಯರಾತ್ರಿ ಸುಮಾರು 2.30ರ ವೇಳೆಗೆ ಘಟನೆ ನಡೆದಿದೆ. ಇದನ್ನೂ ಓದಿ: Breaking: ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ – ಮೈತ್ರಿ ಸರ್ಕಾರ ಪತನ

    ಈ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪಕ್ಷಕ್ಕೆ ದುಡಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೂ ಅಧಿಕಾರ – ಡಿಕೆ ಶಿವಕುಮಾರ್