Tag: ಸ್ನೇಹಿತರ

  • ವೀಕೆಂಡ್ ಟ್ರಿಪ್‍ಗೆ ಬಂದ ಮೂವರಲ್ಲಿ ಸ್ನೇಹಿತನನ್ನ ಒಬ್ಬಂಟಿ ಮಾಡಿ ಹೋದ್ರು

    ವೀಕೆಂಡ್ ಟ್ರಿಪ್‍ಗೆ ಬಂದ ಮೂವರಲ್ಲಿ ಸ್ನೇಹಿತನನ್ನ ಒಬ್ಬಂಟಿ ಮಾಡಿ ಹೋದ್ರು

    – ಜಾಲಿ ರೈಡ್ ಮೂಡ್‍ನಲ್ಲಿದ್ದ ಇಬ್ಬರು ಅಪಘಾತಕ್ಕೆ ಬಲಿ

    ಮಡಿಕೇರಿ: ಕೆಎಸ್ಆರ್‌ಟಿಸಿ ಬಸ್‍ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವೀಕೆಂಡ್ ಟ್ರಿಪ್‍ಗೆ ಬಂದಿದ್ದ ಮೂವರಲ್ಲಿ ಇಬ್ಬರು ಸ್ನೇಹಿತರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ ಕೊಯಿನಾಡು ಸಮೀಪದ ದೇವರ ಕೊಲ್ಲಿಯಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ಹರ್ನಾಬ್ (30) ಹಾಗೂ ಪಶ್ಚಿಮ ಬಂಗಾಳ ಮೂಲದ ನವೀನ್ (29) ಮೃತ ಸ್ನೇಹಿತರು. ಮೂವರು ಸ್ನೇಹಿತರು ವೀಕೆಂಡ್‍ನಲ್ಲಿ ಟ್ರಿಪ್‍ಗೆಂದು ಬಂದಿದ್ದರು. ಶುಕ್ರವಾರ ತುಮಕೂರಿನಿಂದ ಕೂಡಗಿಗೆ ಗೂಗಲ್ ಮ್ಯಾಪ್ ಹಾಕಿಕೊಂಡು ಪ್ರಯಾಣ ಬೆಳೆಸಿದ್ದರು.

    ಪ್ರವಾಸಕ್ಕೆಂದು ಬಂದಿದ್ದ ಮೂವರಲ್ಲಿ ಇಬ್ಬರು ಒಂದು ಬೈಕಿನಲ್ಲಿ ಮತ್ತೊಬ್ಬ ಸ್ನೇಹಿತ ಮತ್ತೊಂದು ಬೈಕಿನಲ್ಲಿ ಅವರನ್ನು ಪಾಲೋ ಮಾಡುತ್ತಿದ್ದನು. ಆದರೆ ಇಬ್ಬರು ಸ್ನೇಹಿತರಿದ್ದ ಬೈಕ್ ಮಡಿಕೇರಿ ಕಡೆಯಿಂದ ಸಿದ್ದಾಪುರ-ಮಂಗಳೂರು ಕಡೆಗೆ ಬರುತ್ತಿದ್ದ ಬಸ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಕೊಯಿನಾಡು ಸಮೀಪದ ದೇವರ ಕೊಲ್ಲಿನಲ್ಲಿ ತಿರುವಿನಲ್ಲಿ ವೇಗವಾಗಿ ಬಂದ ಬಸ್ ರಸ್ತೆ ಪಕ್ಕದಲ್ಲೇ ಬಿದ್ದಿದ್ದ ಮರವನ್ನು ತಪ್ಪಿಸಲು ಬಲಕ್ಕೆ ಬಂದಿದೆ. ಹೀಗಾಗಿ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆಗಳ ತನಿಖೆ ನಂತರ ತಪ್ಪು ಯಾರದ್ದು ಎಂದು ಗೊತ್ತಾಗಬೇಕಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.