Tag: ಸ್ನೇಹಾ

  • ಮದುವೆಯಾಗಿ 12 ವರ್ಷಗಳ ನಂತರ ಲವ್‌ ಬ್ರೇಕಪ್‌ ಬಗ್ಗೆ ಬಾಯ್ಬಿಟ್ಟ ‘ರವಿಶಾಸ್ತ್ರಿ’ ನಟಿ ಸ್ನೇಹಾ

    ಮದುವೆಯಾಗಿ 12 ವರ್ಷಗಳ ನಂತರ ಲವ್‌ ಬ್ರೇಕಪ್‌ ಬಗ್ಗೆ ಬಾಯ್ಬಿಟ್ಟ ‘ರವಿಶಾಸ್ತ್ರಿ’ ನಟಿ ಸ್ನೇಹಾ

    ನ್ನಡದ ರವಿಶಾಸ್ತ್ರಿ, ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿರುವ ತಮಿಳು ನಟಿ ಸ್ನೇಹಾ (Actress Sneha) ಇದೀಗ ತಮ್ಮ ದಾಂಪತ್ಯದ (Wedding) ಬಗ್ಗೆ ಮಾತನಾಡಿದ್ದಾರೆ. ಕೆಲ ತಿಂಗಳುಗಳಿಂದ ಸ್ನೇಹಾ ದಾಂಪತ್ಯದಲ್ಲಿ ಬಿರುಕಾಗಿದೆ. ಡಿವೋರ್ಸ್‌ಗೆ ಸ್ನೇಹಾ- ಪ್ರಸನ್ನ ದಂಪತಿ ಸಜ್ಜಾಗಿದ್ದಾರೆ ಎಂದೆಲ್ಲಾ ಸುದ್ದಿ ಹಬ್ಬಿತ್ತು. ಡಿವೋರ್ಸ್ (Divorce) ಸುದ್ದಿ ಸುಳ್ಳು ನಾವು ಚೆನ್ನಾಗಿದ್ದೇವೆ ಎಂದು ನಟಿ ಉತ್ತರ ನೀಡಿದ್ದಾರೆ. ದಾಂಪತ್ಯದ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

    ಪ್ರೀತಿಯಲ್ಲಿ (Love) ಪೊಸೆಸಿವ್‌ನೆಸ್ ಬೇರೆ. ನಂಬಿಕೆ ಬೇರೆ. ಹೆಚ್ಚು ಪೊಸೆಸಿವ್ ಆಗಿಬಿಟ್ಟರೆ ನಂಬಿಕೆ ಬ್ಯಾಲೆನ್ಸ್ ಮಾಡುವುದು ಕಷ್ಟ. ಮತ್ತೊಬ್ಬರಿಗೆ ಅದು ಅರ್ಥವಾಗುವುದಿಲ್ಲ. ಎಲ್ಲಿ ಹೋಗುತ್ತಿದ್ದೀರಾ, ಏನು ಮಾಡುತ್ತಿದ್ದೀರಾ? ಎಂದು ಕೇಳುವುದು ಕೂಡ ಪೊಸೆಸಿವ್‌ನೆಸ್ ಇರುಬಹುದು, ನಂಬಿಕೆಯೂ ಆಗಿರಬಹುದು. ಒಬ್ಬರನ್ನು ಇನ್ನೊಬ್ಬರು ಅರ್ಥಮಾಡಿಕೊಂಡರೆ ಸಮಸ್ಯೆ ಆಗಲ್ಲ ಎಂದು ನಟಿ ಸ್ನೇಹಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:ಅಕ್ಷಯ್ ಕುಮಾರ್ ಬಳಿಕ ‘ಕಣ್ಣಪ್ಪ’ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್

    ದೈನಂದಿನ ಜೀವನದಲ್ಲಿ ನಾವು ಏನು ಮಾಡುತ್ತಿದ್ದೇನೆ. ಎಲ್ಲಿ ಹೋಗುತ್ತಿದ್ದೇನೆ. ಎಷ್ಟು ಹೊತ್ತಿಗೆ ಬರುತ್ತೇನೆ ಎನ್ನುವುದನ್ನು ಒಬ್ಬರು ಕೇಳುವುದಕ್ಕೆ ಮುನ್ನ ಇನ್ನೊಬ್ಬರು ಹೇಳಬೇಕು. ಅಲ್ಲಿಗೆ ಹೋದ ಮೇಲೂ ಸಮಯ ಇದ್ದರೆ ಒಮ್ಮೆ ಫೋನ್ ಮಾಡಿ ಮಾತನಾಡಿ. ಊಟ ಆಯ್ತಾ? ಏನು ಮಾಡುತ್ತಿದ್ದೀಯಾ ಅಂತ ಕೇಳಬೇಕು. ಇಂತಹ ವಿಷಯಗಳೇ ಇಬ್ಬರಲ್ಲಿ ನಂಬಿಕೆ ಹೆಚ್ಚಿಸುತ್ತದೆ. ಆರಂಭದಲ್ಲಿ ನಾನು ಸ್ವಲ್ಪ ಪೊಸೆಸಿವ್ ಆಗಿದ್ದೆ. ಹಾಗಂತ ನಂಬಿಕೆ ಇರಲಿಲ್ಲ ಅಂತ ಅಲ್ಲ. ಮದುವೆ ಆದ ಮೇಲೆ ಜೀವನ ನಮಗೂ ಬೋರ್ ಎನಿಸಿತ್ತು. ನಾನು ಸಾಕಷ್ಟು ಜಗಳ ಆಡಿದ್ದೇವೆ. ಜಗಳದ ಬಳಿಕ ಇಬ್ಬರೂ ಡೇಟ್ ನೈಟ್ ಹೋಗುತ್ತೇವೆ. ಆ ಸಮಯದಲ್ಲಿ ಮಾತನಾಡಿ, ಎಲ್ಲಾ ಬಗೆಹರಿಸಿಕೊಳ್ಳುತ್ತೇವೆ. ಬಳಿಕ ಮತ್ತೆ ಜೀವನ ಹೀಗೆ ಮುಂದುವರೆಯುತ್ತದೆ. ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಬೇಕು. ಆಗ ಸಮಸ್ಯೆ ಇರುವುದಿಲ್ಲ ಎಂದು ವೈವಾಹಿಕ ಬದುಕಿನ ಬಗ್ಗೆ ನಟಿ ಸಲಹೆ ನೀಡಿದ್ದಾರೆ.

    ಸ್ನೇಹಾ ಮೊದಲ ಬಾರಿಗೆ ತಮ್ಮ ಲವ್ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ಪ್ರಸನ್ನ(Actor Prasanna) ಕೈ ಹಿಡಿಯುವ ಮುನ್ನ ನನಗೆ ಒಂದು ಲವ್ ಬ್ರೇಕಪ್ (Love Breakup) ಆಗಿತ್ತು. ಆ ಸಮಯದಲ್ಲಿ ನಾನು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದೆ. ಒಂದರ್ಥದಲ್ಲಿ ಖಿನ್ನತೆಗೆ ಒಳಗಾಗಿದ್ದೆ. ಆ ಇಡೀ ವರ್ಷ ನನಗೆ ಬಹಳ ಕೆಟ್ಟದಾಗಿತ್ತು. ಹೊರಗೆ ಸಾಕಷ್ಟು ಜನ ಏನೇನೋ ಮಾತನಾಡುತ್ತಿದ್ದರು. ಈ ಬಗ್ಗೆ ಪೋಷಕರು ನನ್ನ ಜೊತೆ ಚರ್ಚಿಸಿ ಸಂತೈಸಿದ್ದರು. ಅದರ ನಡುವೆ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ವಿಶೇಷ ಅಂದರೆ, ಅದೇ ವರ್ಷ ನನ್ನ ನಟನೆಗೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಆ ವರ್ಷವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ತಮ್ಮ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ನಟಿ ತೆರೆ ಎಳೆದಿದ್ದಾರೆ.

  • Thalapathy 68: ‘ಲಿಯೋ’ ರಿಲೀಸ್ ಬೆನ್ನಲ್ಲೇ ಹೊಸ ಚಿತ್ರದಲ್ಲಿ ವಿಜಯ್ ಬ್ಯುಸಿ

    Thalapathy 68: ‘ಲಿಯೋ’ ರಿಲೀಸ್ ಬೆನ್ನಲ್ಲೇ ಹೊಸ ಚಿತ್ರದಲ್ಲಿ ವಿಜಯ್ ಬ್ಯುಸಿ

    ಳಪತಿ ವಿಜಯ್ (Thalapathy Vijay) ನಟನೆಯ ‘ಲಿಯೋ’ (Leo) ಸಿನಿಮಾ ಅ.19ಕ್ಕೆ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಹೊಸ ಸಿನಿಮಾದ ಮುಹೂರ್ತ ಕಾರ್ಯದಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ. ದಸರಾ ಹಬ್ಬದಂದು ಹೊಸ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಇದನ್ನೂ ಓದಿ:‘ಜೇಮ್ಸ್’ ನಿರ್ದೇಶಕನ ಜೊತೆ ಕೈಜೋಡಿಸಿದ ಅಣ್ಣಾವ್ರ ಮೊಮ್ಮಗ ಧೀರೆನ್

    ಕಾಲಿವುಡ್‌ನಲ್ಲಿ (Kollywood) ವಿಜಯ್‌ಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಅವರ ಸಿನಿಮಾಗಾಗಿಯೇ ಕಾದು ಕೂರುವ ಅಭಿಮಾನಿಗಳಿದ್ದಾರೆ. ಸದ್ಯ ‘ಲಿಯೋ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡುತ್ತಿದೆ. ಇದರ ನಡುವೆ ಹೊಸ ಸಿನಿಮಾದತ್ತ ವಿಜಯ್ ಮುಖ ಮಾಡಿದ್ದಾರೆ.

    ವಿಜಯ್ 68ನೇ ಚಿತ್ರಕ್ಕೆ ವೆಂಕಟ್ ಪ್ರಭು (Venkat Prabhu) ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ದಸರಾ ಹಬ್ಬದ (ಅ.24) ಶುಭ ಸಂದರ್ಭದಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಚಿತ್ರದ ದೊಡ್ಡ ತಾರಾ ಬಳಗ ಈ ಸಮಾರಂಭದಲ್ಲಿ ಭಾಗಿಯಾಗಿದೆ.

    ದಳಪತಿ ವಿಜಯ್ ಜೊತೆ ಬಹುಭಾಷಾ ನಟ ಕನ್ನಡಿಗ ಪ್ರಭುದೇವ (Prabhudeva), ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ, ಜಯರಾಮ್, ಯೋಗಿ ಬಾಬು (Yogi Babu) ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಇದೀಗ ಮುಹೂರ್ತ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದಾರೆ.

    ‘ಲಿಯೋ’ (Leo) ಬಳಿಕ 68ನೇ ಚಿತ್ರಕ್ಕೆ ವಿಜಯ್ & ಟೀಂ ಚಾಲನೆ ನೀಡಿರೋದು ದಳಪತಿ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಸಿನಿಮಾ ಬಗೆಗಿನ ಹೆಚ್ಚಿನ ಅಪ್‌ಡೇಟ್‌ಗಾಗಿ ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಹುಕಾಲದ ಗೆಳತಿ ಸ್ನೇಹಾ ಜೊತೆ ‘ಗುಳ್ಟು’ ನಿರ್ದೇಶಕನ ಎಂಗೇಜ್‌ಮೆಂಟ್

    ಬಹುಕಾಲದ ಗೆಳತಿ ಸ್ನೇಹಾ ಜೊತೆ ‘ಗುಳ್ಟು’ ನಿರ್ದೇಶಕನ ಎಂಗೇಜ್‌ಮೆಂಟ್

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ‘ಗುಳ್ಟು’ (Gultoo Film) ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಜನಾರ್ಧನ್ ಚಿಕ್ಕಣ್ಣ ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಬಹುಕಾಲದ ಗೆಳತಿ ಸ್ನೇಹಾ ಜೊತೆ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ (Janardhan Chikanna) ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಜೊತೆ ಜೆಕೆ ಎಂಗೇಜ್

    ನವೀನ್ ಶಂಕರ್- ಸೋನು ಗೌಡ ನಟನೆಯ ‘ಗುಳ್ಟು’ ಸಿನಿಮಾ ಜನಾರ್ಧನ್ ಚಿಕ್ಕಣ್ಣ ಪರಿಕಲ್ಪನೆಯಲ್ಲಿ ಅದ್ಭುತವಾಗಿ ಮೂಡಿ ಬಂದಿತ್ತು. ಕಥೆಗೆ ಕಲಾವಿದರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

    ಇದೀಗ ಹಲವು ವರ್ಷಗಳ ತಮ್ಮ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದಾರೆ. ಸ್ನೇಹಾ (Sneha) ಜೊತೆ ಅಧಿಕೃತವಾಗಿ ಎಂಗೇಜ್ (Engagement) ಆಗಿದ್ದಾರೆ. ಈ ಕುರಿತು ನಿರ್ದೇಶಕ ಜನಾರ್ಧನ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಿಳಿಸಿದ್ದಾರೆ. ಸದ್ಯದಲ್ಲೇ ಜನಾರ್ಧನ್- ಸ್ನೇಹಾ ಜೋಡಿ ದಾಂಪತ್ಯ ಬದುಕಿಗೆ ಕಾಲಿಡಲಿದ್ದಾರೆ. ನಟ ನವೀನ್, ಸೋನು ಗೌಡ, ಸಿಂಪಲ್ ಸುನಿ ಸೇರಿದಂತೆ ಹಲವರು ಈ ಜೋಡಿಗೆ ಶುಭಹಾರೈಸಿದ್ದಾರೆ.

  • ‘ವಿಕ್ರಮಚಿತ್ರ’ಕ್ಕೆ ಮುಹೂರ್ತ

    ‘ವಿಕ್ರಮಚಿತ್ರ’ಕ್ಕೆ ಮುಹೂರ್ತ

    ಬೆಂಗಳೂರು: ಜನರು ಅನಿರೀಕ್ಷಿತ ಕಥೆಗಳನ್ನು ಇಷ್ಟಪಡುತ್ತಾರೆಂದು ತಿಳಿದಿರುವ ಮಂಡ್ಯದ ಶ್ರೀಯುತ್ ‘ವಿಕ್ರಮಚಿತ್ರ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಇದರೊಂದಿಗೆ ಕಾಲೇಜು ಹುಡುಗನ ಪಾತ್ರದಲ್ಲಿ ನಾಯಕನಾಗೂ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಕುರಿತು ಹೇಳುವುದಾದರೆ ಎಂಬಿಎ ಮುಗಿಸಿ ಉತ್ತಮ ಹುದ್ದೆಯಲ್ಲಿದ್ದರೂ ಬಣ್ಣದ ವ್ಯಾಮೋಹದಿಂದ ಕೆಲಸಕ್ಕೆ ಬೆನ್ನು ತೋರಿಸಿ ಪೂರ್ಣಪ್ರಮಾಣವಾಗಿ ಇದರಲ್ಲಿ ತೊಡಗಿಕೊಂಡಿದ್ದಾರೆ. ಕರ್ವ ಚಿತ್ರದಲ್ಲಿ ಕಾರ್ಯನಿರ್ವಹಿಸಿರುವ ಶ್ರೀಯುತ್ ಹಲವರ ಬಳಿ ಅನುಭವ ಪಡೆದುಕೊಂಡಿದ್ದಾರೆ. ಧಾರವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ವಿಕ್ರಮ-ಬೇತಾಳದಲ್ಲಿ ಪರಿಸ್ಥಿತಿಗಳು ಒದಗಿಬಂದು ಪ್ರಶ್ನೆ ಮಾಡುತ್ತಿತ್ತು. ಅದರಂತೆ ಸಿನಿಮಾದ ಕತೆಯಲ್ಲಿ ಮನುಷ್ಯನಾದವನಿಗೆ ನಾನಾ ರೀತಿಯ ಪರಿಸ್ಥಿತಿಗಳು ಆವರಿಸಿಕೊಳ್ಳುತ್ತದೆ. ಇದನ್ನೆಲ್ಲಾ ಭೇದಿಸಿಕೊಂಡು ಸಫಲನಾಗುವನೇ ವಿಕ್ರಮನಾಗುತ್ತಾನೆ. ಅಂದರೆ ಕಾಲೇಜಿನಲ್ಲಿ ಹುಡುಗಿಯೊಬ್ಬಳು ಕಾಣೆಯಾಗುತ್ತಾಳೆ. ಇದನ್ನು ತನಿಖೆ ಮಾಡಲು ಹೋಗುವಾಗ ಒಂದಷ್ಟು ಸತ್ಯಾಂಶಗಳು ಹೊರಬರುತ್ತದೆ. ಕ್ಲೈಮಾಕ್ಸ್ ನಲ್ಲಿ ಈತ ಅಂದುಕೊಂಡಿದ್ದ ಸತ್ಯಗಳು ಸುಳ್ಳಾಗಿ ಕಂಡುಬರುತ್ತದೆ ಎನ್ನುವುದು ಕಥಾ ಸಾರಾಂಶ.

    ಶಿಲ್ಪ ಮತ್ತು ಸ್ನೇಹಾ ನಾಯಕಿಯರು. ‘ಚೌಕಟ್ಟು’ ಚಿತ್ರ ನಿರ್ಮಿಸಿರುವ ಮಂಜುನಾಥ್ ನಿರ್ಮಾಣದ ಎರಡನೇ ಚಿತ್ರವಿದು. ನಿರ್ಮಾಣದ ಜೊತೆಗೆ ಮಂಜುನಾಥ್ ಈ ಚಿತ್ರದಲ್ಲಿ ಬರುವ ನಾಲ್ಕು ಹುಡುಗರ ಪೈಕಿ ಒಬ್ಬರಾಗಿ ಕಾಣಿಸಿಕೊಳ್ಳಲಿದ್ದಾರೆ. ರವಿಶಂಕರ್ ಅವರು ಈ ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ಇವರೊಂದಿಗೆ ರಂಗಭೂಮಿ, ಕಿರುತೆರೆ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.

    ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡುವುದರೊಂದಿಗೆ ನಿರ್ಮಾಣದಲ್ಲೂ ಪಾಲುದಾರರಾಗಿದ್ದಾರೆ. ಮೊಂಟಿ ಭರತ್ ಸಂಭಾಷಣೆ, ಛಾಯಾಗ್ರಹಣ ಕಿಟ್ಟಿ ಕೌಶಿಕ್, ಸಂಕಲನ ಮೋಹನ್‍ರಾಜ್, ಸಾಹಸ ಜೋನಿ ರಾಮದೇವ್ ಅವರದಾಗಿದೆ. ಮಾತೃ ಛಾಯ ಕ್ರಿಯೇಷನ್ಸ್ ಹಾಗೂ ಜಾಹಸ್ ಕ್ರಿಯೇಟಿವ್ ಇನ್ ಮೂಲಕ ಸಿದ್ಧಗೊಳ್ಳುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಕರ್ನಾಟಕ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್.ಎಂ.ಸುರೇಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.

  • ಆಡಿಯೋ ಜೊತೆಗೆ ರಿಲೀಸ್ ಆಯ್ತು ಮುನಿರತ್ನ ಕುರುಕ್ಷೇತ್ರ ಟ್ರೈಲರ್!

    ಆಡಿಯೋ ಜೊತೆಗೆ ರಿಲೀಸ್ ಆಯ್ತು ಮುನಿರತ್ನ ಕುರುಕ್ಷೇತ್ರ ಟ್ರೈಲರ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಸೇರಿದಂತೆ ಪ್ರೇಕ್ಷಕರೆಲ್ಲ ಕುರುಕ್ಷೇತ್ರದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆಗಾಗಿ ಬಹು ದಿನಗಳಿಂದ ಕಾದು ಕೂತಿದ್ದರು. ಈ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋದಾಗೆಲ್ಲ ಆವರಿಸಿಕೊಳ್ಳುತ್ತಿದ್ದ ನಿರಾಸೆಯೂ, ದಿನ ಕಳೆಯುತ್ತಲೇ ನಿರೀಕ್ಷೆಯಾಗಿ ಪುಟಿದೇಳುತ್ತಿದ್ದದ್ದು ಕುರುಕ್ಷೇತ್ರದತ್ತ ಎಂಥಾ ಕ್ರೇಜ್ ಇದೆ ಎಂಬುದರ ಸ್ಪಷ್ಟ ಸೂಚನೆ ಎಂದರೂ ತಪ್ಪೇನಿಲ್ಲ. ಆದರೀಗ ಅಂಥಾ ನಿರೀಕ್ಷೆಗಳೆಲ್ಲ ತಣಿದಿವೆ. ಆಡಿಯೋ ಜೊತೆಗೆ ಕುರುಕ್ಷೇತ್ರದ ಕನ್ನಡಿಯಂತಿರೋ ಟ್ರೈಲರ್ ಕೂಡಾ ಬಿಡುಗಡೆಯಾಗಿದೆ.

    ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬಂದಿರೋ ಮಹತ್ವಾಕಾಂಕ್ಷೆಯ ಚಿತ್ರ ಮುನಿರತ್ನ ಕುರುಕ್ಷೇತ್ರ. ಇದೀಗ ಕೋರಮಂಗಲದ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದ ಮೂಲಕ ಪ್ರೇಕ್ಷಕರಿಗೆ ಬೋನಸ್ ಎಂಬಂತೆ ಟ್ರೈಲರ್ ಕೂಡಾ ಬಿಡುಗಡೆಯಾಗಿದೆ. ಕುರುಕ್ಷೇತ್ರದ ಬಗ್ಗೆ ಯಾವ ಮಟ್ಟಕ್ಕೆ ಕ್ರೇಜ್ ಇದೆ ಎಂಬುದಕ್ಕೆ ಈ ಟ್ರೈಲರ್ ಬಿಡುಗಡೆಯಾಗಿ ಕ್ಷಣಾರ್ಧದಲ್ಲಿಯೇ ಯೂಟ್ಯೂಬ್‍ನಲ್ಲಿ ಸಿಕ್ಕ ವೀಕ್ಷಣೆಯೇ ಸಾಕ್ಷಿ. 24 ಗಂಟೆ ಕಳೆಯುವ ಮುನ್ನವೇ ಈ ಟ್ರೈಲರ್ ವೀಕ್ಷಣೆ 10 ಲಕ್ಷದ ಗಡಿಯತ್ತ ದಾಪುಗಾಲಿಟ್ಟಿದ್ದು, ಆ ಸಂಖ್ಯೆ ವೇಗವಾಗಿ ಏರಿಕೊಳ್ಳುತ್ತಲೇ ಇದೆ.

    ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲಿಯೂ ತಯಾರಾಗಿರೋ ಕುರುಕ್ಷೇತ್ರದ ಬಿಡುಗಡೆಗೀಗ ದಿನಗಣನೆ ಆರಂಭವಾಗಿದೆ. ಇದೇ ಹೊತ್ತಿನಲ್ಲಿ ಬಿಡುಗಡೆಯಾಗಿರೋ ಈ ಟ್ರೈಲರ್ ದರ್ಶನ್ ದುಯೋರ್ಧನನಾಗಿ ಗದೆ ಹಿಡಿದು ಅಬ್ಬರಿಸೋದೂ ಸೇರಿದಂತೆ ಒಂದಷ್ಟು ಪಾತ್ರಗಳ ಖದರಿನ ಝಲಕ್‍ಗಳನ್ನು ಅನಾವರಣಗೊಳಿಸಿದೆ. ಇದನ್ನು ಕಂಡು ಪ್ರೇಕ್ಷಕರೂ ಕೂಡಾ ಖುಷಿಗೊಂಡಿದ್ದಾರೆ. ಈ ಮೂಲಕ ಆಡಿಯೋ ಬಿಡುಗಡೆಯ ಘಳಿಗೆಯಲ್ಲಿಯೇ ಟ್ರೈಲರ್ ಮೂಲಕವೂ ಕುರುಕ್ಷೇತ್ರ ಭಾರೀ ಸದ್ದು ಶುರುವಿಟ್ಟಿದೆ.

    ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಐವತ್ತನೇ ಚಿತ್ರ. ಈ ಕಾರಣದಿಂದಲೇ ದರ್ಶನ್ ಅಭಿಮಾನಿಗಳೂ ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಗಮನವನ್ನೂ ತನ್ನತ್ತ ಸೆಳೆದುಕೊಂಡಿರೋ ಕುರುಕ್ಷೇತ್ರ ನಿರ್ಮಾಪಕ ಮುನಿರತ್ನ ತೆಗೆದುಕೊಂಡಿರೋ ದೊಡ್ಡ ಮಟ್ಟದ ಚಾಲೆಂಜ್. ಅದನ್ನವರು ಅಷ್ಟೇ ಶ್ರದ್ಧೆಯಿಂದಲೂ ರೂಪಿಸಿದ್ದಾರೆ. ಅಷ್ಟೇ ದೊಡ್ಡ ತಾರಾಗಣವನ್ನೂ ಕುರುಕ್ಷೇತ್ರ ಹೊಂದಿದೆ. ಅಂಬರೀಷ್, ಕ್ರೇಜಿಸ್ಟಾರ್ ರವಿಚಂದ್ರನ್, ಶಶಿ ಕುಮಾರ್, ಅರ್ಜುನ್ ಸರ್ಜಾ, ಸೋನು ಸೂದ್, ಭಾರತಿ ವಿಷ್ಣುವರ್ಧನ್, ಸ್ನೇಹಾ, ಹರಿಪ್ರಿಯಾ, ಮೇಘನಾ ರಾಜ್, ನಿಖಿಲ್ ಸೇರಿದಂತೆ ಬಹುದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

    https://youtu.be/i1F0OpKaXOg