Tag: ಸ್ನೇಹಮಯಿ ಕೃಷ್ಣ

  • MUDA Scam | ಜೆಡಿಎಸ್‌ ಶಾಸಕ ಜಿಟಿಡಿ ವಿರುದ್ಧವೂ ಲೋಕಾಯುಕ್ತಕ್ಕೆ ದೂರು – 2 ಸೈಟು ಕಿಕ್‌ಬ್ಯಾಕ್‌ ಆರೋಪ

    MUDA Scam | ಜೆಡಿಎಸ್‌ ಶಾಸಕ ಜಿಟಿಡಿ ವಿರುದ್ಧವೂ ಲೋಕಾಯುಕ್ತಕ್ಕೆ ದೂರು – 2 ಸೈಟು ಕಿಕ್‌ಬ್ಯಾಕ್‌ ಆರೋಪ

    ಮೈಸೂರು: ಮುಡಾದಲ್ಲಿ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) 50:50 ಸೈಟು ಹಂಚಿಕೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna), ಸಿಎಂ ಬಳಿಕ ಮತ್ತೊಬ್ಬ ರಾಜಕಾರಣಿ ವಿರುದ್ಧ ದೂರು ನೀಡಿದ್ದಾರೆ.

    ಹೌದು. 50:50 ನಿವೇಶನ ಪಡೆಯುವಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ (GT Devegowda) ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ, ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸರಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ (Siddaramaiah) ಪ್ರಕರಣಕ್ಕೆ ಸೇರಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮದ್ವೆಯಾಗುವಂತೆ ಒತ್ತಡ – ಲಿವ್‌ ಇನ್‌ ಗೆಳತಿ ಕೊಂದು ಶವವನ್ನ 8 ತಿಂಗಳು ಫ್ರಿಡ್ಜ್‌ನಲ್ಲಿಟ್ಟಿದ್ದ ಸೈಕೋ

    ಕೋರ್ಟ್‌ನಲ್ಲಿ ವ್ಯಾಜ್ಯ ಇದ್ದ ಭೂಮಿಗೆ ಅಕ್ರಮವಾಗಿ 50:50 ಪರಿಹಾರ ಕೊಡಿಸಲಾಗಿದೆ. ಜಿ.ಟಿ ದೇವೇಗೌಡರ ಪ್ರಭಾವ ಬಳಸಿ ಚೌಡಯ್ಯ ಎಂಬವರ ಹೆಸರಿಗೆ 44,736 ಚದರ ಅಡಿ ಜಾಗದ 6 ನಿವೇಶನ ಕೊಡಿಸಿದ್ದಾರೆ. ಅದರಲ್ಲಿ ಕಿಕ್‌ಬ್ಯಾಕ್‌ ರೂಪದಲ್ಲಿ 2 ನಿವೇಶನ ತಮ್ಮ ಕುಟುಂಬಕ್ಕೆ ಬರೆಸಿಕೊಂಡಿದ್ದಾರೆ. ವಿಜಯನಗರ ಬಡಾವಣೆ 4ನೇ ಹಂತದಲ್ಲಿ 2 ನಿವೇಶನ ಪಡೆದು ಅದನ್ನ ತಮ್ಮ ಮಗಳು ಅನ್ನಪೂರ್ಣ ಹಾಗೂ ಅಳಿಯ ವಿಶ್ವೇಶ್ವರಯ್ಯ ಹೆಸರಿಗೆ ಕ್ರಯ ಮಾಡಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್‌ ಹೂವು

    ಇದರಲ್ಲಿ ಜಿ.ಟಿ ದೇವೇಗೌಡ ಅವರ ಪ್ರಭಾವ ಇರುವುದು ದಟ್ಟವಾಗಿದೆ. ಆರ್‌ಟಿಸಿಯಲ್ಲಿ ಸರ್ಕಾರಿ ಭೂಮಿ ಎಂದು ಇದೆ. ಈ ವ್ಯಾಜ್ಯ ಕೋರ್ಟ್‌ನಲ್ಲಿ ಬಾಕಿ ಇದೆ. ಆದಾಗ್ಯೂ ಜಿಟಿಡಿ ತಮ್ಮ ಕುಟುಂಬಕ್ಕೆ 50:50 ನಿವೇಶನ ಬರೆಸಿಕೊಂಡಿರುವ ಅನುಮಾನವಿದೆ. ಮುಡಾ ವ್ಯಾಪ್ತಿಗೆ ಭೂಮಿ ಬರದಿದ್ದರೂ, ದೇವನೂರು ಬಡಾವಣೆಗೆ ಪರಿಹಾರ ಕೊಟ್ಟಂತೆ ಮಾಡಲಾಗಿದೆ. ಇದೆಲ್ಲದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುವಂತೆ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಇಂದಿನಿಂದ ಮೂರು ದಿನ ಹಲವು ಕಾರ್ಯಕ್ರಮ

  • ಸ್ನೇಹಮಹಿ ಕೃಷ್ಣ ಹೆಸರಲ್ಲಿ ಹಲವರ ಮೇಲೆ ಅನಾಮಧೇಯರಿಂದ ದೂರು

    ಸ್ನೇಹಮಹಿ ಕೃಷ್ಣ ಹೆಸರಲ್ಲಿ ಹಲವರ ಮೇಲೆ ಅನಾಮಧೇಯರಿಂದ ದೂರು

    ಮೈಸೂರು: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣನ (Snehamayi krishna) ಹೆಸರಿಗೆ ಈಗ ಸೂಪರ್ ಪವರ್ ಬಂದಿದೆ. ಸ್ನೇಹಮಯಿ ಹೆಸರನ್ನು ಹೇಳಿಕೊಂಡು ಪೊಲೀಸರಿಗೆ ಅನಾಮಧೇಯ ಪತ್ರಗಳು ಹೋಗುತ್ತಿವೆ ಅನ್ನೋ ಆರೋಪ ಕೇಳಿಬಂದಿದೆ.

    ಮೈಸೂರಿನ ಜಯಪುರ ಪೊಲೀಸ್ ಠಾಣೆಗೆ (Mysuru Jayapura Police) ಗಿರೀಶ್ ಎಂಬುವವರ ವಿರುದ್ಧ ದೂರು ಹೋಗಿದೆ. ಅಸಲಿಗೆ ಗಿರೀಶ್ ಯಾರು ಎಂಬುದೇ ಸ್ನೇಹಮಹಿ ಕೃಷ್ಣಗೆ ಗೊತ್ತಿಲ್ಲ. ವಿಚಾರಣೆ ಹೋದಾಗಲೇ ತಮ್ಮ ಹೆಸರು ದುರ್ಬಳಕೆಯಾಗಿರುವುದು ಸ್ನೇಹಮಹಿ ಕೃಷ್ಣಗೆ ಗೊತ್ತಾಗಿದೆ. ಈ ಬಗ್ಗೆ ʻಪಬ್ಲಿಕ್ ಟಿವಿʼಗೆ ಹೇಳಿಕೆ ನೀಡಿದ ಸ್ನೇಹಮಯಿ ಕೃಷ್ಣ, ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಪ್ರಶಿಕ್ಷಣಾರ್ಥಿಯ ಬಳಿ ಹಣ ಕೇಳಿದ ಬಗ್ಗೆ ದೂರು ಹೋಗಿದೆ. ಇದನ್ನೂ ಓದಿ: ವೈಕುಂಠ ಏಕಾದಶಿ ಪುರಾಣ ಕಥೆ ಏನು? ಯಾಕೆ ಆಚರಣೆ ಮಾಡುತ್ತಾರೆ?

    ಸಂಚಾರಿ ಪೊಲೀಸರು ವಾಹನಗಳನ್ನ ತಪಾಸಣೆ ಮಾಡುವಾಗ ಸಿಕ್ಕಿ ಬಿದ್ದರೆ ನನ್ನ ಹೆಸರು ಹೇಳಿ ಶುಲ್ಕ ಕಟ್ಟದೇ ಹೋಗುತ್ತಿದ್ದಾರೆ. ಮೈಸೂರಿನ ಅರ್ಜುನ್‌ ಗೂರುಜಿ ವಿರುದ್ಧವು ದೂರು ಹೋಗಿದೆ. ನನ್ನ ಹೆಸರನ್ನ ಯಾಕೆ ಬಳಸಿಕೊಳ್ಳುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಅವರ ವೈಯಕ್ತಿಕ ವಿಚಾರಕ್ಕೆ ನನಗೆ ಕೆಟ್ಟ ಹೆಸರು ತರುಲು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹೋರಾಟ ಮಾಡುತ್ತಿರುವ ಸ್ನೇಹಮಯಿ ಹೆಸರು ಬಳಸಿಕೊಂಡರೆ ನಮ್ಮ ಕೆಲಸ ಆಗುತ್ತದೆ ಎಂದು ಜನ ತಿಳಿದುಕೊಂಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

    ಒಳ್ಳೆತನಕ್ಕೆ ನನ್ನ ಹೆಸರು ಬಳಸಿಕೊಂಡು ಅದರಿಂದ ಸಮಾಜಕ್ಕೆ ಒಳ್ಳೆಯದಾದರೆ ತೊಂದರೆ ಇಲ್ಲ. ನಿಮ್ಮ ಬಳಿ ದಾಖಲೆಗಳಿದ್ರೆ ನನಗೆ ಕೊಡಿ ನಿಮ್ಮ ಪರ ನಾನು ಹೋರಾಟ ಮಾಡುತ್ತೇನೆ. ಆದ್ರೆ ನನ್ನ ಹೆಸರು ದುರ್ಬಳಕೆಯಾದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ʻಪಬ್ಲಿಕ್ ಟಿವಿʼ ಮೂಲಕ ಸ್ನೇಹಮಯಿ ಕೃಷ್ಣ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉಡುಪಿ| ಮರದ ದಿಮ್ಮಿಗೆ ಡಿಕ್ಕಿಯಾಗಿ ಮಲ್ಪೆಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ

  • ನನಗೇನಾದ್ರೂ ಆದ್ರೆ ಸಿಎಂ ಹೊಣೆ: ಸ್ನೇಹಮಯಿ ಕೃಷ್ಣ

    ನನಗೇನಾದ್ರೂ ಆದ್ರೆ ಸಿಎಂ ಹೊಣೆ: ಸ್ನೇಹಮಯಿ ಕೃಷ್ಣ

    ಮೈಸೂರು: ಮುಡಾ ಹಗರಣ (MUDA Scam) ಹೊರಗೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಅವರ ಜೀವಕ್ಕೆ ಕಂಟಕ ಎದುರಾಗುತ್ತಾ ಎಂಬ ಅನುಮಾನ ಮೂಡಿದೆ.

    ಮಾಜಿ ಮಂತ್ರಿ ತನ್ವೀರ್ ಸೇಠ್ ಆಪ್ತ ಬ್ಯಾಂಕ್ ಮಂಜು ಆಡಿರುವ ಮಾತು ಇಂತಹ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮೈಸೂರಿನ ಬೆಲವತ್ತ ಬಳಿಯ ಜಮೀನು ವಿಚಾರದಲ್ಲಿ ಕುಟುಂಬವೊಂದಕ್ಕೆ ಡಿ.5ರಂದು ಬ್ಯಾಂಕ್ ಮಂಜು ಧಮ್ಕಿ ಹಾಕಿದ್ದ. ಈ ವೇಳೆ ಜಮೀನು ಮಾಲೀಕ, ಸ್ನೇಹಮಯಿ ಕೃಷ್ಣ ಅಂಥವ್ರೇ ಸಿಎಂ ವಿರುದ್ಧ ಹೋರಾಡುತ್ತಿದ್ದಾರೆ. ನಾನು ನಿಮ್ಮ ವಿರುದ್ದ ಹೋರಾಡ್ತಿನಿ ಎಂದಿದ್ದರು.

    ಈ ಮಾತಿಗೆ ಟಕ್ಕರ್ ನೀಡುವ ಭರದಲ್ಲಿ ಬ್ಯಾಂಕ್ ಮಂಜು, ಸ್ನೇಹಮಯಿ ಕೃಷ್ಣರನ್ನು ಸಿಎಂ ಸುಮ್ನೆ ಬಿಡ್ತಾರೆ ಅಂದ್ಕೊಂಡಿದ್ದಿಯಾ. ಸಮಯಕ್ಕಾಗಿ ಕಾಯ್ತಿದ್ದಾರೆ ಎಂದು ಹೇಳಿದ್ದ. ಅಂದ ಹಾಗೇ, ಈ ಘಟನೆ ನಡೆದ 17 ದಿನಕ್ಕೆ ಅಂದರೆ ಡಿ.22ರಂದು ಜಮೀನು ಮಾಲೀಕ ಹನುಮಂತು ನಡು ರಸ್ತೆಯಲ್ಲಿ ಕೊಲೆಯಾಗಿದ್ದ. ಈ ಕೇಸಲ್ಲಿ ಬ್ಯಾಂಕ್ ಮಂಜು ನಾಲ್ಕನೇ ಆರೋಪಿ ಆಗಿದ್ದಾನೆ.

    ಈ ಸಂಬಂಧ ಪ್ರತಿಕ್ರಿಯಿಸಿರುವ ಸ್ನೇಹಮಯಿ ಕೃಷ್ಣ, ನನಗೆ, ನನ್ನ ಕುಟುಂಬಕ್ಕೆ ಏನಾದರೂ ತೊಂದರೆ ಆದ್ರೆ ಸಿಎಂ ಹೊಣೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನೂ ಪೊಲೀಸರಿಗೆ ಮನವಿ ಮಾಡಿದ್ರೂ ಭದ್ರತೆ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.

    ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕೊಲೆಯಾದ ಹನುಮಂತು ಪುತ್ರ, ಕೊಲೆಯಾಗುವ ಮುನ್ನ ನಡೆದ ಗಲಾಟೆಯಲ್ಲಿ ನಮ್ಮ ತಂದೆಗೆ ಬ್ಯಾಂಕ್ ಮಂಜು ಅವಾಜ್ ಹಾಕಿದ್ದ. ಕತ್ತು ಕೊಯ್ದು ಕೊಲೆ ಮಾಡುವ ಬೆದರಿಕೆ ಹಾಕಲಾಗಿತ್ತು. ಅದೇ ಮಾದರಿಯಲ್ಲಿ 18 ಭಾರಿ ಚುಚ್ಚಿ ನಮ್ಮ ತಂದೆಯನ್ನು ಕೊಲೆ ಮಾಡಿದ್ದಾರೆ. ಕಾನೂನಿನ ಮೂಲಕ ನಮಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

  • ಚಾಮುಂಡೇಶ್ವರಿ ಹರಕೆ ಸೀರೆ ಕಳ್ಳತನ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್

    ಚಾಮುಂಡೇಶ್ವರಿ ಹರಕೆ ಸೀರೆ ಕಳ್ಳತನ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್

    ಮೈಸೂರು: ಚಾಮುಂಡಿ ಬೆಟ್ಟದಲ್ಲಿ (Chamundi Hill) ಚಾಮುಂಡೇಶ್ವರಿಯ ಹರಕೆ ಸೀರೆ ಕಳ್ಳತನ ಆರೋಪ ಮಾಡಿದ್ದ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ವಿರುದ್ಧವೇ ಎಫ್‌ಐಆರ್ ದಾಖಲಿಸಲಾಗಿದೆ.

    ಸ್ನೇಹಮಯಿ ಕೃಷ್ಣ ಅವರ ವಿರುದ್ಧ ಕೃಷ್ಣರಾಜ ಪೊಲೀಸ್ ಠಾಣೆಗೆ ಚಾಮುಂಡೇಶ್ವರಿ ದೇವಾಲಯದ ಕಾರ್ಯದರ್ಶಿ ರೂಪಾ ದೂರು ನೀಡಿದ್ದಾರೆ. ಇದನ್ನೂ ಓದಿ: ಹರಕೆ ಸೀರೆ ಮಾರಾಟ ಆರೋಪ – ಅದು ಸೀರೆಯಲ್ಲ, ಸೀರೆಯಲ್ಲಿ ಕಟ್ಟಿದ ಕಡತ: ಕಾರ್ಯದರ್ಶಿ ರೂಪಾ

    ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪ ಹೊರಿಸಿ ರೂಪಾ ಅವರು ದೂರು ನೀಡಿದ್ದರು. ದೂರಿನ ಹಿನ್ನೆಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

    ಚಾಮುಂಡೇಶ್ವರಿ ದೇವಿಯ ಹರಕೆ ಸೀರೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಸ್ನೇಹಮಯಿ ಕೃಷ್ಣ ದೂರಿದ್ದರು. ಈ ಸಂಬಂಧ ವೀಡಿಯೋ ಕೂಡ ಹರಿಬಿಟ್ಟಿದ್ದರು. ವ್ಯಕ್ತಿಯೊಬ್ಬರು ಬೆಟ್ಟದಲ್ಲಿ ಗಂಟೊಂದರಲ್ಲಿ ಸೀರೆಗಳನ್ನು ತುಂಬಿಕೊಂಡು ಸಾಗಿಸಿದ್ದಾರೆಂದು ಆರೋಪಿಸಲಾಗಿತ್ತು. ಇದನ್ನೂ ಓದಿ: ಚಾಮುಂಡಿ ದೇವಿಗೆ ಕೊಟ್ಟ ಹರಕೆ ಸೀರೆ ಕಾಳಸಂತೆಯಲ್ಲಿ ಮಾರಾಟ ಆರೋಪ – ಸ್ನೇಹಮಯಿ ಕಷ್ಣ ದೂರು

    ಇದಕ್ಕೆ ಪ್ರತಿಕ್ರಿಯಿಸಿದ ರೂಪಾ ಅವರು ಆರೋಪವನ್ನು ಅಲ್ಲಗಳೆದಿದ್ದಾರೆ. ಅದು ಸೀರೆಗಳಲ್ಲ. ಕಡತಗಳನ್ನು ಗಂಟು ಹಾಕಿ ಸಾಗಿಸಿರುವುದು ಎಂದು ಸ್ಪಷ್ಟಪಡಿಸಿದ್ದರು.

  • ಸಿದ್ದರಾಮಯ್ಯಗೆ 120 ಕೋಟಿ ರೂ. ಪರಿಹಾರ ಕೊಡಬೇಕಿತ್ತು: ಸಿಎಂ ಪರ ಮಾಜಿ ಶಾಸಕ ಬ್ಯಾಟಿಂಗ್‌

    ಸಿದ್ದರಾಮಯ್ಯಗೆ 120 ಕೋಟಿ ರೂ. ಪರಿಹಾರ ಕೊಡಬೇಕಿತ್ತು: ಸಿಎಂ ಪರ ಮಾಜಿ ಶಾಸಕ ಬ್ಯಾಟಿಂಗ್‌

    – ಬೈರತಿ ಸುರೇಶ್‌ ಬಂಧನಕ್ಕೆ ಸ್ನೇಹಮಯಿ ಕೃಷ್ಣ ಆಗ್ರಹ

    ಮೈಸೂರು: ಮುಡಾ ಸೈಟು (MUDA Site) ವಿಚಾರದಲ್ಲಿ ಕಾನೂನು ಪ್ರಕಾರವಾಗಿಯೇ ಸಿದ್ದರಾಮಯ್ಯನವರಿಗೆ 120 ಕೋಟಿ ರೂ. ಪರಿಹಾರ ಕೊಡಬೇಕಿತ್ತು ಎಂದು ಸಿಎಂ ಪರ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ (MK Somashekar) ಬ್ಯಾಟ್‌ ಬೀಸಿದ್ದಾರೆ.

    ಮೈಸೂರಿನ ಕನಕಭವನದಲ್ಲಿ ನಡೆದ ಕನಕದಾಸ ಜಯಂತ್ಯುತ್ಸವ‌ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಸಿದ್ದರಾಮಯ್ಯ (Siddaramaiah) ಅವರ ಪ್ರಕರಣ ಏನೇನೂ ಅಲ್ಲ. ಆದ್ರೂ ಎಲ್ಲರೂ ಇದನ್ನ ದೊಡ್ಡದು ಮಾಡಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಮುಡಾ ಮಾಜಿ ಆಯುಕ್ತ ನಟೇಶ್ ಅವರು, ಕಾನೂನು ಪ್ರಕಾರವಾಗಿ ಸೈಟು ನೀಡಿರುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯನವರಗೆ ಕಾನೂನು ಪ್ರಕಾರ ಪರಿಹಾರ ಕೊಟ್ಟಿದ್ದರೂ 120 ಕೋಟಿ ರೂ. ಕೊಡಬೇಕಿತ್ತು. ಅದಕ್ಕೆ ಅರ್ಧ ಅಂದ್ರೆ 60 ಕೋಟಿ ರೂ. ಆದರೂ ಕೊಡಬೇಕಿತ್ತು. ಅಂತಹದ್ದರಲ್ಲಿ, ಇಷ್ಟೆಲ್ಲ ರಾದ್ಧಾಂತ ಮಾಡಿದ್ದಾರೆ ಎಂದು ಎಂ.ಕೆ ಸೋಮಶೇಖರ್‌ ಸಿಎಂ ಪರ ಬ್ಯಾಟ್‌ ಬೀಸಿದರು.

    ಮತ್ತೊಂದು ಮಹತ್ವದ ದಾಖಲೆ ರಿಲೀಸ್‌:
    ಮುಡಾ ಅವ್ಯವಹಾರ ಆರೋಪ ಸಂಬಂಧ ಮತ್ತೊಂದು ಮಹತ್ವದ ದಾಖಲೆಯನ್ನು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಬಿಡುಗಡೆ ಮಾಡಿದ್ದಾರೆ. ಈ ಹಿಂದೆಯೇ 50:50 ಅಕ್ರಮದ ಬಗ್ಗೆ ತನಿಖೆಗೆ ಮೈಸೂರು ಲೋಕಾಯುಕ್ತ ಮುಂದಾಗಿತ್ತು. ತನಿಖೆ ನಡೆಸಲು ಸರ್ಚ್ ವಾರೆಂಟ್ ಕೂಡ ಮೈಸೂರು ಲೋಕಾಯುಕ್ತ ಪಡೆದಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಮುಡಾ ಸರ್ಚ್ ವಾರೆಂಟ್ ವಾಪಸ್ಸು ಪಡೆಯಲಾಗಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ರಿಲೀಸ್ ಮಾಡಿದ್ದಾರೆ. ಅಲ್ಲದೇ ಲೋಕಾಯುಕ್ತ ಉದ್ದೇಶಪೂರ್ವಕವಾಗಿ ಸರ್ಚ್ ವಾರೆಂಟ್ ಹಿಂಪಡೆದಿದೆ ಎಂದು ಆರೋಪಿಸಿದ್ದಾರೆ.

    ಅಷ್ಟೇ ಅಲ್ಲ, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಕಡತ ವಶಕ್ಕೆ ಪಡೆದಿದ್ದಾರೆ. ಇದ್ರಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಚಿವ ಭೈರತಿ ಸುರೇಶ್ ಜೊತೆ ಶಾಮೀಲಾಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಸಚಿವ ಬೈರತಿ ಸುರೇಶ್ ಬಂಧನಕ್ಕೆ ಆಗ್ರಹಿಸಿದ್ದಾರೆ. ಇನ್ನೂ ಪ್ರಾಸಿಕ್ಯೂಷನ್‌ಗೆ ಅನುಮತಿ ಪ್ರಶ್ನಿಸಿ ಸಿಎಂ ಮತ್ತು ಎ4 ದೇವರಾಜು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಶನಿವಾರ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.

  • ಅಧಿಕಾರಿಯೇ ಮನೆಗೆ ತೆರಳಿ ಪತ್ನಿಯನ್ನು ಒಪ್ಪಿಸಿದ್ದೇನೆ ಎಂದರೆ ಸಿಎಂ ಪ್ರಭಾವ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ: ಸ್ನೇಹಮಯಿ ಕೃಷ್ಣ

    ಅಧಿಕಾರಿಯೇ ಮನೆಗೆ ತೆರಳಿ ಪತ್ನಿಯನ್ನು ಒಪ್ಪಿಸಿದ್ದೇನೆ ಎಂದರೆ ಸಿಎಂ ಪ್ರಭಾವ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ: ಸ್ನೇಹಮಯಿ ಕೃಷ್ಣ

    ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಕುಟುಂಬ ಪಡೆದ 14 ಸೈಟ್‌ಗಳ ವಿಚಾರಣೆ ಮೈಸೂರು ಲೋಕಾಯುಕ್ತದಲ್ಲಿ ಚುರುಕಾಗಿ ಸಾಗಿದೆ. ಇಂದು (ನ.19) ವಿಚಾರಣೆಗೆ ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ (DB Natesh) ಹಾಜರಾಗಲಿದ್ದಾರೆ.

    ನಟೇಶ್ ನೂರಾರು ಮಂಜುರಾತಿಗಳ ಪತ್ರಗಳನ್ನು ಹೊರಡಿಸುವಂತೆ ಆದೇಶಿಸಿದ್ದಾರೆ. ಅದರಲ್ಲಿ 2 ಅಂಶಗಳನ್ನು ಗಮನಿಸಿದಾಗ, 2015ರ ಸರ್ಕಾರದ ಅಧಿಸೂಚನೆಯ ಪ್ರಕಾರ 50:50 ಅನುಪಾತದಲ್ಲಿ ಸೈಟ್ ಹಂಚಿಕೆಯಾಗಬೇಕು. ಆದರೆ ಅದು ಅನ್ವಯವಾಗಿಲ್ಲ ಮತ್ತು ನ.20 2020ರಲ್ಲಿ ಮುಡಾದಲ್ಲಿ (MUDA) ಸಭೆಯಲ್ಲಿ ನಿರ್ಣಯ ಆಗಬೇಕಿತ್ತು. ಆದರೆ ಸಭೆಯಲ್ಲಿ ಆ ನಿರ್ಣಯ ಕೈಗೊಂಡಿಲ್ಲ. ಕೇವಲ ಚರ್ಚೆ ಮಾಡುವುದಾಗಿ ತಿಳಿಸಲಾಗಿದೆ. ಇದನ್ನು ಗಮನಿಸಿ ದಾಖಲೆ ಸೃಷ್ಟಿಸುವುದು ತಪ್ಪು. ಇದರಿಂದ ದಾಖಲೆ ಸೃಷ್ಟಿಸಿರುವುದರಿಂದ ಅದು ಸುಳ್ಳು ದಾಖಲೆಯಾಗುತ್ತದೆ. ಇದು ಗಂಭೀರ ವಿಷಯವಾಗಿದ್ದು, ಮುಡಾದಲ್ಲಿ ನಟೇಶ್ ಹಾಗೂ ದಿನೇಶ್ ತುಂಬಾ ಪ್ರಮುಖ ಪಾತ್ರವಹಿಸಿದ್ದಾರೆ. ಅವರನ್ನು ಬಂಧಿಸಬೇಕು, ಆದರೆ ಲೋಕಾಯುಕ್ತ ವಿಚಾರಣೆಯ ಬಳಿಕ ಏನಾಗುತ್ತದೆ ಎಂದು ಕಾದುನೋಡಬೇಕು ಎಂದರು.ಇದನ್ನೂ ಓದಿ: ಮಸ್ಕ್‌ ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಇಸ್ರೋ ಉಪಗ್ರಹ ಉಡಾವಣೆ ಯಶಸ್ವಿ

    ನಟೇಶ್ 14 ನಿವೇಶನಗಳನ್ನು ಮಂಜುರಾತಿ ಮಾಡಿದ್ದಾರೆ. ಜೊತೆಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ನಿವೇಶನ ಕುರಿತು ಖುದ್ದು ತಾವೇ ಮನೆಗೆ ಹೋಗಿ ಸಿಎಂ ಪತ್ನಿಯನ್ನು ಪರಿಹಾರ ಪಡೆಯಲು ಒಪ್ಪಿಸಿದ್ದೇನೆ ಎಂದು ಹೇಳಿದ್ದರು. ಒಬ್ಬ ಅಧಿಕಾರಿ ಮನೆಗೆ ತೆರಳಿ ಮಾತನಾಡಿದ್ದಾರೆ ಎಂದರೆ ಅದರಲ್ಲಿ ಸಿಎಂ ಪ್ರಭಾವ ಹೇಗಿದೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು.

    ನಟೇಶ್ ಅವರ ಹೇಳಿಕೆ ಇಡೀ ಪ್ರಕರಣದ ಪ್ರಮುಖ ತಿರುವು, ವಿಚಾರಣೆ ಸರಿಯಾಗಿ ನಡೆದರೆ ಸಿದ್ದರಾಮಯ್ಯ ಪ್ರಭಾವ ಸಾಬೀತಾಗುತ್ತದೆ. ಇಷ್ಟೊಂದು ಆಸಕ್ತಿ ಒಬ್ಬ ಅಧಿಕಾರಿಗೆ ಯಾಕೆ ಎಂಬುದು ವಿಚಾರಣೆ ಆದರೆ ಸತ್ಯ ಹೊರ ಬರುತ್ತದೆ ಎಂದು ಹೇಳಿದ್ದಾರೆ.

    ಸ್ವತಃ ಅರ್ಜಿದಾರರ ಮನೆಗೆ ತೆರಳಿ ಮಾತನಾಡಿರುವುದು ಗಂಭೀರ ವಿಷಯ ಹಾಗೂ ಇದು ಪ್ರಮುಖ ಸಾಕ್ಷಿಯಾಗುತ್ತದೆ. ಇಂದಿನ ವಿಚಾರಣೆ ಮುಡಾದಲ್ಲಿ ಪ್ರಮುಖ ಘಟ್ಟವಾಗಿದೆ. ಇಂದು ತನಿಖಾಧಿಕಾರಿಗಳು, ಮಂಜೂರಾತಿ ಪತ್ರದಲ್ಲಿ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡಲು ತಿಳಿಸಿದ್ದಾರಾ? ಹಾಗೂ ಮುಡಾದಲ್ಲಿ ಸಭೆಯಲ್ಲಿ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡಲು ನಿರ್ಣಯ ಆಗಿದ್ಯಾ? ಎನ್ನುವ ಕುರಿತು ಸ್ಪಷ್ಟನೆ ನೀಡಬೇಕು ಎಂದರು.ಇದನ್ನೂ ಓದಿ: ಸೋಮವಾರ ಸಂಜೆ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ – ದೃಢಪಡಿಸಿದ ಪರಮೇಶ್ವರ್

  • ನನ್ನ ದಾಖಲೆ ಸುಳ್ಳಿದ್ದರೆ ಸಿಎಂ ನನ್ನ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಲಿ: FIRಗೆ ಸ್ನೇಹಮಯಿ ಕೃಷ್ಣ ಟಾಂಗ್‌

    ನನ್ನ ದಾಖಲೆ ಸುಳ್ಳಿದ್ದರೆ ಸಿಎಂ ನನ್ನ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಲಿ: FIRಗೆ ಸ್ನೇಹಮಯಿ ಕೃಷ್ಣ ಟಾಂಗ್‌

    ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ದೂರು ನೀಡಿರುವ ದೂರದಾರ ಸ್ನೇಹಮಯಿ ಕೃಷ್ಣ (Snehamayi Krisna) ವಿರುದ್ಧವೇ ನಿನ್ನೆ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ನಕಲಿ ದಾಖಲೆ ಸೃಷ್ಟಿ ಎಂಬ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.

    ಈ ಬಗ್ಗೆ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯಿಸಿದ್ದು, ನನ್ನ ವಿರುದ್ಧ ಕಾಂಗ್ರೆಸ್ ವಕ್ತಾರ ಸಲ್ಲಿಸಿರುವ ದೂರಿನಲ್ಲಿ ಹುರುಳಿಲ್ಲ. ನನಗೆ ಆ ಎಫ್‌ಐಆರ್‌ನಿಂದ ಸಂತೋಷವಾಗಿದೆ. ಸಿಎಂ ಹಾಗೂ ಸಿಎಂ ಪತ್ನಿ ಈಗ ದೇವರಾಜ ಪೊಲೀಸ್ ಠಾಣೆಗೂ ಬರಬೇಕಾಗುತ್ತದೆ. ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಖುದ್ದು ಸಿಎಂಗೆ ಸಂಕಷ್ಟ ಜಾಸ್ತಿ ಮಾಡ್ತಿದ್ದಾರೆ ಎಂದರು. ಇದನ್ನೂ ಓದಿ: ನಾನಾಗಿದ್ರೆ ಸಿದ್ದರಾಮಯ್ಯನ ಕಪಾಳಕ್ಕೆ ಹೊಡಿತಿದ್ದೆ : ಸಿಎಂ‌ ವಿರುದ್ಧ ಅಭಿನವ ಸಂಗನಬಸವ ಶ್ರೀ ಕಿಡಿ

    ನನ್ನ ದಾಖಲೆ ನಕಲಿ ಎಂಬುದಾದರೆ, ಸಿಎಂ ನನ್ನ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಿ. ಇದನ್ನು ಬಿಟ್ಟು ಜನರಿಗೆ ಪ್ರಚೋದನೆ ಕೊಡುವುದು ಸರಿಯಲ್ಲ ಎಂದಿದ್ದಾರೆ.

    ನಾನು ಆರೋಪ ಮಾಡಿರುವುದು ಸಿಎಂ ಮತ್ತು ಅವರ ಪತ್ನಿ ವಿರುದ್ಧ. ಆದರೆ, ಅವರು ನನ್ನ ವಿರುದ್ಧ ದೂರು ಕೊಡುತ್ತಿಲ್ಲ. ಲಕ್ಷ್ಮಣ್‌ ಅವರು ಮಾಡ್ತಿದ್ದಾರೆ. ಇವರ ದೂರಿನ ಮೇಲೆ ನನಗೆ ಅನುಮಾನವಿದೆ. ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ನಿಲ್ಲಿಸಿ ಸಿದ್ದರಾಮಯ್ಯ ಅವರು ಸೋಲಿಸಿದ್ದಾರೆಂಬ ಬೇಸರಕ್ಕೆ ಈ ರೀತಿ ಮಾಡಿದ್ದಾರೆ. ಸ್ವತಃ ಸಿಎಂ ಅವರನ್ನೇ ಸಿಕ್ಕಿಹಾಕಿಸುವ ಪ್ಲ್ಯಾನ್‌ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆಗೆ ಕರಿಯ ಎಂದಿದ್ದ ಜಮೀರ್‌ಗೆ ಜೀವ ಬೆದರಿಕೆ – ಪುನೀತ್‌ ಕೆರೆಹಳ್ಳಿಗೆ 14 ದಿನ ನ್ಯಾಯಾಂಗ ಬಂಧನ

    ಕಾಂಗ್ರೆಸ್‌ ವಕ್ತಾರ ಲಕ್ಷ್ಮಣ್‌ ವಿರುದ್ಧ ಸಿದ್ದರಾಮಯ್ಯ ಅವರು ಕ್ರಮ ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಅಪಾಯ ಆಗಬಹುದು ಎಂದು ಎಚ್ಚರಿಸಿದ್ದಾರೆ.

  • ಸಿಎಂಗೆ ಕೆಲ ನಿರ್ದಿಷ್ಟ ಪ್ರಶ್ನೆ ಕೇಳಲೇಬೇಕು, ಇಲ್ಲದಿದ್ದರೆ ತನಿಖಾಧಿಕಾರಿ ವಿರುದ್ಧವೇ ಕಾನೂನು ಹೋರಾಟ: ಸ್ನೇಹಮಯಿ ಕೃಷ್ಣ

    ಸಿಎಂಗೆ ಕೆಲ ನಿರ್ದಿಷ್ಟ ಪ್ರಶ್ನೆ ಕೇಳಲೇಬೇಕು, ಇಲ್ಲದಿದ್ದರೆ ತನಿಖಾಧಿಕಾರಿ ವಿರುದ್ಧವೇ ಕಾನೂನು ಹೋರಾಟ: ಸ್ನೇಹಮಯಿ ಕೃಷ್ಣ

    ಮೈಸೂರು: ಸಿಎಂಗೆ ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಲೇಬೇಕು. ಕೇಳದಿದ್ದರೆ ತನಿಖಾಧಿಕಾರಿ ವಿರುದ್ಧವೇ ಕಾನೂನು ಹೋರಾಟ ಮಾಡುತ್ತೇನೆ ಎಂದು ದೂರುದಾರ ಸ್ನೇಹಮಯಿ (Snehamayi Krishna) ಕೃಷ್ಣ ಎಚ್ಚರಿಕೆ ನೀಡಿದ್ದಾರೆ.

    ಸಿಎಂ ಸಿದ್ದರಾಮಯ್ಯ (Siddaramaiah) ಲೋಕಾಯುಕ್ತ ವಿಚಾರಣೆ ಎದುರಿಸುತ್ತಿರುವ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಸಿಎಂಗೆ ನಿರ್ದಿಷ್ಟವಾಗಿ ಕೆಲವು ಪ್ರಶ್ನೆ ಕೇಳಲು ದೂರುದಾರನಾಗಿ ನಾನು ಒಂದು ಮನವಿಯನ್ನು ಲೋಕಾಯುಕ್ತರಿಗೆ ಕೊಟ್ಟಿದ್ದೇನೆ. ತನಿಖಾಧಿಕಾರಿ ಆ ಪ್ರಶ್ನೆಗಳನ್ನು ಆರೋಪಿ ಸ್ಥಾನದಲ್ಲಿ ಇರುವವರಿಗೆ ಕೇಳಬೇಕು. ಕೇಳದೆ ಇದ್ದರೆ ವಿಚಾರಣೆ ಪರಿಪೂರ್ಣ ಆಗಲ್ಲ. ಒಂದು ವೇಳೆ ಅವರು ಪ್ರಶ್ನೆ ಕೇಳದೆ ಇದ್ದರೆ ಲೋಕಾಯುಕ್ತ ತನಿಖಾಧಿಕಾರಿ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದರು. ಇದನ್ನೂ ಓದಿ: ಕಾರು, ಪಿಕಪ್ ವಾಹನ ಮುಖಾಮುಖಿ ಡಿಕ್ಕಿ- ಇಬ್ಬರು ಸಾವು

    ಇವತ್ತಿನ ವಿಚಾರಣೆ ವೇಳೆ ಸಿದ್ದರಾಮಯ್ಯ ಅವರು ಸಿಎಂ ಅಲ್ಲ. ಒಬ್ಬ ಆರೋಪಿ ಅಷ್ಟೇ. ಇದನ್ನು ತನಿಖಾಧಿಕಾರಿ ಮರೆಯಬಾರದು ಎಂದು ಹೇಳಿದರು. ಇದನ್ನೂ ಓದಿ: ಗುರು ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಾಕ್

  • ಸ್ನೇಹಮಯಿ ಕೃಷ್ಣಗೆ ರಕ್ಷಣೆ ಕೊಡಲು ನಾವು ಬದ್ಧ – ಎಂ.ಬಿ ಪಾಟೀಲ

    ಸ್ನೇಹಮಯಿ ಕೃಷ್ಣಗೆ ರಕ್ಷಣೆ ಕೊಡಲು ನಾವು ಬದ್ಧ – ಎಂ.ಬಿ ಪಾಟೀಲ

    ವಿಜಯಪುರ: ದೂರುದಾರ ಸ್ನೇಹಮಯಿ ಕೃಷ್ಣಗೆ (Snehamayi Krishna) ರಕ್ಷಣೆ ಕೊಡಲು ನಾವು ಬದ್ಧ ಎಂದು ಸಚಿವ ಎಂ.ಬಿ ಪಾಟೀಲ ಹೇಳಿದರು.

    ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರನ್ನು (CM Siddaramaiah) ಅರೆಸ್ಟ್ ಮಾಡಲು ಸ್ನೇಹಮಯಿ ಕೃಷ್ಣ ಆಗ್ರಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಂಧನ ಯಾಕೆ ಆಗಬೇಕು. ದೂರುದಾರರಿಗೆ ರಕ್ಷಣೆ ಕೊಡಲು ನಮ್ಮಲ್ಲಿ ಇದ್ದಾರೆ. ಆ ರೀತಿ ಸಿದ್ದರಾಮಯ್ಯ ಆಗಲಿ ಅಥವಾ ಬೇರೆಯಾರೇ ಆಗಲಿ ನಮ್ಮಲ್ಲಿ ಮಾಡುವುದಿಲ್ಲ. ನಿರ್ಭೀತಿಯಿಂದ ಅವರು ಇರಬಹುದು ಎಂದು ಪ್ರತಿಕ್ರಿಯಿಸಿದರು.ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆ ವೈದ್ಯೆಯ ಯಡವಟ್ಟಿಗೆ ಬಾಣಂತಿ ಬಲಿ!

    ಖರ್ಗೆ ಕುಟುಂಬದಿಂದ ಸಿಎ ಸೈಟ್ ವಾಪಸ್ ವಿಚಾರ:
    ಇದೇ ವೇಳೆ ಖರ್ಗೆ ಕುಟುಂಬ ಸಿಎ ಸೈಟ್ (CA Site) ವಾಪಸ್ ನೀಡಿರುವ ವಿಚಾರವಾಗಿ ಮಾತನಾಡಿ, ನಾನು ದೇಶದಲ್ಲಿ ಇರಲಿಲ್ಲ. ಬೆಂಗಳೂರಿಗೆ ಹೋಗಿಲ್ಲ. ಸಿದ್ದಾರ್ಥ ವಿಹಾರ ಟ್ರಸ್ಟ್‌ನ ಸಿಎ ಸೈಟ್ ವಾಪಸ್ ನೀಡಿದ್ದರ ಬಗ್ಗೆ ನನಗೆ ಗೊತ್ತಿಲ್ಲ, ನಾನು ಅಮೇರಿಕಾದಿಂದ ನೇರವಾಗಿ ವಿಜಯಪುರ ಬಂದಿದ್ದೇನೆ. ನಾನು ಬೆಂಗಳೂರು ಹೋದ ನಂತರ ನೋಡುತ್ತೇನೆ. ಗೊತ್ತಿರದ ವಿಷಯದ ಕುರಿತು ನಾನು ಹೇಗೆ ಮಾತನಾಡಲಿ ಎಂದು ಪ್ರಶ್ನಿಸಿದ್ದಾರೆ.

    ಗೌರಿ ಲಂಕೇಶ್ ಹತ್ಯೆ ಕೇಸ್ ವಿಚಾರ:
    ಗೌರಿ ಲಂಕೇಶ್ (Gauri Lankesh) ಹತ್ಯೆ ಕೇಸ್ ಆರೋಪಿಗಳಿಗೆ ಸನ್ಮಾನ ಮಾಡಿದ್ದು ಅತ್ಯಂತ ಕೆಟ್ಟ ಕೆಲಸ. ಸನ್ಮಾನ ಮಾಡಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ಈ ರೀತಿ ಉಮೇಶ ವಂದಾಲ ಆಂಡ್ ಕಂಪನಿ ಎಂಬುವವರು ಮಾಡಿದ್ದಾರೆ. ಯಾರು ಸ್ವಾಗತ ಮಾಡಿ, ಸನ್ಮಾನ ಮಾಡಿದ್ದಾರೆ ಅವರು ಅರಿತುಕೊಳ್ಳಬೇಕು. ಯಾರ ಜೀವವನ್ನು ತಗೆದುಕೊಳ್ಳಲು ಯಾರಿಗೂ ಹಕ್ಕಿಲ್ಲ ಎಂದರು.

    ಎಂ.ಎಂ ಕಲಬುರಗಿ (MM Kalaburagi) ಅವರು ವಿಜಯಪುರದ ಮಗ, ಹೆಮ್ಮೆಯ ಪುತ್ರ. ಅವರು ಸಿಂದಗಿ ತಾಲೂಕಿನ ಯರಗಲ್‌ನವರು. ನಮ್ಮ ಜಿಲ್ಲೆಯ ಒಬ್ಬ ಮೇಧಾವಿ, ಸಾಹಿತಿಯನ್ನು ಕೊಂದವರಿಗೆ ಇವರು ಸನ್ಮಾನ ಮಾಡುತ್ತಾರೆ ಎಂದರೆ ಅದೊಂದು ಹೇಯ ಕೃತ್ಯ. ಹೊಲಸು ಕೃತ್ಯ. ಅದರ ಬಗ್ಗೆ ನಾನು ವಿಚಾರ ಮಾಡುತ್ತೇನೆ. ಸಾಧ್ಯವಾದರೆ ಕೇಸ್ ಕೂಡ ಮಾಡುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: ಗದಗ, ಧಾರವಾಡದಲ್ಲಿ ಧಾರಾಕಾರ ಮಳೆ- ರಸ್ತೆ ಸಂಪರ್ಕ ಸಂಪೂರ್ಣ ಬಂದ್

  • ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಕಡತ ತೆಗೆದುಕೊಂಡು ಹೋಗಿದ್ದಾರೆ: ಬೈರತಿ ವಿರುದ್ಧ ದೂರು

    ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಕಡತ ತೆಗೆದುಕೊಂಡು ಹೋಗಿದ್ದಾರೆ: ಬೈರತಿ ವಿರುದ್ಧ ದೂರು

    ಬೆಂಗಳೂರು: ಹೆಲಿಕಾಪ್ಟರ್‌ನಲ್ಲಿ(Helicopter) ಬಂದು ಮುಡಾ ಹಗರಣದ (MUDA Scam) ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ (Byrathi Suresh) ವಿರುದ್ಧ ಸ್ನೇಹಮಯಿ ಕೃಷ್ಣ (Snehamayi Krishna) ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.

    ಭಾನುವಾರ ಇಮೇಲ್‌ ಮೂಲಕ ಬೈರತಿ ಸುರೇಶ್‌ ಮತ್ತು ಲೋಕಾಯುಕ್ತ ಎಸ್‌ಪಿ ಸುಜೀತ್‌ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ಅವರು ಇಂದು ಖುದ್ದು ಡಿಜಿಪಿ ಅವರನ್ನು ಭೇಟಿಯಾಗಿ ದೂರು ನೀಡಲು ಸಮಯ ಕೇಳಿದ್ದಾರೆ.

    ದೂರುದಾರ ಸ್ನೇಹಮಯಿ ಕೃಷ್ಣ

    ಮುಡಾ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರೂ ಆ ದಾಖಲೆಗಳನ್ನು ವಶಕ್ಕೆ ಪಡೆಯದೇ ಸುಜೀತ್‌ ಅವರು ಸಚಿವರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯ ಮೇರೆ ಬೈರತಿ ಸುರೇಶ್‌ ಅವರು ಹೆಲಿಕಾಪ್ಟರ್‌ನಲ್ಲಿ ಬಂದು ಕಡತಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸ್ನೇಹಮಯಿ ಕೃಷ್ಣ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: Jammu Kashmir | ಫಲಿತಾಂಶಕ್ಕೆ ಮೊದಲೇ ಐವರು ಶಾಸಕರಾಗಿ ಆಯ್ಕೆ – LG ನಿರ್ಧಾರ ಸರಿಯೇ?

    ಮುಡಾ ಪ್ರಕರಣದ ಸುದ್ದಿ ಜೋರಾಗುತ್ತಿದ್ದ ಸಮಯದಲ್ಲಿ ಬೈರತಿ ಸುರೇಶ್‌ ಬೆಂಗಳೂರಿನಿಂದ ಮೈಸೂರಿನಲ್ಲಿ ವಿಶೇಷ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದ ವಿಚಾರ ಈ ಜುಲೈನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

    ಈ ಸಂಬಂಧ ಮಾತನಾಡಿದ್ದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮುಡಾ ಹಗರಣವನ್ನು ಮುಚ್ಚಿಹಾಕಲು ಸರ್ಕಾರವೇ ಹೊರಟಿದೆ. ಇದು ಅರ್ಕಾವತಿ ರೀಡೂ ಹಗರಣದ್ದಂತೆ ಈ ಹಗರಣ ನಡೆದಿದೆ. ಭೈರತಿ ಸುರೇಶ್ ಅವರು ಹಗರಣವೇ ನಡೆದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಮೈಸೂರಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹೋಗಿ ಕಂತೆಗಟ್ಟಲೇ ಕಡತಗಳನ್ನು, ದಾಖಲೆಗಳನ್ನು ತುಂಬಿಕೊಂಡು ತಂದವರು ಯಾರು? ಹೆಲಿಕಾಪ್ಟರ್ ನಲ್ಲಿ ತಂದ ದಾಖಲೆಗಳನ್ನು ಸುರೇಶ್ ಎಲ್ಲೆಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ. ಆ ಬಗ್ಗೆ ಮಾಹಿತಿ ಜನರಿಗೆ ಗೊತ್ತಾಗಬೇಕು ಎಂದು ಆರೋಪಿಸಿದ್ದರು.