Tag: ಸ್ನೇಹನಾ ಪ್ರೀತಿನಾ

  • ಪಾತ್ರಕ್ಕಾಗಿ ಪಲ್ಲಂಗ- ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ನಟಿ ಲಕ್ಷ್ಮಿ ರೈ

    ಪಾತ್ರಕ್ಕಾಗಿ ಪಲ್ಲಂಗ- ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ನಟಿ ಲಕ್ಷ್ಮಿ ರೈ

    ನ್ನಡದ ನಟಿ ಲಕ್ಷ್ಮಿ ರೈ (Laxmi Rai) ಸ್ಯಾಂಡಲ್‌ವುಡ್ ಸಿನಿಮಾಗಳಿಗಿಂತ ಪರಭಾಷೆ ಸಿನಿಮಾಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಸದ್ಯ ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ವೇಳೆ, ಸಿನಿಮಾ ಅವಕಾಶಕ್ಕಾಗಿ ನಡೆಯುವ ಕ್ಯಾಸ್ಟಿಂಗ್ ಕೌಚ್ (Casting Couch) ಬಗ್ಗೆ ದರ್ಶನ್‌ (Darshan) ನಟನೆಯ ‘ಸ್ನೇಹನಾ ಪ್ರೀತಿನಾ’ ನಟಿ ಲಕ್ಷ್ಮಿ ರೈ ಮಾತನಾಡಿದ್ದಾರೆ. ಇದನ್ನೂ ಓದಿ:‘ಚೌಕಿದಾರ್’ ಆದ ‘ದಿಯಾ’ ಪೃಥ್ವಿ ಅಂಬಾರ್- ‘ರಥಾವರ’ ಡೈರೆಕ್ಟರ್‌ಗೆ ಶ್ರೀಮುರಳಿ ಸಾಥ್

    ಚಿತ್ರರಂಗದಲ್ಲಿ ಒಬ್ಬೊಬ್ಬರಿಗೆ ಇಲ್ಲಿ ಒಂದೊಂದು ರೀತಿ ಅನುಭವಗಳಾಗಿವೆ. ಪಾತ್ರಕ್ಕಾಗಿ ಪಲ್ಲಂಗವೇರುವಂತಹ ವಾತಾವರಣ ಇಲ್ಲವೇ ಇಲ್ಲ ಎಂದು ನಾನು ವಾದ ಮಾಡಲಾರೆ. ಆದರೆ ನನ್ನ ಈ ಎರಡು ದಶಕದ ವೃತ್ತಿ ಜೀವನದಲ್ಲಿ ನನಗೆ ಈ ಕಹಿ ಅನುಭವ ಯಾವತ್ತು ನಡೆದಿಲ್ಲ ಎಂದಿದ್ದಾರೆ ಲಕ್ಷ್ಮಿ ರೈ.

    ನನ್ನ ತಂದೆ ಸಮಾನರಾಗಿರುವ ಆರ್.ವಿ.ಉದಯಕುಮಾರ್ ಅವರಿಂದ ನನಗೆ ಮೊದಲ ಅವಕಾಶ ಸಿಕ್ಕಿತು. ಬೇರೆಯವರಿಗೆ ಹೋಲಿಸಿದರೆ ಚಿತ್ರರಂಗದಲ್ಲಿ ನಾನು ಅನುಭವಿಸಿದ ಕಷ್ಟ ಮತ್ತು ನೋವು ಬೇರೆ ರೀತಿ ಎಂದಿದ್ದಾರೆ. ಇಲ್ಲಿ ಯಾರೂ ನನ್ನ ಜೊತೆ ಬಂದು ಮಲಗು ಎಂದು ಬಲವಂತ ಮಾಡುವುದಿಲ್ಲ ಎಂದಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ನಡೆಯುವಂತಹ ಕ್ರಿಯೆ ಅದು ಎಂದು ನಟಿ ಮಾತನಾಡಿದ್ದಾರೆ.

    ಕೇವಲ ಪ್ರಚಾರಕ್ಕೆ ಅಥವಾ ಟಿಆರ್‌ಪಿ ವಿಚಾರಕ್ಕೆ ಇಡೀ ಚಿತ್ರರಂಗವನ್ನ ದೂಷಿಸುವುದು ತಪ್ಪು ಎಂದಿದ್ದಾರೆ. ಹಣ, ಕೀರ್ತಿಯನ್ನ ಕೊಟ್ಟಿರುವ ಚಿತ್ರರಂಗಕ್ಕೆ ನಾವು ಯಾವತ್ತು ಆಭಾರಿಯಾಗಿರಬೇಕೆ ಹೊರತು ಚಿತ್ರರಂಗದ ಮರ್ಯಾದೆ ತೆಗೆಯುವ ಕೆಲಸ ಮಾಡಬಾರದು ಎಂದಿದ್ದಾರೆ. ಚಿತ್ರರಂಗದಲ್ಲಿ ಕೂಡ ಹಲವು ಒಳ್ಳೆಯ ಕೆಲಸಗಳಾಗುತ್ತವೆ ಆ ಕೆಲಸದ ಬಗ್ಗೆ ಮಾತನಾಡಬೇಕು. ಆ ಅನುಭವ ಹಂಚಿಕೊಳ್ಳದೇ ಕೇವಲ ಕೆಟ್ಟ ಆಲೋಚನೆ ಮಾಡುತ್ತಾ, ಕಹಿ ಅನುಭವವನ್ನೇ ಹಂಚಿಕೊಳ್ಳುವುದು ತಪ್ಪು ಎಂದು ಓಪನ್ ಆಗಿ ಲಕ್ಷ್ಮಿ ರೈ ಮಾತನಾಡಿದ್ದಾರೆ.

    ಅಂದಹಾಗೆ, ಕನ್ನಡದ ಕಲ್ಪನಾ, ಮಿಂಚಿನ ಓಟ, ಸ್ನೇಹನಾ ಪ್ರೀತಿನಾ, ಝಾನ್ಸಿ ಸೇರಿದಂತೆ ಹಲವು ಚಿತ್ರಗಳಲ್ಲಿ  ಲಕ್ಷ್ಮಿ ರೈ ನಟಿಸಿದ್ದಾರೆ.

  • ಪಡ್ಡೆಹೈಕ್ಳಿಗೆ ಬೋಲ್ಡ್‌ ಲುಕ್‌ನಿಂದ ಹಾಟ್‌ ಟ್ರೀಟ್‌ ನೀಡಿದ ಲಕ್ಷ್ಮಿ ರೈ

    ಪಡ್ಡೆಹೈಕ್ಳಿಗೆ ಬೋಲ್ಡ್‌ ಲುಕ್‌ನಿಂದ ಹಾಟ್‌ ಟ್ರೀಟ್‌ ನೀಡಿದ ಲಕ್ಷ್ಮಿ ರೈ

    ಹುಭಾಷಾ ನಟಿ ಲಕ್ಷ್ಮಿ ರೈ (Lakshmi Rai) ಅವರು ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ಆಗಾಗ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಈ ನಡುವೆ ಪ್ರವಾಸ ಹೋಗಿದ್ದ ನಟಿಯ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ತಮ್ಮ ಹಾಟ್ ಫೋಟೋಶೂಟ್‌ನಿಂದ ಇದೀಗ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ. ಇದನ್ನೂ ಓದಿ:ದೇಶವು ಸುರಕ್ಷಿತರ ಕೈಯಲ್ಲಿದೆ, ಭಯಪಡಬೇಕಿಲ್ಲ ಸಲ್ಮಾನ್ ಎಂದ ಕಂಗನಾ

     

    View this post on Instagram

     

    A post shared by Raai Laxmi (@iamraailaxmi)

    ಕನ್ನಡದ ವಾಲ್ಮೀಕಿ, ಸ್ನೇಹನಾ ಪ್ರೀತಿನಾ, ಮಿಂಚಿನ ಓಟ, ಕಲ್ಪನಾ (Kanchana) ಸೇರಿದಂತೆ ಹಲವರು ಚಿತ್ರದಲ್ಲಿ ಬೆಳಗಾವಿ ಬ್ಯೂಟಿ ಲಕ್ಷ್ಮಿ ರೈ ನಟಿಸಿದ್ದಾರೆ. ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಾಯಕಿಯಾಗಿ ಅವಕಾಶಗಳು ಸಿಗದೇ ಇದ್ದಾಗ ಐಟಂ ಡ್ಯಾನ್ಸ್‌ಗೆ ಬೆಳಗಾವಿ ಸುಂದರಿ ಸೊಂಟ ಬಳುಕಿಸಿದ್ದರು.

    ಇದೀಗ ಪ್ರವಾಸದಲ್ಲಿ ಲಕ್ಷ್ಮಿ ರೈ ಸಮಯ ಕಳೆಯುತ್ತಿದ್ದಾರೆ. ಪಡ್ಡೆ ಹೈಕ್ಳಿಗೆ ಬೋಲ್ಡ್ ಫೋಟೋಗಳಿಂದ ನಟಿ ಹಾಟ್ ಟ್ರೀಟ್ ನೀಡಿದ್ದಾರೆ. ನೀಲಿ ಬಣ್ಣದ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Raai Laxmi (@iamraailaxmi)

    ಈ ವರ್ಷ ಆನಂದ ಭೈರವಿ, ಗ್ಯಾಂಗ್‌ಸ್ಟಾರ್ 21 ಸೇರಿದಂತೆ ಹಲವು ಸಿನಿಮಾಗಳು ನಟಿ ಲಕ್ಷ್ಮಿ ರೈ ಕೈಯಲ್ಲಿದೆ. ಹೊಸ ಕಥೆ, ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ಸಿನಿಮಾರಂಗದಲ್ಲಿ ಅವರು ಆಕ್ಟೀವ್ ಆಗಿದ್ದಾರೆ.