Tag: ಸ್ಥಾಯಿ ಸಮಿತಿ

  • ದೆಹಲಿ ಪಾಲಿಕೆಯಲ್ಲಿ ಹೈಡ್ರಾಮಾ – ಪರಸ್ಪರ ಹೊಡೆದಾಡಿಕೊಂಡ ಬಿಜೆಪಿ, ಆಪ್ ಸದಸ್ಯರು

    ದೆಹಲಿ ಪಾಲಿಕೆಯಲ್ಲಿ ಹೈಡ್ರಾಮಾ – ಪರಸ್ಪರ ಹೊಡೆದಾಡಿಕೊಂಡ ಬಿಜೆಪಿ, ಆಪ್ ಸದಸ್ಯರು

    ನವದೆಹಲಿ: 6 ಮಂದಿ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ವೇಳೆ ದೆಹಲಿ ಮಹಾನಗರ ಪಾಲಿಕೆಯಲ್ಲಿ ಹೈಡ್ರಾಮಾ ನಡೆದಿದ್ದು ಬಿಜೆಪಿ (BJP) ಮತ್ತು ಆಮ್ ಆದ್ಮಿ (AAP) ಕೌನ್ಸಿಲರ್‌ಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಮೇಯರ್ ಆಯ್ಕೆ ಬಳಿಕ ನಡೆದ ಪ್ರಕ್ರಿಯೆಯಲ್ಲಿ ತಡ ರಾತ್ರಿವರೆಗೂ ಸದಸ್ಯರು ಸದನದಲ್ಲಿ ಗದ್ದಲ ಸೃಷ್ಟಿಸಿದ್ದಾರೆ.

    ಮತದಾನದ ವೇಳೆ ಮೇಯರ್ ಶೆಲ್ಲಿ ಒಬೆರಾಯ್ ಸದಸ್ಯರಿಗೆ ಮತದಾನದ ವೇಳೆ ಫೋನ್ ಕೊಂಡೊಯ್ಯಲು ಅವಕಾಶ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕೌನ್ಸಿಲರ್‌ಗಳು ಮೊದಲು ಗಲಾಟೆ ಆರಂಭಿಸಿದರು. ಇದು ಸದನದಲ್ಲಿ ದೊಡ್ಡ ಗದ್ದಲಕ್ಕೆ ಕಾರಣವಾಯಿತು. ಸದಸ್ಯರು ಮತ ಪೆಟ್ಟಿಗೆಗಳನ್ನು ಸದನ ಬಾವಿಗೆ ಎಸೆದಿದ್ದು, ಪರಸ್ಪರ ಹಲ್ಲೆ ಮಾಡಿಕೊಂಡರು. ತೀವ್ರ ಗದ್ದಲ ಸೃಷ್ಟಿಯಾದ ಕಾರಣ 5 ಬಾರಿ ಕಲಾಪ ಮುಂದೂಡಿದ್ದ ಮೇಯರ್ ಅಂತಿಮವಾಗಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕಲಾಪ ಮುಂದೂಡಿದರು. ಇದನ್ನೂ ಓದಿ: ಭ್ರಷ್ಟಾಚಾರ ಆರೋಪ – ಪಂಜಾಬ್ ಆಪ್ ಶಾಸಕ ಬಂಧನ

    ಮೇಯರ್ ಒಬೆರಾಯ್ ಪರ ಕೆಲವು ಸದಸ್ಯರು ಬಿಜೆಪಿ ಸದಸ್ಯರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ. ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಇದಕ್ಕೆ ಪ್ರತಿಕ್ರಿಯಿಸಿ, ಇದು ಸಂಪೂರ್ಣವಾಗಿ ಆಘಾತಕಾರಿ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಸ್ಥಾಯಿ ಸಮಿತಿ ಚುನಾವಣೆ ನಡೆಯಲು ಬಿಜೆಪಿ ಅವಕಾಶ ನೀಡುತ್ತಿಲ್ಲ ಎಂದು ಎಎಪಿ ಶಾಸಕ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ. ಇದನ್ನೂ ಓದಿ: ಪದೇ ಪದೇ ಯೋಗಿ ವಿರುದ್ಧ ಕೇಸ್ ಹಾಕುತ್ತಿದ್ದ ವ್ಯಕ್ತಿಗೆ 1 ಲಕ್ಷ ರೂ. ದಂಡ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 10 ಸ್ಥಾಯಿ ಸಮಿತಿಗೆ ಅಧ್ಯಕ್ಷರ ಪಟ್ಟ- ಗೊಂದಲವಾಗಿ ಉಳಿದ 2 ಸಮಿತಿ

    10 ಸ್ಥಾಯಿ ಸಮಿತಿಗೆ ಅಧ್ಯಕ್ಷರ ಪಟ್ಟ- ಗೊಂದಲವಾಗಿ ಉಳಿದ 2 ಸಮಿತಿ

    ಬೆಂಗಳೂರು: ಬಿಬಿಎಂಪಿಯ ಹನ್ನೆರಡು ಸ್ಥಾಯಿ ಸಮಿತಿಗಳಲ್ಲಿ ಹತ್ತು ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇನ್ನೆರಡು ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಗೊಂದಲವಿರೋದರಿಂದ ಮತ್ತೆ ಮುಂದೂಡಲಾಗಿದೆ.

    ನಗರದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯನ್ನು ನಾಮಪತ್ರ ಸಲ್ಲಿಕೆ ಮಾಡುವ ಮೂಲಕ, ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ತೋಟಗಾರಿಕೆ ಸ್ಥಾಯಿ ಸಮಿತಿಯಲ್ಲಿ ಹನ್ನೊಂದು ಜನ ಸದಸ್ಯರಿದ್ದರೂ ಅಧ್ಯಕ್ಷರಾಗಿ ಯಾರನ್ನು ಮಾಡಬೇಕು ಎಂಬ ಗೊಂದಲದಿಂದ ಮುಂದೂಡಲಾಗಿದೆ. ವಿಜಯನಗರದ ಕಾರ್ಪೋರೇಟರ್ ಮಹಾಲಕ್ಷ್ಮಿ ಹಾಗೂ ಉಮಾದೇವಿ ಅವರ ಮಧ್ಯೆ ಪೈಪೋಟಿ ಇರುವುದರಿಂದ ಇಂದು ಆಯ್ಕೆಯಾಗಲಿಲ್ಲ.

    ಲೆಕ್ಕಪತ್ರ ಸ್ಥಾಯಿ ಸಮಿತಿಯಲ್ಲಿ ಹತ್ತು ಮಂದಿ ಮಾತ್ರ ಸದಸ್ಯರು ಇರುವುದರಿಂದ ಸದಸ್ಯರ ಆಯ್ಕೆ ಬಳಿಕ ಅಧ್ಯಕ್ಷರ ಆಯ್ಕೆ ಆಗಲಿದೆ. ಮುಂದಿನ ವಾರ ಈ ಎರಡು ಸ್ಥಾಯಿ ಸಮಿತಿಗಳಿಗೆ ಆಯ್ಕೆ ಮಾಡುವ ಸಾಧ್ಯತೆ ಇದೆ.

    ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್ ಅವರು, ಕೆಲವು ಟೆಕ್ನಿಕಲ್ ಸಮಸ್ಯೆಯಿಂದ ಮುಂದೂಡಲಾಗಿದೆ. ಆಯುಕ್ತರಿಗೆ ಸದಸ್ಯರು ಮನವಿ ಮಾಡಿರುವುದರಿಂದ ಮುಂದೆ ಚುನಾವಣೆ ಯಾವಾಗ ನಡೆಯಲಿದೆ ಎಂದು ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ನಿರ್ಧರಿಸಲಿದ್ದಾರೆ ಎಂದರು.

    ಪಕ್ಷದೊಳಗೆ ಗೊಂದಲವಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಯರ್, ಗೊಂದಲವೇನಿಲ್ಲ. ಪಾಲಿಕೆ ಸದಸ್ಯರ ಮನವಿ ಮೇರೆಗೆ ಮುಂದೂಡಲಾಗಿದೆ ಎಂದರು. ಇದೇ ವೇಳೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಮಾತನಾಡಿ, ಲೆಕ್ಕಪತ್ರ ಹಾಗೂ ತೋಟಗಾರಿಕೆ ಎರಡೂ ಸ್ಥಾಯಿ ಸಮಿತಿಯಲ್ಲಿ ಆಂಜನಪ್ಪ ಅವರ ಹೆಸರು ಇದೆ. ಹಾಗಾಗಿ ಗೊಂದಲ ಆಗಿದೆ. ಮುಂದಿನ ವಾರ ಮತ್ತೆ ಚುನಾವಣೆ ನಡೆಸಿ ಅಂತಿಮಗೊಳಿಸಲಾಗುತ್ತದೆ ಎಂದರು.

    ಎಲ್ಲಾ ಸ್ಥಾಯಿ ಸಮಿತಿಗಳಿಗೆ ಅವಿರೋಧವಾಗಿ ಹನ್ನೊಂದು ಸದಸ್ಯರ ಆಯ್ಕೆಯಾಗಿದ್ದಾರೆ. ಬಾಕಿ ಇರುವ ಅಧ್ಯಕ್ಷರ ಹೆಸರು ಮೇಯರ್ ಅವರು, ಮುಂದಿನ ವಾರ ಘೋಷಣೆ ಮಾಡಲಿದ್ದಾರೆ.

    ಅಧ್ಯಕ್ಷರ ಪಟ್ಟಿ ಹೀಗಿದೆ:
    1) ಶಿಕ್ಷಣ ಸ್ಥಾಯಿ ಸಮಿತಿ- ಮಂಜುಳಾ ನಾರಾಯಣಸ್ವಾಮಿ
    2) ನಗರಯೋಜನೆ- ಆಶಾ ಸುರೇಶ್
    3) ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ – ಎಲ್ ಶ್ರೀನಿವಾಸ್
    4) ಅಪೀಲು ಸ್ಥಾಯಿ ಸಮಿತಿ- ಗುಂಡಣ್ಣ (ಲಕ್ಷ್ಮೀನಾರಾಯಣ)
    5) ಸಾಮಾಜಿಕ ನ್ಯಾಯ ಸಮಿತಿ-ಹನುಮಂತಯ್ಯ
    6) ವಾರ್ಡ್ ಕಾಮಗಾರಿ ಸಮಿತಿ- ಜಿಕೆ ವೆಂಕಟೇಶ್
    7) ಬೃಹತ್ ರಸ್ತೆ ಕಾಮಗಾರಿ- ಮೋಹನ್ ಕುಮಾರ್
    8) ಆರೋಗ್ಯ ಸ್ಥಾಯಿ ಸಮಿತಿ -ಮಂಜುನಾಥ್ ರಾಜು
    9) ಸಿಬ್ಬಂದಿ ಸುಧಾರಣೆ ಸ್ಥಾಯಿ ಸಮಿತಿ- ಅರುಣಾ ರವಿ
    10) ಮಾರುಕಟ್ಟೆ ಸ್ಥಾಯಿ ಸಮಿತಿ- ಪದ್ಮಾವತಿ

    ಇಂದು ಆಯ್ಕೆಯಾದ ಹನ್ನೆರಡು ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರ ಪಟ್ಟಿ:
    1.ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ
    ಅಧ್ಯಕ್ಷರು: ಶ್ರೀ ಎಲ್.ಶ್ರೀನಿವಾಸ್
    ಸದಸ್ಯರು: ಮಹಾಲಕ್ಷ್ಮೀ ಹೆಚ್. ರವೀಂದ್ರ, ಸತೀಶ್.ಎಂ, ಬಿ.ಎನ್.ನಿತೀಶ್ ಪುರುಷೋತ್ತಮ, ಕೆ.ದೇವದಾಸ, ಭಾಗ್ಯಲಕ್ಷ್ಮೀ ಮುರಳಿ, ಎಸ್. ಉದಯ್ ಕುಮಾರ್, ಕೇಶವಮೂರ್ತಿ.ಎಸ್, ಆರ್.ವಸಂತಕುಮಾರ್, ಅನ್ಸರ್ ಪಾಷಾ.ಎಸ್, ಭದ್ರೇಗೌಡ.

    2. ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ
    ಅಧ್ಯಕ್ಷರು: ಮಂಜುನಾಥ್ ರಾಜು.ಜಿ
    ಸದಸ್ಯರು: ಪ್ರತಿಮ.ಆರ್, ಎಂ.ಎನ್.ಶ್ರೀಕಾಂತ್, ಶಿಲ್ಪ ಶ್ರೀಧರ್, ಪ್ರಮಿಳಾ.ಎಂ, ಮಧುಕುಮಾರಿ ವಾಗೀಶ್, ಇರ್ಷಾದ್ ಬೇಗಂ, ಮೀನಾಕ್ಷಿ, ರೂಪ.ಆರ್, ಶಿಲ್ಪ ಅಭಿಲಾಷ್, ಶೋಭ ಜಗದೀಶ್‍ಗೌಡ.

    3. ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ
    ಅಧ್ಯಕ್ಷರು: ಶ್ರೀಮತಿ ಆಶಾ ಸುರೇಶ್
    ಸದಸ್ಯರು: ಪಿ.ವಿ.ಮಂಜುನಾಥ(ಬಾಬು), ಆನಂದಕುಮಾರ್.ಎಸ್, ಟಿ.ರಾಮಚಂದ್ರ, ಎಂ.ಚಂದ್ರಪ್ಪ, ಡಿ.ಹೆಚ್.ಲಕ್ಷ್ಮೀ, ರಾಜಣ್ಣ, ಶಶಿರೇಖಾ.ಎಂ, ಮಮತಾ ಶರವಣ, ಭಾಗ್ಯಮ್ಮ ಕೃಷ್ಣಯ್ಯ, ರಾಜಶೇಖರ್.ಎನ್.

    4. ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ
    ಅಧ್ಯಕ್ಷರು: ಮೋಹನ್ ಕುಮಾರ್
    ಸದಸ್ಯರು: ಎ.ಸಿ.ಹರಿಪ್ರಸಾದ್, ಡಿ.ಪ್ರಮೋದ್, ಚಂದ್ರಕಲಾ ಗಿರೀಶ್ ಲಕ್ಕಣ್ಣ, ಡಿ.ಜಿ.ತೇಜಸ್ವಿನಿ, ಸೀತಾರಾಮಯ್ಯ, ಪಲ್ಲವಿ.ಸಿ, ಕುಮಾರಿ ಪಳನಿಕಾಂತ್, ಸರಳ ಸಿ. ಮಹೇಶ್ಬಾಬು, ಹೆಚ್.ಎ.ಕೆಂಪೇಗೌಡ, ಪಳನಿ ಅಮ್ಮಾಳ್.ವಿ, ಕೆ.ವಿ.ರಾಜೇಂದ್ರ ಕುಮಾರ್.

    5. ವಾರ್ಡ್ ಮಟ್ಟಡ ಸಾರ್ವಜನಿಕರ ಕಾಮಗಾರಿ ಸ್ಥಾಯಿ ಸಮಿತಿ
    ಅಧ್ಯಕ್ಷರು: ಜಿ.ಕೆ.ವೆಂಕಟೇಶ್(ಎನ್.ಟಿ.ಆರ್)
    ಸದಸ್ಯರು: ಐಶ್ವರ್ಯ.ಬಿ.ಎನ್, ಎನ್.ಶಾಂತಕುಮಾರಿ, ನಳನಿ ಎಂ.ಮಂಜು, ಮಹದೇವ.ಎಂ, ಗುರುಮೂರ್ತಿ ರೆಡ್ಡಿ, ಗಾಯಿತ್ರಿ.ಎಂ, ಮಂಜುಳಾ ವಿಜಯ್ ಕುಮಾರ್, ರಾಧಮ್ಮ ವೆಂಕಟೇಶ್, ನೌಶೀರ್ ಅಹ್ಮದ್, ಸವಿತ ವಿ.ಕೃಷ್ಣ.

    6. ಶಿಕ್ಷಣ ಸ್ಥಾಯಿ ಸಮಿತಿ
    ಅಧ್ಯಕ್ಷರು: ಮಂಜುಳ ಎನ್.ಸ್ವಾಮಿ
    ಸದಸ್ಯರು: ಇಮ್ರಾನ್ ಪಾಷಾ, ಎಸ್.ಲೀಲಾ ಶಿವಕುಮಾರ್, ಹೇಮಲತಾ ಸತೀಶ್ ಶೇಟ್, ಎನ್.ಭವ್ಯಾ, ವಿ.ವಿ.ಸತ್ಯನಾರಾಯಣ, ಸರ್ವಮಂಗಳ, ಮಮತಾ.ಕೆ.ಎಂ, ಶಶಿಕಲಾ.ಜಿ.ವಿ, ಬಿ.ಎನ್.ಮಂಜುನಾಥ ರೆಡ್ಡಿ, ಶಾಂತಬಾಬು.

    7. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ
    ಅಧ್ಯಕ್ಷರು: ಹನುಮಂತಯ್ಯ
    ಸದಸ್ಯರು: ಆರ್.ವಿ.ಯುವರಾಜ್, ಲತಕುವರ್ ರಾಥೋಡ್.ಆರ್.ಜೆ, ಎನ್.ಮಂಜುನಾಥ್, ಆನಂದ್ ಕುಮಾರ್, ರಾಜೇಶ್ವರಿ ಚೋಳರಾಜ.ಕೆ, ಸರಸ್ವತಮ್ಮ, ಡಿ.ಮುನಿಲಕ್ಷ್ಮಮ್ಮ, ಎ.ಕೋದಂಡರೆಡ್ಡಿ, ಪುಷ್ಪ ಮಂಜುನಾಥ್.ಬಿ.ಎಂ, ನಾಜೀಮ್ ಖಾನಮ್.

    8. ಅಪೀಲುಗಳ ಸ್ಥಾಯಿ ಸಮಿತಿ
    ಅಧ್ಯಕ್ಷರು: ಸಿ.ಆರ್.ಲಕ್ಷ್ಮಿನಾರಾಯಣ್
    ಸದಸ್ಯರು: ಎಂ.ವೇಲುನಾಯಕರ್, ಜಯಪಾಲ.ಎನ್, ಕೆ.ವೀಣಾಕುಮಾರಿ, ವಾಣಿ ವಿ.ರಾವ್, ಅಜ್ಮಲ್ ಬೇಗ್, ಆರ್.ಸಂಪತ್ ರಾಜ್, ಅಬ್ದುಲ್ ರಕೀಬ್ ಝಾಕೀರ್, ಶಕೀಲ್ ಅಹಮದ್, ಸುಮಂಗಲ.ಬಿ, ಉಮೇಸಲ್ಮಾ.

    9. ಮಾರುಕಟ್ಟೆ ಸ್ಥಾಯಿ ಸಮಿತಿ
    ಅಧ್ಯಕ್ಷರು: ಎಂ.ಪದ್ಮಾವತಿ ಶ್ರೀನಿವಾಸ
    ಸದಸ್ಯರು: ಎನ್.ನಾಗರಾಜು, ಜಿ.ಮಂಜುನಾಥ್, ಸೈಯ್ಯದ್ ಸಾಜೀದಾ, ವಿ.ವಿ.ಪಾತೀಬರಾಜನ್, ಉಮಾವತಿ ಪದ್ಮರಾಜ್, ದೀಪಿಕಾ ಎಲ್. ಮಂಜುನಾಥ ರೆಡ್ಡಿ, ಆರ್.ಪ್ರಭಾವತಿ ರಮೇಶ್, ಭಾರತಿ ರಾಮಚಂದ್ರ, ಕೆ.ಗಣೇಶ್ ರಾವ್ ಮಾನೆ, ಆರ್.ಪದ್ಮಾವತಿ ಅಮರನಾಥ್.

    10. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ
    ಅಧ್ಯಕ್ಷರು: ಅರುಣ ರವಿ
    ಸದಸ್ಯರು: ಜಿ.ಪದ್ಮಾವತಿ, ಎಂ.ಶಿವರಾಜು, ಆರ್.ಎಸ್.ಸತ್ಯನಾರಾಯಣ, ಮೊಹಮ್ಮದ್ ರಿಜ್ವಾನ್ ನವಾಬ್, ಎಂ.ಬಿ.ದ್ವಾರಕನಾಥ್ (ದಾಲು), ದೀಪಾ ನಾಗೇಶ್, ಇಂದಿರಾ.ಜಿ, ನಾಗರಾಜ್, ಪ್ರತಿಭಾ ಧನರಾಜ್, ಗಂಗಮ್ಮ.

  • ಬಿಬಿಎಂಪಿ ಸ್ಥಾಯಿ ಸಮಿತಿಗಳಿಗೆ ಅವಿರೋಧವಾಗಿ 131 ಸದಸ್ಯರು ಆಯ್ಕೆ

    ಬಿಬಿಎಂಪಿ ಸ್ಥಾಯಿ ಸಮಿತಿಗಳಿಗೆ ಅವಿರೋಧವಾಗಿ 131 ಸದಸ್ಯರು ಆಯ್ಕೆ

    – ಕಣ್ಣೀರಿಟ್ಟು ಅಸಮಾಧನಾ ಹೊರ ಹಾಕಿದ ಮಹಿಳಾ ಕಾರ್ಪೋರೇಟರ್
    – ಸತೀಶ್ ರೆಡ್ಡಿ ಅಸಮಾಧಾನಕ್ಕೆ ಹಾಡು ಹಾಡಿದ ಆರ್.ಅಶೋಕ್

    ಬೆಂಗಳೂರು: ಮೂರು ಬಾರಿ ಮುಂದೂಡಲ್ಪಟ್ಟ ಹನ್ನೆರಡು ಸ್ಥಾಯಿ ಸಮಿತಿಗಳ ಚುನಾವಣೆ ಕಡೆಗೂ ನಡೆದಿದೆ. ಆಡಳಿತ ಪಕ್ಷ ಬಿಜೆಪಿಯಲ್ಲಿ ಅಸಮಾಧಾನಗಳ ನಡುವೆ 131 ಸ್ಥಾಯಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

    ಬಿಬಿಎಂಪಿ ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆ ಎರಡು ಬಾರಿ ಮುಂದೂಡಲಾಗಿತ್ತು. ಪ್ರತಿ ಬಾರಿಯು ಪ್ರಾದೇಶಿಕ ಆಯಕ್ತರು ಚುನಾವಣೆ ನಡೆಸಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದರು. ಆದರೆ ಮೂರು ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸದೇ ಇರುವುದರಿಂದ ಕೊರಂ ಕೊರತೆ ಉಂಟಾಗಿ ಮೂರನೇ ಬಾರಿಯೂ ಚುನಾವಣೆ ಮುಂದೂಡಲಾಗಿತ್ತು. ಕೊನೆಗೆ ಶನಿವಾರ ನಡೆದ ಚುನಾವಣೆ ಹಲವು ಅಸಮಾಧಾನಗಳ ನಡುವೆಯೂ ಯಶಸ್ವಿಯಾಗಿ ಮುಗಿಯಿತು.

    ಈ ಬಾರಿಯ ಹನ್ನೆರಡು ಸ್ಥಾಯಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಹನ್ನೆರಡು ಸ್ಥಾಯಿ ಸಮಿತಿಗಳಿಗೆ 12 ಅಧ್ಯಕ್ಷರನ್ನೂ ಅಂತಿಮಗೊಳಿಸಲಾಗಿದೆ. ಮೂಲ ಬಿಜೆಪಿಗರಿಗೆ 9, ಪಕ್ಷೇತರ, ಕಾಂಗ್ರೆಸ್, ಜೆಡಿಎಸ್ ವಲಸಿಗರಿಗೆ ತಲಾ ಒಂದೊಂದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸಲಾಗಿದೆ. ಆದರೆ ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಒಂದು ಸದಸ್ಯರ ಕೊರತೆಯಾಗಿದ್ದು, ಉಳಿದ ಎಲ್ಲಾ ಸಮಿತಿಗಳಿಗೆ ತಲಾ ಹನ್ನೊಂದು ಸದಸ್ಯರಂತೆ 131 ಸದಸ್ಯರನ್ನು ಅಂತಿಮಗೊಳಿಸಲಾಗಿದೆ. ಅಧ್ಯಕ್ಷರ ಹೆಸರನ್ನು ಮೇಯರ್ ಮುಂದಿನ ವಾರ ಘೋಷಿಸುತ್ತಾರೆ ಎಂದು ಆಡಳಿತ ಪಕ್ಷದ ನಾಯಕ ಮುನೇಂದ್ರ ಕುಮಾರ್ ತಿಳಿಸಿದ್ದಾರೆ.

    ಈ ಬಾರಿ ಅಧ್ಯಕ್ಷರಾದವರಿಗೆ ಕೇವಲ ಆರು ತಿಂಗಳ ಕಾಲಾವಕಾಶ ಸಿಗಲಿದ್ದು, ಆರು ತಿಂಗಳಾದರು ಪರಾಗಿಲ್ಲ ನಮಗೆ ಅಧಿಕಾರ ಬೇಕು ಎನ್ನುವ ಸದಸ್ಯರ ಸಂಖ್ಯೆ ಕಮಲ ಪಾಳಯದಲ್ಲಿ ಹೆಚ್ಚಾಗಿತ್ತು. ಚುನಾವಣೆಯ ಕೊನೆಯ ಕ್ಷಣದವರೆಗೆ ಸದಸ್ಯರು ಪೈಪೋಟಿ ನಡೆಸಿದರು. ವಿಜಯನಗರದ ಕಾರ್ಪೋರೇಟರ್ ಮಹಾಲಕ್ಷ್ಮೀ ಕಣ್ಣೀರು ಹಾಕಿದರು. ನಾಮ ಪತ್ರ ವಾಪಸ್ ಪಡೆದು ಅವಕಾಶ ಸಿಗದೆ ಇರುವುದಕ್ಕೆ ಅಸಮಾಧಾನ ಹೊರ ಹಾಕಿದರು. ಅಷ್ಟೇ ಅಲ್ಲದೆ ಶಾಸಕ ಸತೀಶ್ ರೆಡ್ಡಿ ಮತ್ತು ಗುರುಮೂರ್ತಿ ತಮ್ಮವರಿಗೆ ಅವಕಾಶ ಕೊಡಲಿಲ್ಲ ಎಂದು ಆರ್.ಅಶೋಕ್ ಬಳಿ ಅಸಮಾಧಾನ ಹೊರಹಾಕಿದರು. ಇದಕ್ಕೆ ಆರ್.ಅಶೋಕ್ ಅವರು ಕರ್ಣನಂತೆ ನಾ ದಾನಿಯಾದೆ ಅಂತ ಹಾಡಿ ಸುಮ್ಮನಾದರು.

    ಜೆಡಿಎಸ್, ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಬೆಂಬಲಿಸಿದ ಮೂವರಿಗಷ್ಟೇ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಉಳಿದಂತೆ ಹೆಚ್ಚು ಅನುದಾನ ನೀಡುವುದಾಗಿ ಹೇಳಿ ಸಮಾಧಾನಪಡಿಸಿದ್ದಾರೆ. ಮುಂದಿನ ವಾರ ಅಧಿಕೃತ ಘೋಷಣೆಯಾಗಲಿರುವ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನದ ಪಟ್ಟಿ ಹೀಗಿದೆ.

    1) ಶಿಕ್ಷಣ ಸ್ಥಾಯಿ ಸಮಿತಿ- ಮಂಜುಳಾ ನಾರಾಯಣಸ್ವಾಮಿ
    2) ನಗರಯೋಜನೆ- ಆಶಾ ಸುರೇಶ್
    3) ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ- ಎಲ್ ಶ್ರೀನಿವಾಸ್
    4) ಅಪೀಲು ಸ್ಥಾಯಿ ಸಮಿತಿ- ಗುಂಡಣ್ಣ (ಲಕ್ಷ್ಮೀನಾರಾಯಣ)
    5) ಸಾಮಾಜಿಕ ನ್ಯಾಯ ಸಮಿತಿ- ಹನುಮಂತಯ್ಯ
    6) ವಾರ್ಡ್ ಕಾಮಗಾರಿ ಸಮಿತಿ- ಜಿಕೆ ವೆಂಕಟೇಶ್
    7) ಬೃಹತ್ ರಸ್ತೆ ಕಾಮಗಾರಿ- ಮೋಹನ್ ಕುಮಾರ್
    8) ಲೆಕ್ಕಪತ್ರ- ಮಮತಾ ಶರವಣ
    9) ಆರೋಗ್ಯ ಸ್ಥಾಯಿ ಸಮಿತಿ -ಮಂಜುನಾಥ್ ರಾಜು
    10) ಸಿಬ್ಬಂದಿ ಸುಧಾರಣೆ ಸ್ಥಾಯಿ ಸಮಿತಿ- ಅರುಣಾ ರವಿ
    11) ತೋಟಗಾರಿ- ಉಮಾದೇವಿ
    12) ಮಾರುಕಟ್ಟೆ- ಪದ್ಮಾವತಿ

    ಒಟ್ಟಾರೆ ಸ್ಥಾಯಿ ಸಮಿತಿಗಳ ರಚನೆಯಾಗದೆ ಬಿಬಿಎಂಪಿಯಿಂದ ಅಭಿವೃದ್ಧಿ ಕಾಮಗಾರಿಗಳು, ಸಾಕಷ್ಟು ಯೋಜನೆಗಳು ಸ್ಥಗಿತಗೊಂಡಿದ್ದವು. ಇನ್ನಾದರೂ ಸ್ಥಾಯಿ ಸಮಿತಿಗಳು ಬೇಗ ಕಾರ್ಯಪ್ರವೃತ್ತರಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದಾಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಹೈಡ್ರಾಮ – ಅಧ್ಯಕ್ಷ ಸ್ಥಾನ ಸಿಗದಿದ್ದಕ್ಕೆ ಕಾರ್ಪೋರೇಟರ್ ಕಣ್ಣೀರು

    ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಹೈಡ್ರಾಮ – ಅಧ್ಯಕ್ಷ ಸ್ಥಾನ ಸಿಗದಿದ್ದಕ್ಕೆ ಕಾರ್ಪೋರೇಟರ್ ಕಣ್ಣೀರು

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಭಾರೀ ಹೈಡ್ರಾಮ ನಡೆದಿದೆ. ಅಧ್ಯಕ್ಷ ಸ್ಥಾನ ಕೊಡದಿದ್ದಕ್ಕೆ ಕಾರ್ಪೋರೇಟರ್ ಮಹಾಲಕ್ಷ್ಮಿ ಕಣ್ಣೀರು ಹಾಕಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಖಂಡಿತಾ ನಿರಾಸೆಯಾಗಿದೆ. ಅಧ್ಯಕ್ಷ ಸ್ಥಾನ ಕೊಡುತ್ತೇನೆ ಎಂದು ಹೇಳಿ ಕೊಡಲಿಲ್ಲ. ಈಗ ಸದಸ್ಯತ್ವ ಕೊಡುವುದಾಗಿ ಇದ್ದಾರೆ. ಆದರೆ ಇದರಿಂದ ನನಗೆ ನಿರಾಸೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಅಧಿಕಾರಕ್ಕೋಸ್ಕರ ಏನು ಮಾಡಬೇಕು ಅಂತ ನಿಮಗೆ ಎಲ್ಲಾ ಗೊತ್ತಿದೆ. ನಾನು ಇದೇ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕೊಡಿ ಅಂತ ಬೇಡಿಕೆ ಇಟ್ಟಿರಲಿಲ್ಲ. ಆದರೂ ಅವರಾಗಿಯೇ ಕೊಡುವುದಾಗಿ ಹೇಳಿ ಈಗ ಕೊಟ್ಟಿಲ್ಲ. ಇದರಿಂದ ನನಗೆ ನಿರಾಸೆಯಾಗಿದೆ ಎಂದು ತಮ್ಮ ಅಳಲುತೋಡಿಕೊಂಡರು.

    ಇಂದು ಬಿಬಿಎಂಪಿ 12 ಸ್ಥಾಯಿ ಸಮಿತಿಯ ಸ್ಥಾನಗಳಿಗೆ ಬಿಬಿಎಂಪಿ ಕೇಂದ್ರ ಕಛೇರಿ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಚುನಾವಣೆ ನಡೆಯುತ್ತಿದೆ. ಬೆಳ್ಳಗ್ಗೆ 8 ಗಂಟೆಯಿಂದ 9.30 ರ ವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿತ್ತು. ನಾಮಪತ್ರ ಸಲ್ಲಿಕೆ ಬಳಿಕ ಚುನಾವಣೆ ಆರಂಭ ಮಾಡಲಾಗಿದೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಎನ್. ವಿ ಪ್ರಸಾದ್ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದ್ದು, ಇದುವರೆಗೂ ನಿಗದಿಯಾಗಿ ಮೂರು ಬಾರಿ ಚುನಾವಣೆ ಮುಂದೂಡಿಕೆ ಆಗಿದೆ. ನಾಮಪತ್ರ ಸಲ್ಲಿಕೆಯಾಗಲ್ಲ ಅಂತ ಚುನಾವಣೆ ಮುಂದೂಡಿಕೆ ಆಗಿತ್ತು.

    ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಈ ನಿಷೇಧಾಜ್ಞೆಯನ್ನು ಜಾರಿ ಮಾಡಿದ್ದಾರೆ.

  • 3 ಕೋಟಿ ರೂ. ವೆಚ್ಚದಲ್ಲಿ 12 ಕಾರು ಖರೀದಿಗೆ ಮುಂದಾದ ಬಿಬಿಎಂಪಿ!

    3 ಕೋಟಿ ರೂ. ವೆಚ್ಚದಲ್ಲಿ 12 ಕಾರು ಖರೀದಿಗೆ ಮುಂದಾದ ಬಿಬಿಎಂಪಿ!

    ಬೆಂಗಳೂರು: ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತೇನೆ ಅಂತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಹಿಂದೆ ಹೇಳಿದ್ದರು. ಆದರೆ ಇದನ್ನು ಲೆಕ್ಕಿಸದ ಬಿಬಿಎಂಪಿ ದುಬಾರಿ ಮೌಲ್ಯದ ಹೊಸ ಕಾರು ಖರೀದಿ ಮಾಡಲು ಮುಂದಾಗಿದೆ.

    ಸಚಿವರಂತೆ ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರಿಗೂ ಸರ್ಕಾರಿ ಕಾರ್ ಕ್ರೇಜ್ ಬಂದಿದ್ದು, ಲಕ್ಷುರಿ (ಐಶಾರಾಮಿ) ಕಾರು ಬೇಕೆಂದು ಪಟ್ಟು ಹಿಡಿದಿದ್ದಾರೆ. ಅಧ್ಯಕ್ಷರು ಈಗಾಗಲೇ 12 ಲಕ್ಷ ರೂ. ಮೌಲ್ಯದ ಕಾರಿನಲ್ಲಿ ಓಡಾಡುತ್ತಿದ್ದಾರೆ. ಆದರೆ ಈಗ 12 ಹೊಸ ಕಾರುಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    ಕಾರಿನ ಮೌಲ್ಯ ಎಷ್ಟು ಗೊತ್ತೆ:
    ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ 25 ಲಕ್ಷ ರೂ. 9 ಇನ್ನೋವಾ ಡೀಸೆಲ್ ಕಾರು ಹಾಗೂ ಅಧಿಕಾರಿಗಳಿಗೆ 12 ಲಕ್ಷ ರೂ. ಮೌಲ್ಯದ 3 ಸಿಯಾಜ್ ಪೆಟ್ರೋಲ್ ಕಾರು. ಎಲ್ಲ 12 ಕಾರುಗಳಿಗೆ 3 ಕೋಟಿ ರೂ. ವೆಚ್ಚ ಮಾಡಲು ಬಿಬಿಎಂಪಿ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆರ್ಥಿಕ ಮತ್ತು ತೆರಿಗೆ ಸ್ಥಾಯಿ ಸಮಿತಿ ಮುಂದೆ ಪ್ರಸ್ತಾವನೆ ಸಲ್ಲಿಸಿದೆ.

  • ಬಿಬಿಎಂಪಿ ಸ್ಥಾಯಿಸಮಿತಿ ಚುನಾವಣೆ ರದ್ದು – 3 ಲಕ್ಷ ರೂ. ಭರ್ಜರಿ ಊಟ ವೇಸ್ಟ್

    ಬಿಬಿಎಂಪಿ ಸ್ಥಾಯಿಸಮಿತಿ ಚುನಾವಣೆ ರದ್ದು – 3 ಲಕ್ಷ ರೂ. ಭರ್ಜರಿ ಊಟ ವೇಸ್ಟ್

    ಬೆಂಗಳೂರು: ನಿಗಧಿಯಾಗಿದ್ದ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ರದ್ದಾಗಿದ್ದು, ಚುನಾವಣೆಗಾಗಿ ಮಾಡಿಸಿದ್ದ 3 ಲಕ್ಷ ರೂ. ಊಟ ವೇಸ್ಟ್ ಆಗಿದೆ.

    ಬಿಜೆಪಿ ಸದಸ್ಯರು ಚುನಾವಣೆಗೆ ಹಾಜರಾಗಿಲ್ಲ ಅನ್ನೋ ಕಾರಣ ನೀಡಿ ಚುನಾವಣೆ ಕ್ಯಾನ್ಸಲ್ ಮಾಡಲಾಗಿದೆ. ಹೀಗಾಗಿ ಊಟ ಮಾಡೋಕೆ ಯಾರೂ ಇಲ್ಲದೆ ಊಟ ವೇಸ್ಟ್ ಆಗಿದೆ. ವಾಸ್ತವವಾಗಿ ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಕಾಂಗ್ರೆಸ್ ಇನ್ನೂ ಒಮ್ಮತಕ್ಕೆ ಬಂದಿಲ್ಲ ಎನ್ನಲಾಗಿದೆ. ಇದರ ನಡುವೆ ಎಲೆಕ್ಷನ್‍ಗಾಗಿ ಬಿಬಿಎಂಪಿ ಮೂರು ಲಕ್ಷ ರೂ. ವ್ಯರ್ಥ ಮಾಡಿದೆ.

     

    ಚುನಾವಣೆಗಾಗಿ ಬಿಬಿಎಂಪಿ ಪೊಲೀಸ್ ಬಂದೋಬಸ್ತ್ ಸಹ ಪಡೆದಿತ್ತು. ಆದ್ರೆ ಚುನಾವಣೆಗೆ ಪೂರ್ವ ತಯಾರಿ ನಡೆಸದೆ ಸರ್ವಾಜನಿಕರ ಹಣ ಪೋಲು ಮಾಡಿದೆ.

    ಚುನಾವಣೆಗಾಗಿ 200 ಜನ ಬಾಣಸಿಗರಿಂದ ಭರ್ಜರಿ ಊಟ ತಯಾರು ಮಾಡಿಸಲಾಗಿತ್ತು. ವಾಂಗಿಬಾತ್, ಅನ್ನ, ಸಾಂಬರ್, ಅಕ್ಕಿರೊಟ್ಟಿ, ಬದನೆ ಕಾಯಿ ಎಣ್ಣೇಗಾಯಿ, ಮೊಸರನ್ನ, ಮೆಣಿಸಿನಕಾಯಿ ಬಜ್ಜಿ, ಹಪ್ಪಳ, ಪಾಯಸ ಹೀಗೆ ತರಾವರಿ ಅಡುಗೆ ಮಾಡಿಸಲಾಗಿತ್ತು.