Tag: ಸ್ಥಳೀಯ ಸಂಸ್ಥೆ ಚುನಾವಣೆ

  • ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಎಲೆಕ್ಷನ್- ಒಬಿಸಿ ಕೋಟಾಕ್ಕೆ ಸುಪ್ರೀಂ ಸಮ್ಮತಿ

    ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಎಲೆಕ್ಷನ್- ಒಬಿಸಿ ಕೋಟಾಕ್ಕೆ ಸುಪ್ರೀಂ ಸಮ್ಮತಿ

    ಭೋಪಾಲ್: ಹಿಂದುಳಿದ ವರ್ಗ (OBC)ಗಳಿಗೆ ಮೀಸಲಾತಿಯೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಮಧ್ಯಪ್ರದೇಶಕ್ಕೆ ಅನುಮತಿ ನೀಡಿದೆ.

    ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸುವಂತೆಯೂ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗವು ತನ್ನ ವರದಿಯನ್ನು ಮಂಡಿಸಿದ್ದು, ಅದರಲ್ಲಿ ‘ತ್ರಿವಳಿ ಪರೀಕ್ಷೆ’ ಅನುಸರಿಸಲಾಗಿದೆ ಎಂದು ಹೇಳಿದೆ.

    ನಿಖರ ಅಂಕಿ ಅಂಶಗಳ ಆಧಾರದ ಮೇಲೆ ಪರಿಶೀಲನೆ ನಡೆಸಬೇಕು. ಆ ಬಳಿಕವೇ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗದ ಜನರಿಗೆ ಶೇ. 27ರಷ್ಟು ಮೀಸಲಾತಿ ನೀಡಬೇಕು ಎಂದು ಕೋರ್ಟ್ ಹೇಳಿತ್ತು. ಇದನ್ನೂ ಓದಿ: ಮೋದಿ ಎಂದಿಗೂ ನಾನೇ ನೀಡಿದ್ದು ಎಂದು ಹೇಳಿರಲಿಲ್ಲ: ಸಿದ್ದುಗೆ ಟಾಂಗ್ ನೀಡಿದ ಸಿಟಿ ರವಿ

    ಮಧ್ಯಪ್ರದೇಶದಲ್ಲಿ 2 ವರ್ಷಗಳಿಂದ 23,000 ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆ ಸ್ಥಾನಗಳು ಖಾಲಿ ಇದ್ದು ಚುನಾವಣೆಗಾಗಿ ಕಾಯುತ್ತಿವೆ.

  • ಮತಗಟ್ಟೆಯಲ್ಲಿ ತೊಂದರೆಯಾಗಿದ್ದಕ್ಕೆ ಕ್ಷಮೆ ಕೇಳಿದ ತಮಿಳು ನಟ ವಿಜಯ್

    ಮತಗಟ್ಟೆಯಲ್ಲಿ ತೊಂದರೆಯಾಗಿದ್ದಕ್ಕೆ ಕ್ಷಮೆ ಕೇಳಿದ ತಮಿಳು ನಟ ವಿಜಯ್

    ಚೆನ್ನೈ: ಕಾಲಿವುಡ್ ನಟ ದಳಪತಿ ವಿಜಯ್ ಇಂದು ಚೆನ್ನೈನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತ ಚಲಾಯಿಸಿದರು.

    ಈ ವೇಳೆ ವಿಜಯ್ ನೋಡಲು ಕೆಲ ಜನರ ಗುಂಪು ಹಾಗೂ ಮಾಧ್ಯಮದವರು ನೂಕುನುಗ್ಗಲು ಮಾಡಿದ್ದರಿಂದ ಜನಸಾಮಾನ್ಯರಿಗೆ ತೊಂದರೆಯಾಯಿತು. ಇದನ್ನು ಗಮನಿಸಿದ ವಿಜಯ್ ಮತಗಟ್ಟೆಯಲ್ಲಿ ಆಗಿರುವ ಅನಾನುಕೂಲಕ್ಕೆ ಅಲ್ಲಿಯೇ ಕ್ಷಮೆಯಾಚಿಸಿದ್ದಾರೆ. ಇದನ್ನು ಓದಿ: ಮತ್ತೊಂದು ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಮೇಘನಾ ರಾಜ್

    ತಮಿಳುನಾಡಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಶನಿವಾರ ಮತದಾನ ಆರಂಭವಾಗಿದೆ. 10 ವರ್ಷಗಳ ನಂತರ ನಡೆಯುತ್ತಿರುವ ಈ ಚುನಾವಣೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ನಡುವಿನ ಜಿದ್ದಾಜಿದ್ದಿ ಹೋರಾಟವಾಗಿದೆ. ಆದರೆ ಬಿಜೆಪಿ ಕೂಡ ರಾಜ್ಯದಲ್ಲಿ ನೆಲೆಯೂರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದನ್ನು ಓದಿ: ಡಾ.ವಿಷ್ಣು ಪುತ್ಥಳಿ ಅನಾವರಣಕ್ಕೆ ಹಿಜಬ್ -ಕೇಸರಿ ವಿವಾದ ಅಡ್ಡಿ

    648 ನಗರ ಸ್ಥಳೀಯ ಸಂಸ್ಥೆಗಳು ಮತ್ತು 12,607 ವಾರ್ಡ್ ಸದಸ್ಯರಿಗೆ ಚುನಾವಣೆ ನಡೆಯುತ್ತಿದೆ. ಒಂಬತ್ತು ತಿಂಗಳಿನಿಂದ ಆಡಳಿತ ನಡೆಸುತ್ತಿರುವ ಡಿಎಂಕೆ ತಮ್ಮ ಉತ್ತಮ ಕೆಲಸದ ಬಗ್ಗೆ ಪ್ರಚಾರ ನಡೆಸಿದರೆ, ಎಐಎಡಿಎಂಕೆ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿದೆ ಎಂದು ಆರೋಪಿಸುತ್ತಾ ಪ್ರಚಾರ ನಡೆಸಿತು. ಅಲ್ಲದೇ ತಮಿಳುನಾಡಿನ ಹಲವಾರು ಭಾಗಗಳಲ್ಲಿ ಮತಗಾಗಿ ನಗದು ಮತ್ತು ಉಡುಗೊರೆಗಳ ಹಾವಳಿ ಭಾರೀ ಸದ್ದು ಮಾಡಿತ್ತು.

  • ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಏಕಾಂಗಿ ಸ್ಪರ್ಧೆ: ಎಚ್‍ಡಿಡಿ

    ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಏಕಾಂಗಿ ಸ್ಪರ್ಧೆ: ಎಚ್‍ಡಿಡಿ

    ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ಪರ್ಧೆ ನಡೆಸಲಿದ್ದು, ಯಾವುದೇ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಕಣಕ್ಕೆ ಇಳಿಯಲಿದೆ ಎಂದು ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ಅವರು ಹೇಳಿದ್ದಾರೆ.

    ಪಕ್ಷ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣೆ ಆಯೋಗ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ ಮಾಡಿದೆ. ಮಂಗಳೂರಿನಲ್ಲಿ ಜೆಡಿಎಸ್ ಪಕ್ಷದ 4 ರಿಂದ 5 ಸ್ಥಾನ ಗೆಲ್ಲುವ ಸಾಧ್ಯತೆ ಇದ್ದು, ಹೀಗಾಗಿ ಅಲ್ಲಿ ಸ್ಪರ್ಧೆ ಮಾಡುತ್ತೇವೆ. ಈ ಹಿಂದೆ ಬಿಜೆಪಿ ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದೇವು. ಆದರೆ ಈ ಬಾರಿ ಜೆಡಿಎಸ್ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಸ್ಪರ್ಧೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.

    ಚುನಾವಣೆಯ ನಡೆಯುವ ರಾಜ್ಯದ ಎಲ್ಲಾ ಭಾಗದಲ್ಲೂ ಅಗತ್ಯವಿರುವ ಕಡೆ ಮಾತ್ರ ಸ್ಪರ್ಧೆ ಮಾಡುತ್ತೇವೆ. ಈ ಬಗ್ಗೆ ಫಾರೂಖ್‍ರೊಂದಿಗೆ ಚರ್ಚೆ ಮಾಡಿ ಟಿಕೆಟ್ ಫೈನಲ್ ಮಾಡುತ್ತೇವೆ. ಸ್ವತಃ ನಾನೇ ಮಂಗಳೂರು, ಯಾದಗಿರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡುತ್ತೇನೆ. ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಅಗತ್ಯಿವಿರುವ ಎಲ್ಲಾ ಕಡೆ ಸ್ಪರ್ಧೆ ಮಾಡುತ್ತಾರೆ ಎಂದರು.

    ತೊಂದರೆ ಕೊಟ್ಟರೆ ಸುಮ್ಮನಿರಲ್ಲ: ಇದೇ ವೇಳೆ ಸಿಎಂ ಬಿಎಸ್‍ವೈ ಅವರ ಕಾರಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ ಯಾದಗಿರಿ ಪಕ್ಷದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಹಿಂಸೆ ನೀಡಲಾಗುತ್ತಿದೆ. ಸಿಎಂ ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ನೀಡಿದ ಅನುದಾನವನ್ನು ಕಡಿತ ಮಾಡಿದ್ದ ಪರಿಣಾಮ ಕಾರ್ಯಕರ್ತರು ತೆರಳಿದ್ದರು. ಈ ವೇಳೆ ಸಿಎಂ ತೆರಳುತ್ತಿದ್ದ ಕಾರಣ ಕಾರಿಗೆ ಅಡ್ಡ ಹಾಕಿದ್ದರು ಅಷ್ಟೇ. ಆದರೆ ಇದನ್ನೇ ದೂರು ಮಾಡಿಕೊಂಡು ಪ್ರಕರಣ ದಾಖಲಿಸಿ ಅವರಿಗೆ ಕಾರ್ಯಕರ್ತರಿಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಅವರಿಗೆ ಧೈರ್ಯ ಹೇಳುವ ಸಾಲುವಾಗಿ ನಾಳೆ ಅಲ್ಲಿಗೆ ಭೇಟಿ ನೀಡುತ್ತಿದ್ದೇನೆ ಎಂದರು.

    ಜೆಡಿಎಸ್ ಶಾಸಕರು ಇರುವ 37 ಕ್ಷೇತ್ರದ ಅನುದಾನವನ್ನು ಸಿಎಂ ಯಡಿಯೂರಪ್ಪ ಕಡಿತ ಮಾಡಿದ್ದಾರೆ. ನಾಳೆ ನಾನು ಅಲ್ಲಿಗೆ ಹೋಗಿ ಅವರಿಗೆ ಬೆಂಬಲ ನೀಡುತ್ತೇನೆ. ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ಮಾತ್ರ ಸುಮ್ಮನೆ ಇರುವುದಿಲ್ಲ. ನನಗೆ ಹೋರಾಟ ಹೊಸದಲ್ಲ ಎಂದರು. ಇದೇ ವೇಳೆ ರಾಷ್ಟ್ರ ರಾಜಕಾರಣಕ್ಕೆ ಇಂದಿನ ದಿನ ದೇವೇಗೌಡರು ಅನಿವಾರ್ಯತೆ ಇದೆ ಎಂಬ ಮಾಜಿ ಸಿಎಂ ಎಚ್‍ಡಿಕೆ ಅವರ ಹೇಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ದೇಶದ ಇಂದಿನ ಬೆಳವಣಿಗೆಗಳ ಕುರಿತು ನಿರಂತರ ಮಾಹಿತಿ ಪಡೆಯುತ್ತಿದ್ದೇನೆ. ಆದರೆ ಮೊದಲು ರಾಜ್ಯದಲ್ಲಿ ನಮ್ಮ ಪಕ್ಷ ಸಂಘಟನೆ ಮಾಡುತ್ತೇನೆ. ಮೊದಲು ರಾಜ್ಯದಲ್ಲಿ ನಮ್ಮ ಪಕ್ಷ ಸಂಘಟನೆ ನನ್ನ ಆದ್ಯತೆ ಎಂದರು.

  • ಸ್ಥಳೀಯ ಸಂಸ್ಥೆ ಚುನಾವಣೆ – ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

    ಸ್ಥಳೀಯ ಸಂಸ್ಥೆ ಚುನಾವಣೆ – ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

    ಬೆಂಗಳೂರು: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆದರೆ, ಬಿಜೆಪಿ 2ನೇ ಸ್ಥಾನ ಹಾಗೂ ಜೆಡಿಎಸ್ 3ನೇ ಸ್ಥಾನ ಪಡೆದಿದೆ.

    ರಾಜ್ಯದ 8 ನಗರಸಭೆ, 33 ಪುರಸಭೆ ಹಾಗೂ 22 ಪಟ್ಟಣ ಪಂಚಾಯತ್‍ಗಳಿಗೆ ಎರಡು ದಿನಗಳ ಹಿಂದೆ ಚುನಾವಣೆ ನಡೆದಿತ್ತು. ಇಂದು ಪ್ರಕಟಗೊಂಡ ಫಲಿತಾಂಶದಲ್ಲಿ ಕಾಂಗ್ರೆಸ್ 13 ಪುರಸಭೆ, 4 ಪಟ್ಟಣ ಪಂಚಾಯತ್, 2 ನಗರಸಭೆಗಳಲ್ಲಿ ಜಯ ಪಡೆದಿದೆ.

    ಬಿಜೆಪಿ 9 ಪಟ್ಟಣ ಪಂಚಾಯತ್, 6 ಪುರಸಭೆ ಹಾಗೂ ಒಂದು ನಗರಸಭೆಯಲ್ಲಿ ಗೆಲುವು ಪಡೆದಿದೆ. ಇನ್ನು ಜೆಡಿಎಸ್ ಪಕ್ಷ 2 ಪುರಸಭೆಗಳಲ್ಲಿ ಪಡೆದಿದ್ದು, ಪಕ್ಷೇತರರು 2 ಪುರಸಭೆಗಳಲ್ಲಿ ಮೇಲುಗೈ ಸಾಧಿಸಿದ್ದಾರೆ.

    2 ನಗರಸಭೆ ಹಾಗೂ ಒಂದು ಪುರಸಭೆಯಲ್ಲಿ ಮೈತ್ರಿ ಪಕ್ಷಗಳು ಅಧಿಕಾರ ಪಡೆದಿವೆ. ಉಳಿದಂತೆ 6 ಪಟ್ಟಣ ಪಂಚಾಯತ್, 6 ಪುರಸಭೆ ಮತ್ತು 2 ನಗರಸಭೆಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

  • ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಕಷ್ಟ – ಫ್ರೆಂಡ್ಲಿ ಫೈಟ್ ಮಾಡ್ತೇವೆ: ಸಾರಾ ಮಹೇಶ್

    ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಕಷ್ಟ – ಫ್ರೆಂಡ್ಲಿ ಫೈಟ್ ಮಾಡ್ತೇವೆ: ಸಾರಾ ಮಹೇಶ್

    ಮೈಸೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುವುದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪ್ರತ್ಯೇಕ ಸ್ಪರ್ಧೆ ಮಾಡುತ್ತೇವೆ. ಆ ಮೂಲಕ ಫ್ರೆಂಡ್ಲಿ ಫೈಟ್ ನಡೆಸುತ್ತೇವೆ. ಒಂದು ವೇಳೆ ವರಿಷ್ಠರು ತೀರ್ಮಾನ ಮಾಡಿದರೆ ಒಂದಾಗುತ್ತೇವೆ ಎಂದು ಸಚಿವ ಸಾರಾ ಮಹೇಶ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆ ಇಲ್ಲ. ಮೈತ್ರಿ ಸರ್ಕಾರ ಇದ್ದರು ಕೂಡ ಪ್ರತ್ಯೇಕ ಪ್ರತ್ಯೇಕ ಸ್ಪರ್ಧೆ ಮಾಡಿ, ಫ್ರೆಂಡ್ಲಿ ಫೈಟ್‍ಗೆ ನಿರ್ಧಾರ ಮಾಡಲಾಗಿದೆ. ಸ್ಥಳೀಯ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಎರಡು ಪಕ್ಷಗಳಿಗೆ ಕಷ್ಟ ಆಗುವುದರಿಂದಲೇ ಚಿಂತನೆ ನಡೆಸಲಾಗಿದೆ. ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು.

    ಒಂದೊಮ್ಮೆ ನಾಯಕರ ಹಂತದಲ್ಲಿ ಹೊಂದಾಣಿಕೆ ಮುಂದಾದರು ಅದು ಯಶಸ್ವಿ ಆಗುವುದಿಲ್ಲ. ಏಕೆಂದರೆ ಹಲವು ವರ್ಷಗಳಿಂದ ತಳಮಟ್ಟದಲ್ಲಿ ಪಕ್ಷಕ್ಕಾಗಿ ಕಾರ್ಯಕರ್ತರು ಕೆಲಸ ಮಾಡಿರುತ್ತಾರೆ. ಈಗ ಹೊಂದಾಣಿಕೆ ಎಂದರೆ ಅವರು ಬೇರೆ ಪಕ್ಷಕ್ಕೆ ಹೋಗುತ್ತಾರೆ. ಇಲ್ಲವಾದರೆ ಬಂಡಾಯವಾಗಿ ಸ್ಪರ್ಧೆ ಮಾಡುತ್ತಾರೆ ಎಂದರು.

    ಇದೇ ವೇಳೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಮತಹಾಕಿದ್ದಾರೆ ಎಂಬ ಸಚಿವ ಜಿಟಿಡಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಜಿಟಿ ದೇವೆಗೌಡರು ಅವರಿಗಿರುವ ಮಾಹಿತಿ ಮೇರೆಗೆ ಹೇಳಿಕೆ ನೀಡಿದ್ದಾರೆ. ಇಲ್ಲಿ ನಮ್ಮ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಒಂದು ಬೂತ್ ವಿಚಾರವಾಗಿ ಮಾತ್ರ ಜಿಟಿಡಿ ಅವರು ಹೇಳಿಕೆ ನೀಡಿದ್ದು ನಿಜ. ಇಡೀ ಲೋಕಸಭಾ ವ್ಯಾಪ್ತಿಯಲ್ಲಿ ನಾಯಕರು ತೀರ್ಮಾನಿಸಿದಂತೆ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದೇವೆ. ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಲಕ್ಷ ಮತಗಳ ಅಂತರದಿಂದ ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಮೈಸೂರಿನಲ್ಲೂ ಕಡಿಮೆ ಅಂತರದಿಂದ ಗೆಲುವು ಪಡೆಯುತ್ತೇವೆ ಎಂದರು.

  • ಬ್ರಿಟನ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕನ್ನಡಿಗರ ಜಯಭೇರಿ

    ಬ್ರಿಟನ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕನ್ನಡಿಗರ ಜಯಭೇರಿ

    ಲಂಡನ್: ಬ್ರಿಟನ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕರ್ನಾಟಕ ಮೂಲದ ಇಬ್ಬರು ಭರ್ಜರಿ ಜಯ ಪಡೆದಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೆಂಚಾಪುರ ಗ್ರಾಮದವರಾದ ಡಾ. ಕುಮಾರ್ ನಾಯ್ಕ್ ಮೊದಲ ಬಾರಿಗೆ ಜಯ ಗಳಿಸಿದ್ದಾರೆ. ಇವರು ಮೂಳೆವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಸ್ವಿಂಡನ್ ಹೇಡನ್ ವಿಕ್ ಕ್ಷೇತ್ರದಲ್ಲಿ ಕನ್ಸರ್ವೇಟಿವ್ ಪಕ್ಷದಿಂದ ಸ್ಪರ್ಧಿಸಿದ್ದರು. ಲೇಬರ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.

    ಮತ್ತೊಬ್ಬ ಕನ್ನಡಿಗ ಸುರೇಶ್ ಗಟ್ಟಾಪುರ ಅವರು ಸ್ವಿಂಡನ್ ವೆಸ್ಟಿಯಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದರು. ಇವರು ಕೂಡ ಮತ್ತೊಮ್ಮೆ ಗೆದ್ದು ಸ್ಥಳೀಯ ಆಡಳಿತ ಸಂಸ್ಥೆಯನ್ನು ಪ್ರವೇಶಿಸಿದ್ದಾರೆ.

  • ಟೈಲ್ಸ್ ಫಿಕ್ಸ್ ಮಾಡುವ ಪುನೀತ್ 1 ಮತದಲ್ಲಿ ಪಟ್ಟಣ ಪಂಚಾಯಿತಿಗೆ ಫಿಕ್ಸ್!

    ಟೈಲ್ಸ್ ಫಿಕ್ಸ್ ಮಾಡುವ ಪುನೀತ್ 1 ಮತದಲ್ಲಿ ಪಟ್ಟಣ ಪಂಚಾಯಿತಿಗೆ ಫಿಕ್ಸ್!

    ಉಡುಪಿ: ಒಂದೊಂದು ವೋಟ್ ಕೂಡಾ ಬಹಳ ಪ್ರಾಮುಖ್ಯತೆ ಹೊಂದಿರುತ್ತದೆ ಅನ್ನೋದು ಒಂದು ವೋಟಿನಲ್ಲಿ ಗೆದ್ದವರಿಗೆ ಮತ್ತು ಒಂದು ವೋಟಲ್ಲಿ ಸೋತವರಿಗೆ ಗೊತ್ತಿರುತ್ತದೆ. ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತಿಯ ವಾರ್ಡ್ ನಂಬರ್ 4 ರಲ್ಲಿ ಒಂದು ಓಟಿನಿಂದ ಒಬ್ಬರು ಗೆದ್ದರೆ ಎದುರಾಳಿ ಒಂದು ಓಟಿನ ಅಂತರದಲ್ಲಿ ಸೋತಿದ್ದಾರೆ.

    ಸಾಲಿಗ್ರಾಮದ ವಾರ್ಡ್ ನಂಬರ್ 4 ರಲ್ಲಿ ಬಿಜೆಪಿಯಿಂದ ಈ ಹಿಂದೆ ಎರಡು ಬಾರಿ ಸ್ಪರ್ಧಿಸಿದ್ದ ಕರುಣಾಕರ್ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಎದುರಾಳಿ ಕಾಂಗ್ರೆಸ್ ನಿಂದ ಪುನೀತ್ ಪೂಜಾರಿ ಎಂಬ ಯುವಕ ಮೊದಲ ಬಾರಿ ಸ್ಪರ್ಧೆ ಮಾಡಿದ್ದರು. ಮೂರು ಮೂರು ಬಾರಿ ಮತ ಎಣಿಕೆ ಮಾಡಿದರೂ ಇವರಿಬ್ಬರ ನಡುವೆ ಮ್ಯಾಚ್ ಟೈ ಆಗಿತ್ತು.

    ಕಾಂಗ್ರೆಸ್ ನ ಪುನೀತ್ ಪೂಜಾರಿಗೆ 254 ಮತ ಹಾಗೂ ಬಿಜೆಪಿಯ ಕರುಣಾಕರ ಅವರಿಗೂ 254 ವೋಟ್ ಬಿದ್ದಿತ್ತು. ಆಗ ಚುನಾವಣೆ ಎಂಬ ಪಂದ್ಯದ ದಿಕ್ಕು ಬದಲಿಸಿದ್ದು, ಆ ಒಂದು ಅಂಚೆ ಮತ. ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ವಾರ್ಡ್ ಸಂಖ್ಯೆ 4 ರಲ್ಲಿ ಒಬ್ಬರು ಅಂಚೆ ಮೂಲಕ ಕಾಂಗ್ರೆಸ್ ಗೆ ವೋಟ್ ಮಾಡಿದ್ದರು. ಆ ಒಂದು ಮತ ಟೈಲ್ಸ್ ಫಿಟ್ಟಿಂಗ್ ಮಾಡುವ ಪುನೀತ್ ಪೂಜಾರಿಯನ್ನು ಸಾಲಿಗ್ರಾಮ ಪಟ್ಟಣ ಪಂಚಾಯತಿಯ 16 ಬಳಗದೊಳಗೆ ಫಿಕ್ಸ್ ಮಾಡಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪುನೀತ್, ಕಾಂಗ್ರೆಸ್ ಪಕ್ಷ ಮತ್ತು ನನ್ನ ಆತ್ಮೀಯ ಸ್ನೇಹಿತರ ಹಗಲಿರುಳಿನ ಪ್ರಯತ್ನದಲ್ಲಿ ಈ ಗೆಲುವು ಸಾಧ್ಯವಾಗಿದೆ. ಬಿಜೆಪಿಯ ಕರುಣಾಕರ್ ಅವರಿಗೆ ನನಗಿಂತ ಒಂದು ಮತ ಕಡಿಮೆ ಬಂದಿದೆ. ಮುಂದಿನ 5 ವರ್ಷ ಅವರ ಅನುಭವ ಮತ್ತು ಸಹಕಾರವನ್ನು ಪಡೆದು ಕೆಲಸ ಮಾಡುತ್ತೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಾವ ಪಕ್ಷಕ್ಕೆ ಒಟ್ಟು ಎಷ್ಟು ಸ್ಥಾನ? ಯಾವ ಜಿಲ್ಲೆಯಲ್ಲಿ ಯಾರಿಗೆ ಎಷ್ಟು ಸ್ಥಾನ ಇಲ್ಲಿದೆ ಮಾಹಿತಿ

    ಯಾವ ಪಕ್ಷಕ್ಕೆ ಒಟ್ಟು ಎಷ್ಟು ಸ್ಥಾನ? ಯಾವ ಜಿಲ್ಲೆಯಲ್ಲಿ ಯಾರಿಗೆ ಎಷ್ಟು ಸ್ಥಾನ ಇಲ್ಲಿದೆ ಮಾಹಿತಿ

    ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ನಡೆದಿದೆ. ಕಾಂಗ್ರೆಸ್ ಒಟ್ಟು 33, ಬಿಜೆಪಿ 32, ಜೆಡಿಎಸ್ 12 ಕಡೆ ಅಧಿಕಾರ ಹಿಡಿಯಲಿದೆ. 25 ಕಡೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೂರು ಕಡೆ ಪಕ್ಷೇತರರು ಅಧಿಕಾರದ ಗದ್ದುಗೆ ಏರಲಿದ್ದಾರೆ.

    7 ನಗರಸಭೆ, 19 ಪುರಸಭೆ ಹಾಗೂ 7 ಪಟ್ಟಣ ಪಂಚಾಯತ್ ಗೆಲ್ಲುವ ಮೂಲಕ ಕಾಂಗ್ರೆಸ್ 33 ಕಡೆ ಅಧಿಕಾರ ಹಿಡಿಯಲಿದೆ. 10 ನಗರಸಭೆ, 14 ಪುರಸಭೆ, 7 ಪಟ್ಟಣ ಪಂಚಾಯಿತಿ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ಗೆಲ್ಲುವುದರೊಂದಿಗೆ ಒಟ್ಟು 32 ಕಡೆ ಜಯ ಸಾಧಿಸಿದೆ. 2 ನಗರಸಭೆ, 8 ಪುರಸಭೆ ಹಾಗೂ 2 ಪಟ್ಟಣ ಪಂಚಾಯತ್ ಗಳನ್ನು ಗೆಲ್ಲುವ ಮೂಲಕ ಜೆಡಿಎಸ್ 25 ಕಡೆ ಆಡಳಿತ ನಡೆಸಲಿದೆ.

    9 ನಗರಸಭೆ, 11 ಪುರಸಭೆ, 3 ಪಟ್ಟಣ ಪಂಚಾಯ್ ಹಾಗೂ 2 ಮಹಾನಗರ ಪಾಲಿಕೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. 1 ನಗರಸಭೆ, 1 ಪುರಸಭೆ ಹಾಗೂ 1 ಪಟ್ಟಣ ಪಂಚಾಯತ್ ನಲ್ಲಿ ಪಕ್ಷೇತರ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಸ್‍ಡಿಪಿಐ ಕಾರ್ಯಕರ್ತನ ಮುಖಕ್ಕೆ ಚಾಕುವಿನಿಂದ ಇರಿದ ಕೈ ಕಾರ್ಯಕರ್ತರು!

    ಎಸ್‍ಡಿಪಿಐ ಕಾರ್ಯಕರ್ತನ ಮುಖಕ್ಕೆ ಚಾಕುವಿನಿಂದ ಇರಿದ ಕೈ ಕಾರ್ಯಕರ್ತರು!

    ಮೈಸೂರು: ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದನೆಂದು ಆರೋಪಿಸಿ ಎಸ್‍ಡಿಪಿಐ ಕಾರ್ಯಕರ್ತನ ಮೇಲೆ ಕೈ ಕಾರ್ಯಕರ್ತರು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಇಂದು ನಡೆದಿದೆ.

    ಮೈಸೂರಿನ ಶಾಂತಿನಗರದ ರಮ್ಜಾ ಮಸೀದಿ ಬಳಿ ಈ ಘಟನೆ ನಡೆದಿದ್ದು, ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಯ ಆರೋಪ ಮಾಡಲಾಗುತ್ತಿದೆ. ಘಟನೆಯಲ್ಲಿ ಓರ್ವ ಎಸ್‍ಡಿಪಿಐ ಕಾರ್ಯಕರ್ತನ ಮುಖ ರಕ್ತಸಿಕ್ತವಾಗಿದ್ದು, ಕೂಡಲೇ ಗಾಯಾಳುವನ್ನು ನಗರದ ಕೆಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ನೂತನ ಪಾಲಿಕೆ ಸದಸ್ಯ ಅಯಾಜ್ ಪಾಷಾ ಬೆಂಬಲಿಗರಿಂದ ಹಲ್ಲೆ ಆರೋಪ ಕೇಳಿಬಂದಿದೆ. ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಪ್ಪಳ, ಗಂಗಾವತಿ, ಕುಷ್ಟಗಿಯಲ್ಲಿ ಕಾಂಗ್ರೆಸ್ ಗೆಲುವು – ರಾಯರೆಡ್ಡಿಗೆ ಮತ್ತೆ ಹಿನ್ನಡೆ

    ಕೊಪ್ಪಳ, ಗಂಗಾವತಿ, ಕುಷ್ಟಗಿಯಲ್ಲಿ ಕಾಂಗ್ರೆಸ್ ಗೆಲುವು – ರಾಯರೆಡ್ಡಿಗೆ ಮತ್ತೆ ಹಿನ್ನಡೆ

    ಕೊಪ್ಪಳ: ಜಿಲ್ಲೆಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಪತ್ಯ ಸಾಧಿಸಿದೆ. ಒಟ್ಟು 104 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

    ಕೊಪ್ಪಳ ನಗರಸಭೆ:

    ಕೊಪ್ಪಳ ನಗರಸಭೆಯಲ್ಲಿ 31 ಸ್ಥಾನಗಳಲ್ಲಿ 15 ಕಾಂಗ್ರೆಸ್, 10 ಬಿಜೆಪಿ, 4 ಪಕ್ಷೇತರ ಹಾಗೂ 2 ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲವು ಕಂಡಿದ್ದಾರೆ. ಮ್ಯಾಜಿಕ್ ನಂಬರ್ 16 ಆಗಿದ್ದು, ಸದ್ಯ ಕೊಪ್ಪಳ ನಗರಸಭೆ ಅತಂತ್ರವಾಗಿದೆ. ಚುನಾವಣೆಗೂ ಮುನ್ನ 4 ಜನ ಪಕ್ಷೇತರರು ಕಾಂಗ್ರೆಸ್ಸಿನಿಂದ ಬಂಡಾಯವೆದ್ದು ಸ್ಪರ್ಧೆ ಮಾಡಿದ್ದರು. ಈಗ ಅವರೆಲ್ಲರೂ ಕಾಂಗ್ರೆಸ್ ಜೊತೆ ಕೈಜೋಡಿಸುವ ನೀರಿಕ್ಷೆಯಿದೆ. ಹೀಗಾಗಿ ಕೊಪ್ಪಳ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎನ್ನಲಾಗುತ್ತಿದೆ.

    ಗಂಗಾವತಿ ನಗರಸಭೆ:

    ಗಂಗಾವತಿಯ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಹಾಲಿ ಶಾಸಕ ಪರಣ್ಣ ಮುನವಳ್ಳಿ ಭಾರೀ ಮುಖಭಂಗ ಅನುಭವಿಸಿದ್ದಾರೆ. ಒಟ್ಟು 35 ಸ್ಥಾನಗಳ ಪೈಕಿ 17 ರಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದೆ. ಬಿಜೆಪಿ 14, ಜೆಡಿಎಸ್ 2 ಹಾಗೂ ಪಕ್ಷೇತರ ಅಭ್ಯರ್ಥಿ 2 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದಾರೆ. ಇಲ್ಲಿನ ಮ್ಯಾಜಿಕ್ ನಂಬರ್ 18 ಆಗಿದ್ದು, ಕಾಂಗ್ರೆಸ್ ಪಕ್ಷೇತರರೊಂದಿಗೆ ಕೈಜೋಡಿಸಿ ಗಂಗಾವತಿ ನಗರಸಭೆಯಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ.

    ಕುಷ್ಟಗಿ ಪುರಸಭೆ:

    ಕುಷ್ಟಗಿ ಪುರಸಭೆ ಕಾಂಗ್ರೆಸ್ ವಶವಾಗಿದ್ದು, 23 ಸ್ಥಾನಗಳಿಲ್ಲಿ ಕಾಂಗ್ರೆಸ್ 12 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನುಳಿದಂತೆ ಬಿಜೆಪಿ 8, 2 ಪಕ್ಷೇತರ ಹಾಗೂ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮ್ಯಾಜಿಕ್ ನಂಬರ್ 12 ಆಗಿದ್ದು, ಕಾಂಗ್ರೆಸ್ ಸರಳ ಬಹುಮತದೊಂದಿಗೆ ಕುಷ್ಟಗಿ ಪುರಸಭೆಯಲ್ಲಿ ಅಧಿಕಾರದ ಗುದ್ದುಗೆ ಪಡೆದಿದೆ.

    ಯಲಬುರ್ಗಾ ಪಟ್ಟಣ ಪಂಚಾಯತ್:

    ಯಲಬುರ್ಗಾ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿಗೆ ಭಾರೀ ಮುಖಭಂಗವಾಗಿದೆ. 15 ಸ್ಥಾನಗಳ ಪೈಕಿ ಕಾಂಗ್ರೆಸ್ ಕೇವಲ 3 ಸ್ಥಾನಗಳನ್ನು ಗಳಿಸಿದ್ದು, 11 ಬಿಜೆಪಿ ಹಾಗೂ 1 ಪಕ್ಷೇತರ ಅಭ್ಯರ್ಥಿ ವಿಜಯಸಾಧಿಸಿದ್ದಾರೆ. ಬಹುಮತ ಪಡೆದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv