Tag: ಸ್ಥಳೀಯ ಸಂಸ್ಥೆಗಳು

  • ಪಂಚಾಯತ್‌ ದಲಿತ ಅಧ್ಯಕ್ಷರು ಕುರ್ಚಿಯಲ್ಲಿ ಕೂರುವಂತಿಲ್ಲ, ಸ್ವಾತಂತ್ರ್ಯ ದಿನ ಧ್ವಜ ಹಾರಿಸುವಂತಿಲ್ಲ: ಸರ್ವೇಯಿಂದ ತಾರತಮ್ಯ ಬೆಳಕಿಗೆ

    ಪಂಚಾಯತ್‌ ದಲಿತ ಅಧ್ಯಕ್ಷರು ಕುರ್ಚಿಯಲ್ಲಿ ಕೂರುವಂತಿಲ್ಲ, ಸ್ವಾತಂತ್ರ್ಯ ದಿನ ಧ್ವಜ ಹಾರಿಸುವಂತಿಲ್ಲ: ಸರ್ವೇಯಿಂದ ತಾರತಮ್ಯ ಬೆಳಕಿಗೆ

    ಚೆನ್ನೈ: ಸ್ಥಳೀಯ ಸಂಸ್ಥೆಗಳಲ್ಲಿ ದಲಿತ ಪ್ರತಿನಿಧಿಗಳು ತಾರತಮ್ಯ ಎದುರಿಸುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ಮೋರ್ಚಾ (ಟಿಎನ್‌ಯುಇಎಫ್‌) ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ.

    ತಮಿಳುನಾಡಿನ 24 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. 386 ಪಂಚಾಯಿತಿಗಳಲ್ಲಿ ದಲಿತ ಸಮುದಾಯದವರು ಅಧ್ಯಕ್ಷರಾಗಿದ್ದು, ಆ ಪೈಕಿ 22 ಮಂದಿ ತಮ್ಮ ಕಚೇರಿಗಳಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳುವಂತಿಲ್ಲ. ಪಂಚಾಯಿತಿಗಳಲ್ಲಿ ದಲಿತ ಪ್ರತಿನಿಧಿಗಳ ವಿರುದ್ಧ 17 ಬಗೆಯ ತಾರತಮ್ಯಗಳು ಚಾಲ್ತಿಯಲ್ಲಿವೆ. ಇದನ್ನೂ ಓದಿ: ಮನೆ ಬಾಡಿಗೆದಾರರಿಗೆ ಶಾಕ್ – ಹೊಸ ನಿಯಮಗಳ ಪ್ರಕಾರ ಶೇ.18 ರಷ್ಟು ತೆರಿಗೆ ಬರೆ

    ಅನೇಕ ದಲಿತ ಪ್ರತಿನಿಧಿಗಳಿಗೆ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜವನ್ನು ಹಾರಿಸುವ ಹಕ್ಕನ್ನು ನಿರಾಕರಿಸಲಾಗಿದೆ. ಈ ತಾರತಮ್ಯವು ಕೆಲವೆಡೆ ಸ್ಥಳೀಯ ಸಂಸ್ಥೆಯ ಕಚೇರಿಗೆ ಪ್ರವೇಶವನ್ನು ನಿರಾಕರಿಸುವುದನ್ನೂ ಒಳಗೊಂಡಿದೆ ಎಂದು ಸಮೀಕ್ಷೆ ತಿಳಿಸಿದೆ.

    ತಮಿಳುನಾಡು ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿದ್ದು, ಸಾಮಾಜಿಕ ನ್ಯಾಯದ ಭೂಮಿ ಎನ್ನುವ ಮಾತು ಈ ಸಮೀಕ್ಷೆಯೊಂದಿಗೆ ಪ್ರಶ್ನಾರ್ಹವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ದಲಿತ ಪ್ರತಿನಿಧಿಗಳು ರಾಜ್ಯದ ಹೆಚ್ಚಿನ ಭಾಗಗಳಲ್ಲಿ ತಾರತಮ್ಯಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ಶೀಘ್ರವೇ ಉದ್ಘಾಟನೆಗೊಳ್ಳಲಿದೆ ದೆಹಲಿ-ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ

    ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಅವರ ಹೆಸರಿನ ಫಲಕಗಳನ್ನು ಪ್ರದರ್ಶಿಸಲಾಗಿಲ್ಲ. ಕೆಲವು ಪಂಚಾಯಿತಿಗಳಲ್ಲಿ ದಲಿತ ಅಧ್ಯಕ್ಷರಿಗೆ ಕುರ್ಚಿ ಮೇಲೆ ಕುಳಿತುಕೊಳ್ಳಲು ಅವಕಾಶವಿಲ್ಲ. ಇನ್ನು ಕೆಲವೆಡೆ ಅವರ ಕುರ್ಚಿಗಳನ್ನು ತೆಗೆಯಲಾಗಿದೆ. ಕೌನ್ಸಿಲ್‌ ಸಭೆಗಳಲ್ಲಿ ನಿರ್ಣಯಗಳನ್ನು ಅಂತಿಮಗೊಳಿಸಿ ಇತರ ಸದಸ್ಯರು ಅಂಗೀಕರಿಸಿದ ನಂತರ ಅದಕ್ಕೆ ದಲಿತ ಸಮುದಾಯದ ಅಧ್ಯಕ್ಷರ ಸಹಿಯನ್ನು ಪಡೆಯಲಾಗುತ್ತದೆ. ಅಕಸ್ಮಾತ್ ಪಂಚಾಯಿತಿಯ ದಲಿತ ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಿದರೆ, ದಲಿತೇತರರು ಅದನ್ನು ಬಹಿಷ್ಕರಿಸುತ್ತಾರೆ.

    ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಆಗಸ್ಟ್ 15 ರಂದು ಪಂಚಾಯತ್ ಅಧ್ಯಕ್ಷರು ರಾಷ್ಟ್ರಧ್ವಜಾರೋಹಣ ಮಾಡಲು ಅನುಕೂಲವಾಗುವಂತೆ ವಿಶೇಷ ಅಧಿಕಾರಿಗಳನ್ನು ನಿಯೋಜಿಸುವಂತೆ ಒತ್ತಾಯಿಸಲು ಟಿಎನ್‌ಯುಇಎಫ್‌ ಮುಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ 58 ಪುರಸಭೆ, 57 ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಇಂದು

    ರಾಜ್ಯದ 58 ಪುರಸಭೆ, 57 ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಇಂದು

    ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಡಿ.27ರಂದು ನಡೆದಿದ್ದ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ರಾಜ್ಯದ 58 ಪುರಸಭೆ, 57 ಗ್ರಾಮ ಪಂಚಾಯಿತಿಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ.

    ಬೆಳಗ್ಗೆ 8 ರಿಂದಲೇ ಆಯಾ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದೆ. 5 ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯಿತಿ ಫಲಿತಾಂಶ ಹೊರ ಬೀಳಲಿದೆ. ಒಟ್ಟು 1,185 ವಾರ್ಡ್‌ಗಳ 4,961 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ 6 ಭಯೋತ್ಪಾದಕರ ಹತ್ಯೆ

    ಚಿಕ್ಕಮಗಳೂರು, ತುಮಕೂರಿನ ಶಿರಾ, ಗದಗ ಜಿಲ್ಲೆಯ ಬೆಟಗೇರಿ, ಬೆಂಗಳೂರು ಜಿಲ್ಲೆ ಹೆಬ್ಬಗೋಡಿ, ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರಸಭೆಗೆ ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಬೆಳಗಾವಿಯ 5 ಪುರಸಭೆ, 11 ಪಟ್ಟಣ ಪಂಚಾಯಿತಿ, ಅಥಣಿ, ಹಾರೋಗೇರಿ, ಮುನವಳ್ಳೀ, ಉಗಾರಖುರ್ದ್‌ ಹಾಗೂ ಗ್ರಾಮ ಪಂಚಾಯಿತಿಗಳ 470 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇಂದು ಅಭ್ಯರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

    ಹಾವೇರಿ ಜಿಲ್ಲೆಯ ಬಂಕಾಪುರ ಪುರಸಭೆ, ಗುತ್ತಲ ಪಟ್ಟಣ ಪಂಚಾಯಿತಿ ಮತ ಎಣಿಕೆ ನಡೆಯುತ್ತಿದೆ. ಬಂಕಾಪುರ ಪುರಸಭೆ 23 ಸ್ಥಾನ, ಗುತ್ತಲ ಪಟ್ಟಣ ಪಂಚಾಯಿತಿಯ 18 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ತವರು ಕ್ಷೇತ್ರದ ಫಲಿತಾಂಶದಿಂದ ಸಿಎಂ ಭವಿಷ್ಯ ನಿರ್ಧಾರವಾಗಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯು ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಪಕ್ಷಗಳ ಭವಿಷ್ಯದ ವಿಚಾರವಾಗಿ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಯುಪಿ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ದುರ್ಗಾ ಶಂಕರ್ ಮಿಶ್ರಾ ನೇಮಕ

  • ಮೈತ್ರಿ ಮಾಡ್ಕೊಂಡು ನಾವು ಕೆಟ್ಟೆವು – ಶರವಣ

    ಮೈತ್ರಿ ಮಾಡ್ಕೊಂಡು ನಾವು ಕೆಟ್ಟೆವು – ಶರವಣ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ನಾವು ಕೆಟ್ಟೆವು ಎಂದು ಜೆಡಿಎಸ್ ನಾಯಕ ಶರವಣ ಹೇಳಿದ್ದಾರೆ.

    ಪಬ್ಲಿಕ್ ಟಿವಿಯ ಚುನಾವಣೋತ್ತರ ಸಮೀಕ್ಷೆಯ ಫಲತಾಂಶದ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಯಕರ ನಡುವೆ ಮೈತ್ರಿ ಆಗಿದ್ದರೂ ತಳ ಮಟ್ಟದಲ್ಲಿ  ಇದು ಕೆಲಸ ಮಾಡಲಿಲ್ಲ. ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿಸಿದರು.

    ಮುಂದೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಪರವಾಗಿ ಮತ ಕೇಳಲು ಆಗುವುದಿಲ್ಲ. ನಾವು ನಮ್ಮ ಪಕ್ಷದ ಪರವಾಗಿ ಮತ ಕೇಳಬೇಕು ಎಂದು ಹೇಳಿದರು.

    ಹೊಂದಾಣಿಕೆ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದೇ ಇದ್ದರೂ ಈ ಸಮೀಕ್ಷೆ ನೋಡಿದಾಗ ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಎಷ್ಟು ಸ್ಥಾನ ಗಳಿಸಿತ್ತೋ ಅಷ್ಟೇ ಸ್ಥಾನವನ್ನು ಗಳಿಸಲಿದೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿಗೂ ಅಷ್ಟೇ ಸ್ಥಾನ ಸಿಗಲಿದೆ ಎಂದರು.