‘ಬಿಗ್ ಬಾಸ್’ (Bigg Boss Hindi) ಖ್ಯಾತಿಯ ಹಿನಾ ಖಾನ್ (Hina Khan) ಸ್ತನ ಕ್ಯಾನ್ಸರ್‌ನಿಂದ (Breast Cancer) ಬಳಲುತ್ತಿದ್ದು, ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಇದೀಗ ಟ್ರಿಮ್ಮರ್ ಹಿಡಿದು ನಟಿ ತಲೆಬೋಳಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಹಿನಾ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಟಿಯ ನಡೆ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಇದನ್ನೂ ಓದಿ:ಕಾಪಿರೈಟ್ ಉಲ್ಲಂಘನೆ ಕೇಸ್- ಕೋರ್ಟ್‌ನಲ್ಲಿ ಹೋರಾಟ ಮಾಡ್ತೀನಿ ಎಂದ ರಕ್ಷಿತ್ ಶೆಟ್ಟಿ
ತಲೆಬೋಳಿಸುವ ಮುನ್ನ ನಟಿ ಮಾತನಾಡಿ, ಅನಾರೋಗ್ಯವನ್ನು ಎದುರಿಸಬೇಕು ಎಂದರೆ ಮಾನಸಿಕವಾಗಿ ಗಟ್ಟಿಯಾಗಿ ನಿಲ್ಲಬೇಕು. ಹೀಗೆ ಮಾಡಿದಾಗ ಚಿಕಿತ್ಸೆಗೆ ಇನ್ನೊಂದು ಹೆಜ್ಜೆ ಹತ್ತಿರ ಬರುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಮಾತನಾಡಿದ್ದಾರೆ. ನಟಿಯ ವಿಡಿಯೋದಲ್ಲಿನ ಮಾತುಗಳನ್ನು ಕೇಳಿ ಫ್ಯಾನ್ಸ್, ನೀವು ಆದಷ್ಟು ಬೇಗ ಗುಣಮುಖರಾಗಬೇಕು ಎಂದು ಹಾರೈಸಿದ್ದಾರೆ.
ಕ್ಯಾನ್ಸ್‌ರ್ ಚಿಕಿತ್ಸೆ ಪಡೆಯುವಾಗ ಪ್ರತಿ ದಿನ ಕೂದಲು ಉದುರಲು ಆರಂಭವಾಗುತ್ತದೆ. ಇದೆಲ್ಲಾ ಕಿರಿ ಕಿರಿ ಆಗೋದು ಸಹಜ. ಅದರಲ್ಲೂ ಮಹಿಳೆಯರಿಗೆ ಹೆಚ್ಚು ಕೂದಲು ಉದುರಿದರೆ ಹೆಚ್ಚು ಬೇಸರ ಆಗುತ್ತದೆ. ಹಾಗಾಗಿ ಮಾನಸಿಕ ಆರೋಗ್ಯಕ್ಕಾಗಿ ಈ ನಿರ್ಧಾರವನ್ನು ನಟಿ ಕೈಗೊಂಡಿದ್ದಾರೆ.
ಕಳೆದ 16 ವರ್ಷಗಳಿಂದ ಕಿರುತೆರೆಯಲ್ಲಿ ನಟಿ ಆಕ್ಟಿವ್ ಆಗಿದ್ದಾರೆ. ಸಿನಿಮಾ, ಸಾಲು ಸಾಲು ಸೀರಿಯಲ್‌ಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಹಿನಾಗೆ ಭಾರೀ ಜನಪ್ರಿಯತೆ ನೀಡಿತ್ತು.
ಮಹಿಳೆಯರ ಅಂದವನ್ನು ಕಾಪಾಡುವಲ್ಲಿ ಸ್ತನಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಈ ಸ್ತನಗಳಿಗೂ ಮಾರಕ ಕಾಯಿಲೆ ಕ್ಯಾನ್ಸರ್ ವಕ್ಕರಿಸುತ್ತದೆ. ಹೌದು. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಮಾರಕ ಕಾಯಿಲೆಗಳಲ್ಲಿ ಸ್ತನ ಕ್ಯಾನ್ಸರ್ (Breast Cancer) ಕೂಡ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಈ ರೋಗವು ಹೆಚ್ಚಾಗಿ ಕಂಡುಬರುತ್ತಿದೆ. ಸುಮಾರು 8 ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್‍ಗೆ ಒಳಗಾಗುತ್ತಾರೆ. ಇದು ಒಂದು ಅಥವಾ ಎರಡು ಸ್ತನಗಳ ಮೇಲೆಯೂ ಪರಿಣಾಮ ಬೀರಬಹುದು. ಇದು ಸ್ತನದ ವಿವಿಧ ಭಾಗಗಳಲ್ಲಿ ಸಂಭವಿಸಬಹುದು ಮತ್ತು ಇದು ಸ್ತನದಲ್ಲಿ ಸಂಭವಿಸುವ ಅಸಹಜ ಬೆಳವಣಿಗೆಯಾಗಿದ್ದು ಅದು ಹರಡಲೂಬಹುದು.
ಕೆಲವು ಮಹಿಳೆಯರು ವಯಸ್ಸಾದ್ರೂ ಯಂಗ್ ಆಂಡ್ ಬ್ಯೂಟಿಫುಲ್ ಆಗಿ ಕಾಣಲು ಪಾಶ್ಚಿಮಾತ್ಯ ಡಯಟ್ ಪ್ಲಾನ್ ಮೊರೆ ಹೋಗುತ್ತಿದ್ದು, ಇದೇ ಈಗ ಮಾರಕ ಕಾಯಿಲೆಗೆ ಕಾರಣವಾಗುತ್ತಿದೆ ಎಂಬ ಆತಂಕಕಾರಿ ವಿಚಾರವೊಂದು ಬಯಲಾಗಿದೆ. ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಇರುವ ಮೂಡನಂಭಿಕೆ ಹಾಗೂ ತಿಳುವಳಿಕೆ ಕೊರತೆ ಕೂಡಾ ಸ್ತನ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸಾಕಷ್ಟು ಮಹಿಳೆಯರು ಕೊನೆಯ ಹಂತದಲ್ಲಿ ಸ್ತನ ಕ್ಯಾನ್ಸರ್ ಬೆಳಕಿಗೆ ಬಂದು ಸಾವಿಗೆ ಕಾರಣರಾಗುತ್ತಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಕಳೆದ ವರ್ಷಗಳಿಂದ ಸ್ತನ ಕ್ಯಾನ್ಸರ್ ಪ್ರಕರಣ ಏರಿಕೆಯಾಗುತ್ತಿದ್ದು, ಈ ಸಂಬಂಧ ಬಗ್ಗೆ ಕಿದ್ವಾಯಿ ಆಸ್ಪತ್ರೆಯ ವೈದ್ಯರು ಅಚ್ಚರಿಯ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನ ಮಹಿಳೆಯರಲ್ಲಿ ಕೊರೊನಾಕ್ಕೂ ಮೊದಲು ವರ್ಷಕ್ಕೆ 700 ರಿಂದ 750 ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿತ್ತು. ಆದರೆ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 1012 ಕೇಸ್ ಕಾಣಿಸಿಕೊಂಡಿದೆ. ಅದರಲ್ಲೂ ಹೆಚ್ಚಾಗಿ ಮಧ್ಯವಯಸ್ಸಿನ ಮಹಿಳೆಯರು 3ನೇ ಹಂತ ಅಥವಾ 4ನೇ ಹಂತ ಸ್ಥಿತಿಗಳಲ್ಲಿ ಸ್ತನದ ಕ್ಯಾನ್ಸರ್ ಪತ್ತೆಯಾಗ್ತೀರೊದು ಸಾಕಷ್ಟು ಸಾವಿಗೆ ಕಾರಣವಾಗುತ್ತಿದೆ. ಹೀಗಾಗಿ ಮಹಿಳೆಯರು ಪ್ರತಿ ತಿಂಗಳು ಒಂದು ಸರಿ ತಮ್ಮನ್ನು ತಾವು ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ ಅವಶ್ಯ ಎಂದು ಹೇಳಿದ್ದಾರೆ.
ಸ್ತನ ಕ್ಯಾನ್ಸರ್‌ಗೆ ಕಾರಣಗಳೇನು..?
* ಮಹಿಳೆಯರಲ್ಲಿ ಹೆಚ್ಚಾದ ಮದ್ಯಪಾನ ಹಾಗೂ ಧೂಮಪಾನ
* ಪಾಶ್ಚಿಮಾತ್ಯ ಜೀವನ ಶೈಲಿ ಹಾಗೂ ಡಯಟ್ ಪ್ಲಾನ್
* ಅತಿ ಬೇಗನೇ ಋತುಸ್ರಾವ
* ತಡವಾದ ಋತುಬಂಧ
* ಸಂತಾನೋತ್ಪತ್ತಿ ಅಂಶಗಳು
* ಗರ್ಭನಿರೋಧಕ ಬಳಕೆ
* ಹಾರ್ಮೋನು ಬದಲಾವಣೆಯ ಚಿಕಿತ್ಸೆ
* ಬೊಜ್ಜು, ತೂಕ ಹೆಚ್ಚಾಗುವುದು ಹಾಗೂ ಕೊಬ್ಬಿನ ಅಂಶ ಈ ಎಲ್ಲವುಗಳು ಸ್ತನ ಕ್ಯಾನ್ಸರ್‍ಗೆ ಕಾರಣವಾಗಿರುತ್ತದೆ.
ಪೌಷ್ಟಿಕಾಂಶದ ಅಂಶಗಳಲ್ಲಿ, ತೂಕ ಹೆಚ್ಚಾಗುವುದು ಮತ್ತು ಹೆಚ್ಚಿನ ಕ್ಯಾಲೋರಿ ಸೇವನೆಯು ಸ್ತನ ಕ್ಯಾನ್ಸರ್ ಬೆಳವಣಿಗೆಗೆ ಎರಡು ಕಾರಣಗಳಾಗಿವೆ. 1940 ರಲ್ಲಿ ಮೊದಲ ಬಾರಿಗೆ, ಕೊಬ್ಬಿನ ಹೆಚ್ಚಿನ ಬಳಕೆಯು ಪ್ರಾಣಿಗಳಲ್ಲಿ ಸ್ತನ ಗೆಡ್ಡೆಗೆ ಕಾರಣವಾಗುತ್ತದೆ ಎಂದು ಕೆಲ ಸಂಶೋಧನೆಗಳು ತೋರಿಸಿವೆ. ಒಂದೆಡೆ ಕ್ಯಾಲೋರಿ ಸೇವನೆಯು ತೂಕ ಹೆಚ್ಚಳ ಮತ್ತು ಸ್ಥೂಲಕಾಯತೆಗೆ ಕಾರಣವಾಗುತ್ತದೆ, ಮತ್ತೊಂದೆಡೆ ಇದು ಬಾಲ್ಯದಲ್ಲಿ ಎತ್ತರವನ್ನು ಹೆಚ್ಚಿಸುತ್ತದೆ ಮತ್ತು ಪ್ರಸವಪೂರ್ವ ಋತುಬಂಧಕ್ಕೆ ಕಾರಣವಾಗುತ್ತದೆ.
ಆರಂಭಿಕ ಲಕ್ಷಣಗಳು:
* ಒಂದು ಅಥವಾ ಎರಡೂ ಸ್ತನಗಳಲ್ಲಿ ಊತ ಅಥವಾ ಕೆಂಪಾಗುವಿಕೆಯಂತಹ ಸ್ಪಷ್ಟ ವ್ಯತ್ಯಾಸಗಳು
* ಸ್ತನಗಳ ಗಾತ್ರ ಅಥವಾ ಆಕಾರದಲ್ಲಿ ಬದಲಾವಣೆ
* ಒಂದು ಅಥವಾ ಎರಡೂ ಮೊಲೆತೊಟ್ಟುಗಳ ಹಿಂತೆಗೆದುಕೊಳ್ಳುವಿಕೆ
* ಎದೆ ಹಾಲು ಹೊರತುಪಡಿಸಿ ನಿಪ್ಪಲ್ ಡಿಸ್ಚಾರ್ಜ್
* ಸ್ತನಗಳಲ್ಲಿ / ಸುತ್ತಲೂ ಅಸಾಮಾನ್ಯ ನೋವು
* ಸ್ತನದ ಮೇಲೆ ಅಥವಾ ಒಳಗೆ ಗಂಟುಗಳು ಅಥವಾ ಊತಗಳು
ಚಿಕಿತ್ಸೆ ಹೇಗೆ..?
* ಸ್ತನ ಗೆಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ
* ಸ್ತನ ಮತ್ತು ಸುತ್ತಮುತ್ತಲಿನ ಅಂಗಾಂಶಗಳಲ್ಲಿ ಮರುಕಳಿಸುವ ಅಪಾಯವನ್ನು ಕಡಿಮೆ ಮಾಡಲು ವಿಕಿರಣ ಚಿಕಿತ್ಸೆ
* ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಮತ್ತು ಹಾರ್ಮೋನ್ ಚಿಕಿತ್ಸೆಗಳು, ಕೀಮೋಥೆರಪಿ ಅಥವಾ ಉದ್ದೇಶಿತ ಜೈವಿಕ ಚಿಕಿತ್ಸೆಗಳು ಸೇರಿದಂತೆ ಹರಡುವಿಕೆಯನ್ನು ತಡೆಯಲು ಔಷಧಿಗಳು.
ಒಟ್ಟಿನಲ್ಲಿ ಸ್ತನದ ಕ್ಯಾನ್ಸರ್ ಇಷ್ಟು ಗಂಭೀರ ಸಮಸ್ಯೆಯಾಗಿರುವುದರಿಂದ ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿಯ ಮಾಸವೆಂದು ಆಚರಿಸಲಾಗುತ್ತಿದೆ.
ಚಂಡೀಗಢ: ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಗ ನವಜೋತ್ ಸಿಂಗ್ ಸಿಧು (Navjot Singh Sidhu) ಅವರ ಪತ್ನಿ ನವಜೋತ್ ಕೌರ್ ಗೆ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇದೀಗ ಅವರು ತಮ್ಮ ಪತಿ ಜೈಲಿನಲ್ಲಿರುವ ಸಿಧುಗೆ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.
ನವಜೋತ್ ಕೌರ್ ಸಿಧು (Navjot Kaur Sidhu) ಅವರಿಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡಿ, ತನಗೆ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಅಲ್ಲದೆ ಅದು ಎರಡನೇ ಹಂತದಲ್ಲಿದೆ. ಜೈಲಿನಲ್ಲಿರುವ ನಿಮ್ಮ ಬರುವಿಕೆಗಾಗಿ ಕಾಯುತ್ತಿದ್ದೇನೆ. ಆದರೆ ಅದು ಸಾಧ್ಯವಿಲ್ಲದ ಮಾತು. ನೀವು ಮಾಡಿರದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿಕೊಂಡು ಬಳಲುತ್ತಿದ್ದೀರಿ. ಬಹುಶಃ ನೀವು ಜೈಲಿನಲ್ಲಿ ಅನುಭವಿಸುವ ನೋವಿಗಿಂತ ನಾನು ಹೆಚ್ಚಿನ ನೋವನ್ನು ಅನುಭವಿಸುತ್ತಿದ್ದೇನೆ ಎಂದು ಭಾವುಕರಾಗಿ ತಿಳಿಸಿದ್ದಾರೆ.
1988ರ ರಸ್ತೆಯಲ್ಲಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೈಲಿಗೆ ಹೋದ ಸಿಧು ಅವರಿಗೆ ಖೈದಿಗಳಂತೆ ಸಂಖ್ಯೆಯೊಂದನ್ನು ನೀಡಿ, 10ನೇ ಬ್ಯಾರಕ್‍ನಲ್ಲಿದ್ದಾರೆ. ಇದನ್ನೂ ಓದಿ: ಸಿಧು ಈಗ ಖೈದಿ ನಂ.241383 – 8 ಕೊಲೆ ಪಾತಕಿಗಳಿರುವ ಸೆಲ್‍ನಲ್ಲಿ ವಾಸ
ಅಹಮದಾಬಾದ್: ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಆಸ್ಟ್ರೇಲಿಯಾ ತಂಡದ ಆಟಗಾರರು ಕಪ್ಪು ಪಟ್ಟಿ (Black armbands) ಧರಿಸಿ ಟೀಂ ಇಂಡಿಯಾ (Team India) ವಿರುದ್ಧ ಕ್ರಿಕೆಟ್ ಅಂಗಳಕ್ಕೆ ಇಳಿದಿದ್ದಾರೆ.
ಸಹ ಆಟಗಾರ ಪ್ಯಾಟ್ ಕಮ್ಮಿನ್ಸ್ (Pat Cummins) ತಾಯಿ ನಿಧನರಾದ ಹಿನ್ನೆಲೆಯಲ್ಲಿ ಅಗಲಿದ ಜೀವಕ್ಕೆ ಗೌರವ ಸೂಚಿಸಿ ಆಟಗಾರರು ಈ ನಿರ್ಧಾರ ಕೈಗೊಂಡಿದ್ದಾರೆ. ಮಾರಿಯಾ ಕಮ್ಮಿನ್ಸ್ ಅವರ ಅಗಲಿಕೆಗೆ ಬಿಸಿಸಿಐ (BCCI) ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಸಂತಾಪ ಸೂಚಿಸಿವೆ. ಇದನ್ನೂ ಓದಿ: ಶಾಸಕ ಹಂಚಿದ ಕುಕ್ಕರ್ ಅಸಲಿ ಮುಖ ತೆರೆದಿಟ್ಟ ಶೃಂಗೇರಿಯ ಮತದಾರರು
2005 ರಿಂದ ಸ್ತನ ಕ್ಯಾನ್ಸರ್‌ನಿಂದ (Breast cancer) ಬಳಲುತ್ತಿದ್ದ ಪ್ಯಾಟ್ ಅವರ ತಾಯಿ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ತಾಯಿಯ ಆರೋಗ್ಯ ತೀವ್ರ ಹದಗೆಟ್ಟ ವಿಷಯ ತಿಳಿಯುತ್ತಿದ್ದಂತೆ ಪ್ಯಾಟ್, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡದಿರಲು ನಿರ್ಧರಿಸಿ ತವರಿಗೆ ಮರಳಿದ್ದರು. ಇದರಿಂದಾಗಿ ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ (Steve Smith) ತಂಡದ ಕ್ಯಾಪ್ಟನ್ ಸ್ಥಾನ ವಹಿಸಿದ್ದಾರೆ.
ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟುವ ಅಥವಾ ಉಂಟುಮಾಡುವ ಯಾವುದೇ ನಿರ್ದಿಷ್ಟ ಆಹಾರವಿಲ್ಲ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಆದರೆ ಅತಿಯಾದ ಆಹಾರ ಸೇವನೆ, ಅಡುಗೆ ವಿಧಾನ, ಕುಡಿತವೂ ಸ್ತನ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗುತ್ತವೆ.
ಸರಿಯಾದ ಆಹಾರ ಕ್ರಮದ ಬಗ್ಗೆ ಜ್ಞಾನ ಇದ್ದು, ಅದನ್ನು ಅನುಸರಿಸಿದರೆ ಸ್ತನ ಕ್ಯಾನ್ಸರ್ ಅಪಾಯವನ್ನು ನಿಯಂತ್ರಿಸಬಹುದು. ವೈದ್ಯಕೀಯ ಚಿಕಿತ್ಸೆಗಿಂತಲೂ ಈ ಕ್ರಮ ಉತ್ತಮವಾಗಿದೆ. ಕೇವಲ ಆಹಾರ ಕ್ರಮವಷ್ಟೇ ಅಲ್ಲ, ಉತ್ತಮ ಜೀವನಶೈಲಿ ಕೂಡ ಸ್ತನ ಕ್ಯಾನ್ಸರ್ ತಡೆಗಟ್ಟುವಿಕೆಗೆ ಸಹಕಾರಿಯಾಗುತ್ತದೆ. ಇದನ್ನೂ ಓದಿ: ಎಕ್ಕದ ಗಿಡದಿಂದ ಆರೋಗ್ಯಕ್ಕೆ ಸಿಗುತ್ತೆ ಹಲವಾರು ಪ್ರಯೋಜನ
1) ಆರೋಗ್ಯಕರ ಆಹಾರ
ವೈದ್ಯರು ಹಣ್ಣುಗಳು, ತರಕಾರಿ ಮತ್ತು ಪ್ರೊಟೀನ್‌ಯುಕ್ತ ಆಹಾರವನ್ನು ಶಿಫಾರಸು ಮಾಡುತ್ತಾರೆ. ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿರುವ ಆಹಾರ ಪದಾರ್ಥಗಳ ಸೇವನೆಯಿಂದ ದೂರ ಇರುವಂತೆ ಸಲಹೆ ನೀಡುತ್ತಾರೆ.
ಸೊಪ್ಪು ಮತ್ತು ಮೆಡಿಟರೇನಿಯನ್ ಆಹಾರಗಳು ಉರಿಯೂತದ ಮತ್ತು ದೇಹದಲ್ಲಿ ಮಾರಣಾಂತಿಕ ಕೋಶಗಳ ಬೆಳವಣಿಗೆಯನ್ನು ನಿಗ್ರಹಿಸುವ ಗುಣಲಕ್ಷಣಗಳ ಮೂಲಕ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಫೈಬರ್ ಆಹಾರಗಳು ಮತ್ತು ಹಣ್ಣುಗಳು, ತರಕಾರಿಗಳು, ಆಲಿವ್ ಅಥವಾ ಮೀನಿನ ಎಣ್ಣೆಯಂತಹ ಕೊಬ್ಬಿನಾಮ್ಲಗಳನ್ನು ಹೊಂದಿರುವ ಆಹಾರಗಳು, ಈಸ್ಟ್ರೊಜೆನ್ ಮತ್ತು ಇನ್ಸುಲಿನ್ ಹಾಗೂ ದೀರ್ಘಕಾಲದ ಉರಿಯೂತ ಉಂಟುಮಾಡುವ ಇತರ ಅಂಶಗಳಂತಹ ಹಾರ್ಮೋನುಗಳನ್ನು ಕಡಿಮೆ ಮಾಡುವ ಮೂಲಕ ರಕ್ಷಣಾತ್ಮಕ ಪಾತ್ರ ನಿರ್ವಹಿಸುತ್ತವೆ.
2) ಆಲ್ಕೋಹಾಲ್ ಸೇವನೆಯಿಂದ ಸ್ತನ ಕ್ಯಾನ್ಸರ್ ಹೆಚ್ಚಳ
ಹೆಚ್ಚು ಆಲ್ಕೋಹಾಲ್ ಸೇವನೆಯಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಮದ್ಯವು ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸಬಹುದು. ಇದು ಸ್ತನ ಅಂಗಾಂಶದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಅಮೆರಿಕದ ನ್ಯಾಶನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಅಧ್ಯಯನದ ಪ್ರಕಾರ, ಆಲ್ಕೋಹಾಲ್ ಸೇವಿಸುವವರ ಪೈಕಿ ಹೆಚ್ಚಿನ ಮಂದಿ ಸ್ತನ ಕ್ಯಾನ್ಸರ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಗೋಡಂಬಿ ತಿನ್ನಲು ಎಷ್ಟು ರುಚಿಕರವೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು
3) ಈ ಅಡುಗೆ ವಿಧಾನವೂ ಅಪಾಯಕಾರಿ
ಆಹಾರವನ್ನು ಬೇಯಿಸುವ ವಿಧಾನವು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ. ಅಮೆರಿಕನ್ ಇನ್‌ಸ್ಟಿಟ್ಯೂಟ್ ಫಾರ್ ಕ್ಯಾನ್ಸರ್ ರಿಸರ್ಚ್ ಪ್ರಕಾರ, ಮಾಂಸ, ಕೋಳಿ ಅಥವಾ ಮೀನುಗಳನ್ನು ಸುಡುವುದು ಹೆಟೆರೋಸೈಕ್ಲಿಕ್ ಅಮೈನ್‌ಗಳು ಅಥವಾ ಎಚ್‌ಸಿಎಗಳ ರಚನೆಗೆ ಕಾರಣವಾಗಬಹುದು. ಇದರಿಂದ ಕ್ಯಾನ್ಸರ್ ಸಮಸ್ಯೆ ಎದುರಾಗಬಹುದು ಎಂದಿದೆ. ಆಹಾರವನ್ನು ಸುಡುವ ಬದಲು, ಬೇಯಿಸಿ ತಿನ್ನುವುದು ಉತ್ತಮ.
4) ತೂಕ ಹೆಚ್ಚಳದಿಂದ ಸಮಸ್ಯೆ
ಅಧಿಕ ತೂಕವು ನಿಮ್ಮ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದನ್ನು ಹಲವಾರು ವೈದ್ಯಕೀಯ ಅಧ್ಯಯನಗಳು ದೃಢಪಡಿಸಿವೆ. ವಯಸ್ಕರಲ್ಲಿ ತೂಕ ಹೆಚ್ಚಾಗುವುದು ಸಾಮಾನ್ಯ. ದೇಹ ತೂಕ ಹೆಚ್ಚಳದಿಂದ ಕ್ಯಾನ್ಸರ್ ಸಮಸ್ಯೆ ಎದುರಾಗಬಹುದು.
5) ವ್ಯಾಯಾಮದಿಂದ ಸ್ತನ ಕ್ಯಾನ್ಸರ್ ನಿಯಂತ್ರಣ ಸಾಧ್ಯ
ಸ್ತನ ಕ್ಯಾನ್ಸರ್ ನಿಯಂತ್ರಣದಲ್ಲಿಡಲು ವ್ಯಾಯಾಮ ಉತ್ತಮ ಮಾರ್ಗವಾಗಿದೆ. ಹೆಚ್ಚಿನ ತೂಕ ಇರುವವರು ವ್ಯಾಯಾಮದ ಮೂಲಕ ತೂಕ ಇಳಿಸಿಕೊಳ್ಳಬಹುದು. ಅಧಿಕ ತೂಕದಿಂದ ಬರುವ ಸ್ತನ ಕ್ಯಾನ್ಸರ್ ಅಪಾಯವನ್ನು ವ್ಯಾಯಾಮದ ಮೂಲಕ ನಿಯಂತ್ರಿಸಬಹುದು. ವ್ಯಾಯಾಮದಲ್ಲಿ ಸಕ್ರಿಯರಾಗಿದ್ದರೆ ರಕ್ತದ ಈಸ್ಟ್ರೊಜೆನ್ ಮಟ್ಟ ಕಡಿಮೆಯಾಗಲು ಸಹಾಯವಾಗುತ್ತದೆ. ಅದು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸಂಶೋಧನೆಯ ಪ್ರಕಾರ, ನಿಯಮಿತ ವ್ಯಾಯಾಮವನ್ನು ಮಾಡುವ ಮಹಿಳೆಯರು ಸಕ್ರಿಯವಾಗಿರದ ಮಹಿಳೆಯರಿಗಿಂತ 10-20 ಪ್ರತಿಶತದಷ್ಟು ಕಡಿಮೆ ಸ್ತನ ಕ್ಯಾನ್ಸರ್ ಅಪಾಯವನ್ನು ಹೊಂದಿರುತ್ತಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ರಕ್ತ ಪರೀಕ್ಷೆಯ ಮೂಲಕ ಸ್ತನ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ತಂತ್ರಜ್ಞಾನ ಈಗ ಭಾರತದಲ್ಲೂ ಲಭ್ಯವಿದೆ.
ಅಪೋಲೋ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿರುವ ಖಾಸಗಿ ಕಂಪನಿ ಡಾಟರ್ ಕ್ಯಾನ್ಸರ್ ಜೆನಿಟಿಕ್ಸ್ ವತಿಯಿಂದ ಈ ತಂತ್ರಜ್ಞಾನವನ್ನು ಭಾರತದಲ್ಲಿ ಜೂ.22ರಂದು ಆರಂಭಿಸಲಾಯಿತು. ಇದನ್ನೂ ಓದಿ: ಮಹಿಳಾ ಉದ್ಯೋಗಿಗಳಿಗೆ ತಾರತಮ್ಯ – 921 ಕೋಟಿ ನೀಡಲು ಮುಂದಾದ ಗೂಗಲ್
ಹೊಸ ತಂತ್ರಜ್ಞಾನದ ಮೂಲಕ ನಡೆಸುವ ರಕ್ತ ಪರೀಕ್ಷೆಯು 40 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸ್ತನ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಯೂರೋಪ್‌ನ ಹಲವು ದೇಶಗಳು ಸೇರಿದಂತೆ 15 ರಾಷ್ಟ್ರಗಳು ಅಳವಡಿಸಿಕೊಂಡ ಹೊಸ ಮಾದರಿಯ ರೋಗನಿರ್ಣಯ ತಂತ್ರಜ್ಞಾನ ಇದಾಗಿದೆ. ಈ ರಕ್ತ ಪರೀಕ್ಷೆಯ ಫಲಿತಾಂಶವು ಶೇ.99 ರಷ್ಟು ನಿಖರತೆಯನ್ನು ಹೊಂದಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಲೇ ಇದೆ. ರೋಗಿಗಳ ಆರೈಕೆ, ಚಿಕಿತ್ಸೆಯ ವೆಚ್ಚವು ದುಬಾರಿಯಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಮಾತ್ರ ಇಂತಹ ಪ್ರಕರಣಗಳನ್ನು ತ್ವರಿತವಾಗಿ ನಿರ್ವಹಿಸಲು ಸಾಧ್ಯ. ಮಹಿಳೆಯರಲ್ಲಿನ ಸ್ತನ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆ ಹೆಚ್ಚಿದರೆ, ಅವರಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಇದು ಜೀವಿತಾವಧಿಯ ಹೆಚ್ಚಳಕ್ಕೆ ಸಹಾಯವಾಗಲಿದೆ. ಚಿಕಿತ್ಸೆ ಪಡೆದುಕೊಳ್ಳಲು ರೋಗಿಗಳು ಎದಿರುವ ತೊಂದರೆಗಳನ್ನು ಕಡಿಮೆ ಮಾಡಬಹುದು ಎಂಬುದು ವೈದ್ಯರ ಅಭಿಪ್ರಾಯ.
ಕಳೆದ ವರ್ಷ ನವೆಂಬರ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ನಿಂದ ಹೊಸ ತಂತ್ರಜ್ಞಾನದ ರಕ್ತ ಪರೀಕ್ಷೆಯನ್ನು ಅನುಮೋದಿಸಲಾಗಿದೆ. ಈ ರಕ್ತ ಪರೀಕ್ಷೆ ಮೂಲಕ 0 ಹಾಗೂ 1ನೇ ಹಂತದ ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ಶೇ.99 ರಷ್ಟು ನಿಖರತೆಯೊಂದಿಗೆ ಪತ್ತೆಹಚ್ಚಲಾಗಿದೆ ಎಂಬುದನ್ನು ಅಧ್ಯಯನವು ಸಾಬೀತುಪಡಿಸಿದೆ. ಇದನ್ನೂ ಓದಿ: 5ಜಿ ತರಂಗಾಂತರ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ
ʻಈಸಿಚೆಕ್ ಬ್ರೆಸ್ಟ್ʼ ಎಂದೇ ಹೆಸರಾಗಿರುವ ಈ ಪರೀಕ್ಷೆಗೆ 6,000 ರೂ. ವೆಚ್ಚ ತಗುಲುತ್ತದೆ. ಕಳೆದ ವರ್ಷ ನವೆಂಬರ್‌ನಲ್ಲಿ US ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಇದನ್ನು ಅನುಮೋದಿಸಿದೆ. ಯಾವುದೇ ರೋಗಲಕ್ಷಣ ಹೊಂದಿರದ 40 ವರ್ಷಕ್ಕಿಂತ ಮೇಲ್ಪಟ್ಟ ಆರೋಗ್ಯವಂತ ಮಹಿಳೆಯರಿಗೆ ವಾರ್ಷಿಕ ಪರೀಕ್ಷೆ ನಡೆಸುವಂತೆ ಸೂಚಿಸಿದೆ.
ಮ್ಯಾಮೊಗ್ರಾಫಿಗೆ (ಸ್ತನ ಪರೀಕ್ಷೆಗೆ ಚಾಲ್ತಿಯಲ್ಲಿರುವ ವಿಧಾನ) ಬದಲಿ ಪರೀಕ್ಷೆ ವಿಧಾನ ಇದಲ್ಲ. ಈ ಹೊಸ ತಂತ್ರಜ್ಞಾನ ಬಳಸಿಕೊಂಡು ಸ್ತನ ಕ್ಯಾನ್ಸರ್ ಪಾಸಿಟಿವ್ ಬರುವ ಮಹಿಳೆಯರು ಸಾಂಪ್ರದಾಯಿಕ ಸ್ಕ್ರೀನಿಂಗ್ ಪರೀಕ್ಷೆಗಳಿಗೆ ಹೋಗಬಹುದು ಎನ್ನುತ್ತಾರೆ ದೆಹಲಿಯ ಅಪೋಲೋ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಾ ಆಂಕೊಲಾಜಿಸ್ಟ್ ಡಾ. ರಮೇಶ್ ಸರಿನ್.
ಒಂದು ವೇಳೆ ಈ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದರೆ ಮಹಿಳೆಯರು ಕ್ಯಾನ್ಸರ್‌ನ್ನು ಸಂಪೂರ್ಣವಾಗಿ ತಳ್ಳಿಹಾಕಬಾರದು. ಇತರ ಸ್ಕ್ರೀನಿಂಗ್ ಪರೀಕ್ಷೆಗಳಿಗೆ ಹೋಗಬಹುದು ಎಂದು ವೈದ್ಯರು ಸೂಚಿಸುತ್ತಾರೆ.
ಕೆಲ ತಿಂಗಳ ಹಿಂದೆಯಷ್ಟೇ ತಮಗೆ ಸ್ತನ ಕ್ಯಾನ್ಸರ್ ಆಗಿರುವ ವಿಚಾರ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು ಬಾಲಿವುಡ್ ಮತ್ತು ಕಿರುತೆರೆ ನಟಿ ಛವಿ ಮಿತ್ತಲ್. ಕ್ಯಾನ್ಸರ್ ಮೊದಲ ಹಂತದಲ್ಲೇ ಇರುವಾಗಲೇ ತಮಗೆ ತಿಳಿದಿದ್ದರಿಂದ, ಅದಕ್ಕೆ ಅಗತ್ಯ ಸರ್ಜರಿ ಮಾಡಿಸಿಕೊಳ್ಳುವುದಾಗಿಯೂ ಹೇಳಿದ್ದರು. ಮೊದಲ ಹಂತದಲ್ಲೇ ತಮಗೆ ತಿಳಿದಿದ್ದಕ್ಕೆ ದೇವರಿಗೆ ಧನ್ಯವಾದ ಕೂಡ ಅರ್ಪಿಸಿದ್ದರು. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ
ಇದೀಗ ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದಿರುವ ಛವಿ, ಸರ್ಜರಿಯ ನಂತರದ ಫೋಟೋವನ್ನೂ ಶೇರ್ ಮಾಡಿದ್ದಾರೆ. ಆರು ತಾಸುಗಳ ಕಾಲ ಈ ಚಿಕಿತ್ಸೆ ನಡೆದಿದ್ದು, ತಮಗೆ ಮರುಜೀವ ಬಂದಿದೆ ಎನ್ನುವ ಅರ್ಥದಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಅಲ್ಲದೇ, ಚಿಕಿತ್ಸೆ ನೀಡಿದ ವೈದ್ಯರಿಗೆ ಅವರು ಧನ್ಯವಾದಗಳನ್ನೂ ತಿಳಿಸಿದ್ದಾರೆ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ
ವೈದ್ಯರು ಆರು ತಾಸುಗಳ ಸರ್ಜರಿ ವಿಚಾರವನ್ನು ನನ್ನೊಂದಿಗೆ ಹಂಚಿಕೊಂಡರು. ಅರವಳಿಕೆ ತಜ್ಞರು ಮದ್ದು ನೀಡಿ, ಒಳ್ಳೆಯ ವಿಚಾರಗಳನ್ನು ಯೋಚಿಸುತ್ತಾ ಕಣ್ಣು ಮುಚ್ಚಿಕೊಳ್ಳಲು ಹೇಳಿದರು. ವೈದ್ಯರು ಹೇಳಿದ ಎಲ್ಲ ಸಲಹೆಗಳನ್ನೂ ಪಾಸಿಟಿವ್ ಆಗಿಯೇ ತಗೆದುಕೊಂಡು ಕಣ್ಣು ಮುಚ್ಚಿಕೊಂಡೆ. ಆರು ಗಂಟೆಗಳ ನಂತರ ಸ್ತನ ಸರ್ಜರಿ ಆದ ವಿಚಾರ ನನಗೆ ಗೊತ್ತಾಯಿತು. ವೈದ್ಯರು ಆಗ ಕ್ಯಾನ್ಸರ್ ಮುಕ್ತವಾಗಿರುವ ಬಗ್ಗೆ ತಿಳಿಸಿದರು ಎಂದು ಛವಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್
ಸ್ತನ ಕ್ಯಾನ್ಸರ್ ಇರುವವರು ಭಯ ಪಡಬೇಕಿಲ್ಲ. ಎಲ್ಲದಕ್ಕೂ ಈಗ ಚಿಕಿತ್ಸೆಯಿದೆ. ಧೈರ್ಯವೇ ಎಲ್ಲದಕ್ಕೂ ಮದ್ದು. ಹಾಗಾಗಿ ಧೈರ್ಯದಿಂದ ಏನೇ ಬಂದರೂ ಎದುರಿಸಿ. ನಿಮ್ಮೆಲ್ಲರ ಪ್ರಾರ್ಥನೆಯಿಂದ ನಾನು ಈಗ ಕ್ಯಾನ್ಸರ್ ಗೆದ್ದು ಬಂದಿದ್ದೇನೆ. ನಿಮ್ಮ ಪ್ರೀತಿಗೆ ನಾನು ಋಣಿ ಎಂದು ಅವರು ಬರೆದುಕೊಂಡಿದ್ದಾರೆ.
ಹೈದರಾಬಾದ್: ಕನ್ನಡದ ‘ಮೋಹಿನಿ’ ಸಿನಿಮಾದ ಮೂಲಕ ಕನ್ನಡಿಗರ ಮನದಲ್ಲಿ ನೆಲೆಯೂರಿರುವ ಈ ನಟಿ ಸ್ತನ ಕ್ಯಾನ್ಸರ್ ಅನ್ನು ಗೆದ್ದ ಸ್ಟೋರಿ ರೋಚಕ ಮತ್ತು ಅಷ್ಟೇ ಭಾವುಕ. ಸಾವಿನ ದವಡೆಯಿಂದ ಸಾವರಿಸಿಕೊಂಡು ಬರುವುದಿದೆಯಲ್ಲ, ಅದು ಯಾವ ಶತ್ರುವಿಗೂ ಬೇಡ. ಅಂಥದ್ದೊಂದು ಮನಕಲಕುವ ಕಥನ ಇಲ್ಲಿದೆ.
ಕನ್ನಡದ ಮೋಹಿನಿ ಖ್ಯಾತಿಯ ಹಂಸ ನಂದಿನಿ ಕಳೆದ ವರ್ಷ ಸನ್ತ ಕ್ಯಾನ್ಸರ್ಗೆ ಒಳಗಾಗಿದ್ದರು. ಇದಕ್ಕೆ ಅಂಜದೆ ಈ ನಟಿ ಕ್ಯಾನ್ಸರ್ ಚಿಕಿತ್ಸೆ ಪಡೆದು ಯಶಸ್ವಿಯಾಗಿದ್ದಾರೆ. ಈ ನಟಿ ತೆಲುಗಿನಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದ್ದು, ಸಿನಿರಂಗದಲ್ಲಿ ತಮ್ಮದೆ ಛಾಪನ್ನು ಮೂಡಿಸಿದ್ದಾರೆ. ಇದನ್ನೂ ಓದಿ: ಕಲಬುರಗಿ ಹೈದನಾದ ಯಂಗ್ ರೆಬಲ್ ಸ್ಟಾರ್ ಅಭಿಷೇಕ್
ನಟಿಯ ಧೈರ್ಯದ ಕಥೆ ಏನು?
ಹಂಸ ನಂದಿನಿ ಅವರಿಗೆ ಕಳೆದ ವರ್ಷ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಇದರಿಂದ ಅವರು ಧೃತಿಗೆಡಲಿಲ್ಲ. ಬದಲಿಗೆ ಅದನ್ನು ಹೇಗೆ ಧೈರ್ಯದಿಂದ ಎದುರಿಸಬೇಕು ಎಂದು ಸಿದ್ಧರಾಗಿದ್ದರು. ಹಂಸ ಅವರು ನಿರಂತರ ಕಿಮೋಥೆರಪಿಗೆ ಒಳಗಾಗಿದ್ದರು. ಈ ಕುರಿತು ಹಂಸ ಅವರು ಸೋಶಿಯಲ್ ಮೀಡಿಯಾದಲ್ಲಿ, ನಾನು 9 ಬಾರಿ ಕಿಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಕಿಮೋಥೆರಪಿ ಮಾಡಿಸಿಕೊಳ್ಳಬೇಕಿದೆ. ನಾನು ಭರವಸೆ ಹೊಂದಿದ್ದೇನೆ. ಈ ರೋಗವು ನನ್ನ ಜೀವನ ಹಾಳು ಮಾಡಲು ನಾನು ಬಿಡುವುದಿಲ್ಲ. ಇದರ ವಿರುದ್ಧ ನಗುವಿನೊಂದಿಗೆ ಹೋರಾಡಿ, ಗೆಲ್ಲುತ್ತೇನೆ. ನಾನು ಬಲಶಾಲಿ ಆಗಿದ್ದೇನೆ. ಮತ್ತೆ ನಿಮ್ಮ ಮುಂದೆ ತೆರೆಯ ಮೇಲೆ ಬರುತ್ತೇನೆ’ ಎಂದು ಬರೆದು ತಮ್ಮ ಆತ್ಮಸ್ಥೈರ್ಯ ಪ್ರದರ್ಶನ ಮಾಡಿದ್ದರು.
ಮತ್ತೊಂದು ಪೋಸ್ಟ್ ಮಾಡಿದ ಅವರು, ನಾನೀಗ 16 ಕಿಮೋಥೆರಪಿಯನ್ನು ಪೂರೈಸಿದ್ದೇನೆ. ನಾನು ಈಗ ಅಧಿಕೃತವಾಗಿ ಕಿಮೋ ಸರ್ವೈವರ್ ಆಗಿದ್ದೇನೆ. ಆದರೆ ನಾನು ಇನ್ನೂ ಗೆದ್ದಿಲ್ಲ. ಇದು ಮುಂದಿನ ಯುದ್ಧಕ್ಕೆ ತಯಾರಾಗುವ ಸಮಯ, ಇದು ಶಸ್ತ್ರಚಿಕಿತ್ಸೆಗಳ ಸಮಯ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ನಾನು ಹೋರಾಟದಿಂದ ಎಂದೂ ಹಿಂದೆ ಸರಿಯುವುದಿಲ್ಲ. ಧೈರ್ಯ ಮತ್ತು ಪ್ರೀತಿಯಿಂದ ನಾನು ಮುಂದೆ ಹೋಗುತ್ತೇನೆ. ನಾಲ್ಕು ತಿಂಗಳ ಹಿಂದೆ, ನನ್ನ ಸ್ತನದಲ್ಲಿ ಸಣ್ಣ ಗೆಡ್ಡೆಯೊಂದು ಇರುವುದು ಗೊತ್ತಾಯಿತು. ಇದು ತಿಳಿದ ಮೇಲೆ ನನ್ನ ಜೀವನ ಎಂದಿನಂತೆ ಇರಲಿಲ್ಲ. ವಿಷಯ ತಿಳಿದ ತಕ್ಷಣ ಒಂದೆರಡು ಗಂಟೆಗಳಲ್ಲಿ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಲಾಯಿತು. ನನಗೆ ಸ್ತನ ಕ್ಯಾನ್ಸರ್ ಮೂರನೇ ಸ್ಟೇಜ್ನಲ್ಲಿರುವುದು ಗೊತ್ತಾಯಿತು. ಅಲ್ಲದೇ 18 ವರ್ಷಗಳ ಹಿಂದೆ ಭೀಕರ ಕಾಯಿಲೆಯಿಂದಾಗಿ ನನ್ನ ತಾಯಿಯನ್ನು ನಾನು ಕಳೆದುಕೊಂಡಿದ್ದೆ. ಆ ಕೆಟ್ಟ ನಟನಪಿನಲ್ಲೇ ನಾನು ವಾಸಿಸುತ್ತಿದ್ದೆ. ಆ ರೀತಿಯ ಕಾಯಿಲೆ ಮತ್ತೆ ನನಗೆ ಬಂತು ಎಂದು ತಿಳಿದ ಮೇಲೆ ಮೊದಲು ಭಯಗೊಂಡಿದ್ದೆ ಎಂದು ಹಂಸ ಆರಂಭದಲ್ಲಿ ನೋವಿನಿಂದ ಹೇಳಿಕೊಂಡಿದ್ದರು. ಇದನ್ನೂ ಓದಿ: ನಾಳೆ ಬಿಡುಗಡೆ ಆಗಲಿರುವ ಗಂಗೂಬಾಯಿ ಕಾಠಿಯಾವಾಡಿ ಟೈಟಲ್ ಬದಲಾಗತ್ತಾ? ಕೋರ್ಟ್ ಕೊಟ್ಟ ಸಲಹೆ ಏನು?
ಈಗ ಆ ನೋವನ್ನು ಮರೆತು ಈ ನಟಿ ಖುಷಿಯಲ್ಲಿ ಎಲ್ಲ ರೀತಿಯ ತೊಂದರೆಗಳನ್ನು ಎದುರಿಸಿ ಜಯಶಾಲಿಯಾಗಿ ನಿಂತಿದ್ದಾರೆ. ಇವರಂತೆ ಎಲ್ಲರಿಗೂ ಆತ್ಮಸ್ಥೈರ್ಯ ಇದ್ರೆ ಎಂತಹ ಕಾಯಿಲೆಗಳನ್ನು ಬೇಕಾದರೂ ಎದುರಿಸಬಹುದು.
ಮೈಸೂರು: ಜಗತ್ತಿನ ಅನೇಕ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ನಲುಗುತ್ತಿದ್ದಾರೆ. ಈ ರೋಗದಿಂದ ಪಾರಾಗಲು ಔಷಧಿಗಳು ಇದ್ದರೂ ಅದು ಅಲ್ಪ ಪ್ರಮಾಣದಲ್ಲಿ ಮಾತ್ರ ರೋಗ ಶಮನ ಮಾಡುತ್ತಿದೆ. ಇದೀಗ ಇದಕ್ಕೆ ಅಲ್ಪ ಪ್ರಮಾಣಕ್ಕಿಂತ ದೊಡ್ಡ ಮಟ್ಟದಲ್ಲಿ ಔಷಧ ಲಭ್ಯವಾಗಿದ್ದು, ಮೈಸೂರು ವಿವಿಯ ರಾಸಾಯನಿಕ ವಿಭಾಗದ ಪ್ರೊಫೆಸರ್ ಇದನ್ನ ಕಂಡು ಹಿಡಿದಿದ್ದಾರೆ.
ಸ್ತನ ಕ್ಯಾನ್ಸರ್ ಜಾಗತಿಕ ಕಾಲಮಾನದಲ್ಲಿ ಹೆಚ್ಚು ಸಮಸ್ಯೆ ಒಡ್ಡುತ್ತಿದೆ. ಕಳೆದ ವರ್ಷ ಜಗತ್ತಿನಲ್ಲಿ 6,84,996 ಈ ರೋಗದಿಂದ ಮೃತಪಟ್ಟಿದ್ದಾರೆ. ಈ ರೋಗಕ್ಕೆ ಈಗ ಮೈಸೂರಿನ ವಿಜ್ಞಾನಿಯೊಬ್ಬರ ಸಂಶೋಧನೆ ಮಾಡಿದ್ದಾರೆ. ಈಗಿರುವ ಔಷಧಕ್ಕಿಂತ ಹೆಚ್ಚಿನ ಪಟ್ಟು ಸಮಸ್ಯೆ ನೀಗಿಸುವಲ್ಲಿ ಕೆಲಸ ಮಾಡಲಿದ್ದು, ಇದಕ್ಕಾಗಿ ಹೊಸದಾದ ಸಂಶೋಧನೆ ಮಾಡಿದ್ದಾರೆ. ಮೈಸೂರಿನ ವಿಶ್ವವಿದ್ಯಾಲಯದ ಸಾವಯವ ರಸಾಯನ ಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ಬಸಪ್ಪ ರೋಗಕ್ಕೆ ಮದ್ದು ಕಂಡು ಹಿಡಿದಿದ್ದಾರೆ.
ಸ್ತನ ಕ್ಯಾನ್ಸರ್ ಹೋಗಲಾಡಿಸಲು ಔಷಧ ಬೀಜವನ್ನು ಪತ್ತೆ ಹಚ್ಚಿ, ಈ ಹಿಂದಿನ ಔಷಧಿಯಾದ ಟ್ಯಾಮೊಕ್ಸಿಫೆನ್‍ಗೆ ಹೋಲಿಸಿದಾಗ ಇದಕ್ಕಿಂತ ತಾವು ಕಂಡು ಹಿಡಿದ ಔಷಧ ಹೆಚ್ಚು ಉಪಯುಕ್ತವಾಗಿದೆ. ಎಎಂಟಿಎ ಎಂಬ ಹೆಸರಿನ ಔಷಧಿ ಬೀಜವನ್ನ ಪ್ರಯೋಗಾಲಯದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಿದ್ದೇವೆ. ಇದು ಟ್ಯಾಮೊಕ್ಸಿಫೆನ್‍ಗಿಂತ ಹೆಚ್ಚು ಸಾಂದ್ರತೆ ಹಾಗೂ ಸ್ತನ ಕ್ಯಾನ್ಸರ್ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ನಮ್ಮ ತಂಡದ ಸಾಧನೆ ಎಂದು ಬಸಪ್ಪ ಅವರು ಹೇಳಿದ್ದಾರೆ.
ಫ್ರೋ.ಪೀಟರ್, ಲೋಬಿ, ಡಾ.ವಿಜಯ್, ಜೊತೆಯಲ್ಲಿ ವಿಶನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ ಜೊತೆಯಾಗಿದೆ. ಕರ್ನಾಟಕ ಮತ್ತು ಭಾರತ ಸರ್ಕಾರದ ನಿಧಿ ಹಾಗೂ ಸಹಕಾರ ನೀಡಿದೆ. ಈ ಔಷಧ ಸ್ತನ ಕ್ಯಾನ್ಸರ್ ಇದ್ದವರಿಗೆ ಚೇತರಿಕೆಗೆ ಹೆಚ್ಚು ವೇಗವಾಗಿ ಸಹಕಾರಿಯಾಗಲಿದೆ ಎಂದು ಡಾ.ಬಸಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಮೈಸೂರು ವಿವಿಯ ಪ್ರೊಫೆಸರ್‍ಗಳು ಹಾಗೂ ವಿಜ್ಞಾನಿಗಳು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಹೆಜ್ಜೆ ಇಡುತ್ತಿದ್ದಾರೆ. ಇದು ಮೈಸೂರಿಗೆ ಮತ್ತೊಂದು ಹೆಮ್ಮೆಯನ್ನ ತಂದುಕೊಟ್ಟಿದೆ. ಮೈಸೂರು, ರಾಜ್ಯ ಮಾತ್ರವಲ್ಲದೇ ದೇಶ ವಿದೇಶದಲ್ಲಿಯೂ ಮತ್ತಷ್ಟು ಹೆಸರು ಮಾಡುತ್ತಿದೆ. ಈ ಔಷಧ ಜಗತ್ತಿನಲ್ಲಿ ದೊಡ್ಡ ಪಿಡುಗಿಗಾಗಿ ಕಾಡುತ್ತಿರುವ ಬ್ರೆಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಆರೋಗ್ಯ ಚೇತರಿಕೆಗೆ ಸಹಾಯಕವಾಗಲಿದೆ.
ಮುಂಬೈ: 8 ವರ್ಷದದಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಸಹೋದರಿ ಇಂದು ಮೃತಪಟ್ಟಿದ್ದಾರೆ.
ನಟನ ಸಹೋದರಿ ತಮ್ಶಿ ಸಿದ್ದಿಕಿ (26) ಅವರು ಇಂದು ಸಾವನ್ನಪ್ಪಿದ್ದಾರೆ. 18 ವರ್ಷ ವಯಸ್ಸಿನಲ್ಲಿಯೇ ತಮ್ಶಿ ಸಿದ್ದಿಕಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ತಮ್ಶಿ ಸುಮಾರು 8 ವರ್ಷಗಳ ಕಾಲ ಕಾಯಿಲೆ ವಿರುದ್ಧ ಹೋರಾಡಿ ಇಂದು ಸಾವನ್ನಪ್ಪಿದ್ದಾರೆ.
ಸಹೋದರಿಯ ಸಾವಿನ ಸಮಯದಲ್ಲಿ ನವಾಜುದ್ದೀನ್ ಸಿದ್ದಿಕಿ ಅವರು ಅಮೆರಿಕದಲ್ಲಿ ನೋ ಲ್ಯಾಂಡ್ಸ್ ಮ್ಯಾನ್ ಎಂಬ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಇಂದು ತಮ್ಮ ಸ್ವಗ್ರಾಮ ಉತ್ತರ ಪ್ರದೇಶದ ಬುಧಾನ ಗ್ರಾಮದಲ್ಲಿ ಅಂತ್ಯಕ್ರಿಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
My sister ws diagnosed of advanced stage #breastcancer @ 18 bt it ws her will power & courage dat made her stand agnst all d odds she turns 25 2day & still fighting M thankful 2 Dr.@koppiker & @Lalehbusheri13 fr motivating her & m rly grateful 2 @resulp Sir fr introducng me 2 dem pic.twitter.com/xHsBK8uJDP
ಈ ಹಿಂದೆ ನಟ ನವಾಜುದ್ದೀನ್ ಸಿದ್ದಿಕಿ ಅವರು ತಮ್ಮ ಸಹೋದರಿಯ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ಕಳೆದ ವರ್ಷ ಅಕ್ಟೋಬರ್ ನಲ್ಲಿ ತಾನು ಮತ್ತು ಸಹೋದರಿ ತಮ್ಶಿ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದ ಸಿದ್ದಿಕಿ, ನನ್ನ ಸಹೋದರಿ ಆಕೆಯ 18 ವಯಸ್ಸಿನಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಜೊತೆಗೆ ಕಾಯಿಲೆಯ ವಿರುದ್ಧ ತಮ್ಮ ಮನೋಬಲ ಮತ್ತು ಅತ್ಮವಿಶ್ವಾಸದಿಂದ ಹೋರಾಡುತ್ತಾ ಬಂದಿದ್ದಾರೆ. ಅವಳಿಗೆ ಇಂದಿಗೆ 25 ವರ್ಷ ತುಂಬಿತು ಎಂದು ಬರೆದುಕೊಂಡಿದ್ದರು.