Tag: ಸ್ಟ್ಯಾಂಡಪ್ ಕಾಮಿಡಿ

  • ಭಾರತೀಯ ಮೂಲದ ಸ್ಟ್ಯಾಂಡಪ್ ಕಾಮಿಡಿಯನ್ ದುಬೈನಲ್ಲಿ ಸಾವು

    ಭಾರತೀಯ ಮೂಲದ ಸ್ಟ್ಯಾಂಡಪ್ ಕಾಮಿಡಿಯನ್ ದುಬೈನಲ್ಲಿ ಸಾವು

    ದುಬೈ: ವೇದಿಕೆಯಲ್ಲೇ ಕುಸಿದು ಬಿದ್ದು ಭಾರತೀಯ ಮೂಲದ ಸ್ಟ್ಯಾಂಡಪ್ ಕಾಮಿಡಿಯನ್ ಮೃತಪಟ್ಟ ಘಟನೆ ನಡೆದಿದೆ.

    36 ವರ್ಷದ ಮಂಜುನಾಥ್ ನಾಯ್ಡು ಮೃತಪಟ್ಟ ದುರ್ದೈವಿಯಾಗಿದ್ದು, ಶುಕ್ರವಾರ ಕಾರ್ಯಕ್ರಮ ನೀಡುತ್ತಿದ್ದ ವೇಳೆ ಇವರಿಗೆ ವೇದಿಕೆಯಲ್ಲೇ ಹೃದಯಾಘಾತವಾಗಿದೆ. ಕೂಡಲೇ ಅವರು ಅಲ್ಲೇ ಪಕ್ಕದಲ್ಲಿದ್ದ ಬೆಂಚ್ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದ್ದು, ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.

    ಕಾರ್ಯಕ್ರಮದಲ್ಲಿ ಜನ ಕಿಕ್ಕಿರಿದು ತುಂಬಿದ್ದು, ಇದು ಒಂದು ಪ್ರದರ್ಶನದ ಭಾಗವಾಗಿರಬಹುದೆಂದು ಭಾವಿಸಿದ್ದರು ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.

    ನಾಯ್ಡು ಅವರು ಅಬುದಾಬಿಯಲ್ಲಿ ಹುಟ್ಟಿದ್ದು, ದುಬೈನಲ್ಲಿ ನೆಲೆಸಿದ್ದರು. ವೇದಿಕೆಯ ಮೇಲೇರಿದ ಮಂಜುನಾಥ್ ತಮ್ಮ ಕಥೆಗಳ ಮೂಲಕ ನೆರೆದಿದ್ದ ಜನರನ್ನು ನಗೆಗಡಲಲ್ಲಿ ತೇಲಿಸಿದ್ದರು. ತನ್ನ ತಂದೆ ಹಾಗೂ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಆ ಬಳಿಕ ಅವರು ತಾನು ಹೇಗೆ ಖಿನ್ನತೆಗೆ ಒಳಗಾಗಿದ್ದೇನೆ ಎಂಬುದರ ಕುರಿತು ಹೇಳುತ್ತಿದ್ದರು. ಹೀಗೆ ಹೇಳುತ್ತಿದ್ದ ಕೆಲವೇ ಕ್ಷಣಗಳಲ್ಲಿ ಮಂಜುನಾಥ್ ಕುಸಿದು ಬಿದ್ದಿದ್ದಾರೆ ಎಂದು ಮಂಜುನಾಥ್ ಗೆಳೆಯರೊಬ್ಬರು ಹೇಳಿದ್ದಾರೆ.

    ಇದೊಂದು ಪ್ರದರ್ಶನದ ಭಾಗವಾಗಿದೆ. ಖಿನ್ನತೆಯ ಬಗ್ಗೆ ಮಾತನಾಡುತ್ತಾ ಏನೋ ಒಂದು ಜೋಕ್ ಮಾಡುತ್ತಿದ್ದಾರೆ ಎಂದು ನೆರೆದಿದ್ದವರು ಅಂದುಕೊಂಡಿದ್ದರು. ಆದರೆ ಕುಸಿದುಬಿದ್ದ ಮಂಜುನಾಥ್ ಮತ್ತೆ ಎದ್ದು ನಿಲ್ಲಲೇ ಇಲ್ಲ. ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದರು ಎಂದು ವಿವರಿಸಿದರು.

    ಮಂಜುನಾಥ್ ಪೋಷಕರು ಈಗಾಗಲೇ ಮೃತಪಟ್ಟಿದ್ದು, ಸಹೋದರನೊಬ್ಬನನ್ನು ಬಿಟ್ಟರೆ ಇವರಿಗೆ ಸಂಬಂಧಿಕರಿಲ್ಲ. ಕಲೆ ಮತ್ತು ಕಾಮಿಡಿಯೇ ಇವರ ಜೀವನ ಚಕ್ರವಾಗಿತ್ತು ಎಂದು ಹೇಳುತ್ತಾ ಗೆಳೆಯರು ಕಣ್ಣೀರು ಹಾಕಿದರು.