Tag: ಸ್ಟೇಟಸ್

  • 15 ನಿಮಿಷದಲ್ಲಿ 4 ಕೊಲೆ, ಇದು ವಿಶ್ವ ದಾಖಲೆ – ಸ್ಟೇಟಸ್ ಹಾಕಿದಾತನಿಗೆ ಬಿಸಿ ಮುಟ್ಟಿಸಿದ ಪೊಲೀಸರು

    15 ನಿಮಿಷದಲ್ಲಿ 4 ಕೊಲೆ, ಇದು ವಿಶ್ವ ದಾಖಲೆ – ಸ್ಟೇಟಸ್ ಹಾಕಿದಾತನಿಗೆ ಬಿಸಿ ಮುಟ್ಟಿಸಿದ ಪೊಲೀಸರು

    ಉಡುಪಿ: ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ (Murder) ಮಾಡಿದ್ದ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ದುಷ್ಕೃತ್ಯವನ್ನು ವಿರೋಧಿಸುವುದನ್ನು ಬಿಟ್ಟು ಹಂತಕನ ಫೋಟೋಗೆ ಕಿರೀಟ ಇಟ್ಟು ಇನ್ಸಾಗ್ರಾಮ್‌ನಲ್ಲಿ ಸ್ಟೋರಿ ಹಾಕಿದ್ದ ವ್ಯಕ್ತಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

    ಹಿಂದೂ ಮಂತ್ರ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂತಕ ಪ್ರವೀಣ್ ಅರುಣ್ ಚೌಗುಲೆಯ ಫೋಟೋ ಹಾಕಿ, ಆತನಿಗೆ ಕಿರೀಟ ಇಟ್ಟು, 15 ನಿಮಿಷದಲ್ಲಿ 4 ಕೊಲೆ, ಇದು ವರ್ಲ್ಡ್ ರೆಕಾರ್ಡ್ ಎಂದು ಬರೆದು ವ್ಯಕ್ತಿಯೊಬ್ಬ ವಿಕೃತಿ ಮೆರೆದಿದ್ದಾನೆ. ಇದನ್ನೂ ಓದಿ: ನಾಲ್ವರ ಕೊಂದ ಆರೋಪಿ ಮೇಲೆ ಜನಾಕ್ರೋಶ; ರಸ್ತೆ ತಡೆದು ಸಾರ್ವಜನಿಕರ ಪ್ರತಿಭಟನೆ, ಲಾಠಿ ಪ್ರಹಾರ – ಉಡುಪಿ ಉದ್ವಿಗ್ನ

    ಈ ವಿಚಾರ ಉಡುಪಿ ಪೊಲೀಸರ (Udupi Police) ಗಮನಕ್ಕೆ ಬಂದಿದ್ದು, ತಕ್ಷಣ ಅವರು ಕ್ರಮಕ್ಕೆ ಮುಂದಾಗಿದ್ದಾರೆ. ಪೋಸ್ಟ್ ಹಾಕಿದಾತನ ವಿರುದ್ಧ ಸೆನ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಹಿಂದೂ ಮಂತ್ರ ಖಾತೆಯಲ್ಲಿ ಹಾಕಲಾಗಿದ್ದ ಸ್ಟೋರಿ ಡಿಲೀಟ್ ಆಗಿದೆ. ಇದನ್ನೂ ಓದಿ: ಮುಸ್ಲಿಂ ಸ್ಪೀಕರ್‌ಗೆ ಬಿಜೆಪಿಯವರೂ ನಮಸ್ಕರಿಸುತ್ತಾರೆ: ಜಮೀರ್ ಮತ್ತೊಂದು ಎಡವಟ್ಟು

  • ನೀ ಇರದೆ ನನಗೆ ಇರಲು ಸಾಧ್ಯವಾಗ್ತಿಲ್ಲ- ಅಣ್ಣನ ನೆನೆದು ಧ್ರುವ ಭಾವುಕ

    ನೀ ಇರದೆ ನನಗೆ ಇರಲು ಸಾಧ್ಯವಾಗ್ತಿಲ್ಲ- ಅಣ್ಣನ ನೆನೆದು ಧ್ರುವ ಭಾವುಕ

    – ನೀನು ನನಗೆ ವಾಪಸ್ ಬೇಕು

    ಬೆಂಗಳೂರು: ಸ್ಯಾಂಡಲ್‍ವುಡ್‍ನ ನಟ ಚಿರಂಜೀವಿ ಸರ್ಜಾ ಅಗಲಿಕೆಯಿಂದ ಇಡೀ ಚಿತ್ರರಂಗವೇ ಶಾಕ್ ಆಗಿತ್ತು. ಇದೀಗ ಅಣ್ಣನ ಹಠಾತ್ ಸಾವಿನಿಂದ ನೊಂದಿರುವ ಧ್ರುವ ಸರ್ಜಾ ಇಂದು ಸೋಷಿಯಲ್ ಮೀಡಿಯಾದಲ್ಲಿ ಭಾವುಕವಾಗಿ ಚಿರು ಬಗ್ಗೆ ಬರೆದುಕೊಂಡಿದ್ದಾರೆ.

    ಅಣ್ಣನನ್ನು ಕಳೆದುಕೊಂಡು ಐದು ದಿನಗಳ ಬಳಿಕ ಧ್ರುವ ಸರ್ಜಾ ಇನ್‍ಸ್ಟಾಗ್ರಾಂನಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಸಾವಿಗೂ ಒಂದು ದಿನ ಮುನ್ನ ಶೇರ್ ಮಾಡಿಕೊಂಡಿದ್ದ ಫೋಟೋ ನೋಡಿ ನೋವನ್ನು ತೋಡಿಕೊಂಡಿದ್ದಾರೆ.

    “ನೀನು ನನಗೆ ವಾಪಸ್ ಬೇಕು. ನೀ ಇರದೆ ನನಗೆ ಇರಲು ಸಾಧ್ಯವಾಗುತ್ತಿಲ್ಲ” ಎಂದು ಧ್ರುವ ಸರ್ಜಾ ನೋವಿನ ನುಡಿಗಳನ್ನು ಸ್ಟೇಟಸ್‍ನಲ್ಲಿ ಬರೆದುಕೊಂಡಿದ್ದಾರೆ. ಧ್ರುವ ಸರ್ಜಾ ಸ್ಟೇಟಸ್ ನೋಡಿ ಅಭಿಮಾನಿಗಳು ತನ್ನ ನಟನಿಗೆ ಸಾಂತ್ವನ ಹೇಳುತ್ತಿದ್ದಾರೆ.

    ಭಾನುವಾರ ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೆ ಚಿರಂಜೀವಿ ಸರ್ಜಾ ಮೃತಪಟ್ಟಿದ್ದಾರೆ. ‘ಅಣ್ಣ ಸದಾ ನನ್ನ ಜೊತೆಗಿರಬೇಕು, ನನ್ನ ಫಾರ್ಮ್ ಹೌಸ್‍ನಲ್ಲೇ ಅಣ್ಣನ ಅಂತ್ಯಕ್ರಿಯೆಯಾಗಲಿ’ ಎಂದು ಸಹೋದರ ಧ್ರುವ ಸರ್ಜಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಫಾರ್ಮ್ ಹೌಸ್‍ನಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ಸೋಮವಾರ ಅಂತ್ಯಕ್ರಿಯೆ ನಡೆದಿದೆ.

  • ವಾಟ್ಸಪ್ ಸ್ಟೇಟಸ್ ಮತ್ತೆ 30 ಸೆಕೆಂಡ್‍ಗೆ ಏರಿಕೆ

    ವಾಟ್ಸಪ್ ಸ್ಟೇಟಸ್ ಮತ್ತೆ 30 ಸೆಕೆಂಡ್‍ಗೆ ಏರಿಕೆ

    ನವದೆಹಲಿ: ಅಧಿಕ ಬಳಕೆದಾರರನ್ನು ಹೊಂದಿರುವ ಆ್ಯಪ್ ವಾಟ್ಸಪ್ ಮತ್ತೆ ಸ್ಟೇಟಸ್ ಮಿತಿಯನ್ನು 30 ಸೆಕೆಂಡ್‍ಗೆ ಏರಿಕೆ ಮಾಡಿದೆ.

    ಸುಮಾರು ಎರಡು ತಿಂಗಳಿಂದ 15 ಸೆಕೆಂಡ್‍ಗೆ ಇಳಿಕೆಯಾಗಿದ್ದ ಸ್ಟೇಟಸ್ ಮಿತಿ ಸದ್ಯ ಏರಿಕೆಯಾಗಿದ್ದು ಬಳಕೆದಾರರಿಗೆ ಖುಷಿ ವಿಚಾರವಾಗಿದೆ. ಜೊತೆಗೆ ಹೊಸ ಆಂಡ್ರಾಯ್ಡ್ ವಾಟ್ಸಪ್ 2.20.166 ಆವೃತ್ತಿ ಅಪ್‍ಡೇಟ್ ಬಿಡುಗಡೆ ಮಾಡುತ್ತಿದ್ದು, ಈಗಾಗಲೇ ಬಳಕೆದಾರರಿಗೆ ಹಂತಹಂತವಾಗಿ ಲಭ್ಯವಾಗುತ್ತಿದೆ.

    ವಿಶ್ವದಲ್ಲಿ ಲಾಕ್‍ಡೌನ್ ಘೋಷಣೆಯಾದ ಬಳಿಕ ಹೆಚ್ಚಿನ ಜನರು ಮನೆಯಲ್ಲೇ ಇರಬೇಕಾಗಿದ್ದರಿಂದ ಇಂಟರ್ನೆಟ್ ಬಳಕೆ ಹೆಚ್ಚಾಗಿತ್ತು. ಆದರಲ್ಲೂ ವಾಟ್ಸಪ್ ಚಾಟ್ ಮಾಡುವವರ, ಪೋಸ್ಟ್, ವಿಡಿಯೋ ಸ್ಟೇಟಸ್ ಹಾಕುವವರ ಸಂಖ್ಯೆ ಗಣನೀಯ ಪ್ರಮಾಣಲ್ಲಿ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ವರ್ ಗೆ ಬೀಳುತ್ತಿರುವ ಟ್ರಾಫಿಕ್ ಒತ್ತಡವನ್ನು ಕಡಿಮೆ ಮಾಡಲು ವಾಟ್ಸಪ್ ಸ್ಟೇಟಸ್ ಮಿತಿಯನ್ನು 30 ಸೆಕೆಂಡ್‍ನಿಂದ 15 ಸೆಕೆಂಡ್‍ಗೆ ಇಳಿಸಿತ್ತು.

    ವಾಟ್ಸಪ್ 2017ರಲ್ಲಿ ತನ್ನ ಬಳಕೆದಾರರಿಗೆ 24 ಗಂಟೆಗಳ ನಂತರ ಕಣ್ಮರೆಯಾಗುವ ಫೋಟೋಗಳು, ವಿಡಿಯೋಗಳು ಮತ್ತು ಜಿಫ್ ಫೈಲ್‍ಗಳನ್ನು ಅಪ್‍ಲೋಡ್ ಮಾಡಲು ವಿಶಿಷ್ಟ ವೇದಿಕೆ ಕಲ್ಪಿಸಿತ್ತು. ಆರಂಭದ ಸಮಯದಲ್ಲಿ ವಾಟ್ಸಪ್ ಸ್ಟೇಟಸ್ 90 ಸೆಕೆಂಡ್‍ಗಳ ಮೂರು ನಿಮಿಷಗಳ ವಿಡಿಯೋ ಒಳಗೊಂಡಿತ್ತು. ಅಲ್ಲದೆ ವಿಡಿಯೋ ಫೈಲ್ 16ಎಂಬಿಗಿಂತ ದೊಡ್ಡದಾಗಿದ್ದರೆ ಅದನ್ನು ಪೋಸ್ಟ್ ಮಾಡುವ ಮೊದಲು ವಿಡಿಯೋದ ಉದ್ದವನ್ನು ಕಡಿಮೆಗೊಳಿಸುವ ಆಯ್ಕೆಯನ್ನು ನೀಡಿತ್ತು. ನಂತರ ಮಿತಿಯನ್ನು 30 ಸೆಕೆಂಡ್‍ಗಳಿಗೆ ಇಳಿಸಲಾಯಿತು.

    ಕೊರೊನಾದಿಂದ ವಿಶ್ವಾದ್ಯಂತ ಹಲವು ರಾಷ್ಟ್ರಗಳು ಲಾಕ್‍ಡೌನ್ ಘೋಷಿಸಿದ ಪರಿಣಾಮ ನೆಟ್ ಬಳಕೆ ಹೆಚ್ಚಾಗಿದೆ. ನೆಟ್‍ಫ್ಲಿಕ್ಸ್, ಹಾಟ್ ಸ್ಟಾರ್, ಅಮೆಜಾನ್ ಪ್ರೈಂ, ಸಾಮಾಜಿಕ ಜಾಲತಾಣ ಕಂಪನಿಗಳ ವಿಡಿಯೋಗಳು ರೆಸೊಲ್ಯೂಷನ್ ಕಡಿಮೆ ಮಾಡಿವೆ.

  • ಚಿರತೆ ಉಗುರುಗಳನ್ನು ಕದ್ದೊಯ್ದು, ಸ್ಟೇಟಸ್ ಹಾಕಿಕೊಂಡಿದ್ದ ಕುರಿಗಾಹಿ ಅರೆಸ್ಟ್

    ಚಿರತೆ ಉಗುರುಗಳನ್ನು ಕದ್ದೊಯ್ದು, ಸ್ಟೇಟಸ್ ಹಾಕಿಕೊಂಡಿದ್ದ ಕುರಿಗಾಹಿ ಅರೆಸ್ಟ್

    ಚಿತ್ರದುರ್ಗ: ಕಾಡು ಪ್ರಾಣಿಗಳನ್ನು ಹಿಂಸಿಸುವುದು, ಕೊಲ್ಲುವುದು ಹಾಗೂ ಅವುಗಳನ್ನು ಬೇರೆಡೆಗೆ ಸಾಗಿಸುವುದು ಕಾನೂನು ಬಾಹಿರ ಅಂತ ಮಾಹಿತಿ ಇದ್ದರು ಸಹ ಕಾಡುಪ್ರಾಣಿಗಳನ್ನು ಜನರು ಕೊಲ್ಲುತ್ತಿರುವ ಅಮಾನವೀಯ ಘಟನೆಗಳು ಮಾತ್ರ ಮರುಕಳಿಸುತ್ತಲೇ ಇವೆ. ಜೊತೆಗೆ ಅಪರೂಪದ ಕಾಡು ಪ್ರಾಣಿಗಳಾದ ಕರಡಿ, ಚಿರತೆ, ಹುಲಿಗಳು ಸೇರಿದಂತೆ ಇತರೆ ಪ್ರಾಣಿಗಳ ಚೂಪಾದ ಉಗುರುಗಳನ್ನು ಸಂಗ್ರಹಿಸಿಡುವ ಹುಚ್ಚಾಟಗಳು ಹಾಗೂ ಅವುಗಳ ಅಂಗಾಂಗಗಳನ್ನು ಪ್ರತ್ಯೇಕಗೊಳಿಸಿ ಮೊಬೈಲ್ ಸ್ಟೇಟಸ್ ಹಾಕಿಕೊಳ್ಳುವ ದೊಡ್ಡಸ್ತಿಕೆ ಸಹ ನಿರಂತರವಾಗಿವೆ. ಅಂತೆಯೇ ಫೆಬ್ರವರಿ 12 ರಂದು ಮೊಳಕಾಲ್ಮೂರಿನ ಗುಡ್ಡದಲ್ಲಿ ಸಾವನ್ನಪ್ಪಿದ್ದ ಚಿರತೆಯ ಕಾಲನ್ನು ಕತ್ತರಿಕೊಂಡು ಹೋಗಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಪಟ್ಣಣದಲ್ಲಿರುವ ಪಾಳೆಗಾರರ ಗುಡ್ಡದ ಬಳಿ ಫೆಬ್ರವರಿ 12ರಂದು ಚಿರತೆ ಶವಪತ್ತೆ ಆಗಿತ್ತು. ಆಗ ಯಾರೋ ದುಷ್ಕರ್ಮಿಗಳು ಮೃತ ಚಿರತೆಯ ಕಾಲುಗಳನ್ನು ಕತ್ತರಿಸಿ ಒಯ್ದಿದ್ದಾರೆಂಬ ಪ್ರಕರಣ ಸಹ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

    ಈ ಪ್ರಕರಣದ ಬೆನ್ನತ್ತಿದ್ದ ಅರಣ್ಯಾಧಿಕಾರಿಗಳು ಚಿರತೆಯ ಕಾಲುಗಳನ್ನು ಕತ್ತರಿಸಿಕೊಂಡು ತೆರಳಿದ್ದ ಮೊಳಕಾಲ್ಮೂರಿನ ಶ್ರೀನಿವಾಸ್‍ನಾಯಕ ಬಡಾವಣೆಯ ಪವನ್(20) ಎಂಬ ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮೊಬೈಲ್ ಸ್ಟೇಟಸ್‍ನಿಂದ ಆರೋಪಿ ಅರೆಸ್ಟ್:
    ಗುಡ್ಡದಲ್ಲಿ ಸಾವನ್ನಪ್ಪಿದ್ದ ಚಿರತೆಯ ಮೂರು ಕಾಲುಗಳನ್ನು ಕತ್ತರಿಸಿಕೊಂಡು ಹೋಗಲಾಗಿದ್ದು, ಅವುಗಳಲ್ಲಿಎರಡು ಕಾಲುಗಳನ್ನು ಮಾತ್ರ ತಾನು ಕದ್ದೊಯ್ದಿದ್ದು ಚಿರತೆಯನ್ನು ನಾನು ಕೊಂದಿಲ್ಲವೆಂದು ವಿಚಾರಣೆ ವೇಳೆ ಆರೋಪಿ ಪವನ್ ಹೇಳಿದ್ದಾನೆ. ಚಿರತೆಯ ಉಗುರುಗಳ ಮೇಲಿನ ಕುತೂಹಲ ಹಾಗೂ ವ್ಯಾಮೋಹದಿಂದಾಗಿ ಸತ್ತು ಬಿದ್ದಿದ್ದ ಚಿರತೆಯ ಕಾಲುಗಳನ್ನು ಕತ್ತರಿಸಿಕೊಂಡು ಹೋಗಿದ್ದನು. ಹಾಗೆಯೇ ತಾನು ಮಾಡಿದ್ದ ಮಹತ್ಕಾರ್ಯವನ್ನು ತನ್ನ ಆತ್ಮೀಯರು ಹಾಗೂ ಸ್ನೇಹಿತರು ಮತ್ತು ಸಂಬಂಧಿಗಳಿಗೆ ಪ್ರಚಾರಪಡಿಸುವ ಸಲುವಾಗಿ ತನ್ನ ಮೊಬೈಲ್ ಸ್ಟೇಟಸ್‍ಗೆ ಚಿರತೆಯ ಉಗುರುಗಳನ್ನು ಪವನ್ ಹಾಕಿಕೊಂಡಿದ್ದನು.

    ಆಗ ಸಾರ್ವಜನಿಕರಿಂದ ಈ ವಿಚಾರ ತಿಳಿದ ಅರಣ್ಯಾಧಿಕಾರಿಗಳು ಪವನ್‍ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಪ್ರಕರಣ ಬಯಲಾಗಿದೆ. ಆದರೆ ಚಿರತೆಯನ್ನು ಆಹಾರದಲ್ಲಿ ವಿಷ ಬೆರೆಸಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

  • ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಬರೆದು 15ರ ಬಾಲಕ ಆತ್ಮಹತ್ಯೆ!

    ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಬರೆದು 15ರ ಬಾಲಕ ಆತ್ಮಹತ್ಯೆ!

    ಕೈರೋ: 15 ವರ್ಷದ ಬಾಲಕನೊಬ್ಬ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಈಜಿಪ್ಟ್ ನಲ್ಲಿ ನಡೆದಿದೆ.

    ಮೊಹಮ್ಮದ್ ಯಾಸೀರ್(15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಯಾಸೀರ್ ಖಿನ್ನತೆಯಿಂದ ಬಳಲುತ್ತಿದ್ದನು ಹಾಗೂ ತನ್ನ ಜೀವನವನ್ನು ಕೊನೆಗಳಿಸಲು ನಿರ್ಧರಿಸಿದ್ದನು ಎಂದು ವರದಿಯಾಗಿದೆ.

    ಫೇಸ್‍ಬುಕ್ ಸ್ಟೇಟಸ್‍ನಲ್ಲಿ ಏನಿದೆ?
    ನಾನು ನಿಜವಾಗಲೂ ಆತ್ಮಹತ್ಯೆ ಮಾಡಿಕೊಳ್ಳಬೇಕು. ಈ ದುಃಸ್ವಪ್ನ ನನಗೆ ಸಾಕಾಗಿ ಹೋಗಿದೆ. ನಾನೇನಾದರೂ ಆತ್ಮಹತ್ಯೆ ಮಾಡಿಕೊಂಡರೆ, ನಾನು ಅಪ್ರಾಪ್ತ ಹಾಗೂ ಜವಾಬ್ದಾರಿ ಇಲ್ಲದ ಬಾಲಕ ಎಂದು ತಿಳಿಯಬೇಡಿ. ಏಕೆಂದರೆ ನಾನು ಸಾಕಷ್ಟು ನೋವನ್ನು ಸಹಿಸಿಕೊಂಡಿದ್ದೇನೆ. ನನ್ನಷ್ಟು ನೋವನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ನನಗಾಗಿ ಪ್ರಾರ್ಥನೆ ಮಾಡಿ ಎಂದು ಯಾಸೀರ್ ತನ್ನ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿದ್ದ.

    ಯಾಸೀರ್ ನ ಈ ಸ್ಟೇಟಸ್ ನೋಡಿ ಆತನ ಸ್ನೇಹಿತರು ಹಾಗೂ ಫಾಲೋವರ್ಸ್ ಆತನಿಗೆ ಬುದ್ಧಿವಾದ ಹೇಳಿದ್ದರು. ದೇವರಲ್ಲಿ ನಂಬಿಕೆಯಿಡು. ತಾಳ್ಮೆಯಿಂದ ನಿನ್ನ ಸಮಸ್ಯೆಗಳಿಂದ ಹೊರ ಬರುವುದಕ್ಕೆ ಪ್ರಯತ್ನ ಮಾಡು ಎಂದು ಯಾಸೀರ್ ಗೆ ಬುದ್ಧಿವಾದ ಹೇಳಿದ್ದರು.

    ತನ್ನ ಸ್ಟೇಟಸ್‍ಗೆ ಪ್ರತಿಕ್ರಿಯಿಸಿದ ತನ್ನ ಸ್ನೇಹಿತರ ಮಾತನ್ನು ಕೇಳದೆ ಭಾನುವಾರ ಜಗಾಜಿಗ್‍ನ ಮೋಯಿಸ್ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿ ಮಾಡಿದೆ.

    ಯಾಸೀರ್ ಸಮುದ್ರಕ್ಕೆ ಜಿಗಿಯುವುದ್ದನ್ನು ನೋಡಿದ ಅಲ್ಲಿನ ಸ್ಥಳಿಯರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ನಂತರ ಆತ್ಮಹತ್ಯೆ ಮಾಡಿಕೊಂಡ ಬಾಲಕ ಯಾಸೀರ್ ಎಂಬುದು ತಿಳಿದು ಬಂದಿದೆ.

  • ಲಿಂಗಾಯತ ಧರ್ಮದ ಬಗ್ಗೆ ಸ್ಟೇಟಸ್- ಅಶ್ಲೀಲ ಕಮೆಂಟ್ ಹಾಕಿದ ವ್ಯಕ್ತಿಗೆ ಮಹಿಳೆಯಿಂದ ಓಪನ್ ಚಾಲೆಂಜ್

    ಲಿಂಗಾಯತ ಧರ್ಮದ ಬಗ್ಗೆ ಸ್ಟೇಟಸ್- ಅಶ್ಲೀಲ ಕಮೆಂಟ್ ಹಾಕಿದ ವ್ಯಕ್ತಿಗೆ ಮಹಿಳೆಯಿಂದ ಓಪನ್ ಚಾಲೆಂಜ್

    ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿದ್ದಕ್ಕೆ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಕಾರ್ಯದರ್ಶಿ ಕವನಗೆ ವ್ಯಕ್ತಿಯೊಬ್ಬ ಅಶ್ಲಿಲವಾಗಿ ಕಾಮೆಂಟ್ ಮಾಡಿದ್ದಾನೆ.

    ಮಹಿಳೆ ಅಂತಾನೂ ನೋಡದೇ ನಿನ್ನನ್ನು ನಗ್ನ ಮಾಡುತ್ತೇನೆಂದು ಫೇಸ್‍ಬುಕ್‍ನಲ್ಲಿ ರಾಜೇಶ್ ಎಂಬ ವ್ಯಕ್ತಿ ಕಮೆಂಟ್ ಮಾಡಿದ್ದಾನೆ. ರಾಜೇಶ್ ಕಾಮೆಂಟ್‍ಗೆ ಸಿಡಿದೆದ್ದ ಕವನ, ನನ್ನ ಸ್ಟೆಟ್ಮೆಂಟ್‍ಗೆ ತುಂಬಾ ವಿರೋಧಿ ಕರೆಗಳು ಬರ್ತಿದೆ. ಅದರಲ್ಲಿ ಸೊಂಟದ ಕೆಳಗೆ ಮಾತನಾಡುತ್ತಿರುವವರ ಸಂಖ್ಯೆಯಲ್ಲಿ ಅಗ್ರಗಣ್ಯ ಸ್ಥಾನ ರಾಜೇಶನದ್ದು. ನನ್ನನ್ನು ನಗ್ನ ಮಾಡಲು ಹತ್ತು ಜನ್ಮ ಅವತರಿಸಿ ಬಂದರೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಓಪನ್ ಸ್ಟೆಟ್ಮೆಂಟ್ ಕೊಡ್ತಿದ್ದೀನಿ. ಏನ್ ಮಾಡ್ತಿಯೋ ಮಾಡಪ್ಪ. ನಾನಾ ಅಥವಾ ಪಂಚಾಚಾರ್ಯ ಎಂದು ಜೀವ ಬೆದರಿಕೆ ಹಾಕಿರುವ ಇವನಾ ನೋಡಿಯೇ ಬಿಡ್ತೇನೆ ಎಂದು ಫೇಸ್ಬುಕ್‍ನಲ್ಲಿ ಕವನಾ ಸವಾಲು ಹಾಕಿದ್ದಾರೆ.

     

    https://www.facebook.com/kavanabasavakumar9/posts/1498533070202199