Tag: ಸ್ಟೆಲ್ತ್‌ ಫೈಟರ್‌ ಜೆಟ್‌

  • ಪಾಕಿಸ್ತಾನಕ್ಕೆ 5ನೇ ತಲೆಮಾರಿನ 40 ಸ್ಟೆಲ್ತ್ ಫೈಟರ್ ಜೆಟ್‌ ಪೂರೈಸಲು ಚೀನಾ ಮೆಗಾ ಡೀಲ್‌

    ಪಾಕಿಸ್ತಾನಕ್ಕೆ 5ನೇ ತಲೆಮಾರಿನ 40 ಸ್ಟೆಲ್ತ್ ಫೈಟರ್ ಜೆಟ್‌ ಪೂರೈಸಲು ಚೀನಾ ಮೆಗಾ ಡೀಲ್‌

    – ಇತ್ತ  ಸ್ಟೆಲ್ತ್ ಫೈಟರ್ ಜೆಟ್‌ಗೆ ಭಾರತ ಅನುಮೋದನೆ

    ಬೀಜಿಂಗ್‌: ಭಾರತವು (India) ತನ್ನದೇ ಆದ ಸ್ಟೆಲ್ತ್ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆಗೆ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಬೆನ್ನಲ್ಲೇ ಚೀನಾ ದೇಶವು ಪಾಕಿಸ್ತಾನಕ್ಕೆ 40 ಜೆ-35 5ನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್‌ (Stealth Fighter Jets) ಪೂರೈಸಲಿದೆ ಎಂದು ವರದಿಯಾಗಿದೆ. ಈ ಮೂಲಕ ಸ್ಟೆಲ್ತ್‌ ತಂತ್ರಜ್ಞಾನ ನಿರ್ವಹಿಸುವ ಕೆಲವೇ ದೇಶಗಳ ಗುಂಪಿಗೆ ಸೇರಲು ಪಾಕ್‌ ಸಜ್ಜಾಗಿದೆ.

    stealth fighter jets india

    5ನೇ ತಲೆಮಾರಿನ ಸ್ಟೆಲ್ತ್‌ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆಗೆ ಕೆಲ ದಿನಗಳ ಹಿಂದೆಯಷ್ಟೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅನುಮೋದನೆ ನೀಡಿದ್ದರು. ಇದು ಅವಳಿ-ಎಂಜಿನ್ ಹೊಂದಿರುವ 5ನೇ ತಲೆಮಾರಿನ ಮಿಲಿಟರಿ ವಿಮಾನವಾಗಿದೆ. ಈ ಕಾರ್ಯಕ್ರಮವನ್ನು ಸರ್ಕಾರಿ ಸ್ವಾಮ್ಯದ ಏರೋನಾಟಿಕಲ್ ಅಭಿವೃದ್ಧಿ ಸಂಸ್ಥೆ ಕಾರ್ಯಗತಗೊಳಿಸುತ್ತದೆ. ಆದ್ರೆ ಸ್ಟೆಲ್ತ್ ವಿಮಾನ – ಅಡ್ವಾನ್ಡ್‌ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (AMCA) ಅನ್ನು ವಾಯುಪಡೆಗೆ ಸೇರಿಸಿಕೊಳ್ಳಲು ಕನಿಷ್ಠ 1 ದಶಕಗಳ ಕಾಲ ಸಮಯ ಬೇಕಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದ್ರೆ ಎಎಂಸಿಎ 2035ರ ವೇಳೆಗೆ ಭಾರತ ಸ್ಟೆಲ್ತ್‌ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆ ಪೂರ್ಣಗೊಳ್ಳಲಿದೆ. ಇದನ್ನೂ ಓದಿ: ದೊಡ್ಡಣ್ಣನ ಎಂಟ್ರಿಯಿಂದ 3ನೇ ಮಹಾಯುದ್ಧದ ಆತಂಕ – ಇರಾನ್ ಬೆಂಬಲಕ್ಕೆ ನಿಂತ ರಷ್ಯಾ

    ಈ ಹೊತ್ತಿನಲ್ಲೇ ಚೀನಾ (China), ಪಾಕಿಸ್ತಾನಕ್ಕೆ (Pakistan) 40 ಸ್ಟೆಲ್ತ್‌ ಫೈಟರ್‌ ಜೆಟ್‌ಗಳನ್ನು ಪೂರೈಸಲು ಮುಂದಾಗಿದೆ ಎಂಬ ವರದಿ ಹೊರಬಿದ್ದಿದೆ. ಈ ಕುರಿತು ಮಾಜಿ ಐಎಎಫ್ ಫೈಟರ್ ಪೈಲಟ್ ಮತ್ತು ರಕ್ಷಣಾ ವಿಶ್ಲೇಷಕ ಗ್ರೂಪ್ ಕ್ಯಾಪ್ಟನ್ ಅಜಯ್ ಅಹ್ಲಾವತ್ (ನಿವೃತ್ತ) ಮಾತನಾಡಿದ್ದು, ಚೀನಾದಲ್ಲಿ ಪಾಕಿಸ್ತಾನಿ ಫೈಟರ್‌ ಪೈಲಟ್‌ಗಳಿಗೆ ಈಗಾಗಲೇ ಸ್ಟೆಲ್ತ್‌ ಜೆಟ್‌ಗಳ ತರಬೇತಿ ನೀಡುತ್ತಿರುವುದನ್ನು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಟರ್ಕಿಯಲ್ಲಿ 2 ಏರ್ ಬಲೂನ್ ಅವಘಡ- ಪೈಲಟ್ ಸಾವು, 31 ಪ್ರವಾಸಿಗರಿಗೆ ಗಾಯ

    ಮುಂದುವರಿದು.. ಪಾಕಿಸ್ತಾನ ಈ ಜೆಟ್‌ ಸ್ವೀಕರಿಸೋದ್ರಲ್ಲಿ ಅಚ್ಚರಿ ಏನಿಲ್ಲ. ಈಗಾಗಲೇ ಪಾಕಿಸ್ತಾನದ ಫೈಟರ್‌ ಪೈಲಟ್‌ಗಳ ಒಂದು ಟೀಂ 6 ತಿಂಗಳಿಗಿಂತ ಹೆಚ್ಚು ಸಮಯದಿಂದ ಚೀನಾದಲ್ಲಿದೆ. ಸ್ಟೆಲ್ತ್‌ ಜೆಟ್‌ಅನ್ನು ಸೇನೆಗೆ ಸೇರ್ಪಡೆಗೊಳಿಸುವುದಕ್ಕೂ ಮುನ್ನವೇ ತರಬೇತಿ ಪಡೆದುಕೊಳ್ಳಾಗುತ್ತಿದೆ. ಚೀನಾ FC-31 ಆವೃತ್ತಿಯ ಜೆಟ್‌ ನೀಡುತ್ತದೆ. ಇದು ಜೆ-35ನ ರೂಪಾಂತರವಾಗಿದೆ ಎಂದು ತಿಳಿಸಿದ್ದಾರೆ.

    ಸದ್ಯ ಚೀನಾ ಪಾಕಿಸ್ತಾನಕ್ಕೆ ನೀಡಲು ಮುಂದಾಗಿರುವ ಜೆ-35 ಆವೃತ್ತಿಯ ಸಾಮರ್ಥ್ಯ ಪೀಪಲ್ಸ್ ಲಿಬರೇಶನ್ ಆರ್ಮಿ ನೇವಿ ಏರ್ ಫೋರ್ಸ್ (PLANAF)ನ ಮುಂಚೂಣಿ ವಿಮಾನಗಳಿಗಿಂತಲೂ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಇಸ್ರೇಲ್ ತಯಾರಿ

    ಸ್ಟೆಲ್ತ್‌ ತಂತ್ರಜ್ಞಾನ ಅಂದ್ರೆ ಏನು?
    ಸ್ಟೆಲ್ತ್ ತಂತ್ರಜ್ಞಾನ ಅಂದ್ರೆ ಕಡಿಮೆ ಗೋಚರ ತಂತ್ರಜ್ಞಾನ. ಅಂದರೆ ಶತ್ರುಗಳ ಪತ್ತೆ ವ್ಯವಸ್ಥೆಗಳಾದ ರಾಡಾರ್, ಸೋನಾರ್‌ಗಳ ಕಣ್ತಪ್ಪಿಸುವ ತಂತ್ರಜ್ಞಾನ. ಮುಖ್ಯವಾಗಿ ಮಿಲಿಟರಿ ವ್ಯವಸ್ಥೆಗಳಾದ ಫೈಟರ್‌ ಜೆಟ್‌, ಹಡಗು ಮತ್ತು ಕ್ಷಿಪಣಿಗಳಿಗೆ ಈ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ.

  • ಪಾಕ್‌, ಚೀನಾಗೆ ಟಕ್ಕರ್‌ ಕೊಡಲು ಹೊಸ ಫೈಟರ್‌ ಜೆಟ್‌ಗೆ ಭಾರತ ಅನುಮೋದನೆ

    ಪಾಕ್‌, ಚೀನಾಗೆ ಟಕ್ಕರ್‌ ಕೊಡಲು ಹೊಸ ಫೈಟರ್‌ ಜೆಟ್‌ಗೆ ಭಾರತ ಅನುಮೋದನೆ

    ನವದೆಹಲಿ: ಪಾಕಿಸ್ತಾನಕ್ಕೆ ಚೀನಾ ಶಸ್ತ್ರಾಸ್ತ್ರಗಳ ನೆರವಿನ ಮಧ್ಯೆ ಭಾರತವು ತನ್ನದೇ ಆದ ಸ್ಟೆಲ್ತ್‌ ಫೈಟರ್‌ ಜೆಟ್‌ ಯೋಜನೆಗೆ ಅನುಮೋದನೆ ನೀಡಿದೆ.

    ಭಾರತದ ವಾಯು ಪ್ರಾಬಲ್ಯವನ್ನು ಎದುರಿಸಲು ತನ್ನ ಶಸ್ತ್ರಾಗಾರವನ್ನು ಬಲಪಡಿಸಲು ಪಾಕಿಸ್ತಾನಕ್ಕೆ ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ಪೂರೈಸುವ ಯೋಜನೆಯನ್ನು ಚೀನಾ ತ್ವರಿತಗೊಳಿಸುತ್ತಿದೆ. ಈ ನಡುವೆ ದೇಶದ ಮೊದಲ ಸ್ಟೆಲ್ತ್ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ.

    ಈ ಫೈಟರ್ ಜೆಟ್ ಅವಳಿ-ಎಂಜಿನ್, 5 ನೇ ತಲೆಮಾರಿನ ಮಿಲಿಟರಿ ವಿಮಾನವಾಗಿದೆ. ಈ ಕಾರ್ಯಕ್ರಮವನ್ನು ಸರ್ಕಾರಿ ಸ್ವಾಮ್ಯದ ಏರೋನಾಟಿಕಲ್ ಅಭಿವೃದ್ಧಿ ಸಂಸ್ಥೆ ಕಾರ್ಯಗತಗೊಳಿಸುತ್ತದೆ.

    ಸ್ಟೆಲ್ತ್ ಫೈಟರ್ ಕಾರ್ಯಕ್ರಮವನ್ನು ದೇಶೀಯ ಸಂಸ್ಥೆಯು ಮಾತ್ರ ಮುನ್ನಡೆಸಲಿದೆ. ಇದಕ್ಕಾಗಿ ಸ್ವತಂತ್ರವಾಗಿ ಮತ್ತು ಜಂಟಿ ಉದ್ಯಮವಾಗಿ ಬಿಡ್‌ಗಳನ್ನು ಸಲ್ಲಿಸಬಹುದು. ಈ ಬಿಡ್‌ಗಳನ್ನು ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಉದ್ಯಮಗಳು ಎರಡೂ ಮಾಡಬಹುದು ಎಂದು ಭಾರತದ ರಕ್ಷಣಾ ಸಚಿವಾಲಯ ತಿಳಿಸಿದೆ.

    ರಕ್ಷಣಾ ವಲಯದಲ್ಲಿ ಖಾಸಗಿ ಉತ್ಪಾದನೆಯನ್ನು ಹೆಚ್ಚಿಸುವ ಜೊತೆಗೆ ದೇಶದ ಪ್ರಮುಖ ಫೈಟರ್ ಜೆಟ್ ತಯಾರಕರಾದ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಖಾಸಗಿ ಸಂಸ್ಥೆಗಳನ್ನು ಒಳಗೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ಉನ್ನತ ರಕ್ಷಣಾ ಸಮಿತಿಯು ಇದಕ್ಕೆ ಶಿಫಾರಸು ಮಾಡಿತ್ತು.

    4.5 ತಲೆಮಾರಿನ ಫೈಟರ್ ಜೆಟ್ ಆಗಿರುವ LCA ತೇಜಸ್ ಯೋಜನೆಗೆ ಸಂಬಂಧಿಸಿದಂತೆ HAL ವಿಳಂಬ ಎದುರಿಸುತ್ತಿದೆ. ಅಮೆರಿಕದ ಜನರಲ್ ಎಲೆಕ್ಟ್ರಿಕ್‌ನಿಂದ ಜೆಟ್ ಎಂಜಿನ್‌ಗಳ ನಿಧಾನಗತಿಯ ವಿತರಣೆಯೇ ವಿಳಂಬಕ್ಕೆ ಕಾರಣ ಎಂದು ಹೆಚ್‌ಎಎಲ್‌ ತಿಳಿಸಿದೆ.

    ಭಾರತದ DRDO ಕೂಡ GTRE GTX-35VS ಕಾವೇರಿ ಎಂಜಿನ್ ಯೋಜನೆಯಡಿಯಲ್ಲಿ ತನ್ನ ಸ್ಥಳೀಯ ವಿಮಾನ ಎಂಜಿನ್ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ. ಇದನ್ನು LCA ತೇಜಸ್ ಫೈಟರ್ ಜೆಟ್‌ಗಾಗಿ ತಯಾರಿಸಲಾಗುತ್ತಿದೆ. ಇದು ಪ್ರಸ್ತುತ ಪ್ರಗತಿಯಲ್ಲಿರುವ ಯೋಜನೆಯಾಗಿದೆ.

    ಭಾರತವು ತನ್ನ ಪ್ರಸ್ತುತ ಫೈಟರ್ ಜೆಟ್‌ಗಳಲ್ಲಿ ಹೆಚ್ಚಾಗಿ ರಷ್ಯನ್ ಮತ್ತು ಫ್ರೆಂಚ್ ಮಿಲಿಟರಿ ವಿಮಾನಗಳನ್ನು ಒಳಗೊಂಡಿರುವುದರಿಂದ ಸ್ಟೆಲ್ತ್ ಫೈಟರ್ ಯೋಜನೆಗೆ ಉತ್ತೇಜನ ನೀಡಿದೆ. ಭಾರತೀಯ ವಾಯುಪಡೆಯಲ್ಲಿ ಪ್ರಸ್ತುತ ಸ್ಕ್ವಾಡ್ರನ್‌ಗಳ ಸಂಖ್ಯೆ 31 ರಷ್ಟಿದ್ದು, ಇದು 42 ಸ್ಕ್ವಾಡ್ರನ್‌ಗಳ ಅನುಮೋದಿತ ಬಲಕ್ಕಿಂತ ಬಹಳ ಕಡಿಮೆಯಾಗಿದೆ.

    ಚೀನಾ ತನ್ನ ವಾಯುಪಡೆಯನ್ನು ವೇಗವಾಗಿ ವಿಸ್ತರಿಸುತ್ತಿದೆ. ಅಲ್ಲದೇ, ಪಾಕಿಸ್ತಾನಕ್ಕೆ ತನ್ನ ವಾಯುಪಡೆಯನ್ನು ವಿಸ್ತರಿಸಲು ಸಹಾಯ ಮಾಡುತ್ತಿದೆ. ಹೀಗಾಗಿ, ಭಾರತ ಸ್ಥಳೀಯ ಸ್ಟೆಲ್ತ್ ವಿಮಾನ ಯೋಜನೆಯನ್ನು ವೇಗಗೊಳಿಸಲು ನಿರ್ಧರಿಸಿದೆ. ಭಾರತ ಈಗ 5 ನೇ ತಲೆಮಾರಿನ ಮಿಲಿಟರಿ ವಿಮಾನಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಿದ್ದರೆ, ಚೀನಾ ಈಗಾಗಲೇ ತನ್ನ 6 ನೇ ತಲೆಮಾರಿನ ವಿಮಾನವನ್ನು ತಯಾರಿಸಿ, ಪ್ರಯೋಗ ನಡೆಸಿದೆ.

    ಪಾಕಿಸ್ತಾನವು ಈಗಾಗಲೇ ಚೀನಾದ ಅತ್ಯಂತ ಮುಂದುವರಿದ ಯುದ್ಧ ವಿಮಾನಗಳಲ್ಲಿ ಒಂದಾದ ಜೆ -10 ಅನ್ನು ಹೊಂದಿದೆ. ಬೀಜಿಂಗ್ ತನ್ನ ಅತ್ಯಂತ ಮುಂದುವರಿದ ರಹಸ್ಯ ಯುದ್ಧ ವಿಮಾನವಾದ ಶೆನ್ಯಾಂಗ್ ಜೆ -35 ಕೂಡ ನೀಡಿದೆ. ಇದು ಒಂದೇ ಆಸನ, ಎರಡು ಎಂಜಿನ್, ಎಲ್ಲಾ ಹವಾಮಾನ, ರಹಸ್ಯ, ಬಹು-ಪಾತ್ರ ನಿರ್ವಹಿಸಬಲ್ಲ ಸಾಮರ್ಥ್ಯದ ಯುದ್ಧ ವಿಮಾನವಾಗಿದೆ.